Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಮೀನುಗಾರಿಕೆ ಋತು ಆರಂಭಗೊಂಡು ಎರಡೂವರೆ ತಿಂಗಳು ಕಳೆದರೂ, ಇದುವರೆಗೂ ಸೀಮೆಎಣ್ಣೆ ಹಂಚಿಕೆ ಮಾಡಿಲ್ಲ. ಪ್ರತಿ ನಾಡದೋಣೆಯವರಿಗೆ ತಲಾ ಮಾಸಿಕ 300ಲೀ ಸೀಮೆಣ್ಣೆಯನ್ನು ವಿತರಿಸುತ್ತೇವೆ ಎಂದ ರಾಜ್ಯ ಸರ್ಕಾರದ ಭರವಸೆ ಹುಸಿಯಾಗಿದೆ ಎಂದು ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ಅಧ್ಯಕ್ಷ ಎ. ಆನಂದ ಖಾರ್ವಿ ಆರೋಪಿಸಿದರು. ಉಪ್ಪುಂದ ನಾಡದೋಣಿ ಭವನದಲ್ಲಿ ಗುರುವಾರ ನಡೆದ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉತ್ತರಕನ್ನಡ ಜಿಲ್ಲೆಗಳ ಮೀನುಗಾರರ ಹಕ್ಕೊತ್ತಾಯ ಪ್ರತಿಭಟನೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಔಟ್‌ಬೋರ್ಡ್ ಇಂಜಿನ್ ಅಳವಡಿಸಿ ಸಾಂಪ್ರಾದಾಯಿಕ ಮೀನುಗಾರಿಕೆ ನಡೆಸುತ್ತಿರುವ ನಾಡದೋಣಿಗಳಿಗೆ ರಾಜ್ಯ ಸರ್ಕಾರ ಒದಗಿಸುತ್ತಿರುವ ಮಾಸಿಕ ತಲಾ 150ಲೀ. ಸೀಮೆಎಣ್ಣೆ ಪ್ರಮಾಣವನ್ನು 300ಲೀ.ಗೆ ಹೆಚ್ಚಿಸಿದೆ. ಪ್ರಸ್ತುತ ಈ ಪ್ರಮಾಣದಲ್ಲಿ ಸೀಮೆಎಣ್ಣೆಯನ್ನು ಹಂಚಿಕೆ ಮಾಡದೇ ತಲಾ 150 ಲೀ. ಸೀಮೆಎಣ್ಣೆ ಮಾತ್ರ ಪ್ರತಿ ತಿಂಗಳಿಗೆ ಒದಗಿಸುತ್ತಿದ್ದು, ಆದರೆ ಈ ಬಾರಿ ಅದು ಕೂಡ ದೊರೆತಿಲ್ಲ. ಮೂರು ಜಿಲ್ಲೆಗಳಲ್ಲಿ ಸುಮಾರು 8130 ಪರ್ಮಿಟ್ ಹೊಂದಿದ ದೋಣಿಗಳಿವೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,27: ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ವತಿಯಿಂದ ಉದ್ಯಮಿ, ಸಮಾಜ ಸೇವಕ ಡಾ. ಗೋವಿಂದ ಬಾಬು ಪೂಜಾರಿ ನೇತೃತ್ವದಲ್ಲಿ ಅಕ್ಟೋಬರ್ 30ರಂದು ಬೃಹತ್ ಉದ್ಯೋಗ ಮೇಳ ಜರುಗಲಿದೆ. ಈ ಕುರಿತು ಇಂದು ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶ್ರೀವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಡಾ.ಗೋವಿಂದ ಬಾಬು ಪೂಜಾರಿ ಮಾತನಾಡಿ, ಉಪ್ಪುಂದ ರಾಷ್ಟ್ರೀಯ ಹೆದ್ದಾರಿ – 66 ಬಳಿಯ ನಂದನವನ ಹಾಸ್ಪಿಟಾಲಿಟಿ ಮತ್ತು ಸರ್ವಿಸಸ್ – ಹೋಟೆಲ್ ಪ್ರಜ್ಞಾ ಸಾಗರ ಹಾಲ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ದೇಶದ ಪ್ರತಿಷ್ಠಿತ 30ಕ್ಕೂ ಅಧಿಕ ಕಂಪೆನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿದೆ. ಜಿಲ್ಲೆಯ ಪಿಯುಸಿ, ಬಿಕಾಂ, ಬಿಬಿಎಂ, ಬಿಸಿಎ, ಬಿಇ, ಬಿಎಸ್ಸಿ, ಡಿಪ್ಲೋಮಾ, ಐಟಿಐ ವಿದ್ಯಾರ್ಥಿಗಳಿಗೆ ಈ ಉದ್ಯೋಗ ಮೇಳ ಸುವರ್ಣವಕಾಶವಾಗಲಿದೆ ಎಂದರು. ಉದ್ಯೋಗ ಮೇಳದಲ್ಲಿ ಸಂದರ್ಶನದಲ್ಲಿ ಭಾಗಿಯಾಗಲಿರುವ ವಿದ್ಯಾರ್ಥಿಗಳು ಪೂರ್ವಭಾವಿಯಾಗಿ ಅ.28 ಹಾಗೂ 29ರಂದು ನಡೆಯಲಿರುವ ತರಬೇತಿಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ನಾಗರಾಜ್ ಯಡ್ತರೆ, ಸತ್ಯನಾರಾಯಣ ಗಾಣಿಗ ಇದ್ದರು. ನೊಂದಣಿಗೆ:https://forms.gle/8QKDfmammkiEJGdY7

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಿದ್ದಾಪುರ – ಹೊಸಂಗಡಿ ರೋಟರಿ ಕ್ಲಬ್ ಆತಿಥ್ಯದಲ್ಲಿ ಸಿದ್ಧಾಪುರದ ಹೋಟೆಲ್ ಪ್ರಶ್ವಿನ್ ಇನ್ ಸಭಾಂಗಣದಲ್ಲಿ ರೋಟರಿ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳು ಇತ್ತೀಚಿಗೆ ಜರುಗಿತು. ಸ್ವರ್ಧೆಯಲ್ಲಿ ರೋಟರಿ ಕ್ಲಬ್ ಕುಂದಾಪುರ ಚಿತ್ರಕಲೆ ( ಸೀನಿಯರ್ ಮತ್ತು ಜೂನಿಯರ್ ), ಏಕಪಾತ್ರಾಭಿನಯ, ಯುಗಳಗೀತೆ, ಸಿನಿಮಾರಂಗ, ಪ್ರಹಸನದಲ್ಲಿ ಪ್ರಥಮ ಬಹುಮಾನ, ಕಸದಿಂದ ರಸ, ಭಕ್ತಿಗೀತೆ, ಸಮೂಹಗಾನ, ಸಮೂಹ ನೃತ್ಯ ಗಳಲ್ಲಿ ದ್ವೀತಿಯ ಬಹುಮಾನ ಗಳಿಸುವುದರೊಂದಿಗೆ ಒಟ್ಟು 12 ಸ್ಪರ್ಧೆಗಳಲ್ಲಿ 10 ರಲ್ಲಿ ವಿಜೇತರಾಗಿ ಸಮಗ್ರ ಪ್ರಶಸ್ತಿ ಪಡೆದು ಚಾಂಪಿಯನ್ ಆಗಿದೆ. ರೋಟರಿ ಕುಂದಾಪುರದ ಅಧ್ಯಕ್ಷರಾದ ವೆಂಕಟೇಶ್ ನಾವುಂದ ನೇತೃತ್ವದಲ್ಲಿ ಕಾರ್ಯದರ್ಶಿ ನಾಗರಾಜ್ ಶೆಟ್ಟಿ ಆ್ಯನ್ಸ್ ಅಧ್ಯಕ್ಷೆ ಸ್ಮಿತಾ ವೆಂಕಟೇಶ ಸಹಕಾರ ಹಾಗೂ ಜಿಲ್ಲಾ ಸಾಂಸ್ಕೃತಿಕ ಸಭಾಪತಿ ಕೊಡ್ಲಾಡಿ ಸುಭಾಷ್ಚಂದ್ರ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ಸ್ವರ್ಧೆಯಲ್ಲಿ ಭಾಗವಹಿಸಿದ್ದರು. ಪ್ರಶಸ್ತಿ ವಿತರಣೆ ಸಮಾರಂಭದ ಅಧ್ಯಕ್ಷತೆಯನ್ನು ಸಿದ್ದಾಪುರ ಹೊಸಂಗಡಿ ರೋಟರಿ ಕ್ಲಬ್ ನ ಅದ್ಯಕ್ಷ ಶಂಕರನಾರಾಯಣ ಕನ್ನಂತ ವಹಿಸಿದ್ದರೆ, ಮುಖ್ಯ ಅತಿಥಿಗಳಾಗಿ ಪಿಡಿಜಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸರಕಾರಿ ಕಾಲೇಜಿನ ಓರ್ವ ಹಿರಿಯ ವಿದ್ಯಾರ್ಥಿ ಕನ್ನಡಿಗ ಗ್ರಾಮೀಣ ಪ್ರತಿಭೆ ಇವತ್ತು ಒಮನ್ ಅಸೋಸಿಯೇಶನ್ ಆಫ್ ಚಾರ್ಟಡ್ ಪಬ್ಲಿಕ್ ಅಕೌಂಟೆಂಟ್ಸ್ ಸದಸ್ಯರಾಗಿ ಆಯ್ಕೆಯಾದ ಮೊಟ್ಟಮೊದಲ ಭಾರತೀಯರು ಎನ್ನುವುದು ಹೆಮ್ಮೆಯ ಸಂಗತಿ ಎಂದು ಹಳೆ ವಿದ್ಯಾರ್ಥಿ ಸಂಘದಿಂದ ಸನ್ಮಾನಿಸಿ, ಅಧ್ಯಕ್ಷರಾದ ಪ್ರವೀಣ್ ಚಂದ್ರ ಶೆಟ್ಟಿ ಅವರು ಹೇಳಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರಿನಲ್ಲಿ ಹಳೆ ವಿದ್ಯಾರ್ಥಿ ಸಂಘದಿಂದ ಆಯೋಜಿಸಿದ್ದ ಸಿಎ ರಮಾನಂದ ಪ್ರಭುರವರಿಗೆ ಅಭಿನಂದನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ, ಐಸಿಎಐ ದೆಹಲಿಯಿಂದ ತಮ್ಮ ಅಧ್ಯಕ್ಷತೆಯ ಅವಧಿಯಲ್ಲಿ ಮಸ್ಕತ್ ಚಾಪ್ಟರ್ ಐಸಿಎಐಗೆ “ಬೆಸ್ಟ್ ಓವರ್ಸೀಸ್ ಅವಾರ್ಡ್” ತಂದುಕೊಟ್ಟ ಕೀರ್ತಿ ಹೆಗ್ಗಳಿಕೆ ರಮಾನಂದ ಪ್ರಭು ಅವರದ್ದು. ತಮ್ಮ ಶೈಕ್ಷಣಿಕ ಮತ್ತು ಸಾಮಾಜಿಕ ಕೊಡುಗೆಗಳಿಗಾಗಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡವರು, ತಮ್ಮ ಗೌರವಾಧ್ಯಕ್ಷ ಅವಧಿಯಲ್ಲಿ ಕಾಲೇಜಿಗೆ ಹೆಚ್ಚಿನ ಕೊಡುಗೆ ನೀಡುವಂತಾಗಲಿ ಎಂದರು. ಇದೇ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸಂಘದಿಂದ ಇನ್ನೂರು ಕುರ್ಚಿಗಳನ್ನು ದೇಣಿಗೆ ರೂಪದಲ್ಲಿ ಕಾಲೇಜಿಗೆ ಹಸ್ತಾಂತರಿಸಿದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಂಗಳೂರು: ಕಾಂತಾರ (Kantara) ಸಿನಿಮಾದ ಗೆಲುವು ರಿಷಬ್ ಶೆಟ್ಟಿ ಅವರಿಗೆ ಅಚ್ಚರಿ ಮೇಲೆ ಅಚ್ಚರಿ ನೀಡುತ್ತಿದೆ. ಭಾರತೀಯ ಸಿನಿಮಾ ರಂಗದ ಅನೇಕ ಕಲಾವಿದರು ಈ ಸಿನಿಮಾ ನೋಡಿ, ಮೆಚ್ಚಿಕೊಂಡಿದ್ದಾರೆ. ಅನೇಕ ತಾರೆಯರು ಸ್ವತಃ ರಿಷಬ್ ಶೆಟ್ಟಿ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಅವರು ಕಾಂತಾರ ಸಿನಿಮಾ ನೋಡಿ ರಿಷಬ್ ಅವರ ಜೊತೆ ಮಾತನಾಡಿ, ಬಳಿಕ ಟ್ವಿಟ್ ಮಾಡಿ ಸಿನಿಮಾದ ಬಗ್ಗೆ ಹಾಡಿ ಹೊಗಳಿದ್ದಾರೆ. ಕಾಂತಾರ ಸಿನಿಮಾ ವೀಕ್ಷಿಸಿ ಮೆಚ್ಚಿಕೊಂಡ ಸೂಪರ್ ಸ್ಟಾರ್ ರಜನಿಕಾಂತ್‘ಕಾಂತಾರ ಸಿನಿಮಾ ನೋಡುವಾಗ ರೋಮಾಂಚನ ಆಯಿತು. ರಿಷಬ್ ಶೆಟ್ಟಿ ಅವರಿಗೆ ಹ್ಯಾಟ್ಸಾಫ್. ಭಾರತೀಯ ಚಿತ್ರರಂಗದಲ್ಲಿ ಮಾಸ್ಟರ್ ಪೀಸ್ ಎನಿಸಿಕೊಂಡಿರುವ ಈ ಚಿತ್ರದ ಇಡೀ ತಂಡಕ್ಕೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೇ ರಿಷಬ್ ಶೆಟ್ಟಿ ಅವರಿಗೂ ಕರೆ ಮಾಡಿ ಅಭಿನಂದನೆ ತಿಳಿಸಿದ್ದಾರೆ. “The unknown is more than the known” no one could have said this…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪ್ರಪಂಚದಾದ್ಯಂತ ಸದ್ದು ಮಾಡುತ್ತಿರುವ ಕರಾವಳಿಯ ಮಣ್ಣಿನ ಕಥೆಯನ್ನು ಸಾರುವ ಕಾಂತಾರ ಸಿನಿಮಾವನ್ನು, ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ದೈವ ನರ್ತಕರು, ದರ್ಶನ ಪಾತ್ರಿಗಳು ಮತ್ತು ದೈವ ಸೇವೆ ಮಾಡುವವರ ಜೊತೆ ಬುಧವಾರ ಕುಂದಾಪುರದಲ್ಲಿ ವೀಕ್ಷಿಸಿದ್ದಾರೆ. ಕೋಟೇಶ್ವರದ ಭಾರತ್ ಸಿನಿಮಾಸ್’ನ ಒಂದು ಸ್ಕ್ರೀನ್ ಮುಂಗಡವಾಗಿ ಬುಕ್ ಮಾಡಿದ್ದ ಸಚಿವರು, ಉಡುಪಿ ಜಿಲ್ಲೆಯ ದೈವ ನರ್ತಕರು, ದರ್ಶನ ಪಾತ್ರಿಗಳು ಮತ್ತು ಸೇವೆ ಮಾಡುವವರ ಬೆಳಿಗ್ಗೆ 11:30ರ ಶೋ ವೀಕ್ಷಿಸುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ, ಕುಂದಾಪುರದವರಾದ ರಿಷಬ್ ಶೆಟ್ಟಿ ಅವರು ನಿರ್ದೇಶಿಸಿ, ನಟಿಸಿರುವ ಕಾಂತಾರ ಚಿತ್ರ ಸದ್ಯ ಟಾಕ್ ಆಫ್ ನೇಷನ್ ಎಂಬಂತಾಗಿದೆ. ದೈವಾರಾಧನೆ, ಕಂಬಳ ಸಹಿತ ಕರಾವಳಿ ಸಂಸ್ಕೃತಿಯನ್ನು ತೆರೆದಿಟ್ಟು, ಮನೋಜ್ಞವಾಗಿ ಅಭಿನಯಿಸಿದ ರಿಷಬ್ ಶೆಟ್ಟಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿರುವುದಲ್ಲದೇ ಹಲವು ದಾಖಲೆಗಳನ್ನು ಸಾಧಿಸಿ ಮುನ್ನುಗ್ಗುತ್ತಿದೆ. ಸಿನಿಮಾ ನೋಡುವುದಾಗಿ ನಿನ್ನೆಯೇ ಟ್ವಿಟರ್ ಮೂಲಕ ಮಾಹಿತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಅ.24: ರಾಷ್ಟದಾದ್ಯಂತ ನಂದಿನಿ ಕೋಟ್ಯಾಂತರ ಜನರಿಗೆ ದೀಪಾವಳಿಯ ಸಿಹಿ ಹಂಚುತ್ತಿದೆ. ಆದರೆ ಹೈನುಗಾರರ ಪಾಲಿಗೆ ಬೆಳಕಿನಹಬ್ಬ ಕಹಿ ಅನುಭವ ನೀಡಿದೆ. ಕರ್ನಾಟಕ ಹಾಲು ಮಹಾಮಂಡಳವು ಪಶು ಆಹಾರದ ಬೆಲೆಯನ್ನು ಹೆಚ್ಚಿಸಿರುವುದರಿಂದ, ಹಾಲಿನ ದರ ಏರುವ ನಿರೀಕ್ಷೆಯಲ್ಲಿದ್ದ ರಾಜ್ಯದ ಹೈನುಗಾರರು ಇನ್ನಷ್ಟು ಸಂಕಷ್ಟಕ್ಕೀಡಾಗಿದ್ದಾರೆ ಎಂದು ದಕ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಹಾಗೂ ಮೇಕೋಡು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದ್ದಾರೆ ಬೈಂದೂರು ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅತೀ ಹೆಚ್ಚು ಉಲು ಉತ್ಪಾದಿಸುವ ಹೈನುಗಾರರ ಪೈಕಿ ತಾನೂ ಒಬ್ಬನಾಗಿದ್ದು ಪ್ರತಿವರ್ಷ 70 ಸಾವಿರ ಲೀಟರ್ ಹಾಲು ಉತ್ಪಾದಿಸಲಾಗುತ್ತಿದೆ. ಕೆಎಂಎಫ್ ಪಶು ಆಹಾರದ ದರವನ್ನು ಶೇ.30ರಷ್ಟು ಏರಿಕೆ ಮಾಡಿರುವುದರಿಂದ, ಪ್ರತಿ 50ಕೆ.ಜಿ ನಂದಿನಿ ಗೋಲ್ಡ್ ಪಶು ಆಹಾರದ ಬೆಲೆ 1053ರೂ ನಿಂದ 1180ರೂ. ಮತ್ತು ಬೈಪಾಸ್ ಪಶು ಆಹಾರ 1175 ರೂ ನಿಂದ 1302ರೂ. ಗೆ ಹೆಚ್ಚಳವಾಗಿದೆ. ಇದರಿಂದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ದುಬೈ: ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ರಿ. ಮತ್ತು ಕನ್ನಡಿಗರು ದುಬಾಯಿ ಇವರ ಸಂಯುಕ್ತ ಆಶ್ರಯದಲ್ಲಿ ಅರಬ್ಬರ ನಾಡಿನಲ್ಲಿ ನಡೆಯಲಿರುವ ವಿಶ್ವ ಕನ್ನಡ ಹಬ್ಬದ ಪೂರ್ವಭಾವಿ ಸಮಾಲೋಚನಾ ಸಭೆ ಮತ್ತು ಪತ್ರಿಕಾಗೊಷ್ಠಿ ಕಾರ್ಯಕ್ರಮ ದುಬಾಯಿನ ಓಮೆಗಾ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಬೆಂಗಳೂರು ಇದರ ಅಧ್ಯಕ್ಷರಾದ ಡಾ. ಟಿ. ಶಿವಕುಮಾರ್ ನಾಗರ ನವಿಲೇ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಗಲ್ಫ್, ಕನ್ನಡಿಗರು ದುಬಾಯಿ ಮತ್ತು ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ಇದರ ಅಧ್ಯಕ್ಷರಾದ ಸದನ್ ದಾಸ್ ಮತ್ತು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಇದರ ಸಾಂಸ್ಕೃತಿಕ ಮತ್ತು ಕಲೆ ಸಮಿತಿಯ ರಾಜ್ಯಾಧ್ಯಕರು ಆಗಿರುವ ರವಿಸಂತೋಷ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಶ್ವ ಕನ್ನಡ ಹಬ್ಬ ಕಾರ್ಯಕ್ರಮದ ಮುಂದಿನ ರೂಪುರೇಷೆಗಳು ಮತ್ತು ಕಾರ್ಯಕ್ರಮದ ಯೋಜನೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಸದನ್ ದಾಸ್ ಅವರು ವಿವರಿಸಿದರು. ಮುಖ್ಯ ಅತಿಥಿ ರವಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೆಳಕಿನ ಹಬ್ಬ ದೀಪಾವಳಿಯ ಅಂಗವಾಗಿ ಬೈಂದೂರಿನ ಪ್ರಸಿದ್ಧ ಮೊಬೈಲ್ ಮಾರಾಟ ಸಂಸ್ಥೆ ಪ್ರೀತಿ ಮೊಬೈಲ್ಸ್‌ನಲ್ಲಿ ಮೊಬೈಲ್ ಪೋನ್ ಖರೀದಿಯ ಮೇಲೆ ವಿವಿಧ ಕೊಡುಗೆಗಳನ್ನು ನೀಡಲಾಗುತ್ತಿದೆ. ಯಾವುದೇ ಬ್ಯಾಂಡಿನ ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಐರನ್ ಬಾಕ್ಸ್, ಬ್ಲೂಟೂತ್, ಸ್ಕ್ರೀನ್ ರಿಪ್ಲೆಸ್’ಮೆಂಟ್, ಸ್ಪಾರ್ಟ್ ವಾಚ್ ಸೇರಿದಂತೆ ವಿವಿಧ ಉಡುಗೊರೆಗೊಳು ದೊರೆಯಲಿದೆ. ಅಲ್ಲದೇ ಪ್ರತೀ ಸ್ಮಾರ್ಟ್ ಫೋನ್ ಫೆಸ್ಟ್ ಮೂಲಕ ಟಿವಿಎಸ್ ಸ್ಕೂಟರ್, ಎಲ್.ಇ.ಡಿ ಟಿವಿ ಸೇರಿದಂತೆ ವಿವಿಧ ಉಡುಗೊರೆಗಳನ್ನು ಪಡೆದುಕೊಳ್ಳಬಹುದಾಗಿದೆ. ಇಲ್ಲಿ ಸ್ಮಾರ್ಟ್ ಫೋನ್’ಗಳನ್ನು ಸುಲಭ ಕಂತುಗಳಲ್ಲಿಯೂ ಖರೀದಿಸಬಹುದಾಗಿದ್ದು, ದೀಪಾವಳಿಯ ಸಂದರ್ಭ ಈ ಎಲ್ಲಾ ಆಫರ್ ಇರಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿಪ್ರೀತಿ ಮೊಬೈಲ್ಸ್ ಬೈಂದೂರುಪಂಚಾಯತ್ ಕಟ್ಟಡ, ಪೊಲೀಸ್ ಸ್ಟೇಷನ್ ಎದುರುಗಡೆ ಬೈಂದೂರುಮೊಬೈಲ್ – 8861087889 Advt News

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರಕ್ತದಾನದಿಂದ ಇನ್ನೋರ್ವರ ಜೀವ ಉಳಿಸುವುದು ಮಾತ್ರವಲ್ಲದೆ ರಕ್ತದಾನಿಗಳಿಗೂ ಸಹ ಹೃದಯ ಸಂಬಂಧಿ ಕಾಯಿಲೆಗಳ ನಿವಾರಣೆ, ಮಾನಸಿಕವಾಗಿ ಮತ್ತು ಕ್ರಿಯಾತ್ಮಕವಾಗಿ ಬದುಕುವ ಮನೋಭಾವ, ಉತ್ಸುಕತೆಯನ್ನು ಮತ್ತು ಸಾಮಾಜಿಕ ಸೇವೆಯನ್ನು ಮಾಡಿದ ಸಂತೃಪ್ತಿ ಮನೋಭಾವವನ್ನು ಮತ್ತು ಜೀವನ ಸಾರ್ಥಕತೆಯ ಸಾರವನ್ನು ‘ಸ್ವಯಂ ಪ್ರೇರಿತ ರಕ್ತದಾನ ನೀಡುತ್ತದೆ ಎಂದು ಶಿಬಿರವನ್ನು ಬೈಂದೂರು ಸ. ಪ್ರ. ದ. ಕಾಲೇಜಿನ ಪ್ರಾಂಶುಪಾಲರಾದ ಡಾ. ರಘು ನಾಯ್ಕ ಹೇಳಿದರು. ಮೊಗವೀರ ಯುವ ಸಂಘಟನೆ ರಿ. ಬೈಂದೂರು-ಶಿರೂರು ಘಟಕದ ಸಹಯೋಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರಿನಲ್ಲಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ರಿ. ಅಂಬಲಪಾಡಿ ಉಡುಪಿ, ರಕ್ತನಿಧಿ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಕುಂದಾಪುರ ಹಾಗೂ ಬೈಂದೂರು, ರಕ್ತನಿಧಿ ಕೇಂದ್ರ ಇವರುಗಳ ಸಹಯೋಗದಲ್ಲಿ ‘ಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರ’ ಮತ್ತು ‘ಯುವ ರೆಡ್ ಕ್ರಾಸ್ ಘಟಕ’ ಉದ್ಘಾಟಿಸಿ ಮಾತನಾಡಿದರು ಮೊಗವೀರ ಯುವ ಸಂಘಟನೆ ಬೈಂದೂರು-ಶಿರೂರು ಘಟಕದ ಅಧ್ಯಕ್ಷರಾದ ರವಿರಾಜ್ ಚಂದನ್ ಕಳವಾಡಿ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ…

Read More