Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಯಡ್ತರೆ ರಾಹುತನಕಟ್ಟೆಯ ಶ್ರೀ ರಾಮ ಭಜನಾ ಮಂಡಳಿಯಿಂದ ವರ್ಷಂಪ್ರತಿ ನಡೆಯುವ ಅಖಂಡ ಶ್ರೀ ರಾಮ ಭಜನಾ ಉತ್ಸವಕ್ಕೆ ಶನಿವಾರ ಚಾಲನೆ ನೀಡಲಾಯಿತು. ರಾಹುತನಕಟ್ಟೆಯ ಶ್ರೀ ರಾಹುತನ ಸನ್ನಿಧಿಯಲ್ಲಿ ಪ್ರತಿವರ್ಷದಂತೆ ಜರುಗುವ ಅಖಂಡ ರಾಮ ಭಜನೆಯಲ್ಲಿ ಪ್ರದೀಪ ಸ್ಥಾಪನೆಯೊಂದಿಗೆ ಸ್ಥಳೀಯ ಹಾಗೂ ಸುತ್ತಲಿನ ಭಜನಾ ತಂಡಗಳು ಸಂಗೀತ ಹಾಗೂ ವಾದ್ಯತಂಡದೊಂದಿಗೆ ವಿವಿಧ ಭಜನೆ ಪ್ರಸ್ತುತಗೊಳಿಸಿದರು. ರಾಮಭಜನೆಯ ಪೂಜೆ, ಅನ್ನಸಂತರ್ಪಣೆ ಕಾರ್ಯಕ್ರಮಗಳು ಈ ವೇಳೆ ಜರುಗಿದವು. ಈ ವೇಳೆ ಅಧ್ಯಕ್ಷರಾದ ಚಂದ್ರ ಮೊಗವೀರ, ಕಾರ್ಯದರ್ಶಿ ನಾಗರಾಜ ಮೊಗವೀರ ಸೇರಿದಂತೆ ಶ್ರೀ ರಾಮ ಭಜನಾ ಮಂಡಳಿಯ ಸದಸ್ಯರುಗಳು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಉಡುಪಿ ಜಿಲ್ಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ ಉಪವಿಭಾಗೀಯ ಸಾರ್ವಜನಿಕ ಆಸ್ಪತ್ರೆ ಕುಂದಾಪುರ ಇಲ್ಲಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ (AIISH) ಮೈಸೂರು ಇದರ ಔಟ್ರೀಚ್ ಸರ್ವೀಸ್ ಸೆಂಟರ್ (ಓ.ಎಸ್.ಸಿ) ನೂತನ ಕಟ್ಟಡ ಹಾಗೂ ನೂತನ ಡಯಾಲಿಸಿಸ್ ಘಟಕವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರು ನೆರವೇರಿಸಿದರು. ಆಸ್ಪತ್ರೆಯಲ್ಲಿ ಸುದೀರ್ಘ ಅವಧಿ ಸೇವೆ ಸಲ್ಲಿಸಿ ನಿವೃತ್ತರಾಗಿ, ಅಗಲಿರುವ ದಿ| ವಿಜಯಾ ಬಾಯಿ ಅವರ ಹೆಸರಿನಲ್ಲಿ ಅವರ ಪತಿ, ಪುರಸಭೆ ಮಾಜಿ ಸದಸ್ಯ ಶಿವರಾಮ ಪುತ್ರನ್, ಮಕ್ಕಳು ಮತ್ತು ಕುಟುಂಬಿಕರು ಸ್ಪೀಚ್ ಆ್ಯಂಡ್ ಹಿಯರಿಂಗ್ ಸೆಂಟರ್ ಕಟ್ಟಡ ಕೊಡುಗೆಯಾಗಿ ನೀಡಿದ್ದು ಅವರನ್ನು ಹಾಗೂ ದಾನಿಗಳಾದ ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ಅಧ್ಯಕ್ಷ ಸುರೇಶ್ ಮಲ್ಯ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಜಯಕರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಫೆ.10: ಜನ ಸಾಮಾನ್ಯರಿಗೆ ಜಿಲ್ಲೆಯ ಆರೋಗ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸುವುದರೊಂದಿಗೆ ಹೆಚ್ಚಿನ ಪ್ರಗತಿ ಸಾಧಿಸಿ ಬೇರೆ ಜಿಲ್ಲೆಗೆ ಮಾದರಿಯಾಗಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರು ತಿಳಿಸಿದರು. ಅವರು ಇಂದು ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಕಛೇರಿಯಲ್ಲಿ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನ ನಡೆಸಿ ಮಾತನಾಡುತ್ತಿದ್ದರು. ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಬೇಕೇಂಬುದೇ ಸರ್ಕಾರದ ಆಶಯವಾಗಿದ್ದು, ಆರೋಗ್ಯ ಸುಧಾರಣೆಗೆ ಅನೇಕ ಹೊಸ ಹೊಸ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ರೋಗಿಗಳಿಗೆ ಉಚಿತ ಔಷದೋಪಾಯಗಳನ್ನು ಒದಗಿಸಲು ಔಷದಿಗಳ ವಿತರಣಾ ವ್ಯವಸ್ಥೆಯಲ್ಲಿ ಸುಧಾರಣೆ ಕೈಗೊಳ್ಳಲಾಗುತ್ತಿದೆ ಪ್ರತಿ ತಾಲೂಕುಗಳಿಗೂ 108 ಅಂಬುಲೆನ್ಸ್ ಗಳನ್ನು ಹೊಸದಾಗಿ ನೀಡುವುದರೊಂದಿಗೆ ಅವುಗಳ ನಿರ್ವಾಹಣೆಗೂ ಸುಧರಣೆ ತರಲಾಗುತ್ತಿದೆ ಇವುಗಳ ಜೊತೆಗೆ ಸಹಾಯವಾಣಿಯನ್ನು ತೆರೆಯಲು ಸಹ ಮುಂದಾಗಿದ್ದೇವೆ ಎಂದರು. ಎಂಡೋಸಲ್ಪಾನ್ ಪೀಡಿತರಿಗೆ ಸೂಕ್ತ ಚಿಕಿತ್ಸೆ ನೀಡಲು ಕೆರಿಂಗ್ ಸೆಂಟರ್ ಅನ್ನು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶಿಕ್ಷ ಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ (ಸ್ಪೇಸ್) ನ ವಿದ್ಯಾರ್ಥಿಗಳು ಇನ್ಸ್ಟಿಟೂಟ್ ಆಫ್ ಚಾರ್ಟಡ್ ಅಕೌಂಟೆಂಟ್ಸ್ ಆಫ್ ಇಂಡಿಯ ಡಿಸೆಂಬರ್‌ 2023ರಲ್ಲಿ ನೆಡೆಸಿದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದುವುದರ ಮೂಲಕ ಸಾಧನೆಗೈದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ರಾಹುಲ್‌ ಪೂಜಾರಿ (275), ಸಮರ್ಥ ಆರ್‌ ಶೆಟ್ಟಿ (266), ಶ್ರೀವತ್ಸ ಜಿ. ಉಡುಪ (255), ಹೃತಿಕ್‌ ಎಮ್.‌ (237), ಆಯುಷ್‌ (236), ರೋಹನ್‌ ಆಚಾರ್‌ (236), ನಮನ (232), ನಿಖಿತಾ (231), ಗೌತಮಿ ಎನ್.‌ ನಾಯಕ್‌ (221), ಯಶಸ್‌ (219), ಸಮೃದ್ಧಿ ಎಸ್.‌ ಶೆಟ್ಟಿ (218), ಸುಹಾಸ್‌ ಎಸ್‌. (215), ತೇಜಸ್ವಿನಿ (215), ಆಕಾಶ್‌ (214), ವೈಷ್ಣವಿ ಬಿ. (209), ಶ್ರಾವ್ಯ (205), ಶ್ರುತಿ(204), ಅಮೋಘ್ ಶೆಟ್ಟಿ (202), ಹೇಮಂತ್ (200), ಶ್ರೇಯಸ್ (200), ಸುಶ್ರುತ್ ಕುಮಾರ್ (200), ವಿಸ್ಮಿತಾ ಆಚಾರಿ (200) ಅಂಕಗಳೊಂದಿಗೆ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಶಿಕ್ಷ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಜಿಲ್ಲಾ ಸಮಿತಿ ಉಡುಪಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕು ಸಮಿತಿ ಬೈಂದೂರು, ಡಾ. ಬಿ.ಆರ್.ಅಂಬೇಡ್ಕರ್ ಮಹಿಳಾ ಸಂಘ ಬೈಂದೂರು ಮತ್ತು ದಲಿತ ಸಂಘರ್ಷ ಸಮಿತಿ ಮಹಿಳಾ ಘಟಕ ತಾಲೂಕು ಸಮಿತಿ ಬೈಂದೂರು, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಗ್ರಾಮ ಸಮಿತಿ ಉಪ್ಪುಂದ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ವಿರೋಧಿ ಉಪ್ಪುಂದ ಗ್ರಾಪಂ ಅಧ್ಯಕ್ಷರನ್ನು ಸ್ಥಾನದಿಂದ ವಜಾಗೊಳಿಸಲು ಆಗ್ರಹಿಸಿ ಗ್ರಾಪಂ ಎದುರು ಶುಕ್ರವಾರ ಧರಣಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ದಲಿತ ದೌರ್ಜನ್ಯ ಜಾಗೃತಿ ಸಮಿತಿ ಉಡುಪಿ ಜಿಲ್ಲಾ ಸದಸ್ಯ ವಾಸುದೇವ ಮುದೂರು ಮಾತನಾಡಿ ಸ್ವಾತಂತ್ರ್ಯ ಬಂದು 7 ದಶಕಗಳು ಕಳೆದರೂ ಜಾತಿವಾದಿ ಮನಸ್ಥಿತಿ ನಿವಾರಣೆಯಾಗದಿರುವುದು ಸಮಾಜಕ್ಕೆ ಕಳಂಕ. ಸಂವಿಧಾನಬದ್ಧ ವ್ಯವಸ್ಥೆಯಡಿ ಆಯ್ಕೆಯಾದ ಜನಪ್ರತಿನಿಧಿಗಳು ಜನ ಹಾಗೂ ದೀನದಲಿತರ ಪರ ವಾಗಿ ಕೆಲಸ ಮಾಡಬೇಕೆ ಹೊರತು ಸರ್ವಾಧಿಕಾರಿ ಧೋರಣೆ ಸರಿಯಲ್ಲ ಎಂದು ಹೇಳಿದ್ದಾರೆ. ಜನರಲ್ಲಿ ಸಂವಿಧಾನದ ಆಶಯ, ಹಕ್ಕೊತ್ತಾಯದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇತ್ತೀಚಿಗೆ ಮುಂಬೈಯಲ್ಲಿ ಜರುಗಿದ 7ನೇ ಅಂತಾರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್ಶಿಪ್ 2024ರಲ್ಲಿ 11ರ ವಯೋಮಾನದ ವಿಭಾಗದ ಕುಮಿಟಿ ಹಾಗೂ ಕಟಾ ಎರಡೂ ವಿಭಾಗದಲ್ಲಿಯೂ ಖಾರ್ವಿಕೇರಿಯ ಸಾನಿಧ್ಯ ಸಂತೋಷ್ ನಾಯ್ಕ್ ಚಿನ್ನದ ಪದಕ ಪಡೆದಿದ್ದಾಳೆ. ಸಾನಿಧ್ಯ ಕೋಟೇಶ್ವರದ ಗುರುಕುಲ ಪಬ್ಲಿಕ್ ಸ್ಕೂಲಿನಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. 7ರ ವಯೋಮಾನದ ವಿಭಾಗದಲ್ಲಿ ಖಾರ್ವಿಕೇರಿಯ ಸಂಕಲ್ಪ್ ಸಂತೋಷ್ ನಾಯ್ಕ್ ಕುಮಿಟಿಯಲ್ಲಿ ಚಿನ್ನ ಮತ್ತು ಕಟಾದಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಈತ ಗುರುಕುಲ ಪಬ್ಲಿಕ್ ಸ್ಕೂಲಿನಲ್ಲಿ 2ನೇ ತರಗತಿಯ ವ್ಯಾಸಂಗ ಮಾಡುತ್ತಿದ್ದಾನೆ. ಕುಂದಾಪುರ ಖಾರ್ವಿಕೇರಿ‌ ನಿವಾಸಿ ಸಂತೋಷ್ ನಾಯ್ಕ್ ಹಾಗೂ ಶ್ಯಾಮಲಾ ನಾಯ್ಕ್ ದಂಪತಿಗಳ ಮಕ್ಕಳಾದ ಈರ್ವರೂ, ಕುಂದಾಪುರದ ಕೆಡಿಎಫ್ ಕರಾಟೆ ಸ್ಕೂಲಿನ ಕಿರಣ್ ಕುಂದಾಪುರ ಅವರಲ್ಲಿ ತರಬೇತಿ ಪಡೆಯುತ್ತಿದ್ದಾಳೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕಾರ್ಕಳ: ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನದ ಮಹತ್ವಾಕಾಂಕ್ಷಿ ಯೋಜನೆಯಾದ “ಮೊಬೈಲ್‌ ಬಿಡಿ, ಪುಸ್ತಕ ಹಿಡಿ” ಅಭಿಯಾನ ಯುವಜನರು ಮತ್ತು ವಿದ್ಯಾರ್ಥಿಗಳನ್ನು ಓದಿನ ಕಡೆಗೆ ಸೆಳೆಯಬೇಕು, ಮೊಬೈಲ್‌ ನ ಬಳಕೆಯನ್ನು ಹಿತಮಿತವಾಗಿ ಮಾಡಬೇಕೆಂಬ ಉದ್ದೇಶವಿರಿಸಿಕೊಂಡು ಕಾರ್ಕಳ, ಉಡುಪಿ, ಪುತ್ತೂರು, ಸುಳ್ಯದ ಶಾಲೆಗಳಿಗೆ ಮತ್ತು ಆಸಕ್ತ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸುವ ಕಾರ್ಯ ನಡೆಯಿತು. ಸಾಹಿತ್ಯಕ್ಷೇತ್ರ ಓದುಗರ ಬರ ಎದುರಿಸುತ್ತಿದೆ ಎಂಬ ಮಾತಿನ ನಡುವೆಯೂ “ದಿನಕ್ಕೊಂದು ಪುಸ್ತಕ”ವನ್ನು ಶಾಲೆಗಳಿಗೆ ತಲುಪಿಸುವ ಕಾರ್ಯ ಮಾಡಲಾಯಿತು. ಕಾರ್ಕಳ ತಾಲೂಕಿನ ಸ್ಥಳೀಯ ಶಾಲೆಗಳನ್ನು ಸಂದರ್ಶಿಸಿ ಪುಸ್ತಕವನ್ನು ಕೊಡಮಾಡಲಾಯಿತು. ಸಾರ್ವಜನಿಕರಿಂದ ಮತ್ತು ವಿದ್ಯಾಭಿಮಾನಿಗಳಿಂದ ಅಪೂರ್ವ ಬೆಂಬಲ ವ್ಯಕ್ತವಾಗಿ ಪ್ರತಿನಿತ್ಯ ಸುಮಾರು ಹತ್ತು ಪುಸ್ತಕಗಳನ್ನು ಪುಸ್ತಕ ದಾನಿಗಳ ನೆರವಿನೊಂದಿಗೆ ವಿತರಿಸಲಾಯಿತು. ಈ ಯೋಜನೆಗೆ ಸಾರ್ವಜನಿಕರು, ಪುಸ್ತಕ ಪ್ರಿಯರಿಂದ ರೂ. 28,110 ಸಂಗ್ರಹಗೊಂಡು, ದಿನಕ್ಕೆ 10 ಪುಸ್ತಕದಂತೆ ಒಟ್ಟು 312 ಪುಸ್ತಕಗಳನ್ನು ಜನವರಿ ತಿಂಗಳಿನಲ್ಲಿ ಕಾರ್ಕಳವಲ್ಲದೆ ದೂರದ ಸುಳ್ಯ, ಪುತ್ತೂರಿನ ಶಾಲೆಗಳನ್ನೂ ಆಯ್ಕೆಮಾಡಿ ಪುಸ್ತಕ ವಿತರಿಸಲಾಗಿದೆ. ಪುಸ್ತಕ ಸ್ವೀಕರಿಸಿದ ವಿದ್ಯಾರ್ಥಿಗಳೇ ಸ್ವತಃ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಳ್ಮಣ್: ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಚ್ಚೇರಿಪೇಟೆಯ ಶ್ರೀ ಮಹಮ್ಮಾಯೀ ಅಮ್ಮನವರ ಅಶ್ವತ್ಥ ಕಟ್ಟೆಯಲ್ಲಿ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸೇವಾ ಟ್ರಸ್ಟ್ (ರಿ.) ಸಚ್ಚೇರಿಪೇಟೆ ಹಾಗೂ ಹಿಂದು ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಫೆ.10ರ ಶನಿವಾರದಂದು ಸಾಯಂಕಾಲ ಗಂಟೆ 4.00ರಿಂದ 20ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಮಹೋತ್ಸವ ಜರಗಲಿದೆ. ರಾತ್ರಿ ಗಂಟೆ 7.00ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ಗಂಟೆ 7.30ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ರಾತ್ರಿ ಗಂಟೆ 8.00ರಿಂದ “ಸಂತ ಸಮಾಗಮ” ಧಾರ್ಮಿಕ ಸಭೆ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಒಡಿಯೂರು ಕ್ಷೇತ್ರದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ, ಮೂಡುಬಿದಿರೆ ಜೈನ ಮಠದ ಪರಮಪೂಜ್ಯ ಸ್ವಸ್ತಿ ಶ್ರೀ ಭಾರತಭೂಷಣ ಚಾರುಕೀರ್ತಿ ಭಟ್ಟಾರಕ ಪಂಡಿತಾಚರ್ಯವರ್ಯ ಮಹಾ ಸ್ವಾಮೀಜಿ, ಶ್ರೀಧಾಮ ಮಾಣಿಲ ಕ್ಷೇತ್ರದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ, ಗುರುಪುರ ಕ್ಷೇತ್ರ ವಜ್ರದೇಹಿ ಮಠದ ಪರಮಪೂಜ್ಯ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಶ್ರೀ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಛಾಯಾಗ್ರಹಣ ಅನ್ನುವತ್ತದ್ದು ಒಂದು ಅದ್ಬುತ ಕಲೆ ಕಠಿಣ ಪರಶ್ರಮ ಶೃದ್ದೆಯಿಂದ ಉತ್ತಮ ಬದುಕು ಕಟ್ಟಿಕೊಳ್ಳಲು ಸಾದ್ಯ ಜೀವನದಲ್ಲಿ ನಿರಾಶಾವಾದಕ್ಕೆ ಆಸ್ಪದ ನೀಡಬಾರದು ಎಂದು ಉದ್ಯಮಿ ಕಿದಿಯೂರು ಉದಯಕುಮಾರ್ ಶೆಟ್ಟಿ ಹೇಳಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ) ದಕ್ಷಿಣ ಕನ್ನಡ – ಉಡುಪಿ ಇದರ ಕುಂದಾಪುರ, ಬೈಂದೂರು ವಲಯದ ವತಿಯಿಂದ ಬೈಂದೂರಿನ ತಗ್ಗರ್ಸೆ ರೈತಮಿತ್ರ ಇಲ್ಲಿ ಆಯೋಜಿಸಿದ ಛಾಯಾ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬಗ್ಗೆ ಹಿಂದೆ ತಿಳಿದಿದ್ದೆ ಆದರೆ ಇಂದು ಈ ಕಾರ್ಯಕ್ರಮದ ಮೂಲಕ ಅದರ ವಿರಾಟ ರೂಪ ನೋಡುವ ಸೌಭಾಗ್ಯ ಒದಗಿದೆ. ಸಂಸ್ಥೆ ಇಷ್ಟೊಂದು ದೊಟ್ಟಮಟ್ಟಕ್ಕೆ ಬೆಳೆಯಬೇಕಾದರೆ ಇದರ ಹಿಂದೇ ಸಾಕಷ್ಟು ಜನರ ಪರಿಶ್ರಮವಿದೆ ಸಂಘಟನೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾದ್ಯ ಎಂದರು. ಕಾರ್ಯಕ್ರಮದ ಪದ್ಮಪ್ರಸಾದ್ ಜೈನ್ ಎಸ.ಕೆ.ಪಿ.ಎ,ದ.ಕ-ಉಡುಪಿ ಜಿಲ್ಲೆ ಇವರು ವಹಿಸಿದ್ದರು. ಕುಂದಾಪುರ ಬೈಂದೂರು ವಲಯದ ನೂತನ ಅಧ್ಯಕ್ಷರಾಗಿ ದಿವಾಕರ ಶೆಟ್ಟಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕನ್ನಡ ಸಾಹಿತ್ಯವು ದೊಡ್ಡ ಕುಟುಂಬದಿಂದ ಬೆರಳ ತುದಿ ಹಿಡಿದು ಕಿರಿಯರನ್ನು ಕರೆತಂದ, ಎಲ್ಲರೊಳಗೊಂದು ಸಾಕ್ಷಿಪ್ರಜ್ಞೆಯನ್ನು ಮೂಡಿಸಿದೆ. ನಮ್ಮ ನಡೆ, ನುಡಿ, ನೆಲ, ಜಲದ ಬಗ್ಗೆ ನಾವು ಮೈಮರೆತರೆ ಸಂಸ್ಕೃತಿ, ಸಂಸ್ಕಾರ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಬಂಧಗಳ ಮರೆವನ್ನು ಇನ್ನಷ್ಟು ಹೆಚ್ಚಿಸುವ ಅಪಾಯವಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೈಂದೂರು ತಾಲೂಕು ಘಟಕ ವತಿಯಿಂದ ಹಿರಿಯರಡೆಗೆ ನಮ್ಮ ನಡಿಗೆ 137ನೇ ಕಾರ್ಯಕ್ರಮದಲ್ಲಿ ಬೈಂದೂರು ಲಾವಣ್ಯದ ಹಿರಿಯ ರಂಗಕರ್ಮಿ, ಕರ್ನಾಟಕ ನಾಟಕ ಅಕಾಡೆಮಿಯ ಸುವರ್ಣ ರಂಗಸಾಧಕ ಪ್ರಶಸ್ತಿ ಪುರಸ್ಕೃತ ಬಿ. ಗಣೇಶ್ ಕಾರಂತ್ ಇವರನ್ನು ಸನ್ಮಾನಿಸಿ ಮಾತನಾಡಿದರು. ತಂತ್ರಜ್ಞಾನ ಪುಸ್ತಕ ಓದನ್ನು ದೂರ ಮಾಡಿದೆ. ಹಣದ ಪ್ರಾಧಾನ್ಯತೆ ಇಂಗ್ಲಿಷ್ ಭಾಷೆಯನ್ನು ಅನಿವಾರ್ಯಗೊಳಿಸಿದೆ. ಪುಸ್ತಕ ಪ್ರೇಮ ವ್ಯರ್ಥ ಕಾಲಹರಣಕ್ಕೆ, ಕೆಟ್ಟ ಹವ್ಯಾಸಕ್ಕೆ ಕಡಿವಾಣ ಹಾಕುತ್ತದೆ. ಶ್ರೇಷ್ಠ ಕೃತಿಗಳ ಓದು ಸಹನೆ, ಸಹಬಾಳ್ವೆಯಂತಹ ಬಾಳಿನ ಮೌಲ್ಯವನ್ನು…

Read More