Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬ್ರಹ್ಮಾವರ: ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ ಸೆಟ್) ಸಂಸ್ಥೆ ಬ್ರಹ್ಮಾವರ ಇವರ ಆಶ್ರಯದಲ್ಲಿ ಕಂಪ್ಯೂಟರೈಸ್ಡ್ ಅಕೌಂಟಿಂಗ್ ತರಬೇತಿಯ ಉದ್ಘಾಟನಾ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಬ್ರಹ್ಮಾವರ ಎಸ್ ಎಂ ಎಸ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಭರತ್ ರಾಜ್ ಅವರು, ರುಡ್ ಸೆಟ್ ಸಂಸ್ಥೆಯ ಅಭೂತ ಪೂರ್ವ ಕಾರ್ಯ ಚಟುವಟಿಕೆಯನ್ನು ಶ್ಲಾಘಿಸಿಕೊಂಡು, ಸಂಸ್ಥೆಯ ಮುಖಾಂತರ ಅವರು ಪಡೆದ ಅನುಭವವನ್ನು ಕೂಡ ಶಿಬಿರಾರ್ಥಿಗಳೊಂದಿಗೆ ಹಂಚಿಕೊಂಡರು. ಹಾಗೆಯೇ ಸ್ವಂತ ದುಡಿಮೆಯ ಮಹತ್ವವನ್ನು, ಸ್ವಾವಲಂಬಿ ಬದುಕಿನ ಮೌಲ್ಯವನ್ನು, ಅದರ ಅಗತ್ಯತೆಯನ್ನು ತನ್ನ ಸ್ವಂತ  ಜೀವನದ ಅನುಭವವನ್ನು ಹಂಚಿಕೊಳ್ಳುವ ಮುಖಾಂತರ ಶಿಬಿರಾರ್ಥಿಗಳನ್ನು ಹುರಿದುಂಬಿಸಿದರು. ಕಂಪ್ಯೂಟರ್ ಕೌಶಲ್ಯವನ್ನು ಕರಗತ ಮಾಡಿಕೊಳ್ಳುವುದು ಈಗಿನ ಹಾಗೂ ಮುಂದಿನ ವಿದ್ಯಮಾನದಲ್ಲಿ ಬಹು ಅಗತ್ಯವಾಗಿ ಅರಿತುಕೊಳ್ಳಬೇಕಾಗಿರುವಂತಹ ವಿಷಯ. ಹಾಗಾಗಿ ಛಲದಿಂದ ಹಿಡಿದ ಕೆಲಸವನ್ನು ಬಿಡದೆ, ಮುಂದುವರಿಯಿರಿ. ಸಮಾಜದಲ್ಲಿ ಯಶಸ್ವಿ ವ್ಯಕ್ತಿಗಳಾಗಿ ಎಂದು ಹೇಳಿ  ಶಿಬಿರಾರ್ಥಿಗಳಿಗೆ  ಶುಭ ಹಾರೈಸಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಡಾ. ಬೊಮ್ಮಯ್ಯ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಆಧುನಿಕ ತಂತ್ರಜ್ಞಾನ ಯುಗದಲ್ಲಿ ದಿನಕ್ಕೆ ಹೊಸ ಹೊಸ ಆವಿಷ್ಕಾರಗಳಾಗುತ್ತಿದೆ.  ಕೆಲವು ಹೊಸ ತಾಂತ್ರಿಕ ಜ್ಞಾನವು ಮನುಷ್ಯನ ಬದುಕಿಗೆ ಮಾರಕವಾಗುತ್ತಿವೆ ಎಂದು ಉಡುಪಿ ಮಹಾತ್ಮ  ಗಾಂಧಿ ಮೆಮೋರಿಯಲ್ ಸಂಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ ನಾಯಕ್ ಹೇಳಿದರು. ಅವರು ಶನಿವಾರ ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಇಂದಿನ ದಿನಗಳಲ್ಲಿ ನಾವು ಉಪಯೋಗಿಸುವ ಹೊಸ ತಂತ್ರಜ್ಞಾನವನ್ನು ಒಳ್ಳೆಯ ಉದ್ದೇಶಕ್ಕೆ ಬಳಸಬೇಕು. ಆದರೆ ಅದನ್ನು ವಿರುದ್ಧ ನೆಲೆಯಲ್ಲಿ ಉಪಯೋಗಿಸಿದರೆ ವೈಯಕ್ತಿಕ ಮತ್ತು ಸಾಮಾಜಿಕ ದೃಷ್ಟಿಯಲ್ಲಿಯೂ ಮಾರಕವಾದ ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಪ್ರಸ್ತುತದ ಯುಗದಲ್ಲಿ ನಮ್ಮ ಯುವಜನತೆಗೆ ಜೀವನ ಮೌಲ್ಯಗಳು ಅಗತ್ಯವಾಗಿ ಬೇಕಾಗಿದೆ. ಅದಕ್ಕೆ ಪೂರಕವಾಗಿ ಸತತ ಪ್ರಯತ್ನ, ಶಿಸ್ತು ಬದ್ಧತೆ ಮತ್ತು ಸಮಗ್ರತೆ ಈ ಮೂರು ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಅತ್ಯುತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಯಶಸ್ವೀ ಸಾಧನೆಯ ಮೂಲಕ ಸಮಾಜಕ್ಕೆ ನಿಮ್ಮ ಅತ್ಯುತ್ತಮ ಕೊಡುಗೆಯನ್ನು ನೀಡಬೇಕು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಪ್ರತಿಷ್ಠಿತ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ದ್ವಿತೀಯ ಮತ್ತು ತೃತೀಯ ವರ್ಷದ ಬಿ.ಕಾಂ. ಸಿ.ಎ., ಸಿ.ಎಸ್. ಹಾಗೂ ಸಿ.ಎಮ್.ಎ ವೃತ್ತಿಪರ ಕೋರ್ಸ್‌ನ ವಿಭಾಗದ ವಿದ್ಯಾರ್ಥಿಗಳಿಗೆ ಬ್ರಹ್ಮಾವರದ ಹ್ಯಾಂಗ್ಯೋ ಐಸ್‌ಕ್ರೀಮ್ ಪ್ರೈವೇಟ್ ಲಿಮಿಟೆಡ್ ಮತ್ತು ಉದಯವಾಣಿ ದಿನಪತ್ರಿಕೆ ಮಣಿಪಾಲಕ್ಕೆ ಕೈಗಾರಿಕಾ ಭೇಟಿ ಮತ್ತು ಕಲಿಕಾ ಪ್ರವಾಸ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಹ್ಯಾಂಗ್ಯೋ ಐಸ್‌ಕ್ರೀಮ್ ಬ್ರಹ್ಮಾವರದ ಮ್ಯಾನೇಜರ್‌ರಾದ ಸುರೇಶ್ ಪೈ ವಿದ್ಯಾರ್ಥಿಗಳಿಗೆ ಐಸ್‌ಕ್ರೀಮ್ ತಯಾರಿಕೆ ಮತ್ತು ಅದರ ಸಾಗಾಣಿಕೆ ಕುರಿತು ವಿಸ್ತಾರವಾದ ಮಾಹಿತಿ ನೀಡಿದರು. ಹಾಗೆಯೇ ಮಣಿಪಾಲದ ಉದಯವಾಣಿ ದಿನಪತ್ರಿಕೆ ತಯಾರಿಯ ಪ್ರೆಸ್‌ಗೆ ಭೇಟಿ ನೀಡಿದ್ದು, ರೆಸಿಡೆಂಟ್ ಎಡಿಟರ್ ಕೃಷ್ಣ ಭಟ್ ಮತ್ತು ಸೀನಿಯರ್ ಪ್ರೊಡಕ್ಷನ್ ಮ್ಯಾನೇಜರ್ ನಾಗರಾಜ್ ಭಂಡಾರಿ ಅವರು ದಿನಪತ್ರಿಕೆಗಳ ಮುದ್ರಣ, ದತ್ತಾಂಶಗಳ ವ್ಯವಸ್ಥಿತ ಸಂಗ್ರಹಣೆ ಮತ್ತು ಅವುಗಳ ಸಾಗಾಣಿಕೆಯ ಬಗ್ಗೆ ವಿಸ್ತಾರವಾದ ಮಾಹಿತಿ ನೀಡಿದರು. ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಸತೀಶ್ ಕಾಂಚನ್, ಶ್ವೇತಾ ಭಂಡಾರಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಸಮುದ್ಯತ ಸಂಸ್ಥೆ ನೇತೃತ್ವದಲ್ಲಿ ತೆಕ್ಕಟ್ಟೆ ಪ್ರೆಸಿಡೆಂಟ್ ಕನ್ವೆನ್ಷನ್ ಸೆಂಟರ್‌ನಲ್ಲಿ ಜರುಗಿದ ಡಾ. ಸಿ. ಆಶ್ವಥ್ ಸ್ವರ ಸಂಯೋಜನೆಯ ಮಧುರ ಪ್ರಸ್ತುತಿ ಸತ್ಯಾವತಾರ ಕಾರ್ಯಕ್ರಮಕ್ಕೆ ಪ್ರೇರಕ್ಷರಿಂದ ಅದ್ಭುತ ಪ್ರಶಂಸನೆ ವ್ಯಕ್ತವಾಯಿತು. ಡಾ. ಸಿ. ಅಶ್ವಥ್ ಅವರ ಸ್ವರ ಸಂಯೋಜಿಸಿದ ಗೀತೆಗಳ ಮಧುರ ಪ್ರಸ್ತುತಿಯ ಮೂಲಕ ಖ್ಯಾತ ಗಾಯಕ ಬೆರಗುಗೊರಳಿನ ಕಲಾವಿದ ರಾಮಚಂದ್ರ ಹಡಪದ ಅವರ ಸತ್ಯಾವತಾರ ಕಾರ್ಯಕ್ರಮವು ಸುಂದರವಾದ ಬೆಳಕಿನ ಚಿತ್ತಾರದ ವೇದಿಕೆಯಲ್ಲಿ ಅನಾವರಣಗೊಂಡಿತ್ತು. ಖ್ಯಾತ ಗಾಯಕಿ ಎಂ.ಡಿ. ಪಲ್ಲವಿ ಹಾಗೂ ಕುಂದಾಪುರದ ಮೇಘನಾ ಇವರ ಗಾಯನದ ಝಲಕ್ ನೋಡುಗ ಪ್ರೇಕ್ಷಕರ ಮನಸೆಳೆಯಿತು.  ಕೊರೆಯುವ ಚಳಿಯಲ್ಲಿಯೂ ಅಪ್ಪಿ ಹಿಡಿದ ಸತ್ಯಾವತಾರ:ರಾಮಚಂದ್ರ ಹಡಪದ, ಎಂ.ಡಿ.ಪಲ್ಲವಿ ಹಾಗೂ ಮೇಘನಾ ಇವರ ಕಂಠಸಿರಿಯಲ್ಲಿ ಮೊಳಗಿದ ಅಶ್ವಥ್ ಅವರ ಗೀತೆಗಳು ನೋಡುಗ ಪ್ರೇಕ್ಷಕರನ್ನು ಕೊರೆಯುವ ಚಳಿಯಲ್ಲಿಯೂ ಕಾರ್ಯಕ್ರಮದ ಆರಂಭದಿಂದ ಅಂತ್ಯದ ತನಕವು ಸತ್ಯಾವತಾರದ ಒಂದೊಂದು ಗಾಯನವು ಅಪ್ಪಿ ಹಿಡಿದಿಟ್ಟುಕೊಂಡು ಕೇಳುಗರನ್ನು ಸಂಗೀತ ಲೋಕದ ಸ್ವರ್ಗಕ್ಕೆ ಕರೆದೊದು ಕಂಚಿನ ಕಂಠದ ಮಾಧುರ್ಯದಿಂದ ಹೃದಯಗಳನ್ನು ಮುಟ್ಟುವಂತಾಯಿತು.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಥಮ ವರ್ಷದ ಪೂರ್ಣಾವಧಿ ಪಿ.ಹೆಚ್.ಡಿ ಅಧ್ಯಯನ ಪ್ರಾರಂಭಿಸಿರುವ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಹಾಗೂ 3ಬಿ ಗೆ ಸೇರಿದ ಅರ್ಹ ಅಭ್ಯರ್ಥಿಗಳಿಂದ ಮಾಸಿಕ ವ್ಯಾಸಾಂಗ ವೇತನ / ಫೆಲೋಶಿಪ್‌ಗಾಗಿ ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯದ ಶಾಸನಬದ್ಧ ವಿಶ್ವವಿದ್ಯಾಲಯಗಳಲ್ಲಿ /ಅಧೀನಕ್ಕೆ ಒಳಫಡುವ ಸಂಸ್ಥೆಗಳಲ್ಲಿ ಪ್ರಥಮ ವರ್ಷದ ಪಿ.ಹೆಚ್.ಡಿ ಅಧ್ಯಯನ ಮಾಡುತ್ತಿರುವ ಹೊಸ ವಿದ್ಯಾರ್ಥಿಗಳು ಮಾತ್ರ ಆಫ್‌ಲೈನ್ ಮೂಲಕ 2026ರ ಜನವರಿ 9ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್‌ಸೈಟ್ https://bcwd.karnataka.gov.in ಅಥವಾ ದೂ.ಸಂಖ್ಯೆ: 8050770004 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇಲ್ಲಿನ ತೆಕ್ಕಟ್ಟೆ ಗ್ರಾಮಪಂಚಾಯತ್‌ನ ಕೆದೂರಿನಿಂದ ಕೋಟ, ಸಾಲಿಗ್ರಾಮದ ಚಿತ್ರಪಾಡಿಯ ಸೂಲ್ಲಡ್ಪು ಹೊಳೆಯವರೆಗೆ ಹೂಳೆತ್ತುವ ಕಾರ್ಯ ಮರಿಚಿಕೆಯಾದ ಹಿನ್ನಲ್ಲೆಯಲ್ಲಿ ಇಲ್ಲಿನ ಕೋಟದ ರೈತಧ್ವನಿ ಸಂಘಟನೆ ದಿಢೀರ್ ಸಭೆ ಸೇರಿತು. ಕಳೆದ ಹಲವಾರು ವರ್ಷಗಳಿಂದ ಪ್ರತಿಭಟನೆಯ ಮೂಲಕ ಗಮನ ಸೆಳೆದ ಇಲ್ಲಿನ ರೈತ ಸಂಘಟನೆಗಳು ಹೊಳೆ ಹೂಳೆತ್ತುವ ಕುರಿತು ಕಳೆದ ವರ್ಷ ಬೆಳಗಾವಿಯ ಅಧಿವೇಶನದ ಸಂದರ್ಭದಲ್ಲಿ ಉಪಮುಖ್ಯಮಂತ್ರಿಳನ್ನು ಭೇಟಿ ಮಾಡಿ ಸುಮಾರು 4.50 ಕೋಟಿ ರೂಗಳ ಅನುದಾನದ ಭರವಸೆ ಪಡೆದು ಹಿಂತಿರುಗಿತು. ಆದರೆ ನಂತರ ದಿನಗಳಲ್ಲಿ ಈ ಬಗ್ಗೆ ಸಂಬಂಧಿಸಿದಂತೆ ಸಣ್ಣನೀರಾವರಿ ಇಲಾಖೆ ನಿಲನಕ್ಷೆ ಸಿದ್ಧಪಡಿಸಿ ಸರ್ವೆಕಾರ್ಯ ಪೂರ್ಣಗೊಳಿಸಿತು ಆದರೆ ಇನ್ನೇನು ಕೆಲವೇ ದಿನಗಳಲ್ಲಿ ಹೊಳೆ ಹೂಳೆತ್ತುವ ಆಶಾಭಾವನೆ ರೈತಸಂಘಟನೆಯಲ್ಲಿ ಮೊಳಗಿತ್ತಾದರೂ ಸಂಬಂಧಿಸಿದ ಇಲಾಖೆ ಅದನ್ನು ತೆರೆಯ ಮರೆಗೆ ಸರಿಸಿ ಕೈಕಟ್ಟಿ ಕೂರಿತು. ಆದರೆ ಇದೀಗ ಮತ್ತೆ ರೈತ ಸಂಘಟನೆಗಳು ದೊಡ್ಡ ಮಟ್ಟದ ಪ್ರತಿಭಟನೆಗೆ ಸಜ್ಜಾಗಿದ್ದು ಈ ಬಗ್ಗೆ ಗುರುವಾರ ಕೋಟದಲ್ಲಿ ಪುನಃ ಸಭೆ ನಡೆಸಿ ಕೆಲ ನಿರ್ಧಾರಗಳನ್ನು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಆಳ್ವಾಸ್ ಕಾನೂನು ಕಾಲೇಜು ಹಾಗೂ ಆಳ್ವಾಸ್ ಮಾನವಿಕ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಕ್ಯಾಂಪಸ್ ಪಾರ್ಲಿಮೆಂಟ್- 2025 (ಸಂಸತ್‌ಶೈಲಿಯಲ್ಲಿ ಚರ್ಚಿಸುವ ಪ್ರಜಾತಾಂತ್ರಿಕ ವ್ಯವಸ್ಥೆಯ ಚಟುವಟಿಕೆ) ಕಾರ್ಯಕ್ರಮ ಆಳ್ವಾಸ್ ಆವರಣದ ವಿಎಸ್ ಆಚಾರ್ಯ ಸಭಾಂಗಣದಲ್ಲಿ ನಡೆಯಿತು. ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ. ಜಿ. ಆರ್. ಸಿಂಧಿಯಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಕ್ಕು ಮತ್ತು ಕರ್ತವ್ಯಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಹಕ್ಕುಗಳನ್ನು ಅನುಭವಿಸಲು ಅವಕಾಶ ದೊರಕುವಾಗ, ಸಮಾಜದ ಹಿತಕ್ಕಾಗಿ ಕರ್ತವ್ಯ ನಿರ್ವಹಿಸುವ ಹೊಣೆಗಾರಿಕೆಯೂ ನಮ್ಮ ಮೇಲಿದೆ. ಹಕ್ಕುಗಳನ್ನು ಮಾತ್ರ ಒತ್ತಾಯಿಸಿ, ಕರ್ತವ್ಯಗಳನ್ನು ನಿರ್ಲಕ್ಷಿಸಿದರೆ ಪ್ರಜಾಪ್ರಭುತ್ವಕ್ಕೆ ಧಕ್ಕೆ ಉಂಟಾಗುತ್ತದೆ. ಆದ್ದರಿಂದಲೇ ಹಕ್ಕು ಮತ್ತು ಕರ್ತವ್ಯಗಳು ಜೊತೆ ಜೊತೆಗೆ ಸಾಗಬೇಕು. ಹಕ್ಕಿನಿಂದಾಗಿ ನಾವು ಏನು ಪಡೆಯುತ್ತೇವೋ, ಕರ್ತವ್ಯಗಳಿಂದಾಗಿ ದೇಶ ಏನು ಪಡೆಯುತ್ತದೆ ಎಂಬ ಅರಿವು ಮೂಡಿದಾಗ ನಾವು ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳುತ್ತೇವೆ ಎಂದರು. ನಮ್ಮ ದೇಶ ಅಭಿವೃದ್ಧಿಯ ಪಥದಲ್ಲೇ ಸಾಗುತ್ತಿದೆ. ಈ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಪಂಚಾಯತ್ ಅನುದಾನದಿಂದ ನೀಡಲಾಗುವ ಕ್ರೀಡಾ ಪ್ರೋತ್ಸಾಹಧನಕ್ಕೆ 2025ನೇ ಸಾಲಿನ ಕ್ಯಾಲೆಂಡರ್ ವರ್ಷದಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದ ಹಾಗೂ ರಾಷ್ಟ್ರಮಟ್ಟದ ಕ್ರೀಡಾಕೂಟದ ವೈಯಕ್ತಿಕ / ಗುಂಪು ಸ್ಪರ್ಧೆಯಲ್ಲಿ ಭಾಗವಹಿಸಿದ/ ಪದಕ ಪಡೆದ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 2026ರ ಜನವರಿ 9 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ, ಅಜ್ಜರಕಾಡು, ಉಡುಪಿ ದೂ.ಸಂಖ್ಯೆ: 0820-2521324, ಮೊ.ನಂ: 9845432303 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಕಚೇರಿ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಸ್ನೇಹಕೂಟ ಬೆಳೆದ ರೀತಿ ಅದರ ಸಾಮಾಜಿಕ ಕಾರ್ಯದಶ ದಿಕ್ಕಿನಲ್ಲೂ ಪಸರಿಸಿದೆ ಎಂದು ಮಣೂರು ಗೀತಾನಂದ ಟ್ರಸ್ಟ್ ಪ್ರವರ್ತಕ ಆನಂದ್ ಸಿ. ಕುಂದರ್ ಹೇಳಿದರು. ಅವರು ಗುರುವಾರ ಇಲ್ಲಿನ ಕೋಟದ ಮಣೂರು ಶ್ರೀ ರಾಮಪ್ರಸಾದ ಶಾಲಾ ವಠಾರದಲ್ಲಿ ಸ್ನೇಹಕೂಟ ಮಣೂರು ಇದರ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಕೋಟದ ಪಂಚವರ್ಣ ಸಂಘಟನೆಯ ಸಹಯೋಗದೊಂದಿಗೆ ದಶಮ ಡಿಂಡಿಮದ ಸವಿ ಅವ್ಯಕ್ತ ಪ್ರತಿಭೆಗಳ ಸಂಗಮ ಎಂಬ ಶೀರ್ಷಿಕೆಯಡಿ ಊರ್ಮನಿ ಹಬ್ಬ ಮಣೂರು ಮಹಿಳಾ ಗ್ರಾಮೀಣ ಜಾತ್ರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಶಕ್ತರಿಗೆ, ವಿದ್ಯಾರ್ಥಿಗಳ ಉನ್ನತಿ, ಗ್ರಾಮೀಣ ಹಳ್ಳಿ ಭಾಗದ ಮಹಿಳೆಯನ್ನು ಮಂಚೂಣಿಗೆ ತಂದು ನಮ್ಮ ಸಂಸ್ಕೃತಿಯನ್ನು ಪ್ರತಿ ಮನೆಯಲ್ಲಿ ಜಾಗೃತಗೊಳಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ ಇಂತಹ ಸಂಘಟನೆಗಳು ಇನ್ನಷ್ಟು ಸಮಾಜಮುಖಿಕಾರ್ಯ ಮಾಡಲಿ ಎಂದು ಆಶಿಸಿ ಶುಭಹಾರೈಸಿದರು. ಕಾರ್ಯಕ್ರಮವನ್ನು ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್. ಕುಂದರ್ ಉದ್ಘಾಟಿಸಿದರು. ಸ್ನೇಹಕೂಟದ ಪ್ರಧಾನ ಸಂಚಾಲಕಿ ಭಾರತಿ ವಿ. ಮಯ್ಯ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ದೇಶ ಕಾಯುವ ಯೋಧರನ್ನು ಗೌರವಿಸುವ ಮನೋಭಾವನೆ ಸರ್ವಶ್ರೇಷ್ಠ ಅದೇ ರೀತಿ ಗಡಿಯಲ್ಲಿ ದೇಶಕ್ಕಾಗಿ ಬಲಿದಾನಗೈಯುವ ಯೋಧರ ಸ್ಥಿತಿಗತಿ ಅಷ್ಟೆ ಕ್ಲಿಷ್ಟಕರವಾಗಿರುತ್ತದೆ. ಇದಕ್ಕೆ ಅನೂಪ್ ಪೂಜಾರಿ ಸಹಿತ ಹಲವು ಯೋಧರ ಕಥೆ ವ್ಯಥೆಯೇ ಸಾಕ್ಷಿ ಎಂದು ಜಯ ಕರ್ನಾಟಕ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಪೂಜಾರಿ ಸಾಲಿಗ್ರಾಮ ಹೇಳಿದರು. ಅವರು ಬುಧವಾರ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ವತಿಯಿಂದ ಕಳೆದವರ್ಷ ಅಮರರಾದ ಯೋಧ ಅನೂಪ್ ಪೂಜಾರಿ ಬೀಜಾಡಿ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಗೌರವ ನಮನ ಸಲ್ಲಿಸಿ ಮಾತನಾಡಿದರು. ಸಮಾಜದ ಬಗ್ಗೆ ಸದಾ ತುಡಿತ ಹೊಂದಿದ ಪಂಚವರ್ಣ ಸಂಘಟನೆ ಯೋಧರ ಪುಣ್ಯ ಸ್ಮರಣೆಯನ್ನು ಮನದಲ್ಲಿ ಸದಾ ಕಾಯ್ದು ಅವರ ಕುರಿತು ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು. ನಿವೃತ್ತ ಯೋಧರಾದ ಕೋಟ ರಾಮಚಂದ್ರ ಗಾಣಿಗ ಕೋಟೇಶ್ವರ ಅವರು ಅನೂಪ್ ಪೂಜಾರಿ ಅವರ ಭಾವಚಿತ್ರಕ್ಕೆ ಪುಷ್ಭನಮನ ಸಲ್ಲಿಸಿ ದೇಶದ…

Read More