ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಅಂಚೆ ಇಲಾಖೆಯು ಯು.ಪಿ.ಯು ಇಂಟರ್‌ನ್ಯಾಷನಲ್ ಲೆಟರ್ ರೈಟಿಂಗ್ ಕಾಂಪಿಟೇಷನ್ ಪ್ರಯುಕ್ತ 9 ರಿಂದ 15 ವರ್ಷದ ಒಳಗಿನ ವಿದ್ಯಾರ್ಥಿಗಳಿಗೆ “Write a letter to a friend about why human connection matters in a digital world” ಎಂಬ ವಿಷಯದ ಕುರಿತು ಪತ್ರ ಲೇಖನ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು, ಸ್ಪರ್ಧಾಳುಗಳು ಪತ್ರ ಲೇಖನವನ್ನು ಹಿಂದಿ, ಇಂಗ್ಲೀಷ್ ಅಥವಾ ಪ್ರಾದೇಶಿಕ ಭಾಷೆಯಲ್ಲಿ 800 ಶಬ್ದಗಳು ಮೀರದಂತೆ ಕೈ ಬರಹದಲ್ಲಿ ನಿಗಧಿಪಡಿಸಿದ ಕೇಂದ್ರದಲ್ಲಿ ಬರೆಯಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ತಮ್ಮ ಶಾಲೆಯ ಮುಖಾಂತರ ಫೆಬ್ರವರಿ 14 ರ ಒಳಗಾಗಿ ಅಂಚೆ ಅಧೀಕ್ಷಕರು, ಉಡುಪಿ ಅಂಚೆ ವಿಭಾಗ, ಉಡುಪಿ ಇಲ್ಲಿಗೆ ಸಲ್ಲಿಸಬಹುದಾಗಿದೆ. ಅತ್ಯುತ್ತಮ ಮೂರು ಪತ್ರಲೇಖನಗಳಿಗೆ ಬಹುಮಾನಗಳನ್ನು ದೇಶೀಯ ಮಟ್ಟದಲ್ಲಿ ಕ್ರಮವಾಗಿ 50,000, 25,000, 10,000 ಮತ್ತು ಕರ್ನಾಟಕ ವೃತ್ತ ಮಟ್ಟದಲ್ಲಿ 25,000, 10,000 ಮತ್ತು 5,000 ರೂ. ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಅಂಚೆ ಅಧೀಕ್ಷಕರು, ಉಡುಪಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಾಲೆಗಳು ಪಠ್ಯದ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸುವಂತೆ ಮಾಡಬೇಕು. ಆಗ ಶಿಕ್ಷಣ ಪರಿಪೂರ್ಣವಾಗುತ್ತದೆ. ಆ ನಿಟ್ಟಿನಲ್ಲಿ ಎಲ್ಲರೂ ಶ್ರಮವಹಿಸಬೇಕು ಎಂದು ಹವ್ಯಾಸಿ ಯಕ್ಷಗಾನ ಕಲಾವಿದರು, ಲಂಡನ್‌ನಲ್ಲಿ ವೈಮಾನಿಕ ವಿಜ್ಞಾನಿಯಾಗಿ ಕೆಲಸ ಮಾಡುತ್ತಿರುವ ಯೋಗೀಂದ್ರ ಮರವಂತೆ ಹೇಳಿದರು. ಅವರು ಇಲ್ಲಿನ ಪಡುಕೋಣೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿಯನ್ನು ಯಕ್ಷಗಾನ ಚಂಡೆಯನ್ನು ಭಾರಿಸುವುದರ ಮೂಲಕ ಯಕ್ಷಗಾನ ತರಬೇತಿಗೆ ಚಾಲನೆ ನೀಡಿದರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ದಿನೇಶ್ ಪೂಜಾರಿ ಅವರು ರಾಷ್ಟ್ರ ಧ್ವಜಾರೋಹಣಗೈದು, ಅಧ್ಯಕ್ಷತೆ ವಹಿಸಿ ಮಕ್ಕಳಿಗೆ ಶುಭ ಹಾರೈಸಿದರು. ಪಡುಕೋಣೆ ಕೋಟೆಗುಡ್ಡೆ ಎಜುಕೇಶನ್ ಡೆವಲಪ್‌ಮೆಂಟ್ ಟ್ರಸ್ಟ್ ಅಧ್ಯಕ್ಷರಾದ ಸುಬ್ರಹ್ಮಣ್ಯ ಪಡುಕೋಣೆ ಉಪಸ್ಥಿತರಿದ್ದು, ಯಕ್ಷಗಾನದ ತರಗತಿಯನ್ನು ಟ್ರಸ್ಟ್ ಆಯೋಜಿಸಿರುವುದರ ಔಚಿತ್ಯದ ಕುರಿತು ಮಾತನ್ನಾಡಿ ಶುಭ ಹಾರೈಸಿದರು. ಯಕ್ಷ ಗುರುಗಳಾದ ಯೋಗೀಂದ್ರ ಆಚಾರ್ಯ ಗುಜ್ಜಾಡಿ ಅವರು ಯಕ್ಷಗಾನ ಕಲಿಕೆಯ ಮಹತ್ವವನ್ನು ವಿವರಿಸಿದರು. ಸಮಾರಂಭದಲ್ಲಿ ಟ್ರಸ್ಟ್ ಉಪಾಧ್ಯಕ್ಷರಾದ ರಾಮ ಪೂಜಾರಿ ಮುಲ್ಲಿಮನೆ, ಕಾರ್ಯದರ್ಶಿ ರಾಜೀವ ಪಡುಕೋಣೆ, ಕೋಶಾಧಿಕಾರಿ ಅರವಿಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಟೀಮ್ ಗಾನ ನಿನಾದ ಆರ್ಕೆಸ್ಟ್ರಾ ಪಾಂಡೇಶ್ವರ ಸಾಸ್ತಾನ ಇದರ ದಶಮಾನೋತ್ಸವ ಸಂಭ್ರಮದ ಅಂಗವಾಗಿ ರಾಜ್ಯಮಟ್ಟದ ಕರೋಕೆ ಗಾಯನ ಸ್ಪರ್ಧೆ ಕಾರ್ಯಕ್ರಮ ಫೆ.21ರಂದು ಸಾಸ್ತಾನದ ಪಾಂಡೇಶ್ವರ ಶಾಲಾ ವಠಾರದಲ್ಲಿ ಆಯೋಜಿಸಿದ್ದಾರೆ. ಈ ಹಿನ್ನಲ್ಲೆಯಲ್ಲಿ ಇದರ ಪೋಸ್ಟರ್ ಅನಾವರಣವನ್ನು ಕೋಟದ ಅಮೃತೇಶ್ವರಿ ದೇಗುಲದ ಸಭಾಂಗಣದಲ್ಲಿ ಮಣೂರು ಗೀತಾನಂದ ಪೌಂಡೇಶನ್‌ನ ಪ್ರವರ್ತಕ ಆನಂದ್ ಸಿ. ಕುಂದರ್ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಶ್ರೀಶ ಆಚಾರ್ಯ ಪಾಂಡೇಶ್ವರ, ಗಾಯಕ ಜನಾರ್ಧನ್ ಕುಂಭಾಶಿ, ಭವ್ಯ, ಕನಸು, ಅಮೃತೇಶ್ವರಿ ದೇಗುಲದ ಟ್ರಸ್ಟಿ ಚಂದ್ರ ಆಚಾರ್ಯ ಕೋಟ, ಸುಭಾಷ್ ಶೆಟ್ಟಿ, ಸ್ಥಳೀಯರು ಉಪಸ್ಥಿತರಿದ್ದರು ಹಾಗೂ ಫೆ.21 ರಂದು ಕಾರ್ಯಕ್ರಮದ ಜಿಲ್ಲೆ ಹಾಗೂ ರಾಜ್ಯಾದಂತ್ಯ ಗಾಯಕರ ಸಮ್ಮುಖದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಆಲೂರು ಗ್ರಾಮದ ಕಳಿಯಲ್ಲಿನ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯಕ್ಕೆ ಎನ್‌ಎಬಿಎಚ್ ಆಯುಷ್ ಮಾನದಂಡಗಳ ಪ್ರಕಾರ ಮೌಲ್ಯಮಾಪನ ಮಾಡಲ್ಪಟ್ಟಿರುವ ಚಿಕಿತ್ಸಾಲಯ ಎಂಬ ರಾಷ್ಟ್ರೀಯ ಮನ್ನಣೆ ಸಿಕ್ಕಿದೆ. ದಿಲ್ಲಿಯ ರಾಷ್ಟ್ರೀಯ ಆಸ್ಪತ್ರೆಗಳು ಹಾಗೂ ಆರೋಗ್ಯ ಸೇವೆಗಳ ಮಾನ್ಯತಾ ಮಂಡಳಿ (ನ್ಯಾಶನಲ್ ಆಕ್ರೆಡರೇಷನ್ ಬೋರ್ಡ್ ಫಾರ್ ಹಾಸ್ಪಿಟಲ್ಸ್ ಹಾಗೂ ಹೆಲ್ತ್ ಕೇರ್ ಪ್ರೊವೈಡರ್ಸ್- ಎನ್‌ಎಬಿಎಚ್)ಯ ತಜ್ಞರ ತಂಡ ಆಲೂರಿನ ಚಿತ್ರಕೂಟ ಚಿಕಿತ್ಸಾಲಯಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದೆ. ಅದರಂತೆ ಇಲ್ಲಿ ಉತ್ತಮ ಗುಣಮಟ್ಟದ ಹಾಗೂ ಸುರಕ್ಷತಾ ರೀತಿಯ ಆರೋಗ್ಯ ಸೇವೆ ಕಲ್ಪಿಸುತ್ತಿರುವುದನ್ನು ಪರಿಗಣಿಸಿ ಗುಣಮಟ್ಟದ ಆಸ್ಪತ್ರೆ ಎಂದು ಮಂಡಳಿಯು ಈ ವಿಶೇಷ ಮಾನ್ಯತೆ ನೀಡಿದೆ. 2010ರಲ್ಲಿ ಒಂದು ಬೆಡ್‌ನಿಂದ ಆರಂಭಗೊಂಡ ಚಿಕಿತ್ಸಾಲಯದಲ್ಲಿ ಡಾ. ರಾಜೇಶ್ ಬಾಯರಿ & ಡಾ. ಅನುಲೇಖ ಬಾಯರಿ ದಂಪತಿಯ ವಿಶೇಷ ಕಾಳಜಿಯ ಚಿಕಿತ್ಸೆಯಿಂದಾಗಿ ಇಂದು ಈ ಚಿಕಿತ್ಸಾಲಯ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ರೋಗಿಗಳನ್ನು ಸೆಳೆಯುತ್ತಿದೆ. ಜಗತ್ತಿನ ಸುಮಾರು 25ಕ್ಕೂ ಅಧಿಕ ದೇಶಗಳ ರೋಗಿಗಳು ಇಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಸಿಟಿ ಬಸ್‌ಗಳಿಗೆ ಕಡ್ಡಾಯವಾಗಿ ಬಾಗಿಲು ಅಳವಡಿಸಲು ಜೂ.1ರ ವರೆಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸಿಟಿ ಬಸ್ ಮಾಲಕರ ಸಭೆಯಲ್ಲಿ ಬಸ್‌ಗಳಿಗೆ ಬಾಗಿಲು ಅಳವಡಿಸುವ ವಿಚಾರವಾಗಿ ಸುದೀರ್ಘ ಚರ್ಚೆ ನಡೆಯಿತು. ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಎಲ್ಲ ಬಸ್‌ಗಳಿಗೆ ಬಾಗಿಲುಗಳನ್ನು ಶೀಘ್ರವಾಗಿ ಅಳವಡಿಸಬೇಕಾಗಿದೆ. ಆದರೆ ಮಾರ್ಚ್ ತಿಂಗಳವರೆಗೂ ಶಾಲೆ ಮತ್ತು ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯಲಿರುವುದರಿಂದ ಬಸ್ ಸೇವೆ ವ್ಯತ್ಯಯ ಆಗಬಾರದೆಂಬ ಉದ್ದೇಶದಿಂದ ಹಾಗೂ ಎಲ್ಲ ಬಸ್‌ಗಳಿಗೆ ಬಾಗಿಲುಗಳನ್ನು ಅಳವಡಿಸಲು ಸೀಮಿತ ಸಂಖ್ಯೆಯಲ್ಲಿ ಗ್ಯಾರೇಜ್ ಇರುವ ಕಾರಣ ಬಸ್‌ಗಳಿಗೆ ಬಾಗಿಲುಗಳನ್ನು ಅಳವಡಿಸಲು ಜೂ. 1ರ ವರೆಗೆ ಸಮಯವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಎಫ್ ಸಿ ನವೀಕರಣಕ್ಕೆ ಬಾಕಿ ಇರುವ ಬಸ್‌ಗಳಿಗೆ ಜೂ.1 ರೊಳಗಾಗಿ ಬಾಗಿಲನ್ನು ಅಳವಡಿಸುವ ಷರತ್ತಿಗೊಳಪಟ್ಟು ಅರ್ಹತೆ ಇದ್ದಲ್ಲಿ ಎಫ್ ಸಿ ನವೀಕರಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು. ಜೂ. 1ರ ಅನಂತರವೂ ಬಸ್‌ಗಳಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮತ್ತು ಶ್ರೇಷ್ಠತೆ ಪ್ರಶಸ್ತಿಗಳು (IFEE Awards)–2026 ಸಮಾರಂಭದಲ್ಲಿ, ಕುಂದಾಪುರದ ಅಂತಾರಾಷ್ಟ್ರೀಯ ಖ್ಯಾತಿಯ ಪವರ್ ಲಿಫ್ಟರ್ ಡಾ. ಸತೀಶ್ ಖಾರ್ವಿ ಅವರಿಗೆ ಜೀವನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪವರ್ ಲಿಫ್ಟಿಂಗ್ ಕ್ಷೇತ್ರದಲ್ಲಿ ಡಾ. ಸತೀಶ್ ಖಾರ್ವಿ ಸಾಧಿಸಿರುವ ವಿಶಿಷ್ಟ ಸಾಧನೆಗಳನ್ನು ಗುರುತಿಸಿ, ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಅವರ ದೀರ್ಘಕಾಲದ ಸಮರ್ಪಣೆ, ಶಿಸ್ತು ಮತ್ತು ಸಾಧನೆಯೇ ಈ ಗೌರವಕ್ಕೆ ಕಾರಣವಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಜನವರಿ 27ರಂದು ಬೆಂಗಳೂರು ನಗರದ ಕಲಾಗ್ರಾಮ ಸಂಸ್ಕೃತಿಕ ಭವನ, ಮಲ್ಲತಹಳ್ಳಿ – ನಾಗರಭಾವಿಯಲ್ಲಿ ವಿಜೃಂಭಣೆಯಿಂದ ನಡೆಯಿತು. ವಿವಿಧ ಕ್ಷೇತ್ರಗಳ ಗಣ್ಯರು, ಕಲಾವಿದರು ಮತ್ತು ಕ್ರೀಡಾಪಟುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರು ಗೌರವ ಸ್ವೀಕರಿಸಿ ಮಾತನಾಡಿ, “ಇದು ನನ್ನ ಜೀವನದ ಅತ್ಯಂತ ಅಮೂಲ್ಯ ಕ್ಷಣ. ನನ್ನ ಕ್ರೀಡಾ ಸಾಧನೆಯನ್ನು ಗುರುತಿಸಿ ಜೀವನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜನವರಿ 25ರಂದು ಪುದಿಚೆರಿಯಲ್ಲಿ ಐಡಿಯಲ್ ಪ್ಲೆ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ನಡೆದ 21ನೇ ರಾಷ್ಟ್ರಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ ಸ್ಪರ್ಧೆಯ ಜೆಡ್.ಆರ್.ಎಲ್ ಕೆಟಗರಿಯಲ್ಲಿ ನಮಸ್ಯಾ ಸುರೇಶ್ ಪ್ರಥಮ ರನ್ನರ್-ಅಪ್ ಪ್ರಶಸ್ತಿ ಪಡೆದರು. ರಾಷ್ಟ್ರದ ವಿವಿಧ ಭಾಗಗಳಿಂದ 2200 ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಮಸ್ಯಾಗೆ ಐಡಿಯಲ್ ಪ್ಲೆ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಾ ಕುಂದಾಪುರ ಕೇಂದ್ರದ ಮುಖ್ಯಸ್ಥ ಪ್ರಸನ್ನ ಕೆ.ಬಿ, ಬೋಧಕರಾದ ಮಹಾಲಕ್ಷ್ಮಿ ಮತ್ತು ದೀಪಾ ತರಬೇತಿ ನೀಡಿರುತ್ತಾರೆ. ಭಟ್ಕಳದ ಸುರೇಶ್ ಕುಮಾರ್ ನಾಯ್ಕ ಮತ್ತು ಸುಮಲತಾ ಸುರೇಶ್ ಅವರು ಪುತ್ರಿಯಾದ ನಮಸ್ಯಾ ಕುಂದಾಪುರದ ಓಕ್ ವುಡ್ ಇಂಡಿಯನ್ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಂಗಳೂರು: ರಾಜ್ಯದಲ್ಲಿ ಅಗ್ನಿಶಾಮಕ & ತುರ್ತು ಸೇವೆಗಳ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯಿಂದ ಆಕಸ್ಮಿಕ ಅಗ್ನಿ ಅವಘಡಗಳ ಸಮಯ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ ಆಗುತ್ತಿರುವ ಕಾರಣ ಪೂರ್ಣ ಪ್ರಮಾಣದ ಸಿಬ್ಬಂದಿ ನೇಮಕ ಮಾಡುವ ಬಗ್ಗೆ ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನ ಮಂಡಲ ವಿಶೇಷ ಅಧಿವೇಶನದಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಪ್ರಸ್ತಾಪ ಮಾಡಿದ್ದಾರೆ. ಚುಕ್ಕೆ ರಹಿತ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಡಾ. ಪರಮೇಶ್ವರ್ ಅವರು ಕರ್ನಾಟಕ ರಾಜ್ಯ ಅಗ್ನಿ ಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ವೃಂದಗಳ ಒಟ್ಟು 1763 ಹುದ್ದೆಗಳನ್ನು ನೇಮಕ ಮಾಡಲು ಅನುಮತಿ ನೀಡುವ ಪ್ರಸ್ತಾವನೆಯ ಸಹಮತಿಗಾಗಿ ಆರ್ಥಿಕ ಇಲಾಖೆಗೆ ಕಡತ ಸಲ್ಲಿಸಲಾಗಿದೆ ಎಂದು ಉತ್ತರಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಅಗ್ನಿ ಶಾಮಕ ದಳವನ್ನು ಮೇಲ್ದರ್ಜೆ ಗೇರಿಸಲು ಮತ್ತು ಹೊಸ ಅಗ್ನಿ ಶಾಮಕ ಠಾಣೆಗಳ ಬೇಡಿಕೆ ಪೂರೈಸಲು ಸರ್ಕಾರ ಕೈಗೊಂಡ ಕ್ರಮಗಳ ಬಗೆಗಿನ ಪೂರಕ ಪ್ರಶ್ನೆಗೆ ಉತ್ತರಿಸಿದ ಸಚಿವರು ಉಡುಪಿ ಜಿಲ್ಲೆಯಲ್ಲಿ ಅಗ್ನಿ ಶಾಮಕ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕರ್ನಾಟಕ ಬಾಲವಿಕಾಸ ಅಕಾಡೆಮಿ, ಧಾರವಾಡ ಇವರ ವತಿಯಿಂದ 2024 (ಜನವರಿ 2024 ರಿಂದ ಡಿಸೆಂಬರ್ 2024) ಹಾಗೂ 2025 (ಜನವರಿ-2025 ರಿಂದ ಡಿಸೆಂಬರ್-2025) ನೇ ಸಾಲಿನಲ್ಲಿ ಮಕ್ಕಳ ಕ್ಷೇತ್ರದಲ್ಲಿ ರಚಿಸಲ್ಪಟ್ಟ ಆಯ್ದ ಉತ್ತಮ ಪುಸ್ತಕಗಳಿಗೆ “ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿ”ಗಾಗಿ ಪುಸ್ತಕಗಳನ್ನು ಪ್ರದಾನ ಮಾಡಲು ಉದ್ದೇಶಿಸಲಾಗಿದ್ದು, 2024 ಹಾಗೂ 2025ನೇ ಸಾಲಿನ ಅವಧಿಯಲ್ಲಿ ಅಂದರೆ ಜನವರಿಯಿಂದ ಡಿಸೆಂಬರ್ ತಿಂಗಳ ಅಂತ್ಯದ ಅವಧಿಯಲ್ಲಿ ಪ್ರಕಟಗೊಂಡ ಸ್ವರಚಿತ ಕವನ ಸಂಕಲನ, ಕಥಾ ಸಂಕಲನ, ನಾಟಕ, (ಪಠ್ಯಾಧಾರಿತ ಬಿಟ್ಟು) ಮಕ್ಕಳ ಕಾದಂಬರಿ, ವೈಜ್ಞಾನಿಕ ಲೇಖನಗಳ ಸಂಕಲನ, ಅನುವಾದಿತ ಕೃತಿ (ಯಾವುದೇ ಪ್ರಕಾರದ ಮಕ್ಕಳ ಸಾಹಿತ್ಯ) ಮಕ್ಕಳ ಸಾಹಿತ್ಯ ವಿಮರ್ಶಾ ಕೃತಿ ಹೀಗೆ ಏಳು ಪ್ರಕಾರದ ಮಕ್ಕಳ ಸಾಹಿತ್ಯದ ಕೃತಿಗಳನ್ನು ಪ್ರಶಸ್ತಿಗಾಗಿ ಆಹ್ವಾನಿಸಲಾಗಿದೆ. ಪ್ರಶಸ್ತಿಗಾಗಿ ಪರಿಗಣಿಸಲು ಪ್ರತಿಯೊಂದು ಕೃತಿಯ 4 ಪ್ರತಿಗಳನ್ನು ಹಾಗೂ ಸ್ವವಿವರಗಳನ್ನೊಳಗೊಂಡ ಮನವಿಯೊಂದಿಗೆ ಫೆಬ್ರವರಿ 20 ರ ಒಳಗಾಗಿ ಯೋಜನಾಧಿಕಾರಿಗಳು, ಕರ್ನಾಟಕ ಬಾಲವಿಕಾಸ ಅಕಾಡೆಮಿ, ಚಂದ್ರಿಕಾ ಲೇ-ಔಟ್ ಹಿಂಭಾಗ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕರ್ನಾಟಕ ಬಾಲವಿಕಾಸ ಅಕಾಡೆಮಿ, ಧಾರವಾಡ ಇವರ ವತಿಯಿಂದ ರಾಜ್ಯ, ರಾಷ್ಟ್ರ ಮತ್ತು ಅಂತರ್ ರಾಷ್ಟ್ರ ಮಟ್ಟದಲ್ಲಿ ವಿಶೇಷ ಸಾಧನೆಗೈದ 18 ವರ್ಷದ ಒಳಗಿನ ಮಕ್ಕಳಿಂದ “ಬಾಲಗೌರವ ಪ್ರಶಸ್ತಿ” ಗೆ ಅರ್ಜಿ ಆಹ್ವಾನಿಸಲಾಗಿದೆ. ಕ್ರೀಡೆ, ಸಂಗೀತ, ನೃತ್ಯ, ಬಹುಮುಖ ಪ್ರತಿಭೆ, ನಟನೆ, ಚಿತ್ರಕಲೆ ಹಾಗೂ ವಿಜ್ಞಾನ ಮತ್ತು ಸಂಶೋಧನೆ ಯಾವುದಾದರೂ ಒಂದು ಕ್ಷೇತ್ರದಲ್ಲಿ ಅಸಾಧಾರಣಾ ಸಾಧನೆಯನ್ನು ಮಾಡಿ ಪ್ರಶಸ್ತಿ ಪಡೆದ ಪುರಸ್ಕೃತ ಮಕ್ಕಳು ಬಾಲಗೌರವ ಪ್ರಶಸ್ತಿಗಾಗಿ ಸ್ವಯಂ ದೃಢೀಕೃತ ನಕಲು ದಾಖಲೆಗಳೊಂದಿಗೆ ಹಾಗೂ ಸ್ವವಿವರಗಳನ್ನೊಳಗೊಂಡ ಮನವಿಯೊಂದಿಗೆ ಅರ್ಜಿಯನ್ನು ಫೆಬ್ರವರಿ 20ರ ಒಳಗಾಗಿ ಯೋಜನಾಧಿಕಾರಿಗಳು, ಕರ್ನಾಟಕ ಬಾಲವಿಕಾಸ ಅಕಾಡೆಮಿ, ಚಂದ್ರಿಕಾ ಲೇ-ಔಟ್ ಹಿಂಭಾಗ, ಕೆ.ಹೆಚ್.ಬಿ ಕಾಲೋನಿ, ಲಕಮನಹಳ್ಳಿ, ಧಾರವಾಡ-580004 ಈ ವಿಳಾಸಕ್ಕೆ ಕಳುಹಿಸಬಹುದಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಓಂದನೇ ಮಹಡಿ, 204, ‘ಬಿ ಬ್ಲಾಕ್’ ರಜತಾದ್ರಿ, ಉಡುಪಿ ಜಿಲ್ಲೆ ಅಥವಾ ದೂ.ಸಂಖ್ಯೆ: 0836-2465490 ಅನ್ನು ಸಂಪರ್ಕಿಸಬಹುದಾಗಿದೆ…
