Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೆಲವರು ವೃತ್ತಿಯಿಂದ ನಿವೃತ್ತಿ ಹೊಂದಿದರೂ ಅವರು ಸಲ್ಲಿಸಿದ ಸೇವೆ ಸದಾ ಸ್ಮರಣೀಯವಾಗಿರುತ್ತದೆ ಎಂದು ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿ ಆನಂದ ಜೆ. ಹೇಳಿದರು. ಅವರು ಇಲ್ಲಿನ ಪುರಸಭೆಯಲ್ಲಿ ಲೆಕ್ಕಿಗರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಶ್ರೀಪತಿ ಕಲ್ಕೂರ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಪುರಸಭೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸಭೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಫಲಪುಷ್ಪ ಹಾಗೂ ಸ್ಮರಣಿಕೆಗಳನ್ನು ನೀಡಿ ನೆನಪುಗಳನ್ನು ಹಂಚಿಕೊಂಡರು. ಮಾಜಿ ಪುರಸಭಾ ಸದಸ್ಯರು, ಗುತ್ತಿಗೆದಾರರು ಭಾಗವಹಿಸಿ ನಿವೃತ್ತರಿಗೆ ನೆನಪಿನ ಕಾಣಿಕೆ ನೀಡಿ ಅವರ ವಿಶ್ರಾಂತ ಜೀವನಕ್ಕೆ ಶುಭ ಹಾರೈಸಿದರು. ಕಛೇರಿ ವ್ಯವಸ್ಥಾಪಕ ಜಿ. ಸೂರ್ಯಕಾಂತ ಖಾರ್ವಿ ನಿರೂಪಿಸಿ, ಸಹಾಯಕ ಗಣೇಶ್ ಪಿ. ವಂದಿಸಿದರು. ಪುರಸಭೆಯ ಸಿಬ್ಬಂದಿಗಳು ಉಪಸ್ಥಿತರಿದ್ದು ಕಲ್ಕೂರ್ ಅವರಿಗೆ ಶುಭಕೋರಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಭಾರತೀಯ ಪರಂಪರೆಗಳ ಅರಿವು ನೀಡುತ್ತಾ ಬಂದ ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ಜರ್ಮನಿ ಮೂಲದ ಜೂಡಿತ್ ಹೆರ್ಮನ್ ತಮ್ಮ ಮಗನ ಜೊತೆಗೆ ಇತ್ತೀಚಿಗೆ ಭೇಟಿ ನೀಡಿದರು. ಹೃಷಿಕೇಶದ ಪ್ರಸಿದ್ಧ ವೈದ್ಯರಾದ ಡಾ| ತನು ವರ್ಮ, ಮಂಗಳೂರಿನ ಶ್ರೀ ಕಿಶೋರ್ ಕೂಡ ಅವರ ಜೊತೆಗಿದ್ದರು. ಶಾಲೆಯ ಮತಂಗವನ, ಶೃಂಗವನ, ಕಣಾದವನ, ಘಟೋತ್ಕಚ, ವ್ಯಾಯಾಮಸ್ಥಳ, ಶಿಬಿವನ, ತರಗತಿ, ವಸತಿ ನಿಲಯವೇ ಮೊದಲಾದ ಪ್ರದೇಶಗಳಿಗೆ ಹೋಗಿ ಮಾಹಿತಿಗಳನ್ನು ಪಡೆದುಕೊಂಡರು. ಅಧ್ಯಯನ, ಅಧ್ಯಾಪನದ ಕ್ರಮಗಳ ಬಗ್ಗೆ ಮಾಹಿತಿಗಳನ್ನು ತಿಳಿದುಕೊಂಡು ಸಂತಸವನ್ನು ವ್ಯಕ್ತಪಡಿಸಿ ಮಾತನಾಡುತ್ತಾ ಜರ್ಮನಿ ಮತ್ತು ಭಾರತದ ನಡುವಿನ ಭಿನ್ನತೆಯ ಜೊತೆಗೆ ಸಾಮಾನ್ಯ ಅಂಶಗಳನ್ನು ಮಗನಾದ ಆಲ್ಬರ್ಟೊ ಡೆಸ್ಕಾನಿಯೋವಿಗೆ ಪರಿಚಯಿಸಲು ಭಾರತದ ಬೇರೆ ಬೇರೆ ಸ್ಥಳಗಳನ್ನು ಪ್ರವಾಸ ಮಾಡುತ್ತಿದ್ದೇವೆ. ಇದರಿಂದ ಜಗತ್ತನ್ನು, ಜನರನ್ನು  ಹಾಗೂ ಶಾಲೆಗಳ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮವಾಗಿ ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದರು. ಶ್ರೀ ಸಿದ್ಧಿಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಮತ್ತು ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ, ಶಾಲಾ ಆಡಳಿತಾಧಿಕಾರಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇಲ್ಲಿನ ಶ್ರೀರಾಮ ಗೆಳೆಯರ ಬಳಗ ಕೋಡಿ ಕನ್ಯಾಣದ ಅಧ್ಯಕ್ಷರಾಗಿ ಯಾದವ ಕರ್ಕೇರ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಪುನೀತ್ ಪೂಜಾರಿ, ಅಧ್ಯಕ್ಷರಾಗಿ ಯಾದವ್ ಕರ್ಕೇರ, ಉಪಾಧ್ಯಕ್ಷರಾಗಿ ಶಬರೀಷ್ ಮೆಂಡನ್, ಪ್ರಧಾನ ಕಾರ್ಯದರ್ಶಿ ಅಕ್ಷಿತ್ ಪೂಜಾರಿ, ಕೋಶಾಧಿಕಾರಿಯಾಗಿ ಕಾರ್ತಿಕ್ ಕುಂದರ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನಿಖಿಲ್ ಖಾರ್ವಿ, ಜೊತೆ ಕಾರ್ಯದರ್ಶಿ ಪ್ರತಾಪ್ ಸುವರ್ಣ, ಶ್ರೇಯಸ್ ಕರ್ಕೇರ ಜೊತೆ ಕೋಶಾಧಿಕಾರಿ ವಿವೇಕ್ ಖಾರ್ವಿ, ಭುವನ್ ಬಂಗೇರ,ಜೊತೆ ಸಾಂಸ್ಕೃತಿಕ ಕಾರ್ಯದರ್ಶಿ ದರ್ಶನ್ ಕಾಂಚನ್, ಅಂಕಿತ್ ಕುಮಾರ್, ಪ್ರಚಾರ ಸಮಿತಿ ಸದಸ್ಯರಾಗಿ ಕಾರ್ತಿಕ್ ಪಾಲನ್, ರೋಹಿತ್ ಕುಂದರ್, ಸೌರವ್ ಪೂಜಾರಿ,ಸಮಿತಿ ಸದಸ್ಯರಾಗಿ ಅಭಿಷೇಕ್ ಪೂಜಾರಿ, ಚೇತನ್ ಕುಂದರ್, ಸಾಗರ್ ಹೊಸಬೆಂಗ್ರೆ, ತರುಣ್ ಕುಂದರ್, ವಿಲಾಸ್ ಖಾರ್ವಿ, ಆಕಾಶ್ ಕುಂದರ್, ಧನುಷ್ ಕುಂದರ್, ಸಾತ್ವಿಕ್ ಕುಂದರ್, ಪ್ರಜ್ವಲ್ ಖಾರ್ವಿ, ಮಾಧವ ಕುಂದರ್, ಶರಣ್ ಪೂಜಾರಿ, ಯೋಗೇಶ್ ಕರ್ಕೇರ, ಕಾರ್ತಿಕ್ ಪೂಜಾರಿ, ಪ್ರಜ್ವಲ್ ಪೂಜಾರಿ, ಸುಶಾಂತ್ ಪೂಜಾರಿ ಆಯ್ಕೆಯಾಗಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ -2026ರ ಅಂಗವಾಗಿ ಉಡುಪಿ ಜಿಲ್ಲಾ ಪೊಲೀಸ್‌ ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದೊಂದಿಗೆ ಜಿಲ್ಲಾದ್ಯಂತ ಇಲಾಖೆ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ನಡುವೆ ಸಂತೆಕಟ್ಟೆಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರಿಸಲಾದ ಪೊಲೀಸ್‌ ಟೆಂಟ್‌ ಹೌಸ್‌ ಮಾತ್ರ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸದಲ್ಲಿ ಸಡಕ್‌ ಸುರಕ್ಷಾ ಜೀವನ್‌ ರಕ್ಷಾ ಎಂಬ ಘೋಷಣೆ ಅಡಿಯಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಸಂತೆಕಟ್ಟೆಯಲ್ಲಿ ಪಿಎಸ್‌ಐ ಅನಿಲ್‌ ಹಾಗೂ ಪೊಲೀಸ್‌ ಸಿಬ್ಬಂದಿಗಳು ವಾಹನ ಚಾಲಕರುಗಳನ್ನು  ಹೂ ಗುಚ್ಚ ನೀಡಿ ಆಹ್ವಾನಿಸಿ, ಅವರ ಆದ್ಯತೆಗೆ ತಕ್ಕಂತೆ ಚಹಾ, ತಿಂಡಿ, ತಂಪುಪಾನೀಯಗಳನ್ನು ನೀಡಿ ಬಳಿಕ ಅವರಿಗೆ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸುವುದರ ಬಗ್ಗೆ ಮತ್ತು ವಾಹನ ಚಲಾಯಿಸುವ ಬಗ್ಗೆ ಮತ್ತು ಅಪಘಾತ ನಿಯಂತ್ರಿಸುವ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ. ಏಳು ದಿನಗಳ ಕಾಲ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯೊಳಗೆ ಗಣಿ ಮತ್ತು ಖನಿಜಗಳನ್ನು ಸಾಗಿಸುವ ಎಲ್ಲಾ 6 ಚಕ್ರ ಮತ್ತು ಅದಕ್ಕಿಂತ ಹೆಚ್ಚಿನ ವಾಹನಗಳು 60 ಕಿ.ಮೀ ಮಿತಿಯೊಂದಿಗೆ ಸ್ಪೀಡ್ ಗವರ್ನರ್‌ಗಳನ್ನು ಕಡ್ಡಾಯವಾಗಿ ಅಳವಡಿಸಲು ರಸ್ತೆ ಸುರಕ್ಷತಾ ಪ್ರಾಧಿಕಾರದ ನಿರ್ಧರಿಸಿದೆ‌. ಈ ಹಿಂದೆ ನಡೆದ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯಲ್ಲಿ ಟಿಪ್ಪರ್ ವಾಹನಗಳನ್ನು ವೇಗವಾಗಿ ಓಡಿಸುವುದಕ್ಕೆ ಕಡಿವಾಣ ಹಾಕುವುದು ಒಂದು ಕಾರ್ಯಸೂಚಿಯಾಗಿತ್ತು. ಅದರಂತೆ ಗಣಿ ಮತ್ತು ಖನಿಜಗಳನ್ನು ಸಾಗಿಸುವ ಎಲ್ಲಾ 6 ಚಕ್ರ ಮತ್ತು ಅದಕ್ಕಿಂತ ಹೆಚ್ಚಿನ ವಾಹನಗಳು 60 ಕಿ.ಮೀ ಮಿತಿಯೊಂದಿಗೆ ಸ್ಪೀಡ್ ಗವರ್ನರ್‌ಗಳನ್ನು ಕಡ್ಡಾಯವಾಗಿ ಅಳವಡಿಸುವ ನಿರ್ಧಾರವನ್ನು ಅಂತಿಮಗೊಳಿಸಲಾಗಿದೆ. ಈ ಬಗ್ಗೆ ಎಲ್ಲಾ ಲಾರಿ ಚಾಲಕರಿಗೆ 10 ದಿನಗಳ ಕಾಲಾವಕಾಶ ನೀಡಲಾಗುವುದು. ಕುಂದಾಪ್ರ ಡಾಟ್ ಕಾಂ. ಮುಂದಿನ ದಿನಗಳಲ್ಲಿ ಮಾಹಿತಿ ಹಂಚುವ ಉದ್ದೇಶದಿಂದ ಎಲ್ಲಾ ಲಾರಿ ಚಾಲಕರಿಗೆ ಕರಪತ್ರಗಳನ್ನು ವಿತರಿಸಲಾಗುವುದು ಎಂದು ಉಡುಪಿ ಎಸ್ಪಿ ಹರಿರಾಂ ಶಂಕರ್ ಅವರು ತಿಳಿಸಿದ್ದಾರೆ. ಬಸ್‌ಗಳಿಗೆ ಬಾಗಿಲು ಕಡ್ಡಾಯ:ಜನವರಿ 20ರ ಒಳಗಡ ಬಸ್‌ಗಳಲ್ಲಿ ಬಾಗಿಲುಗಳನ್ನು ಅಳವಡಿಸುವುದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಹಂಗಳೂರು ರಾಷ್ಟ್ರೀಯ ಹೆದ್ದಾರಿ-66ರ ಡಿವೈಡರ್ ಬಳಿ ಟಿಪ್ಪರ್ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಕೋಟೇಶ್ವರದ ಅಂಕದಕಟ್ಟೆ ಬಳಿ ವಾಸವಿದ್ದ ಕೃಷ್ಣಮೂರ್ತಿ ಅಡಿಗ (57) ಅವರು ಮೃತ ವ್ಯಕ್ತಿ. ಕೃಷ್ಣಮೂರ್ತಿ ಅವರು ಅಡುಗೆ ಕೆಲಸ ಮಾಡಿಕೊಂಡಿದ್ದರು. ತಮ್ಮ ಹೊಸ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಿಸಲು ಮನೆಯಿಂದ ಹೊರಟವರು ಸರ್ವೀಸ್ ರಸ್ತೆಯಿಂದ ಹೆದ್ದಾರಿಗೆ ತಿರುವು ಪಡೆದಾಗ, ಕುಂದಾಪುರ ಕಡೆಯಿಂದ ಉಡುಪಿಯತ್ತ ಸಾಗುತ್ತಿದ್ದ ಟಿಪ್ಪರ್ ಗುದ್ದಿದ್ದು ರಸ್ತೆಗೆಸೆಯಲ್ಪಟ್ಟ ಅವರ ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಆರೋಪಿ ಟಿಪ್ಪರ್ ಚಾಲಕ ಶಶಾಂಕ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ‌. ಕೃಷ್ಣಮೂರ್ತಿ ಅವರು ಮೂಲತಃ ಆಲೂರಿನವರಾಗಿದ್ದು, ಕೋಟೇಶ್ವರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಕುಂದಾಪುರ ನಗರ ಠಾಣೆ ಪೊಲೀಸ್, ಸಂಚಾರ ಠಾಣೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಓದುಗನ ಅರಿವಿನ ಮಟ್ಟವನ್ನು ಹೆಚ್ಚಿಸುವ ಪ್ರಯತ್ನವನ್ನು ಒಂದು ಕಾದಂಬರಿಯ ಮೂಲಕ ನಿರೀಕ್ಷಿಸುವುದು ಸಮಂಜಸವೇ ಎಂಬ ಪ್ರಶ್ನೆಗೆ ಉತ್ತರವಾಗಿ ಅದ್ಭುತ ವೇಗದಿಂದ ಜಗತ್ತು ಬದಲಾಗುತ್ತಿರುವಾಗ ಸೃಜನಶೀಲ ಸಾಹಿತ್ಯವೂ ಅರಿವನ್ನು ಸದಾ ಹೊಸತಾಗಿಸುವ ಮಾಧ್ಯಮವಾಗಬೇಕು ಎಂಬುದನ್ನು ನಾವು ಒಪ್ಪಿಕೊಂಡ ಹಿನ್ನೆಲೆಯಲ್ಲಿ ರಮ್ಯ ಎಸ್. ಅವರ ವರ್ಣತಂತು ಕಾದಂಬರಿಯನ್ನು ಈ ವರ್ಷದ ಚಡಗ ಕಾದಂಬರಿ ಪುರಸ್ಕಾರಕ್ಕೆ ಆಯ್ಕೆಗೊಳಿಸಿ ಪ್ರದಾನಿಸಲಾಯಿತು. ಕಾದಂಬರಿಕಾರ್ತಿ ರಮ್ಯ ಎಸ್. ಈ ಕಾದಂಬರಿಯಲ್ಲಿ ನೀಡುವ ಜೈವಿಕವಿಜ್ಞಾನದ ವಿವರಗಳು ಜೀವಸೃಷ್ಟಿಯ ನಿಗೂಢಗಳನ್ನು ಬಿಚ್ಚಿಡುವುದು ಮಾತ್ರವಲ್ಲ, ದೇಹಾರೋಗ್ಯ ರಕ್ಷಣೆಯ ಕುರಿತಂತೆ ಹೊಸ ಅರಿವನ್ನು ಆಗುಮಾಡಿಕೊಡುತ್ತದೆ. ವರ್ಣತಂತು ಕಾದಂಬರಿ ನಮಗೆಯಾಕೆ ಪ್ರಸ್ತುತವಾಗುತ್ತದೆಂದರೆ, ಬದುಕು ಸವಾಲುಗಳನ್ನು ಒಡ್ಡುತ್ತಾ ಹೋದಹಾಗೆ ವಿಜ್ಞಾನವು ಹೊಸ ಉತ್ತರಗಳನ್ನು ಹುಡುಕಿಕೊಡುತ್ತಾ ಹೋಗುವ ಚೋದ್ಯವನ್ನು ಈ ಕಾದಂಬರಿ ನಮ್ಮೆದುರು ತೆರೆದಿಡುತ್ತದೆ. ತನ್ಮೂಲಕ ಸೃಷ್ಟಿಯ ಕೌತುಕತೆಯ ಬಗ್ಗೆ ಓದುಗರನ್ನು ಅಧ್ಯಯನಾಸಕ್ತರನ್ನಾಗಿಸುವ ಕೆಲಸವನ್ನೂ ಮಾಡುತ್ತದೆ, ಎಂದಾದರೆ ಸಾಹಿತ್ಯದಿಂದ ಬೇರೇನನ್ನು ನೀವು ನಿರೀಕ್ಷಿಸುತ್ತೀರಿ? ಸಾಹಿತ್ಯ ಇರುವುದು ಮನರಂಜನೆಗಾಗಿ ಮಾತ್ರವಲ್ಲ ಎನ್ನುವುದನ್ನು ಸ್ಪಷ್ಟಪಡಿಸುವ ಕೆಲಸವನ್ನು ವರ್ಣತಂತು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ -2026 ಇದರ ಅಂಗವಾಗಿ ಉಡುಪಿ ಜಿಲ್ಲಾ ಪೊಲೀಸ್‌ ವತಿಯಿಂದ “ಸಡಕ್‌ ಸುರಕ್ಷಾ ಜೀವನ್‌ ರಕ್ಷಾ” ಎಂಬ ಘೋಷಣೆ ಅಡಿಯಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಚಾಲಕರುಗಳಿಗೆ ಚಹಾ ತಿಂಡಿ ಮತ್ತು ಹೂ ಗುಚ್ಚಗಳನ್ನು ನೀಡುವುದರ ಮೂಲಕ ಅವರಲ್ಲಿ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸುವುದರ ಬಗ್ಗೆ ಮತ್ತು ವಾಹನ ಚಲಾಯಿಸುವ ಬಗ್ಗೆ ಮತ್ತು ಅಪಘಾತ ನಿಯಂತ್ರಿಸುವ ಬಗ್ಗೆ ಅರಿವು ಮೂಡಿಸುವ ಕಾರ್ಯ ರಾಷ್ಟ್ರೀಯ ಹೆದ್ದಾರಿ -66 ಸಂತೆಕಟ್ಟೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರಿರಾಮ್‌ ಶಂಕರ್‌ ಐಪಿಎಸ್‌, ಪೊಲೀಸ್‌ ಅಧೀಕ್ಷಕರು, ಉಡುಪಿ ಜಿಲ್ಲೆ ಇವರು ವಹಿಸಿದ್ದರು. ಉಡುಪಿ ಜಿಲ್ಲಾ ನ್ಯಾಯಾಧೀಶರು ಮತ್ತು DLSನ ಅಧ್ಯಕ್ಷರಾದ ಮನುಪಾಟೀಲ್‌ ನ್ಯಾಯಾಧೀಶರು, ಉಡುಪಿ ಜಿಲ್ಲೆರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಭು ಡಿ ಟಿ, ಪೊಲೀಸ್‌ ಉಪಾಧೀಕ್ಷಕರು, ಉಡುಪಿ ಜಿಲ್ಲೆ ರವರು, ತಿಮ್ಮಪ್ಪ ಗೌಡ, ಪೊಲೀಸ್‌ ಉಪಾಧೀಕ್ಷಕರು, ಡಿಎಆರ್‌, ಉಡುಪಿ, ರವಿಕುಮಾರ್‌,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಇಲ್ಲಿನ ಸಾಸ್ತಾನದ ಪಾಂಡೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಿಡಿಗೆಡಿಯೊರ್ವ ಸ್ನಾನಗೃಹ ಇಣುಕಿ ಎಸ್ಟೇಪ್ ಆಗುತ್ತಿರುವ ಘಟನೆ ಕಳೆದೆರಡು ದಿನಗಳಿಂದ ನಡೆಯುತ್ತಿದೆ. ಇಲ್ಲಿನ ಪಾಂಡೇಶ್ವರ ನಿರಾಡಿಜಡ್ಡು ಪ್ರದೇಶದ ಸೋಮವಾರ ಮನೆಯೊಂದರಲ್ಲಿ ಸಂಜೆ ವೇಳೆಗೆ ಮಹಿಳೆಯೋರ್ವರು ಸ್ನಾನಮಾಡುತ್ತಿರುವ ವೇಳೆ ಸ್ನಾನಗೃಹದ ಹಂಚು ತೆಗೆದು ಮೊಬೈಲ್ ಮೂಲಕ ವಿಡಿಯೋ ತೆಗೆಯುವ ಸಂದರ್ಭದಲ್ಲಿ ಆಕೆ ಕಿರುಚಿದ ಹಿನ್ನಲ್ಲೆಯಲ್ಲಿ ಆತ ಅಲ್ಲಿಂದ ಕಾಲ್ಕಿತ್ತಿದ್ದ. ಪ್ರಕರಣ ಕೋಟ ಠಾಣೆ ಮೆಟ್ಟಿಲೆರಿದೆ. ಅದಾದ ಬಳಿಕ ಮಂಗಳವಾರ ಪಾಂಡೇಶ್ವರ ಮುಖ್ಯ ರಸ್ತೆ ಸಮೀಪವಿರುವ ಮನೆಯೊಂದರ ಮಹಿಳೆ ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ಕಿಟಕಿ ಇಣುಕಿ ಪರಾರಿಯಾಗಿದ್ದಾ‌ನೆ ಆತನಿಗಾಗಿ ಕೋಟ ಪೋಲಿಸರು ಗ್ರಾಮಸ್ಥರು ಕಾರ್ಯಾಚರಣೆ ನಡೆಸಿದ್ದರು ಎನ್ನಲಾಗಿದೆ. ಪಾಂಡೇಶ್ವರ – ಸ್ನಾನ ಗೃಹ ಇಣುಕಿ ಎಸ್ಕೇಪ್ ಪ್ರಕರಣಕೋಟ: ಇಲ್ಲಿನ ಸಾಸ್ತಾನದ ಪಾಂಡೇಶ್ವರ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಕಿಡಿಗೆಡಿಯೊರ್ವ ಸ್ನಾನಗೃಹ ಇಣುಕಿ ಎಸ್ಟೇಪ್ ಆದ ಘಟನೆ ಕಳೆದೆರಡು ದಿನಗಳಿಂದ ನಡೆಯುತ್ತಿದೆ.ಇಲ್ಲಿನ ಪಾಂಡೇಶ್ವರ ನಿರಾಡಿಜಡ್ಡು ಪ್ರದೇಶದ ಸೋಮವಾರ ಒಂದು ಮನೆಯಲ್ಲಿ ಸಂಜೆ ಹೊತ್ತಿನಲ್ಲಿ ಒರ್ವಾಕೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಕೋಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ‌ ಹೆರಿಗೆ ತಜ್ಞರನ್ನು ಸೇರಿದಂತೆ ಹಲವು ವಿಭಾಗದ ವೈದ್ಯರನ್ನು ಬೇರೆಡೆಗೆ ಸ್ಥಳಾಂತರದ ರಾಜ್ಯ ಸರಕಾರದ ನಿಲುವಿನ ವಿರುದ್ಧ  ಕೋಟದ ಸಮುದಾಯ ಆರೋಗ್ಯ ಕೇಂದ್ರದ ಎದುರು ಕೋಟದ ಸಮಸ್ತ ನಾಗರಿಕರು ಬೃಹತ್ ಪ್ರತಿಭಟನೆ ಹಮ್ಮಕೊಂಡ ಘಟನೆ ಮಂಗಳವಾರ ನಡೆಯಿತು. ಕೋಟದ ಮಹತೋಭಾರ ಹಿರೇಮಹಾಲಿಂಗೇಶ್ವರ ದೇಗುಲದಲ್ಲಿ ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ ಪ್ರತಿಭಟನೆಗೆ ಚಾಲನೆ ನೀಡಿ ರ್ಯಾಲಿ ಮೂಲಕ ಕೋಟ ಸಮಯದಾಯ ಆರೋಗ್ಯ ಕೇಂದ್ರ ತಲುಪಿತು. ಈ ವೇಳೆ ಮಾತನಾಡಿ ಅವರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗ್ರಾಮೀಣ ಹಳ್ಳಿ ಜನರ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿದ್ದು ದೂರದ ಊರಿನ ರೋಗಿಗಳು ಸಹ ಇಲ್ಲಿ ಬಂದು ಪ್ರಯೋಜನ ಪಡೆಯುತ್ತಿದ್ದಾರೆ,ಕೋಟ ಗ್ರಾಮಪಂಚಾಯತ್ ಈ ಆಸ್ಪತ್ರೆ ಬೇಕಾದ ಸಹಕಾರವನ್ನು ನೀಡುತ್ತಿದ್ದು ರಾಜ್ಯ ಸರಕಾರ ಕೈಗೊಂಡ ಈ ನಿಲುವು ಗ್ರಾಮೀಣ ಹಳ್ಳಿಜನರ ಸೇವೆ ಕತ್ತರಿ ಹಾಕುವ ಕಾರ್ಯ ಎಸೆಗಿದೆ ಇದು ಸರಿಯಲ್ಲ ಸರಕಾರ ಈ ಆದೇಶ ವಾಪಾಸ್ ಪಡೆಯಬೇಕು…

Read More