ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಿದ್ಯುತ್ ತಂತಿ ತಗುಲಿ ದಂಪತಿಗಳು ಸಾವನ್ನಪ್ಪಿದ ದಾರುಣ ಘಟನೆ ತಾಲೂಕಿನ ಕಟ್ ಬೆಲ್ತೂರು ಗ್ರಾಮದ ಸುಳ್ಸೆ ಎಂಬಲ್ಲಿ ಶುಕ್ರವಾರ ಸಂಜೆ ನಡೆದಿದೆ. ಘಟನೆಯಲ್ಲಿ ಸುಳ್ಸೆಯರ ಮನೆ ನಿವಾಸಿ ಮಹಾಬಲ ದೇವಾಡಿಗ (55) ಹಾಗೂ ಅವರ ಪತ್ನಿ ಲಕ್ಷ್ಮೀ ದೇವಾಡಿಗ (49) ದಂಪತಿಗಳು ಮೃತಪಟ್ಟಿದ್ದಾರೆ. ಮಹಾಬಲ ದೇವಾಡಿಗ ಅವರು ದಿನಗೂಲಿ ಕಾರ್ಮಿಕರಾಗಿದ್ದು ಸುಳ್ಸೆ ಕರಣಿಕರ ಮನೆಯ ಬಳಿಯ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮಹಾಬಲ ದೇವಾಡಿಗ ಅವರು ಸಮಯಕ್ಕೆ ಸರಿಯಾಗಿ ಮನೆಗೆ ಬಾರದ್ದರಿಂದ ಅನುಮಾನಗೊಂಡ ಪತ್ನಿ ಲಕ್ಷ್ಮೀ ದೇವಾಡಿಗ ಅವರು, ಪತಿ ನಿತ್ಯವೂ ಬರುತ್ತಿದ್ದ ಕಾಲುದಾರಿಯಲ್ಲಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮಹಾಬಲ ಅವರಿಗೆ ವಿದ್ಯುತ್ ತಂತಿ ತಗುಲಿ ಬಿದ್ದರುವುದನ್ನು ಗಮನಿಸಿದ ಪತ್ನಿಯು, ಪತಿಯನ್ನು ರಕ್ಷಿಸಲು ಕೂಗಾಡಿದ್ದಾರೆ. ಅಲ್ಲಿಯೇ ಬಿದ್ದಿದ್ದ ಮರದ ತುಂಡನ್ನು ಹಿಡಿದು ರಕ್ಷಣೆಗೆ ಧಾವಿಸಿದ್ದಾರೆ. ಆದರೆ ಅದು ನೀರು ಬಿದ್ದು ಒದ್ದೆಯಾಗಿದ್ದರಿಂದ ಅವರಿಗೂ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ./ ಕುಂದಾಪ್ರ ಡಾಟ್ ಕಾಂ/ ಸುಳ್ಸೆಯವರಾದ ಮಹಾಬಲ ದೇವಾಡಿಗ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಕ್ಷ್ಯುಲ್ಲಕ ಕಾರಣಕ್ಕೆ 20ಕ್ಕೂ ಹೆಚ್ಚು ಜಾನುವಾರುಗಳಿಗೆ ಗುಂಡಿಕ್ಕಿ ಘಟನೆ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಾಲ ಗ್ರಾಮದ ಅಂಗಡಿ ಜೆಡ್ಡು ಎಂಬಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವುದಾಗಿ ಬೆಳಕಿಗೆ ಬಂದಿದ್ದು, ಪರಿಣಾಮವಾಗಿ ನಾಲ್ಕು ದನಗಳು ಸತ್ತು 15 ದನಗಳು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಸೆ.23ರಂದು ಸ್ಥಳೀಯ ನಿವಾಸಿ ಗುಲಾಬಿ ಎಂಬುವರಿಗೆ ಸೇರಿದ ದನವೊಂದನ್ನು ಮೇಯಲು ಬಿಟ್ಟಿದ್ದು ಅದು ನರಸಿಂಹ ಎಂಬಾತನ ಗದ್ದೆಗೆ ಹೋಗಿತ್ತು. ಇದರಿಂದ ಆಕ್ರೋಶಿತಗೊಂಡ ನರಸಿಂಹ ತನ್ನ ನಾಡಕೋವಿಯಿಂದ ಗುಂಡಿಕ್ಕಿ ದನವನ್ನು ಸಾಯಿಸಿದ್ದಾನೆ. ಇದನ್ನು ಗಮನಿಸಿ ವಿಚಾರಿಸಲು ಹೋದಾಗ ಆರೋಪಿ ನರಸಿಂಹ ಗುಲಾಬಿ ಹಾಗೂ ಅವರ ಮನೆಯವರಿಗೆ ಕೋವಿಯಲ್ಲಿ ಗುರಿಯಿಟ್ಟು, ಈಗಾಗಲೇ 20ಕ್ಕೂ ಹೆಚ್ಚು ದನಗಳಿಗೆ ಗುಂಡಿಕ್ಕಿದ್ದೇನೆ. ಅದರಲ್ಲಿ ನಾಲ್ಕು ಸತ್ತಿವೆ. ಇನ್ನಳಿದವು ಸಾಯುತ್ತವೆ. ಜಾಗ್ರತೆ ಮಾಡದಿದ್ದಲ್ಲಿ ದನಗಳಿಗಾದ ಗತಿ ನಿಮಗೂ ಬರುತ್ತದೆ ಎಂದು ಜೀವ ಬೆದರಿಕೆ ಹಾಕಿರುವುದಾಗಿ ಗುಲಾಬಿ ನೀಡಿದ ದೂರಿನಂತೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪ್ರವಾದಿ ಮುಹಮ್ಮದ್ ಪೈಗಂಬರ್ ರವರ 1495 ಜನ್ಮದಿನಾಚರಣೆ ಈದ್ ಮಿಲಾದನ್ನು ಹೆನ್ನಾಬೈಲ್ ಮಸೀದಿ ಆವರಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಕುಂದಾಪುರ ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಚೋನಾಳಿಯವರು” ಪ್ರವಾದಿ ಮುಹಮ್ಮದರ ಚಿಂತನೆಗಳು ಸಾರ್ವಕಾಲಿಕ ಅನ್ವಯವಾಗುವಂತದ್ದು. ಅವರ ಚರಿತ್ರೆಯನ್ನು ಓದಿದರೆ ಅವರು ಲೋಕದ ಪಾಲಿನ ಅನುಗ್ರಹ ಎಂಬ ದೈವೀಕ ವಾಣಿ ಸತ್ಯವೆನಿಸುತ್ತದೆ. ಹಿಂದೂ ಮುಸ್ಲಿಮರು ಒಂದಾಗಿ ಬದುಕಿದಾಗಲೇ ದೇಶ ತಲುಪಬೇಕಾದ ಎತ್ತರವನ್ನು ತಲುಪುತ್ತದೆ. ವಿಶ್ವದ ಅತ್ಯಂತ ದೊಡ್ಡ ಸಮುದಾಯಗಳು ಎಲ್ಲ ಭಿನ್ನತೆಗಳನ್ನು ಮರೆತು ಒಂದಾಗುವುದು ಅಸಾಧ್ಯವೇನಲ್ಲ. ಆದರೆ ಅದಕ್ಕೆ ಪ್ರಬುದ್ಧ ಚಿಂತಕರ ಸಮೂಹ ಬೇಕಿದೆ. ಪ್ರವಾದಿ ಮುಹಮ್ಮದರು ಸೇರಿದಂತೆ ಎಲ್ಲ ಕಾಲದಲ್ಲೂ ಬಂದ ದೇವದೂತರು, ದಾರ್ಶನಿಕರು, ಋಷಿ ಮುನಿಗಳ ಬದುಕು ಮತ್ತು ಸಂದೇಶಗಳ ಅಧ್ಯಯನ ನಿಷ್ಪಕ್ಷಪಾತವಾಗಿ ನಡೆದರೆ ಸಮಾಜ ಪ್ರಬುದ್ಧವಾಗಿ ಉನ್ನತ ಚಿಂತನೆಯು ಖಂಡಿತ ಮೂಡಿ ಸಾಮಾಜಿಕ ಸೌಹಾರ್ದ ನೆಲೆಯಾಗುತ್ತದೆ. ಸೌಹಾರ್ದದ ತುಡಿತ ಕಾಲದ ಅಗತ್ಯ. ಸೌಹಾರ್ದವಿಲ್ಲದ ಸಮಾಜ ಸರಾಗವಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: 2021 ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಮಂಗಳೂರು ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ ಪಿ ಅವರು ಆಯ್ಕೆಯಾಗಿದ್ದಾರೆ. ಮಂಗಳೂರು ವಿಭಾಗದ ಉಪ ವಲಯ ಸಂರಕ್ಷಣಾಧಿಕಾರಿಯಾಗಿದ್ದ ಶ್ರೀಧರ್ ಪಿ ಅವರನ್ನು ಅರಣ್ಯ ರಕ್ಷಣೆ ಮತ್ತು ಅಭಿವೃದ್ಧಿ ವಿಭಾಗದ ಅತ್ಯುತ್ತಮ ಕಾರ್ಯಕ್ಕಾಗಿ 2021ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕಾಗಿ ಆಯ್ಕೆ ಮಾಡಲಾಗಿದೆ. ಮೂಲತಃ ಬೈಂದೂರು ಪಡುವರಿಯವರಾದ ಅವರು ಪ್ರಸ್ತುತ ಅವರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ಅರಣ್ಯ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ ಶುಕ್ರವಾರ ಆಯೋಜಿಸಿದ್ದ “ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭ”ದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶ್ರೀಧರ ಪಿ ಅವರಿಗೆ ಪದಕ ಪ್ರದಾನ ಮಾಡಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಿತೀಶ್ ಪಿ ಬೈಂದೂರು ಇವರ ಛಾಯಾಚಿತ್ರ ಕ್ಷೇತ್ರದ ಸಾಧನೆಗಾಗಿ, ಪಬ್ಲಿಕ್ ರಿಲೇಷನ್ ಸೊಸೈಟಿ ಆಫ್ ಇಂಡಿಯಾ, ನವದೆಹಲಿಯಲ್ಲಿ ಆಯೋಜಿಸಿದ ಕೌಟಿಲ್ಯ ಆವಾರ್ಡ್ಸ್ – ೨೦೨೩ರ ’ಯಂಗ್ ಫೋಟೋಗ್ರಾಫರ್ ಆಫ್ ದ ಇಯರ್’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಬೈಂದೂರಿನ ಶಿ ಕಲಾವತಿ ಮತ್ತು ಪಿ. ಸುಬ್ರಾಯ ದಂಪತಿಯ ಪುತ್ರ. ಪ್ರಸ್ತುತ ಡಾ. ಬಿ. ಶೈಲಶ್ರೀ ಅವರ ಮಾರ್ಗದರ್ಶನದಲ್ಲಿ ಛಾಯಾಚಿತ್ರ ಪತ್ರಿಕೋದ್ಯಮದ ಮೇಲೆ ಪಿ.ಎಚ್‌ಡಿ ವ್ಯಾಸಾಂಗ ಮಾಡುತ್ತಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಡುಪಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯಆಯೋಜಿಸಿದ ಜಿಲ್ಲಾ ಮಟ್ಟದ ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ವಿಜೇತರಾದ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಕಾಲೇಜಿನ ಬಾಲಕರ ವಿಭಾಗದಲ್ಲಿ ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದ ಪ್ರಜ್ವಲ್ ಪೂಜಾರಿ,ದ್ವಿತೀಯ ಪಿ.ಯು.ಸಿ.ವಾಣಿಜ್ಯ ವಿಭಾಗದ ರುಪಿನ್,ದ್ವಿತೀಯ ಪಿ.ಯು.ಸಿ.ವಿಜ್ಞಾನ ವಿಭಾಗದ ಪ್ರಜ್ವಲ್ ಜಿ.,ಪ್ರಥಮ ಪಿ.ಯು.ಸಿ.ವಿಜ್ಞಾನ ವಿಭಾಗದ ರಿತೇಶ್ ಹಾಗೂ ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಪಿ.ಯು.ಸಿ.ವಿಜ್ಞಾನ ವಿಭಾಗದ ಸಂಜನಾ ಕಟ್ಟೆ,ಮತ್ತು ದ್ವಿತೀಯ ಪಿ.ಯು.ಸಿ.ವಿಜ್ಞಾನ ವಿಭಾಗದ ಅರ್ಫಾ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿರುತ್ತಾರೆ. ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ, ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಂದಿನ ಪೀಳಿಗೆಯನ್ನು ತಿದ್ದುವ ಕೆಲಸ ಮಾಡದಿದ್ದರೆ ಭವಿಷ್ಯದ ಸಮಾಜ ಕಲ್ಪಿಸಿಕೊಳ್ಳುವುದು ಕಷ್ಟ. ಈ ನಿಟ್ಟಿನಲ್ಲಿ ಮೌಲ್ಯಾಧಾರಿತ ಶಿಕ್ಷಣದ ಅಗತ್ಯವಿದ್ದು, ರೋಟರಿ ಜಿಲ್ಲೆಯಿಂದ ಮೌಲ್ಯಾಧಾರಿತ ಶಿಕ್ಷಣ ನೀಡಲು ಒತ್ತು ನೀಡಲಾಗುತ್ತಿದೆ ಎಂದು ರೋಟರಿ ಜಿಲ್ಲೆ 3182ರ ಗವರ್ನರ್ ಬಿ.ಸಿ. ಗೀತಾ ಹೇಳಿದರು. ಅವರು ಇಲ್ಲಿನ ಅಂಬಿಕಾ ಇಂಟರ್ನ್ಯಾಷನಲ್ನಲ್ಲಿ ಬುಧವಾರ ಜರುಗಿದ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಈ ಭಾರಿ ನಾಲ್ಕು ಯೋಜನೆ ಹಮ್ಮಿಕೊಳ್ಳಲಾಗುತ್ತಿದ್ದು, ಮಣ್ಣಿನ ಫಲವತ್ತತೆಯ ಪರೀಕ್ಷೆ, ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಬೈಂದೂರು ರೋಟರಿ ಕ್ಲಬ್ ಗುಣಾತ್ಮಕ ಕಾರ್ಯಕ್ರಮ ಆಯೋಜನೆಗೆ ಒತ್ತು ನೀಡಿರುವುದು ಸಂತಸ ತಂದಿದೆ ಎಂದರು. ಬೈಂದೂರು ರೋಟರಿ ಕ್ಲಬ್ಗೆ ಭೇಟಿ ನೀಡಿದ ಗವರ್ನರ್ ಅವರನ್ನು ಸ್ವಾಗತಿಸಿಕೊಳ್ಳಲಾಯಿತು. ಬಳಿಕ ಶಿರೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಳವಡಿಸಲಾದ ಸ್ಯಾನಿಟರಿ ನ್ಯಾಪ್ಕಿನ್ ಡೆಸ್ಟ್ರಾಯ್ ಯುನಿಟ್ ಉದ್ಘಾಟಿಸಿದರು. ಬಳಿಕ ಕ್ಲೋಸ್ ಡೋರ್ ಮಿಟಿಂಗ್, ಕ್ಲಬ್ ಅಸ್ಸೆಂಬ್ಲಿಯಲ್ಲಿ ಭಾಗವಹಿಸಿದರು. ಬೈಂದೂರು ರೋಟರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಈ ವರ್ಷದ ಮೊದಲ ಕಂಬಳವು ಕಂಬಳದ ಭೀಷ್ಮ ದಿ.ಸುರೇಶ ಪೂಜಾರಿ ಕಾಡಿನತಾರು ಸ್ಮರಣಾರ್ಥ ಬೈಂದೂರು ತಾಲೂಕು ಕಂಬಳ ಸಮಿತಿ ಸಹಕಾರದಲ್ಲಿ ಮಿಯ್ಯಾಣಿ ಕಾಡಿನತಾರು ಸೂರ್ಯ ಕಂಬಳೋತ್ಸವ ಸಂಭ್ರಮ ಸಡಗರದಲ್ಲಿ ನೆರವೇರಿತು. ಕೇಂದ್ರ ಆದಾಯ ತೆರಿಗೆ ಮೇಲ್ಮನವಿ ಪ್ರಾಧಿಕಾರದ ಸದಸ್ಯ ಯು.ಎಸ್.ಯೋಗೀಶ ಕುಮಾರ್ ಕಂಬಳೋತ್ಸವ ಉದ್ಘಾಟಿಸಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಾಂತರಾಮ ಶೆಟ್ಟಿ ಬಾರ್ಕೂರು, ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಪೊಲೀಸ್ ಸಿಬ್ಬಂದಿ ಶಂಕರ ಪೂಜಾರಿ ಕಾಡಿನತಾರು ಹಾಗೂ ಮರಳಿ ಮನಸಾಗಿದೆ ಸಿನಿಮಾ ತಂಡ ಮತ್ತಿತರರು ಉಪಸ್ಥಿತರಿದ್ದರು. ಸಂತೋಷ ಕಾಡಿನತಾರು ಸಂಘಟಿಸಿದ್ದರು. ಕಂಬಳೋತ್ಸವದಲ್ಲಿ ಸುಮಾರು ಜತೆ ಕೋಣಗಳು 50 ಪಾಲ್ಗೊಂಡಿದ್ದವು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜಿಲ್ಲೆಯ ಮೂಲಭೂತ ಅವಶ್ಯಕತೆಗಳ ಪೂರೈಕೆಯ ಸಮಸ್ಯೆಗೆ ಇಲ್ಲಿಯ ಐದು ಜನ ಬಿಜೆಪಿ ಶಾಸಕರ ನಿಷ್ಕ್ರೀಯತೆಯೇ ಕಾರಣ. ಜನ ಶಾಸಕರುಗಳನ್ನು ಆಯ್ಕೆ ಮಾಡಿದ್ದು ಅವರ ಬೇಡಿಕೆ, ಆಗ್ರಹ, ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಶ್ನೆ ಹಾಕಿ, ಶೂನ್ಯ ವೇಳೆ, ನಿಯಮ 330ರ ಅಡಿ ಚರ್ಚಿಸಿ ಸರ್ಕಾರದ ಗಮನಕ್ಕೆ ತಂದು ಪರಿಹಾರ ಒದಗಿಸಿಕೊಡಲು. ಆದರೆ ಜಿಲ್ಲೆಯ ಶಾಸಕರುಗಳು ಪ್ರಾಮಾಣಿಕ ಪ್ರಯತ್ನ ಮಾಡುವುದನ್ನು ಬಿಟ್ಟು ಧರಣಿ ನಿರತರ ಜೊತೆ ಕೂತು ಫೋಟೋ ತೆಗೆಸಿಕೊಳ್ಳುವ ರಾಜಕಾರಣ ಮಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆರೋಪಿಸಿದ್ದಾರೆ. ಮರಳು, ಜಲ್ಲಿ, ಕಲ್ಲು, ಮಣ್ಣು, ಚಿಪ್ಪು ಮೊದಲಾದವುಗಳ ಸಾಗಣಿಕೆಗೆ ಕಾನೂನು ಮೀರಿ ಅವಕಾಶ ನೀಡಲು ಜಿಲ್ಲಾಡಳಿತ, ಪೊಲೀಸ್ ಅಥವಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರಿಗೂ ಸಾಧ್ಯವಿಲ್ಲ. ಇವರ ಕೆಲಸ ಶಾಸಕಾಂಗ ರೂಪಿಸಿದ ಕಾನೂನುಗಳನ್ನು ಪಾಲಿಸುವುದು. ಕರಾವಳಿ ಜಿಲ್ಲೆಯ ಬಹುವರ್ಷಗಳ ಗಣಿ ಮತ್ತು ಖನಿಜ ಕಾಯಿದೆಯಲ್ಲಿನ ಸಡಿಲೀಕರಣದ ಬೇಡಿಕೆಗೆ ಸ್ಪಂದಿಸಬೇಕಾದ ಶಾಸನ ಸಭೆಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜಿಲ್ಲೆಯ ಲಾರಿ ಚಾಲಕ – ಮಾಲೀಕರ ಸಂಕಷ್ಟಗಳಿಗೆ ಸ್ಪಂದಿಸದ ಜಿಲ್ಲಾಡಳಿತದ ವಿರುದ್ಧ ಕೋಟ, ಕೋಟೇಶ್ವರ, ಹೆಮ್ಮಾಡಿ, ಬೈಂದೂರು, ಬ್ರಹ್ಮಾವರ, ಕಾರ್ಕಳ ಸೇರಿದಂತೆ ವಿವಿಧ ಭಾಗಗಳಲ್ಲಿ ಲಾರಿ ಮಾಲೀಕರು ಹಾಗೂ ಚಾಲಕರು ಕಟ್ಟಡ ಸಾಮಾಗ್ರಿ ಸಾಗಾಟ ಸ್ಥಗಿತಗೊಳಿಸಿ ಬುಧವಾರದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ. ಮರಳು, ಕಲ್ಲು, ಕಬ್ಬಿಣ, ಕೆಂಪು ಕಲ್ಲು, ಜೆಲ್ಲಿ, ಕೆಂಪು ಮಣ್ಣು ಸಾಗಿಸುವ ವ್ಯವಹಾರದಲ್ಲಿ 5000ಕ್ಕೂ ಅಧಿಕ ವಾಹನಗಳು ತೊಡಗಿಕೊಂಡಿದೆ. ಸಾಗಾಟ ಪರವಾನಿಗೆ, ಟ್ರಿಪ್ ಶೀಟ್ ಮೊದಲಾದ ಕಾರಣಗಳನ್ನು ಮುಂದೊಡ್ಡಿ ಪೊಲೀಸರು ವಾಹನ ವಶಪಡಿಸಿಕೊಳ್ಳುತ್ತಿದ್ದಾರೆ. ಲಾರಿ ಮಾಲಿಕರಿಗೆ 50,000ಕ್ಕೂ ಅಧಿಕ ದಂಡ ವಿಧಿಸುತ್ತಿದ್ದಾರೆ. ವಾಸ್ತವ ಅರಿವಿರುವ ಸರಕಾರ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಸ್ಪಂದಿಸದೇ ಮೌನ ವಹಿಸಿದ್ದು, ಲಾರಿ ಮಾಲೀಕ ಚಾಲಕರನ್ನು ಸಂಕಷ್ಟಕ್ಕೆ ನೂಕಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದ್ದಾರೆ. ಕೂಲಿ ಕಾರ್ಮಿಕರಿಗೆ ಉದ್ಯೋಗವಿಲ್ಲ:ಜಿಲ್ಲಾಡಳಿತ ಕಾನೂನು ಬಿಗುಗೊಳಿಸಿರುವುದರಿಂದ ಮರಳು, ಕಲ್ಲು, ಕೆಂಪು ಕಲ್ಲು, ಜೆಲ್ಲಿ, ಕೆಂಪು ಮಣ್ಣು ಮೊದಲಾದ ಕಟ್ಟಡ ಸಾಮಾಗ್ರಿಗಳನ್ನು ತೆಗೆಯುವ ಕಾರ್ಯದಲ್ಲಿ…
