Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಉದ್ದಿಮೆದಾರರಿಗೆ 2023-24 ನೇ ಸಾಲಿನಲ್ಲಿ ವ್ಯಾಪಾರ ಆನ್‌ಲೈನ್ ತಂತ್ರಾಂಶದ ಮೂಲಕ ಸೃಜಿಸಿದ ಡಿಜಿಟಲ್ ಸಹಿಯುಳ್ಳ ಉದ್ದಿಮೆ ಪರವಾನಿಗೆ ನೀಡಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಆನ್‌ಲೈನ್ ತಂತ್ರಾಂಶದ ಮೂಲಕ ಸೃಜಿಸಿದ ಡಿಜಿಟಲ್ ಸಹಿಯುಳ್ಳ ಉದ್ದಿಮೆ ಪರವಾನಿಗೆ ಪಡೆಯಲು ಬಾಕಿ ಹಾಗೂ ನವೀಕರಿಸದೇ ಇರುವವರು ಈ ಕೂಡಲೇ ದಂಡ ಪಾವತಿಯೊಂದಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಏಪ್ರಿಲ್ 1ರ ನಂತರ 2023-24ನೇ ಸಾಲಿನ ಪರವಾನಿಗೆ ನವೀಕರಣಕ್ಕೆ ಅವಕಾಶ ಕಲ್ಪಿಸಲಾಗುವುದು. ಪರವಾನಿಗೆ ಪಡೆದು ಉದ್ದಿಮೆ ನಡೆಸದೇ ಇರುವವರು ಲಿಖಿತ ಮಾಹಿತಿ ನೀಡಿ, ಉದ್ದಿಮೆ ಪರವಾನಿಗೆ ರದ್ದುಪಡಿಸದಿದ್ದಲ್ಲಿ ಉದ್ದಿಮೆ ಶುಲ್ಕ ಹಾಗೂ ದಂಡ ವಿಧಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಪಟ್ಟಣ ಪಂಚಾಯತ್ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಏ.2: ಜಿಲ್ಲೆಯಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆಯು ಜಾರಿಯಲಿದ್ದು, ಈ ಅವಧಿಯಲ್ಲಿ ಪತ್ರಿಕೆಗಳು, ದೃಶ್ಯ ಮಾಧ್ಯಮಗಳು, ಕೇಬಲ್ ಟಿವಿ, ಫೇಸ್‌ಬುಕ್, ವಾಟ್ಸಾಪ್ ಸೇರಿದಂತೆ ಎಲ್ಲಾ ರೀತಿಯ ಸೋಷಿಯಲ್ ಮೀಡಿಯಾಗಳಲ್ಲಿ ಯಾವುದೇ ರಾಜಕೀಯ ಪಕ್ಷ ಅಥವಾ ಚುನಾವಣಾ ಅಭ್ಯರ್ಥಿಯ ಪರವಾಗಿ ಜಾಹೀರಾತುಗಳನ್ನು ಪ್ರಕಟಿಸಲು ಜಿಲ್ಲಾ ಎಂಸಿಎಂಸಿ ಸಮಿತಿಯ ಅನುಮತಿ ಕಡ್ಡಾಯವಾಗಿದ್ದು, ಸಮಿತಿಯ ಅನುಮತಿ ಪಡೆಯದೇ ಜಾಹೀರಾತು ಪ್ರಕಟಿಸಿದಲ್ಲಿ ಸಂಬAದಪಟ್ಟವರ ವಿರುದ್ದ ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಎಚ್ಚರಿಕೆ ನೀಡಿದ್ದಾರೆ. ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿನ ಎಂಸಿಎಂಸಿ ಕಚೇರಿಗೆ ಭೇಟಿ ನೀಡಿ ಮಾತನಾಡುತ್ತಾ, ಜಾಹೀರಾತುಗಳ ಪ್ರಕಟಣೆ ಬಗ್ಗೆ ಅನುಮತಿ ಪಡೆಯುವ ಕುರಿತಂತೆ, ಜಿಲ್ಲಾ ಎಂಸಿಎAಸಿ ಸಮಿತಿಗೆ ಜಾಹೀರಾತು ಪ್ರಕಟಣೆ ಕೋರಿ ಲಿಖಿತ ಅರ್ಜಿಯನ್ನು ಸಲ್ಲಿಸಿ, ಅಗತ್ಯ ಅನುಮತಿ ಪಡೆದ ನಂತರವೇ ಜಾಹೀರಾತು ಪ್ರಕಟಿಸಬೇಕು ಎಂದು ಅವರು ಹೇಳಿದರು. ಚುನಾವಣಾ ಪ್ರಚಾರಕ್ಕಾಗಿ ಮುದ್ರಣಗೊಂಡ ಕರಪತ್ರಗಳ ಮೇಲೆ ಅದನ್ನು ಮುದ್ರಣ ಮಾಡಿದ ಮುದ್ರಕರ ಹೆಸರು, ಹಾಗೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ʼರಾಷ್ಟ್ರೀಯ ಸೇವಾ ಯೋಜನೆ ಘಟಕʼ ಮತ್ತು ʼಮತದಾರ ಸಾಕ್ಷರತಾ ಸಂಘʼ ದಿಂದ ‘ಮತದಾನ ಜಾಗೃತಿ’ ಕಾರ್ಯಕ್ರಮ ಜರುಗಿತು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಶಿವಕುಮಾರ ಪಿ.ವಿ “ಮತದಾರರ ಜಾಗೃತಿಯು ದೇಶದ ಪ್ರಜಾಪ್ರಭುತ್ವ ರಕ್ಷಣೆಗೆ ಎಷ್ಟು ಮಹತ್ವವಾಗಿದೆ ಎಂಬುದನ್ನು ವಿವರಿಸಿದರು.” ಎನ್. ಎಸ್. ಎಸ್ ಘಟಕ 1ರ ಸಂಚಾಲಕರಾದ ನವೀನ್ ಹೆಚ್ ಜೆ ಸಾಗ್ವತಿಸಿದರು. ಪ್ರಾಂಶುಪಾಲರಾದ ನಾಗರಾಜ ಶೆಟ್ಟಿಯವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ಎನ್. ಎಸ್. ಎಸ್ ಘಟಕ 2 ರ ಸಂಚಾಲಕರಾದ ಡಾ. ಸೋಮೇಶ್ವರಿಯವರು ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸುರಭಿ ರಿ. ಬೈಂದೂರು ಆಶ್ರಯದಲ್ಲಿ ಸುರಭಿ ಜೈಸಿರಿ ಹಾಗೂ ಬಿಂದುಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಎಪ್ರಿಲ್ 07, 08, ಹಾಗೂ 09 ರಂದು ಪ್ರತಿದಿನ ಸಂಜೆ 6:30ಕ್ಕೆ ಇಲ್ಲಿನ ಶಾರದಾ ವೇದಿಕೆಯಲ್ಲಿ ಜರುಗಲಿದೆ. ಬೈಂದೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಸುರಭಿ ಅಧ್ಯಕ್ಷ ನಾಗರಾಜ ಪಿ. ಅವರು ಮಾಹಿತಿ ನೀಡಿ, ಭರತನಾನಾಟ್ಯ, ಸಂಗೀತ, ರಂಗಭೂಮಿ, ಚಿತ್ರಕಲೆ, ಯಕ್ಷಗಾನ, ಜಾದೂ ಮೊದಲಾದ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಹಾಗೂ ಹವ್ಯಾಸಿ ಕಲಾವಿದರುಗಳಿಗೆ ತರಬೇತಿ ನೀಡುತ್ತಾ ಸಾಂಸ್ಕೃತಿಕ ಛಾಪು ಮೂಡಿಸಿರುವ ಸುರಭಿ ಬೈಂದೂರು 23ನೇ ವರ್ಷದ ಸಂಭ್ರಮದೊಂದಿಗೆ ಮುನ್ನಡೆಯುತ್ತಿದೆ. ಪ್ರತಿವರ್ಷದಂತೆ ಈ ಭಾರಿ 3 ದಿನಗಳ ಸುರಭಿ ಜೈಸಿರಿ ಹಾಗೂ ಬಿಂದುಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು. ಎ.7ರಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕುಂದಾಪುರ ಶ್ರೀ ರಾಮ ಕ್ರೆಡಿಟ್ ಕೋ-ಆಪರೇಟಿವ್ ಅಧ್ಯಕ್ಷ ನಾಗರಾಜ ಕೆ. ಅವರು ಉತ್ಸವಕ್ಕೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರೋಟರಿ ಕ್ಲಬ್ ಕುಂದಾಪುರದ ವತಿಯಿಂದ ಬಸ್ರೂರು ಶಾರದಾ ಕಾಲೇಜಿಗೆ ಪಾರ್ವತಿ ಜಿ. ಐತಾಳ್ ನೀಡಿರುವ ಸುಮಾರು 20 ಸಾವಿರ ಮೌಲ್ಯದ ಪುಸ್ತಕವನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲರಾದ ಚಂದ್ರಾವತಿ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೋಟರಿ ಕುಂದಾಪುರದ ಅಧ್ಯಕ್ಷ ವೆಂಕಟೇಶ್ ನಾವುಂದ ಪುಸ್ತಕದ ಅಭಿರುಚಿಯ ಬಗ್ಗೆ ತಿಳಿಸಿದರು. ರೋಟರಿ ಕ್ಲಬ್ ಪ್ರಾಜೆಕ್ಟ್ ಚೇರ್ಮನ್ ಮುತ್ತಯ್ಯ ಶೆಟ್ಟಿ ಪುಸ್ತಕ ಯಾಕೆ ಓದಬೇಕು ಎನ್ನುವ ಅರಿವನ್ನು ತಿಳಿಸಿದರು. ಈ ಸಂದರ್ಭದಲ್ಲಿ ಲೈಬ್ರೆರಿಯಾ ವ್ಯವಸ್ಥಾಪಕರು ಶಾಲಾ ಶಿಕ್ಷಕರ ವರ್ಗದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ಶಿಕ್ಷಕರಾದ ಸಂದೀಪ್ ಕೆ ಸ್ವಾಗತಿಸಿ ಧನ್ಯವಾದ ಮಾಡುವುದರೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಅಧ್ಯಾಪಕರ ಸಂಘದ ವತಿಯಿಂದ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗ ಮುಖ್ಯಸ್ಥರಾಗಿ ನಿವೃತ್ತರಾದ ಉಪನ್ಯಾಸಕ ಡಾ. ಎಂ. ಬಿ. ನಟರಾಜ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಎನ್. ಪಿ. ನಾರಾಯಣ ಶೆಟ್ಟಿ, ಅಧ್ಯಾಪಕರ ಸಂಘದ ಅಧ್ಯಕ್ಷರಾದ ಡಾ. ಲಲಿತಾದೇವಿ ಉಪಸ್ಥಿತರಿದ್ದರು. ಉಪನ್ಯಾಸಕಿ ವೈಷ್ಣವಿ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕರ ಸಂಘದ ಕಾರ್ಯದರ್ಶಿ ದುರ್ಗಾಪ್ರಸಾದ್ ಮಯ್ಯ ವಂದಿಸಿದರು.

Read More

ಬೈಂದೂರು ವಿಧಾನಸಭಾ ಕ್ಷೇತ್ರದ ಚುನಾವಣೆ ಮಾದರಿ ನೀತಿ ಸಂಹಿತೆ, ಸಿದ್ಧತೆ ಬಗ್ಗೆ ಮಾಹಿತಿ ನೀಡಿದ ಚುನಾವಣಾಧಿಕಾರಿ

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಯುಥ್ ರೆಡ್ ಕ್ರಾಸ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ “ದಿಶಾ ಭಾರತ್” ಎಂಬ ಕಾರ್ಯಾಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿ ಸ್ನೇಹಾ ದಾಮ್ಲೆ ಮಾತನಾಡಿ ಜಗತ್ತಿಗೆ ಜೀವನ ಪಾಠವನ್ನು ತಿಳಿಸಿದ ದೇಶ ನಮ್ಮ ಭಾರತ. ನಮ್ಮ ದೇಶವನ್ನು ನಾವು ಅರಿಯಬೇಕು. ಪ್ರತಿಯೊಂದು ವಸ್ತುವಿನ ಯಾರಲ್ಲಿ ದೈವಿಕತೆಯನ್ನು ಕಾಣುವುದು ಭಾರತದ ಸಂಸ್ಕೃತಿ. ಹಾಗಾಗಿ ನಮ್ಮ ದೇಶವನ್ನು ಅರಿಯುವ ಪ್ರಯತ್ನ ಮಾಡಬೇಕು. ದೇಶವನ್ನು ಅರಿಯಬೇಕಾದರೆ ಮೊದಲು ನಮ್ಮ ಬಗ್ಗೆ ನಾವೇ ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಇಂದಿನ ಶಿಕ್ಷಣ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಬದುಕಿನ ಶಿಕ್ಷಣವನ್ನು ಕಲಿಸುವ ವಾತಾವರಣವನ್ನು ಕಲ್ಪಿಸಿಕೊಡಬೇಕು ಎಂದು ಹೇಳಿದರು ಇನ್ನೊಬ್ಬ ಅತಿಥಿ ಮಾನ್ವಿತಾ ಡಿ. ಮಾಸ್ಗೊಡೆ ಮಾತನಾಡಿ ಬದುಕಿನಲ್ಲಿ ಬರುವಂತಹ ಸವಾಲುಗಳನ್ನು ಎದುರಿಸುವ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ. ನಾರಾಯಣ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಗುರುರಾಜ್ ರಾವ್, ಪ್ರಭೋಧನ ಸಂಚಾಲಕರು, ಮಂಗಳೂರು ವಿಭಾಗ, ಆಪ್ತ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಗರದ ಹೊರವಲಯದಲ್ಲಿನ ಸಂಗಮ್ ಚೆಕ್ ಪೋಸ್ಟ್ ಬಳಿ ಬುಧವಾರ ವ್ಯಕ್ತಿಯೋರ್ವರ ಬಳಿ ದಾಖಲೆ ಇಲ್ಲದ 13 ಲಕ್ಷ ರೂ. ಪತ್ತೆಯಾಗಿದೆ. ಚೆಕ್ ಪೋಸ್ಟ್ ಬಳಿಯಲ್ಲಿ ಎಸ್.ಐ ಪ್ರಸಾದ್ ಕುಮಾರ್ ನೇತೃತ್ವದ ಪೊಲೀಸರ ತಂಡ ವಾಹನದ ತಪಾಸಣೆ ನಡೆಸುತ್ತಿದ್ದಾಗ ದಿಲೀಪ್ ಗೋಡ್ಸೆ (47) ಎನ್ನುವವರು ಹೀರೊ ಕಂಪೆನಿಯ ಯೂನಿಕಾರ್ನ್ ಮಾದರಿಯ ಕೆಎ 20 ಇಜೆ 5252 ನೊಂದಣಿ ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ಬಂದಿದ್ದಾರೆ. ಈ ವೇಳೆ ಬೈಕ್ ಗೆ ಅಳವಡಿಸಿದ್ದ ಬಾಕ್ಸ್ ನಲ್ಲಿನ ಚೀಲದಲ್ಲಿ ದಾಖಲೆಯಿಲ್ಲದ 500 ರೂ ಮುಖ ಬೆಲೆಯ 13 ಲಕ್ಷ ರೂ. ಪತ್ತೆಯಾಗಿದೆ. ವಿಚಾರಣೆ ವೇಳೆ ಈ ಹಣಕ್ಕೆ ಯಾವುದೇ ದಾಖಲೆಗಳಿಲ್ಲದೆ ಇರುವುದು ತಿಳಿದು ಬಂದಿದ್ದು, ಹಣವನ್ನು ವಶಕ್ಕೆ ಪಡೆದು ಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಆಯೋಜಿಸಿದ ರೋಟರಿ ನರ್ಸರಿ ಸ್ಕೂಲ್ ಡೇ ಸೆಲೆಬ್ರೇಶನ್ ಚಿನ್ನರ ಚಿಲಿಪಿಲಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶ್ರೀಮತಿ ಆಶಾ ಪ್ರಶಾಂತ್ ತೋಳಾರ್ ಮಕ್ಕಳಿಗೆ ಉತ್ತಮವಾದ ಮಾಹಿತಿಯನ್ನು ನೀಡಿದರು ಹಾಗೆ ಶಾಲಾ ಮುಖ್ಯ ಶಿಕ್ಷಕಿ ಪುಷ್ಪ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲಾ ಕಮಿಟಿಯ ವ್ಯವಸ್ಥಾಪಕರಾದ ರಾಘವೇಂದ್ರ ಚರಣ್ ನಾವಡ ಶಾಲೆಯ ಬಗ್ಗೆ ವಿವರಣೆಯನ್ನು ನೀಡಿದರು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷರಾದ ವೆಂಕಟೇಶ್ ನಾವಂದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಪುಷ್ಪ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಪಾರ್ವತಿ ಪ್ರಾರ್ಥನೆಯನ್ನು ಮಾಡಿ ಸ್ವಾಗತಿಸಿದರು. ಜೋಯ್ನಾ ನಿರೂಪಣೆಯನ್ನು ಮಾಡಿದರು. ರೋಟರಿ ಕುಂದಾಪುರದ ಕಾರ್ಯದರ್ಶಿ ನಾಗರಾಜ್ ಶೆಟ್ಟಿ, ಧನ್ಯವಾದಗೈದರು.

Read More