ಶ್ರದ್ದಾ, ಭಕ್ತಿಯಿಂದ ದೇವರ ಆರಾಧಿಸುವುದೇ ಆಧ್ಯಾತ್ಮ: ಸಂಯಮೀಂದ್ರಶ್ರೀ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಪುರಾಣಗಳಲ್ಲಿ ಗಣಪತಿಗೆ ಮೊದಲ ಪೂಜೆ ಸಲ್ಲಬೇಕು ಎಂದು ಹೇಳಲಾಗಿದ್ದರೂ ಗುರುವಿನ ಮಾರ್ಗದರ್ಶನದಲ್ಲಿ ಭಕ್ತಿ ನಿಷ್ಠೆಯಿಂದ ಭಗವಂತನನ್ನು ಧ್ಯಾನಿಸಿದಾಗ ಆತ್ಮದ ಎಲ್ಲಾ ನ್ಯೂನ್ಯತೆಗಳನ್ನು ಹೋಗಲಾಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಶ್ರೀ ಕಾಶೀ ಮಠಾಧೀಶ ಪರಮಪೂಜ್ಯ ಶ್ರೀ ಸಂಯಮೀಂದ್ರ ತೀರ್ಥ ಶ್ರೀಪಾದಂಗಳವರು ಹೇಳಿದರು.

Call us

Click Here

ಉಪ್ಪುಂದ ಅಂಬಾಗಿಲು ಶ್ರೀ ಅಶ್ವತ್ಥನಾರಾಯಣ ಮೂಡುಗಣಪತಿ ದೇವರ ಪ್ರೀತ್ಯರ್ಥವಾಗಿ ನೂತನವಾಗಿ ನಿರ್ಮಿಸಿರುವ ರಜತ ತೊಟ್ಟಿಲು ಹಾಗೂ ರಜತ ದ್ವಾರವನ್ನು ದೇವರಿಗೆ ಸಮರ್ಪಿಸಿ, ಪೂಜಾವಿಧಿಗಳನ್ನು ನೆರವೇರಿಸಿ ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಗುರುಗಳ ಆಶೀರ್ವಾದ ಮತ್ತು ಮಾರ್ಗದರ್ಶನದ ಮೂಲಕ ಮಾಡುವ ಪುಣ್ಯಕಾರ್ಯವನ್ನು ದೇವರು ಯಾವುದನ್ನೂ ಪರಿಶೀಲಿಸದೇ ಭಕ್ತರಿಗೆ ಅನುಗ್ರಹಿಸುತ್ತಾನೆ. ನಾವು ಶ್ರದ್ದಾ, ಭಕ್ತಿಯಿಂದ ದೇವರ ಆರಾಧಿಸುವುದೇ ಆಧ್ಯಾತ್ಮ. ಮೌಢ್ಯತೆ ಬಿಟ್ಟು ದೈವತ್ವದೆಡೆಗೆ ಹೋಗಬೇಕಾದರೆ ಉತ್ತಮ ಸಂಸ್ಕಾರ ಹಾಗೂ ಆಧ್ಯಾತ್ಮಿಕವಾಗಿ ಸಾಗಬೇಕು. ಯಜ್ಞಗಳ ಮೂಲಕ ನಡೆದ ಇಂದಿನ ರಜತ ದಾನದ ಪುಣ್ಯಫಲ ಸಮಸ್ತ ಜಿಎಸ್‌ಬಿ ಸಮಾಜ ಮತ್ತು ಗ್ರಾಮಸ್ಥರಿಗೆ ಸಲ್ಲುತ್ತದೆ ಎಂದು ಹರಸಿದರು.

ಬೆಳಿಗ್ಗೆ ಅರ್ಚಕ ಗಣೇಶ ಬಾಬು ಭಟ್ ನೇತೃತ್ವದಲ್ಲಿ ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ ವಾಚನ, ರಜತ ತೊಟ್ಟಿಲು, ಹಾಗೂ ದ್ವಾರ ಬಾಗಿಲಿನ ಶುದ್ದಿ ವಿಧಾನಗಳು ನಡೆಯಿತು. ಸಂಜೆ ಪರಮ ಪೂಜ್ಯ ಶ್ರೀ ಸಂಯಮೀAದ್ರ ತೀರ್ಥ ಸ್ವಾಮೀಜಿಗಳನ್ನು ಬಿರುದಾವಳಿ ಸಹಿತ ಪೂರ್ಣಕುಂಭ ಸ್ವಾಗತ ನೀಡಲಾಯಿತು.

ವಾರ್ಷಿಕ ವರ್ಧಂತ್ಸೋತ್ಸವದ ಪ್ರಯುಕ್ತ ಮಂಗಳವಾರ ಬೆಳಿಗ್ಗೆ ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ ವಾಚನ, ಗೌರಿ ಮಾತ್ರಕಾಪೂಜೆ, ನಾಂದಿಶ್ರಾದ್ಧ, ಕೌತುಕ ಬಂಧನ, ಪಾಲಿಕಾ ಪೂಜೆ, ಶತಕಲಾಶಾಭಿಮಂತ್ರಣ, ಪಂಚಾಮೃತ ಅಭಿಷೇಕ, ಶತಕಲಾಶಾಭಿಷೇಕ, 21 ಕಾಯಿ ಗಣಯಾಗ, ಪೂರ್ಣಾಹುತಿ, ನಾಗದೇವರಿಗೆ ಆಶ್ಲೇಷಬಲಿ ಪೂಜೆ, ಮಧ್ಯಾಹ್ನ ಶ್ರೀ ದೇವರಿಗೆ ಮಹಾಮಂಗಳಾರತಿ ನಂತರ ಮಹಾಅನ್ನಸಂತರ್ಪಣೆ ಜರುಗಿತು ಸಂಜೆ ಶ್ರೀ ದೇವರ ನಗರೋತ್ಸವ, ನಂತರ ನೂತನ ರಜತ ತೊಟ್ಟಿಲಿನಲ್ಲಿ ವಿಶೇಷ ವಸಂತ ಪೂಜೆ, ಅಷ್ಟಾವಧಾನ ಸೇವೆ ನಡೆಯಿತು.

Leave a Reply