ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನೂರಾರು ದೈವ ದೇವರುಗಳಿಗೆ ಮೂರ್ತರೂಪ ನೀಡಿದ ಹಿರಿಯ ಶಿಲ್ಪಿ ಉಪ್ಪುಂದದ ರತ್ನಾಕರ ಎಸ್. ಗುಡಿಗಾರ್ ಅವರು ಅವರಿಗೆ 2021ನೇ ಸಾಲಿನ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಉಪ್ಪುಂದ ನ್ಯೂ ಜನತಾ ಕಾಲೋನಿ ನಿವಾಸಿಯಾಗಿರುವ ರತ್ನಾಕರ ಗುಡಿಗಾರ್ ಅವರು ಕಳೆದ 60 ವರ್ಷಗಳಿಂದ ವಂಶಪಾರಂಪರ್ಯವಾಗಿ ಬಂದ ಮರದಿಂದ ದೇವರ ಮೂರ್ತಿ ಕೆತ್ತನೆ ಕಾಯಕವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ತಮ್ಮ 84 ವರ್ಷದ ವಯಸ್ಸಿನಲ್ಲಿಯೂ ಸೇವಾ ಕಾರ್ಯವನ್ನು ಮುಂದುವರಿಸಿರುವ ಗುಡಿಗಾರರು, ವರ್ಷಕ್ಕೆ 150ಕ್ಕೂ ಹೆಚ್ಚು ದೇವರ ಮೂರ್ತಿ ಕೆತ್ತನೆ ಮಾಡುತ್ತಿದ್ದಾರೆ. ದೆಹಲಿ, ಭೂಪಾಲ್, ಚೆನೈ ಹಾಗೂ ರಾಜ್ಯದ ವಿವಿಧೆಡೆ ಇವರ ಕೆತ್ತನೆಯ ಮೂರ್ತಿಗಳು ಪೂಜಿಸಲ್ಪಡುತ್ತಿದೆ. ಉಡುಪಿ ಜಿಲ್ಲೆಯ ನೂರಾರು ದೈವಸ್ಥಾನಗಳ ದೇವರ ಮೂರ್ತಿಯನ್ನು ಕೆತ್ತನೆ ಮಾಡಿ ಪ್ರಸಿದ್ಧಿ ಪಡೆದಿದ್ದಾರೆ. ಒಂದು ಅಡಿಯಿಂದ 28 ಅಡಿಯ ತನಕದ ಮೂರ್ತಿಯನ್ನು ಅವರು ಕೆತ್ತನೆ ಮಾಡಿದ್ದಾರೆ. ರತ್ನಾಕರ ಗುಡಿಗಾರ ಸೇವೆಯನ್ನು ಗುರುತಿಸಿ ಸಾಂಪ್ರದಾಯಿಕ ಶಿಲ್ಪ ವಿಭಾಗದಲ್ಲಿ ಗೌವರ ಪ್ರಶಸ್ತಿಗೆ ಆಯ್ಕೆಮಾಡಲಾಗಿದ್ದು, ಪ್ರಶಸ್ತಿಯು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಖ್ಯಾತ ಉದ್ಯಮಿ, ಸಂಘಟಕ, ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ (70 ವ) ತೀವ್ರ ಹೃದಯಾಘಾತದಿಂದ ಪುಣೆಯಲ್ಲಿ ಅಸುನೀಗಿದ್ದಾರೆ. ಕಳೆದ 2 ದಿನಗಳ ಹಿಂದೆ ಹೃದಯ ಸಂಬಂಧಿ ನೋವು ಕಾಣಿಸಿಕೊಂಡಿದ್ದು, ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹಿಮಾಲಯ ಬೆವರಿಚನ್ ಗೋವಾದ ಆಡಳಿತ ನಿರ್ದೇಶಕರಾಗಿದ್ದ ಅವರು ಬಿ.ಕೆ ಬಿನ್ಜಿಲ್ ಹಾಗೂ ಅಕ್ಷಯ್ ಆರ್ಗ್ಯಾನಿಕ್ ಪ್ರೈ. ಲಿ ಸಂಸ್ಥೆಯನ್ನು ಆರಂಭಿಸಿ ನೂರಾರು ಜನರಿಗೆ ಉದ್ಯೋಗದಾತರಾಗಿದ್ದರು. ಪುಣೆಯನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ಅಲ್ಲಿಯೇ ನೆಲೆಸಿದ್ದರು. ಪುಣೆ ಬಂಟರ ಸಂಘದ ಅಧ್ಯಕ್ಷರಾಗಿ, ಪುಣೆಯ ಬೋಟ್ ಕ್ಲಬ್ಬಿನ ಅಧ್ಯಕ್ಷರಾಗಿ, ಪುಣೆ ನಗರದ ಕಾಂಗ್ರೆಸ್ ಕಾರ್ಯರ್ಕಾರಿ ಸಮಿತಿ ಸದಸ್ಯರಾಗಿ ಸಾಮಾಜಿಕ ರಂಗದಲ್ಲಿ ಗುರುತಿಸಿಕೊಂಡಿದ್ದರು. ಅವರಿಗೆ ಇತ್ತಿಚಿಗೆ ಮೊಳಹಳ್ಳಿಯಲ್ಲಿ ಹುಟ್ಟೂರ ಸನ್ಮಾನ ಜರುಗಿತ್ತು. ಮೃತರು ಪತ್ನಿ ಶಶಿ, ಪುತ್ರರಾದ ಅಕ್ಷಯ, ಆದರ್ಶ ಹಾಗೂ ಕುಟುಂಬಿಕರನ್ನು ಅಗಲಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಯಡ್ತರೆ ಸಸಿಹಿತ್ಲು ಮನೆ ನಿವಾಸಿ, ಪ್ರಥಮ ದರ್ಜೆ ಗುತ್ತಿಗೆದಾರ ಮುತ್ತಯ್ಯ ಪೂಜಾರಿ (70) ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಅಪಾರ ದೈವಭಕ್ತರಾಗಿದ್ದ ಮುತ್ತಯ್ಯ ಪೂಜಾರಿ ಅವರು, ಯಡ್ತರೆ ಬಿಲ್ಲವ ಸಂಘದ ಸ್ಥಾಪಕಾಧ್ಯಕ್ಷರಾಗಿ, ಯಡ್ತರೆ ತೆಂಗು ಬಾಳೆ ಸೊಸೈಟಿಯ ಮಾಜಿ ಅಧ್ಯಕ್ಷರಾಗಿ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಕಾಂಗ್ರೆಸ್ ಮುಖಂಡ ಸುಬ್ರಹ್ಮಣ್ಯ ಪೂಜಾರಿ ಸೇರಿದಂತೆ ನಾಲ್ವರು ಗಂಡು, ಮೂವರು ಹೆಣ್ಣು ಮಕ್ಕಳು ಹಾಗೂ ಬಂಧುಗಳನ್ನು ಅಗಲಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಯಡಮೊಗ್ಗೆಯ ಬಿಜೆಪಿ ಕಾರ್ಯಕರ್ತ ಉದಯ ಗಾಣಿಗ ಕೊಲೆ ಪ್ರಕರಣದ ಆರೋಪಿಗಳಲ್ಲೋರ್ವರಾದ ಬಿಜೆಪಿ ಮುಖಂಡ ಬಾಲಚಂದ್ರ ಭಟ್‌ಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಬಾಲಚಂದ್ರ ಭಟ್ ಘಟನೆ ನಡೆದು ನಾಲ್ಕು ದಿನಗಳ ಬಳಿಕ ಪೊಲೀಸರಿಂದ ಬಂಧನಕ್ಕೊಳಗಾಗಿದ್ದರು. ಪೊಲೀಸರು ಚಾರ್ಜ್ ಶೀಟ್ ಹಾಕಿದ್ದರು. ಉಚ್ಛ ನ್ಯಾಯಾಲಯದಲ್ಲಿಯೂ ಅವರಿಗೆ ಜಾಮೀನು ದೊರಕಿರಲಿಲ್ಲ. ಹದಿನಾಲ್ಕು ತಿಂಗಳ ಬಳಿಕ ಸುಪ್ರೀಂ ಜಾಮೀನು ನೀಡಿದೆ. ಪ್ರಕರಣದ ಪ್ರಮುಖ ಆರೋಪಿ ಪ್ರಾಣೇಶ್ ಯಡಿಯಾಳ್ ಹಾಗೂ ಇತರರಿಗೆ ಇನ್ನೂ ಜೈಲಿನಲ್ಲಿದ್ದಾರೆ. ಆರೋಪಿ ಬಾಲಚಂದ್ರ ಭಟ್ ಪರವಾಗಿ ಸುಪ್ರೀಂ ಕೋರ್ಟಿನಲ್ಲಿ ವಕೀಲ ದೇವದತ್ತ್ ಕಾಮತ್ ವಾದಿಸಿದ್ದರು. ಇದನ್ನೂ ಓದಿ:► ಯಡಮೊಗೆ ಉದಯ ಗಾಣಿಗ ಕೊಲೆ ಪ್ರಕರಣದ ತನಿಕೆ ಸಿಬಿಐಗೆ ವಹಿಸಲಿ: ಡಿ.ಕೆ ಶಿವಕುಮಾರ್ – https://kundapraa.com/?p=49788 .► ಯಡಮೊಗೆ ಕೊಲೆ ಪ್ರಕರಣ: ಒಟ್ಟು 6 ಆರೋಪಿಗಳಿಗೆ ನ್ಯಾಯಾಂಗ ಬಂಧನ, ಇನ್ನೂ ಕೆಲವರು ಭಾಗಿಯಾಗಿರುವ ಶಂಕೆ – https://kundapraa.com/?p=49133 .► ಯಡಮೊಗೆಯ ಉದಯ ಗಾಣಿಗರ ಕುಟುಂಬಕ್ಕೆ ಬೈಂದೂರು ಮಂಡಲ…
ಕುಂದಾಪ್ರ ಡಾಟ್ ಕಾಂ ಸುದ್ದಿಕುಂದಾಪುರ: ಕುಂದಾಪುರ ಪುರಸಭಾ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಸೋಮವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಕುಂದಾಪುರ ಒಳಚರಂಡಿಯ ಅವ್ಯವಸ್ಥೆ, ರಾಷ್ಟ್ರೀಯ ಹೆದ್ದಾರಿ ನಿರ್ಲಕ್ಷ್ಯ, ಬೀದಿ ನಾಯಿ ಕಾಟ ತಪ್ಪಿಸಲು ಸಂತಾನ ಹರಣ ಚಿಕಿತ್ಸೆ ಹಾಗೂ ಪುರಸಭೆ ಸುವರ್ಣ ಮಹೋತ್ಸವ ಆಚರಿಸುವ ಬಗ್ಗೆ ಪ್ರಮುಖ ಚರ್ಚೆಯಾದವು. ಪುರಸಭೆಯ ಹಿರಿಯ ಸದಸ್ಯ ಮೋಹನದಾಸ ಶೆಣೈ ಮಾತನಾಡಿ ಸಮಗ್ರ ಒಳಚರಂಡಿ ಯೋಜನೆ, ಸಮಗ್ರ ಕುಡಿಯುವ ನೀರು ಪೂರೈಕೆ ಯೋಜನೆಗಾಗಿ ಅಗೆಯಲಾದ ರಸ್ತೆಗಳು ಪ್ರಸ್ತುತ ಯಾವ ಸ್ಥಿತಿಗೆ ತಲುಪಿವೆ ಎಂಬುದನ್ನು ಖಾತ್ರಿ ಪಡಿಸಲು ಪುರಸಭೆ ಅಧಿಕಾರಿಗಳು ಕಛೇರಿ ಬಿಟ್ಟು ಒಮ್ಮೆ ನಗರ ಸುತ್ತಾಡಿ ಬನ್ನಿ. ಜನರು ಅನುಭವಿಸುತ್ತಿರುವ ಗೋಳು ಏನೆಂದು ಆಗ ಅರ್ಥವಾಗುತ್ತದೆ. ಪ್ರತಿಯೊಂದು ರಸ್ತೆಗಳು ಹದಗೆಟ್ಟಿವೆ. ವಿಪರೀತ ಮಳೆಯ ಕಾರಣಕ್ಕೆ ಹದಗೆಟ್ಟಿವೆ ಎಂಬುದರಲ್ಲಿ ಅರ್ಥವಿಲ್ಲ. ಮಳೆಗೆ ಮೊದಲೆ ಕೆಟ್ಟು ಹೋಗಿತ್ತು. ಈಗ ಮತ್ತಷ್ಟು ಹದಗೆಟ್ಟು ಹೋಗಿದೆ ಎಂದು ಹೇಳಿದರು. ಪುರಸಭೆ ಅಧ್ಯಕ್ಷೆ ವೀಣಾ ಬಿ. ಮೆಂಡನ್ ಪ್ರತಿಕ್ರಿಯಿಸಿ ಈಗಾಗಲೇ ವಾರ್ಡ್ ಸದಸ್ಯರ ಕೋರಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ರತ್ತೂಬಾಯಿ ಜನತಾ ಪ್ರೌಢಶಾಲೆ ಬೈಂದೂರು ಆಶ್ರಯದಲ್ಲಿ ನಡೆದ ಬೈಂದೂರು ವಲಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆ ಕೊಲ್ಲೂರು ಬಾಲಕಿಯರ ಕಬಡ್ಡಿ ತಂಡ ಪ್ರಥಮ ಸ್ಥಾನ ಪಡೆದು ಬಿದ್ಕಲ್ಕಟ್ಟೆಯಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು , ಬೋಧಕ, ಬೋಧಕೇತರ ವೃಂದದವರು ಮತ್ತು ಹಳೆ ವಿದ್ಯಾರ್ಥಿಗಳು ಮತ್ತು ಊರವರು ಅಭಿನಂದನೆ ಸಲ್ಲಿಸಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರಾದ ಸಚಿನ್ ಕುಮಾರ್ ಶೆಟ್ಟಿ ಹುಂಚನಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು. ರತ್ತೂಬಾಯಿ ಜನತಾ ಪ್ರೌಢಶಾಲೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀ ವಿವಿವಿ ಮಂಡಳಿ ಉಪಾಧ್ಯಕ್ಷ ಎಸ್. ರಾಜು ಪೂಜಾರಿ ಅವರು ವಿಜೇತರಿಗೆ ಬಹುಮಾನ ವಿತರಿಸಿದರು. ಈ ವೇಳೆ ಉಡುಪಿ ಅರಣ್ಯ ಸಂಚಾರಿದಳದ ಎಸಿಎಫ್ ಶ್ರೀಧರ ಪಿ., ಉದ್ಯಮಿಗಳಾದ ವೆಂಟರಮಣ ಬಿಜೂರು, ಕೃಷ್ಣಯ್ಯ ಮದ್ದೋಡಿ, ಕ್ಷೇತ್ರ ಶಿಕ್ಷಣ ಪರಿವೀಕ್ಷಣಾ ಅಧಿಕಾರಿ ಚಂದ್ರಶೇಖರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಗೊಂಬೆ ಸೂತ್ರಧಾರ ಹಾಗೂ ಅರ್ಥಧರಿ, ಹಿರಿಯ ಗೊಂಬೆಯಾಟ ಕಲಾವಿದ ಹೆಮ್ಮಾಡಿ ಹೇಮಾಪುರ ನಿವಾಸಿ ನಾರಾಯಣ ಬಿಲ್ಲವ (63) ಅನಾರೋಗ್ಯದಿಂದ ಸೋಮವಾರ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ನಾರಾಯಣ ಬಿಲ್ಲವ ಅವರು ಕಳೆದ 43 ವರ್ಷದಿಂದ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಖಾಯಂ ಕಲಾವಿದರಾಗಿದ್ದು, ಹತ್ತು ಹಲವು ವಿದೇಶದಲ್ಲಿ ನಡೆದ ಗೊಂಬೆಯಾಟ ಪ್ರದರ್ಶನಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಅರ್ಥ ಹೇಳುತ್ತಿದ್ದರು. ಕನ್ನಡ, ಕೊಂಕಣಿ, ಇಂಗ್ಲಿಷ್, ಹಿಂದಿ ಭಾಷೆಯಲ್ಲಿ ಹಿಡಿತ ಹೊಂದಿದ್ದ ಅವರು ಗೊಂಬೆಯಾಟದ ಸೂತ್ರಧಾರಿ ಹಾಗೂ ಅರ್ಥದಾರಿಯಾಗಿ ಜನ ಮಾನಸದಲ್ಲಿ ನೆಲೆಯೂರಿದ್ದರು. ಉಪ್ಪಿನಕುದ್ರು ಗೊಂಬೆಯಾಟದ ಸಂಸ್ಥಾಪಕ ಕೊಗ್ಗ ದೇವಣ್ಣ ಕಾಮತ್ ಅವರ ಒಡನಾಡಿಯಾಗಿದ್ದು, ಅವರೊಟ್ಟಿಗೂ ತಿರುಗಾಟ ಮಾಡಿದ್ದ ಅವರು, ಮುಂದೆ ಕೊಗ್ಗ ಕಾಮತ್ ಅವರ ಪುತ್ರ ಭಾಸ್ಕರ ಕೊಗ್ಗ ಕಾಮತ್ ಜೊತೆ ಕಲಾವಿದರಾಗಿ ಮುಂದುವರಿದಿದ್ದರು. ಓದಿದ್ದು ಸ್ವಲ್ಪವಾದರೂ ಇಂಗ್ಲಿಷ್, ಹಿಂದಿ ಭಾಷೆಯ ಅವರ ಹಿಡಿತ ನಿಜಕ್ಕೂ ಅಬ್ದುತ ವಾಗಿತ್ತು. ಕೊಂಕಣಿ ಭಾಷೆ ನಿರ್ಗಳವಾಗಿ ಹರಿದು ಬರುತ್ತಿತ್ತು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಪ್ರತಿಭೆಗಳಿಗೆ ಸರಿಯಾದ ಸಮಯದಲ್ಲಿ ಪ್ರೋತ್ಸಾಹ ದೊರೆತಾಗ ಅವರು ಇನ್ನಷ್ಟು ಬೆಳೆಯಲು ಸಾಧ್ಯವಾಗುತ್ತದೆ. ಶಿಕ್ಷಣ ಇಲಾಖೆಯ ಮೂಲಕ ನಡೆಯುವ ಸ್ವರ್ಧೆಯಲ್ಲಿ ಭಾಗವಹಿಸುವ ಎಷ್ಟೋ ವಿದ್ಯಾರ್ಥಿಗಳು ಮುಂದೆ ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಿದ ಉದಾಹರಣೆಗಳಿವೆ ಎಂದು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಹೇಳಿದರು. ಅವರು ಸೋಮವಾರ ರತ್ತೂಬಾಯಿ ಜನತಾ ಪ್ರೌಢಶಾಲೆಯ ಸಹಯೋಗದೊಂದಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಆಯೋಜಿಸಿದ ಪ್ರೌಢಶಾಲಾ ಬಾಲಕ – ಬಾಲಕಿಯರ ಕಬಡ್ಡಿ 2022 ಪಂದ್ಯಾಟ ಉದ್ಘಾಟಿಸಿ ಕ್ರಿಡಾಪಟುಗಳಿಗೆ ಶುಭಹಾರೈಸಿದರು. ಶ್ರೀ ವಿ.ವಿ.ವಿ. ಮಂಡಳಿ ಉಪಾಧ್ಯಕ್ಷರಾದ ಎಸ್. ರಾಜು ಪೂಜಾರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಡಯಟ್ ಪ್ರಾಂಶುಪಾಲರಾದ ಗೋವಿಂದ ಮಡಿವಾಳ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಯಾನಂದ ಹೋಬಳಿದಾರ್, ಬೈಂದೂರು ಸೈಂಟ್ ಥಾಮಸ್ ಶಾಲೆಯ ಪ್ರಾಂಶುಪಾಲರಾದ ಜಾನ್ ನೆಲಿವಿಲ್ಲಾ, ಶ್ರೀ ವಿ.ವಿ.ವಿ. ಮಂಡಳಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರೋಟರಾಕ್ಟ್ ಕ್ಲಬ್ ಕೋಟೇಶ್ವರ ಇದರ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶನಿವಾರ ಕೋಟೇಶ್ವರ ರೋಟರಿ ಭವನದಲ್ಲಿ ಜರುಗಿತು. ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷರಾದ ಸುಧೀರ್ ಶೆಟ್ಟಿ ನೂಜಿ ಪದಪ್ರದಾನ ಮಾಡಿದರು. ನೂತನ ಅಧ್ಯಕ್ಷರಾಗಿ ರಾಕೇಶ್ ಶೆಟ್ಟಿ ವಕ್ವಾಡಿ ಹಾಗೂ ಕಾರ್ಯದರ್ಶಿಯಾಗಿ ಭರತ್ ರಾಜ್ ಕೋಟೇಶ್ವರ ಆಯ್ಕೆಯಾದರು. ಮುಖ್ಯ ಅತಿಥಿಗಳಾಗಿ ಅಸಿಸ್ಟೆಂಟ್ ಗವರ್ನರ್ ಪ್ರಭಾಕರ್ ಕುಂಭಾಶಿ ಹಾಗೂ ಆಲೂರು ಶಾಲಾ ಶಿಕ್ಷಕಿ ನಾಗರತ್ನ ಹೇರ್ಳೆ, ರೋಟರ್ಯಾಕ್ಟ್ ಜಿಲ್ಲಾ ಪ್ರತಿನಿಧಿ ಮಹಾಲಾಸಾ ಕಿಣಿ, ರೋಟರಿ ಕಾರ್ಯದರ್ಶಿ ವಿಜಯ್ ಕುಮಾರ್ ಶೆಟ್ಟಿ, ರೋಟರಾಕ್ಟ್ ಚೇರ್ಮನ್ ಅರುಣ್ ದೇವಾಡಿಗ, ರೋಟರಿ ಚಂದ್ರ ಪೂಜಾರಿ, ರೋಟರಿ ರವೀಂದ್ರ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ನಿಶಾ ಜೋಗಿ ಕಾಳಾವರ ಅವರನ್ನು ಸನ್ಮಾನಿಸಲಾಯಿತು. ಶ್ರೀಕಾಂತ್ ಆಚಾರ್ಯ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋಟರಿ ಕ್ಲಬ್ ಬೈಂದೂರು ಪ್ರಾಯೋಜಿತ ರೋಟರ‍್ಯಾಕ್ಟ್ ಕ್ಲ್‌ಬ್ ಉದ್ಘಾಟನಾ ಸಮಾರಂಭ ಇತ್ತಿಚಿಗೆ ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ರೋಟರ‍್ಯಾಕ್ಟ್ ಜಿಲ್ಲಾಧ್ಯಕ್ಷ ಜೈವಿಠ್ಠಲ್ ಕೆ.ಎಸ್. ಪದಗ್ರಹಣ ನೆರವೇರಿಸಿ ಶುಭಹಾರೈಸಿದರು. ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಎಚ್. ಉದಯ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಡುಪಿ ಅರಣ್ಯ ಸಂಚಾರಿದಳದ ಎಸಿಎಫ್ ಶ್ರೀಧರ ಪಿ., ಉಪಾಧ್ಯಕ್ಷ ಚಂದ್ರ ಪೂಜಾರಿ, ವಲಯ ಸೇನಾನಿ ಡಾ. ಪ್ರವೀಣ ಶೆಟ್ಟಿ, ರೋಟರ‍್ಯಾಕ್ಟ್ ಝೋನಲ್ ಕೋ-ಆರ್ಡಿನೇಟರ್ ಜಾನ್ಸ್‌ನ್ ಡಿ. ಅಲ್ಮೆಡಾ, ಎನ್‌ಇಸಿಎಫ್ ಬೈಂದೂರು ಅಧ್ಯಕ್ಷ ಪ್ರಸಾದ ಪಿ ಮೊದಲಾದವರು ಉಪಸ್ಥಿತರಿದ್ದರು. ರೋಟರ‍್ಯಾಕ್ಟ್ ನೂತನ ಅಧ್ಯಕ್ಷರಾಗಿ ಬಿಕಾಂ ವಿದ್ಯಾರ್ಥಿ ರಾಮಕೃಷ್ಣ, ಕಾರ್ಯದರ್ಶಿಯಾಗಿ ಬಿಎ ವಿದ್ಯಾರ್ಥಿ ಕಿಶೋರ್ ಹಾಗೂ ಖಜಾಂಚಿಯಾಗಿ ಬಿಬಿಎ ವಿದ್ಯಾರ್ಥಿ ನಾಗೇಂದ್ರ ಪದವಿ ಸ್ವೀಕರಿಸಿದರು. ಈ ವೇಳೆ ಮಂಗಳೂರು ವಿಭಾಗ ಎನ್.ಇ.ಸಿ.ಎಫ್‌ನ ಹರಿಶ್ ರಾಜ್ ಅವರನ್ನು ಸನ್ಮಾನಿಸಲಾಯಿತು. ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ರಘು ನಾಯ್ಕ್ ಸ್ವಾಗತಿಸಿ,…
