Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಜ್ಯೋತಿ ಸಾಲಿಗ್ರಾಮ ಅವರಿಗೆ ಪಂಚವರ್ಣದ ಆಸಾಡಿ ಒಡ್ರ್ ಪುರಸ್ಕಾರ ಪ್ರದಾನ
    ಊರ್ಮನೆ ಸಮಾಚಾರ

    ಜ್ಯೋತಿ ಸಾಲಿಗ್ರಾಮ ಅವರಿಗೆ ಪಂಚವರ್ಣದ ಆಸಾಡಿ ಒಡ್ರ್ ಪುರಸ್ಕಾರ ಪ್ರದಾನ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕೋಟ:
    ಪ್ರತಿಯೊಬ್ಬರೂ ತಮ್ಮ ನೆಲಮೂಲದ ಭಾಷೆಯನ್ನು ಹೃದಯದ ಭಾಷೆಯನ್ನಾಗಿ ಮಾಡಿಕೊಂಡಾಗ ಮನಸ್ಸಿನ ಮಾತುಗಳಿಗೆ ನ್ಯಾಯಯುತ ಮೌಲ್ಯಗಳು ದೊರೆಯುತ್ತವೆ. ಅದೇ ರೀತಿ ಕುಂದಾಪ್ರ ಕನ್ನಡ ಭಾಷೆ ಗ್ರಾಮೀಣ ಭಾಗದ ಒಂದು ಸುಂದರ ಭಾಷೆಯಾಗಿ ಜಗತ್ತಿನಾದ್ಯಂತ ಮಿಂಚುತ್ತಿದೆ. ಕುಂದಾಪ್ರ ಕನ್ನಡ ಅದೊಂದು ವಿಶಿಷ್ಟ ಗ್ರಾಮೀಣ ಸೊಗಡನ್ನು ಹೊಂದಿರುವ ಭಾಷೆ ಎಂದು ಕುಂದಗನ್ನಡದ ರಾಯಬಾರಿ ಮನು ಹಂದಾಡಿ ಹೇಳಿದರು.

    Click Here

    Call us

    Click Here

    ಅವರು ಮಣೂರು ರಾಜಲಕ್ಷ್ಮೀ ಸಭಾಂಗಣದಲ್ಲಿ ಭಾನುವಾರ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಾತೃಸಂಸ್ಥೆ ಪಂಚವರ್ಣ ಯುವಕ ಮಂಡಲದ ಮಾರ್ಗದರ್ಶನದಲ್ಲಿ ಸ್ನೇಹಕೂಟ ಮಣೂರು ಇವರ ಸಹಕಾರದೊಂದಿಗೆ 5ನೇ ವರ್ಷದ ಕುಂದಾಪ್ರ ಭಾಷೆ ಬದ್ಕಿನ ಆಸಾಡಿ ಒಡ್ರ್  ಕಾರ್ಯಕ್ರಮದಲ್ಲಿ ಕುಂದಾಪ್ರ ಭಾಷಾ ಸೊಗಡಿನ ಬಗ್ಗೆ ಮಾತನಾಡಿದರು.

    ಇತ್ತೀಚಿನ ದಿನಗಳಲ್ಲಿ ಅಸಾಡಿ ಒಡ್ರ್ ಎನ್ನುವ ಹೆಸರಿನಲ್ಲಿ ಕುಂದಾಪುರ ಭಾಷೆಯನ್ನ ಮತ್ತಷ್ಟು ಗಟ್ಟಿಗೊಳಿಸುವ ಪ್ರಕ್ರಿಯೆಯಲ್ಲಿ ಪಂಚವರ್ಣ ಸಂಘಟನೆಯ ಕಾರ್ಯದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಿದಾಗ ಯಶಸ್ಸು ಸಾಧ್ಯ ಎಂದರಲ್ಲದೆ ನೆಲಮೂಲ ಭಾಷೆ ಬದ್ಕಿನ ಕುರಿತು ಯುವ ಉಳಿಸಿ ಬೆಳೆಸುವ ಕಾರ್ಯ ನಾವೆಲ್ಲ ಒಟ್ಟಾಗಿ ಮಾಡಬೇಕಿದೆ ಹೇಳಿದರು.

    ಕಾರ್ಯಕ್ರಮವನ್ನು ಗೀತಾನಂದ ಫೌಂಡೇಶನ್ ನಿರ್ದೇಶಕಿ ಗೀತಾ ಎ ಕುಂದರ್ ಹಾಗೂ  ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಉದ್ಘಾಟಿಸಿದರು.

    ಇದೇ ವೇಳೆ ಕುಂದಾಪ್ರ ರೇಡಿಯೋ ನಿರ್ವಾಹಕಿ ಜ್ಯೋತಿ ಸಾಲಿಗ್ರಾಮ ಇವರಿಗೆ ಆಸಾಡಿ ಒಡ್ರ್ ಸಾಧಕ ಪುರಸ್ಕಾರವನ್ನು ಶ್ರೀ ಕೃಷ್ಣ ಪ್ರಸಾದ್ ಫೌಂಡೇಶನ್ ನಿರ್ದೇಶಕರಾದ ಸೋನಾಲಿ ಸಂಪತ್ ಕುಮಾರ್ ಶೆಟ್ಟಿ ಪ್ರದಾನಿಸಿದರು‌.

    Click here

    Click here

    Click here

    Call us

    Call us

    ಐದನೇ ವರ್ಷದ ಅಂಗವಾಗಿ ವಿಶೇಷವಾಗಿ ಗ್ರಾಮ್ಯ ಸಾಧಕರಾದ ಗೀತಾ ಎ. ಕುಂದರ್,ಶಾಂತಾ ಐತಾಳ್,ಸುಬ್ಬಯ್ಯ ಪೂಜಾರಿ,ಕೊಲ್ಲು ಪೂಜಾರಿ ಬನ್ನಾಡಿ, ನಾರಾಯಣ ಪೂಜಾರಿ ಅವರುಗಳನ್ನು ಸನ್ಮಾನಿಸಲಾಯಿತು.

    ಆಸಾಡಿ ಒಡ್ರ್ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಲಾಯಿತು. ಅನಾರೋಗ್ಯ ಪೀಡಿತರಾದ ಮಣೂರು ಪಡುಕರೆ ಚಂದ್ರಶೇಖರ ಕಾಂಚನ್ ಇವರಿಗೆ 25ಸಾವಿರ ರೂಗಳ ನೆರವನ್ನು ನೀಡಲಾಯಿತು. ಸಭಾಧ್ಯಕ್ಷತೆಯನ್ನು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ವಹಿಸಿದ್ದರು. ಸಮಾಜಸೇವಕಿ ಮಲ್ಲಿಕಾ ತಾರಾನಾಥ್ ಹೊಳ್ಳ, ಪರಿಕರವನ್ನು ,ತಿಂಡಿ ತಿನಿಸುಗಳನ್ನು ಪಂಚವರ್ಣದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಅನಾವರಣಗೈದರು.

    ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಸ್ಥೆಯ ಗೌರವ ಸಲಹೆಗಾರರಾದ ಪ್ರೇಮಾ ಶೆಟ್ಟಿ ಉದ್ಘಾಟಿಸಿದರು.

    ಮುಖ್ಯ ಅಭ್ಯಾಗತರಾಗಿ ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಅಧ್ಯಕ್ಷ ಸತೀಶ್ ಹೆಚ್ ಕುಂದರ್,ಸ್ನೇಹಕೂಟ ಮಣೂರು ಇದರ ಅಧ್ಯಕ್ಷೆ ಭಾರತಿ ವಿ ಮಯ್ಯ,ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ ಉಪಸ್ಥಿತರಿದ್ದರು. ವೀಣಾ ಪ್ರಕಾಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

    ಕಾರ್ಯದರ್ಶಿ ವಸಂತಿ ಹಂದಟ್ಟು ಸ್ವಾಗತಿಸಿದರು. ಸನ್ಮಾನಪತ್ರವನ್ನು ಸುಜಾತ ಬಾಯರಿ ವಾಚಿಸಿದರು.ಬಹುಮಾನ ಪಟ್ಟಿಯನ್ನು ಗೀತಾ ಶಿವರಾಂ ವಾಚಿಸಿದರು.ಕಾರ್ಯಕ್ರಮವನ್ನು ಶಿಕ್ಷಕ ನರೇಂದ್ರ ಕುಮಾರ್ ಕೋಟ  ಹಾಗೂ ಕಲಾವತಿ ಅಶೋಕ್ ನಿರೂಪಿಸಿದರು.ಜತೆಕಾರ್ಯದರ್ಶಿ ಶಕೀಲ ನಾಗರಾಜ್ ವಂದಿಸಿದರು.ರವೀಂದ್ರ ಕೋಟ ಸಂಯೋಜಿಸಿದರು.ಸ್ನೇಹಕೂಟ ಮಣೂರು ಇವರಿಂದ  ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

    ಗಮನ ಸೆಳೆದ ಗ್ರಾಮ್ಯ ಪರಿಕರ, ತಿಂಡಿ ತಿನಿಸುಗಳು. ಕಾರ್ಯಕ್ರಮದಲ್ಲಿ ಗ್ರಾಮೀಣ ಹಲವು ಬಗೆಯ ಪರಿಕರಗಳು ತಿಂಡಿ ತಿನಿಸುಗಳಾದ ಪ್ರತೋಡಿ, ಶಕಿಹಿಟ್, ಸುಕಿನುಂಡೆ, ಹೊರ್ಲಿ ಉಂಡೆ, ಕೊಚ್ಚಕ್ಕಿ ಉಂಡೆ, ದಾಸವಾಳ ಸೊಪ್ಪಿನ ಹಿಟ್ಟು, ಹಾಲ್ ಬಾಯಿ, ದೊಣ್ನಾ ತಿಂಡಿ  ವಿಶೇಷವಾಗಿ ಗಮನ ಸೆಳೆದವು ಅಲ್ಲದೆ ಮಣೂರು ಜಯರಾಮ ಶೆಟ್ಟಿ ಅವರು ಹೊಲಿ ಕರೆಯುವ ಮೂಲಕ ಕುಂದಾಪ್ರ ಭಾಷಾ ಸೊಗಡಿಗೆ ಬಣ್ಣ ಬಡಿದರು.

    Kota
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ವಕ್ವಾಡಿ: ಆಸರೆ ಟ್ರಸ್ಟ್ ಮೂಲದ ವಿದ್ಯಾರ್ಥಿವೇತನ, ಸಮವಸ್ತ್ರ ವಿತರಣೆ

    10/08/2026

    ಸಂಜೀವಿನಿ ಸಂಘಗಳಲ್ಲಿನ ಹಣ ದುರುಪಯೋಗ ತನಿಖೆಗೆ ಎಸ್‌ಐಟಿ ರಚನೆಯಾಗಲಿ: ಕೆ. ವಿಕಾಸ್ ಹೆಗ್ಡೆ

    10/08/2026

    ಶ್ವೇತ ಛತ್ರ ಯಕ್ಷಮಿತ್ರ ಕೋಣಿ ವತಿಯಿಂದ ಹಳ್ಳಾಡಿ ಜಯರಾಮ ಶೆಟ್ಟಿ ದಂಪತಿಗಳಿಗೆ ಸನ್ಮಾನ

    10/08/2026
    Leave A Reply Cancel Reply

    five × 3 =

    Call us

    Click Here

    Call us

    Call us

    Call us
    Highest Viewed Recently
    • ವಕ್ವಾಡಿ: ಆಸರೆ ಟ್ರಸ್ಟ್ ಮೂಲದ ವಿದ್ಯಾರ್ಥಿವೇತನ, ಸಮವಸ್ತ್ರ ವಿತರಣೆ
    • ಸಂಜೀವಿನಿ ಸಂಘಗಳಲ್ಲಿನ ಹಣ ದುರುಪಯೋಗ ತನಿಖೆಗೆ ಎಸ್‌ಐಟಿ ರಚನೆಯಾಗಲಿ: ಕೆ. ವಿಕಾಸ್ ಹೆಗ್ಡೆ
    • ಜ್ಯೋತಿ ಸಾಲಿಗ್ರಾಮ ಅವರಿಗೆ ಪಂಚವರ್ಣದ ಆಸಾಡಿ ಒಡ್ರ್ ಪುರಸ್ಕಾರ ಪ್ರದಾನ
    • ಶ್ವೇತ ಛತ್ರ ಯಕ್ಷಮಿತ್ರ ಕೋಣಿ ವತಿಯಿಂದ ಹಳ್ಳಾಡಿ ಜಯರಾಮ ಶೆಟ್ಟಿ ದಂಪತಿಗಳಿಗೆ ಸನ್ಮಾನ
    • ಬಾರ್ಕೂರು: ಆರೋಗ್ಯ, ಸ್ವಚ್ಛತೆ ಮತ್ತು ಆತ್ಮವಿಶ್ವಾಸದ ಅರಿವು ಮೂಡಿಸಿದ ಜಾಗೃತಿ ಕಾರ್ಯಕ್ರಮ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.