Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಹಾಲಾಡಿಯಲ್ಲಿ ಅಪ್ತಾಪ್ತ ವಯಸ್ಸಿನ ಯುವತಿಗೆ ತೊಂಬಟ್ಟು ಗ್ರಾಮದ ಯುವಕನೊಂದಿಗೆ ನಡೆದ ಬಾಲ್ಯ ವಿವಾಹದ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಲಾಡಿ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಮೇ 21ರಂದು ನಡೆದ ಬಾಲ್ಯ ವಿವಾಹದ ಬಗ್ಗೆ ಕುಂದಾಪುರ ಸಹಾಯಕ ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿಗೆ ದೂರು ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಿ, ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಬಾಲ್ಯ ವಿವಾಹ ಪ್ರಕರಣದಲ್ಲಿ ತೊಂಬಟ್ಟು ನಿವಾಸಿ ಭರತ್ ಶೆಟ್ಟಿ, ಯುವತಿಯ ತಂದೆ ಸಂತೋಷ್ ಶೆಟ್ಟಿ ಹಾಗೂ ಆಕೆಯ ಬಾವ ರಾಜೇಶ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಹಾಲಾಡಿಯ ಅಪ್ರಾಪ್ತ ವಯಸ್ಸಿನ ಯುವತಿ ಹಾಗೂ ತೊಂಬಟ್ಟಿನ ಭರತ್ ಶೆಟ್ಟಿ ಪರಸ್ಪರ ಪ್ರೀತಿಸುತ್ತಿದ್ದರು. ಯುವಕ ಮದುವೆಯಾಗುವಂತೆ ಬಾಲಕಿಯನ್ನು ಒತ್ತಾಯಿಸುತ್ತಿದ್ದ. ಬಾಲಕಿ ಕೂಡ ಆತನೊಂದಿಗೆ ಮದುವೆ ಮಾಡಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದ್ದಾಗಿ ಹೇಳಿದ್ದಾಳೆ.ಬಾಲಕಿಯ ತಂದೆಯು ಮಗಳ ಬೆದರಿಕೆಗೆ ಹೆದರಿ ಮದುವೆ ಮಾಡಿಸಿಕೊಟ್ಟಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರಸ್ತೆ ದುರಸ್ತಿಗಾಗಿ ಪಂಚಾಯತಿಗೆ ಹಲವು ಭಾರಿ ಬೇಡಿಕೆ ಇರಿಸಿದರೂ ಸ್ಪಂದಿಸದ ಹಿನ್ನೆಲೆಯಲ್ಲಿ, ಭಾನುವಾರ ಗ್ರಾಮದ ಯುವಕರೇ ಒಟ್ಟಾಗಿ ರಸ್ತೆ ಹೊಂಡಗಳನ್ನು ಮುಚ್ಚಿ ದುರಸ್ತಿಗಳಿಸಿದ್ದಾರೆ. ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ದುರ್ಮಿಯ ತಿರಂಗಾ ಫ್ರೆಂಡ್ಸ್ ಸದಸ್ಯರು ಈ ಸೇವಾ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ರಾಹುತನಕಟ್ಟೆಯಿಂದ ದುರ್ಮಿಗೆ ತೆರಳುವ ಮಾರ್ಗ ಬಹುಪಾಲು ಸಿಮೆಂಟ್ ರಸ್ತೆಯಿದ್ದು, ಮಧ್ಯದಲ್ಲಿ ಡಾಂಬಾರು ರಸ್ತೆ ಮಾಡಲಾಗಿದೆ. ಕೆಲ ವರ್ಷದ ಹಿಂದೆ ಮಾಡಲಾಗಿದ್ದ ಡಾಂಬಾರು ರಸ್ತೆ ಕ್ರಮೇಣ ಕಿತ್ತು ಹೋಗಿದ್ದು, ಇದನ್ನು ದುರಸ್ತಿಗೊಳಿಸುವಂತೆ ಗ್ರಾಮಸ್ಥರು ಬೈಂದೂರು ಪಟ್ಟಣ ಪಂಚಾಯತಿಗೆ ಬೇಡಿಕೆ ಇರಿಸಿದ್ದರು. ಆದರೆ ಸತತ ಮನವಿಯ ಬಳಿಕವೂ ಸ್ಪಂದಿಸದ ಕಾರಣ ಸುಮಾರು 15 ಮಂದಿ ದುರ್ಮಿಯ ತಿರಂಗಾ ಫ್ರೆಂಡ್ಸ್ ಸದಸ್ಯರು ಹಾಗೂ ಗ್ರಾಮಸ್ಥರು ಒಂದುಗೂಡಿ ತಾತ್ಕಾಲಿಕವಾಗಿ ರಸ್ತೆಯ ಹೊಂಡಗಳನ್ನು ಮುಚ್ಚಿದ್ದಾರೆ. ಸಿಮೆಂಟ್ ಮಿಕ್ಸ್ ಬಳಸಿ ಸುಮಾರು ಒಂದು ಕಿ.ಮೀ ತನಕದ ರಸ್ತೆಗೆ ತೆಪೆ ಹಾಕಲಾಗಿದೆ. ಈ ಹಿಂದೆಯೂ ಯುವಕರು ದುರ್ಮಿ ಮಾರ್ಗದಲ್ಲಿ ತಾತ್ಕಾಲಿಕ ದುರಸ್ತಿ ಕಾರ್ಯ ನಡೆಸಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ, ಸಿ ಟ್ರಸ್ಟ್ (ರಿ) ಬೈಂದೂರು, ನಾಟಿ ಯಂತ್ರ ಬ್ಯಾಂಕ್ ಬೈಂದೂರು ಹಾಗೂ ಶ್ರೀ ಮುಕಾಂಭಿಕಾ ಭತ್ತ ಬೆಳೆಗರಾರ ಒಕ್ಕೂಟ ಬೈಂದೂರು ಇವರ ಸಹಯೋಗದಲ್ಲಿ ಯಾಂತ್ರಿಕ್ರತ ಭತ್ತ ಬೇಸಾಯ ಯಂತ್ರಶ್ರೀ ನಾಟಿಗೆ ಉತ್ತರ ಕನ್ನಡ ಜಿಲ್ಲೆಯ ನಿರ್ದೇಶಕ ಮಹೇಶ್ ಎಂ.ಡಿ ಚಾಲನೆ ನೀಡಿ ಮಾತನಾಡಿದರು. ಮಯ್ಯಾಡಿ, ಕಳವಾಡಿ ವೆಂಕಟ ಪೂಜಾರಿ ಯವರ ಗದ್ದೆಯಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಬೈಂದೂರು ತಾಲೂಕಿನ ಹಲವು ಗ್ರಾಮದಲ್ಲಿ ಹಲವಾರು ರೈತರು ‘ಯಂತ್ರಶ್ರೀ’ ಪದ್ಧತಿ ಅಡಿ ಭತ್ತದ ನಾಟಿ ಮಾಡುತ್ತಿದ್ದಾರೆ. ಭತ್ತದ ಸಸಿ ಮಡಿ ತಯಾರಿಯಿಂದ ಕೊಯ್ಲಿನವರೆಗೂ ಸಂಸ್ಥೆಯಿಂದಲೇ ಅಗತ್ಯ ಪರಿಕರ ಹಾಗೂ ಯಂತ್ರ ಒದಗಿಸಲಾಗುತ್ತಿದೆ. ಯೋಜನೆಯ ಕೃಷಿ ಮೇಲ್ವಿಚಾರಕರು, ಹಾಗೂ ಯಂತ್ರಶ್ರೀ ಯೋಧರು ಜಮೀನುಗಳಿಗೆ ಭೇಟಿ ನೀಡಿ ರೈತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಈ ವರ್ಷ ಮುಂಗಾರು ಹಂಗಾಮಿನಲ್ಲಿ ಮೂರು ಸಾವಿರ ಎಕರೆ ಯಾಂತ್ರಿಕ್ರತ ಭತ್ತ ಬೇಸಾಯ ಮಾಡುವ ಯೋಜನೆ ಹೊಂದಿದ್ದೇವೆ ಎಂದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ:  7ನೇ ತರಗತಿಯ ವಿದ್ಯಾರ್ಥಿ ಪ್ರಥ್ವಿ ಎಂಬಾತನನ್ನು ಸೈಕಲ್‌ನಲ್ಲಿ ಆಟವಾಡುತ್ತಿರುವಾಗ ಶಾಂತಾರಾಮ ಶೆಟ್ಟಿ ನಾರುಮಕ್ಕಿ ಎಂಬಾತ ಜೂ.17 ರಂದು ಗಂಭೀರವಾಗಿ ಹಲ್ಲೆ ನಡೆಸಿದ್ದು, ಈ ಬಗ್ಗೆ ದೂರು ದಾಖಲಾಗಿ ಆರು ದಿನಗಳು ಕಳೆದರು ಆರೋಪಿಯನ್ನು ಪೊಲೀಸರು ಬಂಧಿಸದ ಹಿನ್ನಲೆಯಲ್ಲಿ ಭಾನುವಾರ ಶಂಕರನಾರಾಯಣ ಪೊಲೀಸ್ ಠಾಣೆಗೆ ವಿಶ್ವಕರ್ಮ ಸಂಘಟನೆಗಳ ನೇತ್ರತ್ವದಲ್ಲಿ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು. ಮನವಿಗೂ ಮೊದಲು ಶಂಕರನಾರಾಯಣ ಪೊಲೀಸ್ ಠಾಣೆಯ ಎದುರು ಸಂಘಟನೆಯ ಮುಖಂಡರು ಸೇರಿ ಸಭೆ ನಡೆಸಿದರು. ಸಭೆಯಲ್ಲಿ ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಯ್ಯ ಆಚಾರ್ಯ ಕಳಿ ಮಾತನಾಡಿ, ಆರೋಪಿ ನಾರುಮಕ್ಕಿ ಶಾಂತರಾಮ ಶೆಟ್ಟಿ ಎಂಬ ವ್ಯಕ್ತಿ ಸಣ್ಣ ಬಾಲಕನ ಮೇಲೆ ಹಲ್ಲೆ ನಡೆಸಿರುವುದು ಹೇಯ ಕೃತ್ಯ. ಕೆಟ್ಟ ಮನಸ್ಥಿತಿ ಇರುವ ವ್ಯಕ್ತಿಗಳು ಮಾಡು ಕೃತ್ಯವಾಗಿದೆ. ಈ ಕೃತ್ಯದ ವಿರುದ್ಧ ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಕೂಡುವಳಿಯ ಎಲ್ಲಾ ಸಮಾಜದವರು ಮತ್ತು ವಿಶ್ವಕರ್ಮ ಸಮಾಜ ಎಲ್ಲಾ ಸಂಘಟನೆಗಳು ಖಂಡಿಸುತ್ತದೆ.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಅಮಾಸೆಬೈಲು: ಎಸ್.ಎಸ್. ಎಲ್.ಸಿ.ಯು ವಿದ್ಯಾರ್ಥಿಗಳ ಜೀವನದಲ್ಲಿ ಮೈಲಿಗಲ್ಲು, ಮುಂದಿನ ವಿದ್ಯಾಭ್ಯಾಸಕ್ಕೆ ಅಡಿಗಲ್ಲು, ಅಂತಹ ಅಡಿಗಲ್ಲು ಹಾಕಿ ಕೊಟ್ಟ ಶಾಲೆಯನ್ನು ಎಂದೂ ಮರೆಯಬಾರದು ಎಂದು ಶ್ರೀ ದುರ್ಗಾಪರಮೇಶ್ವರಿ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಹೆಂಗವಳ್ಳಿಯ ನಿವೃತ್ತ ಮುಖ್ಯೋಪಾಧ್ಯಾಯರಾದ ನವೀನ್ ಚಂದ್ರ ಹೆಗ್ಡೆ ಹೆಂಗವಳ್ಳಿಯವರು ಅಭಿಪ್ರಾಯಪಟ್ಟರು. ಡ್ಯುಯಲ್ ಸ್ಟಾರ್ ಶಾಲೆ ಅಮಾಸೆಬೈಲಿನಲ್ಲಿ ದ್ವಿತೀಯ ಬ್ಯಾಚ್ ಎಸ್. ಎಸ್.ಎಲ್.ಸಿ.ಯ ವಿದ್ಯಾರ್ಥಿಗಳ ಪ್ರಶಂಸಾ ಸಭೆಯ ಮುಖ್ಯ ಅತಿಥಿಯಾಗಿ ಉತ್ತಮ ಅಂಕಗಳಿಸಿದಂತೆ ಸಮಾಜದಲ್ಲಿ ಮೌಲ್ಯಯುತ ಜೀವನವನ್ನು ಮಾಡಬೇಕು. ನಿಮ್ಮನ್ನು ಅನುಸರಿಸುವವರಿಗೆ ಮಾದರಿಯಾಗಿರಬೇಕು ಎಂದು ಹೇಳಿದರು. ಅತಿಥಿಯಾದ ಶಿವಾನಂದ ಆಚಾರ್ಯ ರವರು ಮಾತನಾಡುತ್ತಾ ಮಕ್ಕಳು ಉತ್ತಮ ರೀತಿಯಲ್ಲಿ ತಯಾರಿಯನ್ನು ನಡೆಸಿ ಉತ್ತಮ ಅಂಕಗಳನ್ನು ಪಡೆದು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲ ವಡ್ಡರ್ಸೆ ಪ್ರಕಾಶ್ ಆಚಾರ್ಯರು ವಹಿಸಿ ಉತ್ತಮ ಅಂಕ ಗಳಿಸಲು ವಿದ್ಯಾರ್ಥಿಯೊಂದಿಗೆ ಶಿಕ್ಷಕರ ಮತ್ತು ಪೋಷಕರ ಸಹಕಾರವೂ ಬಹಳ ಮುಖ್ಯವಾಗಿರುತ್ತದೆ ಅದನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿರುವುದಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಾಡಿಗೆ ಸಮರ್ಪಣಾ ಭಾವದಿಂದ ತನ್ನನ್ನು ಅರ್ಪಿಸಿಕೊಂಡು ಮಾದರಿಯಾದ ಗಿಳಿಯಾರು ಕುಶಲ ಹೆಗ್ಡೆಯವರ ಸ್ಮರಣೆಯಲ್ಲಿ ದತ್ತಿ ನಿಧಿ ಮೂಲಕ ವಿದ್ಯಾರ್ಥಿಗಳಿಗೆ, ಅಸಹಾಯಕರಿಗೆ ೨೩ ವರ್ಷಗಳಿಂದ ಮಾಡುವ ಸಹಾಯ ಒಂದು ಪವಿತ್ರ ಯಜ್ಞ ಎಂದು ಕರೆಯಬಹುದಾಗಿದೆ. ಕೆಲವೇ ಮನುಷ್ಯರು ನಿಧನರಾದ ನಂತರ ಬದುಕಿದಂತೆ ಇರುತ್ತಾರೆ. ಅವರಲ್ಲಿ ಗಿಳಿಯಾರು ಕುಶಲ ಹೆಗ್ಡೆಯವರು ಪ್ರಮುಖರು. ಇಂದು ವಿಸ್ಮತಿಯ ಕಾಲ. ಜನರು ಕೆಲವೇ ವರ್ಷಗಳಲ್ಲಿ ಹಿರಿಯರನ್ನು, ಸಾಧಕರನ್ನು ಮರೆತು ಬಿಡುತ್ತಾರೆ. ಆದರೆ ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್‌ನವರು, ಕುಶಲ ಹೆಗ್ಡೆಯವರ ಕುಟುಂಬ ಸದಸ್ಯರ ಸಹಕಾರದಿಂದ ನೆಲದ ಋಣ ತೀರಿಸುವ ಸತ್ಕಾರ್ಯ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಹಿರಿಯ ಸಾಹಿತಿ, ಸಂಶೋಧಕ ಪ್ರೊ. ಎ. ವಿ. ನಾವಡ ಹೇಳಿದರು. ಕುಂದಾಪುರದ ಸರಕಾರಿ ಪ. ಪೂ. ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ ಆಯೋಜಿಸಿದ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ, ಸಾಧಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಮೂಲತಃ ಕೃಷಿ ಕುಟುಂಬದಿಂದ ಬಂದ ಪ್ರೋ ನರೇಂದ್ರ ನಾಯಕ್‌ರು ಶೈಕ್ಷಣಿಕ ಕ್ಷೇತ್ರದಲ್ಲೂ ಕೃಷಿಯ ಮೂಲಸತ್ವಗಳನ್ನು ಆಳವಡಿಸಿಕೊಂಡು, ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವ ಶೈಕ್ಷಣಿಕ ಕೃಷಿಕ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕರ್ನಾಟಕ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘದ(ಕುಪ್ಮಾ) ಅಧ್ಯಕ್ಷ ಡಾ ಎಂ ಮೋಹನ ಆಳ್ವ ನುಡಿದರು. ಕರ್ನಾಟಕ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ ಮೂಡುಬಿದಿರೆಯ ಆಳ್ವಾಸ್‌ನ ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಂಡ ಕಲಾ ಪ್ರೇಮಿ, ಶಿಕ್ಷಣ ತಜ್ಞ ಪ್ರೋ. ನರೇಂದ್ರ ಎಲ್ ನಾಯಕ್ ಅವರ ಷಷ್ಟಬ್ದಿ ’ನಮ್ಮೊಲುಮೆ’ ಸಂಮಾನ ಸಮಾರಂಭ ಮತ್ತು ಕುಪ್ಮಾ ಸದಸ್ಯರ ಸಮಾಗಮ ಕಾರ್ಯಕ್ರಮದಲ್ಲಿ ಅಭಿನಂದನಾ ನುಡಿಗಳನ್ನಾಡಿದರು. ಸಾಧನೆಯಿಂದ ಪ್ರೇರೆಪಿತರಾಗೋಣ:ಒಬ್ಬ ಕೃಷಿಕನಲ್ಲಿರುವ ಎಲ್ಲಾ ಮೂಲ ಗುಣಗಳನ್ನು ತಾನು ಸ್ಥಾಪಿಸಿರುವ ಎಕ್ಸ್‍ಪರ್ಟ್ ಕಾಲೇಜಿನಲ್ಲಿ ಆಳವಡಿಸಿಕೊಳ್ಳಲಾಗಿದೆ. ಹಚ್ಚ ಹಸಿರಿನ ಪ್ರಕೃತಿ ಸೌಂದರ್ಯದ ನಡುವೆ ಶೈಕ್ಷಣಿಕ ಕೃಷಿಯನ್ನು ನಡೆಸುತ್ತಾ ಕರ್ನಾಟಕದ ವಿಶ್ವಾಸಾರ್ಹ ಪದವಿಪೂರ್ವ ಕಾಲೇಜನ್ನು ಸ್ಥಾಪಿಸಿದ್ದಾರೆ. ಅವರ ಈ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ಶಾಲಾ ಸಂಸತ್ ಚುನಾವಣೆ ನಡೆಯಿತು. ಪ್ರೌಢಶಾಲಾ ವಿಭಾಗದಲ್ಲಿ ವಿದ್ಯಾರ್ಥಿ ನಾಯಕನ ಆಯ್ಕೆಗೆ ಇಬ್ಬರು ಮತ್ತು ಉಪನಾಯಕನ ಆಯ್ಕೆಗೆ ಇಬ್ಬರು ವಿದ್ಯಾರ್ಥಿಗಳು ಹೆಸರು ನೊಂದಾಯಿಸಿಕೊಂಡಿದ್ದರೆ, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ವಿದ್ಯಾರ್ಥಿ ನಾಯಕನ ಆಯ್ಕೆಗೆ ಏಳು ವಿದ್ಯಾರ್ಥಿಗಳು ಮತ್ತು ಉಪನಾಯಕನ ಆಯ್ಕೆಗೆ ಒಂಬತ್ತು ವಿದ್ಯಾರ್ಥಿಗಳು ಹೆಸರು ನೊಂದಾಯಿಸಿಕೊಂಡಿದ್ದರು. ಪ್ರಜಾಪ್ರಭುತ್ವ ಮಾದರಿಯಲ್ಲಿ ನಡೆದ ಈ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಮತ ಚಲಾಯಿಸಿದರು. ಮತದಾನ ಪೂರ್ಣಗೊಂಡ ಬಳಿಕ ಅಭ್ಯರ್ಥಿಗಳ ಸಮ್ಮುಖದಲ್ಲಿ ಮತ ಎಣಿಕೆ ನಡೆಸಲಾಯಿತು. ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ನಾಯಕನಾಗಿ ೧೦ನೇ ತರಗತಿಯ ರಿತೇಶ ಮೊಗವೀರ ಮತ್ತು ಉಪನಾಯಕನಾಗಿ ಜೊಯಲ್ ಫೆರ್ನಾಂಡಿಸ್ ಆಯ್ಕೆಯಾದರು. ಹಿರಿಯ ಪ್ರಾಥಮಿಕ ವಿಭಾಗದಿಂದ ಅನನ್ಯ ವಿದ್ಯಾರ್ಥಿ ನಾಯಕಿಯಾಗಿ ಮತ್ತು ಅಹೀಶ್ ಎಂ.ಕೆ. ಉಪನಾಯಕನಾಗಿ ಆಯ್ಕೆಯಾದರು. ಪ್ರೌಢಶಾಲಾ ವಿಭಾಗದ ಪ್ರಭಾರ ಮುಖ್ಯಶಿಕ್ಷಕಿ ಸುಜಾತ, ಹಿರಿಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದರೆ: ನಾಯಕನೆಂದರೆ ಜವಾಬ್ದಾರಿ, ಅಹಂ ತೊರೆದು ವಿಧೇಯತೆಯಿಂದ ಕಾರ್ಯ ನಿರ್ವಹಿಸುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಇಲ್ಲಿನ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸ್ಮಾರಕ ಸಭಾಂಗಣ (ಕೃಷಿ ಸಿರಿ ವೇದಿಕೆ)ದಲ್ಲಿ ನಡೆದ ಪುತ್ತಿಗೆಯ ವಿವೇಕಾನಂದ ನಗರ  ಆಳ್ವಾಸ್ ಕೇಂದ್ರೀಯ ಶಾಲೆಯ ‘ಸ್ವಾಗತ ದಿನ ಮತ್ತು ಇನ್ವೆಸ್ಟಿಚರ್ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬನಲ್ಲೂ ತಾನು ನಾಯಕನಾಗಬೇಕೆಂಬ ಹಂಬಲ ಇರಬೇಕು. ನಾಯಕನಾಗಲು ನಾನು ಅರ್ಹನಲ್ಲ ಎಂಬ ಹಿಂಜರಿಕೆ ಇರಬಾರದು. ಪ್ರತಿ ವಿದ್ಯಾರ್ಥಿಗಳು ಇಲ್ಲಿ ನಾಯಕರೇ. ನಾಯಕನಾದವನು ಅಹಂ ತೊರೆದು ತನಗಿರುವ ಜವಾಬ್ದಾರಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹಿತವಚನ ಹೇಳಿದರು. ಶಾಲೆಯು ನಮ್ಮ ಪ್ರಗತಿಗೆ ಮಹತ್ವದ ಸಮಯವನ್ನು ಒದಗಿಸುತ್ತದೆ. ಸರಿ ಹಾಗೂ ತಪ್ಪು ಈ ಎರಡೂ ವಿಷಯಗಳಲ್ಲೂ ವಿದ್ಯೆಯನ್ನು ಪಡೆಯುತ್ತೇವೆ. ಆದರೆ ತಪ್ಪೆಂದು ತಿಳಿದ ತಪ್ಪುದಾರಿಗೆ ಸಾಗುವುದು ಸೂಕ್ತವಲ್ಲ ಎಂದರು. ಹಲವಾರು ಕಾರ್ಯಕ್ರಮಗಳು ವಿಭಿನ್ನ ವಿಚಾರಗಳನ್ನು ತಿಳಿಸುತ್ತದೆ. ಈ ಮೂಲಕ ಕಣ್ಣ ಮುಂದೆ ನಡೆಯುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಜೂ.22: ಕಳ್ಳತನ ಮಾಡುತ್ತಿರುವಾಗಲೇ ಸಿಸಿ ಕ್ಯಾಮೆರಾ ಲೈವ್ ಮಾನಿಟರಿಂಗ್ ಆಧರಿಸಿ ಕಳ್ಳನೋರ್ವ ಸೆರೆಯಾದ ಘಟನೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮುಳ್ಳಿಕಟ್ಟೆ ಎಂಬಲ್ಲಿ ನಡೆದಿದೆ. ಹೊಸಾಡು ಶಾಖೆಯ ಪಂಚಗಂಗಾ ವ್ಯವಸಾಯ ಸೇವಾ ಸಹಕಾರಿ ಸಂಘದ ಕಿಟಿಕಿಯ ಸರಳು ಮುರಿದು ಕಳ್ಳತನ ನಡೆದಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತ 10 ನಿಮಿಷದಲ್ಲೇ ಕಳ್ಳನ ಹೆಡೆಮುರಿ ಕಟ್ಟಿದ್ದಾರೆ. ಶುಕ್ರವಾರ ರಾತ್ರಿ ಸುಮಾರು 1.47 ಕ್ಕೆ ಮುಳ್ಳಿಕಟ್ಟೆಯಲ್ಲಿರುವ ಸಹಕಾರಿ ಸಂಘ ಕಿಟಕಿಯ ಗ್ರಿಲ್ ಒಡೆದು ಕಳ್ಳ ಒಳನುಗ್ಗಿದ್ದಾನೆ. ಕುಂದಾಪುರ ಅಂಕದಕಟ್ಟೆಯಲ್ಲಿರುವ ಸೈನ್ ಇನ್ ಸೆಕ್ಯುರಿಟಿಯ ಸಿಸಿಟಿವಿ ಲೈವ್ ಮಾನಿಟರಿಂಗ್‌ನಲ್ಲಿ ಘಟನೆ ಬೆಳಕಿಗೆ ಬಂದು ಬೀಟ್ ಪೊಲೀಸರಿಗೆ ಮಾಹಿತಿ ನೀಡಲಾಯಿತು. 10 ನಿಮಿಷದಲ್ಲಿ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿ ಕಳ್ಳನನ್ನು ಹಿಡಿದರು. ಕಳ್ಳ ಕೇರಳದಿಂದ ಬಂದವನು ಎನ್ನಲಾಗಿದೆ. ಪೊಲೀಸ್ ಇಲಾಖೆಯಿಂದ ಹೆಚ್ಚಿನ ಮಾಹಿತಿ ಕುರಿತು ತನಿಖೆ ನಡೆಯುತ್ತಿದೆ. ಗಂಗೊಳ್ಳಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ, ಸೈನ್ ಇನ್ ಸೆಕ್ಯೂರಿಟಿಯ ಲೈವ್ ಮಾನಿಟರಿಂಗ್ ಸಿಬ್ಬಂದಿಯ…

Read More