ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಅವರು ಕನ್ಯಾನ ಶಾಲೆ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮೇ.10ರಂದು ನಡೆಯಲಿರುವ ಚುನಾವಣೆಗೆ ಸಿದ್ಧರಾಗಿರುವ ಅಧಿಕಾರಿಗಳು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು ಹಾಗೂ ಬೈಂದೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸ್ಥಾಪಿಸಿರುವ ಮಸ್ಟರಿಂಗ್ ಕೇಂದ್ರದಲ್ಲಿ ಹಾಜರಾಗಿ ತಮ್ಮತಮ್ಮ ಕೇಂದ್ರಗಳಿಗೆ ಅಗತ್ಯವಿರುವ ಮತದಾನ ಯಂತ್ರ ಮತ್ತು ಅನ್ಯ ಪರಿಕರಗಳನ್ನು ಸ್ವೀಕರಿಸಿ, ತಮಗೆ ನಿಗದಿಗೊಳಿಸಿದ ವಾಹನಗಳಲ್ಲಿ ತೆರಳಿದರು. ಕುಂದಾಪುರ ಚುನಾವಣಾಧಿಕಾರಿ ರಶ್ಮಿ ಅವರ ನೇತೃತ್ದಲ್ಲಿ ಕುಂದಾಪುರ ಕ್ಷೇತ್ರದ ಮಸ್ಟರಿಂಗ್ ಭಂಡಾರ್ಕಾರ್ಸ್ ಕಾಲೇಜಿನ ಆರ್.ಎನ್.ಶೆಟ್ಟಿ ಹಾಲ್ನಲ್ಲಿ ನಡೆದರೆ, ಬೈಂದೂರು ಚುನಾವಣೆ ಜಗದೀಶ ಗಂಗಣ್ಣನವರ್ ನೇತೃತ್ವದಲ್ಲಿ ಬೈಂದೂರು ಕ್ಷೇತ್ರದ ಮಸ್ಟರಿಂಗ್ ಕಾಲೇಜಿನ ಹಾಲ್ನಲ್ಲಿ ನಡೆಯಿತು. ಅಧಿಕಾರಿ ಹಾಗೂ ಸಿಬ್ಬಂದಿಗಳು ಮತಯಂತ್ರ ಸಹಿತ ಮತಕೇಂದ್ರಕ್ಕೆ ತೆರಳಿದರು. ಸಿಬ್ಬಂದಿ ಹಾಜರಾತಿ ದಾಖಲಿಸಲು ಮತ್ತು ಪರಿಕರಗಳನ್ನು ವಿತರಿಸಲು ಸೆಕ್ಟರ್ ಅಧಿಕಾರಿಗಳ ನೇತೃತ್ವದ ವಿಭಾಗಗಳನ್ನು ತೆರೆಯಲಾಗಿತ್ತು. ಅವುಗಳಿಗೆ ಸಂಬಂಧಿಸಿದ ವಿವರಗಳ ಫಲಕಗಳನ್ನು ಅಲ್ಲಲ್ಲಿ ಪ್ರದರ್ಶಿಸಲಾಗಿತ್ತು. ಬೆಳಗ್ಗಿನಿಂದ ಬಂದ ಸಿಬ್ಬಂದಿ ಫಲಾಹಾರ ಪೂರೈಸಿ, ತಮ್ಮ ವಿಭಾಗದಲ್ಲಿ ಸೇರಿ ಪರಸ್ಪರ ಪರಿಚಯ ಮಾಡಿಕೊಂಡು, ಪರಿಕರಗಳನ್ನು ಸ್ವೀಕರಿಸಿ, ಪರಿಶೀಲನೆ ನಡೆಸಿದರು. 246 ಮತಗಟ್ಟೆಗಳಿಗೆ ನಿಯೋಜಿಸಲಾದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಚಿತ್ತೂರು ಸರಕಾರಿ ಪ್ರೌಢಶಾಲೆ ಶಾಲೆಯ ವಿದ್ಯಾರ್ಥಿನಿ ಚೈತನ್ಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ರಲ್ಲಿ 623 ಅಂಕ ಪಡೆದು ರಾಜ್ಯಕ್ಕೇ ತೃತೀಯ ಸ್ಥಾನ ಪಡೆದಿದ್ದಾಳೆ. ಏಳನೇ ತರಗತಿಯ ತನಕ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿನಿ ಯಾವುದೇ ಟ್ಯೂಷನ್ ತರಬೇತಿ ಇಲ್ಲದೆ ತನ್ನ ಸ್ವಂತ ಪರಿಶ್ರಮದಿಂದ ಸಾಧನೆ ಮಾಡಿದ ಗ್ರಾಮೀಣದ ಭಾಗದ ಪ್ರತಿಭೆ. ಬೆಳ್ಳಾಲ ಗ್ರಾಮದ ನಂದ್ರೋ ಳ್ಳಿ ಸುಧಾಕರ ಆಚಾರ್ಯ ಮತ್ತು ಯಶೋಧ ದಂಪತಿಯ ಪುತ್ರಿ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಆಂಗ್ಲಾ ಮಧ್ಯಮ ಪ್ರೌಢಶಾಲಾ ವಿದ್ಯಾರ್ಥಿನಿ ಶ್ರೀಲಹರಿ ಎಸೆಸೆಲ್ಸಿ ಪರೀಕ್ಷೆಯಲ್ಲಿ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಈಕೆ ಹೆಮ್ಮಾಡಿ ಶ್ರೀಧರ ದೇವಾಡಿಗ ಹಾಗೂ ಲಲಿತಾ ದಂಪತಿಯ ಕಿರಿಯ ಪುತ್ರಿ. ಎಸ್ಸೆಸ್ಎಲ್ಸಿ ಪರೀಕ್ಷೆಯಲ್ಲಿ 620ಕ್ಕೂ ಹೆಚ್ಚಿನ ಅಂಕದ ನಿರೀಕ್ಷೆ ಮಾಡಿದ್ದೆ. ನಿರೀಕ್ಷೆಗಿಂತ ಹೆಚ್ಚಿನ ಅಂಕ ಬಂದಿರುವುದು ಖುಷಿ ತಂದಿದ್ದು, ಇನ್ನೂ ಹೆಚ್ಚಿನ ಸಾಧನಗೆ ಪ್ರೇರಣೆ ನೀಡಿದೆ. ಮುಂದೆ ಪಿಸಿಎಂಬಿ ತೆಗೆದುಕೊಂಡು ವೈದ್ಯಳಾಗಬೇಕು ಎನ್ನುವು ಕನಸಿದೆ. ಡ್ರಾಯಿಂಗ್, ಓದು, ಸಾಹಿತ್ಯ ಡಾನ್ಸ್ ಇತರೆ ಹವ್ಯಾಸಗಳಾಗಿದ್ದು, ಮನೆಯಲ್ಲಿ ಪೋಷಕರ ಪ್ರೋತ್ಸಾಹ, ಶಾಲಾ ಶಿಕ್ಷಕರ ಮಾರ್ಗದರ್ಶನ ಯಶಸ್ಸಿನ ಹಿಂದಿದೆ. ಯಾವುದೇ ಟೂಶನ್ಗೆ ಹೋಗದೆ ಅಂದಿನ ಪಾಠ ಅಂದೇ ಓದುವ ಜೊತೆ ಬೆಳಗ್ಗೆ ಹಾಗೂ ಸಂಜೆ ನಿಯಮಿತ ಓದು ಎಸ್ಸೆಸ್ಎಲ್ಸಿಯಲ್ಲಿ 624 ಅಂಕ ಪಡೆಯಲು ಕಾರಣ ಎಂದು ಶ್ರೀಲಹರಿ ತಿಳಿಸಿದ್ದಾಳೆ. ಮಗಳ ಓದಿಗೆ ಬೆಂಬಲವಾಗಿ ಇದ್ದರೂ ಇಷ್ಟೇ ಅಂಕಪಡೆಯಬೇಕು. ಹೀಗೆ ಓದಬೇಕು ಅಂತ ಮಗಳ ಮೇಲೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಮದರ್ ತೆರೆಸಾ ಮೆಮೋರಿಯಲ್ ಸ್ಕೂಲ್ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಅಕ್ಷಿತಾ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ 6ನೇ ರ್ಯಾಂಕ್ ಹಾಗೂ ತಾಲೂಕು ಮಟ್ಟದಲ್ಲಿ 2ನೇ ರ್ಯಾಂಕ್ ಪಡೆದಿದ್ದಾಳೆ. ವಿದ್ಯಾರ್ಥಿನಿಗೆ ಸಂಸ್ಥೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಹಾಗೂ ಬೋಧಕ ಬೋಧಕೇತರ ಸಿಬ್ಬಂಧಿಯವರು ಅಭಿನಂದಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಮದರ್ ತೆರೆಸಾ ಮೆಮೋರಿಯಲ್ ಸ್ಕೂಲ್ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು 2022-23ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ಪಡೆದಿದ್ದಾರೆ. 35 ವಿದ್ಯಾರ್ಥಿಗಳಲ್ಲಿ 23 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 12 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಅಕ್ಷಿತಾ 620 ಅಂಕ ಗಳಿಸಿ ರಾಜ್ಯ ಮಟ್ಟದಲ್ಲಿ 6ನೇ ರ್ಯಾಂಕ್ (RANK) ಹಾಗೂ ತಾಲೂಕು ಮಟ್ಟದಲ್ಲಿ 2ನೇ ರ್ಯಾಂಕ್ ಪಡೆದಿರುತ್ತಾರೆ. ರಕ್ಷಾ 612, ಅಮೋದ್ 603, ಇಂಚರಾ 603, ಸೌಪೂರ್ಣಿಕ 602, ಗಾನವಿ 601, ಆರ್ಯ ಹಾಲಂಬಿ 592, ಮಯೂರ್ ಜಿ 589, ಸನ್ನಿಧಿ 586, ಪ್ರಜ್ವಲ್ 569, ಆಶಿಕ್ 563, ಫಾಹಿಮಾ ಜೈನಬಾ 560, ಸಾತ್ವಿಕ್ 559, ಯೂಶಾ 558, ಸದಾಶಿವ 557, ಸಾರಿಯಾ 556, ರಜತ್ 552, ಶಿವಶಂಕರ್ 548, ಸಮೀಕ್ಷಾ 546, ಅನನ್ಯ 544, ಪ್ರಥ್ವಿರಾಜ್ 543, ಸುಕೀರ್ತಿ 533, ಶಮನ್ 532.. ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಅವರು ಚುನಾವಣಾ ಬಹಿರಂಗ ಪ್ರಚಾರದ ಕೊನೆಯ ದಿನ ಅಳ್ವೆಕೋಡಿಯಿಂದ ಕರ್ಕಿಕಳಿಯ ತನಕ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು. ಈ ಸಂದರ್ಭ ಅವರು ಮಾತನಾಡಿ, ಕಾಂಗ್ರೆಸ್ ಸರಕಾರ ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತಲೇ ಬಂದಿದೆ. ಕರಾವಳಿ ಭಾಗದಲ್ಲಿ ಮೀನುಗಾರರ ಬೇಡಿಕೆಗಳಿಗೆ ವಿಶೇಷ ಆದ್ಯತೆ ನೀಡಿ ಅದನ್ನು ಈಡೆರಿಸುವ ಕೆಲಸ ಮಾಡಲಾಗಿದೆ. ಬೈಂದೂರು ವಿಧಾನಸಬಾ ಕ್ಷೇತ್ರದಲ್ಲಿ ನಾಲ್ಕು ಅವಧಿಗೆ ಶಾಸಕನಾದಾಗಲೂ ಎಲ್ಲಾ ಹಂತದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಕಾಂಗ್ರೆಸ್ ಗ್ಯಾರೆಂಟಿ ಹಾಗೂ ಬೈಂದೂರು ಕ್ಷೇತ್ರದ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಬೆಂಬಲಿಸಿ ಎಂದರು. ರೋಡ್ ಶೋ ವೇಳೆ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಮದನ್ ಕುಮಾರ್ ಉಪ್ಪುಂದ, ಪ್ರಚಾರ ಸಮಿತಿ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಸೇರಿದಂತೆ ವಿವಿಧ ನಾಯಕರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: 2022-23ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಉಪ್ಪುಂದ ಜ್ಯೂನಿಯರ್ ಕಾಲೇಜಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಅಮೂಲ್ಯ ರಾಜ್ಯಕ್ಕೆ 3ನೇ ಸ್ಥಾನ ಪಡೆಯುವ ಮೂಲಕ ಸಾಧನೆಗೈದಿದ್ದಾಳೆ. 625 ಅಂಕಗಳಲ್ಲಿ 623 ಅಂಕ ಗಳಿಸಿರುವ ಅಮೂಲ್ಯ, ಕನ್ನಡ – 125, ಹಿಂದಿ – 100, ಇಂಗ್ಲೀಷ್ – 100, ಸಮಾಜವಿಜ್ಞಾನ – 100, ವಿಜ್ಞಾನ – 100 ಹಾಗೂ ಗಣಿತದಲ್ಲಿ 98 ಅಂಕ ಗಳಿಸಿದ್ದಾಳೆ. ಈಕೆ ಬಿಜೂರು ಮುರ್ಗೋಳಿಹಕ್ಲು ನಿವಾಸಿ, ಬವಳಾಡಿ ಸ.ಹಿ.ಪ್ರಾ ಶಾಲಾ ಮುಖ್ಯ ಶಿಕ್ಷಕ ಎನ್.ಕೆ. ಬಿಲ್ಲವ ಹಾಗೂ ಜ್ಯೋತಿ ದಂಪತಿಗಳ ಪುತ್ರಿಯಾಗಿದ್ದಾಳೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಪ್ರಧಾನಿ ನರೇಂದ್ರ ಮೋದಿಯವರೇ ಹಿಂದೆ ನಿಂತು ಆಯ್ಕೆ ಮಾಡಿದ ಅಭ್ಯರ್ಥಿ ಗುರುರಾಜ ಗಂಟಿಹೊಳೆ. ಅವರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. 25 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಗುರುರಾಜ ಗಂಟಿಹೊಳೆಯವರು ಜಯ ಸಾಧಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಚುನಾವಣೆ ಸಹ ಉಸ್ತುವಾರಿ ಕೆ.ಅಣ್ಣಾಮಲೈ ಹೇಳಿದರು. ಸೋಮವಾರ ಬೆಳಗ್ಗೆ ತ್ರಾಸಿಯಿಂದ ಬೈಂದೂರಿನ ವರೆಗೂ ಬೃಹತ್ ರೋಡ್ ಶೋ, ಬೈಕ್ ರ್ಯಾಲಿ ನಡೆಸಿ, ಅನಂತರ ಮಾತನಾಡಿದ ಅವರು, ಗುರುರಾಜ ಗಂಟಿಹೊಳೆಯವರ ಆಯ್ಕೆ ಕೇವಲ ಯಾರೋ ಒಂದಿಬ್ಬರು ಮಾಡಿದ್ದಲ್ಲ. ಪಕ್ಷವೇ ಸಾಮಾನ್ಯ ಕಾರ್ಯಕರ್ತನ್ನು ಗುರುತಿಸಿ ಅವಕಾಶ ನೀಡಿದೆ. ಇದರ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರಿದ್ದಾರೆ ಮತ್ತು ಅವರ ಅಭಿವೃದ್ಧಿಯ ಕನಸುಗಳು ಇವೆ. ನಾವೆಲ್ಲರೂ ಒಟ್ಟಾಗಿ ಗುರುರಾಜ ಗಂಟಿಹೊಳೆ ಅವರನ್ನು ಗೆಲ್ಲಿಸೊಣ ಎಂದು ಕರೆ ನೀಡಿದರು. ಕ್ಷೇತ್ರದಲ್ಲಿ ಬಡವ, ಶ್ರೀಮಂತ, ಶ್ರಮೀಕರು, ರೈತರು, ಕಾರ್ಮಿಕರು ಹೀಗೆ ಸಾಮಾನ್ಯರಿಂದ ಹಿಡಿದು ಎಲ್ಲರ ಬೆಂಬಲ ಗುರುರಾಜ ಗಂಟಿಹೊಳೆಯವರ ಮೇಲಿದೆ. ಬಿಜೆಪಿ ಪಕ್ಷ ಸಾಮಾನ್ಯರಿಗೂ ಸ್ಥಾನಮಾನ ನೀಡುತ್ತದೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಂಗಳೂರು: 2022-23ನೇ ಸಾಲಿನ ಎಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಶೇ.83.89ರಷ್ಟು ಫಲಿತಾಂಶ ದಾಖಲಾಗಿದೆ. ನಾಲ್ವರು ವಿದ್ಯಾರ್ಥಿಗಳು ಪೂರ್ಣ ಅಂಕ ಗಳಿಸಿ ಸಾಧನೆ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಶೇ 96.8% ರಷ್ಟು, ಫಲಿತಾಂಶ ಪಡೆದು ಪ್ರಥಮ ಸ್ಥಾನದಲ್ಲಿದ್ದರೆ, ಮಂಡ್ಯ 96.74 ದ್ವಿತೀಯ , ಹಾಸನ ಮೂರನೇ ಸ್ಥಾನದಲ್ಲಿದೆ. ಯಾದಗಿರಿ ಶೇ 75.49 ಫಲಿತಾಂಶದೊಂದಿಗೆ ಕೊನೆಯ ಸ್ಥಾನದಲ್ಲಿದೆ. ಇನ್ನು ಉಡುಪಿ 18 ಹಾಗೂ ದ.ಕ 19ನೇ ಸ್ಥಾನದಲ್ಲಿದೆ. ಮಲ್ಲೇಶ್ವರಂನಲ್ಲಿರುವ ಪ್ರೌಢ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿ(ಕೆಎಸ್ ಇಎಬಿ ) ಪತ್ರಿಕಾಗೋಷ್ಟಿ ಫಲಿತಾಂಶ ಪ್ರಕಟಿಸಿದೆ. ಪ್ರತಿಶತ ಅಂಕ ಪಡೆದ ವಿದ್ಯಾರ್ಥಿಗಳು:ಭೂಮಿಕಾ – ನ್ಯೂ ಮೆಕಾಲೆ ಇಂಗ್ಲಿಷ್ ಹೈಸ್ಕೂಲ್ ಹೊಸೂರುಯಶಶ್ ಗೌಡ – ಚಿಕ್ಕಬಳ್ಳಾಪುರಅನುಪಮ ಶ್ರೀ ಶೈಲಿ – ಬೆಳಗಾವಿಬೀಮನ್ ಗೌಡ ಹನುಮಂತ್ ಗೌಡ ಬೀರಾದಾರ್ ಪಾಟೀಲ್ – ಬಿಜಾಪುರಎಸೆಸೆಲ್ಸಿ ಪರೀಕ್ಷೆ 2023 ಮಾರ್ಚ್ 31 ರಂದು ಪ್ರಾರಂಭವಾಗಿದ್ದು, ಏಪ್ರಿಲ್ 15, 2023 ರಂದು ಕೊನೆಗೊಂಡಿತ್ತು.ಈ ಪರೀಕ್ಷೆಗೆ ರಾಜ್ಯದ್ಯಾಂತ ಒಟ್ಟು…
