Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ವಿದ್ಯಾ ಅಕಾಡೆಮಿ ಮೂಡ್ಲಕಟ್ಟೆಯಲ್ಲಿ ಶಾಲಾ ವಾರ್ಷಿಕೋತ್ಸವವನ್ನು ಬಹಳ ಸಂಭ್ರಮದಿಂದ ಇತ್ತೀಚೆಗೆ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ತಾಲೂಕು ಹೆಲ್ತ್ ಆಫೀಸರರಾದ ಡಾ. ಪ್ರೇಮಾನಂದ ಕೆ. ಅವರು ಆಗಮಿಸಿ ಮಾತನಾಡಿ, ಇಂದಿನ ಮಕ್ಕಳ ಜೀವನದಲ್ಲಿ ಹೊರಾಂಗಣ ಆಟಗಳ ಅಗತ್ಯತೆ ಅತ್ಯಂತ ಮಹತ್ವದ್ದು ಎಂದು ಒತ್ತಿ ಹೇಳಿದರು. ಹಾಗೆಯೇ ಆಹಾರ ಕ್ರಮದ ಕುರಿತು ಪೋಷಕರಿಗೆ ಮೌಲ್ಯಯುತ ಮಾಹಿತಿ ನೀಡಿದರು. ವೇದಿಕೆಯಲ್ಲಿ ಬ್ರಾಂಡ್ ಬಿಲ್ಡಿಂಗ್ ಡೈರೆಕ್ಟರ್ ಡಾ. ರಾಮಕೃಷ್ಣ ಹೆಗ್ಡೆ ಹಾಗೂ ಪ್ರೊ. ಜೆನ್ನಿಫರ್ ಫ್ರೀಡಾ ಮೆನೇಜಸ್, ಪ್ರಿನ್ಸಿಪಲ್ ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ಡಾ. ಪ್ರತಿಭಾ ಪಾಟೀಲ್, ಪ್ರಿನ್ಸಿಪಾಲ್ ಆಫ್ ಐ ಎಂ ಜೆ ಇನ್ಸ್ಟಿಟ್ಯೂಷನ್, ಸೆಬಾಸ್ಟಿನ್, ಅಕಾಡೆಮಿಸಿನ್ ಅವರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಅತಿಥಿಗಳು ಹಿತನುಡಿಯನ್ನಾಡಿದರು. ನಂತರ ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೃತ್ಯ, ನಾಟಕ, ಯಕ್ಷಗಾನದ ಮೂಲಕ ಕಣ್ಮನ ಸೆಳೆದರು. ಕಾರ್ಯಕ್ರಮದಲ್ಲಿ ಶಿಕ್ಷಕಿ ರಶ್ಮಾ ಶೆಟ್ಟಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಜೀವನದಲ್ಲಿ ನಾವು ಎಷ್ಟೇ ಯಶಸ್ಸು ಗಳಿಸಬಹುದು ಆದರೆ ಶಿಕ್ಷಣ ಇಲ್ಲದೆ ಜೀವನ ಶೂನ್ಯ. ಶಿಕ್ಷಣ ಅಭಿಮಾನಿಗಳ ಸಹಕಾರ ಇದ್ದಾಗ ಸಂಸ್ಥೆಯ ಪ್ರಗತಿ ಸಾಧ್ಯ. ಪಾಲಕರ ಜವಾಬ್ದಾರಿ ಮತ್ತು ಶಿಕ್ಷಕರ ಕಾಳಜಿಯಿಂದ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸಲು ಸಾಧ್ಯ. ಗ್ರಾಮೀಣ ಭಾಗದಲ್ಲಿ ನೈಜ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಪ್ರೋತ್ಸಾಹ ಮತ್ತು ಶೈಕ್ಷಣಿಕ ವಾತಾವರಣ ನೀಡಿದಾಗ ಯಶಸ್ಸು ಸಾಧ್ಯ ಬದಲಾವಣೆಗೆ ಹೊಂದಿಕೊಂಡು ಹೊಸತನ ಅಳವಡಿಸಿಕೊಂಡಾಗ ಶೈಕ್ಷಣಿಕ ಪ್ರಗತಿ ಸಾಧ್ಯ ಎಂದು ನಿವೃತ್ತ ಸೈನಿಕ ಹಾಗೂ ಸಾಹಿತಿ ಚಂದ್ರಶೇಖರ ನಾವಡರು ಹೇಳಿದರು. ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಲ್ಲಿಬಾರು (ಹೊಸೂರು) ಇದರ 2025-26ನೇ ಸಾಲಿನ ಶಾಲಾ “ಸಾಂಸ್ಕೃತಿಕೋತ್ಸವ” ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಶಾಲಾ SDMC ಅಧ್ಯಕ್ಷ ದಯಾನಂದ ಮರಾಠಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಶಿರೂರಿನ ಉದ್ಯಮಿ ಪ್ರಸಾದ್ ಪ್ರಭು, ಕಾಂಗ್ರೆಸ್…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇಲ್ಲಿನ ಪುರಾಣ ಪ್ರಸಿದ್ಧ ಕ್ಷೇತ್ರ ಕೋಟ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನ ವಾರ್ಷಿಕ ಜಾತ್ರಾ ಸಡಗರ ಇದೇ ಬರುವ ಫೆ.1 ಮತ್ತು 2 ರಂದು ಜರಗಲಿದ್ದು ಇದರ ದೇಗುಲದ ಆಮಂತ್ರಣ ಪತ್ರಿಕೆ ಬಿಡುಗಡೆ ಸೋಮವಾರ ಶ್ರೀ ದೇಗುಲದಲ್ಲಿ ಜರಗಿತು. ಕೂಟಮಹಾಜಗತ್ತಿನ ಇತಿಹಾಸ ಹೊಂದಿದ ಈ ದೇಗುಲ ಶ್ರೀ ಮನ್ಮಹಾರಥೋತ್ಸವದ ಕುರಿತು ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ಅನಂತಪದ್ಮನಾಭ ಐತಾಳ್ ಮಾಹಿತಿ ನೀಡಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ದೇಗುಲದ ಸಮಿತಿದ ಸದಸ್ಯರಾದ ಜಿ. ಶ್ರೀನಿವಾಸ ಅಡಿಗ, ಜಿ. ಸದಾಶಿವ ಅಡಿಗ, ಜಿ. ರಾಜೇಂದ್ರ ಅಡಿಗ, ಎಂ. ಭಾಸ್ಕರ ಶೆಟ್ಟಿ, ಉಮೇಶ್ ಪೂಜಾರಿ, ದಿನೇಶ್ ದೇವಾಡಿಗ, ಐಶ್ವರ್ಯ, ಶ್ರೀಲಕ್ಷ್ಮೀ ಪ್ರಭು, ದೇಗುಲದ ಅರ್ಚಕರಾದ ಗಣೇಶ್ ಭಟ್, ಉದ್ಯಮಿ ಸುರೇಶ್ ಕಾಂಚನ್ ಇದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಇಲಾಖೆ ಶಾಂತಿವನ ಟ್ರಸ್ಟ್ ರಿ. ಅವರು ನಡೆಸಿದ ಜ್ಞಾನ ಪಥ ಪುಸ್ತಕಾಧಾರಿತ ರಾಜ್ಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರಬಂಧ ಸ್ಪರ್ಧೆಯಲ್ಲಿ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಸಮೃದ್ಧಿ ವಿ. ಪೂಜಾರಿ ತೃತೀಯ ಸ್ಥಾನ ಪಡೆದಿರುತ್ತಾಳೆ. ಅವರಿಗೆ, ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿಗಳು ಸಾರ್ವಕಾಲಿಕ ದಾಖಲೆಗಳಾಗಿ ಉಳಿಯುತ್ತದೆ ಹಾಗೂ ಸುದ್ದಿಯಲ್ಲಿ ತಪ್ಪುಗಳು ನಡೆದರೆ ಅದನ್ನು ಸರಿಪಡಿಸುವುದು ಅಷ್ಟು ಸುಲಭವಲ್ಲ. ಹೀಗಾಗಿ ಸುದ್ದಿಗಳನ್ನು ತಿರುಚುವ ಮನಃಸ್ಥಿತಿ ಮಾಧ್ಯಮಲೋಕಕ್ಕೆ ಅಪಾಯವಾಗಲಿದೆ ಆದ್ದರಿಂದ ಬರವಣಿಗೆಯಲ್ಲಿ ಜವಾಬ್ದಾರಿ ಮತ್ತು ವಾಸ್ತವಾಂಶ ಇರಬೇಕು ಎಂದು ಮಾಜಿ ಸಚಿವ ಕೆ. ಜಯಪ್ರಕಾಶ ಹೆಗ್ಡೆ ಹೇಳಿದರು. ಅವರು ಇಲ್ಲಿನ ಸಾಸ್ತಾನ ಪಾಂಡೇಶ್ವರದ ಕೋಸ್ಟಲ್ ಪ್ಯಾರಡೈಸ್ ಅನುಗ್ರಹ ಸಭಾಂಗಣದಲ್ಲಿ ಉಡುಪಿ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಬ್ರಹ್ಮಾವರ ತಾಲ್ಲೂಕು ಪತ್ರಕರ್ತರ ಸಂಘದ ವತಿಯಿಂದ ಭಾನುವಾರ ನಡೆದ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಜನಾಭಿಪ್ರಾಯ ಮೂಡಿಸುವ ಕೆಲಸ ಪತ್ರಿಕೆ, ಮಾಧ್ಯಮಗಳು ಮಾಡುತ್ತವೆ. ಅದ್ದರಿಂದ ಸಮಾಜಕ್ಕೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ನೈಜತೆಯ ಸುದ್ದಿಯನ್ನು ನೀಡುವತ್ತ ಪತ್ರಿಕಾರಂಗ ಇರಬೇಕು ಎಂದರು. ಬ್ರಹ್ಮಾವರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ ಗಾಣಿಗ ಅಚ್ಲಾಡಿ ಅಧ್ಯಕ್ಣತೆ ವಹಿಸಿದ್ದರು. ಇದೇ ಸಂದರ್ಭ ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರಿಗೆ ವಡ್ಡರ್ಸೆ ರಘುರಾಮ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಬಾಡ ಗ್ರಾಮದ ಕೆಂಪಿನಕೆರೆ ಶ್ರೀ ಜಟ್ಟಿಗೇಶ್ವರ ದೈವಸ್ಥಾನದ ನೂತನ ದೈವಸ್ಥಾನ ಕಟ್ಟಡಗಳ ಲೋಕಾರ್ಪಣೆ ಕೆಂಪಿನಕೆರೆ ಜಟ್ಟಿಗೇಶ್ವರ ಹಾಗೂ ಸಪರಿವಾರ ದೈವಗಳು ಮತ್ತು ನಾಗ ದೇವರ ಪುನಃಪ್ರತಿಷ್ಠಾ ಮಹೋತ್ಸವವು ದಿನಾಂಕ 10 ಜನವರಿ 2026ರ ಶನಿವಾರದಿಂದ ಮೊದಲ್ಗೊಂಡು 12 ಜನವರಿ 2026ರ ಸೋಮವಾರದ ತನಕ ನಡೆಯಲಿದೆ. ದಿನಾಂಕ 10-01-2026ರ ಶನಿವಾರ ದೇವತಾ ಕಾರ್ಯಗಳಿಗೆ ಚಾಲನೆ ದೊರೆಯಲಿದ್ದು, ದೇವರ ಪ್ರಾರ್ಥನೆ, ಮೆರವಣಿಗೆ, ಪೂಜೆ ಹಾಗೂ ಹೋಮಹವನಗಳು ಜರುಗಲಿದೆ. ದಿನಾಂಕ 11-01-2026ರ ಭಾನುವಾರ ಬೆಳಿಗ್ಗೆ ಗಂಟೆ 08-00ರಿಂದ ವಿವಿಧ ಹೋಮ, ಬೆಳಿಗ್ಗೆ ಗಂಟೆ 10-40ರ ಕುಂಭ ಲಗ್ನದಲ್ಲಿ ಶ್ರೀ ಜಟ್ಟಿಗೇಶ್ವರ ದೇವರ ಹಾಗೂ ಸಪರಿವಾರ ದೈವಗಳ ಪುನಃಪ್ರತಿಷ್ಠೆ, ವಿವಿಧ ಹವನಗಳು ಗಂಟೆ 11-40ರ ಶುಭ ಲಗ್ನದಲ್ಲಿ ನಾಗಶಿಲಾ ಪ್ರತಿಷ್ಠೆ, ಹೋಮಾದಿಗಳು, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಅಂದು ಮಧ್ಯಾಹ್ನ ಗಂಟೆ 03-00ರಿಂದ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮಗಳು ಜರುಗಲಿದೆ. ಸಂಜೆ ಗಂಟೆ 06-00ರಿಂದ ಮಂಡಲ ದರ್ಶನ,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಪುಸ್ತಕಗಳ ನೋಂದಣಿ ಕಾಯಿದೆ ಅನ್ವಯ 2025ನೇ ಸಾಲಿನಲ್ಲಿ ಮುದ್ರಿಸಿ ಪ್ರಕಟಿಸಿದ ಮೊದಲ ಆವೃತ್ತಿಯ ಪುಸ್ತಕಗಳ ಮೂರು ಪ್ರತಿಗಳನ್ನು ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಆಯ್ಕೆಗಾಗಿ ಮೊದಲ ಆವೃತ್ತಿ ಪುಸ್ತಕ ಆಹ್ವಾನಿಸಲಾಗಿದೆ. 2025 ನೇ ಸಾಲಿನಲ್ಲಿ ರಾಜ್ಯದಲ್ಲಿ ಪ್ರಥಮ ಮುದ್ರಣಗೊಂಡು ಪ್ರಕಟಗೊಳ್ಳುವ ಯಾವುದೇ ಭಾಷೆಯ ಪುಸ್ತಕಗಳಲ್ಲಿ ಪ್ರತಿ ಶೀರ್ಷಿಕೆಯ ಮೂರು ಪ್ರತಿಗಳನ್ನು ರಾಜ್ಯ ಕೇಂದ್ರ ಗ್ರಂಥಾಲಯದಲ್ಲಿ ಸಲ್ಲಿಸಿ ಜನವರಿ 31 ರ ಸಂಜೆ 5.30ರ ಒಳಗಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ನೋಂದಣಿಯಾದ ಪುಸ್ತಕಗಳನ್ನು ಮಾತ್ರ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಗಾಗಿ ಪರಿಗಣಿಸಲಾಗುವುದು. ಅಂತಿಮ ದಿನಾಂಕದ ನಂತರ ನೋಂದಣಿಯಾಗುವ ಪುಸ್ತಕಗಳನ್ನು ಆಯ್ಕೆಗಾಗಿ ಪರಿಗಣಿಸಲಾಗುವುದಿಲ್ಲ. ನೋಂದಣಿಗಾಗಿ ನಿಗಧಿತ ಅರ್ಜಿ ನಮೂನೆ ಹಾಗೂ ಮಾಹಿತಿಗಾಗಿ ಇಲಾಖಾ ವೆಬ್‌ಸೈಟ್ dpl.karnataka.gov.in, ಆಯುಕ್ತರ ಕಚೇರಿ ದೂ.ಸಂಖ್ಯೆ: 080-22864990, 22867358, ರಾಜ್ಯ ಕೇಂದ್ರ ಗ್ರಂಥಾಲಯ ದೂ.ಸಂಖ್ಯೆ: 080-22212128 ಅಥವಾ ಮುಖ್ಯ ಗ್ರಂಥಾಲಯಾಧಿಕಾರಿಗಳ ಕಚೇರಿ, ಉಡುಪಿ ಜಿಲ್ಲಾ ಕೇಂದ್ರ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಒಂದು ಸರಕಾರಿ ಶಾಲೆ ಯಾವ ರೀತಿಯಲ್ಲಿ ಅಭಿವೃದ್ಧಿಗೊಳಿಸಲು ಸಾಧ್ಯವಿದೆ ಎಂಬುವುದನ್ನು ಚಿತ್ರಪಾಡಿ ಪಿ. ಎಂ ಶ್ರೀ ಶಾಲೆ ತೊರಿಸಿಕೊಟ್ಟಿದೆ ಎಂದು ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಇಲ್ಲಿನ ಸಾಲಿಗ್ರಾಮದ ಚಿತ್ರಪಾಡಿಯ ಪಿ.ಎಂ.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಸಂಭ್ರಮ ಜ್ಞಾನದ ಬೆಳಕಿಗೆ ನೂರರ ಹೊಳಪು ಎಂಬ ಶೀರ್ಷಿಕೆಯಡಿ ನಡೆದ ಕಾರ್ಯಕ್ರಮದಲ್ಲಿ ಪಿಎಂಶ್ರೀ ವಾಚನಾಲಯವನ್ನು ಉದ್ಘಾಟಿಸಿ ಮಾತನಾಡಿದರು. ಸರಕಾರಿ ಶಾಲಾ ಮಕ್ಕಳು ಯಾವದಕ್ಕೂ ಕಡಿಮೆ ಇಲ್ಲ ಅವರಲ್ಲಿ ನೈಜತೆಯ ಕೌಶಲ್ಯಾಭಿವೃದ್ಧಿ ಇದೆ ದೇಶ ಕಟ್ಟುವ ಸತ್ಚಿಂತನೆ ಇದೆ ಎಂದರಲ್ಲದೆ ಶತಮಾನ ಕಾಣುವುದು ಸುಲಭದ ಮಾತಲ್ಲ ಪ್ರಸ್ತುತ ಅದೆಷ್ಟೊ ಶಾಲೆಗಳು ಅವನತಿ ಕಾಣುವ ಕಾಲಘಟ್ಟದಲ್ಲಿ ಚಿತ್ರಪಾಡಿ ಶಾಲೆ ಹೊಸ ಆಶಾಭಾವನೆ ಸೃಷ್ಠಿಸಿದೆ ಎಂದರಲ್ಲದೆ ಶಿಕ್ಷಣ ಹೇಗಿರಬೇಕೆಂದರೆ ರಾಷ್ಟ್ರ ಸೇವೆಗೆ  ನೈಪುಣ್ಯತೆ ಕಾಣುವ ಮಕ್ಕಳಾಗಿ ಹೊರಹೊಮ್ಮುವಾಗೆ ಇರಬೇಕು ಎಂದರು. ಸಭೆಯ ಅಧ್ಯಕ್ಷತೆಯನ್ನು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ವಹಿಸಿದ್ದರು.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಶಂಕರನಾರಾಯಣ: ಇಲ್ಲಿನ ಮದರ್ ತೆರೇಸಾ ಹೈಸ್ಕೂಲ್ ವಿಭಾಗದ ವಾರ್ಷಿಕ ಬಹುಮಾನ ವಿತರಣೆ ಕಾರ್ಯಕ್ರಮದ ಅಂಗವಾಗಿ ಅಭ್ಯುದಯ – 2025 ವೈವಿಧ್ಯಮಯ ಕಾರ್ಯಕ್ರಮವು ಸಂಭ್ರಮ ಹಾಗೂ ಸಡಗರದಿಂದ ಹಮ್ಮಿಕೊಳ್ಳಲಾಯಿತು.  ಉಡುಪಿ ಜಿಲ್ಲಾ ಮಾಜಿ ವಿದ್ಯಾಂಗ ಉಪ ನಿರ್ದೇಶಕರಾದ ದಿವಾಕರ ಶೆಟ್ಟಿ ಹಾಗೂ ವಿಜಯ ಕರ್ನಾಟಕ ದಿನಪತ್ರಿಕೆಯ ಖ್ಯಾತ ಹಿರಿಯ ಪತ್ರಕರ್ತರಾದ ಜಾನ್ ಡಿಸೋಜ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ದಿವಾಕರ ಶೆಟ್ಟಿ ಅವರು ಮಾತನಾಡಿ, ವಿದ್ಯಾರ್ಥಿಗಳು ಶಾಲಾ ದಿನಗಳಲ್ಲಿ ಶಿಸ್ತು ಬದ್ಧ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಉತ್ತಮ ಗುರಿಯನ್ನು ಇರಿಸಿಕೊಂಡು ಶ್ರದ್ಧೆಯಿಂದ ಅಧ್ಯಯನ ಮಾಡಿ ಬದುಕಿನಲ್ಲಿ ಪ್ರಗತಿ ಸಾಧಿಸಬೇಕು ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಪ್ರಸಿದ್ಧ ಪತ್ರಕರ್ತ ಜಾನ್ ಡಿಸೋಜ ಅವರು ಮಾತನಾಡಿ, ಒಂದು ಮಗು ಪಠ್ಯದ ಶಿಕ್ಷಣವನ್ನಷ್ಟೇ ಪಡೆದರೆ ಶಿಕ್ಷಣ ಅಪೂರ್ಣವೆನಿಸುತ್ತದೆ. ಅದರ ಜೊತೆಗೆ ಜೀವನ ಮೌಲ್ಯಗಳು ಅಳವಡಿಸಿಕೊಳ್ಳುವುದು ಕೂಡಾ ಅತ್ಯವಶ್ಯಕ. ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ಬಗ್ಗೆ ನನಗೆ ಅಪಾರ ಹೆಮ್ಮೆ ಇದೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕುಂದಾಪುರದಿಂದ ನೆರಳಕಟ್ಟೆ ಕಡೆಗೆ ತೆರಳುತ್ತಿದ್ದ ಕೆಎಸ್ಆರ್‌ಟಿಸಿ ಬಸ್ಸಿಗೆ, ತಲ್ಲೂರು ಕಡೆ ಬರುವ ಟಿಪ್ಪರ್‌ ಡಿಕ್ಕಿಯಾದ ಪರಿಣಾಮ ಬಸ್‌ ಜಖಂಗೊಂಡು ಇಬ್ಬರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡ ಘಟನೆ ಸೋಮವಾರ ಸಂಜೆ ತಲ್ಲೂರು – ನೇರಳಕಟ್ಟೆಯ ಶೆಟ್ರಕಟ್ಟೆ ತಿರುವಿನಲ್ಲಿ ನಡೆದಿದೆ. ಅಪಘಾತದಲ್ಲಿ 12ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿದ್ದು ಎಲ್ಲರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಟಿಪ್ಪರ್ ಚಾಲಕ ರಾಘವೇಂದ್ರ ಎಂಬುವವರು ತನ್ನ ಅತೀ ವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿ ನೇರಳಕಟ್ಟೆಯ ಶೆಟ್ರಕಟ್ಟೆ ತಿರುವಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ಸಿಗೆ ಎದುರುಗಡಯಿಂದ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಬಲಬದಿ ಜಖಂ ಆಗಿದೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 15 ಪ್ರಯಾಣಿಕರಿಗೆ ಗಾಯಗೊಂಡಿದ್ದಾರೆ. ಅದರಲ್ಲಿ 3 ಜನ ವಿದ್ಯಾರ್ಥಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ವಿದ್ಯಾರ್ಥಿಗಳ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿದ್ದಾರೆ. ಓರ್ವ ವಿದ್ಯಾರ್ಥಿ ಅಪಾಯದಿಂದ ಪಾರಾಗಿದ್ದಾರೆ. ಉಳಿದ ಗಾಯಾಳುಗಳನ್ನು ಕುಂದಾಪುರದ ಸರಕಾರಿ ಹಾಗೂ ಆದರ್ಶ ಅಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ…

Read More