Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡಬಿದಿರೆ: ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವತಿಯಿಂದ ಅಂತರ್ ಕಾಲೇಜು ಸ್ಪರ್ಧೆ ‘ಟೆಕ್ಕೋತ್ಸವ್‌ದ’ ಉದ್ಘಾಟನಾ ಕಾರ್ಯಕ್ರಮವು ಮೋಹಿನಿ ಅಪ್ಪಾಜಿ ವೇದಿಕೆ ಸಭಾಂಗಣದಲ್ಲಿ ಸೋಮವಾರ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕೋಡ್‌ಕ್ರಾಫ್ಟ್ ಟೆಕ್ನಾಲಾಜೀಸ್ ಪ್ರೈವೇಟ್ ಲಿಮಿಟೆಡ್‌ನ ಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೀಕ್ಷಿತ್ ರೈ ಮಾತನಾಡಿ, ‘ಟೆಕ್ಕೋತ್ಸವ್ ಕೇವಲ ತಂತ್ರಜ್ಞಾನ ಆಚರಣೆಗಾಗಿ ಮಾತ್ರವಲ್ಲ; ನವೀನತೆ ಮತ್ತು ಆವಿಷ್ಕಾರಗಳನ್ನು ಉತ್ತೇಜಿಸಲು ಆಯೋಜಿಸಲಾದ ವೇದಿಕೆಯಾಗಬೇಕು. ವಿದ್ಯಾರ್ಥಿ ಜೀವನದಲ್ಲಿ ಇಂತಹ ತಾಂತ್ರಿಕ ಉತ್ಸವಗಳು ಅತ್ಯಂತ ಮಹತ್ವದ್ದಾಗಿದ್ದು, ಕಾಲೇಜಿನ ಹೊರ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಲು ಇದು ಉತ್ತಮ ಅವಕಾಶ ಒದಗಿಸುತ್ತದೆ ಎಂದು ಅಭಿಪ್ರಾಯಪಟ್ಟರು.20ಕ್ಕೂ ಅಧಿಕ ಕಾಲೇಜುಗಳಿಂದ ವಿದ್ಯಾರ್ಥಿಗಳು ಭಾಗವಹಿಸಿರುವುದು ಸಂತಸದ ಸಂಗತಿ. ಇಂತಹ ವೇದಿಕೆಗಳು ಹೊಸ ವಿಷಯಗಳನ್ನು ತಿಳಿಯಲು, ಜ್ಞಾನ ವಿಸ್ತರಿಸಿಕೊಳ್ಳಲು ಮತ್ತು ಅನುಭವ ಹಂಚಿಕೊಳ್ಳಲು ನೆರವಾಗುತ್ತವೆ. ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು. ಯಾವುದೇ ತಂತ್ರಜ್ಞಾನವನ್ನು ಬಳಸುವ ಮೊದಲು ಮೂಲಭೂತ  ಅಂಶಗಳ ಮೇಲೆ ಗಮನಹರಿಸುವುದು ಅಗತ್ಯ. ಪ್ರೋಗ್ರಾಮಿಂಗ್…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬ್ರಹ್ಮಾವರ: ಫಾರ್ಚೂನ್ ಅಕಾಡೆಮಿಕ್ ಮತ್ತು ಚಾರಿಟೇಬಲ್ ಟ್ರಸ್ಟ್ ಪ್ರವರ್ತಿತ ಬ್ರಹ್ಮಾವರ ಹಂಗಾರಕಟ್ಟೆಯ ಫಾರ್ಚುನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ಸಂಸ್ಥೆಯ ಬಿಎಸ್ಸಿ ನರ್ಸಿಂಗ್, ಜಿಎನ್ಎಂ ಮತ್ತು ಡಿಎಂ ಎಲ್ ಟಿ, ಡಿಒಟಿ ಮತ್ತು ಎಟಿ ಇದರ ಪದವಿ ಪ್ರದಾನ ಸಮಾರಂಭ- 2026 ಸಂಸ್ಥೆಯ ವಠಾರದಲ್ಲಿ ರವಿವಾರ ನಡೆಯಿತು. ಸಮಾರಂಭದ ಮುಖ್ಯ ಅಬ್ಯಾಗತರಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮೆಡಿಕಲ್ ಸೈನ್ಸ್ ಮತ್ತು ರೀಸರ್ಚ್ ಸೆಂಟರ್ ಡೀನ್ ಡಾ. ಮಹಾಬಲೇಶ್ ಶೆಟ್ಟಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನೆರವೇರಿಸಿ ಮಾತನಾಡಿ, ಮೇ. 12ರಂದು ಆಧುನಿಕ ನರ್ಸಿಂಗ್ ವಿಭಾಗಕ್ಕೆ ಅಡಿಪಾಯ ಹಾಕಿದ ಪ್ಲಾರೆನ್ಸ್ ನೈಂಟಿಂಗೇಲ್ ಅವರ ಜನ್ಮದಿನದಂದು ದಾದಿಯರ ಸೇವೆಯನ್ನು ಸ್ಮರಿಸುತ್ತದೆ. ದಾದಿಯರು ಆರೋಗ್ಯ ಕ್ಷೇತ್ರದ ಬೆನ್ನೆಲುಬು ಅವರು ರೋಗಿಗಳ ಆರೈಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ರೋಗಿಗಳಿಗೆ ಮಾನಸಿಕ ಧೈರ್ಯ ಮತ್ತು ಪ್ರೀತಿಯ ಆರೈಕೆಗೆ ಪ್ರಮುಖ ಕಾರಣರಾಗಿರುತ್ತಾರೆ. ಅವರ ನಿಸ್ವಾರ್ಥ ಸೇವೆ ಬೆಲೆ ಕಟ್ಟಲು ಸಾಧ್ಯವಿಲ್ಲ ಆರೋಗ್ಯ ಕ್ಷೇತ್ರಕ್ಕೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆನ್ಸ್ ಆಫ್ ಇಂಡಿಯಾದವರು ನಡೆಸಿದ 2026ರ ಸಿಎ ಅಂತಿಮ ಪರೀಕ್ಷೆಯಲ್ಲಿ ಅಕ್ಷಯ ಶೆಟ್ಟಿ ಅವರು ಉತ್ತೀರ್ಣರಾಗಿದ್ದಾರೆ. ಅವರು ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿಪೂರ್ವ ಕಾಲೇಜಿನ ಹಿಂದಿನ ವಿದ್ಯಾರ್ಥಿ. ಈತ ಹುಂಚನಿ ಹೆಮ್ಮಕ್ಕಿ ವಸಂತಿ ಶೆಟ್ಟಿ ಮತ್ತು ಉಳ್ಳೂರು 74ರ ಕರುಣಾಕರ ಶೆಟ್ಟಿ ಅವರ ಪುತ್ರ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಕೊಡ್ಲಾಡಿ ಗ್ರಾಮದ ಕೆಂಜಿಮನೆ ಶ್ರೀ ಹಾಗುಳಿ ದೈವಸ್ಥಾನದ 28ನೇ ವರ್ಷದ ಪ್ರತಿಷ್ಠಾಪನಾ ವರ್ಧಂತ್ಯುತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸೋಮವಾರ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ ದೇವತಾ ಪ್ರಾರ್ಥನೆಯೊಂದಿಗೆ ವರ್ಧಂತ್ಯುತ್ಸವದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿತು. ಬಳಿಕ ನವಕುಂಭಸ್ಥಾಪನಾದಿ ಹೋಮ, ಹಾಗುಳಿ ಮತ್ತು ನಾಗ ದೇವರಿಗೆ ಕುಂಭಾಭಿಷೇಕ, ಮಹಾಪೂಜೆ, ನಾಗ ದೇವರ ಹಾಗೂ ಹಾಗುಳಿ ದೈವದ ಸಂದರ್ಶನ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ, ಸಂಜೆ ಢಕ್ಕೆ ಬಲಿ ಉತ್ಸವ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡಿತು. ಪುರೋಹಿತರು, ದೈವಸ್ಥಾನದ ಆಡಳಿತ ಮೊಕ್ತೇಸರ ಭಾಂಡ್ಯ ಸುಬ್ಬಣ್ಣ ಶೆಟ್ಟಿ, ಭಾಂಡ್ಯ ಸುಭಾಶ್ ಶೆಟ್ಟಿ, ಭಾಂಡ್ಯ ಸುಧಾಕರ ಶೆಟ್ಟಿ, ಭಾಂಡ್ಯ ಗೋವಿಂದ್ರಾಯ ಪೈ, ಭಾಂಡ್ಯ ಕೃಷ್ಟ್ರಾಯ ಪೈ, ಆಡಳಿತ ಮಂಡಳಿ ಸದಸ್ಯರು, ಊರ ಪರ ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ ಇಂಡಿಯಾ ವತಿಯಿಂದ ನಡೆಸಲ್ಪಡುವ ಸಿಎ ಪರೀಕ್ಷೆಯಲ್ಲಿ ನಾವುಂದ ಬಡಾಕೆರೆ ತೆಂಕನ ಮಕ್ಕಿಯ ಸಂದೇಶ ಕೆ. ಪೂಜಾರಿ ಅವರು ಉತ್ತೀರ್ಣರಾಗಿದ್ದಾರೆ. ಅವರು ಬಡಾಕೆರೆ ಹಾಲು ಉತ್ಪಾದಕ ಸಹಕಾರಿ ಸಂಘದ ಕಾರ್ಯದರ್ಶಿಯಾದ ಪಾರ್ವತಿ ಕೃಷ್ಣ ಪೂಜಾರಿ ಅವರ ಪುತ್ರರಾಗಿರದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ  ಆಂತರಿಕ ಗುಣಮಟ್ಟ ಮತ್ತು ಭರವಸೆ ಕೋಶ, ರಾಷ್ಟ್ರೀಯ ಸೇವಾ ಯೋಜನೆ ಘಟಕ, ಎನ್.ಸಿ.ಸಿ (ನೌಕಾದಳ ಮತ್ತು ಭೂದಳ), ರೆಡ್ ಕ್ರಾಸ್ ಘಟಕ, ರೇಂಜರ್ಸ್ ಮತ್ತು ರೋವರ್ಸ್ ಘಟಕ, ರೆಡ್ ರಿಬ್ಬನ್ ಕ್ಲಬ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಲಯನ್ಸ್ ಕ್ಲಬ್ ಹಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ” ಸ್ವಯಂ ಪ್ರೇರಿತ ರಕ್ತದಾನ ಶಿಬಿರ” ಇತ್ತೀಚಿಗೆ ನಡೆಯಿತು. ಹಂಗಳೂರು ಲಯನ್ಸ್ ಕ್ಲಬ್ ಇದರ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಜಯಕರ ಶೆಟ್ಟಿ ರಕ್ತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ವಹಿಸಿದ್ದರು. ವೇದಿಕೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಖಜಾಂಚಿ ಶಿವರಾಮ ಶೆಟ್ಟಿ, ಲಯನ್ಸ್ ಕ್ಲಬ್ ಹಂಗಳೂರು ಇದರ ಕಾರ್ಯದರ್ಶಿಗಳಾದ ವಿಲ್ಫ್ರೆಡ್ ಮೆನೆಜರ್ಸ್ಯ, ಕಾಲೇಜಿನ ರಾಷ್ಟ್ರೀಯ ಸೇವಾ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಇಲ್ಲಿನ ದಾಕುಹಿತ್ತುನಿಂದ ಮೀನುಗಾರಿಕೆಗೆ ತೆರಳಿದ್ದಾಗ ಭಾರೀ ಗಾಳಿಗೆ ದೋಣಿಯೊಳಗೆ ಆಯತಪ್ಪಿ ಬಿದ್ದು, ಎದೆ ನೋವಿನಿಂದ ಅಸ್ವಸ್ಥಗೊಂಡಿದ್ದ ಗಂಗೊಳ್ಳಿಯ ಜಗನ್ನಾಥ ‌ಖಾರ್ವಿ (43) ಅವರು ಚಿಕಿತ್ಸೆಗೆ ಸ್ಪಂದಿಸದೆ ರವಿವಾರ ಸಾವನ್ನಪ್ಪಿದ್ದಾರೆ. ಫೆ.27ರ ಬೆಳಗ್ಗೆ ಅವರು ಇನ್ನಿತರ ಮೀನುಗಾರರೊಂದಿಗೆ ಗಣಮಣಿ ಪ್ರಸಾದ್‌ ಎನ್ನುವ ನಾಡದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ದಾಕುಹಿತ್ತುನಿಂದ ಸುಮಾರು 5 ಮಾರು ದೂರದ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಭಾರೀ ಗಾಳಿ ಬಂದಿದ್ದರಿಂದ ಅವರು ದೋಣಿಯಲ್ಲಿ ಆಯತಪ್ಪಿ ಬಿದ್ದಿದ್ದರು. ಎದೆ ನೋವು ಕಾಣಿಸಿಕೊಂಡ ಅವರನ್ನು ದೋಣಿಯಲ್ಲಿದ್ದವರು ಗಂಗೊಳ್ಳಿ ಬಂದರಿಗೆ ಕರೆದುಕೊಂಡು ಬಂದು, ಅಲ್ಲಿಂದ ಆ್ಯಂಬುಲೆನ್ಸ್ ನಲ್ಲಿ ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಹಳೆಯ ಪ್ರೇಯಸಿಯ ಹೆಸರಿನಲ್ಲಿ ಚಾಟ್ ಮಾಡಿ ಯುವಕನೊಬ್ಬನಿಂದ ಸುಮಾರು 1.80 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿರುವ ಘಟನೆ ಇಲ್ಲಿನ ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಹೊಸಂಗಡಿ ಗ್ರಾಮದ ನಿವಾಸಿ ರವಿಚಂದ್ರು (29) ಎಂಬುವವರು ಈ ಹಿಂದೆ ಹೊಸನಗರ ತಾಲೂಕಿನ ಅನುಷಾ ಎಂಬಾಕೆಯನ್ನು ಪ್ರೀತಿಸುತ್ತಿದ್ದರು. ಇವರ ಪ್ರೇಮಕ್ಕೆ ಪೋಷಕರ ವಿರೋಧವಿದ್ದ ಕಾರಣ, ಮೂರು ವರ್ಷಗಳ ಹಿಂದೆ ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆಯುವ ಮೂಲಕ ಈ ಪ್ರಕರಣ ಇತ್ಯರ್ಥಗೊಂಡಿತ್ತು. ಆದರೆ, ಕಳೆದ ಅಕ್ಟೋಬರ್ 24, 2025 ರಂದು ಅನುಷಾ ಹಿಂದೆ ಬಳಸುತ್ತಿದ್ದ ಮೊಬೈಲ್ ಸಂಖ್ಯೆಯಿಂದ ರವಿಚಂದ್ರ ಅವರ ವಾಟ್ಸಾಪ್‌ಗೆ ಹುಟ್ಟುಹಬ್ಬದ ಶುಭಾಶಯ’ದ ಸಂದೇಶ ಬಂದಿದೆ. ಇದನ್ನು ಅನುಷಾಳೇ ಕಳುಹಿಸಿದ್ದಾಳೆಂದು ನಂಬಿದ ರವಿಚಂದ್ರ ಮರು ಸಂದೇಶ ಕಳುಹಿಸಿದ್ದು, ಇಬ್ಬರ ನಡುವೆ ಚಾಟಿಂಗ್ ಆರಂಭವಾಗಿದೆ. ಚಾಟಿಂಗ್ ಮಾಡುತ್ತಿದ್ದ ವ್ಯಕ್ತಿ ದಿವ್ಯಾ ತನಗೆ ಮನೆಯಲ್ಲಿ ತುಂಬಾ ಸಮಸ್ಯೆಯಿದೆ ಎಂದು ನಂಬಿಸಿ ಹಣದ ಅವಶ್ಯಕತೆ ಇದೆ ಎಂದು ಕೇಳಿಕೊಂಡಿದ್ದಾಳೆ,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಅಂಪಾರು ಸಂಜಯಗಾಂಧಿ ಇಂಗ್ಲಿಷ್‌ ಮೀಡಿಯಂ ಶಾಲೆ, ಸಂಜಯಗಾಂಧಿ ಚಾರಿಟೇಬಲ್‌ ಟ್ರಸ್ಟ್‌ ಅಂಪಾರು ಇವರ ಆಶ್ರಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ವಿಜ್ಞಾನ ಮಾದರಿಗಳ ಪ್ರದರ್ಶನವನ್ನು ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಯಿತು. ಬೈಂದೂರು ಕ್ಷೇತ್ರದ ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ ವಿವಿಧ ವೈಜ್ಞಾನಿಕ ಪ್ರಯೋಗಗಳ ಮೂಲಕ ಪ್ರದರ್ಶನವನ್ನು ಉದ್ಘಾಟಿಸಿ, ಪ್ರತಿಯೊಂದು ಮಾದರಿಯ ಹಿಂದಿರುವ ವೈಜ್ಞಾನಿಕ ತತ್ವಗಳನ್ನು ಮೆಚ್ಚಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಬಳಿಕ ವೇದಿಕೆಯಲ್ಲಿ ದೀಪ ಪ್ರಜ್ವಲನೆ ನೆರವೇರಿಸಿ, ಮಾತನಾಡಿ, ಶಾಲೆಯ ಶೈಕ್ಷಣಿಕ ಪ್ರಗತಿಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿ ಮುಂದಿನ ದಿನಗಳಲ್ಲಿ ಅಗತ್ಯ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದ ಆರಂಭದಲ್ಲಿ ಶೈಕ್ಷಣಿಕ ಸಂಚಾಲಕರಾದ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ ಅವರು ಪ್ರಾಸ್ತಾವಿಕ ಭಾಷಣ ಮಾಡುತ್ತಾ ಶಾಲೆಯ ಧೈಯ ಉದ್ದೇಶಗಳನ್ನು ತಿಳಿಸಿ ಅತಿಥಿ ಗಣ್ಯರನ್ನು, ಪೋಷಕರನ್ನು, ಶಿಕ್ಷಕರನ್ನು ಹಾಗೂ ವಿದ್ಯಾರ್ಥಿಗಳನ್ನು ಹಾರ್ದಿಕವಾಗಿ ಸ್ವಾಗತಿಸಿದರು. ಶಾಲಾ ಆಡಳಿತಾಧಿಕಾರಿ ಚೈತ್ರಾ ಯಡಿಯಾಳ ಅವರು ರಾಷ್ಟ್ರೀಯ ವಿಜ್ಞಾನ ದಿನದ ಮಹತ್ವವನ್ನು ವಿವರಿಸಿ, ಈ ಕಾರ್ಯಕ್ರಮದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಆರ್ಡಿ ಕೆರ್ಜಾಡಿ ಶ್ರೀ ದುರ್ಗಾಪರಮೇಶ್ವರಿ ಸಪರಿವಾರ ದೇವಸ್ಥಾನದ ಅಭಿವೃದ್ಧಿ ಸಹಾಯಾರ್ಥವಾಗಿ ಕೆರ್ಜಾಡಿ ದೇವಸ್ಥಾನದ ಸಮೀಪ  ಯಕ್ಷಗಾನ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ದುರ್ಗಾ ಭಜನಾ ಮಂಡಳಿ ಕೊಂಜಾಡಿ, ಯಕ್ಷಗಾನ ಕಲಾವಿದರಾದ ಚಂದ್ರಶೇಖರ ಶೆಟ್ಟಿ ಅರಳಿಸುರಳಿ, ಮಧುಕರ ಹೆಗ್ಡೆ ಮಡಾಮಕ್ಕಿ, ಅಕ್ಷಯ ಆಚಾರ್ಯ ಮಡಾಮಕ್ಕಿ ಮತ್ತು ಸಾಲಿಗ್ರಾಮ ಮೇಳದ ಟೆಂಟ್ ನಿರ್ಮಾಣ ಕಾರ್ಮಿಕರಾದ ಅಮಕುಸ ಯಾನೆ ಅಂಕುಶ ಗೌಡರನ್ನು ಅಭಿನಂದಿಸಲಾಯಿತು. ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಮತ್ತು ಬಹುಮೇಳಗಳ ಯಜಮಾನರಾದ ಪಿ. ಕಿಶನ್ ಹೆಗ್ಡೆ, ಶ್ರೀ ಗಣೇಶ ಕ್ಯಾಶೂಸ್ ಸಮೂಹ ಸಂಸ್ಥೆಗಳ ಮಾಲಕರಾದ ಗಣೇಶ ಕಿಣಿ ಬೆಳ್ವೆ, ಬಿ.ಚಂದ್ರಶೇಖರ್ ಶೆಟ್ಟಿ ಮೂಡ್ ಬೈಲ್, ಉಡುಪಿ ಜಿಲ್ಲಾ ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷರಾದ ವೈ. ವಿಜಯ ಕುಮಾರ ಶೆಟ್ಟಿ ಯಳಂತೂರು, ಸೂರ್ಯ ಶೆಟ್ಟಿ ಆರ್ಡಿ ಕೆರ್ಜಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ…

Read More