ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ದೇಶ ಕಾಯುವ ಯೋಧರನ್ನು ಗೌರವಿಸುವ ಮನೋಭಾವನೆ ಸರ್ವಶ್ರೇಷ್ಠ ಅದೇ ರೀತಿ ಗಡಿಯಲ್ಲಿ ದೇಶಕ್ಕಾಗಿ ಬಲಿದಾನಗೈಯುವ ಯೋಧರ ಸ್ಥಿತಿಗತಿ ಅಷ್ಟೆ ಕ್ಲಿಷ್ಟಕರವಾಗಿರುತ್ತದೆ. ಇದಕ್ಕೆ ಅನೂಪ್ ಪೂಜಾರಿ ಸಹಿತ ಹಲವು ಯೋಧರ ಕಥೆ ವ್ಯಥೆಯೇ ಸಾಕ್ಷಿ ಎಂದು ಜಯ ಕರ್ನಾಟಕ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಪೂಜಾರಿ ಸಾಲಿಗ್ರಾಮ ಹೇಳಿದರು. ಅವರು ಬುಧವಾರ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ವತಿಯಿಂದ ಕಳೆದವರ್ಷ ಅಮರರಾದ ಯೋಧ ಅನೂಪ್ ಪೂಜಾರಿ ಬೀಜಾಡಿ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಗೌರವ ನಮನ ಸಲ್ಲಿಸಿ ಮಾತನಾಡಿದರು. ಸಮಾಜದ ಬಗ್ಗೆ ಸದಾ ತುಡಿತ ಹೊಂದಿದ ಪಂಚವರ್ಣ ಸಂಘಟನೆ ಯೋಧರ ಪುಣ್ಯ ಸ್ಮರಣೆಯನ್ನು ಮನದಲ್ಲಿ ಸದಾ ಕಾಯ್ದು ಅವರ ಕುರಿತು ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು. ನಿವೃತ್ತ ಯೋಧರಾದ ಕೋಟ ರಾಮಚಂದ್ರ ಗಾಣಿಗ ಕೋಟೇಶ್ವರ ಅವರು ಅನೂಪ್ ಪೂಜಾರಿ ಅವರ ಭಾವಚಿತ್ರಕ್ಕೆ ಪುಷ್ಭನಮನ ಸಲ್ಲಿಸಿ ದೇಶದ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿ ಗ್ರಾಮದ ಮಲ್ಯರಬೆಟ್ಟು ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ಶಿವನ ಮೂರ್ತಿ ನಿರ್ಮಾಣದ ಶಿಲಾನ್ಯಾಸ ಪೂಜನಾ ಕಾರ್ಯಕ್ರಮ ಗುರುವಾರ ಜರುಗಿತು. ಗಂಗೊಳ್ಳಿ ಶ್ರೀ ವೀರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ರವೀಶ್ ಭಟ್ ಧಾರ್ಮಿಕ ವಿಧಿವಿಧಾನ ನೇರವೇರಿಸಿದರು. ಸಂಕಲ್ಪವನ್ನು ರಾಮಪ್ಪ ಖಾರ್ವಿ ಮತ್ತು ರೇವತಿ ರಾಮಪ್ಪ ಖಾರ್ವಿ ನೇರವೇರಿಸಿದರು. ಈ ಸಂದರ್ಭದಲ್ಲಿ ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಖಾರ್ವಿ, ಗ್ರಾಪಂ. ಸದಸ್ಯ ಜಯೇಂದ್ರ ಆರ್ಕಾಟಿ, ನಾಗಪ್ಪಯ್ಯ ಪಟೇಲ್, ಶೃತಿ ಖಾರ್ವಿ, ಚೇತನ್ ಸಿಪಾ, ಕಾರ್ತಿಕ್, ಅನಿಲ್, ಹಿತೇಶ್, ರಿತೇಶ್, ಜಗದೀಶ್ ಪೂಜಾರಿ, ಅಕ್ಷಯ್, ನವೀನ್ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಿದ್ಯಾರ್ಥಿಗಳು ಸರ್ವಾಂಗೀಣವಾಗಿ ಅಭಿವೃದ್ಧಿ ಹೊಂದಬೇಕು ಎಂಬ ಸದುದ್ದೇಶದಿಂದ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು. ಗಂಗೊಳ್ಳಿ ಮೂಲದ ಕುಂದಾಪುರದ ವಕೀಲರಾದ ಬದರೀನಾಥ ಹೆಚ್. ಹುಂಡೇಕಾರ್ ಅವರು ವಿದ್ಯಾರ್ಥಿಗಳೊಂದಿಗೆ ಪೋಕ್ಸೋ ಕಾಯಿದೆಯ ಬಗ್ಗೆ ಚರ್ಚಿಸುತ್ತಾ, ವಿದ್ಯಾರ್ಥಿಗಳಿಗೆ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆ ಅರಿವನ್ನು ಮೂಡಿಸುತ್ತಾ ಸದಾ ಅಧ್ಯಯನದಲ್ಲಿ ನಿರತರಾದರಷ್ಟೇ ಸಾಲದು, ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಎದುರಿಸುವ ಮಾರ್ಗಗಳನ್ನು ಅರಿಯಬೇಕು. ದೇಶದ ಪ್ರತಿಯೊಬ್ಬ ಪ್ರಜೆಗೂ ಬಹಳಷ್ಟು ಕರ್ತವ್ಯಗಳು ಮತ್ತು ಹಕ್ಕುಗಳು ನೀಡಲ್ಪಟ್ಟಿರುತ್ತವೆ. ಅವುಗಳ ಪಾಲನೆ ಮತ್ತು ರಕ್ಷಣೆಗೆ ಪೋಲೀಸ್ ಇಲಾಖೆ ಸಹಕರಿಸಿದಂತೆ ನ್ಯಾಯಬದ್ಧ ತೀರ್ಮಾನಕ್ಕಾಗಿ ನ್ಯಾಯಾಲಯಗಳು ಪ್ರಜೆಗಳಿಗೆ ಸಹಕರಿಸುತ್ತವೆ. ಮಕ್ಕಳು ಅನ್ಯಾಯ ಹೊಂದಿದಲ್ಲಿ ಅವರ ಸಹಕಾರಕ್ಕೆ ವಕೀಲರಾದ ನಾವು ಸದಾ ಕಟಿಬದ್ಧರಾಗಿರುತ್ತೇವೆ. ಈ ಶಾಲೆಯ ಪ್ರಾಕ್ತನ ವಿದ್ಯಾರ್ಥಿಯಾಗಿದ್ದು, ಈ ಶಾಲೆಯ ನಿಯಮಗಳನ್ನು ನಾನೂ ಅರಿತಿದ್ದೇನೆ. ಇಲ್ಲಿ ಭಾವಾಂತರಂಗ, ತಾಲೂಕು ಮಟ್ಟದ ಸ್ಪರ್ಧೆಗಳು, ಇನ್ನಿತರ ಸ್ಪರ್ಧೆಗಳು ವಿದ್ಯಾರ್ಥಿಗಳ ಹಿತಕ್ಕಾಗಿಯೇ ನಡೆಸಲ್ಪಡುತ್ತವೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಉಳ್ಳೂರು-74ರಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ 2.5 ಕೋಟಿ ರೂ. ವೆಚ್ಚದಲ್ಲಿ 14 ಕೊರಗ ಕುಟುಂಬಗಳಿಗೆ ನಿರ್ಮಿಸಲಾದ ಹೊಸ ಮನೆಗಳ ಗೃಹ ಪೂಜೆ ಮತ್ತು ಲೋಕಾರ್ಪಣೆ ಕಾರ್ಯಕ್ರಮ ಗುರುವಾರ ನಡೆಯಿತು. ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಗೃಹ ಪೂಜೆ ಮತ್ತು ಆಶೀರ್ವಚನ ಮಾಡಿ ಮಾತನಾಡಿದ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಗೊಂಡಿದೆ. ಇನ್ನೂ ರಾಮರಾಜ್ಯ ಕಲ್ಪನೆ ಸಾಕಾರಗೊಳ್ಳಬೇಕಿದೆ. ಸಮಾಜದ ಕಟ್ಟ ಕಡೆಯ ಪ್ರಜೆಗಳು ಎಂದು ಕರೆಸಿಕೊಳ್ಳುವ ತೀರ ಹಿಂದುಳಿದ ಕೊರಗ ಜನಾಂಗಕ್ಕೆ ಮನೆ ನಿರ್ಮಸಿ ಕೊಡುವ ಕಾರ್ಯ ಶ್ರೇಷ್ಠ ಕಾರ್ಯವಾಗಿದೆ. ಈ ಮೂಲಕ ರಾಮರಾಜ್ಯದ ಕಲ್ಪನೆ ಸಾಕಾರಗೊಳ್ಳುತ್ತಿದೆ. ಕೊರಗರಿಗೆ ಮನೆ ನಿರ್ಮಾಣ ಮಾಡಿಕೊಟ್ಟಿರುವ ಸೇವೆಯನ್ನು ಅಯೋಧ್ಯೆಗೆ ತೆರಳಿ, ರಾಮನ ಪದತಲಕ್ಕೆ ಅರ್ಪಿಸುತ್ತೇನೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ನುಡಿದರು. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಜಿ ಅವರು ಸಮಾರಂಭದ ಉದ್ಘಾಟನೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರಾಯಚೂರು ಜಿಲ್ಲೆ ಚಂದ್ರಬಂಡ ಗ್ರಾಮದ ಗೋಪಾಲ ಎಂಬವರಿಗೆ ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿದ ಆರೋಪಿಯನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಗಾಂಧಿನಗರದ ಜಯಪ್ರಕಾಶ್ ಡಿ. ಬಂಧಿತ ಆರೋಪಿ. ಸಿದ್ದಾಪುರದ ಕಮಲಶಿಲೆ ರಸ್ತೆಯಲ್ಲಿ ಆರೋಪಿಗಳು ಗೋಪಾಲ ಎಂಬವರಿಗೆ 150 ಗ್ರಾಂ ಚಿನ್ನವೆಂದು ಹೇಳಿ 5 ಲಕ್ಷ ಪಡೆದುಕೊಂಡು ನಕಲಿ ಚಿನ್ನ ನೀಡಿ ಪರಾರಿಯಾಗಿದ್ದರು. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಎಚ್. ಡಿ. ಕುಲಕರ್ಣಿ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದ ಶಂಕರನಾರಾಯಣ ಪೊಲೀಸರು, ಚಿತ್ರದುರ್ಗದ ಕೋಟೆ ಪ್ರದೇಶದಿಂದ ಆರೋಪಿಯನ್ನು ವಶಕ್ಕೆ ಪಡೆದು ಆತನಿಂದ 4,50,000 ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಸುಮಾರು 10,00,000 ರೂ. ಮೌಲ್ಯದ ಕಾರನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸರಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದು, ಸರಕಾರಿ ಶಾಲೆಗಳಲ್ಲಿ ಪ್ರತಿವರ್ಷ ಮಕ್ಕಳ ದಾಖಲಾತಿ ಕೂಡ ಹೆಚ್ಚುತ್ತಿದೆ. ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀತಿಯಿಂದ ಮಕ್ಕಳು ವಿದ್ಯಾಭ್ಯಾಸ ಪಡೆಯಲು ಸಹಾಯಕವಾಗುತ್ತಿದ್ದು, ಶಾಲೆಯಿಂದ ಹೊರಗುಳಿಯುವ ಮಕ್ಕಳ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಉದ್ಯಮಿ ಉಮೇಶ್ ಎಲ್. ಮೇಸ್ತ ಹೇಳಿದರು. ಅವರು ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದರ ದೊಡ್ಮನೆ ನಂದ ಪೂಜಾರಿ ರಂಗ ಮಂಟಪದಲ್ಲಿ ನಡೆದ ಶಾಲೆಯ 106ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ನಾರಾಯಣ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗುಜ್ಜಾಡಿ ಗ್ರಾಪಂ ಸದಸ್ಯ ಹರೀಶ ಮೇಸ್ತ ಧ್ವಜಾರೋಹಣಗೈದರು. ಕುಂದಾಪುರದ ವಕೀಲ ಚಂದ್ರಕಾಂತ ಎಸ್. ಹುಂಡೇಕರ್ ಸ್ವಸ್ತಿ ವಾಚನ ಮಾಡಿದರು. ಗುಜ್ಜಾಡಿ ಗ್ರಾಪಂ. ಸದಸ್ಯೆ ತುಂಗಾ ಪೂಜಾರಿ, ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮನಾಥ ಚಿತ್ತಾಲ್, ಎಸ್ಡಿಎಂಸಿ ಸಮನ್ವಯ ವೇದಿಕೆ ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು, ಎಸ್ಡಿಎಂಸಿ ಉಪಾಧ್ಯಕ್ಷೆ ಅನಿತಾ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಇಲ್ಲಿನ ಸಾಸ್ತಾನ ರಾಷ್ಟ್ರೀಯ ಚರ್ಚ ಸಮೀಪ ಸುಮಾರು ಐದು ವರ್ಷಗಳ ಹಿಂದೆ ತನ್ನ ತಾತ ಪಾಂಡೇಶ್ವರ ಹೆಬ್ಬಾಗಲು ಮನೆ ನರಸಿಂಹ ತುಂಗ ಸ್ಮರಣಾರ್ಥ ಅವರ ಮೊಮ್ಮಗ ಸಮಾಜಸೇವಕ ಚಂದ್ರಶೇಖರ ಮಯ್ಯ ಎರಡು ಲೋಕಲ್ ಬಸ್ ನಿಲ್ದಾಣ ನಿರ್ಮಿಸಿದ್ದು ಸಾರ್ವಜನಿಕರಿಗೆ ಬಾರಿ ಅನುಕೂಲ ವಾತಾವರಣ ಸೃಷ್ಠಿಸಿದೆ. ಆದರೆ ಆ ತಂಗುದಾಣ ಒಂದು ಭಾಗದ ವಿವಿಧ ಬಿಡಿ ಭಾಗಗಳು ಹಾಗೂ ಶಿಲಾ ಕಂಬಗಳನ್ನು ಕಿಡಿಗೇಡಿಗಳಿಂದ ಮಂಗಳವಾರ ತಡರಾತ್ರಿ ಹಾನಿಗೊಳಿಸಿದ ಘಟನೆ ನಡೆದಿದೆ. ಈ ಬಗ್ಗೆ ಸಾರ್ವಜನಿಕ ಆಕ್ರೋಶ ಹೊರಹಾಕಿದ್ದು ತಂಗುದಾಣ ಹಾನಿಗೊಳಿಸಿದವರನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿದ್ದಾರೆ. ಅಲ್ಲದೆ ಇದೇ ತಂಗುದಾಣದಲ್ಲಿ ಮನುಕುಲಕ್ಕಲ್ಲದೆ ಪ್ರಾಣಿ ಪಕ್ಷಿಗಳಿವೆ ನೀರು ಆಹಾರ ಒದಗಿಸುವ ತಾಣವಾಗಿ ಮಯ್ಯರು ಸೇವೆ ಮಾಡುತ್ತಿರುವುದು ವಿಶೇಷವಾಗಿದ್ದು ಇಂತಹ ಸಮಾಜಘಾತುಕ ಶಕ್ತಿಗಳು ಹಾನಿಗೊಳಿಸುವುದು ಬೇಸರದ ಸಂಗತಿ ಎಂದು ಮಯ್ಯರು ಮಾಧ್ಯಮಕ್ಕೆ ತಿಳಿಸಿದ್ದು ಕೋಟ ಠಾಣೆಯಲ್ಲಿ ದೂರು ದಾಖಲಿಸುವ ಬಗ್ಗೆ ಉಲ್ಲೇಖಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಿದ್ದಾಪುರ ಏತ ನೀರಾವರಿ ಯೋಜನೆಗೆ ವಾರಾಹಿ ಮೂಲ ನದಿಯಿಂದ ನೀರನ್ನು ಎತ್ತುವ ಮೂಲಕ ವಾರಾಹಿ ಮೂಲ ನದಿಯನ್ನು ಉಳಿಸುವುದರೊಂದಿಗೆ ನದಿ ಪಾತ್ರ ಅವಲಂಭಿತ ರೈತರನ್ನು ಹಾಗೂ ಧಾರ್ಮಿಕ ಕೇಂದ್ರಗಳನ್ನು ಉಳಿಸುವಂತೆ ವಾರಾಹಿ (ಹಾಲಾಡಿ) ಪಾತ್ರದ ಇಕ್ಕೆಲಗಳ ರೈತರು ಹಾಗೂ ಸಾರ್ವಜನಿಕರು ಇತ್ತೀಚಿಗೆ ವಾರಾಹಿ ಇಲಾಖೆಗೆ ಭೇಟಿ ನೀಡಿ, ಮನವಿ ಮಾಡಿದರು. ಬಿಜೆಪಿ ಉಡುಪಿ ಜಿಲ್ಲಾ ಉಪಾಧ್ಯಕ್ಷ ಸದಾನಂದ ಬಳ್ಕೂರು ಅವರ ನೇತ್ರತ್ವದಲ್ಲಿ ಸಿದ್ದಾಪುರ ಏತ ನೀರಾವರಿ ಯೋಜನೆಯ ನೀರನ್ನು ಎತ್ತುವ ಪಂಪನ್ನು ವಾರಾಹಿ ಮೂಲ ನದಿಯಲ್ಲಿ ಅಥವಾ ಶ್ರೀ ಹೊಳೆ ಶಂಕರನಾರಾಯಣ ದೇವಸ್ಥಾನದ ಕೆಳ ಭಾಗದಲ್ಲಿ ಅಳವಡಿಸುವಂತೆ ನೂರಾರು ರೈತರ ಸಹಿ ಮಾಡಿದ ಪತ್ರದೊಂದಿಗೆ ರೈತರು, ಧಾರ್ಮಿಕ ಮುಖಂಡರು, ಕೃಷಿಕರು, ವಿವಿಧ ಸಂಘಟನೆಯ ಮುಖಂಡರು ಸಿದ್ದಾಪುರದ ವಾರಾಹಿ ಇಲಾಖೆಯ ಕಚೇರಿ ಭೇಟಿ ನೀಡಿ ಮನವಿ ಮಾಡಿದರು. ಹೊಳೆ ಶಂಕರನಾರಾಯಾಣ ಬಳಿ ವಾರಾಹಿ ನದಿಗೆ ಅಡ್ಡಲಾಗಿ ಕಟ್ಟಿರುವ ಡ್ಯಾಂ ಮೇಲ್ ಭಾಗದಲ್ಲಿ ಆರಂಭಗೊಳ್ಳುವುದರಿಂದ ವಾರಾಹಿ ಮೂಲ ನದಿಯಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ವ್ಯಾಪ್ತಿಯಲ್ಲಿರುವ ಶಾಲೆಗಳ ಆಸುಪಾಸು ಹಾಗೂ ಗ್ರಾಮಗಳಲ್ಲಿ ಬೀದಿ ನಾಯಿಗಳ ಆವಳಿ ವಿಪರಿತವಾಗಿದೆ. ಇದರಿಂದ ಶಾಲೆಗೆ ಸಂಚರಿಸಲು ಭಯದ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ಗ್ರಾಮಪಂಚಾಯತ್ ಕ್ರಮ ಕೈಗೊಳ್ಳುವಂತೆ ಕೋಟದ ಮಣೂರು ಪಡುಕರೆ ಸಂಯುಕ್ತ ಪ್ರೌಢಶಾಲಾ ವಿದ್ಯಾರ್ಥಿಗಳು ಆಗ್ರಹಿಸಿದರು. ಬುಧವಾರ ಕೋಟ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕೋಟ ಗ್ರಾಮ ಪಂಚಾಯತ್ ಬ್ರಹ್ಮಾವರ ತಾಲೂಕು ಪಂಚಾಯತ್ ನೇತೃತ್ವದಲ್ಲಿ 2025-26ನೇ ಸಾಲಿನ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಯಲ್ಲಿ ಈ ಬಗ್ಗೆ ತಮ್ಮ ಅಳಲನ್ನು ತೊಡಿಕೊಂಡರು. ಬೀದಿನಾಯಿಗಳ ಸಂತಾನ ಹರಣ ಚಿಕಿತ್ಸೆಗಾಗಿ 1ಲಕ್ಷ ರೂ ಕಾಯ್ದಿಸಿದ್ದೇವೆ ಈ ಸಂಬಂಧಿಸಿದ ಇಲಾಖೆಯೊಂದಿಗೆ ಸಂವಹನ ನಡೆಸಲಾಗಿದೆ ಶೀಘ್ರದಲ್ಲೆ ಇದರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ. ಶೆಟ್ಟಿ ಉತ್ತರಿಸಿದರು. ಶಾಲಾ ವ್ಯಾಪ್ತಿಯಲ್ಲಿ ಸ್ಕೂಲ್ ಝೋನ್ ಫಲಕ ಅಳವಡಿಸಿ, ವಿದ್ಯಾರ್ಥಿಗಳ ಕ್ರೀಡಾ ಸಾಧನೆಗೆ ಕಬ್ಬಡಿ ಮ್ಯಾಟ್, ಶಾಲಾ ಶೌಚಾಲಯ ಶುಚಿಗೊಳಿಸಲು ಕ್ರಮವಹಿಸಿ, ಶಾಲಾ ವ್ಯಾಪ್ತಿಯಲ್ಲಿ ಚರಂಡಿ ನಿರ್ಮಾಣ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಚಾಲಕನ ನಿಯಂತ್ರಣ ತಪ್ಪಿ ಆಟೋ ರಿಕ್ಷಾವೊಂದು ಪಲ್ಟಿ ಹೊಡೆದು ಚಾಲಕ ಮೃತಪಟ್ಟ ಘಟನೆ ಸಾಲಿಗ್ರಾಮದ ಹಾಡಿಮನೆ ಹೋಟೆಲ್ ಮುಂಬಾಗ ನಡೆದಿದೆ. ಮೃತರನ್ನು ರಿಕ್ಷಾ ಚಾಲಕ ಭೋಜ ಪೂಜಾರಿ(52) ಎಂದು ಗುರುತಿಸಲಾಗಿದೆ. ಸೋಮವಾರ ಮಧ್ಯಾಹ್ನ ಸಾಲಿಗ್ರಾಮದ ಹಾಡಿಮನೆ ಹೋಟೆಲ್ ಮುಂಬಾಗ ಬರುತ್ತಿದ್ದ ವೇಳೆ ರಸ್ತೆಯ ಹಂಪ್ಸ್ ಮೇಲೇರಿ ನಿಯಂತ್ರಣ ತಪ್ಪಿ ಆಟೋ ರಿಕ್ಷಾ ಪಲ್ಟಿ ಹೊಡೆದಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಿಸದೆ ಮಂಗಳವಾರ ಮಧ್ಯಾಹ್ನ ಸಾವನ್ನಪ್ಪಿದ್ದಾರೆ. ಮೃತರು ಕಾರ್ಕಡದ ನಿವಾಸಿಯಾಗಿದ್ದು ಸಾಲಿಗ್ರಾಮ ರಿಕ್ಷಾ ಚಾಲಕ, ಮಾಲಕರ ಸಂಘದ ಸದಸ್ಯರಾಗಿದ್ದಾರೆ. ಅಲ್ಲದೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮೃತರು ಇಬ್ಬರು ಸಹೋದರರು, ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಅಗಲಿರುತ್ತಾರೆ.
