ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಸಿದ್ದಾಪುರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಕಲಿಕೆಗೆ ಸಹಾಯಕವಾಗುವಂತೆ ಮುತ್ತೂಟ್ ಫೈನಾನ್ಸ್ ಲಿಮಿಟೆಡ್ ನವರು ನೀಡಿದ ಮೂರು ಕಂಪ್ಯೂಟರ್ ಹಾಗೂ ಒಂದು ಪ್ರಿಂಟರ್ ಹಸ್ತಾಂತರಿಸಲಾಯಿತು. ಮಂಗಳೂರು ವಲಯದ ಸಿ.ಎಸ್.ಆರ್ ಯೋಜನೆಯ ಮುಖ್ಯಸ್ಥರಾದ ಪ್ರಸಾದ್ ಕುಮಾರ್ ಅವರು ಮುಖ್ಯ ಶಿಕ್ಷಕರಾದ ಸೋಮ ನಾಯಕ್ ಮತ್ತು ಎಸ್‌ಡಿಎಂಸಿ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು. ಶಾಲಾ ವಾರ್ಷಿಕೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಸಂಪಿಗೇಡಿ ಸಂಜೀವ ಶೆಟ್ಟಿ ಮಾತನಾಡಿ, ಶಾಲೆಯ ಉತ್ತರೋತ್ತರ ಪ್ರಗತಿಯನ್ನು ಕೊಂಡಾಡಿದರು. ಈ ಎಲ್ಲಾ ಪ್ರಗತಿಗೆ ಕಾರಣೀಕರ್ತರಾದ ವಾರ್ಷಿಕೋತ್ಸವ ಸಮಿತಿ ಮತ್ತು ಎಸ್‌ಡಿಎಂಸಿಯನ್ನು ಅಭಿನಂದಿಸಿದರು. ಕಾರ್ಯಕ್ರಮವನ್ನು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್ ಅವರು ಸಿಎಸ್ಆರ್ ಸಹಾಯಧನವನ್ನು ಶಾಲೆಗೆ ತಂದ ಬಗೆಯನ್ನು ವಿವರಿಸಿದರು. ನೆಲ್ಸನ್ ಡಿಸೋಜ ಮುತ್ತೂಟ್ ಫೈನಾನ್ಸ್ ಲಿಮಿಟೆಡ್ ಉಡುಪಿ ಕ್ಲಸ್ಟರ್ನ ಮುಖ್ಯಸ್ಥರನ್ನು ಸಂಪಿಗೆಡಿ ಸಂಜೀವ್ ಶೆಟ್ಟಿ ಅವರು ಗೌರವಿಸಿದರು. ಕಾರ್ಯಕ್ರಮದಲ್ಲಿ ಮುತ್ತೂಟ್ ಫೈನಾನ್ಸ್‌ನ ಪ್ರವೀಣ್…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಧುನಿಕ ನಗರಾಭಿವೃದ್ಧಿಯೊಂದಿಗೆ ಪ್ರಕೃತಿ ಸಂರಕ್ಷಣೆ, ಐತಿಹಾಸಿಕ ಪರಂಪರೆ, ಸಾರ್ವಜನಿಕ ಸಾರಿಗೆ, ಸ್ವಚ್ಛತೆ ಹಾಗೂ ದೇಶೀಯ ಉತ್ಪಾದನೆಗೆ ಸಮಾನ ಆದ್ಯತೆ ನೀಡಿರುವ ರಷ್ಯಾದ ಅಭಿವೃದ್ಧಿ ದೃಷ್ಟಿಕೋನವು ವಿಶಿಷ್ಟ ಅನುಭವ ನೀಡಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಅವರು ಆಳ್ವಾಸ್‌ನ ರೋಸ್ಟ್ರಮ್ ಸ್ಪೀಕರ್ಸ್ಕ್ಲಬ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇತ್ತೀಚಿನ ರಷ್ಯಾ ಪ್ರವಾಸದ ಅನುಭವಗಳನ್ನು ಹಂಚಿಕೊಂಡ ಅವರು, ಒಂದು ದೇಶದ ಅಭಿವೃದ್ಧಿಯನ್ನು ಕೇವಲ ಎತ್ತರದ ಕಟ್ಟಡಗಳು ಮತ್ತು ಹೊಸ ಮೂಲಸೌಕರ್ಯಗಳಿಂದ ಅಳೆಯಲಾಗದು. ಪ್ರಕೃತಿಯೊಂದಿಗೆ ಬದುಕುವ ವಿಧಾನ, ಪರಂಪರೆಯನ್ನು ಉಳಿಸಿಕೊಳ್ಳುವ ಮನೋಭಾವ, ಸ್ಥಳೀಯ ಉತ್ಪಾದನೆಯ ಮೇಲಿನ ನಂಬಿಕೆ ಮತ್ತು ಸಾರ್ವಜನಿಕ ಬದುಕಿನ ಶಿಸ್ತು ಕೂಡ ಅಭಿವೃದ್ಧಿಯ ಮಾನದಂಡಗಳಾಗಬೇಕು ಎಂದರು. ನಗರಾಭಿವೃದ್ಧಿಯೊಂದಿಗೆ ಪ್ರಕೃತಿಯ ಸಹಬಾಳ್ವೆ:ರಷ್ಯಾದ ನಗರ ಯೋಜನೆಯಲ್ಲಿ ಪ್ರಕೃತಿಗೆ ನೀಡಿರುವ ಸ್ಥಾನ ತಮ್ಮ ಗಮನಸೆಳೆಯಿತು ಎಂದರು. ವೇಗವಾಗಿ ಬೆಳೆಯುತ್ತಿರುವ ನಗರಗಳ ನಡುವೆಯೂ ವಿಶಾಲ ಹಸಿರು ಪ್ರದೇಶಗಳು, ಉದ್ಯಾನಗಳು, ವಾಕಿಂಗ್ ಪಥಗಳು ಹಾಗೂ ಸಾರ್ವಜನಿಕ ಸ್ಥಳಗಳನ್ನು ವ್ಯವಸ್ಥಿತವಾಗಿ ರೂಪಿಸಿರುವುದು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸುದೀರ್ಘ ಸೇವೆ ಸಲ್ಲಿಸಿ ತನ್ನ ಆಡಳಿತ ಅವಧಿಯಲ್ಲಿ ಕಾಲೇಜಿನ ದಾಖಲಾತಿ ಹಾಗೂ ಫಲಿತಾಂಶದಲ್ಲಿ ಗಣನೀಯ ಬದಲಾವಣೆ ತರಲು ಶ್ರಮಿಸಿದ ಪ್ರಾಂಶುಪಾಲರಾದ ರಾಮಕೃಷ್ಣ ಬಿ.ಜಿ. ಅವರು ಸೇವಾ ನಿವೃತ್ತಿಯ ಹೊಸ್ತಿಲಲ್ಲಿ ಅವರನ್ನು ಕಾಲೇಜಿನ ಉಪನ್ಯಾಸಕರು ಸಿಬ್ಬಂದಿ ವರ್ಗದವರು ಸನ್ಮಾನಿಸಿ ಗೌರವಿಸಿದರು. ಅವರು ಮೂಲತಃ ಸಾಗರ ತಾಲೂಕಿನ ಬಿಳಿಯೂರಿನವರು. ಇದೇ ಸಂಸ್ಥೆಯಲ್ಲಿ 13 ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವ ಅವರು 5 ವರ್ಷಗಳ ಹಿಂದೆ ಪ್ರಾಂಶುಪಾಲರಾಗಿ ಪದೋನ್ನತಿ ಹೊಂದಿ ಇಲ್ಲಿಗೆ ವರ್ಗಾವಣೆಗೊಂಡು ಕಾಲೇಜಿನ ಶೈಕ್ಷಣಿಕ ಏಳಿಗೆಗೆ ದುಡಿದಿರುತ್ತಾರೆ. ಅವರನ್ನು ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗ, ಅವರ ಆತ್ಮೀಯರು, ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಚಂದ್ರಶೇಖರ್ ಮಣೂರು, ಶಿವಾನಂದ ನಾಯಕ, ಗಣಪತಿ ಬಿ.ಆರ್. ಪ್ರಾಂಶುಪಾಲರುಗಳಾದ ವಿಶ್ವನಾಥ್ ಕರಬ, ಗಣಪತಿ ಅವಭೃತ, ನಿವೃತ್ತ ಪ್ರಾಂಶುಪಾಲ ರಾಜೀವ ನಾಯ್ಕ್ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪ್ರತಿಷ್ಠಿತ ಬೆಂಗಳೂರು ಬಂಟರ ಸಂಘದ 2026-29ನೇ ಸಾಲಿನ ಆಡಳಿತ ಮಂಡಳಿಯ ಆಯ್ಕೆ ಚುನಾವಣೆಯನ್ನು ಬೆಂಗಳೂರು ಬಂಟರ ಸಂಘದ ಆವರಣ ಹಾಗೂ ಮುಲ್ಕಿ ಸುಂದರರಾಮ್ ಶೆಟ್ಟಿ ಮೆಮೋರಿಯಲ್ ಎಂ.ಎಸ್.ಆರ್.ಎಸ್. ನಗರ ಟ್ರಸ್ಟ್ ಹಾಲ್‌ನಲ್ಲಿ ಏಕಕಾಲದಲ್ಲಿ ನಡೆಸಲಾಯಿತು. ಸಂಘದ ಅಧ್ಯಕ್ಷರಾಗಿ ಡಾ. ದೀಪಕ್ ಶೆಟ್ಟಿ, ಉಪಾಧ್ಯಕ್ಷರುಗಳಾಗಿ ಮಧುಕರ್ ಎಂ. ಶೆಟ್ಟಿ ಹಾಗೂ ಸೌಮ್ಯಪ್ರಿಯ ಹೆಗ್ಡೆ, ಗೌರವ ಕಾರ್ಯದರ್ಶಿಯವರಾಗಿ ಅಮರನಾಥ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಸುರೇಖಾ ಶೆಟ್ಟಿ, ಖಜಾಂಚಿಯಾಗಿ ರಮಿತ್ ಬಿ. ಶೆಟ್ಟಿ ಅವರು ಆಯ್ಕೆಯಾಗಿರುತ್ತಾರೆ. ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಅನಿತಾ ಪಿ. ಭಂಡಾರಿ, ಅರುಣ್ ಕುಮಾರ್ ಶೆಟ್ಟಿ ಹೆಚ್., ಸಿಎ. ಚಂದ್ರಶೇಖರ್ ಶೆಟ್ಟಿ, ಹೀರಾ ಅನೂಪ್ ಹೆಗ್ಡೆ, ಕೀರ್ತನ್ ಶೆಟ್ಟಿ, ಸಿಎ. ಕಿಶೋರ್ ಶೆಟ್ಟಿ, ಮಾಲತಿ ಜೆ. ಶೆಟ್ಟಿ, ನಿತ್ಯರಂಜನ್ ಶೆಟ್ಟಿ, ಪ್ರಸಾದ್ ಕುಮಾರ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ಎಸ್. ಪ್ರತಾಪ್ ಶೆಟ್ಟಿ, ಶ್ರೀ ರಾಮ್‌ದಾಸ್ ಶೆಟ್ಟಿ ಕೆ.ಎಸ್., ಶಕುಂತಲ ಶೆಟ್ಟಿ, ಸುರೇಂದ್ರ ಶೆಟ್ಟಿ ಹೆಚ್. ಮತ್ತು ಉಮೇಶ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪಾರಂಪರಿಕ ಆಯುರ್ವೇದ ವೈದ್ಯಕೀಯ ಪದ್ಧತಿಯ ಸಂರಕ್ಷಣೆ, ಔಷಧ ಸಂಶೋಧನೆ ಹಾಗೂ ನೈಸರ್ಗಿಕ ಚಿಕಿತ್ಸೆಯಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ಕುಂದಾಪುರದ ಖ್ಯಾತ ಆಯುರ್ವೇದ ವೈದ್ಯ ಡಾ. ರಾಜೇಶ್ ಬಾಯರಿ ಅವರಿಗೆ ಮಾಧ್ಯಮ ರಂಗದ ಅಗ್ರಗಣ್ಯ ಸಂಸ್ಥೆಗಳಾದ ಕನ್ನಡ ಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಜಂಟಿಯಾಗಿ ನೀಡುವ ಪ್ರತಿಷ್ಠಿತ ಆಯುರ್ ಭೂಷಣ ಪುರಸ್ಕಾರವನ್ನು ಬೆಂಗಳೂರಿನಲ್ಲಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮದ ಶ್ರೀ ಜಪಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಖ್ಯಾತ ಹಿರಿಯ ನಟಿ ಹಾಗೂ ಮಾಜಿ ಸಚಿವೆ ಉಮಾಶ್ರೀ, ಖ್ಯಾತ ನಟ ಹಾಗೂ ನಿರ್ದೇಶಕ ಸುಚೇಂದ್ರ ಪ್ರಸಾದ್, ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಎ. ಶರವಣ, ಹಿರಿಯ ಆಯುರ್ವೇದ ವೈದ್ಯ ಡಾ. ಗಿರಿಧರ ಕಜೆ, ಪರ್ವ ಗ್ರೂಪ್ ಎಂಡಿ ನೀಲೇಶ್ ಹಾಗೂ ಕನ್ನಡ ಪ್ರಭ – ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಸಮೂಹ ಸಂಪಾದಕೀಯ ನಿರ್ದೇಶಕ ರವಿ ಹೆಗಡೆ, ಕನ್ನಡಪ್ರಭ ಸಂಪಾದಕ ಗಿರೀಶ್ ರಾವ್ ಹತ್ವಾರ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಐ.ಎಂ.ಜೆ. ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆ, ಮೂಡ್ಲಕಟ್ಟೆ (ಐಎಂಜೆಐಎಸ್‌ಸಿ) ಯ ಯೂತ್ ರೆಡ್ ಕ್ರಾಸ್ ಘಟಕದ ವತಿಯಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಯೂತ್ ರೆಡ್ ಕ್ರಾಸ್ ಚಟುವಟಿಕೆಗಳು, ಉದ್ದೇಶ ಮತ್ತು ಮಹತ್ವದ ಕುರಿತು ದೀಕ್ಷಾ ಕಾರ್ಯಕ್ರಮ ನಡೆಯಿತು. ಭಾರತೀಯ ರೆಡ್ ಕ್ರಾಸ್ ಸೊಸೈಟಿ (IRCS), ಕುಂದಾಪುರ ಶಾಖೆಯ ಅಧ್ಯಕ್ಷರಾದ ಎಸ್. ಜಯಕರ ಶೆಟ್ಟಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಹುಟ್ಟು, ಉದ್ದೇಶಗಳು ಮತ್ತು ಮಹತ್ವದ ಕುರಿತು ವಿವರಿಸಿದರು. ಯೂತ್ ರೆಡ್ ಕ್ರಾಸ್ ಕೈಗೊಳ್ಳುವ ವಿವಿಧ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಮಾನವೀಯತೆ, ಸ್ವಯಂಸೇವೆ ಮತ್ತು ಸಮುದಾಯದ ಭಾಗವಹಿಸುವಿಕೆಯ ಮಹತ್ವವನ್ನು ಒತ್ತಿ ಹೇಳಿದ ಅವರು, ಪ್ರಥಮ ಚಿಕಿತ್ಸೆ, ವಿಪತ್ತು ನಿರ್ವಹಣೆ ಮತ್ತು ರಕ್ತದಾನದಂತಹ ಉಪಕ್ರಮಗಳ ಬಗ್ಗೆ ತಿಳಿಸಿದರು. ಇತ್ತೀಚೆಗೆ ನೇಪಾಳದಲ್ಲಿ ಸಂಭವಿಸಿದ ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ರೆಡ್ ಕ್ರಾಸ್ ಸಲ್ಲಿಸಿದ ಮಾನವೀಯ ಸೇವೆ ಮತ್ತು ಪರಿಹಾರ ಹಾಗೂ ರಕ್ಷಣಾ ಕಾರ್ಯಗಳಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ (IQAC), ರ‍್ಯಾಗಿಂಗ್ ವಿರೋಧಿ ಕೋಶ ಹಾಗೂ ಮಾದಕ ದ್ರವ್ಯ ವಿರೋಧಿ ಕೋಶಗಳ ಸಂಯುಕ್ತ ಆಶ್ರಯದಲ್ಲಿ “ಸನ್ಮಾರ್ಗದತ್ತ ಯುವಪಥ – ರ‍್ಯಾಗಿಂಗ್ ಮತ್ತು ವ್ಯಸನ ಮುಕ್ತ ಕ್ಯಾಂಪಸ್ ಜಾಗೃತಿ ಕಾರ್ಯಕ್ರಮ”ವು ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಬೈಂದೂರು ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕರಾದ ಸೀತಾರಾಮ ಶೆಟ್ಟಿಗಾರ್ ಉದ್ಘಾಟಿಸಿದರು. ಬಳಿಕ ಅವರು ಹಾಗೂ ಪೊಲೀಸ್ ಕಾನ್ಸ್‌ಟೇಬಲ್ ಹಾಲಪ್ಪ ಅವರು ವಿದ್ಯಾರ್ಥಿಗಳಿಗೆ ಕಾನೂನು ಜಾಗೃತಿ, ರ‍್ಯಾಗಿಂಗ್ ತಡೆ ಹಾಗೂ ವ್ಯಸನ ಮುಕ್ತ ಜೀವನದ ಕುರಿತು ಉಪಯುಕ್ತ ಮಾಹಿತಿ ನೀಡಿದರು. ರ‍್ಯಾಗಿಂಗ್ ಮತ್ತು ಮಾದಕದ್ರವ್ಯ ಸೇವನೆಯ ದುಷ್ಪರಿಣಾಮಗಳ ಬಗ್ಗೆ ತಿಳಿಸಿದ ಅವರು, ವಿದ್ಯಾರ್ಥಿಗಳು ಶಿಸ್ತುಬದ್ಧ ಹಾಗೂ ಜವಾಬ್ದಾರಿಯುತ ಜೀವನವನ್ನು ರೂಪಿಸಿಕೊಳ್ಳುವಂತೆ ಕರೆ ನೀಡಿದರು. ರ‍್ಯಾಗಿಂಗ್ ವಿರೋಧಿ ಕೋಶದ ಸಂಯೋಜಕರಾದ ಗೀತಾ ಸಂದಿಗೋಡಮಠ ಹಾಗೂ ಮಾದಕದ್ರವ್ಯ ವಿರೋಧಿ ಕೋಶದ ಸಂಯೋಜಕರಾದ ಡಾ. ಆನಂದ ಸಿ. ಅವರು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ಅನುದಾನರಹಿತ ಪದವಿಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘಟನೆ (KUPMA)ವತಿಯಿಂದ ನೀಡಲಾಗುವ ಅನುದಾನ ರಹಿತ ಉಡುಪಿ ಜಿಲ್ಲಾ ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿಗೆ ಐವರು ಉಪನ್ಯಾಸಕರು ಆಯ್ಕೆಯಾಗಿದ್ದಾರೆ. ಉಡುಪಿಯ ಹೋಟೆಲ್ ಓಷನ್ ಪರ್ಲ್‌ನಲ್ಲಿ ನಡೆದ KUPMA ಉಡುಪಿ ಜಿಲ್ಲಾ ಸಮಿತಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ಉಪನ್ಯಾಸಕರ ವೃತ್ತಿಪರ ಅನುಭವ, ಬೋಧನಾ ಕ್ಷೇತ್ರದಲ್ಲಿನ ಕೊಡುಗೆ, ಪ್ರತಿಭೆ ಹಾಗೂ ಸೇವೆಯನ್ನು ಪರಿಗಣಿಸಿ ಐವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಗೆ ಆಯ್ಕೆಯಾದವರು: 1. ರೇಷ್ಮಾ ಫರ್ನಾಂಡೀಸ್ – ಸೆಂಟ್ ಮೇರೀಸ್ ಕಾಂಪೋಸಿಟ್ ಪದವಿಪೂರ್ವ ಕಾಲೇಜು, ಕುಂದಾಪುರ 2. ಸ್ಮಿತಾ ಪದ್ಮಜಾ – ಎಕ್ಸಲೆಂಟ್ ಪದವಿಪೂರ್ವ ಕಾಲೇಜು, ಸುನ್ನಾರಿ 3. ಸೌಜನ್ಯಾ ಹೆಗ್ಡೆ – ಜ್ಞಾನಸುಧಾ ಶಿಕ್ಷಣ ಸಂಸ್ಥೆ, ಕಾರ್ಕಳ 4. ಶಕುಂತಲಾ ಪಾಲನ್-ವಿದ್ಯೋದಯ ಶಿಕ್ಷಣ ಸಂಸ್ಥೆ,ಉಡುಪಿ 5. ಲತಾ ಪೈ -ವೆಂಕಟರಮಣ ಶಿಕ್ಷಣ ಸಂಸ್ಥೆ ಕುಂದಾಪುರ ಆಯ್ಕೆಯಾದ ಉಪನ್ಯಾಸಕರಿಗೆ ಅಕ್ಟೋಬರ್ 3ರಂದು ಸಂಜೆ 4 ಗಂಟೆಗೆ ಮಣಿಪಾಲದ ಜ್ಞಾನಸುಧಾ ಪದವಿಪೂರ್ವ ಕಾಲೇಜಿನಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಪ್ರಧಾನಿ ನರೇಂದ್ರ ಮೋದಿಜಿ ಅವರ 25 ವರ್ಷಗಳ ಸಾರ್ವಜನಿಕ ಸೇವೆಯನ್ನು ಸ್ಮರಿಸಿ ಹಮ್ಮಿಕೊಂಡಿರುವ “ಸೇವಾ ಸಂಕಲ್ಪ ಅಭಿಯಾನ”ದ ಅಂಗವಾಗಿ, ಬಿಜೆಪಿ ಮಹಿಳಾ ಮೋರ್ಚಾ ಕುಂದಾಪುರ ಮಂಡಲ ವತಿಯಿಂದ ಗುಂಡ್ಮಿ ಹದ್ದಿನ ಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಉತ್ಸವ ನೆರವೇರಿತು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕಲಿಕಾ ಸಾಮಗ್ರಿ ಮತ್ತು ಪೌಷ್ಟಿಕ ಆಹಾರ ಕಿಟ್ ವಿತರಿಸಿ ಮಾತನಾಡಿದ ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ಅವರು, “ಬಲಿಷ್ಠ ಮಕ್ಕಳಿಂದಲೇ ಬಲಿಷ್ಠ ಭಾರತ ನಿರ್ಮಾಣ. ಮೋದಿಜಿ ಅವರು ಜಾರಿಗೆ ತಂದ ಪೋಷಣ್ ಅಭಿಯಾನ ಮಕ್ಕಳ ಆರೋಗ್ಯಕ್ಕೆ ಹೊಸ ಶಕ್ತಿ ನೀಡಿದೆ. ಅಂಗನವಾಡಿಯಿಂದಲೇ ವಿಕಸಿತ ಭಾರತದ ಬುನಾದಿ ಆರಂಭ” ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮೋರ್ಚಾ ಅಧ್ಯಕ್ಷೆ ಸೌರಭಿ ಪೈ ಅವರು ಸ್ವಾಗತಿಸಿ ಮಾತನಾಡಿ, “ಮಗುವಿನ ಮೊದಲ ಶಾಲೆಯೇ ಅಂಗನವಾಡಿ” ಎಂದರು. ಕಾರ್ಯಕ್ರಮದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ವಕ್ವಾಡಿ, ಸುಧೀರ್ ಕೆ.ಎಸ್, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಜಯೇಂದ್ರ ಪೂಜಾರಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮೋದಿಜಿ ಅವರ 25 ವರ್ಷಗಳ ಸೇವಾ ಪಯಣ ಪ್ರತಿಯೊಬ್ಬ ಕಾರ್ಯಕರ್ತನಿಗೂ ಸ್ಫೂರ್ತಿ. ಅಂತ್ಯೋದಯದ ಮಂತ್ರದೊಂದಿಗೆ ಕೊನೆಯ ವ್ಯಕ್ತಿಯನ್ನು ತಲುಪುವುದೇ ಈ ಸೇವಾ ಸಂಕಲ್ಪ ಅಭಿಯಾನದ ಉದ್ದೇಶ. ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜಿ ಅವರ ೨೫ ವ?ಗಳ ಸಾರ್ವಜನಿಕ ಸೇವೆಯನ್ನು ಹಾಗೂ ದೇಶದ ಅಭಿವೃದ್ಧಿ ಅಹರ್ನಿಶಿ ದುಡಿಯುತ್ತಿರುವ ನರೇಂದ್ರ ಮೋದಿಯವರನ್ನು ದೇಶದ ಪ್ರತಿಯೊಬ್ಬ ನಾಗರಿಕ ಸ್ಮರಿಸಿಕೊಳ್ಳಬೇಕು ಎಂದು ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ. ಹೇಳಿದರು. ಅವರು ಭಾರತೀಯ ಜನತಾ ಪಾರ್ಟಿ ವತಿಯಿಂದ ಹಮ್ಮಿಕೊಳ್ಳಲಾದ “ಸೇವಾ ಸಂಕಲ್ಪ ಅಭಿಯಾನ”ದ ಅಂಗವಾಗಿ ಬಿಜೆಪಿ ಮಹಿಳಾ ಮೋರ್ಚಾ ಬೈಂದೂರು ಮಂಡಲ ವತಿಯಿಂದ ಗಂಗೊಳ್ಳಿಯ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದಲ್ಲಿ ಬುಧವಾರ ಜರಗಿದ ’ಅಂಗನ್ ಕಾ ಮಿಲನ್’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ಯಾಮಲಾ ಕುಂದರ್ ವಹಿಸಿದ್ದರು. ಇದೇ ಸಂದರ್ಭ ಶಿಶು ಮಂದಿರದ ಮಾತಾಜಿ ಪ್ರೇಮಾ ಮತ್ತು ಸಹಾಯಕಿ ರತ್ನಾ…
