ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಂಬದಕೋಣೆ ಹೋಬಳಿ ಮಟ್ಟದ ಅಥ್ಲೆಟಿಕ್ ಪಂದ್ಯಾಟದಲ್ಲಿ ಕಿರಿಮಂಜೇಶ್ವರದ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ನ ವಿದ್ಯಾರ್ಥಿಗಳು 10 ಚಿನ್ನದ ಪದಕ, 4 ಬೆಳ್ಳಿಯ ಪದಕ ಮತ್ತು 4 ಕಂಚಿನ ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಪ್ರೀತಮ್ (8ನೇ ತರಗತಿ) 3 ಚಿನ್ನದ ಪದಕ, ರಜತ್ ಆರ್ಪಿ (8ನೇ ತರಗತಿ) 2ಚಿನ್ನ ಮತ್ತು 1ಬೆಳ್ಳಿಯ ಪದಕ, ಅಬ್ದುಲ್ ಶೈಹನ್ (8ನೇ ತರಗತಿ) 2ಚಿನ್ನ ಮತ್ತು 1ಬೆಳ್ಳಿ, ಮನ್ವಿತ್ ( 8ನೇ ತರಗತಿ) 1 ಚಿನ್ನ, ರಜತ್ ಎಲ್ಪಿ (8ನೇ ತರಗತಿ) 1 ಚಿನ್ನ, ಬೆಳ್ಳಿ ಮತ್ತು ಕಂಚು, ಅಪೇಕ್ಷಾ (8ನೇ ತರಗತಿ) 1 ಚಿನ್ನ ಮತ್ತು ಕಂಚು, ಚಾರ್ವಿ (7ನೇ ತರಗತಿ) 1 ಬೆಳ್ಳಿ , ಪ್ರೀತಮ್ ಆರ್ (8ನೇ ತರಗತಿ) ಕಂಚಿನ ಪದಕಗಳನ್ನು ಪಡೆದಿರುತ್ತಾರೆ. 14ರ ವಯೋಮಾನದ ಹುಡುಗರ ವಿಭಾಗದಲ್ಲಿ ಅಬ್ದುಲ್ ಶೈಹನ್ ವೈಯಕ್ತಿಕ ಚಾಂಪಿಯನ್ ಹಾಗೂ ಸಮಗ್ರ ಚಾಂಪಿಯನ್ ಆಗಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ಪಡೆದುಕೊಂಡಿದೆ.…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಜಿಲ್ಲಾ ಪಂಚಾಯತ್ ಉಡುಪಿ, ತಾಲೂಕು ಪಂಚಾಯತ್ ಕುಂದಾಪುರ, ಗ್ರಾಮ ಪಂಚಾಯತ್ ಗಂಗೊಳ್ಳಿ ಮತ್ತು ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಗಂಗೊಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ರೋಟರಿ ಕ್ಲಬ್ ಗಂಗೊಳ್ಳಿ ಸಹಯೋಗದೊಂದಿಗೆ ವಿಶ್ವ ರೇಬಿಸ್ ದಿನಾಚರಣೆಯ ಅಂಗವಾಗಿ ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾಕುನಾಯಿ ಹಾಗೂ ಬೀದಿ ನಾಯಿಗಳಿಗೆ ಹಾಗೂ ಬೆಕ್ಕುಗಳಿಗೆ ಉಚಿತ ರೇಬಿಸ್ ಲಸಿಕಾ ಶಿಬಿರ ಸೋಮವಾರ ನಡೆಯಿತು. ಪಂಚಾಯತ್ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಸಿಕಾ ಶಿಬಿರಕ್ಕೆ ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಖಾರ್ವಿ ಚಾಲನೆ ನೀಡಿ, ಮಾತನಾಡಿ, ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಗಂಗೊಳ್ಳಿ ಇಲ್ಲಿನ ವೈದ್ಯಾಧಿಕಾರಿ ಡಾ. ಅರುಣ್ ಕೆ.ಪಿ., ನಾಯಿ ಮತ್ತು ಬೆಕ್ಕುಗಳಿಗೆ ರೇಬಿಸ್ ರೋಗ ಬಂದರೆ ಮನುಷ್ಯರಿಗೂ ಅದರಿಂದ ಅಪಾಯವಿದೆ. ಆದ್ದರಿಂದ ಸಾಕು ನಾಯಿ, ಬೆಕ್ಕುಗಳಿಗೆ ಮತ್ತು ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ ಹಾಕಿಸಬೇಕು ಎಂದರು. ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಕೃಷ್ಣ ಪೂಜಾರಿ, ಗ್ರಾಪಂ. ಉಪಾಧ್ಯಕ್ಷ ತಬ್ರೇಜ್,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವರ್ಡ್ಪ್ರೆಸ್ ಕ್ಯಾಂಪಸ್ ಕನೆಕ್ಟ್ – ಉಡುಪಿ ಆಯೋಜನೆಯಲ್ಲಿ ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ 65 ಮಂದಿ ವಿದ್ಯಾರ್ಥಿಗಳು ತಮ್ಮ ಮೊದಲ ವೆಬ್ಸೈಟ್ಗಳನ್ನು ನಿರ್ಮಿಸಿ ನೇರವಾಗಿ ಲೈವ್ ಮಾಡಿ ಪ್ರಾಯೋಗಿಕ ಕಲಿಕೆಗೆ ಸಾಕ್ಷಿಯಾದರು.. ವಿದ್ಯಾರ್ಥಿಗಳು WordPress.com ನೀಡಿದ ಉಚಿತ ಒಂದು ವರ್ಷದ ಯೋಜನೆಯ ನೆರವಿನಿಂದ ತಮ್ಮ ಆಲೋಚನೆಗಳನ್ನು ಆನ್ಲೈನ್ನಲ್ಲಿ ನೈಜ ರೂಪಕ್ಕೆ ತಂದರು. ತರಗತಿಯಲ್ಲಿ ಕಲಿತ ವಿಷಯಗಳನ್ನು ನೈಜ ಪ್ರಯೋಗ ರೂಪದಲ್ಲಿ ಅನ್ವಯಿಸುವ ಅವಕಾಶ ನೀಡಿದ ಈ ಕಾರ್ಯಾಗಾರವು ವಿದ್ಯಾರ್ಥಿಗಳಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿತು. ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ. ಕೆ. ಉಮೇಶ್ ಶೆಟ್ಟಿ, ಉಪಪ್ರಾಚಾರ್ಯ ಡಾ. ಚೇತನ್ ಶೆಟ್ಟಿ ಕೆ., ಅಕಾಡೆಮಿಕ್ ಡೀನ್ ಹಾಗೂ ಕಾರ್ಯಕ್ರಮ ಸಂಯೋಜಕ ಗಿರಿರಾಜ ಭಟ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಮಹೇಶ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮ ಆಯೋಜನಕರಾದ ಉಡುಪಿ ಸಬ್ವೆಬ್ ಸಂಸ್ಥಾಪಕ ಶಶಿಕಾಂತ್ ಶೆಟ್ಟಿ, ಮುಂಬೈ ಕ್ವಾಲಿಟಿ ಕಿಯಾಸ್ಕ್, ಹಿರಿಯ ಟೆಸ್ಟರ್ ಕೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪದವಿ ಪೂರ್ವ ಶಿಕ್ಷಣ ಇಲಾಖೆ ನೇತೃತ್ವದಲ್ಲಿ ತುಮಕೂರಿನಲ್ಲಿ ನಡೆದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿದ ಜನತಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಾಯಿಮ್ ಎಂ. ಕೆ. ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಯ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ, ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಕಾವ್ರಾಡಿ ಗ್ರಾಮದ ಮರಾಸಿ ರಸ್ತೆಯ ಹಾಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಅಂದರ್ – ಬಾಹರ್ ಎಂಬ ಇಸ್ಪೀಟು ಆಟವಾಡುತ್ತಿದ್ದ ನಾಲ್ವರನ್ನು ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ತಮ್ಮ ಸ್ವಂತ ಲಾಭಕ್ಕಾಗಿ ಇಸ್ಪೀಟು ಎಲೆಗಳಿಂದ ಅಂದರ್ – ಬಾಹರ್ ಎಂಬ ಇಸ್ಪೀಟು ಆಟವಾಡುತ್ತಿದ್ದವರ ಸಂದರ್ಭ ಪೊಲೀಸರು ದಾಳಿ ನಡೆಸಿದ್ದು ಇಸ್ಪೀಟ್ ಜುಗಾರಿ ಆಡುತ್ತಿದ್ದ 4 ಜನರನ್ನು ವಶಕ್ಕೆ ಪಡೆದಿದ್ದಾರೆ. ಬಾಳಿಕೆರೆಯ ಅನಿಲ್, ಪೂರ್ಣೇಶ್, ಯೋಗೀಶ್, ಕೆಂಚನೂರಿನ ರಘು ಎಂಬುವವರನ್ನು ಬಂಧಿಸಲಾಗಿದೆ. ಇಸ್ಪೀಟ್ ಜುಗಾರಿ ಆಟಕ್ಕೆ ಬಳಸಿದ್ದ ವಸ್ತುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಜಿಲ್ಲೆಯ ತುತ್ತತುದಿಯಲ್ಲಿ ಅತ್ಯಂತ ವಿಶಾಲ ವ್ಯಾಪ್ತಿ ಹೊಂದಿರುವ ಬೈಂದೂರು ಕ್ಷೇತ್ರದಲ್ಲಿ ಸಾಂಸ್ಕೃತಿಕ ವೇದಿಕೆ ಮೂಲಕ ಅಭಿವೃದ್ಧಿ ಪರಿಕಲ್ಪನೆಯ ಉದ್ದೇಶದಿಂದ ಮತ್ತು ಜಾಗತಿಕ ಮಟ್ಟದಲ್ಲಿ ಬೈಂದೂರು ಕ್ಚೇತ್ರದವರನ್ನು ಒಗ್ಗೂಡಿಸುವ ಚಿಂತನೆಯಲ್ಲಿ ಸಮೃದ್ಧ ಬೈಂದೂರು, ವಿವಿಧ ಸಂಘ ಸಂಸ್ಥೆ ಹಾಗೂ ತಾಲೂಕು ಆಡಳಿತ ಬೈಂದೂರು ಇದರ ಸಹಭಾಗಿತ್ವದಲ್ಲಿ ಎರಡನೇ ವರ್ಷದ ಸಾಂಸ್ಕ್ರತಿಕ ಸಂಭ್ರಮದ ಬೈಂದೂರು ಉತ್ಸವ ಜನವರಿ ಮೊದಲ ವಾರದಲ್ಲಿ ನಡೆಯಲಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು. ಅವರು ಉಪ್ಪುಂದ ಕಾರ್ಯಕರ್ತ ಕಚೇರಿಯಲ್ಲಿ ಗುರುವಾರ ಸಂಜೆ ನಡೆದ ಬೈಂದೂರು ಉತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ಷೇತ್ರದ ಪ್ರವಾಸೋದ್ಯಮದ ಅವಕಾಶಗಳನ್ನು ಪರಿಚಯಿಸುವುದು ತನ್ಮೂಲಕ ಜಾಗತಿಕ ಮಟ್ಟದ ಹೂಡಿಕೆದಾರರನ್ನು ಬೈಂದೂರಿಗೆ ಕರೆತರುವುದು ಹಾಗೂ ಕ್ಷೇತ್ರದ ಪ್ರತಿಭೆಗಳಿಗೆ ಅವಕಾಶ ನೀಡುವುದು. ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಪ್ರವಾಸೋದ್ಯಮ, ಧಾರ್ಮಿಕ ಕೇಂದ್ರ, ಶಿಕ್ಷಣ ಕ್ರಾಂತಿ, ನೆಲಮೂಲ ಆಚರಣೆ, ಸರಳ ಸರ್ಕಾರಿ ವ್ಯವಸ್ಥೆ ಮೂಲಭತ ಅಗತ್ಯತೆ ಇದರ ಆಶಯವಾಗಿದೆ ಎಂದರು. ಉದ್ಯೋಗ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬ್ರಹ್ಮಾವರ: ಕೇಂದ್ರ ಸರಕಾರದ ಸಬ್ಸಿಡಿ ಲೋನ್ ಮಾಡಿಕೊಡುವ ಆಮಿಷವೊಡ್ಡಿ ಕೋಟಿಗಟ್ಟಲೆ ಹಣ ವಂಚಿಸಿದ ಘಟನೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣದ ಪ್ರಮುಖ ಆರೋಪಿ ಕೌಶಲ್ಯ ಎಂಬಾಕೆಯನ್ನು ಬಂಧಿಸಲಾಗಿದೆ. ಘಟನೆಯ ವಿವರ:ಯಡ್ತಾಡಿ ಗ್ರಾಮದ ಸರಿತಾ ಲೂವಿಸ್ ಎಂಬುವವರಿಗೆ 2023ರ ನವೆಂಬರ್ನಲ್ಲಿ ಪರಿಚಯವಾದ ಕೌಶಲ್ಯ ಎಂಬಾಕೆ PMEGP ಅಡಿಯಲ್ಲಿ ಸಬ್ಸಡಿ ಲೋನ್ ಮಾಡಿಸಿಕೊಡುತ್ತೇನೆ ಎಂದು ಹೇಳಿ ಒತ್ತಾಯದಿಂದ ನಂಬಿಸಿ ಒಪ್ಪಿಸಿರುತ್ತಾರೆ. ನಂತರ ದಿನಗಳಲ್ಲಿ ಸಬ್ಸಡಿ ಲೋನ್ ಬಗ್ಗೆ ಹಲವಾರು ಕಾರಣಗಳನ್ನು ತಿಳಿಸಿ ಹಣ ಕಟ್ಟಬೇಕು ಎಂದು ಹೇಳಿದ್ದು, ಅದರಂತೆ ಅವರಿಂದ ಹಂತ ಹಂತವಾಗಿ ಕೌಶಲ್ಯಳ ಖಾತೆಗೆ ಹಾಗೂ ಆಕೆಯ ಗಂಡ ಸಂದೇಶ ಮತ್ತು ಪ್ರಕಾಶ, ಆಶೀಶ ಶೆಟ್ಟಿ, ರಾಜೇಂದ್ರ ಬೈಂದೂರು, ಗೀತ, ಹರಿಣಿ, ನವ್ಯ, ಕುಮಾರ್, ಮಾಲತಿ, ಪ್ರವೀಣ್, ಹರಿಪ್ರಸಾದ್, ನಾಗರಾಜ ಮತ್ತು ಭಾರತಿ ಸಿಂಗ್ ಎಂಬುವರಿಗೆ ನಗದು ರೂಪದಲ್ಲಿ ಒಟ್ಟು 80,72,000/- ರೂಪಾಯಿ ಹಣವನ್ನು ಸರಿತಾ ಅವರು ಕೊಟ್ಟಿದ್ದರು. ಅಲ್ಲದೇ ಸರಿತಾ ಅವರ ಸಂಬಂಧಿ ಅಂಜಲಿನ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಅಂಪಾರು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂಟರ್ಹೌಸ್ ಕಾಂಪಿಟೇಶನ್ ಅಂಗವಾಗಿ “ಅಗ್ನಿ ಇಲ್ಲದೆ ಆಹಾರ ತಯಾರಿ” ಸ್ಪರ್ಧೆಯನ್ನು ಆಯೋಜಿಸಲಾಯಿತು. ಈ ಸ್ಪರ್ಧೆಯಲ್ಲಿ ಚರಕ, ಆತ್ರೇಯ, ಶುಶ್ರುತ ಮತ್ತು ಅಗಸ್ತ್ಯ ತಂಡಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ, ವಿವಿಧ ಬಗೆಯ ಆರೋಗ್ಯಕರ ಆಹಾರ ಮತ್ತು ಜ್ಯೂಸ್ಗಳನ್ನು ತಯಾರಿಸಿದರು. ಕಾರ್ಯಕ್ರಮದಲ್ಲಿ ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ನ ಕಾರ್ಯದರ್ಶಿ ನವೀನ್ ಶೆಟ್ಟಿ ಮತ್ತು ಶಾಲಾ ಆಡಳಿತಾಧಿಕಾರಿ ಚೈತ್ರಾ ಯಡಿಯಾಳ ಅವರು ತೀರ್ಪುಗಾರರಾಗಿ ಉಪಸ್ಥಿತರಿದ್ದರು. ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಶಾಲೆಯಲ್ಲಿಯೇ ವಿವಿಧ ರೀತಿಯ ಪೌಷ್ಠಿಕ ಹಾಗೂ ಸೃಜನಾತ್ಮಕ ತಿನಿಸುಗಳನ್ನು ತಯಾರಿಸಿದರು. ತರಕಾರಿಗಳ ಸಲಾಡ್, ಕೋಸಂಬರಿ, ಡ್ರೈ ಫ್ರೂಟ್ಸ್ ಲಾಡು, ಅವಲಕ್ಕಿ, ಮುಂಡಕ್ಕಿ ಚುರುಮುರಿ, ಹಣ್ಣುಗಳ ಸಲಾಡ್, ಸ್ಯಾಂಡ್ವಿಚ್, ಸ್ಪ್ರೌಟ್ ಚಾಟ್, ಬಿಸ್ಕತ್ ಟಾಪಿಂಗ್ ಮೊದಲಾದ ರುಚಿಕರ ಆಹಾರಗಳು ಎಲ್ಲರ ಗಮನ ಸೆಳೆದವು. ವಿದ್ಯಾರ್ಥಿಗಳಲ್ಲಿ ತಂಡಭಾವನೆ, ಸೃಜನಶೀಲತೆ ಹಾಗೂ ಆರೋಗ್ಯಕರ ಆಹಾರದ ಅರಿವು ಬೆಳೆಸುವಲ್ಲಿ ಇಂತಹ ಚಟುವಟಿಕೆಗಳು ಮಹತ್ತರ ಪಾತ್ರ ವಹಿಸುತ್ತದೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಪಂಚವರ್ಣ ಕನ್ನಡ ರಾಜ್ಯೋತ್ಸವ ಅರ್ಥಪೂರ್ಣ ವ್ಯವಸ್ಥೆಗೆ ಕೈಗನ್ನಡಿಯಾಗಿದೆ. ಸಮಾಜದೊಂದಿಗೆ ಸಮಾಜಮುಖಿ ಕಾರ್ಯ ನಡೆಸುವ ಪಂಚವರ್ಣದ ಕಾರ್ಯವೈಕರಿಗೆ ಪ್ರಶಂಸನೀಯ ಎಂದು ಕುಂದಾಪುರ ವಿಧಾನಸಭಾ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು. ಅವರು ನವೆಂಬರ್ 16 ರಂದು ಕೋಟದ ಗಾಂಧಿ ಮೈದಾನದಲ್ಲಿನಡೆಯಲಿರು ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವ ಸದ್ಭಾವನಾ 2025ರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಕನ್ನಡ ನಾಡುನುಡಿಯ ಬಗ್ಗೆ ಸೇವೆ ಸಲ್ಲಿಸಿದ ದೊಡ್ಡ ದೊಡ್ಡ ಸಾಧಕರನ್ನು ಗುರುತಿಸುವ ಕಾಯಕ ಒಂದಿಷ್ಟು ಸೇವಾಕಾರ್ಯ. ಈ ಕಾರ್ಯಕ್ರಮದಲ್ಲಿ ಜೋಡಿಸಿಕೊಂಡ ಪಂಚವರ್ಣ ಸಂಘಟನೆಯ ಕಾರ್ಯ ಯಶಸ್ವಿಯಾಗಲಿ ಎಂದರು. ಈ ಸಂದರ್ಭದಲ್ಲಿ ಸಾಲಿಗ್ರಾಮ ಶ್ರೀಗುರುನರಸಿಂಹ ದೇಗುಲದ ಟ್ರಸ್ಟಿ ಕೆ. ಅನಂತಪದ್ಮನಾಭ ಐತಾಳ್, ಕೋಟ ವಿವೇಕ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಕೆ. ಜಗದೀಶ ನಾವಡ, ಪಂಚವರ್ಣದ ಗೌರವ ಸಲಹೆಗಾರರಾದ ಭಾರತಿ ವಿ. ಮಯ್ಯ, ಗೌರವಾಧ್ಯಕ್ಷ ಸತೀಶ್ ಹೆಚ್. ಕುಂದರ್, ಮಾಜಿ ತಾ.ಪಂ ಸದಸ್ಯೆ ಲಲಿತಾ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಖಾದ್ಯ ಮತ್ತು ಪಾನೀಯ ತಯಾರಿಕಾ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಈ ಸ್ಪರ್ಧೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ಸಂಸ್ಥೆಯ ಕಾರ್ಯದರ್ಶಿಯವರಾದ ಕೆ. ರಾಧಾಕೃಷ್ಣ ಶೆಣೈ ಅವರು ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯ ಕೃಷ್ಣ ಅಡಿಗ, ಪೂರ್ವ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಪ್ರಮೀಳಾ ಡಿಸೋಜಾ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ರೇಷ್ಮಾ ಡಿಸೋಜಾ ಅವರು ಈ ಸ್ಪರ್ಧೆಯನ್ನು ವೀಕ್ಷಿಸಿದರು.
