ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಒಂದು ಸರಕಾರಿ ಶಾಲೆ ಯಾವ ರೀತಿಯಲ್ಲಿ ಅಭಿವೃದ್ಧಿಗೊಳಿಸಲು ಸಾಧ್ಯವಿದೆ ಎಂಬುವುದನ್ನು ಚಿತ್ರಪಾಡಿ ಪಿ. ಎಂ ಶ್ರೀ ಶಾಲೆ ತೊರಿಸಿಕೊಟ್ಟಿದೆ ಎಂದು ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಇಲ್ಲಿನ ಸಾಲಿಗ್ರಾಮದ ಚಿತ್ರಪಾಡಿಯ ಪಿ.ಎಂ.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಸಂಭ್ರಮ ಜ್ಞಾನದ ಬೆಳಕಿಗೆ ನೂರರ ಹೊಳಪು ಎಂಬ ಶೀರ್ಷಿಕೆಯಡಿ ನಡೆದ ಕಾರ್ಯಕ್ರಮದಲ್ಲಿ ಪಿಎಂಶ್ರೀ ವಾಚನಾಲಯವನ್ನು ಉದ್ಘಾಟಿಸಿ ಮಾತನಾಡಿದರು. ಸರಕಾರಿ ಶಾಲಾ ಮಕ್ಕಳು ಯಾವದಕ್ಕೂ ಕಡಿಮೆ ಇಲ್ಲ ಅವರಲ್ಲಿ ನೈಜತೆಯ ಕೌಶಲ್ಯಾಭಿವೃದ್ಧಿ ಇದೆ ದೇಶ ಕಟ್ಟುವ ಸತ್ಚಿಂತನೆ ಇದೆ ಎಂದರಲ್ಲದೆ ಶತಮಾನ ಕಾಣುವುದು ಸುಲಭದ ಮಾತಲ್ಲ ಪ್ರಸ್ತುತ ಅದೆಷ್ಟೊ ಶಾಲೆಗಳು ಅವನತಿ ಕಾಣುವ ಕಾಲಘಟ್ಟದಲ್ಲಿ ಚಿತ್ರಪಾಡಿ ಶಾಲೆ ಹೊಸ ಆಶಾಭಾವನೆ ಸೃಷ್ಠಿಸಿದೆ ಎಂದರಲ್ಲದೆ ಶಿಕ್ಷಣ ಹೇಗಿರಬೇಕೆಂದರೆ ರಾಷ್ಟ್ರ ಸೇವೆಗೆ ನೈಪುಣ್ಯತೆ ಕಾಣುವ ಮಕ್ಕಳಾಗಿ ಹೊರಹೊಮ್ಮುವಾಗೆ ಇರಬೇಕು ಎಂದರು.

ಸಭೆಯ ಅಧ್ಯಕ್ಷತೆಯನ್ನು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ವಹಿಸಿದ್ದರು. ಕಾರ್ಯಕ್ರಮವನ್ನು ಕರ್ಣಾಟಕ ಬ್ಯಾಂಕ್ ಮಾಜಿ ಎಂ.ಡಿ ಮಹಾಬಲೇಶ್ವರ ಎಂ.ಎಸ್ ಉದ್ಘಾಟಿಸಿದರು.
ಇದೇ ವೇಳೆ ಪಿ.ಎಂ.ಶ್ರೀ ವಾಚನಾಲಯವನ್ನು ಸಂಸದರು ಉದ್ಘಾಟಿಸಿದರು. ಶತಮಾನೋತ್ಸವ ಕಟ್ಟಡವನ್ನು ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬೋಜನಾ ಶಾಲೆಯನ್ನು ಬೆಳಕು ಮನೆಯ ಸುಶೀಲ ಪೂಜಾರಿ, ಅಡುಗೆಕೋಣೆಯನ್ನು ಕಾಂಗ್ರೆಸ್ ಮುಖಂಡ ಎಂ.ಎ ಗಫೂರ್, ತರಗತಿ ಕೋಣೆಯನ್ನು ಇಂಜಿನಿಯರ್ ನಾಗರಾಜ್ ಸೋಮಯಾಜಿ, ನೂತನ ಬಾವಿಯನ್ನು ಉದ್ಯಮಿ ರೆಹೆಮತ್ ಸಾಹೇಬ್ ಗೆಂಡೆಕೆರೆ ಉದ್ಘಾಟಿಸಿದರು.
ಶಾಲಾ ಸ್ಮರಣಾ ಸಂಚಿಕೆಯನ್ನು ಮುಂಬೈ ಓಎನ್ ಜಿಸಿ ಇದರ ನಿವೃತ್ತ ಚೀಫ್ ಜನರಲ್ ಮ್ಯಾನೇಜರ್ ಬನ್ನಾಡಿ ನಾರಾಯಣ ಆಚಾರ್ ಬಿಡುಗಡೆಗೊಳಿಸಿದರು.
ಮುಖ್ಯ ಅಭ್ಯಾಗತರಾಗಿ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಅಧ್ಯಕ್ಷ ಡಾ. ಕೆ.ಎಸ್ ಕಾರಂತ್, ದೇಗುಲದ ಆಡಳಿತ ಮಂಡಳಿಯ ಸದಸ್ಯರಾದ ಕೆ.ಅನಂತಪದ್ಮನಾಭ ಐತಾಳ್, ಕರ್ಣಾಟಕ ಬ್ಯಾಂಕ್ ಮಂಗಳೂರು ಡೆಪ್ಯುಟಿ ಜನರಲ್ ಮ್ಯಾನೇಜರ್ ಗೋಪಾಲಕೃಷ್ಣ ಸಾಮಗ, ಹಿರಿಯ ನ್ಯಾಯವಾದಿ ಬಿ.ನಾಗರಾಜ್, ನಿವೃತ್ತ ಕೆನರಾ ಬ್ಯಾಂಕ್ ಉದ್ಯೋಗಿ ಕೃಷ್ಣಮೂರ್ತಿ ಐತಾಳ್,ಉದ್ಯಮಿ ನವೀನ್ ಸೋಮಯಾಜಿ, ಉದ್ಯಮಿ ಮನೋಹರ್ ಶೆಟ್ಟಿ ತೋನ್ಸೆ,ಸಾಲಿಗ್ರಾಮ ಪಟ್ಟಣಪಂಚಾಯತ್ ಸದಸ್ಯ ರಾಜು ಪೂಜಾರಿ, ಗುತ್ತಿಗೆದಾರ ಸುಬ್ರಾಯ ಆಚಾರ್ ಮಣೂರು, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಶಂಕರ್ ದೇವಾಡಿಗ,ಶಾಲಾ ಶತಮಾನೋತ್ಸವ ಸಮಿತಿ ಕೋಶಾಧಿಕಾರಿ ಕೃಷ್ಣಮೂರ್ತಿ ಮರಕಾಲ,ಉದ್ಯಮಿ ರವೀಂದ್ರ ನಾಯಕ್, ಶಾಲಾ ಮುಖ್ಯ ಶಿಕ್ಷಕಿ ಶಾಲಿನಿ,ನಿವೃತ್ತ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಕಾರಂತ್, ಅಕ್ಷರ ರಥ ಸಮಿತಿ ಅಧ್ಯಕ್ಷ ನಾಗರಾಜ ಗಾಣಿಗ ಉಪಸ್ಥಿತರಿದ್ದರು.
ಶಾಲಾ ದೈಹಿಕ ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ಸ್ವಾಗತಿಸಿದರು. ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಯೋಗೀಶ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ಶಿಕ್ಷಕಿ ಪಾರ್ವತಿ ನಿರೂಪಿಸಿದರು.
















