Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ 2023-24ನೇ ಶೈಕ್ಷಣಿಕ ವರ್ಷದ ಪ್ರಥಮ ಹಾಗೂ ದ್ವಿತೀಯ ಪಿ.ಯು.ಸಿ.ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಪ್ರಥಮ ಪೋಷಕ-ಶಿಕ್ಷಕರ ಸಭೆ ನಡೆಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಗಣೇಶ ಮೊಗವೀರ ಅವರು ಮಾತನಾಡಿ ವರ್ಷದ ಶೈಕ್ಷಣಿಕ ಕಾರ್ಯಕಲಾಪಗಳ ಬಗ್ಗೆ, ಬದಲಾದ ಪರೀಕ್ಷಾ ಪದ್ದತಿಯ ಕುರಿತು ಹಾಗೂ ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಈ ಕುರಿತು ಮಾತನಾಡಿದರು. ಉಡುಪಿಯ ತ್ರಿಷಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾಗಿರುವ ಸಿಎ ಗೋಪಾಲಕೃಷ್ಣ ಭಟ್ ಅವರು ಮಾತನಾಡಿ ಸ್ಪರ್ಧಾತ್ಮಕ ಯುಗದಲ್ಲಿ ಸಿಎ/ಸಿಎಸ್ ಕೋರ್ಸ್ ಗಳು ಬಹಳಷ್ಟು ಪ್ರಯೋಜನಕಾರಿ,ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ವಾಣಿಜ್ಯ ಕಲಿಕೆಯ ಜೊತೆ-ಜೊತೆಗೆ ಸಿಎ/ಸಿಎಸ್ ಕೋರ್ಸುಗಳನ್ನು ಅಭ್ಯಾಸ ಮಾಡಿದರೆ ಸಾಕಷ್ಟು ಅವಕಾಶಗಳು ಲಭಿಸುತ್ತವೆ ಎನ್ನುತ್ತಾ ಸಂಪೂರ್ಣ ಮಾಹಿತಿಯನ್ನು ನೀಡಿದರು. ಕಾಲೇಜಿನ ಉಪ-ಪ್ರಾಂಶುಪಾಲರಾದ ರಮೇಶ್ ಪೂಜಾರಿ, ಬೋಧಕ ಬೋಧಕೇತರ ವೃಂದದವರು, ವಿದ್ಯಾರ್ಥಿಗಳು,ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು. ಈಗಾಗಲೇ ನಡೆದ ಪರೀಕ್ಷೆಗಳ ಉತ್ತರ ಪತ್ರಿಕೆಗಳನ್ನು ಪೋಷಕರಿಗೆ ನೀಡಿ ಕಲಿಕಾ ಪ್ರಗತಿಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬ್ರಹ್ಮಾವರ: ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಬೃಹತ್ ಉದ್ಯೋಗ ಮೇಳ ಕಾಲೇಜು ಆವರಣದಲ್ಲಿ ನಡೆಯಿತು. ಪ್ರಮುಖ 30 ಅಧಿಕ ಪ್ರತಿಷ್ಠಿತ ಕಂಪನಿಗಳು ಆಗಮಿಸಿ ವಿವಿಧ ಹುದ್ದೆಗಳಿಗಾಗಿ ಆಯ್ಕೆ ಪ್ರಕ್ರಿಯೆ ನಡೆಯಿತು . ಕಾರ್ಯಕ್ರಮದಲ್ಲಿ ಶ್ರೀ ಜೀವನ್ ಕುಮಾರ್ ಹೆಚ್.ಆರ್ ರಿಕ್ರೂಟರ್, ಶ್ರೀ ಸುಬ್ರಹ್ಮಣ್ಯ ಸಂಸ್ಥಾಪಕರು ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ,ನಿರ್ದೇಶಕಿ ಶ್ರೀಮತಿ ಮಮತಾ, ಪ್ರಾಂಶುಪಾಲರಾದ ಡಾ. ಸೀಮಾ ಜಿ ಭಟ್ ಪ್ಲೇಸ್ಮೆಂಟ್ ಆಫೀಸರ್ ಕುಮಾರಿ ವೈಷ್ಣವಿ ಹಾಗೂ ಎಲ್ಲಾ ಕಂಪನಿಯ ಹೆಚ್. ಆರ್ ಮ್ಯಾನೇಜರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಉದ್ಯೋಗಗಾಂಕ್ಷಿಗಳು ನಮ್ಮ ಸಂಸ್ಥೆ ಸಂಘಟಿಸಿರುವ ಇಂತಹ ಕಾರ್ಯಕ್ರಮವನ್ನು ಪ್ರಯೋಜನ ಪಡೆಯುವಂತೆ ತಿಳಿಸಲಾಯಿತು. ಸುಮಾರು 1500ಕ್ಕಿಂತಲೂ ಹೆಚ್ಚು ನೋಂದಣಿ ನಡೆದಿದ್ದು ಅದರಲ್ಲಿ 600 ಕ್ಕಿಂತಲೂ ಹೆಚ್ಚು ಅಭ್ಯರ್ಥಿಗಳಿಗೆ ಆದೇಶ ಪತ್ರವನ್ನು ವಿತರಿಸಿ190 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ನೇಮಕಾತಿ ನಡೆಸಲಾಯಿತು. ಅತಿಥಿಗಳ ಪರಿಚಯವನ್ನು ಉಪನ್ಯಾಸಕಿ ಕುಮಾರಿ ಹೀಬಾ ಹಾಗೂ ಸಂಸ್ಥಾಪಕರ ಪರಿಚಯವನ್ನು ಉಪನ್ಯಾಸಕಿ ಶ್ರೀ ಲಕ್ಷ್ಮಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ಇದರ ಬೆಳ್ಳಿ ಹಬ್ಬದ ವರ್ಷಾಚರಣೆಯ ಅಂಗವಾಗಿ ಸಾಧಕರಿಗೆ ರಜತ ಗೌರವಾರ್ಪಣೆ ನೀಡುತ್ತಿದ್ದು, ಈ ತಿಂಗಳ ರಜತ ಗೌರವಕ್ಕೆ ಕುಂದಾಪ್ರ ಕನ್ನಡದ ಕಲಾವಿದ, ಶಿಕ್ಷಕ ಮನೋಹರ್ ಹೆಗ್ಡೆ (ಮನು ಹಂದಾಡಿ) ಅವರನ್ನು ಆಯ್ಕೆಮಾಡಲಾಗಿದೆ. ಪಂಚವರ್ಣ ಸಂಸ್ಥೆ ನೀಡುತ್ತಿರುವ ಎಂಟನೇ ಸಾಧಕ ಶಕ್ತಿಯಾಗಿದ್ದು, ಈ ಹಿಂದೆ ಸಹಕಾರಿ ಕ್ಷೇತ್ರದಲ್ಲಿ ಸಾಧನೆಗೈದ ಸಹಕಾರಿ ಕ್ಷೇತ್ರದ ಸಾಧಕ ಜಿ. ತಿಮ್ಮ ಪೂಜಾರಿ, ಸಮಾಜಸೇವಕ ಈಶ್ವರ್ ಮಲ್ಪೆ, ಅನಾಥರ ಬದುಕಿನ ಆಶಾಕಿರಣ ಹೊಸಬೆಳಕು ವಿನಯಚಂದ್ರ ಸಾಸ್ತಾನ, ವಿಶೇಷಚೇತನ ಸಾಧಕಿ ಲಲಿತಾ ಪೂಜಾರಿ, ಸಾಲಿಗ್ರಾಮದ ಹಿರಿಯ ವೈದ್ಯರಾದ ಡಾ. ವಿಶ್ವೇಶ್ವರ ತುಂಗ, ಸಹಕಾರಿ ಕ್ಷೇತ್ರದ ಕೊರಗ ಪೂಜಾರಿ , ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಪಾರಂಪಳ್ಳಿ ಗಣೇಶ್ ಅಡಿಗ,ವೆರಿಕೋಸ್ ತಜ್ಞ ಡಾ.ಎಂ ವಿ ಉರಾಳ ಅವರನ್ನು ಗೌರವಕ್ಕೆ ಆಯ್ಕೆ ಮಾಡಲಾಗಿತ್ತು. ಇದೇ ಆ.೬ ರಂದು ಹಂದಟ್ಟು ಗೆಳೆಯರ ಬಳಗ ಸಭಾಂಗಣದಲ್ಲಿ ಆಸಾಡಿ ಒಡ್ರ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮೀನುಗಾರಿಕೆಗಾಗಿ ತೆರಳಿದ್ದ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿಯೊಂದು ಪಲ್ಟಿಯಾದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದ್ದು, ಅದೃಷ್ಟವಶಾತ್ ದೋಣಿಯಲ್ಲಿದ್ದ ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ. ಉಪ್ಪುಂದ ತಾರಾಪತಿಯಿಂದ ಬೆಳಿಗ್ಗೆ 7:30ರ ಸುಮಾರಿಗೆ ಪುಂಡಲೀಕ ಅವರ ಒಡೆತನ ಶ್ರೀ ದುರ್ಗಾಪರಮೇಶ್ವರಿ ಹೆಸರಿನ ದೋಣಿಯಲ್ಲಿ 9 ಮಂದಿ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದು, ಈ ವೇಳೆ ಅಂದಾಜು 5 ನಾಟಿಕಲ್ ಮೈಲುಗಳ ದೂರದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿ ಮಗುಚಿ ಬಿದ್ದಿದೆ. ಈ ವೇಳೆ ಬಲೆಗಳ ನಡುವೆ ಸಿಲುಕಿದ್ದ ಓರ್ವ ಮೀನುಗಾನನ್ನು ಸಹಮೀನುಗಾರ ಚಂದ್ರ ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ನಡೆದ ಬಳಿಕ ಸಮೀಪದ ದೋಣಿಗಳಿಗೆ ಮಾಹಿತಿ ತಲುಪಿಸಿದ್ದು, ಮೀನುಗಾರರು ನೆರವಿಗೆ ಬಂದಿದ್ದಾರೆ. ಅಪಘಾತಕ್ಕೀಡಾದ ದೋಣಿಯಲ್ಲಿದ್ದ ನೀರನ್ನು ಖಾಲಿ ಮಾಡಿ ಮೀನುಗಾರರು ಹಾಗೂ ದೋಣಿಯನ್ನು ಮರವಂತೆ ಬಂದರಿಗೆ ಕೊಂಡೊಯ್ಯಲಾಯಿತು. ಅಪಘಾತದಲ್ಲಿ ದೋಣಿಯಲ್ಲಿ ಬಲೆ, ಇಂಜಿನ್‌ಗೆ ಹಾನಿಯಾಗಿದ್ದು 2 ಲಕ್ಷಕ್ಕೂ ಅಧಿಕ ನಷ್ಟವಾಗಿರಬಹುದೆಂದು ಅಂದಾಜಿಸಲಾಗಿದೆ. ಸೋಮವಾರವಷ್ಟೇ ಕರ್ಕಿಕಳಿ ಬಳಿ ಸಮುದ್ರದಲೆಗಳ ಹೊಡೆತಕ್ಕೆ ಸಿಲುಕಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬೈಂದೂರು ವಿಧಾನಸಭಾ ವ್ಯಾಪ್ತಿಯ ಮರವಂತೆ ಬಂದರು ಕಾಮಗಾರಿ, ಕೊಡೇರಿ ಕಿರುಬಂದರು ಮಂಜೂರು ಸೇರಿದಂತೆ ಇನ್ನಿತರ ಬೇಡಿಕೆಗೆ ಶೀಘ್ರ ಅನುಮತಿ, ಅನುಮೋದನೆ ನೀಡುವಂತೆ ಸಂಸದರಾದ ಬಿ.ವೈ. ರಾಘವೇಂದ್ರ ಅವರು ಕೇಂದ್ರ ಬಂದರು ಮತ್ತು ಮೀನುಗಾರಿಕೆ ಸಚಿವರಾದ ಸರ್ಬಾನಂದ್ ಸೋನುವಾಲ್ ಅವರನ್ನು ಶುಕ್ರವಾರ ದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು. ಮರವಂತೆ ಹೊರ ಬಂದರಿನ ಎರಡನೇ ಹಂತದ ಕಾಮಗರಿಗೆ ರೂ 85.00ಕೋಟಿ ಮಂಜೂರಾಗಿದ್ದು, ಸಿ.ಆರ್.ಝಡ್ ಕ್ಲಿಯರೆನ್ಸ್ ಮಾಡಿ ಆದಷ್ಟು ಬೇಗ ಕಾಮಗಾರಿ ಕೈಗೊಳ್ಳಲು ಅನುಕೂಲ ಮಾಡಿಬೇಕಾಗಿ ಕೋರಿದರು. ಉಪ್ಪುಂದದಲ್ಲಿ ದೋಣಿಗಳ ಸುರಕ್ಷಿತ ಇಳಿದಾಣಕ್ಕೆ ಬ್ರೇಕ್ ವಾಟರ್ ಹಾಗೂ ಕಿರು ಬಂದರು ಮಂಜೂರು ಮಾಡುವಂತೆ ಮನವಿ ಮಾಡಿದರು. ಬೈಂದೂರಿನಲ್ಲಿ ರೂ 228.78 ಕೋಟಿ ವೆಚ್ಚದಲ್ಲಿ ಮಲ್ಟಿ ಪರ್ಪಸ್ ಹಾರ್ಬಾರ್ ನಿರ್ಮಾಣ ಮಾಡಲು ಖಾಸಗಿ ಸಹಭಾಗಿತ್ವದಲ್ಲಿ ಟೆಂಡರ್ ಕರೆಯಲಾಗಿತ್ತು, ಆದರೆ ಯಾವುದೇ ಕಂಪನಿ ಸದರಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲಿಲ್ಲ. ಯೋಜನೆಗಳಿಗೆ ಬ್ರೇಕ್ವಾಟರ್ ಮತ್ತು ಬರ್ತಿಂಗ್ ಸೌಲಭ್ಯಗಳ ಮೇಲೆ ಹೆಚ್ಚಿನ ಬಂಡವಾಳ ವೆಚ್ಚದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬಿರುಗಾಳಿ ಸಹಿತ ಬುಧವಾರ ಬೆಳಗಿನ ಜಾವ ಸುರಿದ ಮಳೆಯಿಂದಾಗಿ ಉಳ್ಳೂರು 74 ಗ್ರಾಮದಲ್ಲಿ ಮನೆ ತೋಟಗಳಿಗೆ ಅಪಾರ ಹಾನಿ ಸಂಭವಿಸಿದೆ. ಬಿರುಗಾಳಿಯಿಂದಾಗಿ ಏಳು ಮನೆಗಳಿಗೆ ಹಾನಿ ಉಂಟಾಗಿದ್ದು, ಒಂದೂವರೆ ಸಾವಿರಕ್ಕೂ ಅಧಿಕ ಅಡಕೆ ಹಾಗೂ ತೆಂಗಿನ ಮರಗಳು ಧರೆಗುರುಳಿದೆ. ಉಳ್ಳೂರು 74 ಗ್ರಾಮದ ಜಯಕರ ಶೆಟ್ಟಿ ಮನೆಗೆ ಹಾನಿಯಾಗಿದ್ದು 2 ಲಕ್ಷ ನಷ್ಟವಾಗಿದೆ. ಪಾರ್ವತಿ ಶೆಡ್ತಿ ಮನೆಗೆ ಹಾನಿಯಾಗಿದ್ದು, 25 ಸಾವಿರ, ಸುಮತಿ ಶೆಡ್ತಿ 50 ಸಾವಿರ, ರತ್ನಾಕರ ಶೆಟ್ಟಿ ಮನೆಗೆ ಹಾನಿಯಾಗಿದ್ದು 20 ನಷ್ಟ ಉಂಟಾಗಿದೆ. ಕೃಷಿ ತೋಟದಲ್ಲಿನ ಫಸಲು ಭರಿತ ಅಡಕೆ- ತೆಂಗು ಮರಗಳು ನೆಲಕಚ್ಚಿದ್ದು, ಅಪಾರ ನಷ್ಟ ಸಂಭವಿಸಿದೆ. ಸುಧಾಕರ ಶೆಟ್ಟಿ ಅವರ 225 ಅಡಿಕೆ ಮರ, ಶಂಕರ ಶೆಟ್ಟಿ 150, ಮಹಾಬಲ ನಾಯ್ಕರ 40, ಉದಯ ಪೂಜಾರಿ ತೋಟದ 15 ಮರ, ವನಜ ಆಚಾರ್ತಿಯವರ 35, ರತ್ನ ಆಚಾರಿ 75, ಲಕ್ಷ್ಮೀನಾರಾಯಣ ಆಚಾರಿ 25, ಕೃಷ್ಣ ಆಚಾರಿ 20, ಪಾರ್ವತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬಿಜೆಪಿ ಬೈಂದೂರು ಮಂಡಲದ ವಿಶೇಷ ಕಾರ್ಯಕಾರಿಣಿ ಸಭೆ ಬುಧವಾರ ತ್ರಾಸಿ ಕೊಂಕಣ್ ಖಾರ್ವಿ ಸಭಾಭವನದಲ್ಲಿ ಜರುಗಿತು. ಕಾರ್ಯಕ್ರಮವನ್ನು ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಉದ್ಘಾಟಿಸಿ ಮಾತನಾಡಿ, ಕಾರ್ಯಕರ್ತರಿಗೆ ಸಿದ್ದಾಂತ ಮತ್ತು ಬದ್ಧತೆ ಮುಖ್ಯ. ಜೊತೆಗೆ ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದನೆ ಮಾಡಬೇಕಾಗಿದೆ. ಕಾರ್ಯಕರ್ತನ ಜೊತೆಗಿದ್ದು ಪಕ್ಷವನ್ನು ಸಂಘಟಿಸುವ ಕೆಲಸವಾಗಬೇಕು. ಈ ವರ್ಷದ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಸಿಕ್ಕಿಲ್ಲ ಎಂದು ಹೇಳಿದರು. ಬೈಂದೂರು ಮಂಡಲ ದೀಪಕ್ ಕುಮಾರ್ ಶೆಟ್ಟಿ ಅವರು ಮಾತನಾಡಿ, ಮುಂದಿನ ಮೂರು ತಿಂಗಳ ಅವಧಿಗೆ ಪಕ್ಷದ ಕಾರ್ಯ ಯೋಜನೆಗಳು ಮತ್ತು ಹೋರಾಟಗಳ ಬಗ್ಗೆ ಚರ್ಚಿಸಲು ಸಭೆ ನಡೆಸುತ್ತೇವೆ. ಕಾರ್ಯಕರ್ತರು ತಮ್ಮ ಗ್ರಾಮಗಳಲ್ಲಿ ಪಕ್ಷದ ಕೆಲಸವನ್ನ ಮಾಡುವ ನಿಟ್ಟಿನಲ್ಲಿ ಶ್ರಮಿಸಬೇಕು. ತಮ್ಮ ತಮ್ಮ ಗ್ರಾಮಗಳಲ್ಲಿ ಆಗಬೇಕಾದಂತ ಚಟುವಟಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ, ಆನಂದ ಖಾರ್ವಿ, ಜಿಲ್ಲಾ ಕಾರ್ಯದರ್ಶಿ ಮಾಲತಿ ನಾಯಕ್,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ಅ.02: ತಾಲೂಕಿನ ಉಪ್ಪುಂದ ಕರ್ಕಿಕಳಿ ಎಂಬಲ್ಲಿ ನಡೆದ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆಯಾಗಿದೆ. ಸೋಮವಾರ ಸಮುದ್ರದಲೆಗಳ ಹೊಡೆತಕ್ಕೆ ಸಿಲುಕಿ ಮಗುಚಿದ್ದ ಪಟ್ಟೆಬಲೆ ದೋಣಿಯಲ್ಲಿ ಒಟ್ಟು ಎಂಟು ಮಂದಿ ಮೀನುಗಾರರಿದ್ದು, ಈ ಪೈಕಿ ಆರು ಮಂದಿ ಈಜಿ ದಡ ಸೇರಿದ್ದರು. ನಾಗೇಶ್ ಬಾಬು ಖಾರ್ವಿ ಎಂಬವವರು ದುರಂತ ನಡೆದು ಕೆಲಹೊತ್ತಿನಲ್ಲಿಯೇ ಮೃತಪಟ್ಟಿದ್ದರು. ಸತೀಶ್ ಖಾರ್ವಿ ನಾಪತ್ತೆಯಾಗಿದ್ದರು. ಮಂಗಳವಾರ ರಾತ್ರಿ ಕೊಡೇರಿ ಬಂದರು ಸಿ ವಾಕ್ ಬಲಬದಿಯಲ್ಲಿ ಸತೀಶ್ ಖಾರ್ವಿ ಅವರ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಮೀನುಗಾರಿಕಾ ಸಚಿವರು, ಶಾಸಕರು, ಅಧಿಕಾರಿಗಳು ಸೇರಿದಂತೆ ಹಲವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ಮೀನುಗಾರರ ಕುಟುಂಬಕ್ಕೆ ತಲಾ 6 ಲಕ್ಷ ರೂ. ಪರಿಹಾರ ವಿತರಿಸಿದ್ದರು. ಹಾನಿಗೀಡಾದ ದೋಣಿಗೆ 1 ಲಕ್ಷ ರೂ ಪರಿಹಾರ ಒದಗಿಸುವ ಭರವಸೆ ನೀಡಲಾಗಿತ್ತು. ಇದನ್ನೂ ಓದಿ:► ಕರ್ಕಿಕಳಿ ದೋಣಿ ದುರಂತ: ಘಟನಾ ಸ್ಥಳಕ್ಕೆ ಮೀನುಗಾರಿಕಾ ಸಚಿವರು, ಶಾಸಕರ ಭೇಟಿ – https://kundapraa.com/?p=68163 .►…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಅ.01: ರಾಜ್ಯದಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ 211 ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಮಾಡಿ ಡಿಐಜಿ ಆದೇಶ ಹೊರಡಿಸಿದ್ದಾರೆ. ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್‌ ಸಂತೋಷ್ ಕಾಯ್ಕಿಣಿ ಅವರ ಅವರ ಸ್ಥಾನಕ್ಕೆ ಮಂಗಳೂರು ಸಿಟಿ ಸೆನ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ಆಗಿದ್ದ ಸವಿತ್ರತೇಜ್ ಅವರನ್ನು ಬೈಂದೂರು ಠಾಣೆಗೆ ವರ್ಗಾವಣೆಗೊಳಿಸಲಾಗಿದೆ. ಬೈಂದೂರು ಇನ್ಸ್‌ಪೆಕ್ಟರ್‌ ಸಂತೋಷ್ ಕಾಯ್ಕಿಣಿ ಅವರು ನೂತನ ಸ್ಥಳದ ನಿರೀಕ್ಷೆಯಲ್ಲಿದ್ದು, ಆದೇಶ ಕಾಯ್ದಿರಿಸಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜನರ ತೆರಿಗೆ ಹಣದಿಂದ ಅಧಿಕಾರಿಗಳಿಗೆ ಸ್ಥಾನ ಮಾನ ಸಂಬಳ ಸವಲತ್ತುಗಳು ಸಿಗುವುದು. ಜಿಲ್ಲಾ ಮಟ್ಟದ ಅಧಿಕಾರಿಗಳು ಕಛೇರಿಯಲ್ಲಿ ಕುಳಿತುಕೊಳ್ಳುವುದಷ್ಟೇ ಅಲ್ಲದೇ ಸ್ಥಳಕ್ಕೆ ಭೇಟಿ ನೀಡಬೇಕು. ಅಧಿಕಾರಿಗಳು ನಿಲಕ್ಷ್ಯ, ಉದಾಸೀನ ತೋರಿಸಿದರೆ ಜನರಿಗೆ ಸ್ಪಂದಿಸದಿದ್ದರೆ ಎಷ್ಟೇ ದೊಡ್ಡ ಅಧಿಕಾರಿಯಾಗಿದ್ದರೂ ಸಹಿಸಲು ಸಾಧ್ಯವಿಲ್ಲ. ಜನ ಸ್ಪಂದನೆಗೆ ಸಿದ್ದರಿಲ್ಲದವರು ಸ್ಥಾನ ತ್ಯಾಗ ಮಾಡಿ. ಜನಸ್ಪಂದನೆಗೆ ಸಾಕಷ್ಟು ಅಧಿಕಾರಿಗಳು ಇದ್ದಾರೆ ಎಂದು ಸಿಎಂ. ಸಿದ್ಧರಾಮಯ್ಯ ಗುಡುಗಿದರು. ಅವರು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಜಿಪಂ.ನ ಡಾ| ವಿ.ಎಸ್‌.ಆಚಾರ್ಯ ಸಭಾಂಗಣದಲ್ಲಿ ಸೋಮವಾರ ಉಡುಪಿ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆ ಹಾಗೂ ಪ್ರಕೃತಿ ವಿಕೋಪ ನಿರ್ವಹಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲಾ ರಕ್ಷಣಾಧಿಕಾರಿಗಳು ಠಾಣೆಗಳಿಗೆ ಭೇಟಿ ನೀಡಬೇಕು. ದೂರುಗಳು ಬಂದಾಗ ಮೊದಲು ಎಫ್ಐಆರ್ ದಾಖಲಿಸಿಕೊಳ್ಳಿ ಎಂದು ಸಲಹೆ ನೀಡಿದರು. ಜನಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿ ಜನರ ಕೆಲಸ ಮಾಡುವ ವಿಚಾರದಲ್ಲಿ ರಾಜಕೀಯ ಮಾಡಬಾರದು. ಪಕ್ಷ ರಾಜಕಾರಣ ಚುನಾವಣೆ ವೇಳೆ ಮಾತ್ರ ಎಂದರು. ಆರೋಗ್ಯ ಸೂಚ್ಯಂಕದಲ್ಲಿ ಕುಸಿತಕ್ಕೆ…

Read More