ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕೋಟ ಗ್ರಾಮಪಂಚಾಯತ್ ಭಾನುವಾರ ರಾತ್ರಿ ದಿಢೀರ ಪ್ರವೇಶಿಸಿದ ಸುಳಿಗಾಳಿಯಿಂದ ಹಾನಿಗೊಂಡ ಮನೆಗಳಿಗೆ ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಕದ್ರಿಕಟ್ಟು ಜಗನಾಥ ಕಾಂಚನ್,ರಾಜು ಟೈಲರ್ ಮನೆಗೆ ಭೇಟಿ ನೀಡಿ ಕುಂದಾಪುರ ಎಸಿ,ಇಲಾಖಾಧಿಕಾರಿ ಕರೆ ಮಾಡಿ ಶೀಘ್ರ ಸರಕಾರಕ್ಕೆ ವರದಿ ಒಪ್ಪಿಸಲು ಸ್ಥಳದಲ್ಲೆ ಸೂಚಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಮೊಳಹಳ್ಳಿ ದಿನೇಶ್ ಹೆಗ್ಡೆ, ಕೋಟ ಬ್ಲಾಕ್ ಕಾಂಗ್ರೆಸ್ ನಿಯೋಚಿತ ಅಧ್ಯಕ್ಷ ಜಿ. ತಿಮ್ಮ ಪೂಜಾರಿ, ಸ್ಥಳೀಯ ಮುಖಂಡರಾದ ಗೋಪಾಲ್ ಬಂಗೇರ, ಗಣೇಶ್ ಪೂಜಾರಿ, ಜಗನಾಥ್ ಕಾಂಚನ್ ಸೇರಿದಂತೆ ಹಲವರು ಇದ್ದರು.











