ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶ್ರೀ ಕಾಳಾವರ ವರದರಾಜ್ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಕುಂದಾಪುರ-ಕೋಟೇಶ್ವರದ ಇತಿಹಾಸ ವಿಭಾಗ ಹಾಗೂ ಐಕ್ಯೂಎಸಿ (IQAC) ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ “Introduction to Epigraphy” (ಶಾಸನಶಾಸ್ತ್ರ ಪರಿಚಯ) ಕುರಿತು ಒಂದು ದಿನದ ವಿಶೇಷ ಕಾರ್ಯಾಗಾರವು ಇತ್ತೀಚೆಗೆ ಯಶಸ್ವಿಯಾಗಿ ಜರುಗಿತು. ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುಷಾ ವಸ್ತುಸಂಗ್ರಹಾಲಯದ ಸಂಶೋಧಕರಾದ ಶ್ರುತೇಶ್ ಆಚಾರ್ಯ ಅವರು ಮಾತನಾಡಿ, ಶಾಸನಗಳನ್ನು ಓದುವ ವಿಧಾನ, ಅವುಗಳ ಐತಿಹಾಸಿಕ ಹಿನ್ನೆಲೆ ಹಾಗೂ ಸಂರಕ್ಷಣೆಯ ಅನಿವಾರ್ಯತೆಯ ಕುರಿತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಮಾಹಿತಿ ನೀಡಿದರು. ಕಾರ್ಯಾಗಾರದಲ್ಲಿ ಶಾಸನಗಳನ್ನು ಕೇವಲ ಕಲ್ಲಿನ ಮೇಲೆ ಕೆತ್ತಿದ ಅಕ್ಷರಗಳಾಗಿ ನೋಡದೆ, ಅವುಗಳಲ್ಲಿ ಅಡಕವಾಗಿರುವ ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಸಾಂಸ್ಕೃತಿಕ ಅಂಶಗಳನ್ನು ವಿಶ್ಲೇಷಿಸುವ ವಿಧಾನಗಳ ಕುರಿತು ವಿದ್ಯಾರ್ಥಿಗಳಿಗೆ ಸವಿವರವಾದ ಮಾರ್ಗದರ್ಶನ ನೀಡಲಾಯಿತು. ಶಾಸನಗಳ ಅಧ್ಯಯನವು ಇತಿಹಾಸ ಸಂಶೋಧನೆಗೆ ಹೇಗೆ ಭದ್ರವಾದ ಬುನಾದಿಯಾಗುತ್ತದೆ ಎಂಬುದನ್ನು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕ್ಲಬ್ ಆರಂಭವಾದ ಪ್ರಥಮ ವರ್ಷದಲ್ಲಿಯೇ ರೋಟರಿ ಕ್ಲಬ್ ಕೋಟ ಬ್ರಿಗೇಡ್‌ಗೆ ಹೊಸ ಕ್ಲಬ್‌ಗಳ ವಿಭಾಗದಲ್ಲಿ ಔಟ್ ಸ್ಟ್ಯಾಂಡಿಂಗ್ ನ್ಯೂ ಕ್ಲಬ್ ಜಿಲ್ಲಾ ಪ್ರಶಸ್ತಿ ಲಭಿಸಿದೆ. ಇತ್ತೀಚೆಗೆ ಹಾಸನದಲ್ಲಿ ನಡೆದ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೋಟರಿ ಕ್ಲಬ್ ಕೋಟ ಬ್ರಿಗೇಡ್ ಚಾರ್ಟರ್ ಅಧ್ಯಕ್ಷ ಪ್ರಥ್ವಿನ್ ಸಿ ಮೆಂಡನ್ ಹಾಗೂ ಈ ವರ್ಷದ ಅಧ್ಯಕ್ಷ ಪ್ರಕಾಶ್ ಪೂಜಾರಿ ಬನ್ನಾಡಿ ಅವರಿಗೆ ನಿಕಟ ಪೂರ್ವ ಜಿಲ್ಲಾ ಗವರ್ನರ್ ಪಾಲಾಕ್ಷ ಕೆ. ಅವರು ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭ ಜಿಲ್ಲಾ ಅವಾರ್ಡ್ ಕಮಿಟಿ ಸಭಾಪತಿ, ಪಿಡಿಜಿ ಸಿಎ ದೇವಾನಂದ್, ಜಿಲ್ಲಾ ಅವಾರ್ಡ್ ಕಮಿಟಿ ಉಪ ಸಭಾಪತಿ ಜೈಕಿಶನ್ ಶೆಟ್ಟಿ, ಪಿಡಿಜಿ ರಾಜಾರಾಮ್ ಭಟ್, ಕ್ಲಬ್ ಅಡ್ವೈಸರ್ ಚಂದ್ರಶೇಖರ್ ಮೆಂಡನ್, ಜೋನಲ್ ಲೆಫ್ಟಿನೆಂಟ್ ದಯಾನಂದ್ ಆಚಾರ್, ಮಾಜಿ ಅಧ್ಯಕ್ಷರಾದ ಸುರೇಶ್ ಆಚಾರ್, ವೆಂಕಟೇಶ್ ಆಚಾರ್, ಪ್ರಕಾಶ್ ಹಂದಟ್ಟು, ಕಾರ್ಯದರ್ಶಿ ಶಿವರಾಜ್ ಹಾಗೂ ಸದಸ್ಯರಾದ ರಾಘವೇಂದ್ರ ಆಚಾರ್, ಭಾಸ್ಕರ್ ಪೂಜಾರಿ ಮುಂತಾದವರು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ತಾಯಿ ತನ್ನ ಮಕ್ಕಳನ್ನು ಪ್ರೀತಿಯಿಂದ ಪೋಷಿಸಿ, ರಕ್ಷಿಸುವಂತೆ ಭೂಮಿತಾಯಿಯೂ ಸಮಸ್ತ ಜೀವಸಂಕುಲವನ್ನು ಪೋಷಿಸುತ್ತಾಳೆ. ತಾಯಿಯ ಮೇಲಿನ ಪ್ರೀತಿ ಮತ್ತು ಗೌರವವನ್ನು ಪರಿಸರ ಸಂರಕ್ಷಣೆಯೊಂದಿಗೆ ಬೆಸೆಯುವ ಕೇಂದ್ರ ಸರ್ಕಾರದ ‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನವು ಪ್ರಕೃತಿಯೊಂದಿಗೆ ಮಾನವನ ಭಾವನಾತ್ಮಕ ಸಂಬಂಧವನ್ನು ಗಟ್ಟಿಗೊಳಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಸದಾಕತ್ ನುಡಿದರು. ಅವರು ವಿದ್ಯಾಗಿರಿಯ ಪ್ಯಾಲೇಸ್ ಗ್ರೌಂಡ್ಸ್ನಲ್ಲಿ ಮಂಗಳವಾರ ಆಳ್ವಾಸ್ ಪದವಿ ಪೂರ್ವಕಾಲೇಜಿನ ಇಕೋ ಕ್ಲಬ್ ವತಿಯಿಂದ ಆಯೋಜಿಸಿದ್ದ ‘ಏಕ್ ಪೇಡ್ ಮಾ ಕೆ ನಾಮ್ 3.0’ ವೃಕ್ಷಾರೋಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಿಡ ನೆಡುವುದು ಕೇವಲ ಪರಿಸರ ಕಾರ್ಯಕ್ರಮವಲ್ಲ, ಪ್ರಕೃತಿಯ ಸಂರಕ್ಷಣೆಯನ್ನು ಪ್ರತಿಯೊಬ್ಬರ ಜವಾಬ್ದಾರಿಯನ್ನಾಗಿ ರೂಪಿಸುವ ಜನಾಂದೋಲನದ ಭಾಗವಾಗಿದೆ ಎಂದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2024ರ ವಿಶ್ವ ಪರಿಸರ ದಿನದಂದು ‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನಕ್ಕೆ ಚಾಲನೆ ನೀಡಿ, ಪ್ರತಿಯೊಬ್ಬರೂ ತಮ್ಮ ತಾಯಿಯ ಗೌರವಾರ್ಥವಾಗಿ ಒಂದು ಗಿಡ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ‘ಟೀಮ್ ಕುಂದಾಪುರಿಯನ್ಸ್’ ವತಿಯಿಂದ ಬೆಂಗಳೂರು ವಿಜಯನಗರದ ಬಿ.ಜಿ.ಎಸ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕುಂದಾಪ್ರ ಕನ್ನಡ ಉತ್ಸವದಲ್ಲಿ ಕಂಬಳ ಕ್ಷೇತ್ರದಲ್ಲಿ ಸೆನ್ಸಾರ್ ವಿಥ್ ಲೇಸರ್ ಫಿನಿಷ್ ತಂತ್ರಜ್ಞಾನವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ವೆಂಕಟೇಶ್ ಪೂಜಾರಿ ಬಡಾಮನೆ ಅವರಿಗೆ ಕುಂದಾಪ್ರ ಸನ್ಮಾನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೈಂದೂರು ತಾಲೂಕು ನಂದನವನ ಗ್ರಾಮದಲ್ಲಿ ಅನಂತ ಪೂಜಾರಿ ಹಾಗೂ ಸೀತು ಪೂಜಾರಿ ದಂಪತಿ ಪುತ್ರನಾಗಿ 1982 ಅಕ್ಟೋಬರ್ 1ರಂದು ಜನಿಸಿದ ಅವರು ತನ್ನ ಶಿಕ್ಷಣವನ್ನು ಉಪ್ಪುಂದ ಪದವಿ ಪೂರ್ವ ಕಾಲೇಜ್‌ನಲ್ಲಿ ಪೂರೈಸಿದರು. ನಂತರ ತನ್ನ ಮುಂದಿನ ಶಿಕ್ಷಣಕ್ಕಾಗಿ ಮಂಗಳೂರಿಗೆ ತೆರೆಳಿದ ಅವರು ಐಟಿಐ ಪೂರೈಸಿದ್ದಾರೆ ಹಾಗೂ ಸುಮಾರು 20 ವರ್ಷದಿಂದ ಇಲೆಕ್ಟ್ರಿಷಿಯನ್ ಆಗಿ ತನ್ನದೇ ಊರಲ್ಲಿ ಕೆಲಸದಲ್ಲಿ ತೊಡಗಿದ್ದಾರೆ. ಇವರಿಗೆ ಹಲವಾರು ವರ್ಷಗಳಿಂದ ಕಂಬಳದ ಬಗ್ಗೆ ತೀವ್ರ ಕುತೂಹಲ ಹಾಗೂ ಹಲವಾರು ಕಂಬಗಳಲ್ಲಿ ಕೋಣಗಳದ ಪೋಷಕರರಾಗಿ ಕಂಬಳ ಮಾಡಿದ್ದರು. ತನ್ನ ಹಿರಿಯ ಸಹೋದರ ರಾಜು ಪೂಜಾರಿ ಬಡಾಮನೆ ಇವರ ಮಾಲಿಕತ್ವದಲ್ಲಿ ತೆಂಕು ಹಾಗು ಬಡಗು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು, ಸಮೃದ್ಧ ಬೈಂದೂರು ಪರಿಕಲ್ಪನೆಯ 300 ಟ್ರೀಸ್ ಯೋಜನೆಯಡಿ, ಭೂಮಿ ಟ್ರಸ್ಟ್ ಸಹಕಾರದೊಂದಿಗೆ ಹಾಗೂ ಭೀಮ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಿಎಸ್ಆರ್ ನಿಧಿಯಿಂದ ಬೈಂದೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ₹6 ಲಕ್ಷ ವೆಚ್ಚದಲ್ಲಿ ಕಾಲೇಜಿನ ಬಯಲು ರಂಗಮಂದಿರಕ್ಕೆ ಇಂಟರ್‌ಲಾಕ್ ಅಳವಡಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಕಾಲೇಜಿನ ಮೂಲಸೌಕರ್ಯ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸುವ ಉದ್ದೇಶದಿಂದ ಈ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಪ್ರಸಕ್ತ ಸಾಲಿಗೆ ಉಡುಪಿ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕ-ಬಾಲಕಿಯರ ವಿದ್ಯಾರ್ಥಿನಿಲಯ ಪ್ರವೇಶಾತಿಗೆ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ -1, 2ಎ, 2ಬಿ, 3ಎ, 3ಬಿ, ಪ.ಜಾತಿ ಮತ್ತು ಪ.ವರ್ಗದ ವೃತ್ತಿಪರ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಂದ ವೆಬ್‌ಸೈಟ್ https://shp.karnataka.gov.in/bcwd ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 30. ಅರ್ಜಿ ಸಲ್ಲಿಸಲು ತೊಂದರೆಗಳಾದಲ್ಲಿ bcwdhelpline@gmail.com ಹಾಗೂ ಹೆಚ್ಚಿನ ವಿವರಗಳಿಗಾಗಿ https://bcwd.karnataka.gov.in ಅನ್ನು ಅಥವಾ ಜಿಲ್ಲಾ/ತಾಲೂಕು ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಉಡುಪಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು, ಸಮೃದ್ಧ ಬೈಂದೂರು ಪರಿಕಲ್ಪನೆಯ 300 ಟ್ರೀಸ್ ಯೋಜನೆಯಡಿ, ಭೂಮಿ ಟ್ರಸ್ಟ್ ಸಹಕಾರದೊಂದಿಗೆ ಹಾಗೂ ಭೀಮ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಿಎಸ್ಆರ್ ನಿಧಿಯಿಂದ ಮದ್ದೋಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಶಾಲೆಯಲ್ಲಿ ಸುಮಾರು ₹6 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವ ಬಾಲಕಿಯರ ಶೌಚಾಲಯದ ಕಾಮಗಾರಿಗೆ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಭೂಮಿಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಆರೋಗ್ಯ ಮತ್ತು ಶೈಕ್ಷಣಿಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಕಂಪ್ಯೂಟರ್ ಲ್ಯಾಬ್ ಅನ್ನು ಉದ್ಘಾಟಿಸಿದರು. ಶಾಲಾ ಮಕ್ಕಳಿಗೆ ಉತ್ತಮ ಮೂಲಸೌಕರ್ಯ ಕಲ್ಪಿಸುವ ಉದ್ದೇಶದಿಂದ ಕೈಗೊಳ್ಳಲಾಗುತ್ತಿರುವ ಈ ಯೋಜನೆಗಳು ವಿದ್ಯಾರ್ಥಿಗಳ ಭವಿಷ್ಯದ ಶಿಕ್ಷಣ ಮತ್ತು ಆರೋಗ್ಯಕರ ವಾತಾವರಣ ನಿರ್ಮಾಣಕ್ಕೆ ಸಹಕಾರಿಯಾಗಲಿವೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕು ಶಿರೂರು ಗ್ರಾಮದ ಬುಕಾರಿ ಕಾಲೋನಿ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಬೀಬಿ ರಿಹಾನ (33) ಎಂಬ ಮಹಿಳೆಯು ಸೆಪ್ಟೆಂಬರ್ 9ರಂದು ಕೆಲಸದ ನಿಮಿತ್ತ 2 ದಿನಗಳವರೆಗೆ ಹೊರಗೆ ಹೋಗುತ್ತೇನೆಂದು ಹೇಳಿ ಹೋದವರು ಇದುವರೆಗೂ ಮನೆಗೆ ವಾಪಸು ಬಾರದೆ ನಾಪತ್ತೆಯಾಗಿರುತ್ತಾರೆ. 5 ಅಡಿ 4 ಇಂಚು ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ದಪ್ಪನೆಯ ಶರೀರ ಹೊಂದಿದ್ದು, ಕನ್ನಡ, ಹಿಂದಿ ಹಾಗೂ ಉರ್ದು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬೈಂದೂರು ಪೊಲೀಸ್ ಠಾಣೆ ದೂ.ಸಂಖ್ಯೆ: 08254-251033, 9480805459, ಬೈಂದೂರು ವೃತ್ತ ನಿರೀಕ್ಷಕರ ಕಛೇರಿ ದೂ.ಸಂಖ್ಯೆ: 08254-251031, 9480805434 ಹಾಗೂ ಕಂಟ್ರೋಲ್ ರೂಂ ದೂ.ಸಂಖ್ಯೆ: 100 (0820) 2526444 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಬೈಂದೂರು ಪೊಲೀಸ್ ಠಾಣಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಬ್ರಹ್ಮಶ್ರೀ ನಾರಾಯಣ ಗುರುಗಳು ಕೊಟ್ಟಿರುವ ಸಂದೇಶ ಜನಸಾಮಾನ್ಯರ ಬದುಕಿನಲ್ಲಿ ಹೊಸಶಕ್ತಿಯನ್ನು ನೀಡಿದ್ದು ಈ ನಿಟ್ಟಿನಲ್ಲಿ ನಾರಾಯಣ ಗುರುಗಳ 172ನೇ ಜನ್ಮ ದಿನದ ಆಂಗವಾಗಿ ಸಾಸ್ತಾನದಿಂದ ಅರಂಭವಾದ ಈ ಪರಿವರ್ತನಾ ಜಾಥಾ ಎಲ್ಲಾ ಪ್ರದೇಶದಲ್ಲೂ ಮೇಳೈಸಲಿ ಅಲ್ಲದೆ ನಾರಾಯಣ ಗುರುಗಳ ಸಂದೇಶವನ್ನು ಸಮಾಜಕ್ಕೆ ಬಿತ್ತರಿಸಲು ಶಕ್ತಿಯನ್ನು ಪಡೆಯಲಿ ಇದರಿಂದ ಒಂದು ಸುಂದರ ಸಮಾಜ ನಿರ್ಮಾಣವಾಗಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಭಾನುವಾರ ಸಾಸ್ತಾನ ಪೇಟೆಯಲ್ಲಿ ಶ್ರೀ ಬ್ರಹ್ಮಬೈದರ್ಕಳ ಬಿಲ್ಲವ ಸೇವಾ ಸಂಘ ಸಾಸ್ತಾನ, ಶ್ರೀ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಕೋಟ ಇವರ ಸಹಭಾಗಿತ್ವದಲ್ಲಿ ಶ್ರೀ ನಾರಾಯಣಗುರುಗಳ 172ನೇ ಜನ್ಮ ದಿನಾಚರಣೆಯ ಅಂಗವಾಗಿ ಶ್ರೀ ನಾರಾಯಣಗುರು ಪರಿವರ್ತನಾ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ ಸಾಹಿತಿ ನರೇಂದ್ರ ಕುಮಾರ್ ಕೋಟ, ಸಮುದಾಯದ ಪ್ರಮುಖರಾದ ವಿಠ್ಠಲ ಪೂಜಾರಿ ಪಾಂಡೇಶ್ವರ, ಐರೋಡಿ ವಿಠ್ಠಲ ಪೂಜಾರಿ, ಎಂಸಿ.ಚಂದ್ರಶೇಖರ್, ಸದಾನಂದ ಪೂಜಾರಿ, ಪ್ರಸಾದ್ ಬಿಲ್ಲವ, ರತ್ನಾ ಜೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಸುಜ್ಞಾನ ಪದವಿ ಪೂರ್ವ ಕಾಲೇಜು ಕುಂದಾಪುರ ಇವರ ಆಶ್ರಯದಲ್ಲಿ ನಡೆದ ಕುಂದಾಪುರ ತಾಲೂಕು ಮಟ್ಟದ ಬಾಲಕ – ಬಾಲಕಿಯರ ಥ್ರೋಬಾಲ್ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಪಿಯು ಕಾಲೇಜಿನ ಬಾಲಕ – ಬಾಲಕಿಯರ ಉಭಯ ತಂಡಗಳು ದಿಗ್ವಿಜಯ ಸಾಧಿಸಿ ಚಾಂಪಿಯನ್ ಪಟ್ಟವನ್ನು ಮೂಡಿಗೇರಿಕೊಂಡು ಜಿಲ್ಲಾ ಮಟ್ಟದ ಪಂದ್ಯಾಟಕ್ಕೆ ಅರ್ಹತೆ ಪಡೆದಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಗಾಣಿಗ, ಉಪ ಪ್ರಾಂಶುಪಾಲರಾದ ಸುಜೇಯ್ ಕೋಟೆಗಾರ್, ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರಾಘವೇಂದ್ರ ಗಾಣಿಗ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಕೃಷ್ಣ ಉಪಸ್ಥಿತರಿದ್ದಾರೆ. ಕ್ರೀಡಾಪಟುಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ – ಬೋಧಕೇತರ ಸಿಬ್ಬಂದಿ ಶ್ಲಾಘಿಸಿ, ಮುಂದಿನ ಪಂದ್ಯಗಳಿಗೆ ಶುಭ ಹಾರೈಸಿದ್ದಾರೆ.
