Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಗ್ರಾಮ ಪಂಚಾಯತ್ ಕೊರ್ಗಿ ಇವರ ಬೆಂಬಲದೊಂದಿಗೆ ಹೊಸವರ್ಷದ ದಿನದಂದು ಕೊರ್ಗಿ ಗ್ರಾಮದ ಹೆಸ್ಕೂತ್ತೂರರಿಂದ ಹೊಸಮಠದವರೆಗೆ ಸುಮಾರು 8 ಕಿಲೊಮೀಟರ್ ನಷ್ಟು ದೂರ ರಸ್ತೆಯ ಎರಡೂ ಬದಿಯ ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯಗಳನ್ನು ಸ್ವಚ್ಚಗೊಳಿಸುವ ಮೂಲಕ ಮಾದರಿಯಾದರು. ಕೊರ್ಗಿ ಗ್ರಾಮದ ಅಲ್ಲಲ್ಲಿ ಈ ನನ್ನ ಗ್ರಾಮವನ್ನು ಸ್ವಚ್ಚವಾಗಿಡಲು ಹೇಳುವುದರ ಜೊತೆಗೆ ನಾನು ಸ್ವಚ್ಚತೆಯಲ್ಲಿ ಕೊರ್ಗಿ ಗ್ರಾಮವನ್ನು ಇಡುತ್ತೇನೆ ಎಂಬ ಬಿತ್ತಿ ಪತ್ರ ಅಂಟಿಸುವ ಮೂಲಕ ಜಾಗ್ರತಿ ಮೂಡಿಸಿದರು. ಸುಮಾರು 20 ಕ್ವಿಂಟಲ್‌ಗೂ ಹೆಚ್ಚು ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯಗಳನ್ನು ಹೆಕ್ಕಿ ವಿಲೇವಾರಿ ಮಾಡುವುದರ ಮೂಲಕ ಟೀಮ್ ಊರ್ಮನಿ ಮಕ್ಕಳ ಸಮಾಜ ಸೇವಾ ತಂಡವು ಇತರರಿಗೂ ಮಾದರಿ. ಹೊಸವರ್ಷಕ್ಕೆ ಈ ಕಾಲದ ಹುಡುಗರಿಗೆ ಟೀಮ್ ಊರ್ಮನಿ ಮಕ್ಕಳ ತಂಡದ ಹುಡುಗರ ಈ ಕಾರ್ಯಕ್ಕೆ ಮೆಚ್ಚಲೆಬೇಕು. ಕೊರ್ಗಿ ಗ್ರಾಮದ ಸ್ವಚ್ಚತೆಗಾಗಿ ಬೆಳಿಗ್ಗೆ 9:00 ರಿಂದ ಸಂಜೆ 6:30 ತನಕ ಒಂದು ನಿಮಿಷವೂ ಬಿಡುವಿಲ್ಲದೆ ಮಾಡಿದ ಈ ಕಾರ್ಯಕ್ಕೆ ಗ್ರಾಮಸ್ಥರು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಯಕ್ಷಗಾನ ಮತ್ತು ಇನ್ನಿತರ ಕಲೆಯ ಮೂಲಕ ವಿದ್ಯಾರ್ಥಿಗಳನ್ನು ಒಬ್ಬ ಶ್ರೇಷ್ಠ ನಾಗರಿಕನಾಗಿ ರೂಪುಗೊಳ್ಳುವಂತೆ ಮಾಡಲು ಸಾಧ್ಯವಿದೆ. ಕಲೆಯ ಮೂಲಕ ಸಮಾಜಕ್ಕೆ ಯಕ್ಷ ಶಿಕ್ಷಣ ಟ್ರಸ್ಟ್ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದು  ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದರು. ಅವರು ಇಲ್ಲಿನ ಕಲಾಮಂದಿರದಲ್ಲಿ ಬುಧವಾರ ಪ್ರದರ್ಶನ ಸಂಘಟನಾ ಸಮಿತಿ ಕುಂದಾಪುರ ಯಕ್ಷ ಶಿಕ್ಷಣ ಟ್ರಸ್ಟ್ ರಿ. ಉಡುಪಿ ಇವರು ಆಯೋಜಿಸಿರುವ ಕಿಶೋರ ಯಕ್ಷಗಾನ ಸಂಭ್ರಮ ಪ್ರದರ್ಶನಗಳ ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡಿದರು. ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಬಾರಿ 22 ಪ್ರೌಢಶಾಲಾ ವಿಭಾಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು ಕರಾವಳಿಯ ಕಲೆಯಾದ ಯಕ್ಷಗಾನದಲ್ಲಿ ಕುಣಿತ, ಹಾಡುಗಾರಿಕೆ, ಸಂಭಾಷಣೆ ಮತ್ತು ತಾಳ ವಾದ್ಯಗಳ ತರಬೇತಿ ನೀಡಲಾಗುತ್ತಿದೆ. ಎಲ್ಲ ರೀತಿಯ ದೈಹಿಕ ಹಾಗೂ ಮಾನಸಿಕವಾಗಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಹೆಬ್ರಿ ತಾಲೂಕಿನ ಶೇಡಿಮನೆ ಗ್ರಾಮದ ಅರಸಮ್ಮಕಾನು ಅಂಚೆ ಕಚೇರಿ ಬಳಿ ಡಿ.29ರಂದು ಎದುರು ಕಡೆಯಿಂದ ಅತೀ ವೇಗವಾಗಿ ಬಂದ ಬಲೇನೋ ಕಾರು ಬೈಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಬೈಕ್ ಸವಾರ ರಂಜಿತ್ ಅವರು ಗಂಭೀರವಾಗಿ ಗಾಯಗೊಂಡರು. ಸವಾರ ನವೀನ್ (21) ಸಣ್ಣಪುಟ್ಟ ಗಾಯಗಳಾಗಿವೆ. ಗಂಭೀರವಾಗಿ ಗಾಯಗೊಂಡ ರಂಜೀತ್ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನವೀನ್ ನೀಡಿರುವ ದೂರಿನಂತೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಡಿಪ್ ಮತ್ತು ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಜಿಲ್ಲೆಯಲ್ಲಿ ನಡೆದ ಮೌಲ್ಯಮಾಪನಾ ಶಿಬಿರದಲ್ಲಿ 426 ವಿಕಲಚೇತನರು ಹಾಗೂ 283 ಹಿರಿಯ ನಾಗರಿಕರು ವಿವಿಧ ಸಾಧನ ಸಲಕರಣೆಗಳನ್ನು ಪಡೆಯಲು ಅಲಿಂಕೋ ಸಂಸ್ಥೆಯಿಂದ ಆಯ್ಕೆ ಮಾಡಲಾಗಿರುತ್ತದೆ. ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ಮಾತ್ರ ಅಲಿಂಕೋ ಸಂಸ್ಥೆ ವತಿಯಿಂದ ಜಿಲ್ಲಾಡಳಿತ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ ಸಾಧನ-ಸಲಕರಣೆಗಳ ವಿತರಣಾ ಕಾರ್ಯಕ್ರಮವು ಜನವರಿ 6 ರಂದು ಬೆಳಗ್ಗೆ 10.30 ಕ್ಕೆ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಛೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆಯಲಿದ್ದು, ಕಾರ್ಯಕ್ರಮಕ್ಕೆ ಹಾಜರಾಗುವ ವಿಕಲಚೇತನ ಮತ್ತು ಹಿರಿಯ ನಾಗರಿಕರ ಫಲಾನುಭವಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಕಾರ್ಯಕ್ರಮಕ್ಕೆ ಬರುವ ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್‌ನ್ನು ಕಡ್ಡಾಯವಾಗಿ ತರಬೇಕು. ಹೆಚ್ಚಿನ ಮಾಹಿತಿಗಾಗಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಗಂಗೊಳ್ಳಿ ಗ್ರಾಮ ಪಂಚಾಯತಿಯ ಮೊದಲ ಅವಧಿಗೆ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಜಯಂತಿ ಖಾರ್ವಿ ಮತ್ತು ಉಪಾಧ್ಯಕ್ಷರಾಗಿ ಎಸ್‌ಡಿಪಿಐ ಬೆಂಬಲಿತ ಸದಸ್ಯ ತಬ್ರೇಜ್ ಆಯ್ಕೆಯಾಗಿದ್ದಾರೆ. ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ (ಮಹಿಳೆ) ಮೀಸಲಾಗಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಗಂಗೊಳ್ಳಿ-6 ಕ್ಷೇತ್ರದಿಂದ ಗೆದ್ದ ಕಾಂಗ್ರೆಸ್ ಬೆಂಬಲಿತ ಜಯಂತಿ ಖಾರ್ವಿ ಮತ್ತು ಗಂಗೊಳ್ಳಿ-1 ಕ್ಷೇತ್ರದಿಂದ ಗೆದ್ದ ಬಿಜೆಪಿ ಬೆಂಬಲಿತ ರೇಖಾ ಖಾರ್ವಿ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರಿಂದ ಉಪಾಧ್ಯಕ್ಷ ಸ್ಥಾನಕ್ಕೆ ಗಂಗೊಳ್ಳಿ-2 ಕ್ಷೇತ್ರದಿಂದ ಗೆದ್ದ ಎಸ್‌ಡಿಪಿಐ ಬೆಂಬಲಿಕ ತಬ್ರೇಜ್ ಮತ್ತು ಗಂಗೊಳ್ಳಿ-1 ಕ್ಷೇತ್ರದಿಂದ ಗೆದ್ದ ಬಿಜೆಪಿ ಬೆಂಬಲಿತ ನಾಗರಾಜ ಖಾರ್ವಿ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜಯಂತಿ ಖಾರ್ವಿ 19 ಮತಗಳನ್ನು ಪಡೆದರೆ ರೇಖಾ ಖಾರ್ವಿ 13 ಮತಗಳನ್ನು ಪಡೆದರು. ಒಂದು ಮತ ಅಸಿಂಧುವಾಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ತಬ್ರೇಜ್ 18 ಮತಗಳನ್ನು ಮತ್ತು ನಾಗರಾಜ ಖಾರ್ವಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರ್ಯರು ಕರ್ನಾಟಕದಲ್ಲಿ ಶಿಲ್ಪಕಲೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಬೇಲೂರು ಹಾಗೂ ಹಳೇಬೀಡು ದೇವಸ್ಥಾನಕ್ಕೆ ಅವರ ಶಿಲ್ಪಕಲೆಯ ಕೊಡುಗೆಯು ಅಪಾರವಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಭಾಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಶೋಕಾಚರಣೆ ಹಿನ್ನೆಲೆ, ಸಾಂಕೇತಿಕವಾಗಿ ಜಕಣಾಚಾರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು. ಜಕಣಾಚಾರಿ ಅವರ ಮಗ ಡಂಕಣಾಚಾರಿ ಕೂಡ ಶಿಲ್ಪಕಲೆಗೆ ಹೆಚ್ಚಿನ ಒತ್ತು ನೀಡಿದ್ದರು. ರಾಜ್ಯದ ಶಿಲ್ಪಕಲೆ ಕ್ಷೇತ್ರದಲ್ಲಿ ಜಕಣಾಚಾರಿ ಬಿಟ್ಟರೆ ಬೇರೆ ಯಾವ ಶಿಲ್ಪಿಯೂ ಅವರನ್ನು ಮೀರಿಸುವವರಿಲ್ಲ. ರಾಜ್ಯ ಸರ್ಕಾರವು ಶಿಲ್ಪಕಲೆಗೆ ಅತಿ ಹೆಚ್ಚು ಕೊಡುಗೆ ನೀಡುವ ಶಿಲ್ಪಿಗಳಿಗೆ “ಜಕಣಾಚಾರಿ ಪ್ರಶಸ್ತಿ” ನೀಡಿ ಗೌರವಿಸಲಾಗುತ್ತದೆ ಎಂದರು. ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಕರ್ನಾಟಕ ರಾಜ್ಯ ಒಲಂಪಿಕ್ಸ್ ಸಂಸ್ಥೆಯು ಉಡುಪಿ ಮತ್ತು ಮಂಗಳೂರಿನಲ್ಲಿ ರಾಜ್ಯ ಒಲಂಪಿಕ್ಸ್ ಕ್ರೀಡಾಕೂಟವನ್ನು ನಡೆಯಲಿದ್ದು, ಉಡುಪಿ ನಗರದಲ್ಲಿ ನಡೆಯಲಿರುವ ಕ್ರೀಡೆಗಳಿಗೆ ಅಗತ್ಯವಿರುವ ಮೈದಾನದ ವ್ಯವಸ್ಥೆ, ಕ್ರೀಡಾಪಟುಗಳಿಗೆ ವಸತಿ ಸೇರಿದಂತೆ ಮತ್ತಿತರ ಸೌಲಭ್ಯಗಳ ಕುರಿತು ಪರಿಶೀಲನೆಯನ್ನು ಶಾಸಕ ಯಶ್‌ಪಾಲ್ ಎ ಸುವರ್ಣ ಹಾಗೂ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅವರು ಇಂದು ನಗರದ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಮಾತನಾಡಿ, ಜನವರಿ 17ರಿಂದ ನಡೆಯಲಿರುವ ರಾಜ್ಯದ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಉಡುಪಿ ನಗರದಲ್ಲಿಯೇ 11 ಕ್ಕೂ ಹೆಚ್ಚು ಕ್ರೀಡೆಗಳು ಎಂಟು ದಿನಗಳ ಕಾಲ ನಡೆಯಲಿದೆ. ಅಜ್ಜರಕಾಡು ಜಿಲ್ಲಾ ಮಟ್ಟದ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್, ಜೂಡೋ, ಕುಸ್ತಿ, ಬಾಕ್ಸಿಂಗ್, ಕಬ್ಬಡಿ, ಸೈಕ್ಲಿಂಗ್‌ಗಳು ನಡೆದರೆ, ಮಾಹೆ ವಿಶ್ವ ವಿದ್ಯಾನಿಲಯದ ಕ್ರೀಡಾಂಗಣದಲ್ಲಿ ಲಾಂಗ್ ಟೆನ್ನಿಸ್, ಟೇಬಲ್ ಟೆನ್ನಿಸ್ ಹಾಗೂ ಹಾಕಿ ಕ್ರೀಡೆಗಳು ನಡೆಯಲಿದೆ. ಬ್ರಹ್ಮಾವರದ ಬೈಕಾಡಿಯ ಸ್ವರ್ಣಾ ನದಿಯಲ್ಲಿ ಕಯಾಕಿಂಗ್ ನಡೆಯಲಿದ್ದು, ಸುಮಾರು 2500 ಕ್ಕೂ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಯುವಜನರಿಗೆ ಉದ್ಯೋಗ ಅವಕಾಶ ಕಲ್ಪಿಸುವ ಉದ್ದೇಶದಿಂದ ಉಡುಪಿ ನಗರದಲ್ಲಿ ಬೃಹತ್ ಕೌಶಲ್ಯ ರೋಜ್‌ಗಾರ್ ಉದ್ಯೋಗ ಮೇಳವು ಫೆಬ್ರವರಿ ಮೊದಲ ವಾರದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು. ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಕೌಶಲ್ಯ ರೋಜ್‌ಗಾರ್ ಮೇಳ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯುವಜನರಿಗೆ ಉದ್ಯೋಗವನ್ನು ಒದಗಿಸುವ ಬೃಹತ್ ಉದ್ಯೋಗ ಮೇಳವು ಫೆಬ್ರವರಿ ಮೊದಲನೇ ವಾರದಲ್ಲಿ ಉಡುಪಿ ನಗರದ ಡಾ. ಜಿ ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ. ಈ ಮೇಳದಲ್ಲಿ ರಾಜ್ಯದ ಹಾಗೂ ಜಿಲ್ಲೆಯ ವಿವಿಧ ಪ್ರತಿಷ್ಠಿತ ಕಂಪನಿಗಳ 100 ಕ್ಕೂ ಹೆಚ್ಚು ಉದ್ಯೋಗದಾತರುಗಳು ಭಾಗವಹಿಸಲಿದ್ದು, 3500 ಕ್ಕೂ ಹೆಚ್ಚು ಉದ್ಯೋಗ ಆಕಾಂಶಿಗಳು ಮೇಳಕ್ಕೆ ಆಗಮಿಸುವ ನಿರೀಕ್ಷೆಯಲಿದ್ದು, ಇದಕ್ಕೆ ಅಗತ್ಯವಿರುವ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಿ, ಯಶಸ್ವಿಗೊಳಿಸಬೇಕು ಎಂದರು. ಜಿಲ್ಲೆಯಲ್ಲಿ ನಡೆಯಲಿರುವ ಉದ್ಯೋಗ ಮೇಳದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಜೇಸಿಐ ವಲಯ 15ರ ಉಪ್ಪುಂದ ಜೇಸಿಐ ಘಟಕವು 2024ನೇ ಸಾಲಿನಲ್ಲಿ ನಡೆಸಿದ ವಿವಿಧ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ – ತರಬೇತಿಗಳು,  ಸಾಮಾಜಿಕ ಅರಿವು, ಆರೋಗ್ಯ – ಜಾಗೃತಿಯ ಕಾರ್ಯಕ್ರಮಗಳು ಹೀಗೆ ವಿವಿಧ ಹಂತದ ಕಾರ್ಯಕ್ರಮಗಳಿಗಾಗಿ ಜೇಸಿಐ ಭಾರತದಿಂದ ಪ್ರತಿಷ್ಠಿತ 100% ಎಫಿಸಿಯೆನ್ಸಿ ಅವಾರ್ಡ್  ಹಾಗೂ ಎಂಪವರಿಂಗ್ ಯೂತ್ ಅವಾರ್ಡ್‌ನ್ನು ನೀಡಿ ಗೌರವಿಸಲಾಯಿತು. ಉಪ್ಪುಂದ ಜೇಸಿಐನ 2024ರ ಅಧ್ಯಕ್ಷರಾದ ಮಂಜುನಾಥ ದೇವಾಡಿಗ ಅವರಿಗೆ ಹೈದರಾಬಾದ್‌ನ ನವಾಟಲ್ ಇಂಟರ್‌ನ್ಯಾಶನಲ್ ಕನ್ವೆನ್ಶನ್ ಸೆಂಟರ್ ಹೋಟಲ್‌ನಲ್ಲಿ ನಡೆದ ಜೇಸಿಐ ರಾಷ್ಟ್ರೀಯ ಸಮ್ಮೇಳನದಲ್ಲಿ ಜೇಸಿಐ ರಾಷ್ಟ್ರೀಯ ಅಧ್ಯಕ್ಷರಾದ  ಅಡ್ವೋಕೇಟ್ ರಿಕೇಶ್ ಶರ್ಮಾ  ಅವರು ಅವಾರ್ಡ್‌ನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಲೀಡರ್ ಸೀರೀಸ್ ತರಬೇತಿಯನ್ನು ಅತ್ಯುತ್ತಮವಾಗಿ ನಡೆಸಿದ ಬಗ್ಗೆ ಸಿಲ್ವರ್ ಕಾಯಿನ್ ಅವಾರ್ಡ್, ಎಂಪವರಿಂಗ್ ಯೂತ್ ಅತ್ಯುತ್ತಮ ಆಯೋಜನೆಯ ಬಗ್ಗೆ ಎಕ್ಸೆಲೆಂಟ್ ಅವಾರ್ಡ್ ಹಾಗೂ ಎಲ್.ಜಿ.ಬಿ. ಮೀಟಿಂಗ್, ಉದ್ಯೋಗ ಮೇಳ, ಚುನಾವಣಾ ಜಾಗೃತಿ ಕಾರ್ಯಕ್ರಮ, ಮಿಶನ್ ಒನ್ ಲಾಕ್ ,ಇಪಿಎಸ್, ಸಿಎಪಿಪಿ, ಜೇಸಿ ಕೋರ್ಸ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಾಸ್ಥಾನದ ಪ್ರಧಾನ ಅರ್ಚಕ ಹಾಗೂ ಪ್ರಧಾನ ತಂತ್ರಿಗಳಾದ ಮಂಜುನಾಥ ಅಡಿಗ (64) ಅವರು ಬುಧವಾರ ಬೆಳಿಗ್ಗೆ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಮಂಜುನಾಥ ಅಡಿಗ ಅವರು ಸ್ನಾನಗೃಹದಲ್ಲಿ ಬಿದ್ದು ಅಸ್ವಸ್ಥಗೊಂಡು ಕುಟುಂಬಸ್ಥರು ನೀರು ಕುಡಿಸುವಷ್ಟರಲ್ಲೇ ಮೃತಪಟ್ಟರು. ಅವರು ಹದಿನೆಂಟು ವರ್ಷಗಳಿಂದ ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ ಮೃತರು, ಅನಾರೋಗ್ಯದ ನಿಮಿತ್ತ ದೇಗುಲದ ಪೂಜೆಯನ್ನು ನೆರವೇರಿಸಲು ತನ್ನ ಸ್ಥಾನವನ್ನು ಮಗ ನಿತ್ಯಾನಂದ ಅಡಿಗ ಅವರಿಗೆ ನೀಡಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Read More