ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ/ಬೈಂದೂರು: ತಾಲೂಕಿನ ಕುಂದಾಪುರ ಹೊಲಿಕ್ರಾಸ್ ಚರ್ಚ್, ಬಸ್ರೂರು ಫಿಲೀಪ್ ನೇರಿ ಚರ್ಚ್, ತ್ರಾಸಿ ಕ್ರಿಸ್ಟ್ಕಿಂಗ್ ಚರ್ಚ್, ಗಂಗೊಳ್ಳಿ ಅವರ್ ಲೇಡಿ ಆಫ್ ಇಮ್ಯಾಕ್ಯೂಲೇಟ್ ಚರ್ಚ್, ತಲ್ಲೂರು, ಬೆಳ್ವೆ ಜೊಸೆಫ್ ಚರ್ಚ್, ಫ್ರಾನ್ಸಿಸ್ ಆಸಿಸಿ ಚರ್ಚ್, ಬೈಂದೂರು ಹೊಲಿಕ್ರಾಸ್ ಚರ್ಚ್ ಸೇರಿದಂತೆ ವಿವಿಧ ಚರ್ಚುಗಳು ಹಾಗೂ ಕ್ರೈಸ್ತ ಸಮುದಾಯ ಕ್ರಿಸ್ಮಸ್ ಹಬ್ಬವನ್ನು ಸರಳವಾಗಿ ಆಚರಿಸಿ ಸಂಭ್ರಮಿಸಿದರು. ಚರ್ಚ್ಗಳಿಗೆ ಕುಟುಂಬ ಸಮೇತ ತೆರಳಿದ ಕ್ರೈಸ್ತರು, ಯೇಸು ಕ್ರಿಸ್ತನ ಶೀಲುಬೆ ಮುಂದೆ ನಿಂತು ಶ್ರದ್ದಾ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು. ಚರ್ಚ್ನ ಆವರಣದಲ್ಲಿ ನಿರ್ಮಿಸಿರುವ ಕಣ್ಮನ ಸೆಳೆಯುವ ಗೋದಲಿಗಳು ವಿದ್ಯುತ್ ದೀಪಾಲಂಕಾರ ಗಮನ ಸೆಳೆಯುತ್ತಿದ್ದವು. ಕ್ರೈಸ್ತರ ಮನೆಗಳಲ್ಲಿ ಸಂಭ್ರಮ ಮನೆಮಾಡಿದ್ದು, ಗೋದಲಿ, ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ. ಬೈಂದೂರಿನ ಹೋಲಿಕ್ರಾಸ್ ಚರ್ಚಿನಲ್ಲಿ ರೆ. ಫಾ. ವಿನ್ಸೆಂಟ್ ಕುವೆಲ್ಲೋ, ರೆ.ಫಾ. ರಾಯಲ್ ನಜ್ರೆತ್, ರೆ.ಫಾ. ಸಿರಿಲ್ ಲೋಬೋ, ರೆ.ಫಾ ಕಿರಣ್ ನಜ್ರೆತ್ ರವರ ನೇತ್ರತ್ವದಲ್ಲಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಯಿತು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ನಮ್ಮ ದೇಶಕ್ಕೆ ದೊಡ್ಡ ಚರಿತ್ರೆಯಿದ್ದು ಅದರೊಂದಿಗೆ ಮಾನವೀಯ ಮೌಲ್ಯವುಳ್ಳವರೂ, ಚಾರಿತ್ರ್ಯವಂತರ ಅಗತ್ಯವಿದೆ. ಅಂತವರನ್ನು ನಿರ್ಮಿಸುವ ಕಾರ್ಯದಲ್ಲಿ ಸ್ಕೌಟ್ಸ್ ಗೈಡ್ಸ್ ತೊಡಗಿದೆ. ವಿದ್ಯಾರ್ಥಿ ದೆಸೆಯಿಂದಲೇ ಶಿಸ್ತು, ಜೀವನಮೌಲ್ಯ, ಹಿರಿಯರಿಗೆ ಆದರಿಸುವ, ಕಿರಿಯರನ್ನು ಪ್ರೀತಿಸುವ ಗುಣಧರ್ಮವನ್ನು ಸ್ಕೌಟ್ಸ್ ಗೈಡ್ಸ್ ಕಲಿಸುತ್ತದೆ ಎಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಎಸ್. ಬೊಮ್ಮಾಯಿ ಹೇಳಿದರು. ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಐದನೇ ದಿನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಕೌ ಟ್ಸ್ – ಗೈಡ್ಸ್ ಸಂಸ್ಥೆ ಇದೀಗ ಸಂಸ್ಕೃತಿ ಬಿಂಬಿಸುವ ಹಲವು ಕಾರ್ಯಕ್ರಮವನ್ನು ಏರ್ಪಡಿಸುವ ಮೂಲಕ ಸಂಸ್ಕೃತಿಯ ಚಳುವಳಿ ಆರಂಭಿಸಿದ್ದಾರೆ. ಇದು ಭಾರತೀಯ ಪರಂಪರೆಯ ಉಳಿವಿಕೆಗೆ ಹಾಗೂ ಭವ್ಯ ಭಾರತ ನಿರ್ಮಾಣಕ್ಕೆ ಸಾಕ್ಷಿಯಾಗುತ್ತಿದೆ ಎಂದರು. ಮಕ್ಕಳಿಗೆ ವಿದ್ಯೆ ಜತೆಗೆ ಬೌದ್ಧಿಕ ಜ್ಞಾನ ಅಗತ್ಯ. ಶಿಸ್ತು, ಜೀವನ ಮೌಲ್ಯವನ್ನು ಸಮಂಜಸವಾಗಿ ತಿಳಿಸಿದರೇ ಮಗು ಭವಿ?ದಲ್ಲಿ ಉತ್ತಮ ನಾಗರಿಕನಾಗುತ್ತಾನೆ. ಸಂಸ್ಕ್ರತಿಯ ಉಳಿವಿಕೆಯ ಮೇಲೆ ಭಾರತದ ಭವಿ? ನಿರ್ಧರಿತವಾಗಿದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಇತ್ತೀಚಿನ ದಿನಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ಮಕ್ಕಳ ದಾಖಲಾತಿ ಗಣನೀಯವಾಗಿ ಇಳಿದಿದೆ. ಆಂಗ್ಲ ಮಾಧ್ಯಮ ಶಾಲೆಗಳ ಮೋಹಕ್ಕೆ ಒಳಗಾಗಿರುವ ಪೋಷಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ದಾಖಲಾತಿ ಮಾಡುತ್ತಿದ್ದಾರೆ. ಮಕ್ಕಳಿಗೆ ವ್ಯವಹಾರಿಕವಾಗಿ ಆಂಗ್ಲ ಭಾಷೆಯ ಅವಶ್ಯಕತೆ ಇದೆಯೇ ಹೊರತು ಜೀವನದಲ್ಲಿ ಆಂಗ್ಲ ಭಾಷೆ ಅಷ್ಟೊಂದು ಮಹತ್ವ ಪಡೆದುಕೊಂಡಿಲ್ಲ. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರು ಇಂದು ಉನ್ನತ ಹುದ್ದೆಯಲ್ಲಿ, ಸ್ಥಾನಮಾನ ಪಡೆದುಕೊಂಡಿದ್ದಾರೆ ಎಂದು ಕರ್ಣಾಟಕ ಬ್ಯಾಂಕ್ ಆದಿ ಉಡುಪಿ ಶಾಖೆಯ ವ್ಯವಸ್ಥಾಪಕ ಬಿ. ರವೀಂದ್ರ ಶ್ಯಾನುಭಾಗ್ ಹೇಳಿದರು. ಜಿ.ಎಸ್.ವಿ.ಎಸ್. ಅಸೋಸಿಯೇಶನ್ ಪ್ರಾಯೋಜಿತ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ತರ ಬೆಳ್ಳಿ ಹಬ್ಬದ ಪ್ರಯುಕ್ತ ಶಾಲೆಯ ಟಿ.ವಿಮಲಾ ವಿ.ಪೈ ಸಭಾಗೃಹದಲ್ಲಿ ಶನಿವಾರ ಜರಗಿದ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರು ಯೋಜನೆ ರೂಪಿಸಿ ಶ್ರಮಿಸಬೇಕು ಎಂದು…
ಐಶ್ವರ್ಯ ಕೋಣನ | ಕುಂದಾಪ್ರ ಡಾಟ್ ಕಾಂ ವರದಿ.ವಿದ್ಯಾಗಿರಿ: ಅಲ್ಲಿ ಮೀಸೆ ಹೊತ್ತ ಇಬ್ಬರು ವಯೋವೃದ್ಧ ಗಂಡಸರಿಗೆ ಎಲ್ಲಿಲ್ಲದ ಡಿಮ್ಯಾಂಡು. ಜೊತೆಗೆ ಕಟ್ಟುಮಸ್ತಾದ ತರುಣರೂ ಗಮನ ಸೆಳೆಯುತ್ತಿದ್ದರು. ಆಳ್ವಾಸ್ ಕ್ಯಾಂಪಸ್ಸಿನಲ್ಲಿ ನಡೆಯುತ್ತಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ, ನುಡಿಸಿರಿ ವೇದಿಕೆಯ ಸಮೀಪ ಸಾಹಜ ಪ್ರದರ್ಶನ ನಡೆಸುತ್ತಿದ್ದ ಬಿಜಾಪುರದ ದಾನೇಶ್ವರಿ ತಂಡ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಜನರ ಸಮ್ಮುಖದಲ್ಲಿ ಚಕ್ಕಡಿಕಲ್ಲಿಗೆ ಹಗ್ಗ ಕಟ್ಟಲಾಗುತ್ತದೆ. ಆ ಹಗ್ಗವನ್ನು ಬಿಜಾಪುರದ ದಿಗಂಬರಪ್ಪ ಅವರ ಮೀಸೆಗೆ ಜೋಡಿಸಲಾಗುತ್ತದೆ. ತಕ್ಷಣ ಅವರು ತಮ್ಮ ಮೀಸೆಯಿಂದಲೇ ೪೦ಕೆ.ಜಿ ಭಾರದ ಚಕ್ಕಡಿಕಲ್ಲನ್ನು ಎತ್ತುತ್ತಾರೆ. ಶಂಕರಪ್ಪ ಮತ್ತು ದಿಗಂಬರಪ್ಪ ಎನ್ನುವವರು ಕ್ರಮವಾಗಿ ೪೦ ಮತ್ತು ೪೫ ಕೆ.ಜಿ. ತೂಕದ ಚಕ್ಕಡಿಕಲ್ಲು ಎತ್ತುವ ಸಾಹಸ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬಿಜಾಪುರದ ರಮೇಶ್ ದಾನಪ್ಪ ಪಾಟೀಲ್ ಬಾಯಿಂದ 120 ಕೆಜಿಯ ತೂಕವನ್ನು ಹಾರೆಯ ಮೂಲಕ ಎತ್ತುತ್ತಾರೆ. 14 ವರ್ಷದ ಹುಡುಗ 122 ಕೆಜಿಯ ಭತ್ತದ ಚೀಲವನ್ನು ಬೆನ್ನ ಮೇಲೆ ಹೊತ್ತುಕೊಳ್ಳುವ ಸಣ್ಣಗೆ ಭಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಮಣ್ಣಿನ ಕಳಸ ಹೊತ್ತು ಮೆರವಣಿಗೆ ಹೊರಟ ಹೆಣ್ಣು ಮಕ್ಕಳು, ಕಚ್ಚೆ ಕಟ್ಟಿ ತಮಟೆ ಭಾರಿಸುತ್ತಿದ್ದ ಹುಡುಗರು… ಕತ್ತಿ ಹಿಡಿದು ಗೋವಿಂದ…ಗೋವಿಂದ…. ಎಂದು ದೇವರ ನಾಮ ಸ್ಮರಿಸುತ್ತಿದ್ದ ವೀರ ಕುಮಾರರ ಪಾತ್ರಧಾರಿಗಳು, ನಂದಿಕೋಲು ಹಿಡಿದು ಕುಣಿಯುತ್ತಿದ್ದ ನೃತ್ಯಗಾರರು…. ಕರಗದ ಪಾತ್ರಧಾರಿ ಕುಣಿಯುತ್ತ ವೇದಿಕೆಗೆ ಬಂದದ್ದೆ ತಡ, ಪ್ರೇಕ್ಷಕರ ಕೇಕೆ ಕರತಾಡನ ಮುಗಿಲು ಮುಟ್ಟತ್ತು…. ಬಿ.ಬಿ.ಎಂ.ಪಿ ವಿಭಾಗದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ವಿಶಿಷ್ಟ ನೃತ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಜಾಂಬೂರಿಯಲ್ಲಿ “ಏಕ ಭಾರತ ಶ್ರೇಷ್ಠ ಭಾರತ” ಸಂದೇಶ ಸಾರುವ ಜಿಲ್ಲಾವಾರು ಸಾಂಸ್ಕೃತಿಕ ಪ್ರದರ್ಶನವನ್ನು ಕೆ.ವಿ ಸುಬ್ಬಣ್ಣ ಬಯಲು ರಂಗ ಮಂದಿರದಲ್ಲಿ ಆಯೋಜಿಸಲಾಗಿತ್ತು. “ಬೃಹತ್ ಬೆಂಗಳೂರು ಸಾಂಸ್ಕೃತಿಕ ವೈಭವ” ಎನ್ನುವ ಶಿರ್ಷಿಕೆಯೊಂದಿಗೆ ಬಿ.ಬಿ.ಎಂ.ಪಿ ವಿಭಾಗದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಸಾಧನೆ, ಬೆಂಗಳೂರು ಇತಿಹಾಸ ಸಾರುವ ರೂಪಕ, ಪಟಕುಣಿತ, ಅಣ್ಣಮ್ಮ ತಾಯಿ ಉತ್ಸವ, ದ್ರೌಪದಿ ಧರ್ಮರಾಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಮಣ್ಣಿನಿಂದ ವಿವಿಧ ಅಲಂಕಾರಿಕ ವಸ್ತುಗಳು ಹಾಗೂ ದಿನಬಳಕೆಯ ಪಾತ್ರೆಗಳನ್ನು ತಯಾರಿಸಬಹುದು. ಆದರೆ, ಆಭರಣಗಳನ್ನು ತಯಾರಿಸುವುದನ್ನು ನೋಡಿದ್ದೀರಾ? ಅಬ್ಬಬ್ಬಾ. ಎಂತಹ ಅಧ್ಬುತ ವಿನ್ಯಾಸದ ಆಭರಣಗಳು! ಆಳ್ವಾಸ್ ಆವರಣದಲ್ಲಿ ಜರುಗುತ್ತಿರುವ ಜಾಂಬೂರಿಯ ಕರಕುಶಲ ವಸ್ತು ಪ್ರದರ್ಶನದಲ್ಲಿ ಇಂತಹದ್ದೊಂದು ವಿಶೇಷ ಮಳಿಗೆ ಗಮನ ಸೆಳೆಯಿತು. ರಾಯಚೂರು ಜಿಲ್ಲೆಯ ಹನುಮಂತಿ ಎಂಬ ಮಹಿಳೆ ಮತ್ತು ತಂಡದವರು ಜೇಡಿಮಣ್ಣಿನಿಂದ ಸುಂದರವಾದ ಕಾಲ್ಗೆಜ್ಜೆ, ಕಿವಿಯೋಲೆ, ಕೈಬಳೆ, ಕೈಹಾರ, ಕೊರಳ ಸರ, ಕೀ ಬಂಚ್, ಜುಮ್ಕಿ, ಹ್ಯಾಂಗಿಗ್ಸ್, ಬಾಗಿಲು ತೋರಣಗಳನ್ನು ತಯಾರಿಸುತ್ತಿದ್ದಾರೆ. ಹೀಗೆ ವಿವಿಧ ವಿನ್ಯಾಸಗಳಿಂದ ಗ್ರಾಹಕರು ಒಮ್ಮೆ ತಮ್ಮ ಅಂಗಡಿಯತ್ತ ಕಣ್ಣು ಹಾಯಿಸುವಂತೆ ಮಾಡುತ್ತಿದ್ದಾರೆ ಈ ಗೃಹಿಣಿ. ಸದಾ ಕೃಷಿ ಹಾಗೂ ಮನೆ ಕೆಲಸದಲ್ಲಿ ನಿರತರಾಗಿರುವ ಗೃಹಿಣಿಯರ ಕಷ್ಟವನ್ನು ಅರಿತ ಸರ್ಕಾರೇತರ ಸಂಸ್ಥೆಗಳು ಹಳ್ಳಿ ಪ್ರದೇಶಗಳ ಮಹಿಳೆಯರಿಗೆ ಹೊಸ ಜೀವನೋಪಾಯವನ್ನು ಪರಿಚಯಿಸಿದರು. ಕೇರಳ, ದೆಹಲಿ, ಬೆಂಗಳೂರು, ಉಡುಪಿ ಹೀಗೆ ಬೇರೆ ಬೇರೆ ಪ್ರದೇಶಗಳಿಂದ ರಾಯಚೂರಿಗೆ ಆಗಮಿಸಿ ಸಂಘಟನೆಯನ್ನು ಆರಂಭಿಸಿದರು. ಪೋತ್ನಾಳ್ನಲ್ಲಿ ಹತ್ತು ರೂಪಾಯಿಯ ಉಳಿತಾಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಕೃಷಿಸಿರಿಯ ಸುತ್ತಮುತ್ತಲೆಲ್ಲಾ ಸಾವಿರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಗುಂಪಿನ ಚಲನವಲನಗಳ ನಡುವೆ ನೂರಕ್ಕೂ ಹೆಚ್ಚು ಬೆದರು ಗೊಂಬೆಗಳು ಗಮನ ಸೆಳೆಯುತ್ತಿದ್ದವು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಕೃಷಿಮೇಳದ ಸಮೀಪವಿರುವ ತರಕಾರಿ ಹಾಗೂ ಹೂವಿನ ತೋಟದ ನಡುವೆ ಬೆದರು ಗೊಂಬೆಗಳನ್ನು ನಿಲ್ಲಿಸಿರುವುದು ಆಕರ್ಷಕವಾಗಿ ಕಾಣುತ್ತಿದೆ. ತೋಟದಲ್ಲಿರುವ ಹೂವು ಹಾಗೂ ತರಕಾರಿಗಳಿಗೆ ಯಾವುದೇ ಪ್ರಾಣಿ ಪಕ್ಷಿಗಳಿಂದ ಹಾನಿಯಾಗಬಾರದು ಎನ್ನುವ ಉದ್ದೇಶದಿಂದ ನಿಲ್ಲಿಸುವ ಗೊಂಬೆಗಳೇ ತೋಟಕ್ಕೆ ಹೆಚ್ಚು ಆಕರ್ಷಣೆಯನ್ನು ನೀಡುವಂತಿದ್ದು ಜಾಂಬೂರಿಯಲ್ಲಿ ಅವುಗಳ ಚಿತ್ರಣವನ್ನು ಸೆರೆ ಹಿಡಿಯುವವರ ಸಂಖ್ಯೆಯು ಹೆಚ್ಚಾಗಿದೆ. ಹುಲ್ಲಿನಿಂದ ತಯಾರಿಸಿದ ಗೊಂಬೆಗಳಿಗೆ ಮಡಕೆಯ ಮುಖವಾಡವನ್ನು ಹಾಕಿ ಅದಕ್ಕೆ ಟೋಪಿಯನ್ನು ಹಾಕಿ ಅಲಂಕಾರ ಮಾಡಿ ನಿಲ್ಲಿಸಿರುವ ಭಂಗಿ ನೋಡುಗರಿಗೆ ಜೀವಂತ ವ್ಯಕ್ತಿ ತೋಟದ ಕಾವಲಿಗೆ ನಿಂತಂತಿತ್ತು. ಒಂದೆಡೆ ವಿಭಿನ್ನರೀತಿಯ ತರಕಾರಿಗಳು ನೋಡುಗರನ್ನು ಆಕರ್ಷಿಸಿದರೆ ಮತ್ತೊಂದೆಡೆ ಈ ಬೆದರು ಗೊಂಬೆಗಳು ಜನರನ್ನು ಆಕರ್ಷಿಸುವ ಮೂಲಕ ಜಾಂಬೂರಿಯ ಸೌಂದರ್ಯವನ್ನು ಇಮ್ಮಡಿಗೊಳಿಸಿದವು. ವರದಿ: ಜ್ಯೋತಿ ಜಿ., ದ್ವಿತೀಯ ವರ್ಷ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ವಿವಿಧ ರಾಜ್ಯಗಳ ಸಂಸ್ಕೃತಿ – ಸಾಂಸ್ಕೃತಿಕ ಪ್ರದರ್ಶನಕ್ಕೆ ಆಳ್ವಾಸ್ ವಿದ್ಯಾಸಂಸ್ಥೆಯ ಕೆ.ವಿ. ಸುಬ್ಬಣ್ಣ ಬಯಲು ರಂಗಮಂದಿರ ಸಾಕಿಯಾಯಿತು. ಈಸ್ಟರ್ನ್ ರೈಲ್ವೆಯ ರೋವರ್ಸ್ಸ್ ಮತ್ತು ರೇಂಜರ್ಸ್ಸ್ ಕಲಾವಿದರು ಸ್ವಾತಂತ್ರ್ಯ ಅಮೃತಮಹೋತ್ಸವದ ಸವಿ ನೆನಪಿನಲ್ಲಿ ಹೋರಾಡಿ ಮಡಿದ ವೀರ ಯೋಧರಿಗೆ ನೃತ್ಯದ ಮುಖೇನ ಗೌರವ ನಮನ ಸಲ್ಲಿಸಿದರು. ಶ್ವೇತ ವರ್ಣದ ವಸ್ತ್ರ ಮತ್ತು ತ್ರಿವರ್ಣ ಧ್ವಜದೊಂದಿಗಿನ ಅವರ ನೃತ್ಯ ಪ್ರದರ್ಶನ ಭಾರತ ಮಾತೆಯ ಪ್ರಭಾವಳಿಯನ್ನು ಪ್ರತಿಬಿಂಬಿಸಿತು. ಡೊಳ್ಳು ಕುಣಿತದಲ್ಲಿ ಗಂಡು ಹೆಣ್ಣೆಂಬ ಬೇಧ ಭಾವವಿಲ್ಲದೆ ರಾಯಚೂರಿನ ವಿದ್ಯಾರ್ಥಿಗಳು ಕುಣಿದ ರೀತಿ ಪ್ರೇಕ್ಷಕರಲ್ಲೂ ತಾವೂ ಡೊಳ್ಳು ನುಡಿಸಬೇಕು ಎನ್ನುವ ಹುಮ್ಮಸ್ಸು. ಅದರಲ್ಲೂ ಆ ತಂಡದ ಮಾರ್ಗದರ್ಶಕರು ವೇದಿಕೆಯ ಬದಿಯಲ್ಲಿಯೇ ನಿಂತು ಕೈ ಸನ್ನೆಯಲ್ಲಿಯೇ ತಮ್ಮ ಮಕ್ಕಳಿಗೆ ಧೈರ್ಯ ತುಂಬಿದರು. ಕರ್ನಾಟಕವೂ ಸೇರಿದಂತೆ ಹೊರ ರಾಜ್ಯಗಳ ಪ್ರಾದೇಶಿಕ ಸಂಸ್ಕೃತಿ ಬಿಂಬಿಸುವ ವಿಭಿನ್ನ ಉಡುಗೆ-ತೊಡುಗೆಗಳೊಂದಿಗೆ ಮಿಂಚುತ್ತಿದ್ದ ವಿದ್ಯಾರ್ಥಿಗಳು ಯಾವಾಗ ವೇದಿಕೆಗೆ ಹೋಗುತ್ತೇವೋ ಎಂದು ಕಾತುರದಿಂದ ಕಾಯುತ್ತಿರುವುದು ಒಂದೆಡೆಯಾದರೆ, ವೇದಿಕೆ ಎಡಭಾಗದಲ್ಲಿ ಕೆಲ ವಿದ್ಯಾರ್ಥಿಗಳ…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ದೈನಂದಿನ ಆಹಾರ ಕ್ರಮದಲ್ಲಿ ಪ್ರಮುಖ ಪಾತ್ರವಹಿಸುವ ಭತ್ತದ ತಳಿಗಳ ಕುರಿತು ಕುಂಬಳೂರು ಹರಿಹರದ ಶರಣ ಮುದ್ದಣ್ಣ ಸಾವಯವ ಕೃಷಿಕರ ಬಳಗವು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಕೃಷಿಮೇಳದಲ್ಲಿ ಪ್ರದರ್ಶನ ಎರ್ಪಡಿಸಿದ್ದು, ಕೃಷಿಪ್ರಿಯರ ಗಮನ ಸೆಳೆಯಿತು. ಈ ಮಳಿಗೆಯು 150ಕ್ಕೂ ಅಧಿಕ ಸಾಂಪ್ರದಾಯಿಕ ಪ್ರಾಚೀನ ಪ್ರಬೇಧದ ಭತ್ತಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕ ತಿಳುವಳಿಕೆ ನೀಡುತ್ತಿದೆ. ಇಲ್ಲಿ ರೈತರೇ ಮುಂದೆ ಬಂದು ವಿದ್ಯಾರ್ಥಿಗಳಿಗೆ ತಿಳೀಹೇಳುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಚಂದನ್ ಬೋಗಾ, ವಂದನಾ, ಅಂಬಾ ಮಾರಿ, ತೂಯಮಲ್ಲಿ, ಗೋಪಿಕಾ, ರತ್ನಸಾಗರ್, ಬಾಸುಮತಿ, ಕರಿಗಜವಿಲ್ಲಿ, ಇನ್ನಿತರ ವೈವಿಧ್ಯಮಯ ಸಾಂಪ್ರದಾಯಿಕ ಮತ್ತು ದೇಶೀಯ ಭತ್ತದ ತಳಿಗಳನ್ನು ಪ್ರದರ್ಶನಕ್ಕಿಡಲಾಗಿದೆ. ಪುರಾತನ ಕಾಲದಿಂದ ಬೆಳೆಸಿಕೊಂಡು ಬಂದ ವಿವಿಧ ಬಗೆಯ ಭತ್ತಗಳು ಇಂದು ಎಲ್ಲೆಡೆ ಕಾಣಸಿಗುವುದು ಅತಿ ವಿರಳ. ಅದೆಷ್ಟೋ ಜನರಿಗೆ ಭತ್ತದಲ್ಲಿನ ಔಷದೀಯ ಗುಣದ ಕುರಿತು ತಿಳಿದಿಲ್ಲ. ಇಂತಹ ವಿಶೇಷ ಭತ್ತದ ಪ್ರಕಾರಗಳ ಕುರಿತಾದ ವಿವರಣೆಯನ್ನು ಕೃಷಿಮೇಳದ ವಸ್ತು ಪ್ರದರ್ಶನದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಸ್ಕೌಟ್ ಅಂಡ್ ಗೈಡ್ಸ್ ಅಂತಾರಾಷ್ಟ್ರೀಯ ಜಾಂಬೂರಿ ಹಲವು ಕಲೆ ಸಂಸ್ಕೃತಿಗಳಿಗೆ ವೇದಿಕೆಯಾಗಿದೆ. ಅದರಲ್ಲೂ ಬೆಂಗಾಲದಿಂದ ಬಂದಿರುವ ಧೋಕ್ರಾ ಆರ್ಟ್ನ ಮೂರ್ತಿಗಳು ಜನಮನ ಸೆಳೆಯುತ್ತಿವೆ. ಧೋಕ್ರಾ ಆರ್ಟ್, ‘ಧೋಕ್ರಾ ದಾಮರ್’ ಎಂಬ ಬುಡಕಟ್ಟು ಜನಾಂಗದಿಂದ ಬಂದಿದ್ದು, ಈ ಕಲೆಯನ್ನು ಜಗತ್ತಿನ ಮೊದಲ ಕಬ್ಬಿಣಾಂಶ ಇಲ್ಲದ ಲೋಹವನ್ನು ಉಪಯೋಗಿಸಿಕೊಂಡು ಮೂರ್ತಿಗಳನ್ನು ಸಿದ್ದಪಡಿಸಿರುವ ಏಕೈಕ ಕಲೆ ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ. ಧೋಕ್ರಾ ಆರ್ಟ್ ಮೂರ್ತಿಗಳನ್ನು ತಾಮ್ರ್ರದ ತಂತಿಗಳು, ಚೂರುಗಳನ್ನು ಬಳಸಿಕೊಂಡು ಮೂರ್ತಿಗಳನ್ನು ತಯಾರಿಸುವುದೇ ಈ ಕಲೆಯ ವಿಶೇಷತೆ. ಈ ಮೂರ್ತಿಗಳನ್ನು ಲಾಸ್ಟ್ ವ್ಯಾಕ್ಸ್ ತಂತ್ರಜ್ಞಾನವನ್ನು ಬಳಸಿಕೊಂಡು ತಯಾರಿಸಲಾಗುತ್ತದೆ. ಇಂತಹ ವಿಷೇಶತೆಯುಳ್ಳ ಕಲಾ ಪ್ರಕಾರವನ್ನು ಜಂಬೂರಿಯ ಕಲಾಮೇಳದಲ್ಲಿ ಸಾರ್ವಜನಿಕರನ್ನು ಆಕರ್ಷಿಸುತ್ತಿದೆ. ಪಶ್ಚಿಮ ಬಂಗಾಳದ ಹಲವು ಬುಡಕಟ್ಟು ಜನಾಂಗ ಈ ಕಲೆಯಿಂದಲೇ ಜೀವನಾಂಶ ಕಂಡುಕೊಳ್ಳುತ್ತಿವೆ. ಅಂತಹ ಕುಟುಂಬಗಳಲ್ಲಿ ಸುರೇಶ್ ಕರ್ಮಕಾರ್ ಕುಟುಂಬವೂ ಒಂದು. ಇದೀಗ ಮೂಡುಬಿದಿರೆಯ ಜಾಂಬೂರಿಗೆ ಬಂದು ತಾವು ತಯಾರಿಸಿರುವ ಮೂರ್ತಿಗಳನ್ನು ಮಾರಾಟಮಾಡಿ ಪ್ರಚಾರ ಮಾಡುತ್ತಿದ್ದಾರೆ. ಬರಿಯ ವಿದ್ಯಾರ್ಥಿಗಳೇ ತುಂಬಿಕೊಂಡಿರುವ ಈ…
