ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ) 2024-25ನೇ ಸಾಲಿನ ಶಾಲಾ ಸಂಸತ್ತು ಚುನಾವಣೆ ಮೊಬೈಲ್ ಇವಿಎಮ್ ಮೂಲಕ ಗುರುವಾರ ಶಾಲಾ ವಠಾರದಲ್ಲಿ ನಡೆಯಿತು. ಸಂಸ್ಥೆಯ ಉಪಪ್ರಾಂಶುಪಾಲರಾದ ಕಿರಣ ಹೆಗ್ಡೆ ಅವರು ಮುಖ್ಯ ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು. ಚುನಾವಣಾ ಪ್ರಕ್ರಿಯೆಗಳಾದ ನಾಮಪತ್ರ ಸಲ್ಲಿಸುವಿಕೆ, ಪರಿಶೀಲನೆ, ಹಿಂತೆಗದುಕೊಳ್ಳುವಿಕೆ, ಮತದಾನ, ಫಲಿತಾಂಶ ಘೋಷಣೆ ಎಲ್ಲವನ್ನೂ ಅತ್ಯಂತ ಕ್ರಮಬದ್ಧವಾಗಿ ನಡೆಸಲಾಯಿತು. ಆಧಾರ ಕಾರ್ಡ್ ಅಥವಾ ಬ್ಯಾಂಕ್ ಪಾಸ್ ಪುಸ್ತಕವನ್ನು ದಾಖಲೆಯಾಗಿ ಬಳಸಿ ಸುಮಾರು 440 ವಿದ್ಯಾರ್ಥಿಗಳು ಮತದಾನ ಮಾಡಿದರು. ಈ ಸಂದರ್ಭದಲ್ಲಿ ಶಾಲೆಗೆ ಭೇಟಿ ನೀಡಿದ ಕುಂದಾಪುರದ ಸಹಾಯಕ ಆಯುಕ್ತೆ ರಶ್ಮಿ ಎಸ್. ಆರ್. ಹಾಗೂ ತಹಶೀಲ್ದಾರ್ ಶೋಭಾಲಕ್ಷ್ಮೀ ಅವರು ಚುನಾವಣಾ ಪ್ರಕ್ರಿಯೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಎಸಿ ರಶ್ಮಿ ಎಸ್.ಆರ್. ಅವರು ಮಾತನಾಡಿ, ಮಕ್ಕಳಿಗೆ ಚುನಾವಣಾ ಶಿಕ್ಷಣ ನೀಡುವುದರಿಂದ ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ ಇನ್ನಷ್ಟು ಯಶ್ವಸ್ಸು ಸಾಧ್ಯ ಎಂದು ಹೇಳಿದರು. ಚುನಾವಣೆಯಲ್ಲಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬವಳಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಸಂಘದ ನೇತೃತ್ವದಲ್ಲಿ ನಿರ್ಮಾಣವಾಗಲಿರುವ ನೂತನ ರಂಗಮಂದಿರದ ಶಂಕುಸ್ಥಾಪನೆಯನ್ನು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ, ಉದ್ಯಮಿ ಗೋಕುಲ ಜಿ. ಶೆಟ್ಟಿ ಅವರು ನೆರವೇರಿತು. ಧಾರ್ಮಿಕ ಪೂಜಾ ಕಾರ್ಯಕ್ರಮವನ್ನು ಹಳೆ ವಿದ್ಯಾರ್ಥಿಯೂ ಆದ ತಿರುಮಲೇಶ ಭಟ್ ಮಕ್ಕಿ ದೇವಸ್ಥಾನ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ರಘುರಾಮ ಶೆಟ್ಟಿ ಗೋಳಿಕಟ್ಟೆ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರಾಘವೇಂದ್ರ ಗಾಣಿಗ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರಾಘವೇಂದ್ರ ಆಚಾರಿ ಕಟ್ಟಿನಮಕ್ಕಿ, ಕೋಶಾಧಿಕಾರಿ ಶಂಕರಶೆಟ್ಟಿ ಗಾಯಾಡಿ, ಹಿರಿಯರಾದ ಸೂಲಿಯಣ್ಣ ಶೆಟ್ಟಿ, ಸಂಘದ ಕ್ರೀಡಾ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ವಕೀಲರು ಗಂಟಿಹೊಳೆ, ಅರ್ಚಕರಾದ ಗಣಪತಿ ಭಟ್,ಎಸ್ ಡಿ ಎಂ. ಸಿ ಸದಸ್ಯರು, ಶಾಲಾ ಮುಖ್ಯೋಪಾಧ್ಯಾಯ ಎನ್ ಕೆ ಬಿಲ್ಲವ, ಅಧ್ಯಾಪಕ ವೃಂದ, ಪಾಲಕ ಪೋಷಕರು ಮತ್ತು ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯ ಏಳು ಪರೀಕ್ಷಾ ಕೇಂದ್ರದಲ್ಲಿ ಜೂನ್ 30 ರಂದು ನಡೆಯಲಿರುವ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ಹಾಗೂ ಪಾರದರ್ಶಕವಾಗಿ ನಡೆಸಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು. ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಟಿ.ಇ.ಟಿ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಶಿಕ್ಷಕರಾ ಅರ್ಹತಾ ಪರೀಕ್ಷೆಯು ಜೂನ್ 30 ರಂದು ಜಿಲ್ಲೆಯ ಏಳು ಪರೀಕ್ಷಾ ಕೇಂದ್ರದಲ್ಲಿ ನಡೆಯುತ್ತಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ಚ್ಛಕ್ತಿಯಿಂದ ಬೆಳಕಿನ ವ್ಯವಸ್ಥೆ ಸೇರಿದಂತೆ ಮತ್ತಿತರ ಸೌಲಭ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದರು. ಜಿಲ್ಲೆಯಲ್ಲಿ ಮೊದಲ ಅಧಿವೇಶನ ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ನಡೆಯಲಿದ್ದು, ಒಟ್ಟು 960 ಅಭ್ಯರ್ಥಿಗಳು ಹಾಗೂ ಅಪರಾಹ್ನ 2 ರಿಂದ 4.30 ರ ವರೆಗೆ ಎರಡನೇ ಅಧಿವೇಶನ ನಡೆಯಲಿದ್ದು, ಒಟ್ಟು 1653 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು. ಪರೀಕ್ಷಾ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ಹೊಸ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಗುರುತಿಸಿರುವ ಶಿವಪುರದ ಕೆರೆಬೆಟ್ಟು ಹಾಗೂ ನಿಟ್ಟೆಯ ವ್ಯಾಪ್ತಿಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದು ಭೂ ಸ್ವಾಧೀನ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೈಗಾರಿಕಾ ಸ್ಪಂದನ ಸಮಿತಿ ಸಭೆ, ಕ್ಲಸ್ಟರ್ ಸಮಿತಿ ಸಭೆ, ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ, ಜಿಲ್ಲಾ ಮಟ್ಟದ ರಫ್ತು ಉತ್ತೇಜನಾ ಸಮಿತಿ ಸಭೆ ಹಾಗೂ ಪ್ರಧಾನಮಂತ್ರಿಗಳ ಉದ್ಯೋಗ ಸೃಜನಾ ಯೋಜನೆಯ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿ ಹೊಸ ಕೈಗಾರಿಕಾ ಪ್ರದೇಶ ನಿರ್ಮಿಸಿ, ಉದ್ಯೋಗ ಸೃಷ್ಠಿಸಿ, ಸ್ಥಳೀಯ ಜನರಿಗೆ ಉದ್ಯೋಗ ಲಭಿಸಬೇಕೆಂಬ ಆಶಯದೊಂದಿಗೆ ಹೆಬ್ರಿ ತಾಲೂಕಿನ ಶಿವಪುರ ಹಾಗೂ ಕೆರೆಬೆಟ್ಟು ಗ್ರಾಮಗಳಲ್ಲಿ 113.59 ಎಕ್ರೆ, ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ 50.42 ಎಕ್ರೆ, ಬ್ರಹ್ಮಾವರ ತಾಲೂಕಿನ ಉಪ್ಪೂರಿನಲ್ಲಿ 101.19 ಎಕ್ರೆ ಜಮೀನಿನ ಭೂ ಸ್ವಾಧೀನ ಪ್ರಕ್ರಿಯೆಯನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್, ಶಿರೂರು ಅಸೋಶಿಯೇಷನ್ ಹಾಗೂ ಕುಂದಾಪುರ ದೇವಾಡಿಗ ಮಿತ್ರ ದುಬೈ ಜಂಟಿಯಾಗಿ ಹಮ್ಮಿಕೊಂಡಿದ್ದ ಸೌಹಾರ್ದ ಭೇಟಿ ಹಾಗೂ ಕಾರ್ಯಕ್ರಮಕ್ಕಾಗಿ ದುಬೈ ಪ್ರವಾಸ ಕೈಗೊಂಡಿದ್ದ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ನಮ್ಮ ಕುಂದಾಪ್ರ ಕನ್ನಡ ಬಳಗದ ಗೌರವಾಧ್ಯಕ್ಷರುಗಳಾದ ರಾಮೀ ಗ್ರೂಪ್ನ ವರದರಾಜ ಶೆಟ್ಟಿ, ಫಾರ್ಚೂನ್ ಗ್ರೂಪ್ನ ವಕ್ವಾಡಿ ಪ್ರವೀಣಕುಮಾರ್ ಶೆಟ್ಟಿ, ಶಿರೂರು ಅಸೋಸಿಯೇಷನ್ ಪ್ರಧಾನ ಪೋಷಕ ಮಣೆಗಾರ್ ಮೀರಾನ್ ಸಾಹೇಬ್, ಕದಂ ರೂವಾರಿ, ಎಲಿಗೆಂಟ್ ಗ್ರೂಪ್ ಎಂಡಿ ದಿನೇಶ್ ದೇವಾಡಿಗ ನಾಗೂರು, ಕುಂದಾಪ್ರ ಕನ್ನಡ ಬಳಗ ಗಲ್ಫ್ ಅಧ್ಯಕ್ಷರಾದ ಸದನ್ ದಾಸ್, ಕಾರ್ಯದರ್ಶಿ ಸುಧಾಕರ್ ಪೂಜಾರಿ, ಬೈಂದೂರಿನ ಉದ್ಯಮಿಗಳಾದ ಕೆ. ವೆಂಕಟೇಶ್ ಕಿಣಿ, ಬಿ.ಎಸ್. ಸುರೇಶ್ ಶೆಟ್ಟಿ, ಕೃಷ್ಣಪ್ರಸಾದ್ ಅಡ್ಯಂತಾಯ, ಅರುಣ್ ಕುಮಾರ್ ಶಿರೂರು ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಜೂ.27: ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಇವರ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ 5 ದಿನಗಳ ಕಾಲ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದ್ದು, ಸಾರ್ವಜನಿಕರು ಹಾಗೂ ಮೀನುಗಾರರು ನದಿ, ನೀರಿರುವ ಪ್ರದೇಶ ಹಾಗೂ ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸಬೇಕು. ಈ ಸಂದರ್ಭದಲ್ಲಿ ಮಕ್ಕಳು ಹಾಗೂ ಸಾರ್ವಜನಿಕರು ಅಪಾಯಕಾರಿ ವಿದ್ಯುತ್ಕಂಬದ ಹತ್ತಿರ ಸುಳಿಯಬಾರದು ಮತ್ತು ತುಂಡಾದ ವಿದ್ಯುತ್ ತಂತಿಗಳಿಂದ ದೂರವಿರಬೇಕು. ದುರ್ಬಲವಾದ ಹಳೆಯ ಕಟ್ಟಡ ಅಥವಾ ಮರಗಳ ಹತ್ತಿರ, ಮರಗಳ ಕೆಳಗೆ ನಿಲ್ಲಬಾರದು. ಸಾರ್ವಜನಿಕರು ತಗ್ಗು ಪ್ರದೇಶ ಅಥವಾ ಮಳೆಯಿಂದ ಅಪಾಯಕ್ಕೀಡಾಗುವ ಪ್ರದೇಶದಲ್ಲಿ ವಾಸವಿದ್ದಲ್ಲಿ ಅಥವಾ ದುರ್ಬಲವಾದ ಕಟ್ಟಡದಲ್ಲಿ ವಾಸವಿರುವ ಸಾರ್ವಜನಿಕರು ಸುರಕ್ಷಿತ ಸ್ಥಳಗಳನ್ನು ತಲುಪಬೇಕು ಅಥವಾ ಅಗತ್ಯವಿದ್ದಲ್ಲಿ ಈಗಾಗಲೇ ಸಂಬAಧಿಸಿದ ತಹಶೀಲ್ದಾರರಿಂದ ಗುರುತಿಸಲ್ಪಟ್ಟ ಕಾಳಜಿ ಕೇಂದ್ರದಲ್ಲಿ ಕಡ್ಡಾಯವಾಗಿ ಆಶ್ರಯ ಪಡೆಯಬೇಕು. ತುರ್ತು ಸೇವೆಗೆ ಶುಲ್ಕ ರಹಿತ ಸಂಖ್ಯೆ: 1077 ಹಾಗೂ ದೂ.ಸಂ:0820-2574802 ಅನ್ನು ಸಂಪರ್ಕಿಸಬಹುದಾಗಿದೆ ಎಂದು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಅಂಗವಾಗಿ ಮಾದಕ ದ್ರವ್ಯ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು. “ಡ್ರಗ್ಸ್ ಸೇವನೆಯಂಥ ದುಶ್ಚಟವು ವ್ಯಕ್ತಿಯ ಕೌಟುಂಬಿಕ ಮತ್ತು ಸಾಮಾಜಿಕ ವಲಯಗಳಲ್ಲೂ ಮಾರಕ ಪರಿಣಾಮ ಬೀರುತ್ತದೆ. ಮಾದಕ ದ್ರವ್ಯ ವ್ಯಸನಿಗಳು ದುಶ್ಚಟಕ್ಕೊಳಗಾದ ಎಷ್ಟೋ ವರ್ಷಗಳ ನಂತರವೂ ಸುಭದ್ರ ಜೀವನವನ್ನು ಸಡೆಸುವುದು ಕಷ್ಟವಾಗುವುದರಿಂದ ಪ್ರಾರಂಭದಲ್ಲೇ ದುಶ್ಚಟಗಳಿಂದಾಗುವ ಹಾನಿಗಳ ಬಗ್ಗೆ ಎಚ್ಚರವಹಿಸಬೇಕು” ಎಂದು ಕುಂದಾಪುರ ಪೊಲೀಸ್ ಠಾಣಾಧಿಕಾರಿ ವಿನಯ್ ಕೊರ್ಲಳ್ಳಿಯವರು ಹೇಳಿದರು.ಅಂತಾರಾಷ್ಟ್ರೀಯ ಮಾದಕದ್ರವ್ಯ ವಿರೋಧಿ ದಿನಾಚರಣೆ- 2024, ಇದರ ಪ್ರಯುಕ್ತ ಕುಂದಾಪುರ ಪೊಲೀಸ್ ಠಾಣೆಯ ಸಹಯೋಗದಲ್ಲಿ ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳ ಬಗ್ಗೆ ನಡೆದ ಮಾಹಿತಿ ಉಪನ್ಯಾಸದಲ್ಲಿ ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ ಶೆಟ್ಟಿ ಅವರು ಇಂದಿನ ಯುವಪೀಳಿಗೆಯು ಎಲ್ಲೆಂದರಲ್ಲಿ ಲಭ್ಯವಿರುವ ವಿವಿಧ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇತ್ತೀಚೆಗೆ ತೀವ್ರ ವಿವಾದಕ್ಕೊಳಗಾದ ಕುಂದಾಪುರ ಪುರಸಭಾ ವ್ಯಾಪ್ತಿಯ ಹೋಟೆಲ್ ಪಾರಿಜಾತ ಸಮೀಪದ ಶಂಕರ ಶೇಟ್ ಟವರ್ಸ್ನ ಎದುರುಗಡೆಯಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಕಬ್ಬಿಣದ ಆವರಣ ಗೋಡೆಯನ್ನು ತೆರವುಗೊಳಿಸುವಂತೆ ಸೂಚಿಸಿ ಕುಂದಾಪುರ ಪುರಸಭಾ ಕಾರ್ಯಾಲಯವು ಕಟ್ಟಡದ ಮುಖ್ಯಸ್ಥರಿಗೆ ಜೂನ್ 14ರಂದು ನೋಟೀಸು ಜಾರಿಗೊಳಿಸಿರುವ ಕುರಿತು ತಿಳಿದು ಬಂದಿದೆ. ನೋಟೀಸ್ ನಲ್ಲಿ “ಪುರಸಭಾ ವ್ಯಾಪ್ತಿಯ ಶಂಕರ ಶೇಟ್ ಟವರ್ಸ್ನಲ್ಲಿ ಅನಧಿಕೃತ ಆವರಣ ಗೋಡೆ ರಚಿಸುತ್ತಿರುವ ಕುರಿತು ತಮ್ಮ ಕಚೇರಿಗೆ ದೂರು ಸಲ್ಲಿಕೆಯಾಗಿದ್ದು ಈ ಬಗ್ಗೆ ಪುರಸಭೆಯ ಕಿರಿಯ ಅಭಿಯಂತರರು ಪರಿಶೀಲಿಸಿ ವರದಿ ನೀಡಿದ್ದು ಆ ವರದಿಯ ಪ್ರಕಾರ ಸದ್ರಿ ಸ್ಥಳದಲ್ಲಿ ಅನಧಿಕೃತವಾಗಿ ಪರವಾನಿಗೆ ಪಡೆಯದೇ ಆವರಣಗೋಡೆ ನಿರ್ಮಿಸಿರುವುದು ಕಂಡು ಬಂದಿದ್ದು ಆ ಕಾರಣಕ್ಕಾಗಿ ಸದ್ರಿ ಆವರಣಗೋಡೆಯನ್ನು ಈ ನೋಟಿಸು ತಲುಪಿದ ಏಳು ದಿನಗಳೊಳಗೆ ತೆರವುಗೊಳಿಸಬೇಕು” ಎಂದು ಸೂಚಿಸಲಾಗಿದೆ. ಸದ್ರಿ ಶಂಕರ್ ಶೇಟ್ ಟವರ್ಸ್ನ ಓನರ್ಸ್ ಅಸೋಸಿಯೇಷನ್ ನಿರ್ಮಿಸಿತ್ತು ಎನ್ನಲಾದ ಈ ಅನಧಿಕೃತ ಆವರಣಗೋಡೆಯಿಂದ ನಮ್ಮ ಅಂಗಡಿಯ ವ್ಯವಹಾರಕ್ಕೆ ತೊಂದರೆಯಾಗುತ್ತಿದ್ದು, ನಮ್ಮ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತೋಟಕ್ಕೆಂದು ತೆರಳಿದ ಕೃಷಿಕ ನೋರ್ವ ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ. ಹಾಲಾಡಿ ಗ್ರಾಮದ ಶೇಖರ ಶೆಟ್ಟಿ (74) ಮೃತ ವ್ಯಕ್ತಿಯಾಗಿದ್ದಾರೆ. ಅಡಿಕೆ ತೋಟಕ್ಕೆಂದು ತೆರಳಿದವರು ಮನೆಯ ಹಿಂಬದಿಯಲ್ಲಿದ್ದ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ಪುರಸಭೆ ವ್ಯಾಪ್ತಿಯ ಸುಡುಗಾಡು ತೋಡು ಅವ್ಯವಸ್ಥೆಯ ಆಗರಾವಾಗಿದ್ದು ಅದನ್ನು ಶೀಘ್ರ ಸರಿಪಡಿಸುವಂತೆ ಕುಂದಾಪುರ ಸಹಾಯಕ ಆಯುಕ್ತರ ಬಳಿ ಸಾರ್ವಜನಿಕರು ಮನವಿ ನೀಡಿದ್ದಾರೆ. ಈ ಹಿಂದೆ ಅನೇಕ ಬಾರಿ ಸಾರ್ವಜನಿಕರು ಪುರಸಭೆಯ ಗಮನಕ್ಕೆ ತಂದರೂ ಪ್ರಯೋಜನವಿಲ್ಲದ ಪರಿಸ್ಥಿತಿ ಉಂಟಾಗಿದೆ. ಇಲ್ಲಿ ವಾಸಿಸುವ ಜನರ ಪರಿಸ್ಥಿತಿ ಕಷ್ಟಕರವಾಗಿದೆ̤ ತೋಡಿನಲ್ಲಿ ದುರ್ನಾಥ ಬೀರುವ ತ್ಯಾಜ್ಯಗಳೂ, ಸಾಂಕ್ರಮಿಕ ರೋಗಗಳು ಕೊಳೆತು ನಾರುವ ತ್ಯಾಜ್ಯದ ರಾಶಿಯಿಂದ ಈ ಪರಿಸರದಲ್ಲಿ ಚಿಕನ್ಗುನ್ಯ, ಮಲೇರಿಯಾ, ಡೆಂಗ್ಯೂ ತರಹದ ಸಾಂಕ್ರಮಿಕ ರೋಗಗಳು ಹರುಡುತ್ತದೆ ಎಂದು ಸಾರ್ವಜನಿಕರು ದೂರಿನಲ್ಲಿ ತಿಳಿಸಿದ್ದಾರೆ. ಈ ತೋಡಿನ ಅಸುಪಾಸಿನಲ್ಲಿ ಅಸಂಖ್ಯಾತ ಜನರು ವಾಸವಾಗಿದ್ದು ಅದರಲ್ಲಿ ಮಕ್ಕಳು , ವೃದ್ಧರು, ಅನಾರೋಗ್ಯ ಪೀಡಿತರ ಸಂಖ್ಯೆಯೇ ಅಧಿಕವಾಗಿದೆ ಹಾಗೂ ನೂರಕ್ಕೂ ಅಧಿಕ ಮನೆಗಳಿದ್ದು ನಡೆದಾಡಲು ಕೂಡ ಸರಿಯಾದ ದಾರಿಯ ವ್ಯವಸ್ಥೆಯೂ ಸಹಾ ಇಲ್ಲದೇ ಜನರು ಬಹಳ ಸಂಕಷ್ಠಕ್ಕೆ ತುತ್ತಾಗಿದ್ದಾರೆ. ಈ ಚರಂಡಿಯನ್ನು ಒಳಚರಂಡಿ ವ್ಯವಸ್ಥೆಯಾಗಿ ಮಾಡಿಕೊಡಬೇಕೆಂದು ಮನವಿ ಆಗ್ರಹಸಿದ್ದಾರೆ.
