Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಉಪ್ಪುಂದ ಜಿಎಸ್ಬಿ ಸಮಾಜದ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿರುವ ಪುರುಷೋತ್ತಮ ಮಾಸದ ಆಚರಣಾ ಸಮಾರಂಭದಲ್ಲಿ, ಇತ್ತೀಚಿಗೆ ನಡೆದ ಸಿಎ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೆ ತೇರ್ಗಡೆ ಹೊಂದಿದ ಶೈಕ್ಷಣಿಕ ಸಾಧಕಿ ಬೈಂದೂರಿನ ಉದ್ಯಮಿ ಕೆ. ವೆಂಕಟೇಶ ಕಿಣಿ, ನಯನಾ ಕಿಣಿ ದಂಪತಿಯ ಪುತ್ರಿ ವೃಂದಾ ವಿ. ಕಿಣಿ ಇವರನ್ನು ಸೋಮವಾರ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ ಟ್ರಸ್ಟ್ ವತಿಯಿಂದ ದೇವರ ಅನುಗ್ರಹ ಪ್ರಸಾದ ನೀಡಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ವೃಂದಾ, ಕಾಮರ್ಸ್ ನನ್ನ ಇಷ್ಟದ ಸಬ್ಜೆಕ್ಟ್ ಆಗಿರಲಿಲ್ಲ. ಹೀಗಾಗಿ ಸಿಎ ಮಾಡುವ ಐಡಿಯಾ ಇರಲಿಲ್ಲ. ನನಗೆ ವಿಜ್ಞಾನ ವಿಷಯದಲ್ಲಿ ಆಸಕ್ತಿ ಇತ್ತು. ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಕ್ಷೇತ್ರದಲ್ಲಿ ಮುಂದುವರಿಯುವ ಆಸೆಯಿತ್ತು. ಅದರೆ ಸಕಾಲದಲ್ಲಿ ತಂದೆಯ ಅಮೂಲ್ಯ ಸಲಹೆ ಮತ್ತು ಮಾರ್ಗದರ್ಶನದಂತೆ ಸಿಎ ವಿಷಯವನ್ನು ತೆಗೆದುಕೊಂಡು ಪ್ರಥಮ ಹಂತದಲ್ಲಿಯೇ ಪರೀಕ್ಷೆ ತೇರ್ಗಡೆ ಹೊಂದಲು ಸಾಧ್ಯವಾಗಿದೆ ಎಂದರು. ಶ್ರೀ ವೆಂಕಟರಮಣ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಯು. ರಾಜೇಶ ಪೈ, ಉಪಾಧ್ಯಕ್ಷ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಮೇಸ್ತ ಸಮುದಾಯಕ್ಕೆ ಸಂಬಂಧಿಸಿ ಪ್ರಕರಣವೊಂದರ ವಕಾಲತ್ತು ಸಂಬಂಧ ವಕೀಲರಿಗೆ ಹಲ್ಲೆ ನಡೆಸಿ ಕೊಲೆಬೆದರಿಕೆ ಹಾಕಿದ ಘಟನೆ ಶಿರೂರಿನಲ್ಲಿ ನಡೆದಿದೆ. ಬೈಂದೂರು ನ್ಯಾಯಾಲಯದಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ಗಣೇಶ್ ಮೇಸ್ತ ಎಂಬುವವರು ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಿರೂರಿನ ಮೇಸ್ತ ಸಮುದಾಯಕ್ಕೆ ಸಂಬಂಧಿಸಿ ಬೈಂದೂರು, ಕುಂದಾಪುರ ಹಾಗೂ ಹೈಕೋರ್ಟ್ ನಲ್ಲಿ ಈ ಹಿಂದೆಯೇ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿ ಒಂದು ತಂಡದ ಪರವಾಗಿ ಗಣೇಶ್ ಮೇಸ್ತ ವಕಾಲತ್ತು ಮಾಡುತ್ತಿದ್ದರು. ಆಗಸ್ಟ್ 16ರ ಬುಧವಾರ ಆಟಿ ಅಮವಾಸ್ಯೆ ಪ್ರಯುಕ್ತ ಶಿರೂರಿನ ಕೋಟೆಮನೆ ದುರ್ಗಾಂಬಿಕೆ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲೆಂದು ವಕೀಲ ಗಣೇಶ ಮೇಸ್ತ ಹೋಗಿದ್ದರು. ಈ ಸಂದರ್ಭ ಮಧ್ಯಾಹ್ನ 12 ಗಂಟೆಗೆ ವಕೀಲರ ಎದುರು ಪಾರ್ಟಿಗಳ ಪೈಕಿ ನವೀನ್ ಮೇಸ್ತ, ಕೆ.ಎನ್.ಆಚಾರ್, ಶ್ರೀಧರ್ ಮೇಸ್ತ, ಗಿರೀಶ್ ಮೇಸ್ತ, ಸುಧಾಕರ ಮೇಸ್ತ, ಅಣ್ಣಪ್ಪ ವಿ ಮೇಸ್ತ, ಪ್ರಕಾಶ್ ವಿ ಮೇಸ್ತ, ರಾಘವೇಂದ್ರ ಗಣಪತಿ ಮೇಸ್ತ, ಚಂದ್ರಶೇಖರ ಮೇಸ್ತ ಸೇರಿದಂತೆ 11 ಜನರ ತಂಡ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಾಲೆಗೆ ನಿರಂತರವಾಗಿ ಗೈರಾಗುತ್ತಿದ್ದ ಆನಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಹಾಗೂ ಉಡುಪಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಂಪಾರು ದಿನಕರ ಶೆಟ್ಟಿಯನ್ನು ಅಮಾನತುಗೊಳಿಸಿ ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ ಕೆ ಅವರು ಆದೇಶಿಸಿದ್ದಾರೆ. ಶಿಕ್ಷಕ ಅಂಪಾರು ದಿನಕರ ಶೆಟ್ಟಿ ಶಾಲೆಗೆ ಬರುತ್ತಿಲ್ಲ ಮತ್ತು ಇದರಿಂದ ಶಾಲೆಯ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗುತ್ತಿದ್ದಾರೆ ಎಂದು ಸ್ಥಳೀಯರು ಶಿಕ್ಷಣ ಇಲಾಖೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟ ನೀಡಿದಾಗ ಶಿಕ್ಷಕ ಶಾಲೆಯಲ್ಲಿ ಇರದೇ, ಹಾಜರಿಯನ್ನೂ ಹಾಕದೇ, ಮೇಲಧಿಕಾರಿಗಳ ಗಮನಕ್ಕೂ ತಾರದೇ ಗೈರಾಗಿರುವುದು ಕಂಡು ಬಂದಿತ್ತು. ಇದರ ಆಧಾರದಲ್ಲಿ ಕರ್ತವ್ಯಲೋಪವೆಸಗಿದ ಶಿಕ್ಷಕರನ್ನು ಅಮಾನತು ಮಾಡಲಾಗಿದೆ. ಮೇಲಧಿಕಾರಿಗಳ ಅನುಮತಿ ಪಡೆಯದೆ ಅನಧಿಕೃತವಾಗಿ ನಿರಂತರ ಹಾಗೂ ಗೈರಾಗುತ್ತಿದ್ದ ದಿನಕರ ಶೆಟ್ಟಿ ಹಾಗೂ ಈ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡದೇ ಶಿಕ್ಷಕ ದಿನಕರ ಶೆಟ್ಟಿಗೆ ಬೆಂಬಲ ನೀಡಿದ ಕಾರಣಕ್ಕೆ ಶಾಲೆಯ ಮುಖ್ಯೋಪಾದ್ಯಾಯ ಜನಾರ್ದನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ತಗ್ಗರ್ಸೆ ಸರಕಾರಿ ಹಿರಿಯ ಪ್ರಾಥಮಿ ಶಾಲೆಯಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಎಸ್ಡಿಎಂಸಿ ಅಧಕ್ಷರಾದ ಸುಬ್ರಹ್ಮಣ್ಯ ಪೂಜಾರಿಯವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಲೆಗೆ ಕ್ರೀಡಾ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದ ನಮ್ಮ ಶಾಲೆಯ ಹಳೆ ವಿದ್ಯಾರ್ಥಿ ಸುಭಾಷ್ ಪೂಜಾರಿಯವರನ್ನು ಗೌರವಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಎಸ್ಡಿಎಂಸಿ ಉಪಾಧ್ಯಕ್ಷರಾದ ಶ್ರೀಮತಿ ನಾಗವೇಣಿ , ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮಂಜುನಾಥ ಪೂಜಾರಿ ಕಾರ್ಯದರ್ಶಿ ಸುಧಾಕರ ಮೊಗವೀರ , ಕೋಶಾಧಿಕಾರಿ ಮಹಾದೇವ ಬಿಲ್ಲವ , ಸಾಂಸ್ಕೃತಿಕ ಕಾರ್ಯದರ್ಶಿ ರವಿ ಗಾಣಿಗ, ಪತ್ರಕರ್ತ ಮಹೇಶ್ ಗಾಣಿಗ ಪ್ರಗತಿಪರ ಕೃಷಿಕ ರಾಜು ಹುಳವಾಡಿ , ಹನುಮಂತ ಶೇರುಗಾರ್ ಹಾಗೂ ಮಾಜಿ ಯೋಧ ವಿಟ್ಟಲ್ ಶೇರುಗಾರ್ ಉಪಸ್ಥಿತರಿದ್ದರು. ಮುಖ್ಯಶಿಕ್ಷಕರಾದ ಮುಕ್ತ ಪಿ. ಪ್ರಸ್ತಾಪಿಸಿ, ಸಹ ಶಿಕ್ಷಕಿ ಮಾಲತಿ ಸ್ವಾಗತಿಸಿದರು. ಸಹ ಶಿಕ್ಷಕಿ ಸಂಗೀತ ವಂದಿಸಿ, ಸಹಶಿಕ್ಷಕಿ ಸಾರಿಕಾ ನಿರೂಪಿಸಿದರು. ಗೌರವ ಶಿಕ್ಷಕಿ ನಾಗರತ್ನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಬಿದ್ಕಲ್ಕಟ್ಟೆಯಲ್ಲಿ ನಿರ್ಮಿಸಲಾದ ಹಾರ್ದಳ್ಳಿ-ಮಂಡಳ್ಳಿ ಗ್ರಾಮ ಪಂಚಾಯತ್ ಕಾರ್ಯಾಲಯದ ನೂತನ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಂಗಳವಾರ ಉದ್ಘಾಟಿಸಿದರು. ಈ ವೇಳೆ ಅವರು ಮಾತನಾಡಿ, ಪ್ರಸ್ತುತ ದೇಶದಲ್ಲಿ ಮಹಿಳೆಯರು ರಾಜಕೀಯ, ಆರ್ಥಿಕಸಬಲೀಕರಣದತ್ತ ಮುಖ ಮಾಡಿದ್ದರೇ, ಗ್ರಾಮ ಪಂಚಾಯತಿಗಳ ಮೂಲಕ ಹಳ್ಳಿಗಳ ಸುಧಾರಣೆ ಸಾಧ್ಯವಾಗಿದ್ದರೇ ಅದಕ್ಕೆ ರಾಜೀವ ಗಾಂಧಿಯ ಅವರು ಅಧಿಕಾರ ವಿಕೇಂದ್ರೀಕರಣ ಹಾಗೂ ಮಹಿಳಾ ಮೀಸಲಾತಿಯ ಕೊಡುಗೆ ದೊಡ್ಡದಿದೆ ಎಂದರು. ಅಧಿಕಾರದಲ್ಲಿದ್ದವರು ರಾಜಕಾರಣ ಮಾಡಬಾರದು ಎಂಬುದನ್ನು ಕೇವಲ ಭಾಷಣಕ್ಕಷ್ಟೇ ಸೀಮಿತವಾಗಿಸದೇ ಬದಕಿನಲ್ಲಿ ಅಳವಡಿಸಿಕೊಳ್ಳುವ ಕೆಲಸ ಮಾಡಿದರೆ ಊರು ಅಭಿವೃದ್ಧಿಯಾಗುತ್ತದೆ. ಸರಕಾರವೆಂಬುದು ಜನರ ಸೊತ್ತು. ಸರಕಾರದ ಯೋಜನೆಗಳು ಹೆಚ್ಚು ಪ್ರಮಾಣದಲ್ಲಿ ಜನರಿಗೆ ತಲುಪುವಂತೆ ಮಾಡುವುದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದರು. ಜಿಲ್ಲೆಯ ಅಭಿವೃದ್ಧಿ ಕುರಿತಂತೆ ಎಲ್ಲಾ ಶಾಸಕರೊಂದಿಗೆ ಚರ್ಚಿಸಿ ಯೋಜನೆಗಳನ್ನು ಜಾರಿಗೆ ತರಲಾಗುವುದು. ಪ್ರಸ್ತುತ ನಮ್ಮ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ/ಬೈಂದೂರು: ಕುಂದಾಪುರ ಹಾಗೂ ಬೈಂದೂರು ತಾಲೂಕು ಆಡಳಿತದ ವತಿಯಿಂದ ತಾಲೂಕು ಕೇಂದ್ರಗಳಲ್ಲಿ ಮಂಗಳವಾರ 77ನೇ ಸ್ವಾತಂತ್ರ್ಯೋತ್ಸವ ಆಚರಿಸಿಲಾಯಿತು. ಕುಂದಾಪುರ ಗಾಂಧಿ ಮೈದಾನದಲ್ಲಿ ಉಪ ವಿಭಾಗಾಧಿಕಾರಿ ರಶ್ಮಿ ಅವರು ಧ್ವಜಾರೋಹಣ ನೆರವೇರಿಸಿದ ಬಳಿಕ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು. ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವಿಜಯ ಎಸ್. ಪೂಜಾರಿ, ಕುಂದಾಪುರ ಡಿಎಸ್ಪಿ ಬೆಳ್ಳಿಯಪ್ಪ ಯು.ಕೆ., ಪುರಸಭೆ ಸದಸ್ಯರಾದ ಪ್ರಭಾಕರ ವಿ., ಸಂತೋಷ್ ಶೆಟ್ಟಿ, ಪ್ರಭಾವತಿ ಶೆಟ್ಟಿ, ದೇವಕಿ ಪಿ.ಸಣ್ಣಯ್ಯ, ಶ್ರೀಧರ ಶೇರೆಗಾರ್, ವನಿತಾ ಪೂಜಾರಿ, ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ನಾಮನಿರ್ದೇಶಕ ಸದಸ್ಯರಾದ ರತ್ನಾಕರ ಶೇರೆಗಾರ್, ಪುಷ್ಪಾ ಶೇಟ್, ಸಮಾಜ ಕಲ್ಯಾಣಿ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ಆರ್. ವರ್ಣೇಕರ್, ಮುಖ್ಯಾಧಿಕಾರಿ ಮಂಜುನಾಥ ಆರ್., ಉಪತಹಸೀಲ್ದಾರ್ ವಿನಯ್ ಇದ್ದರು. ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಕುಂದಾಪುರ ವೆಂಕಟರಮಣ ಆಂಗ್ಲಾ ಮಾಧ್ಯಮ ಶಾಲೆ ಲಹರಿ, ವಿಕೆಆರ್ ಆಂಗ್ಲ ಮಾಧ್ಯಮ ಶಾಲೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಡುಪಿ ಜಿಲ್ಲೆಯ ಸಶಸ್ತ್ರ ಮೀಸಲು ಪೊಲೀಸ್ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಂಕರ್ ಅವರು ಅತ್ಯುತ್ತಮ ಸೇವೆಗಾಗಿ ರಾಷ್ಟ್ರಪತಿಗಳ ಪದಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಅವರು 2020ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಗೌರವಕ್ಕೂ ಪಾತ್ರರಾಗಿದ್ದರು. ಮೂಲತಃ ಬೈಂದೂರು ತಾಲೂಕು ಬಿಜೂರಿನವರಾದ ಶಂಕರ ಪೂಜಾರಿ ಅವರು ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿದ್ದು, ಓಟ, ರಿಲೇ ಮೊದಲಾದ ವಿಭಾಗದಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ತನಕವೂ ಭಾಗವಹಿಸಿದ್ದಾರೆ. 2014ರಲ್ಲಿ ನಡೆದ 26ನೇ ಮಲೇಷಿಯಾ ಅಥ್ಲೆಟಿಕ್ ಚಾಂಪಿಯನ್’ಶಿಪ್’ನಲ್ಲಿ 2 ಚಿನ್ನ ಹಾಗೂ ಎರಡು ಬೆಳ್ಳಿಯ ಪದಕ ಗೆದ್ದಿದ್ದರು.ಇತ್ತಿಚಿಗೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಮಾಸ್ಟ್ ಸ್ಪೋರ್ಟ್ಸ್ 2021 ಕ್ರೀಡಾಕೂಟ 100 ಹಾಗೂ 200 ಮೀಟರ್ ಓಟದ ಸ್ವರ್ಧೆಯಲ್ಲಿ ಅವರು ಬೆಳ್ಳಿಯ ಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದರು. ಶಂಕರ ಪೂಜಾರಿ ಅವರು ಪ್ರಸ್ತುತ ಅವರು ಯಡ್ತಾಡಿ ಸೈಬ್ರಕಟ್ಟೆಯಲ್ಲಿ ನೆಲೆಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸೀಕೊ ಕೈ ಕರಾಟೆ ಇಂಟರ್ನ್ಯಾಷನಲ್, ಇಂಡಿಯಾ ಮತ್ತು ಭಾರತ್ ಕರಾಟೆ ಅಕಾಡೆಮಿ ಸಂಯೋಜನೆಯಲ್ಲಿ ಇತ್ತಿಚಿಗೆ ದೆಹಲಿ ತಾಲ್ಕಟೋರನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ ಕುಮಿಟೆ ವಿಭಾಗದಲ್ಲಿ, ತಾಲೂಕಿನ ನೇರಳಕಟ್ಟೆಯ ಶ್ರೀಶ ಗುಡ್ರಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಶ್ರೀಶ ಗುಡ್ರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಗ ಮಾಡುತ್ತಿದ್ದು ಶೈಕ್ಷಣಿಕವಾಗಿಯೂ ಉತ್ತಮವಾಗಿದ್ದಾರೆ. ಗ್ರಾಮೀಣ ಪ್ರತಿಭೆಯಾದ ಶ್ರೀಶ ಗುಡ್ರಿ ಅವರು ಕೋಚ್ ಅಕ್ಷಯ್ ಹೆಮ್ಮಾಡಿ ಅವರಲ್ಲಿ ತರಬೇತಿ ಪಡಯುತ್ತಿದ್ದಾರೆ. ವಿದ್ಯಾರ್ಥಿ ಶ್ರೀಶ ಸಂತೋಷ್ ಮೇಲ್ ಹರ್ಜಿ ಮತ್ತು ಹೇಮಾವತಿ ಗುಡ್ರಿ ದಂಪತಿಯ ಪುತ್ರ

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ದುಡಿಯುವ ಪ್ರತಿಯೊಬ್ಬರೂ ಕುಟುಂಬದ ಆಧಾರವಾಗಿರುತ್ತಾರೆ. ಪ್ರತಿಯೊಬ್ಬರ ಜೀವವೂ ಅಮೂಲ್ಯವಾದುದು. ಹಾಗಾಗಿ ನಮ್ಮ ಅಜಾಗರೂಕತೆಯಿಂದ ಕುಟುಂಬ ಸದಸ್ಯರಿಗೆ ನೋವು ನೀಡುವ ಬದಲಿಗೆ ಕಡಲಿಗೆ ಇಳಿಯುವಾಗ ಲೈಫ್ ಜಾಕೆಟ್‌, ರಸ್ತೆಯಲ್ಲಿ ತೆರಳುವಾಗ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು. ಅವರು ಸೋಮವಾರ ಬೈಂದೂರು ಶಾಸಕರ ಕಛೇರಿಯಲ್ಲಿ ಮೀನುಗಾರಿಕಾ ಇಲಾಖೆಯಿಂದ ಉಚಿತವಾಗಿ ಒದಗಿಸಲಾದ ಲೈಫ್ ಜಾಕೆಟ್‌ ಹಾಗೂ ರೀಲ್ಗಳನ್ನು ಮೀನುಗಾರರಿಗೆ ವಿತರಿಸಿ ಮಾತನಾಡಿ, ಮೀನುಗಾರಿಕೆಯಲ್ಲಿ ತೊಡಗಿಕೊಳ್ಳುವಾಗ ಲೈಫ್ ಜಾಕೇಟ್ ತೊಂದರೆಯಾಗುತ್ತದೆ ಎಂಬಿತ್ಯಾದಿ ಕಾರಣ ನೀಡುವ ಬದಲಿಗೆ ನಮ್ಮ ರಕ್ಷಣೆಗೆ ಮೊದಲ ಆದ್ಯತೆ ನೀಡುವುದು ಮುಖ್ಯ. ಕನಿಷ್ಠಪಕ್ಷ ಕಡಲಿಗೆ ಹೊರಡುವ ಹಾಗೂ ಹಿಂದಿರುಗುವ ಸಂದರ್ಭವಾದರೂ ಲೈಫ್ ಜಾಕೆಟ್‌ ಧರಿಸುವುದು ಮುಖ್ಯ ಎಂದ ಅವರು ಮೀನುಗಾರಿಕಾ ಇಲಾಖೆಯಲ್ಲಿದೇ ದಾನಿಗಳಿಂದಲೂ ಲೈಫ್ ಜಾಕೆಟ್‌ ವಿತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು. ಈ ವೇಳೆ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಾದ ವಿವೇಕ್, ಉಪ ನಿರ್ದೇಶಕರಾದ ಅಂಜನದೇವಿ, ಸಹಾಯಕ ನಿರ್ದೇಶಕರಾದ ಸುಮಲತಾ, ಬಿಜೆಪಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಸರಕಾರಿ ಜ್ಯೂನಿಯರ್ ಕಾಲೇಜಿನಲ್ಲಿ 2023-24ನೇ ಸಾಲಿನ ಇಂಟರ್ಯಾಕ್ಟ್ ಕ್ಲಬ್ ಪದಪ್ರದಾನ ಸಮಾರಂಭ ಶನಿವಾರ ಜರುಗಿತು. ಬೈಂದೂರು ರೋಟರಿ ಪೂರ್ವಾಧ್ಯಕ್ಷ ಗೋವಿಂದ ನಾಯ್ಕನಕಟ್ಟೆ ಅವರು ನೂತನ ಇಂಟರ್ಯಾಕ್ಟ್ ಅಧ್ಯಕ್ಷೆ ಸಿಂಚನಾ ಹಾಗೂ ಕಾರ್ಯದರ್ಶಿ ವಿಕಾಸ್ ಅವರಿಗೆ ಪದಪ್ರದಾನ ನೆರವೇರಿಸಿದ ಬಳಿಕ ಮಾತನಾಡಿ, 23 ವಿದ್ಯಾರ್ಥಿಗಳಿಂದ ಆರಂಭವಾದ ಇಂಟರ್ಯಾಕ್ಟ್ ಕ್ಲಬ್ ಇಂದು ಪ್ರಪಂಚದ ಪ್ರತಿ ರೋಟರಿ ಕ್ಲಬ್ ಪ್ರಾಯೋಜನೆಯಡಿ 5ಕ್ಕೂ ಹೆಚ್ಚು ಕ್ಲಬ್‌ಗಳು ಕಾರ್ಯನಿರ್ವಹಿಸುತ್ತಿದೆ. ವಿಧ್ಯಾರ್ಥಿಗಳಿಗೆ ನಾಯಕತ್ವ ಹಾಗೂ ಸೇವೆಯ ಗುಣವನ್ನು ತಿಳಿಸುವುದು ಇಂಟರ್ಯಾಕ್ಟ್ ಕ್ಲಬ್ನ ಮುಖ್ಯ ಉದ್ದೇಶವಾಗಿದ್ದು, ಇದೂ ಹೀಗೆಯೇ ಮುಂದುವರಿದು ದೇಶಕ್ಕೆ ಉತ್ತಮ ಪ್ರಜೆ ಹಾಗೂ ನಾಯಕರನ್ನು ರೂಪಿಸುವ ತನಕವೂ ಸಾಗುತ್ತದೆ ಎಂದರು. ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಪ್ರಸಾದ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲರಾದ ಪದ್ಮನಾಭ ಎಚ್, ವಿದ್ಯಾರ್ಥಿ ನಾಯಕ ಆನಂದ್ ಉಪಸ್ಥಿತರಿದ್ದರು. ನೂತನ ಇಂಟರ್ಯಾಕ್ಟ್ ಅಧ್ಯಕ್ಷೆ ಸಿಂಚನ ತಮ್ಮ ತಂಡವನ್ನು ಪರಿಚಯಿಸಿದರು. ಕಾರ್ಯದರ್ಶಿ ವಿಕಾಸ್ ವರ್ಷದ ಯೋಜನೆಗಳನ್ನು ಸಭೆಯ ಮುಂದಿಟ್ಟರು. ಬೈಂದೂರು…

Read More