Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲೆಯ ವತಿಯಿಂದ ಸಾಧಕರಿಗೆ ಸನ್ಮಾನ ಹಾಗೂ ಕರ್ನಾಟಕ ಸರಕಾರದಿಂದ ನಾಮನಿರ್ದೆಶನಗೊಂಡ ಒಕ್ಕೂಟದ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಮಂಗಳವಾರ ಉಡುಪಿ ನೇಜಾರಿನ ವೈಟ್ ಕಾಟೇಜ್ ನಲ್ಲಿ ಆಯೋಜಿಸಲಾಯಿತು. ಜಿಲ್ಲಾ ಸಮಿತಿಯ ಮಾಸಿಕ ಸಭೆಯಲ್ಲಿ ಸಮುದಾಯದ ಸಾಧಕರಾದ ಸಾಹಿತಿ, ಬರಹಗಾರರಾದ ಇರ್ಷಾದ್ ಮೂಡಬಿದರೆ, 2024ರ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಮುಸ್ಥಾಕ್ ಹೆನ್ನಾಬೈಲ್, ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಹಮ್ಜತ್ ಅಬ್ದುಲ್ ರಹಿಮಾನ್, ಸಮಿತಿ ಸದಸ್ಯರಾದ ಮನ್ಸೂರ್ ಇಬ್ರಾಹಿಂ ಮರವಂತೆ, ಹಮೀದ್ ಯುಸೂಫ್ ಮೂಳೂರ್, ತಾಲೂಕು ಮಟ್ಟದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಝಹೀರ್ ಅಹಮೆದ್ ನಾಖುದಾ, ಕುಂದಾಪುರದ ಮುಕ್ರಿ ಮೊಹಮ್ಮದ್ ಅಲ್ತಾಫ್, ಬೈಂದೂರಿನ ಉಸ್ತಾದ್ ಸಾದಿಕ್ ಹೂಡೆ, ಕುಂದಾಪುರ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಮಿತಿ ಸದಸ್ಯ ಖಲೀಫೆ ಅಬ್ದುಲ್ ಮುನಾಫ್, ಕುಂದಾಪುರ ತಾಲೂಕು ನಗರ ಯೋಜನಾ ಪ್ರಾಧಿಕಾರದ ಸದಸ್ಯ ಮೊಹಮ್ಮದ್ ಅಲ್ಫಾಜ್, ಕಾಪು ತಾಲೂಕು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳು ರಾಜ್ಯದ ಜನರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವುದರೊಂದಿಗೆ ಅವರಿಗೆ ನೆಮ್ಮದಿ ನೀಡಿ, ಸಾಮಾಜಿಕ ಪರಿವರ್ತನೆ ಮಾಡಲಾಗಿದೆ. ಈ ಯೋಜನೆಗಳು ದೇಶಕ್ಕೆ ಮಾದರಿಯಾಗಿದೆ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎಂ. ರೇವಣ್ಣ ಹೇಳಿದರು. ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ಯಾರಂಟಿ ಯೋಜನೆಯ ಜಿಲ್ಲಾ ಮಟ್ಟದ ಕಚೇರಿಯು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಪ್ರಾರಂಭವಾಗಿದ್ದು, ಈಗಾಗಲೇ ಸಮಿತಿಯ ಸದಸ್ಯರುಗಳಿಗೆ ಗುರುತಿನ ಚೀಟಿಯನ್ನೂ ಸಹ ನೀಡಲಾಗಿದೆ. ಗ್ಯಾರಂಟಿ ಯೋಜನೆಯ ಸಮಿತಿ ಸದಸ್ಯರುಗಳು ತಾಲೂಕಿನ ಪ್ರತೀ ಮನೆಗೂ ಭೇಟಿ ನೀಡಿ, ಪಂಚ ಗ್ಯಾರಂಟಿಗಳು ದೊರಕಿರುವ ಬಗ್ಗೆ ಮಾಹಿತಿ ಕಲೆ ಹಾಕಬೇಕು. ಒಂದು ವೇಳೆ ಯೋಜನೆಗಳು ಫಲಾನುಭವಿಗಳನ್ನು ತಲುಪುವಲ್ಲಿ ಯಾವುದೇ ನ್ಯೂನ್ಯತೆಗಳು ಇದ್ದಲ್ಲಿ ಅದನ್ನು ಪರಿಹರಿಸಿ, ವ್ಯವಸ್ಥಿತವಾಗಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಮತ್ಸ್ಯಕ್ಷಾಮ ತಲೆದೋರಿರುವ ಇಂದಿನ ದಿನಗಳಲ್ಲಿ ಮತ್ಸ್ಯ ಸಂತತಿಯನ್ನು ಬೆಳೆಸುವ ಉಳಿಸುವ ಉದ್ದೇಶದಿಂದ ಸಮುದ್ರಕ್ಕೆ ಮೀನಿನ ಮರಿಗಳನ್ನು ಬಿಡುವ ಕಾರ್ಯಕ್ರಮ ಕಳೆದ ಮೂರ್‌ನಾಲ್ಕು ವರ್ಷಗಳಿಂದ ನಡೆಯುತ್ತಿದೆ. ಇದರಿಂದ ಉತ್ತಮ ಫಲಿತಾಂಶ ಬರುತ್ತಿದ್ದು, ಮೀನುಗಾರರಿಂದಲೂ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಬಾರಿ ಸುಮಾರು 8 ಲಕ್ಷ ರೂ. ವೆಚ್ಚದಲ್ಲಿ ಗಂಗೊಳ್ಳಿ, ಕೊಡೇರಿ, ಪಡುವರಿ ಹಾಗೂ ಶಿರೂರು ಭಾಗಗಳಲ್ಲಿ ತಲಾ 5400 ಮೀನು ಮರಿಗಳನ್ನು ಸಮುದ್ರಕ್ಕೆ ಬಿಡಲಾಗುತ್ತಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು. ಗಂಗೊಳ್ಳಿ ಮೀನುಗಾರಿಕಾ ಬಂದರಿನ ಅಳಿವೆ ಪ್ರದೇಶದಲ್ಲಿ ’ಅಳಿವೆಯಲ್ಲಿ ಮೀನು ಮರಿ ಬಿತ್ತನೆ’ ಕಾರ್ಯಕ್ರಮದಡಿ ಸೀಬಾಸ್ ಮೀನು ಮರಿಗಳನ್ನು ಮಂಗಳವಾರ ಸಮುದ್ರಕ್ಕೆ ಬಿಟ್ಟು ಅವರು ಮಾತನಾಡಿದರು. ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ವಿವೇಕ ಆರ್., ಉಪನಿರ್ದೇಶಕಿ ಅಂಜನಾದೇವಿ, ಸಹಾಯಕ ನಿರ್ದೇಶಕಿ ಸುಮಲತಾ, ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಖಾರ್ವಿ, ಗ್ರಾಪಂ ಸದಸ್ಯರಾದ ರಾಜೇಂದ್ರ ಶೇರುಗಾರ್, ಚಂದ್ರ ಖಾರ್ವಿ, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಉಡುಪಿ ನಗರಸಭೆಯ ನಗರೋತ್ಥಾನ 4 ನೇ ಹಂತದ ಅನುದಾನದಡಿ ಶೇ.24.10, ಶೇ. 7.25 ಮತ್ತು ಶೇ. 5 ಕ್ಕೆ ಮಂಜೂರಾದ ಮೊತ್ತದಲ್ಲಿ ವ್ಯಕ್ತಿ ಸಂಬಂಧಿತ ಸೌಲಭ್ಯಗಳಲ್ಲಿ ಹೊಲಿಗೆ ಯಂತ್ರ ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜಾತಿ ಮತ್ತು ಆದಾಯ ದೃಢಪತ್ರ, ಪ್ರಸಕ್ತ ಸಾಲಿನ ಆಸ್ತಿ ತೆರಿಗೆ ಪಾವತಿ ರಶೀದಿ, ಪಡಿತರ ಚೀಟಿ ಪ್ರತಿ, ಆಧಾರ್‌ಕಾರ್ಡ್, ಅರ್ಜಿದಾರರ ಭಾವಚಿತ್ರ, ಹೊಲಿಗೆ ತರಬೇತಿ ಪಡೆದ ಬಗ್ಗೆ ದೃಢಪತ್ರದ ಪ್ರತಿಯೊಂದಿಗೆ ಮಾರ್ಚ್ 10 ರ ಒಳಗಾಗಿ ಪೌರಾಯುಕ್ತರು, ನಗರಸಭೆ ಉಡುಪಿ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ವಡ್ಡರ್ಸೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಕುಂದಾಪುರದ ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಾರ್ಷಿಕ ವಿಶೇಷ ಶಿಬಿರದಲ್ಲಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ “ಪರಿಸರ ನಮಗೊಂದಿಷ್ಟು ಉಳಿಸಿ” ಎಂಬ ಬೀದಿ ನಾಟಕವನ್ನು ಶಿಬಿರಾರ್ಥಿಗಳು ಪ್ರದರ್ಶಿಸಿದರು. ಎನ್.ಎಸ್.ಎಸ್. ಸ್ವಯಂಸೇವಕಿ ಪವಿತ್ರಾ ಪೈ ನಿರ್ದೇಶಿಸಿ, ಪ್ರಾಧ್ಯಾಪಕ ಪ್ರವೀಣ್ ಮೊಗವೀರ್ ಗಂಗೊಳ್ಳಿ ಸಂಯೋಜಿಸಿದರು. ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಕೆ. ಉಮೇಶ್ ಶೆಟ್ಟಿ, ಪ್ರತಿಮಾ ರವಿರಾಜ್ ಶೆಟ್ಟಿ ಬನ್ನಾಡಿ, ಶಿಬಿರಾಧಿಕಾರಿಗಳಾದ ಡಾ| ಚೇತನ್ ಶೆಟ್ಟಿ ಕೋವಾಡಿ, ದೀಪಾ ಪೂಜಾರಿ ಹಾಗೂ ಸಹ ಶಿಬಿರಾಧಿಕಾರಿಗಳು, ಶಿಬಿರಾರ್ಥಿಗಳು, ಸ್ಥಳೀಯ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ನಾಗರಿಕರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ:ತಾಲೂಕಿನ ಕೋಟೇಶ್ವರ ಗ್ರಾಮದ ಮೆಜೆಸ್ಟಿಕ್ ಹಾಲ್ ಎದುರಿನ ಹೆದ್ದಾರಿಯಲ್ಲಿ ಬೈಕಿಗೆ ಕಾರು ಡಿಕ್ಕಿಯಾಗಿದೆ. ಸಂಗೀತಾ ಕುಂಭಾಶಿ ಅವರು ಸಹೋದ್ಯೋಗಿ ಸುದೇಶ್‌ ಜತೆ ಬೈಕಿನಲ್ಲಿ ಮನೆಗೆ ಹೋಗುತ್ತಿದ್ದಾಗ ಕೋಟೇಶ್ವರ ಕಡೆಯಿಂದ ಕುಂದಾಪುರದತ್ತ ಬರುತ್ತಿದ್ದ ಮೇಬಲ್‌ ಚಲಾಯಿಸುತ್ತಿದ್ದ ಕಾರು ಡಿಕ್ಕಿಯಾಗಿದೆ. ಬೈಕಿನಲ್ಲಿದ್ದ ಕಾರು ಇಬ್ಬರೂ ಗಾಯಗೊಂಡು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿರುವ ಕಾಲುಸಂಕ ನಿರ್ಮಾಣ ಕಾಮಗಾರಿಗಳಿಗೆ ಆದ್ಯತೆ ನೀಡಿ, ಮುಂಬರುವ ಮೂರು ವರ್ಷಗಳಲ್ಲಿ ಜಿಲ್ಲೆಗೆ ಅಗತ್ಯವಿರುವ ಕಾಲಸಂಕ ನಿರ್ಮಾಣ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಹೇಳಿದರು. ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಲೆನಾಡು ಭಾಗಗಳಲ್ಲಿ ಹಳ್ಳ-ಕೊಳ್ಳಗಳನ್ನು ದಾಟಲು ಗ್ರಾಮೀಣ ಭಾಗದ ಜನರು ಕಾಲುಸಂಕಗಳನ್ನೇ ತಮ್ಮ ಸಂಚಾರಕ್ಕೆ ಬಳಸುತ್ತಾರೆ. ಈ ಹಿಂದೆ ಅವಘಡಗಳೂ ಸಹ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ನಡೆದಿವೆ. ಜನರ ಅನುಕೂಲಕ್ಕೆ ಜಿಲ್ಲೆಯಲ್ಲಿ 413 ಹೊಸಕಾಲು ಸಂಕಗಳ ನಿಮಾಣಕ್ಕೆ ಪ್ರಸ್ತಾವನೆಯನ್ನು 51.77 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಈಗಾಗಳೆ ಈ ಹಿಂದೆ 30 ಕೋಟಿ. ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಬಾಕಿ ಉಳಿದ ಅನುದಾನವನ್ನು ಹಂತ ಹಂತವಾಗಿ ಬಿಡುಗಡೆಗೊಳಿಸಿ, ಮುಂಬರುವ ಮೂರು ವರ್ಷಗಳ ಒಳಗಾಗಿ ಕಾಲುಸಂಕಗಳನ್ನು ನಿರ್ಮಾಣಮಾಡಲಾಗುವುದು ಎಂದರು. ಹೆದ್ದಾರಿಯ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾಗಿ ಮಂಜುನಾಥ್‌ ಕುಲಾಲ್ ಜನ್ಸಾಲೆ ಅವರನ್ನು ರಾಜ್ಯ ಸರಕಾರ ನೇಮಕ ಮಾಡಿದೆ. ಒಬ್ಬ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತ, ಆರ್‌ಜಿಪಿಆರ್‌ಎಸ್‌ ವಂಡ್ಸೆ ಬ್ಲಾಕ್ ಸಂಯೋಜಕರಿಗೆ ಉಡುಪಿ ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿಗೆ ನಾಮ ನಿರ್ದೇಶನ ಮಾಡಿದ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಗೋಪಾಲ್ ಪೂಜಾರಿ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರಿಗೆ ಮಂಜುನಾಥ ಕುಲಾಲ್ ಅವರು ಧನ್ಯವಾದವನ್ನು ಸಲ್ಲಿಸಿದ್ದಾರೆ. ಸಮಿತಿಯ ಸಂಪೂರ್ಣ ವಿವರ ಇಂತಿದೆಅಶೋಕ್ ಕುಮಾರ್ ಕೊಡವೂರು – ಅಧ್ಯಕ್ಷರು,ಪ್ರಶಾಂತ್ ಜತ್ತನ್ನ – ಉಪಾಧ್ಯಕ್ಷರುಸತೀಶ್ ಜಪ್ತಿ – ಉಪಾಧ್ಯಕ್ಷರುಸಂತೋಷ್ ಕುಲಾಲ್ ಪೆರ್ಡೂರು – ಉಪಾಧ್ಯಕ್ಷರುಉದಯ್ ಕುಮಾರ್ ಶೆಟ್ಟಿ ಮುನಿಯಾಲು – ಉಪಾಧ್ಯಕ್ಷರುಗೀತಾ ವಾಗ್ಲೆ – ಉಪಾಧ್ಯಕ್ಷರು ಸದಸ್ಯರು: ಅರವಿಂದ ಪೂಜಾರಿ, ಚಂದ್ರ ಶೇಖರ್ ಬಾಯರಿ, ಮೋಹನ ಪೂಜಾರಿ, ಹರಿಪ್ರಸಾದ್ ಶೆಟ್ಟಿ, ನವೀನ್ ಚಂದ್ರ ಅಡ್ವೆ, ಪ್ರದೀಪ್ ಕುಮಾರ್ ಶೆಟ್ಟಿ,  ರಮೇಶ್ ಕಾಂಚನ್, ಶಂಕರ್ ಶೇರಿಗಾರ್, ಮಂಜುನಾಥ ಕುಲಾಲ್,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಇಲ್ಲಿನ ವತ್ತಿನಕಟ್ಟೆ ಗ್ರಾಮದ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದ ವರ್ಧ‍ಂತ್ಯೋತ್ಸವ  ಹಾಗೂ ಭಜನೋತ್ಸವವು ಫೆ.19 ಬುಧವಾರದಂದು ಜರುಗಲಿದೆ. ಬೆಳಿಗ್ಗೆ 7.30ಕ್ಕೆ ಭಜನಾ ದೀಪ ಸ್ಥಾಪನೆ ಹಾಗೂ ಗಂಟೆ 9.00 ರಿಂದ ಶ್ರೀ ದೇವಿಗೆ ಕಲಶಾಭೀಷೇಕ, ಚಂಡಿಕಾ ಹೋಮ, ನಾಗದೇವರ ಸನ್ನಿದಿಯಲ್ಲಿ ಕಲಾಹೋಮ, ಕಲಶಾಭಿಷೇಕ, ಮಹಾಪೂಜೆ, ಚಂಡಿಕಾಹೋಮ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 6.00ರಿಂದ ನಗರೋತ್ಸವ ಮತ್ತು ರಾತ್ರಿ 8.00 ಕ್ಕೆ ರಂಗಪೂಜೆ, ದೀಪ ವಿಸರ್ಜನೆ, ಮಹಾಪೂಜೆ ಪ್ರಸಾದ ವಿತರಣೆ, 8.30ರಿಂದ ಅನ್ನಸಂತರ್ಪಣೆ ನಡೆಯಲಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ವಿಭಾಗವು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಚಿಕೆನ್ ಸಾಲ್ ನಲ್ಲಿ ವಿಸ್ತರಣಾ ಚಟುವಟಿಕೆಯನ್ನು ಹಮ್ಮಿಕೊಂಡಿದ್ದು, ಶಾಲಾ ಮಕ್ಕಳಿಗೆ ಬರೆಯುವ ಪರಿಕರಗಳನ್ನು ನೀಡಿದ್ದಲ್ಲದೆ, ಶಿಸ್ತು, ಸ್ವಚ್ಛತೆ, ಉತ್ತಮ ನಡವಳಿಕೆಗಳ ಕುರಿತು ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರೇಮ ಕುಮಾರಿ ಹಾಗೂ ಶಿಕ್ಷಕವೃಂದ, ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ದೀಪಿಕಾ ಜಿ. ಪ್ರಾಧ್ಯಾಪಕರಾದ ರವೀನಾ ಸಿ. ಪೂಜಾರಿ, ಸ್ಟಾಲಿನ್ ಡಿಸೋಜ, ಸ್ವಾತಿ ರಾವ್ ಉಪಸ್ಥಿತರಿದ್ದರು.

Read More