ಪ್ರತಿಭಟನೆಗೆ ಬಂದವರು ಸಂಧಾನಕ್ಕೆ ನಿಂತರು. ರಾಜಿಗೆ ಒಪ್ಪದ ಗ್ರಾಮಸ್ಥರು ತಿರುಗಿ ಬಿದ್ದರು!

Click Here

Call us

Call us

Call us

ದೇವಲ್ಕುಂದ ಮೀನು ಸಂಸ್ಕರಣಾ ಘಟಕ ವಿವಾದ

Call us

Click Here

ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ, ಮಾ.15: ಕರೆ ನೀಡಿದ್ದು ಪ್ರತಿಭಟನೆಗೆ ಆದರೆ ಬಂದಿದ್ದು ಮಾತ್ರ ಸಂಧಾನಕ್ಕೆ. ರಾಜಿ ಸೂತ್ರ ಮುರಿದು ತಿರುಗಿ ಬಿದ್ದ ಗ್ರಾಮಸ್ಥರು, ಸದ್ದಿಲ್ಲದೇ ಕಾಲ್ಕತ್ತ ಜಯ ಕರ್ನಾಟಕ ಸಂಘಟನೆಯ ಮುಖಂಡರು! ಇದು ಇಂದು ಕಟ್‌ಬೆಲ್ತೂರು ಗ್ರಾಪಂ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಮೀನು ಸಂಸ್ಕರಣಾ ಘಟಕ ತೆರೆಯುವುದನ್ನು ವಿರೋಧಿಸಿ ಹಮ್ಮಿಕೊಂಡ ಪ್ರತಿಭಟನೆಯ ಪ್ರಮುಖಾಂಶ.

ಜನರಿಗೆ ತೊಂದರೆಯಾಗುವು ಕಾರಣದಿಂದ ಮೀನು ಸಂಸ್ಕರಣಾ ಘಟಕ ಆರಂಭಿಸುವುದನ್ನು ವಿರೋಧಿಸಿ ಪ್ರತಿಭಟನೆಗೆ ಜಯಕರ್ನಾಟಕ ಸಂಘಟನೆ ಕರೆ ನೀಡಿತ್ತು. ಅದರಂತೆ ಗ್ರಾಮಸ್ಥರು ಕೂಡ ಪಂಚಾಯತ್ ಎದುರು ಜಮಾಯಿಸಿದ್ದರು. ಗ್ರಾಮಸ್ಥರನ್ನು ಉದ್ದೇಶಿಸಿ ಜಯಕರ್ನಾಟಕ ಸಂಘಟನೆಯ ಗೌರವಾಧ್ಯಕ್ಷ ಸುಧಾಕರ ರಾವ್ ಮಾತನಾಡುತ್ತಾ, ದೇವಲ್ಕುಂದದಲ್ಲಿ ಮೀನು ಸಂಸ್ಕರಣಾ ಘಟಕ ಆರಂಭಗೊಳ್ಳಲಿದೆ ಎಂಬ ತಪ್ಪು ಮಾಹಿತಿಯಿಂದಾಗಿ ಪ್ರತಿಭಟನೆಗೆ ಮುಂದಾಗಿದ್ದೆವು. ಆದರೆ ಅಲ್ಲಿ ಮೀನು ಶಿಥಿಲೀಕರಣ ಘಟಕ ಆರಂಭವಾಗುವುದೆಂದು ಡಿವೈಎಸ್ಪಿ ಸಮ್ಮುಖದಲ್ಲಿ ಕಾರ್ಖಾನೆಯವರು ಮನವರಿಕೆ ಮಾಡಿದ್ದರಿಂದ ಪ್ರತಿಭಟನೆಯಿಂದ ಹಿಂದೆ ಸರಿಯುತ್ತಿದ್ದೇವೆ. ನಮ್ಮ ವಿರೋಧ ಇದ್ದದ್ದು ಮೀನು ಸಂಸ್ಕರಣಾ ಘಟಕ ಆರಂಭಿಸುವುದಕ್ಕೆ ಮಾತ್ರ ಎನ್ನುತ್ತಿದ್ದಂತೆ ಗ್ರಾಮಸ್ಥರು ಆಕ್ಷೇಪ ಎತ್ತಿದರು. ಕುಂದಾಪ್ರ ಡಾಟ್ ಕಾಂ ವರದಿ

ನಮಗೆ ಇಲ್ಲಿ ಮೀನಿಗೆ ಸಂಬಂಧಿಸಿದ ಯಾವ ಘಟಕದ್ದೂ ಅವಶ್ಯಕತೆ ಇಲ್ಲ ಎಂದು ಗ್ರಾಮಸ್ಥರು ಧ್ವನಿಯೇರಿಸಿದ್ದೇ ತಡ, ಜಯಕರ್ನಾಟಕ ಸಂಘಟನೆಯ ಮುಖಂಡರು ಕೂಡಲೇ ಪ್ರತಿಭಟನೆಯಿಂದ ಹಿಂದೆ ಸರಿದು ಗ್ರಾಪಂ ಪಿಡಿಓಗೆ ಮನವಿ ಸಲ್ಲಿಸಲು ಮುಂದಾದರು. ಗ್ರಾಮಸ್ಥರೊಂದಿಗೆ ಒಟ್ಟಾಗಿ ಪ್ರತಿಭಟನೆಳಿದಿದ್ದ ಸಂಘಟನೆಯ ಕಾರ್ಯಕರ್ತರುಗಳಿಗೆ ಏಕಾಏಕಿ ಎದುರಾದ ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಸದ್ದಿಲ್ಲದೇ ಫಲಾಯನವಾದ ಅನುಸರಿಸಿದ್ದರು. ಕುಂದಾಪ್ರ ಡಾಟ್ ಕಾಂ ವರದಿ

[quote font_size=”14″ bgcolor=”#ffffff” arrow=”yes” align=”right”]ನಾವು ಈವರೆಗೆ ನೆಮ್ಮದಿಯಿಂದಲೇ ಇದ್ದೇವೆ. ಇಲ್ಲಿ ಮೀನು ಸಂಸ್ಕರಣಾ ಘಟಕ ಆರಂಭಿಸಿ ನಮ್ಮ ನೆಮ್ಮದಿ ಕೆಡಹುವ ಹುನ್ನಾರ ನಡೆಸಿದ್ದಾರೆ. ಇಂತಹದ್ದನ್ನು ಮಾಡವುದನ್ನು ಬಿಟ್ಟು ಶಾಲೆಯನ್ನಾದರೂ ಕಟ್ಟಲಿ. ನಮ್ಮ ಮಕ್ಕಳು ದೂರದ ಶಾಲೆಗೆ ತೆರಳುವುದಾದರೂ ತಪ್ಪುತ್ತದೆ. – ಕಮಲಾ, ಗ್ರಾಮಸ್ಥೆ[/quote]

Click here

Click here

Click here

Click Here

Call us

Call us

ಈ ಸಂದರ್ಭದಲ್ಲಿ ಸ್ಥಳೀಯರಾದ ಚರಣ ಮಾತನಾಡಿ ನಮ್ಮ ಗ್ರಾಮದಲ್ಲಿ ಮೀನು ಸಂಸ್ಕರಣಾ ಘಟಕವಾಗಲಿ, ಶಿಥಿಲೀಕರಣ ಘಟಕವಾಗಿ ಅದಕ್ಕೆ ವಿರೋಧವಿದೆ. ಈ ಪರಿಸರದಲ್ಲಿ ಶಾಲೆ, ದೇವಸ್ಥಾನ ಹಾಗೂ ಹತ್ತಾರು ದಲಿತ ಕುಟುಂಬದವರು ವಾಸಿಸುತ್ತಿದ್ದಾರೆ. ಗ್ರಾಮಸ್ಥರಿಗೆ ತಿಳಿಯದಂತೆ ಇಲ್ಲಿ ಅನುಮತಿ ನೀಡುತ್ತಿದ್ದಾರೆ. ಜಯಕರ್ನಾಟಕ ಸಂಘಟನೆಯವರು ಪ್ರತಿಭಟನೆಗೆ ಕರೆದು ಸಮಜಾಯಿಷಿ ನೀಡುತ್ತಿದ್ದಾರೆ. ನಮಗೆ ಅದರ ಅಗತ್ಯವೂ ಇಲ್ಲ. ಗ್ರಾಮಸ್ಥರ ಹಿತಾಸಕ್ತಿಯನ್ನು ಪರಿಗಣಿಸುವ ಸಂಘಟನೆಯಾಗಿದ್ದರೇ ಮಾತ್ರ ನಮ್ಮೊಂದಿಗೆ ಬನ್ನಿ. ಈ ಪರಿಸರದಲ್ಲಿ ಮೀನು ಸಂಸ್ಕರಣಾ ಘಟಕದ ಪ್ರಕ್ರಿಯೆ ಮುಂದುವರಿದದ್ದೇ ಆದರೆ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಕುಂದಾಪ್ರ ಡಾಟ್ ಕಾಂ ವರದಿ

ಪ್ರತಿಭಟನೆಯಲ್ಲಿ ಜಯಕರ್ನಾಟಕ ವೇದಿಕೆಯ ಜಿಲ್ಲಾಧ್ಯಕ್ಷ ಜನನಿ ದಿವಾಕರ ಜೆ. ಶೆಟ್ಟಿ, ಹೆಮ್ಮಾಡಿ ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಪ್ರಕಾಶ, ಹೆಮ್ಮಾಡಿ ಗ್ರಾಪಂ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಹಟ್ಟಿಯಂಗಡಿ ಗ್ರಾಪಂ ಸದಸ್ಯ ಸಂತೋಷ ತೋಟಬೈಲು ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಎಸೈ ನಾಸಿರ್ ಹುಸೇನ್ ಅವರ ನೇತೃತ್ವದಲ್ಲಿ ಬಂದೋವಸ್ತ್ ಏರ್ಪಡಿಸಲಾಗಿತ್ತು.

ಜಯಕರ್ನಾಟಕ ಸಂಘಟನೆಯಲ್ಲಿಯೂ ಮೂಡದ ಒಗ್ಗಟ್ಟು!
ಪ್ರತಿಭಟನೆಯ ಮಾಡುವ ಮೊದಲು ಹೇಳಿದ್ದೇ ಒಂದು ನಂತರದ ಹೇಳಿಕೆಯೇ ಇನ್ನೊಂದು. ಇದು ಜಯಕರ್ನಾಟಕ ಸಂಘಟನೆಯ ಜಿಲ್ಲಾ ನಾಯಕರುಗಳ ವಿರುದ್ಧ ಹೆಮ್ಮಾಡಿ ಘಟಕದ ಕಾರ್ಯಕರ್ತರುಗಳೇ ಅಸಮಧಾನ ಹೊರಗೆಡವಿದ ಪರಿ. ಹೆಮ್ಮಾಡಿಯಲ್ಲಿ ಮೀನು ಸಂಸ್ಕರಣಾ ಘಟಕವಿರಲಿ, ಶಿಥಿಲೀಕರಣ ಘಟಕ ಆಗುವುದಿರಲಿ ಅದಕ್ಕೆ ನಮ್ಮ ವಿರೋಧವಿದೆ. ಅದನ್ನು ವಿರೋಧಿಸಿಯೇ ಪ್ರತಿಭಟನೆ ಹಮ್ಮಿಕೊಂಡಿದ್ದು ಈಗ ಜಿಲ್ಲಾ ನಾಯಕರು ವ್ಯತಿರಿಕ್ತ ಹೇಳಿಕೆ ನೀಡಿ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸಿದ್ದಾರೆ.

ಇದನ್ನೂ ಓದಿ: ದೇವಲ್ಕುಂದ: ಮೀನು ಸಂಸ್ಕರಣಾ ಘಟಕ ವಿರೋಧಿಸಿ ಬೃಹತ್ ಜನಾಂದೋಲನ – http://kundapraa.com/?p=9210 .

Devalkunda Fish refinary Unit. Villegians opposed and pretested (1) Devalkunda Fish refinary Unit. Villegians opposed and pretested (2) Devalkunda Fish refinary Unit. Villegians opposed and pretested (3) Devalkunda Fish refinary Unit. Villegians opposed and pretested (4) Devalkunda Fish refinary Unit. Villegians opposed and pretested (5)

Devalkunda Fish refinary Unit. Villegians opposed and pretested (6) Devalkunda Fish refinary Unit. Villegians opposed and pretested (7) Devalkunda Fish refinary Unit. Villegians opposed and pretested (8) Devalkunda Fish refinary Unit. Villegians opposed and pretested (9) Devalkunda Fish refinary Unit. Villegians opposed and pretested (10)

Leave a Reply