Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗ ಆಯೋಜಿಸಿರುವ ವಿ-ಗ್ರೋ ಬಿಸಿನೆಸ್ ಡೇ ಬ್ಯುಸಿನೆಸ್ ಫೆಸ್ಟ್ ಮೂರು ಹಂತಗಳಲ್ಲಿ ಆಯೋಜನೆಗೊಂಡು ಮೊದಲನೇ ಹಂತದಲ್ಲಿ ವ್ಯವಹಾರ ಯೋಜನೆಯ ಪ್ರಸ್ತುತಿ, ಎರಡನೇ ಹಂತದಲ್ಲಿ ತಾವೇ ತಯಾರಿಸಿದ ಉತ್ಪನ್ನಗಳೊಂದಿಗೆ ಇತರ ವಸ್ತುಗಳ ಮಾರಾಟ ಹಾಗೂ ಮೂರನೇ ಹಂತದಲ್ಲಿ ಹಣಕಾಸಿನ ಆಯ-ವ್ಯಯ ಪಟ್ಟಿಗಳನ್ನು ಪ್ರಸ್ತುತಪಡಿಸುವ ನಿಟ್ಟಿನಲ್ಲಿ ತನ್ಮೂಲಕ ವ್ಯವಹಾರ ಕೌಶಲ್ಯ ವೃದ್ಧಿಸುವ ಉದ್ದೇಶದಿಂದ, ಅಂತಿಮ ಹಾಗೂ ದ್ವಿತೀಯ ಬಿಕಾಂ ವಿದ್ಯಾರ್ಥಿಗಳಿಗೆ ಅಂತರ ತರಗತಿವಾರು ಸ್ಪರ್ಧೆ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಜುಡಿತ್ ಮೆಂಡೋನಾ ಅವರು ಬಿ.ಕಾಂ. ಪದವೀಧರರಿಗೆ ನವ ಉದ್ಯಮಗಳನ್ನು ಕೈಗೊಳ್ಳಲು ವ್ಯವಹಾರ ಕೌಶಲ್ಯಗಳು ಅಗತ್ಯವಾಗಿದೆ ಎಂದು ಹೇಳಿದರು. ಇನ್ನೋರ್ವ ಮುಖ್ಯ ಅತಿಥಿಗಳಾದ ಸಿ.ಎ. ಅನ್ವೇಶ್ ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಲೋಕಜ್ಞಾನದೊಂದಿಗೆ ಆವಿಷ್ಕಾರ ಭರಿತ ವ್ಯವಹಾರ ಜ್ಞಾನವು ಅಗತ್ಯ ಎಂದರು. ಕಾಲೇಜಿನ ಪ್ರಾಂಶುಪಾಲ ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆಕ್ಷರ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಮಕ್ಕಳಿಗೆ ಬಾಲ್ಯದ ದೇಶ, ಧರ್ಮ, ಸಂಸ್ಕೃತಿ, ಸಂಸ್ಕಾರದ ಬಗ್ಗೆ ಅರಿವು ಮೂಡಿಸಿದರೆ ಅವರು ಸತ್ಪ್ರಜೆಗಳಾಗಿ ದೇಶಕ್ಕೆ ಬಲು ದೊಡ್ಡ ಕೊಡುಗೆಯನ್ನು ನೀಡುವ ಸಾಮರ್ಥ್ಯ ಹೊಂದುತ್ತಾರೆ. ಶಿಶು ಮಂದಿರದಲ್ಲಿ ಮಕ್ಕಳಿಗೆ ಇಂತಹ ವಿಷಯಗಳಿಗೆ ಪೂರಕವಾದ ಶಿಕ್ಷಣವನ್ನು ನೀಡುವ ಮೂಲಕ ಮಕ್ಕಳ ಬೆಳವಣಿಗೆಗೆ ಸಹಕರಿಸುತ್ತಿವೆ ಎಂದು ಗಂಗೊಳ್ಳಿ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಪ್ರಧಾನ ಅರ್ಚಕ ಎಸ್. ವೆಂಕಟರಮಣ ಆಚಾರ್ಯ ಹೇಳಿದರು. ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ ನಗರ ಜಯವಂತ ನಾಯಕ್ ಸಭಾಭವನದಲ್ಲಿ ಜರಗಿದ ಶಿಶು ಮಂದಿರದ ಮಕ್ಕಳ ಶುಭ ವಿದಾಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಶಿಶು ಮಂದಿರದಲ್ಲಿ ತಮ್ಮ ಮಕ್ಕಳಂತೆ ಅವರ ಲಾಲನೆ ಪಾಲನೆ ಮಾಡಿ ಶಿಕ್ಷಣ ನೀಡುತ್ತಿರುವ ಮಾತಾಜಿಯವರ ಶ್ರಮ ಶ್ಲಾಘನೀಯ. ಮಕ್ಕಳಿಂದ ಪೋಷಕರೂ ದೇಶ, ಧರ್ಮ, ಸಂಸ್ಕೃತಿ, ಸಂಸ್ಕಾರದ ಬಗ್ಗೆ ತಿಳಿದು ಕೊಳ್ಳುವಂತಾಗಿದ್ದು, ಇಂತಹ ಬದಲಾವಣೆಗೆ ಕಾರಣವಾಗಿರುವ ಶಿಶು ಮಂದಿರದ ಶಿಕ್ಷಣ ಸ್ತುತ್ಯಾರ್ಹವಾದುದು ಎಂದು ಹೇಳಿದರು. ಎನ್.ಪ್ರಕಾಶ್ ನಾಯಕ್ ಗಂಗೊಳ್ಳಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ನಮಗೆ ನಾವೇ ಸಾಧಕರು, ನಮಗೆ ನಾವೇ ಬೋಧಕರೂ ಆಗಬೇಕು. ಸಾಧನೆಗೆ ಇಂತಿಷ್ಟೇ ಅವಧಿ ಎಂಬುದಿಲ್ಲ. ಅದು ನಿರಂತರವಾಗಿ ನಡೆಯಬೇಕಾದ ನಿಜದ ಅನ್ವೇಷಣೆ. ಪ್ರಯತ್ನವು ಬದುಕನ್ನು ಬೆಳಕಿನ ದಾರಿಯಲ್ಲಿ ಕೊಂಡೊಯ್ಯುವ ನಂದಾದೀಪ. ಪದವಿ ಶಿಕ್ಷಣದಲ್ಲಿ ವಿದ್ಯೆ ಮತ್ತು ಕೌಶಲ್ಯದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಪೂರ್ವಸಿದ್ಧತೆ ಮಾಡಿಕೊಂಡು ಸತತ ಪ್ರಯತ್ನದಲ್ಲಿ ನಂಬಿಕೆ ಇಟ್ಟರೆ ಭವಿಷ್ಯ ಉಜ್ವಲವಾಗುತ್ತದೆಂದು ತೆಂಕನಿಡಿಯೂರು ಸ.ಪ್ರ.ದ. ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರಶಾಂತ ನೀಲಾವರ ನುಡಿದರು. ಅವರು ಇಲ್ಲಿನ ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ, ಅಂಚೆ ಕೋಟೇಶ್ವರ ಇಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನವನ್ನು ಎದುರಿಸುವ ಕಲೆ ಎಂಬ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಾಹೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ. ಪ್ರವೀಣ ಶೆಟ್ಟಿ ಸಂದರ್ಶನವನ್ನು ಎದುರಿಸುವ ಕಲೆ ಎಂಬ ವಿಷಯದ ಕುರಿತು ಮಾತನಾಡುತ್ತ ಜ್ಞಾನ, ಕೌಶಲ್ಯ ಸಂಪಾದನೆಯೊಂದಿಗೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಶಿಕ್ಷಣ ವ್ಯವಸ್ಥೆಯ ಆರಂಭದಲ್ಲೆ, ಒಬ್ಬ ವ್ಯಕ್ತಿಯಾಗಿ ತನ್ನ ಜೀವನದ ಉದ್ದೇಶವೇನೆಂಬುದನ್ನು ಅರಿಯಬೇಕು. ಜೀವನದಲ್ಲಿ ಗುರಿಯನ್ನು ಆರಂಭದಲ್ಲೆ ಅರಿಯುವುದು ಉತ್ತಮ. ಪ್ರತಿ ಕೆಲಸದಿಂದ ಬರುವ ಅನುಭವದಿಂದ ಬದುಕನ್ನು ಶ್ರೇಷ್ಠತೆಯೆಡೆಗೆ ಒಯ್ಯುವ ಕೆಲಸವಾಗಬೇಕಿದೆ ಎಂದು ಕೋಟೇಶ್ವರದ ರಾಜಾರಾಮ್ ಪೋಲಿಮರ್ಸ್ ಸಂಸ್ಥೆಯ ಸ್ಥಾಪಕ ಸುರೇಶ್ ಕಾಮತ್ ಹೇಳಿದರು. ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಮ್ಯಾನೇಜ್‌ಮೆಂಟ್ ವಿಭಾಗದ ವತಿಯಿಂದ ಹಮ್ಮಿಕೊಂಡ ಎಂತುಝಿಯಾ ಕೋರ್ಪೊ ಕನೆಕ್ಟ್ ಫೆಸ್ಟ್ ನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದ ಯುವ ಪ್ರತಿನಿಧಿ ಮಿಥುನ್ ರೈ, ವೃತ್ತಿಪರ ಜೀವನವನ್ನು ಅತ್ಯುತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲು ಮ್ಯಾನಜ್ಮೆಂಟ್ ಪದವಿ ಸೂಕ್ತ ಆಯ್ಕೆ. ಎಲ್ಲವನ್ನು ಪರಿಶ್ರಮದಿಂದ ಕಲಿಯಬೇಕು. ಸವಾಲುಗಳನ್ನು ಎದುರಿಸಿ ಮುನ್ನಡೆಯುವವ ನಿಜವಾದ ನಾಯಕನೆನಿಸಿಕೊಳ್ಳಬಲ್ಲ. ಪ್ರತಿಯೊಬ್ಬರಲ್ಲೂ ಪ್ರತಿಭೆ ಇದೆ ಅದನ್ನು ತಾವೇ ಗುರುತಿಸಿಕೊಳ್ಳಬೇಕು ಹಾಗೂ ಉಪನ್ಯಾಸಕರು ಸರಿಯಾದ ಮಾರ್ಗದರ್ಶನ ನೀಡಬೇಕು ಎಂದರು. ದಶಕಗಳ ಹಿಂದೆ ತಾನು ಪದವಿ ವಿದ್ಯಾರ್ಥಿಯಾಗಿದ್ದಾಗ ಆಯೋಜಿಸಿದ ಅಂತರಾಷ್ಟ್ರೀಯ ಸಮ್ಮೇಳನ ಯಶಸ್ಸನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಏಷ್ಯಾ ಖಂಡದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ವಿದ್ಯಾರ್ಥಿಗಳು ದೊರೆಯುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ತನ್ಮೂಲಕ  ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಕೆ. ಶಾಂತಾರಾಮ್ ಪ್ರಭು ಹೇಳಿದರು. ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ವಾರ್ಷಿಕೋತ್ಸವ ಸಮಾರಂಭದ ಮೊದಲ ದಿನ ಅಂತರ್ ತರಗತಿ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾರ್ಕಳದ ಭುವನೇಂದ್ರ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಬಿ. ಪದ್ಮನಾಭ ಗೌಡ ಅವರು ಮಾತನಾಡಿ, ಸಂಸ್ಥೆ ಕೇವಲ ಭೌತಿಕ ವಸ್ತುವಲ್ಲ. ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸುವುದು. ಅಭೂತಪೂರ್ವ ವೇದಿಕೆಯನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಪ್ರತಿಭೆ ಎಲ್ಲರಲ್ಲೂ ಇದೆ. ಆದರೆ ನಿಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಪೋಷಕರು, ಶಿಕ್ಷಕರು ಗುರುತಿಸಬೇಕು. ಉತ್ತಮ ಶಿಕ್ಷಣವು ಪ್ರತಿಭೆಯಾಗಿದೆ. ಇಂತಹ ವೇದಿಕೆಗಳು ನಿಮ್ಮ ಪ್ರತಿಭೆಗೆ ಪ್ರೇರಣೆಯಾಗಲಿ. ಅಲ್ಲದೆ ಕರ್ನಾಟಕದ ಜಾನಪದ ಲೋಕ ಶ್ರೀಮಂತವಾಗಿದೆ. ಯುವಕರು ಇಂತಹ ಜನಪದ ಲೋಕವನ್ನು ಉಳಿಸಿ ಬೆಳೆಸಬೇಕು ಎಂದು ಹೇಳಿದರು. ಕಾರ್ಯಕ್ರಮದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬ್ರಹ್ಮಾವರ: ತಾಲೂಕಿನ ಯಡ್ತಾಡಿ ನಿವಾಸಿ ಸೀತಾ ಬಾಯಿ ಅವರು ಪಕ್ಕದ ಮನೆಯ ಕಾರ್ಯಕ್ರಮಕ್ಕೆಂದು ರಸ್ತೆಯಲ್ಲಿ ನಡೆದುಕೊಂಡು ತೆರಳುತ್ತಿದ್ದ ವೇಳೆ ಅಲ್ತಾರು ಪಡುಮನೆ ಸಮೀಪ ಬೈಕ್‌ನಲ್ಲಿ ಬಂದ ಆರೋಪಿ 28 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ಕಿತ್ತುಕೊಂಡು ಮಂದಾರ್ತಿ ಕಡೆಗೆ ಪರಾರಿಯಾಗಿದ್ದ ಘಟನೆ ಮಾ. 20ರಂದು ನಡೆದಿತ್ತು.ಪ್ರಕರಣದ ತನಿಖೆ ನಡೆಸಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮಾ. 21ರಂದು ಆರೋಪಿಯನ್ನು ವಶಪಡಿಸಿಕೊಂಡಿದ್ದಾರೆ. ಸಾಲಿಗ್ರಾಮ ಕಾರ್ಕಳ ಭಟ್ರಕಟ್ಟೆ ನಿವಾಸಿ ಮಂಜುನಾಥ ಮಯ್ಯ ಪೊಲೀಸರು ವಶಪಡಿಸಿಕೊಂಡ ಆರೋಪಿ. ಕಳವು ನಡೆದ ಕೂಡಲೇ ಸ್ಥಳೀಯರು ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಸುಮಾರು 20 ಕಿ.ಮೀ. ವ್ಯಾಪ್ತಿಯ ವಿವಿಧ ಕಡೆಗಳ ಸಿ.ಸಿ. ಕೆಮರಾಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದು, ಆಗ ಬೈಕ್ ಬಗ್ಗೆ ಮಾಹಿತಿ ದೊರೆತಿದೆ. ಅದರ ಆಧಾರದಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಯು ಈ ಹಿಂದೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ತಾಲೂಕಿನ ಕಂಬದಕೋಣೆ ಸರಕಾರಿ ಪದವಿ ಪೂರ್ವ ಕಾಲೇಜಿನ ಎಸೆಸೆಲ್ಸಿ ಪರೀಕ್ಷಾ ಕೇಂದ್ರದ ಕೋಣೆಯ ಬಾಗಿಲಿನ ಬೀಗ ಒಡೆದು, ಸಿಸಿ ಕೆಮರಾಗಳನ್ನು ಒಡೆದು ಹಾಕಿರುವ ಘಟನೆ ಗುರುವಾರದಂದು ನಡೆದಿದೆ. ಮಾ. 21ರಂದು ನಡೆಯುವ ಪರೀಕ್ಷೆಗೆ ತರಗತಿಯ ಕೋಣೆಗಳನ್ನು ಸಿದ್ಧಗೊಳಿಸಲಾಗಿತ್ತು. ಈ ಬಾರಿ ನಕಲು ತಡೆಗಟ್ಟಲು ಕಾಲೇಜು ವಠಾರ ಹಾಗೂ ಕೋಣೆಗಳಿಗೆ ಸಿಸಿ ಕೆಮರಾ ಅಳವಡಿಸಲಾಗಿತ್ತು. ಮಾ.20ರಂದು ರಾತ್ರಿ ಸುಮಾರು 9.30 ರಿಂದ 10 ಗಂಟೆ ಹೊತ್ತಿಗೆ ಮುಸುಕುಧಾರಿಗಳು ಕಾಲೇಜಿನ ಆವರಣ ಪ್ರವೇಶಿಸಿ, ಅಲ್ಲಿ ಅಳವಡಿಸಿದ್ದ ಕೆಮರಾ ಕಿತ್ತೆಸೆದು ವಿದ್ಯುತ್ ಮೈನ್ ಸ್ವಿಚ್ ಆಫ್ ಮಾಡಿದ್ದಾರೆ. ಅನಂತರ ಪರೀಕ್ಷಾ ಕೇಂದ್ರದ ಕೋಣೆಯ ಬಾಗಿಲಿನ ಬೀಗ ಒಡೆದು, ಒಳಗೆ ನುಗ್ಗಿದ್ದಾರೆ. 4 ಕೋಣೆಗಳಿಗೆ ಹೋಗಿ 5 ಕೆಮರಾಗಳನ್ನು ಧ್ವಂಸ ಮಾಡಿದ್ದಾರೆ.ಜಾಕೆಟ್ ಧರಿಸಿದ್ದ ಮೂವರು ಮುಸುಕು ಧರಿಸಿ ಆವರಣ ಪ್ರವೇಶಿಸಿ ಈ ಕೃತ್ಯ ಎಸಗಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು 15 ಪರೀಕ್ಷಾ ಕೊಠಡಿಗಳಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ವತಿಯಿಂದ ಬಿ.ಇ/ಬಿ.ಟೆಕ್ ಪದವೀಧರರಾಗಿದ್ದು, ಐ.ಐ.ಎಸ್.ಸಿ, ಐ.ಐ.ಟಿ ಮತ್ತು ಎನ್.ಐ.ಟಿ ಸಂಸ್ಥೆಗಳ ಮೂಲಕ ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಅಂಡ್ ಮೆಷಿನ್ ಲರ್ನಿಂಗ್ ವೃತ್ತಿಪರ ಕೋರ್ಸುಗಳಲ್ಲಿ (ತರಬೇತಿ ಅವಧಿ ಕನಿಷ್ಠ 6 ತಿಂಗಳಿನಿಂದ 1 ವರ್ಷ) ಭಾಗವಹಿಸುವ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 15000 ರೂ. ಶಿಷ್ಯ ವೇತನ ಪಡೆಯಲು ಅವಕಾಶವಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಯ ಕುಟುಂಬ ಆದಾಯ 5 ಲಕ್ಷ ರೂ. ಮೀರಿರಬಾರದು. ಮೂಲ ನಿವಾಸಿ ಮತ್ತು ಅಲೆಮಾರಿ/ ಅರೆ ಅಲೆಮಾರಿ, ಸೂಕ್ಷ್ಮ/ ಅತಿ ಸೂಕ್ಷ್ಮ ಸಮುದಾಯಗಳ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಏಪ್ರಿಲ್ 10 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಯೋಜನಾ ಸಮನ್ವಯಾಧಿಕಾರಿ, ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ, ಉಡುಪಿ ದೂ.ಸಂಖ್ಯೆ: 0820-2574814 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಕಚೇರಿ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ವಿಧಾನ ಸಭೆಯಲ್ಲಿ ಕರಾವಳಿಯ ಶಾಸಕರುಗಳಿಗೆ ವಿಶೇಷವಾದ ಗೌರವವಿದೆ. ಅತ್ಯಂತ ಮೇಧಾವಿಗಳನ್ನು, ಸದನ ಶೂರರನ್ನು, ನೈತಿಕತೆ, ಸಿದ್ದಾಂತಕ್ಕೆ ಬದ್ಧರಾದ ಜನಪ್ರತಿನಿದಿನಗಳನ್ನು ನೀಡಿದ ಪುಣ್ಯ ಭೂಮಿ ನಮ್ಮ ಕರಾವಳಿ. ಇಂತಾ ಹೆಮ್ಮೆಯ ನಾಡಿನಿಂದ ಶಾಸನ ಸಭೆಗೆ ಆಯ್ಕೆಗೊಂಡು ಶಾಸನ ಸಭೆಯ ಅತ್ಯಂತ ಗೌರವಾನ್ವಿತ ಪೀಠವಾದ ಅಧ್ಯಕ್ಷರ ಪೀಠಕ್ಕೆ ಅಗೌರವ ತೋರಿ ವಿಧಾನ ಸಭೆಯ ಅಧಿವೇಶನ ಪ್ರವೇಶಕ್ಕೆ ಆರು ತಿಂಗಳುಗಳ ಕಾಲ ಅಮಾನತುಗೊಂಡ ಕರಾವಳಿಯ ಶಾಸಕರುಗಳಾದ ಉಮಾನಾಥ್ ಕೋಟ್ಯಾನ್, ಡಾ. ಭರತ್ ಶೆಟ್ಟಿ ಹಾಗೂ ಯಶ್‌ಪಾಲ್‌ ಸುವರ್ಣ ವರ್ತನೆಯು ಸುಶಿಕ್ಷಿತರ ನಾಡಾದ ಕರಾವಳಿ ಜನರಿಗೆ ಮಾಡಿದ ಅವಮಾನವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಹೇಳಿದರು.   ಶಾಸನ ಸಭೆಯ ಘನತೆ ಏತ್ತಿ ಹಿಡಿಯ ಬೇಕಾದ ಸದಸ್ಯರುಗಳು ಅಧ್ಯಕ್ಷರ ಪೀಠಕ್ಕೆ ತೆರಳಿ ಅಧ್ಯಕ್ಷರ ಮೇಲೆ ಕಾಗದವನ್ನು ಹರಿದು ಎಸೆದದ್ದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಪಚಾರವಾಗಿದೆ. ವಿಧಾನ ಮಂಡಲದ ಅಧಿವೇಶನದ ಆಳ ಅಗಲ ತಿಳಿಯದ ಜನಪ್ರತಿನಿದಿನಗಳು ಮಾತ್ರ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ  ಸಭಾಂಗಣದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ  ವಿದ್ಯಾರ್ಥಿಗಳಿಗೆ  ಉತ್ಕರ್ಷ ಎನ್ನುವ ಶೀರ್ಷಿಕೆ ಅಡಿಯಲ್ಲಿ ಶುಭ ವಿದಾಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿಜಯ ಮಕ್ಕಳ ಕೂಟ ಆತ್ರಾಡಿ ಇಲ್ಲಿನ ಸಂಚಾಲಕರಾದ ಸುಭಾಸ್ ಚಂದ್ರ ಶೆಟ್ಟಿ ಅವರು ಮಾತನಾಡಿ, ಸರಳ ಬದುಕಿನೊಂದಿಗೆ ಮಾನವೀಯ ಮೌಲ್ಯ ಗಳನ್ನು ಅಳವಡಿಸಿ ಕೊಂಡು, ಸಮಾಜಮುಖಿ ಕಾರ್ಯಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತಾಗಲಿ ಎಂದು ಹಾರೈಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ವೆಂಕಟರಮಣ ದೇವ್ ಎಜುಕೇಶನಲ್ & ಕಲ್ಚರಲ್ ಟ್ರಸ್ಟ್ ನ ಕಾರ್ಯದರ್ಶಿ ಕೆ. ರಾಧಾಕೃಷ್ಣ ಶೆಣೈ ಅವರು ಮಾತನಾಡಿ, ತಂದೆ, ತಾಯಿ, ಗುರುಗಳಿಗೆ ಗೌರವ ನೀಡಿ. ಸತ್ಪಜೆಯಾಗಿ ಯಶಸ್ವಿ ಬದುಕನ್ನು ಸಾಗಿಸಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಗಾಣಿಗ, ಉಪ ಪ್ರಾಂಶುಪಾಲರಾದ ಸುಜಯ್ ಕೋಟೆಗಾರ್,  ಶ್ರೀ ವೆಂಕಟರಮಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಕೃಷ್ಣ ಅಡಿಗ, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ರೇಷ್ಮಾ ಡಿಸೋಜಾ, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಪ್ರಮೀಳಾ ಡಿಸೋಜಾ, ಹಿರಿಯ…

Read More