Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: 16ನೇ ಆವೃತ್ತಿಯ ಆಳ್ವಾಸ್ ಪ್ರಗತಿ–2026 ಬೃಹತ್ ಉದ್ಯೋಗ ಮೇಳದ ಯಶಸ್ವಿ ಆಯೋಜನೆಗಾಗಿ ಯುವ ಸಮುದಾಯದ ಸಕ್ರಿಯ ಭಾಗವಹಿಸುವಿಕೆ ಅತ್ಯಗತ್ಯವಾಗಿದ್ದು, ಯುವ ನಾಯಕರು ಈ  ಉದ್ಯೋಗ ಮೇಳದ ಅಧಿಕೃತ ಪಾಲುದಾರರಾಗಿ ಕಾರ್ಯನಿರ್ವಹಿಸಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಕರೆ ನೀಡಿದರು.ಅವರು ಆಳ್ವಾಸ್ ಪ್ರಗತಿ ಹಿನ್ನೆಲೆಯಲ್ಲಿ ಭಾನುವಾರ ಮಿಜಾರಿನಲ್ಲಿ ಆಯೋಜಿಸಲಾದ ಯುವ ನಾಯಕರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ  ಎರಡು ದಶಕಗಳಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಯಾವುದೇ ಲಾಭದ ಉದ್ದೇಶವಿಲ್ಲದೆ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಮಹತ್ವದ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದರು. ಈ ಬಾರಿ 343ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲು ಈಗಾಗಲೇ ನೋಂದಾಯಿಸಿಕೊಂಡಿದ್ದು, ಡಿಗ್ರಿ, ಬಿ.ಕಾಂ., ಡಿಪ್ಲೊಮಾ, ಐಟಿಐ, ಎಸ್‌ಎಸ್‌ಎಲ್‌ಸಿ, ಪಿಯುಸಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ13ಕ್ಕೂ ಹೆಚ್ಚು ಉದ್ಯೋಗ ವಲಯಗಳಲ್ಲಿ ಸಾವಿರಾರು ಉದ್ಯೋಗಾವಕಾಶಗಳು ಲಭ್ಯವಿವೆ. ಅನುಭವ ಹೊಂದಿದವರಿಗೂ ಸೂಕ್ತ ಉದ್ಯೋಗಗಳಿವೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾದಾ ಗ್ರಾಮದ ಕೊಳ್ಳೆಯ ನಂದ್ರೋಳಿ ಎಂಬಲ್ಲಿನ ಸಾರ್ವಜನಿಕ ಹಾಡಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕ ಜೂಜಾಟದ ಅಡ್ಡಾದ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ, 10 ಕೋಳಿ ಹುಂಜಗಳು ಹಾಗೂ 8 ಮೋಟಾರು ಸೈಕಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಕೋಳಿಗಳ ಕಾಲಿಗೆ ಕತ್ತಿ ಕಟ್ಟಿ ಹಣವನ್ನು ಪಣವಾಗಿಟ್ಟು ಜೂಜಾಟವಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದ ಪೊಲೀಸರು ಜೂಜಾಟದ ಅಡ್ಡಾದ ಮೇಲೆ ದಾಳಿ ನಡೆಸಿದರು. ಪೊಲೀಸರು ದಾಳಿ ಮಾಡುತ್ತಿದ್ದಂತೆಯೇ ಸ್ಥಳದಲ್ಲಿದ್ದ ಬಹುತೇಕರು ಕಾಲ್ಕಿತ್ತಿದ್ದು ಕೋಳಿ ಅಂಕದಲ್ಲಿ ನಿರತರಾಗಿದ್ದ ಇಬ್ಬರನ್ನು ಸ್ಥಳದಲ್ಲೇ ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಬೈಂದೂರು ತಾಲೂಕಿನ ಹಳಗೇರಿ ಕಂಬದಕೋಣೆ ಗ್ರಾಮದ ಸುಧಾಕರ (61) ಮತ್ತು ಕಿರಿಮಂಜೇಶ್ವರ ಗ್ರಾಮದ ಸುರೇಶ (40) ಎಂದು ಗುರುತಿಸಲಾಗಿದೆ. ಘಟನಾ ಸ್ಥಳದಿಂದ ಜೂಜಾಟಕ್ಕೆ ಬಳಸಿದ್ದ 10 ಕೋಳಿ ಹುಂಜಗಳು, 4 ಕೋಳಿಬಾಳುಗಳು (ಕತ್ತಿ), ಕತ್ತಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಜೆಸಿಐ ಶಿರೂರು ಘಟಕ ವತಿಯಿಂದ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕಾರ್ಯಕ್ರಮದಡಿಯಲ್ಲಿ ಕ್ಲೀನ್ ಕಿನಾರಾ ಮೂಲಕ‌ ಬೈಂದೂರು ಪರಿಸರದಲ್ಲಿ ನಿರಂತರ ಜನಜಾಗ್ರತಿ ಮೂಡಿಸುತ್ತಿರುವ ರಾಘವೇಂದ್ರ ಪಡುವರಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜೆಸಿಐ ಶಿರೂರಿನ ಅಧ್ಯಕ್ಷರರಾದ ಜೆಸಿ ವಿನೋದ್ ಮೇಸ್ತ, ಜೆಜೆಸಿ ಅಧ್ಯಕ್ಷರರಾದ ಜೆಸಿ ದೇವಂದ್ರ ಪಾಟೀಲ್, ಪೂರ್ವ ಅಧ್ಯಕ್ಷರರಾದ ಜೆಸಿ ಗಿರೀಶ್ ಮೇಸ್ತ, ಜೆಸಿ ನಾಗೇಶ್ ಕೆ., ಜೆಸಿ ನಾಗೇಂದ್ರ ಪ್ರಭು, ಜೆಸಿರೇಟ್ ಅಧ್ಯಕ್ಷೆ ಜೆಸಿ ಲಕ್ಷ್ಮಿ ನಾಗೇಶ್ ಕೆ, ಮತ್ತು ಬೈಂದೂರು ಕ್ಲೀನ್ ಕಿನಾರ ತಂಡ ಇದರ ಸದಸ್ಯರು ಮತು ಜೆಸಿಐ ಶಿರೂರಿನ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದಿದ.ಕೋಟ: ರೋಟರಿ ಜಿಲ್ಲೆ 3182 ಪ್ರಾಯೋಚಿತ 150 ಇಂಟರಾಕ್ಟ್  ಕ್ಲಬ್‌ಗಳ ಜಿಲ್ಲಾ ಇಂಟರಾಕ್ಟ್ ಪ್ರತಿನಿಧಿಯಾಗಿ ಕೋಟದ ವಿವೇಕ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯಾದ ಸೃಷ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ಯಕ್ಷಗಾನ, ನೃತ್ಯ ರಂಗನಟನೆ, ನಿರೂಪಣೆ,ಕ್ರೀಡೆ ಮೊದಲಾದ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಬಹುಮುಖಿ ಪ್ರತಿಭಾವಂತಳಾದ ಈಕೆ ಯನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಇಂಟರಾಕ್ಟ್ ಸಭಾಪತಿ ರೋಟೆರಿಯನ್ ಸುರೇಶ್ ಬೇಳೂರು ಪೂರ್ವ ಸಭಾಪತಿ ಗಣೇಶ ಶೆಟ್ಟಿ ಕೋಟ ಸಾಲಿಗ್ರಾಮದ ರಾಜೇಂದ್ರ ಸುವರ್ಣ ಅವರು ಹಾಗೂ ಬಾಲಕಿಯರ ಪ್ರೌಢಶಾಲೆಯ ಇಂಟರಾಕ್ಟ್ ಸಂಚಾಲಕರಾದ ನರೇಂದ್ರ ಕುಮಾರ್ ಕೋಟ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ರತ್ತೂಬಾಯಿ ಪ್ರೌಢಶಾಲೆ ಬೈಂದೂರು ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಲಯ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಜನತಾ ನ್ಯೂ ಇಂಗ್ಲೀಷ್ ಮಿಡಿಯಂ ಶಾಲೆಯ ದಾಖಲೆಯ 3 ವಿದ್ಯಾರ್ಥಿಗಳು ಬೈಂದೂರು ವಲಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕದೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 17ರ ವಯೋಮಾನದ ಹುಡುಗಿಯರ  ವಿಭಾಗದಲ್ಲಿ ಶಿವಾನಿ (10ನೇ ತರಗತಿ) ಹಾಗೂ 14ರ ವಯೋಮಾನದ ಹುಡುಗರ ವಿಭಾಗದಲ್ಲಿ ತ್ರಿನೀತ್ (8ನೇ ತರಗತಿ) ಹಾಗೂ ಪ್ರಚೇತ್ (7ನೇ ತರಗತಿ) ವಲಯ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಸರ್ವಾಂಗೀಣ  ವಿಕಾಸಕ್ಕಾಗಿ ಪ್ರತಿ ಶನಿವಾರದಂದು ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳಿಗೂ ವಿವಿಧ ಹವ್ಯಾಸಿ ತರಬೇತಿಗಳನ್ನು ನಡೆಸುವುದರೊಂದಿಗೆ ವಿಶೇಷ ಪ್ರತಿಭಾವಂತರಿಗೆ ಪ್ರತಿನಿತ್ಯವೂ ಶಾಲಾ ಸಮಯದಲ್ಲಿ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ಪರಿಣಿತ ತರಬೇತುದಾರದಿಂದ ವಿಶೇಷ ತರಬೇತಿಯನ್ನು ಒದಗಿಸಲಾಗುತ್ತಿದೆ.    ವಿಜೇತ ವಿದ್ಯಾರ್ಥಿಗಳಿಗೆ ಜನತಾ ಸಮೂಹ ಸಂಸ್ಥೆಗಳ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ದೇಶದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಸೇರ ಬಯಸುವ ವಿದ್ಯಾರ್ಥಿಗಳಿಗೆ ನಡೆಸುವ ಅರ್ಹತಾ ಪರೀಕ್ಷೆಯಾದ ನೀಟ್ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆಗೈದು ದೇಶದ ಪ್ರತಿಷ್ಠಿತ ಮೆಡಿಕಲ್ ಕಾಲೇಜುಗಳಿಗೆ ಸೇರಿಕೊಳ್ಳಲಿರುವ ಕ್ರಿಯೇಟಿವ್ ಸಂಸ್ಥೆಯ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಕ್ರಿಯೇಟಿವ್‌ನ ಸಪ್ತಸ್ವರ ವೇದಿಕೆಯಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಸಹ ಸಂಸ್ಥಾಪಕರಾದ ಅಶ್ವತ್ ಎಸ್. ಎಲ್. ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ನೀಟ್ ಪರೀಕ್ಷೆಯಲ್ಲಿ ಕಠಿಣ ಪ್ರಯತ್ನಪಟ್ಟು ಸಾಧನೆಗೈದಿರುವ ವಿದ್ಯಾರ್ಥಿಗಳನ್ನು ಮತ್ತು ಅವರ ಹೆತ್ತವರನ್ನು ಗೌರವಿಸಿಕೊಳ್ಳಬೇಕೆಂಬ ಸದುದ್ದೇಶದಿಂದ ಕ್ರಿಯೇಟಿವ್ ಪ್ರತಿಭಾ ಪರ್ವ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಈ ಬಾರಿಯ ನೀಟ್ ಪರೀಕ್ಷೆಯಲ್ಲಿ ಅನೇಕ ಗೊಂದಲಗಳ ನಡುವೆಯೂ ಸಂಕಟಗಳನ್ನು, ಒತ್ತಡಗಳನ್ನು ದಾಟಿ ಗೆದ್ದು ವಿಶಿಷ್ಟ ಸಾಧನೆ ಗೈದಿರುವ ವಿದ್ಯಾರ್ಥಿಗಳನ್ನು ವಿಶೇಷವಾಗಿ ಗುರುತಿಸಲು ಅತೀವ ಸಂತೋಷವಾಗುತ್ತದೆ. ಕೇವಲ ವಿದ್ಯಾರ್ಥಿಗಳಿಗೆ ಅಂಕ ಗಳಿಕೆ ಮಾತ್ರವಲ್ಲದೆ ಭವಿಷ್ಯತ್ತಿನಲ್ಲಿ ಉತ್ತಮ ನಾಗರಿಕರನ್ನಾಗಿ ಮಾಡುವಲ್ಲಿ ಕ್ರಿಯೇಟಿವ್ ಸಂಸ್ಥೆ ಸದಾ ಶ್ರಮಿಸುತ್ತಿದೆ ಎಂದು ನುಡಿದರು. ಸಹ ಸಂಸ್ಥಾಪಕರಾದ ಗಣಪತಿ ಭಟ್ ಕೆ.ಎಸ್. ಅವರು, ಕಾರ್ಯಕ್ರಮದ ಕುರಿತು ಇದು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇಲ್ಲಿನ ಮಣೂರು ಪರಿಸರದ ಮಾಧವ ಶೆಣೈ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದು ಪ್ರಸ್ತುತ ಕೆ.ಎಂ.ಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿನ್ನೆಲೆಯಲ್ಲಿ ಆರ್ಥಿಕ ಸಹಕಾರಕ್ಕೆ ಸ್ಥಳೀಯ ಸಂಘಸಂಸ್ಥೆಗಳ ಮೊರೆಹೋಗಿದ್ದಾರೆ. ಈ ದಿಸೆಯಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಹಾಗೂ ದಾನಿಗಳ ಸಹಕಾರದೊಂದಿಗೆ ಸುಮಾರು 45 ಸಾವಿರೂ ರೂಗಳನ್ನು ಒಗ್ಗೂಡಿಸಿ ಅದನ್ನು ಭಾನುವಾರ ಮಾಧವ ಶೆಣೈ ಇವರಿಗೆ ಹಸ್ತಾಂತರಿಸಲಾಯಿತು. ಇದರ ಚೆಕ್ ಅನ್ನು ಮುಂಬೈ ಒಎನ್‌ಜಿಸಿ ಇದರ ನಿವೃತ್ತ ಅಧಿಕಾರಿ ಬನ್ನಾಡಿ ನಾರಾಯಣ ಆಚಾರ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಕಡ್ ಫೌಂಡೇಶನ್ ಮುಖ್ಯಸ್ಥ ಶ್ರೀಕಾಂತ್ ಶೆಣೈ, ಕೋಟ ಪಂಚಾಯತ್ ಮಾಜಿ ಸದಸ್ಯ ಎಂ. ಜಯರಾಮ ಶೆಟ್ಟಿ, ಪಂಚವರ್ಣ ಸಂಘಟನೆಯ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಅಧ್ಯಕ್ಷ ಮನೋಹರ್ ಪೂಜಾರಿ, ಉಪಾಧ್ಯಕ್ಷ ದಿನೇಶ್ ಆಚಾರ್, ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್, ಮಹಿಳಾ ಅಧ್ಯಕ್ಷೆ ಲಲಿತಾ ಪೂಜಾರಿ, ಸಂಚಾಲಕಿ ಸುಜಾತ ಬಾಯರಿ ಮತ್ತಿತರರು ಇದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ 2026 ಕಾರ್ಯವು ಸಮರ್ಪಕವಾಗಿ ನಡೆಯುತ್ತಿದ್ದು ಈವರೆಗೆ ಜಿಲ್ಲೆಯಾದ್ಯಂತ 100% ರಷ್ಟು ಏನ್ಯೂಮರೇಷನ್ ನಮೂನೆಗಳನ್ನು ವಿತರಿಸಲಾಗಿದೆ. ನಿಖರ ಮತ್ತು ದೋಷರಹಿತ ಮತದಾರರ ಪಟ್ಟಿಯನ್ನು ತಯಾರಿಸಲು ಈ ಪ್ರಕ್ರಿಯೆಯು ಅತ್ಯಂತ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ನಿಮಗೆ ತಲುಪಿಸಲಾಗಿರುವ ನಮೂನೆಗಳಲ್ಲಿರುವ ವಿವರಗಳನ್ನು ಪರಿಶೀಲಿಸಿ, ಎಲ್ಲಾ ಮಾಹಿತಿಯನ್ನು ತಪ್ಪಿಲ್ಲದಂತೆ ಭರ್ತಿ ಮಾಡಿ ಭರ್ತಿ ಮಾಡಿದ ನಮೂನೆಗಳನ್ನು ನಿಮ್ಮ ವ್ಯಾಪ್ತಿಯ ಬೂತ್ ಮಟ್ಟದ ಗಳಿಗೆ ಹಿಂತಿರುಗಿಸಬೇಕು. ನಮೂನೆಗಳನ್ನು ಭರ್ತಿ ಮಾಡುವಲ್ಲಿ ಯಾವುದೇ ತೊಂದರೆ ಅಥವಾ ಗೊಂದಲಗಳಿದ್ದರೆ, ಹತ್ತಿರದ BLO Facilitation Centre (BFC) ಮತ್ತು Voter facilitation Centre (VFC) ಗೆ ಭೇಟಿ ನೀಡಿದಲ್ಲಿ ಅಲ್ಲಿನ ಸಿಬ್ಬಂದಿಗಳು ನಮೂನೆಗಳನ್ನು ಭರ್ತಿ ಮಾಡುವ ಕುರಿತು ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ. ಹೆಚ್ಚಿನ ಮಾಹಿತಿ ಅಥವಾ ನಿಮ್ಮ ವ್ಯಾಪ್ತಿಯ BLO ಮತ್ತು Facilitationಗಳ ವಿವರಗಳನ್ನು ಜಿಲ್ಲಾಡಳಿತದ ಅಧಿಕೃತ ವೆಬ್ https://udupi.nic.in/en/special-intensive-revision – 2026/ ಅನ್ನು ಸಂಪರ್ಕಿಸಬಹುದಾಗಿದೆ.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ಮುಂಗಾರು ಮಳೆಯ ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ಮುಂಬರುವ ದಿನಗಳಲ್ಲಿ ಬರಬಹುದಾದ ಮೇವಿನ ಕೊರತೆಯನ್ನು ನೀಗಿಸಲು ಅಲ್ಪಾವಧಿ ಹಾಗೂ ಧೀರ್ಘಾವಧಿ ತಳಿಯ ಮೇವು ಉತ್ಪಾದನೆಯನ್ನು ಬೇಡಿಕೆಗೆ ಅನುಗುಣವಾಗಿ ರೈತರು ಹುಲ್ಲನ್ನು ಬೆಳೆಯಲು ಅನುಕೂಲವಾಗುವಂತೆ ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ ನೀಡಿದರು.  ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಮೇವು ಅಭಿವೃದ್ಧಿ ಕಾರ್ಯಪಡೆ ಸಮಿತಿ ಸಭೆ ಹಾಗೂ ಜಿಲ್ಲಾ ಪ್ರಾಣಿ ದಯಾ ಸಂಘದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಡಿದರು. ಪ್ರಸ್ತುತ ಮಾನ್ಸೂನ್ ಮಳೆಗಾಲದಲ್ಲಿ ಹವಾಮಾನ ವೈಪರಿತ್ಯದಿಂದಾಗಿ ವಾಡಿಕೆಗಿಂತ ಕಡಿಮೆ ಬೀಳುತ್ತಿದ್ದು, ಮುಂದಿನ ದಿನಗಳಲ್ಲಿ ಬರಪರಿಸ್ಥಿತಿ ಉಂಟಾಗುವ ಸಾಧ್ಯತೆಗಳು ಇವೆ. ಜಿಲ್ಲೆಯಲ್ಲಿ ಪ್ರಸ್ತುತ ಮುಂಬರುವ 42 ವಾರಗಳಿಗೆ ಆಗುವಷ್ಟು ಮೇವು ಲಭ್ಯವಿದೆ. ಆದರೆ ಕುಂದಾಪುರ ಹಾಗೂ ಬೈಂದೂರು ತಾಲೂಕುಗಳಲ್ಲಿ ಮೇವಿನ ಪ್ರಮಾಣ ಇತರೆ ತಾಲೂಕುಗಳಿಗೆ ಹೋಲಿಸಿದ್ದಲ್ಲಿ ಕಡಿಮೆ ಇದೆ. ಕುಂದಾಪುರ ತಾಲೂಕಿನಲ್ಲಿಯೇ ಹೆಚ್ಚು ರಾಸುಗಳು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ನಮ್ಮ ಜೀವನದ ಯಶಸ್ಸು ಪಡೆಯಬೇಕಾದರೆ ಕಷ್ಟಪಟ್ಟು ಕೆಲಸ ಮಾಡಬೇಕು. ಪ್ರಾಮಾಣಿಕ ಪ್ರಯತ್ನ ಇದ್ದರೆ ಅದಕ್ಕೆ ಪ್ರತಿಫಲ ಸಿಗುತ್ತದೆ.ಸಿ . ಎ ಮತ್ತು ಸಿ.ಎಸ್. ಪೂರ್ಣಗೊಳಿಸುವುದು ಕಷ್ಟ ಅಂತ ಭಾವಿಸುವುದು ತಪ್ಪು ಕಲ್ಪನೆ. ನಿರಂತರ ಪರಿಶ್ರಮ ಇದ್ದರೆ ಸಿ.ಎ. ಮತ್ತು ಸಿ.ಎಸ್. ಸುಲಭವಾಗಿ ಪೂರ್ಣಗೊಳಿಸಬಹುದು. ವಿದ್ಯಾರ್ಥಿಗಳು ಪ್ರತಿ ದಿನ ಪ್ರತಿ ಕ್ಷಣ ಶಿಕ್ಷಣದ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ತ್ರಿಷಾ ಸಮೂಹ ಸಂಸ್ಥೆಗಳು ಸಂಸ್ಥಾಪಕರಾದ ಸಿಎ ಗೋಪಾಲಕೃಷ್ಣ ಭಟ್ ಅಭಿಪ್ರಾಯಪಟ್ಟರು. ಅವರು ಜನತಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯು ವಿಭಾಗದ ಸಿ.ಇ., ಸಿ.ಎಸ್. ವಾಣಿಜ್ಯಿಕ ಓರಿಯೋಟೇಷನ್ ಕಾರ್ಯಕ್ರಮದಲ್ಲಿ ಮಾತನಾಡಿದರು. ವಾಣಿಜ್ಯ ವಿಭಾಗದಲ್ಲಿ ಸಾಕಷ್ಟು ಉದ್ಯೋಗ ಅವಕಾಶಗಳು ಮುಂದಿನವು ದಿನಗಳಲ್ಲಿ ಸಿ.ಎ, ಸಿ.ಎಸ್. ಜೊತೆಗೆ ವಿಪುಲ ಅವಕಾಶಗಳು ಗ್ರಾಮೀಣ ಭಾಗದಲ್ಲಿರುವ ಜನತಾ ಪಿಯು ಕಾಲೇಜಿನಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಶೈಕ್ಷಣಿಕ ಸಾಧನೆಗಳು ಸಿಗುವ ಅವಕಾಶ ಉತ್ತಮ ವ್ಯಕ್ತಿಗಳಾಗಿ ಎಂದು ಅರಿವು ಮೂಡಿಸಿದರು. ವೇದಿಕೆಯಲ್ಲಿ ಜನತಾ…

Read More