Author: ನ್ಯೂಸ್ ಬ್ಯೂರೋ

ಬೈಂದೂರು: ಕೇಂದ್ರ ಸರ್ಕಾರದ ಚಿನ್ನದ ಮೇಲೆ ವಿಧಿಸಿದ ಅಬಕಾರಿ ಸುಂಕ ಮತ್ತು ಖರೀದಿಯ ಬಗ್ಗೆ ಪಾನ್‌ಕಾರ್ಡ್ ಕಡ್ಡಾಯ ಕಾನೂನನ್ನು ಖಂಡಿಸಿ ಬೈಂದೂರು ವಲಯ ಚಿನ್ನ ಹಾಗೂ ಬೆಳ್ಳಿ ವ್ಯಾಪರಸ್ಥರು ಮತ್ತು ಕೆಲಸಗಾರರ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ಕೇಂದ್ರ ಸರ್ಕಾರ ವಿಧಿಸಿದ ಅಬಕಾರಿ ಶುಲ್ಕ ಮತ್ತು ಪಾನ್‌ಕಾರ್ಡ್ ಇಲ್ಲದೇ ರೂ.2 ಲಕ್ಷಕ್ಕಿಂತ ಹೆಚ್ಚಿನ ಚಿನ್ನ ಖರೀದಿ ಮಾಡಲು ಸಾಧ್ಯವಿಲ್ಲ ಎಂಬ ಕಾನೂನಿಂದ ಕಡು ಬಡವರಿಗೆ, ಮಧ್ಯಮ ವರ್ಗ ಕುಟುಂಬದವರಿಗೆ ಹಾಗೂ ಬಹಳ ವರ್ಷದಿಂದ ಈ ಕಸುಬನ್ನು ನಂಬಿ ವ್ಯಾಪಾರ ಮಾಡುತ್ತಿರುವ ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೂ ಅನಾನುಕೂಲವಾಗುತ್ತದೆ. ಹೀಗಾಗಿ ಸರ್ಕಾರ ಈ ಕಾನೂನನ್ನು ಹಿಂತೆಗೆದುಕೊಳ್ಳಬೇಕು, ಎಂದು ಪ್ರತಿಭಟನಾಕಾರರು ಆಗ್ರಹಿಸಿ ಇಲ್ಲಿನ ವಿಶೇಷ ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸುರೇಂದ್ರ ಶೇಟ್ ಬೈಂದೂರು, ಮೋಹನ್ ಶೇಟ್ ಶಿರೂರು, ವೆಂಕಟೇಶ ಶೇಟ್ ಉಪ್ಪುಂದ, ಅನಿಲ್ ಶೇಟ್ ಉಪ್ಪುಂದ ಪ್ರತಿಭಟನಾ ನೇತೃತ್ವ ವಹಿಸಿದ್ದರು.

Read More

ಗಂಗೊಳ್ಳಿ: ಪುರಾಣ ಪ್ರಸಿದ್ಧ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಬ್ರಹ್ಮ ರಥೋತ್ಸವವು ಮಂಗಳವಾರ ವಿಜೃಂಭಣೆಯಿಂದ ಜರಗಿತು. ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ, ಜಿಪಂ ಸದಸ್ಯೆ ಶೋಭಾ ಪುತ್ರನ್, ಗಂಗೊಳ್ಳಿ ತಾಪಂ ಸದಸ್ಯ ಸುರೇಂದ್ರ ಖಾರ್ವಿ, ಹೆಮ್ಮಾಡಿ ತಾಪಂ ಸದಸ್ಯ ರಾಜು ದೇವಾಡಿಗ ಮೊದಲಾದವರು ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ದೇವಳದ ಆಡಳಿತ ಮಂಡಳಿ ಸದಸ್ಯರು, ಊರಿನ ಹತ್ತು ಸಮಸ್ತರು, ಊರ ಪರ ಊರಿನ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕುಂದಾಪುರದ ಡಿವೈಎಸ್‌ಪಿ ಮಂಜುನಾಥ ಶೆಟ್ಟಿ, ಬೈಂದೂರು ಪೊಲೀಸ್ ವೃತ್ತನಿರೀಕ್ಷಕ ಸುದರ್ಶನ ಎಂ. ಮಾರ್ಗದರ್ಶನದಲ್ಲಿ ಗಂಗೊಳ್ಳಿ ಎಸ್‌ಐ ಸುಬ್ಬಣ್ಣ ನೇತೃತ್ವದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಚಿತ್ರ : ಸುರಭಿ ಗಂಗೊಳ್ಳಿ

Read More

ಕುಂದಾಪುರ : ತೆರಿಗೆ ಬಾಕಿ ಉಳಿಸಿಕೊಂಡವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ. ಕಳೆದ ನಾಲ್ಕಾರು ವರ್ಷದಿಂದ ತೆರಿಗೆ ಕಟ್ಟದವರಿಗೆ ನೊಟೀಸ್ ಮಾಡಲಾಗಿದೆ. ನೊಟೀಸಿಗೂ ಬಗ್ಗದವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ. ತೆರಿಗೆ ಮಾಪ್ ಮಾಡುವ ಪ್ರಶ್ನೆಯೇ ಇಲ್ಲಾ ಎಂದು ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಸ್ಪಷ್ಟ ಪಡಿಸಿದ್ದಾರೆ. ಕುಂದಾಪುರ ಪುರಸಭೆ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಕುಂದಾಪುರ ಸಾಮಾನ್ಯ ಸಭೆಯಲ್ಲಿ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಮಾತನಾಡಿದರು. ಕಳೆದ ಹಲವಾರು ವರ್ಷದಿಂದ ಕುಂದಾಪುರ ಪುರಸಭೆಗೆ ತೆರಿಗೆ ಕಟ್ಟದ ೧೫೦೦ರಷ್ಟು ಜನರಿದ್ದು, ಅದರಲ್ಲಿ 20 ಜನ ನೊಟೀಸ್ ನೀಡಿದ ನಂತರ ತೆರಿಗೆ ಕೊಟ್ಟಿದ್ದಾರೆ. ಮತ್ತುಳಿದವರಿಗೆ ರಿಜಿಸ್ಟರ್ ನೊಟೀಸ್ ನೀಡಲಾಗುತ್ತದೆ. ಅದಕ್ಕೂ ಬಗ್ಗದಿದ್ದರೆ ಕಾನುನು ರೀತಿ ಕ್ರಮ ಕೈಗೊಳ್ಳಲಗಾಗುತ್ತದೆ ಎಂದು ಎಚ್ಚರಿಸಿದರು. ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಮಗ್ಗಲ್ಲಲ್ಲಿ ನಿಯಮ ಮೀರಿ ಕಟ್ಟಡ ಏಳುತ್ತಿದ್ದು ಪುರಸಭೆ ಪರವಾನಿಗೆ ಪಡೆದಿಲ್ಲ. ಕಟ್ಟಡದ ಪಕ್ಕ ಪಕ್ಕ ಚಿಕ್ಕ ಕಟ್ಟಡಗಳು ಏಳುತ್ತಿದೆ. ಪುರಸಭೆ ಅತಿಕ್ರಮ ಕಟ್ಟಡ ಹಾಗೆ ಬೆಳೆಯಲು ಬಿಟ್ಟರೆ ಮುಂದೆ…

Read More

ಕುಂದಾಪುರ : ಬಾಗಿಲಕೋಟೆ ಯುವ ಹೋಟೆಲ್ ಉದ್ಯಮಿ ಹೊಸಾಡು ಕೇರಿಕೊಡ್ಲು ನವೀನ್ ಎಂ.ಶೆಟ್ಟಿ (24) ಮಾ.13 ರಂದು ಬಾಗಿಲುಕೋಟೆಯಲ್ಲಿ ನಡೆದ ರಸ್ತೆ ದುರಂತದಲ್ಲಿ ನಿಧನರಾದರು. ಮೂಲತಃ ಕುಂದಾಪುರ ತಾಲೂಕ್ ಹೊಸಾಡು ಗ್ರಾಮ ನಿವಾಸಿಯಾಗಿದ್ದ ಮೃತರು ತಂದೆ, ತಾಯಿ, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ನಾವುಂದ ಪೇಟೆಯ ಬಳಿ ಮಹೇಂದ್ರ ಮಾಕ್ಸಿಮೋ ಮಿನಿ ಟ್ರಕ್ಹಾಗೂ ಬೈಕ್ ನಡುವೆ ನಡೆದ ಅಫಘಾತದಲ್ಲಿ ಗಂಭೀರ ಗಾಯಗೊಂಡ ಬೈಕ್ ಸವಾರ ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಕೊನೆಯುಸಿರೆಳೆದ ಘಟನೆ ವರದಿಯಾಗಿದೆ. ನಾವುಂದ ನಿವಾಸಿ ಶಾಹಿಫ್ (25) ಮೃತಪಟ್ಟ ದುರ್ದೈವಿ. ಕುಂದಾಪ್ರ ಡಾಟ್ ಕಾಂ ಸುದ್ದಿ. ನಾವುಂದಿಂದ ಮರವಂತೆಯತ್ತ ತೆರಳುತ್ತಿದ್ದ ಶಾಹಿದ್ ಬೈಕಿಗೆ ಎದುರಿನಿಂದ ಬಂದ ಗೂಡ್ಸ್ ರಿಕ್ಷಾ ಢಿಕ್ಕಿ ಹೊಡೆದ ಪರಿಣಾಮ ಅಲ್ಲಿಯೇ ಬಿದ್ದ ಶಾಹಿದ್ ಗೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಸ್ಥಳೀಯರು ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಸಾಗಿಸಿದರಾದರೂ ತಲೆಗೆ ಏಟು ಬಿದ್ದಿದ್ದರಿಂದ ಮಾರ್ಗಮಧ್ಯದಲ್ಲಿಯೇ ಅವರು ಮೃತಪಟ್ಟರು. ಶಾಹಿಫ್ ತಮ್ಮ ಫ್ಯಾನ್ಸಿ ಅಂಗಡಿ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.  ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ದೇವಲ್ಕುಂದ ಮೀನು ಸಂಸ್ಕರಣಾ ಘಟಕ ವಿವಾದ ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ, ಮಾ.15: ಕರೆ ನೀಡಿದ್ದು ಪ್ರತಿಭಟನೆಗೆ ಆದರೆ ಬಂದಿದ್ದು ಮಾತ್ರ ಸಂಧಾನಕ್ಕೆ. ರಾಜಿ ಸೂತ್ರ ಮುರಿದು ತಿರುಗಿ ಬಿದ್ದ ಗ್ರಾಮಸ್ಥರು, ಸದ್ದಿಲ್ಲದೇ ಕಾಲ್ಕತ್ತ ಜಯ ಕರ್ನಾಟಕ ಸಂಘಟನೆಯ ಮುಖಂಡರು! ಇದು ಇಂದು ಕಟ್‌ಬೆಲ್ತೂರು ಗ್ರಾಪಂ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಮೀನು ಸಂಸ್ಕರಣಾ ಘಟಕ ತೆರೆಯುವುದನ್ನು ವಿರೋಧಿಸಿ ಹಮ್ಮಿಕೊಂಡ ಪ್ರತಿಭಟನೆಯ ಪ್ರಮುಖಾಂಶ. ಜನರಿಗೆ ತೊಂದರೆಯಾಗುವು ಕಾರಣದಿಂದ ಮೀನು ಸಂಸ್ಕರಣಾ ಘಟಕ ಆರಂಭಿಸುವುದನ್ನು ವಿರೋಧಿಸಿ ಪ್ರತಿಭಟನೆಗೆ ಜಯಕರ್ನಾಟಕ ಸಂಘಟನೆ ಕರೆ ನೀಡಿತ್ತು. ಅದರಂತೆ ಗ್ರಾಮಸ್ಥರು ಕೂಡ ಪಂಚಾಯತ್ ಎದುರು ಜಮಾಯಿಸಿದ್ದರು. ಗ್ರಾಮಸ್ಥರನ್ನು ಉದ್ದೇಶಿಸಿ ಜಯಕರ್ನಾಟಕ ಸಂಘಟನೆಯ ಗೌರವಾಧ್ಯಕ್ಷ ಸುಧಾಕರ ರಾವ್ ಮಾತನಾಡುತ್ತಾ, ದೇವಲ್ಕುಂದದಲ್ಲಿ ಮೀನು ಸಂಸ್ಕರಣಾ ಘಟಕ ಆರಂಭಗೊಳ್ಳಲಿದೆ ಎಂಬ ತಪ್ಪು ಮಾಹಿತಿಯಿಂದಾಗಿ ಪ್ರತಿಭಟನೆಗೆ ಮುಂದಾಗಿದ್ದೆವು. ಆದರೆ ಅಲ್ಲಿ ಮೀನು ಶಿಥಿಲೀಕರಣ ಘಟಕ ಆರಂಭವಾಗುವುದೆಂದು ಡಿವೈಎಸ್ಪಿ ಸಮ್ಮುಖದಲ್ಲಿ ಕಾರ್ಖಾನೆಯವರು ಮನವರಿಕೆ ಮಾಡಿದ್ದರಿಂದ ಪ್ರತಿಭಟನೆಯಿಂದ ಹಿಂದೆ ಸರಿಯುತ್ತಿದ್ದೇವೆ. ನಮ್ಮ ವಿರೋಧ ಇದ್ದದ್ದು ಮೀನು…

Read More

ಬೈಂದೂರು: ಕುಂದಾಪುರ ವಲಯದ ವಿಶೇಷ ಶಿಲುಬೆಯ ಹಾದಿ ಕಾರ್ಯಕ್ರಮ ಖುರ್ಸಾಚೆ ವಾಟ್ ಬೈಂದೂರಿನ ಹೋಲಿಕ್ರಾಸ್ ಇಗರ್ಜಿ ಗುಡ್ಡೆಯಲ್ಲಿ ಜರುಗಿತು. ವಲಯದ ಧರ್ಮಕೇಂದ್ರಗಳಾದ ಬೈಂದೂರು, ಪಡುಕೋಣೆ, ತ್ರಾಸಿ, ತಲ್ಲೂರು, ಗಂಗೊಳ್ಳಿ, ಕುಂದಾಪುರ, ಪಿಯೂಸ್ ನಗರ, ಬಸ್ರೂರು, ಕೋಟ, ಕೋಟೇಶ್ವರ ಮತ್ತು ಸಾಸ್ತಾನದಿಂದ ಬಂದಂತಹ ಭಕ್ತಾಧಿಗಳು ಉಡುಪಿಯ ಬಿಷಪ್ ಅತೀ ವಂದನೀಯ ರೆ. ಜೆರಾಲ್ಡ್ ಐಸಾಕ್ ಲೋಬೋ ರವರ ನೇತೃತ್ವದಲ್ಲಿ ಯೇಸು ಕ್ರಿಸ್ತನ ಶಿಲುಬೆಗೆ ಏರಿಸುವ ೧೪ ವಿಶೇಷ ಕಷ್ಟದ ಸಂದರ್ಭಗಳನ್ನು ನೆನಪಿಸಿಕೊಂಡು ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ದಿವ್ಯ ಬಲಿಪೂಜೆ ಜರುಗಿತು. ಈ ಸಂದರ್ಭದಲ್ಲಿ ಕುಂದಾಪುರದ ಮುಖ್ಯ ಧರ್ಮಗುರು ರೆ.ಫಾ. ಅನಿಲ್ ಡಿಸೋಜಾ, ರೆ.ಫಾ. ಪ್ರಕಾಶ್ ಡಿಸೋಜಾ ಕುಂದಾಪುರ, ಗಂಗೊಳ್ಳಿಯ ರೆ.ಫಾ. ಆಲ್ಬರ್ಟ್ ಕ್ರಾಸ್ತಾ, ತ್ರಾಸಿಯ ಚಾರ್ಲ್ಸ್ ಲೂಯಿಸ್, ಪಡುಕೋಣೆಯ ರೆ.ಫಾ. ಜೊಸೆಪ್ ಮಚಾದೋ, ಸಾಸ್ತಾನದ ಜಾನ್ ಮೆಂಡೆನ್ಸೊರವರು ಉಪಸ್ಥಿತರಿದ್ದರು. ಬೈಂದೂರಿನ ಧರ್ಮಗುರುಗಳಾದ ರೆ.ಫಾ. ರೊನಾಲ್ಡ್ ಮಿರಾಂದ್ ರವರ ಉಸ್ತುವಾರಿಯಲ್ಲಿ ಈ ಕಾರ್ಯಕ್ರಮ ಜರುಗಿತು.

Read More

ಕುಂದಾಪುರ: ಮೊಗವೀರ ಯುವ ಸಂಘಟನೆ ರಿ., ಉಡುಪಿ ಜಿಲ್ಲೆ, ಹೆಮ್ಮಾಡಿ ಘಟಕದ ನೇತೃತ್ವದಲ್ಲಿ ಅಶಕ್ತರಿಗೆ ಸಹಾಯಧನ ಮತ್ತು ವಿದ್ಯಾರ್ಥಿ ವೇತನದ ಸಲುವಾಗಿ ಆರ್.ಬಿ.ಬಗ್ವಾಡಿ ಇವರ ಸಂಯೋಜನೆಯಲ್ಲಿ ಬಗ್ವಾಡಿಯ ಮಹಿಷಾಸುರಮರ್ದಿನಿ ಸಭಾ ಭವನದಲ್ಲಿ ಆಯೋಜಿಸಲಾದ ತೆಂಕು-ಬಡಗಿನ ಹೆಸರಾಂತ ಯಕ್ಷಗಾನ ಕಲಾವಿದರ ಸಮ್ಮೀಲನ ’ಯಕ್ಷ ಸಂಭ್ರಮ’ದಲ್ಲಿ ತೆಂಕುತಿಟ್ಟಿನ ಪ್ರಸಿದ್ಧ ಭಾಗವತ ಪಟ್ಲ ಸತೀಶ ಶೆಟ್ಟಿ, ಬಡಗುತಿಟ್ಟಿನ ಯಕ್ಷರಂಗದಲ್ಲಿ 25 ವಸಂತ ಪೂರೈಸಿದ ಭಾಗವತ ಉಮೇಶ ಸುವರ್ಣ ಗೋಪಾಡಿ, ಯುವ ಪ್ರತಿಭಾನ್ವಿತ ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕುಂದಾಪುರ ಚಿನ್ಮಯಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಉಮೇಶ ಪುತ್ರನ್, ಯಕ್ಷಗಾನ ಬದುಕಿಗೆ ಸಂಸ್ಕಾರವನ್ನು ನೀಡುವ ಕಲೆ. ಮನೋಲ್ಲಾಸದ ಜೊತೆ ಪೌರಾಣಿಕ ಕಥೆಗಳನ್ನು ಪರಿಣಾಮಕಾರಿಯಾಗಿ ತಿಳಿಯಪಡಿಸುತ್ತದೆ. ಮಹಾಭಾರತ, ರಾಮಾಯಣದ ಮೌಲ್ಯಗಳು ಯಕ್ಷಗಾನದ ಮೂಲಕ ಹೆಚ್ಚು ಪ್ರಸಾರಗೊಂಡಿವೆ. ಯಕ್ಷಗಾನದ ಬಗ್ಗೆ ಇಂದಿನ ಮಕ್ಕಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು. ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ಅಧ್ಯಕ್ಷ ವಾಸು ಜಿ.ನಾಯ್ಕ್ ವಂಡ್ಸೆ ಅಧ್ಯಕ್ಷತೆ ವಹಿಸಿದ್ದರು. ಶಾಸಕ…

Read More

ಬೈಂದೂರು: ವಿಶ್ವದ ಅತಿ ಎತ್ತರದ ಸಮರ ಕಣ ಸಿಯಾಚಿನ್ ನೀರ್ಗಲ್ಲ ಪ್ರದೇಶದ ಹಿಮಸಾಗರದಡಿ ಸಿಲುಕಿ ಆರು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಫೆ. ೧೧ ರಂದು ಹುತಾತ್ಮರಾದ ಧಾರವಾಢ ಜಿಲ್ಲೆಯ ಕುಂದುಗೋಡು ತಾಲೂಕಿನ ಬೆಟಂದೂರು ಗ್ರಾಮದ ವೀರ ಯೋಧ ಲ್ಯಾನ್ಸ್ ನಾಯಕ ಹನುಮಂತಪ್ಪ ಕೊಪ್ಪದ್ ಅವರ ಧರ್ಮಪತ್ನಿ ಮಾದೇವಿ ಕೊಪ್ಪದ ಅವರಿಗೆ ಬೈಂದೂರು ಉಪ್ಪುಂದ ಲಯನ್ಸ್ ಕ್ಲಬ್ ವತಿಯಿಂದ 25ಸಾವಿರದ ಪರಿಹಾರದ ಚೆಕ್ ವಿತರಿಸಲಾಯಿತು. ಪರಿಹಾರದ ಚೆಕ್ ವಿತರಿಸಿ ಲಯನ್ಸ್ ಕ್ಲಬ್ ಅಧ್ಯಕ್ಷ ಜಿ. ಗೋಕುಲ್ ಶೆಟ್ಟಿ ಮಾತನಾಡಿ, ಯೋಧ ಹನುಮಂತಪ್ಪ ಸಿಯಾಚಿನ್ ಹಿಮದ ರಾಶಿಯ ೩೫ ಅಡಿ ಆಳದಲ್ಲಿ ಸಿಲುಕಿ, ಆರು ದಿನಗಳ ಕಾಲ ಆಹಾರವಿಲ್ಲದೇ ಜೀವ ಹಿಡಿದಿಟ್ಟುಕೊಂಡಿರುವುದು ಸೋಜಿಗವೇ ಸರಿ, ಆದರೆ ಅವರ ಆರೋಗ್ಯ ಸುಧಾರಿಸಲೆಂದು ದೇಶದ ಕೋಟ್ಯಾಂತರ ಜನರ ಪ್ರಾರ್ಥಿಸಿದರು, ಅವರನ್ನು ಉಳಿಸಿಕೊಳ್ಳಲು ಸಾಧವಾಗದಿರುವುದು ವಿಷಾದನೀಯ ಸಂಗತಿ. ದೇಶ ವೀರ ಯೋಧನೊಬ್ಬನನ್ನು ಕಳೆದುಕೊಂಡಿದೆ. ಸರ್ಕಾರ ಅವರ ಕಟುಂಬಕ್ಕೆ ಪರಿಹಾರದ ಮೊತ್ತ ನಿಡಿದರೂ, ಅವರ ಪತ್ನಿಗೆ ಶೀಘ್ರ…

Read More

ಶಿರೂರು: ಶಿರೂರು ಜೆಸಿಐ ವತಿಯಿಂದ ಮಹಿಳಾ ದಿನಾಚರಣೆ ಕಾರ್ಯಕ್ರಮ ಅರಮನೆಹಕ್ಲು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಗ್ರಾಪಂ ಸದಸ್ಯ ಮಂಜುನಾಥ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ಶಿರೂರು ಗ್ರಾಪಂಗೆ ಮೂರನೇ ಬಾರಿ ಅಧ್ಯಕ್ಷರಾಗಿ ಆಯ್ಕಯಾದ ದಿಲ್‌ಶಾದ್ ಬೇಗಂರವರನ್ನು ಮಹಿಳಾ ದಿನಾಚರಣೆಯ ಅಂಗವಾಗಿ ಸಮ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ದಿಲ್‌ಶಾದ್ ಬೇಗಂ ೨೧ನೇ ಶತಮಾನದಲ್ಲಿ ಮಹಿಳೆಯ ಪಾತ್ರ ಬದಲಾಗಿದೆ. ವೃತ್ತಿ ಮತ್ತು ಸಂಸಾರ ಎರಡನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾಳೆ. ಜೆಸಿಐ ಸಂಸ್ಥೆ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ ಎಂದು ಶ್ಲಾಘಿಸಿದರು. ಶಿರೂರು ಜೆಸಿಐ ಅಧ್ಯಕ್ಷ ಹರೀಶ್ ಶೇಟ್, ಕಾರ್ಯದರ್ಶಿ ನಾಗೇಶ ಕೆ, ಗ್ರಾಪಂ ಸದಸ್ಯೆ ಸಂಧ್ಯಾ ವಿಶ್ವನಾಥ, ರೇವತಿ, ನಿಕಟಪೂರ್ವಾಧ್ಯಕ್ಷ ಪ್ರಕಾಶ ಮಾಕೋಡಿ, ಜಾನ್ವಿ.ಪಿ. ಪ್ರಭು, ವೀರಮ್ಮ, ರೂಪಾ ರೇವಣಕರ್, ಕವಿತಾ.ಕೆ.ಮೂರ್ತಿ ಹಾಜರಿದ್ದರು.

Read More