Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಪ್ರಕೃತಿ, ಪರಂಪರೆ ಮತ್ತು ಸ್ವಾವಲಂಬನೆಯ ಸಮನ್ವಯ ರಷ್ಯಾದಲ್ಲಿ ಕಾಣಬಹುದು: ವಿವೇಕ್ ಆಳ್ವ
    alvas nudisiri

    ಪ್ರಕೃತಿ, ಪರಂಪರೆ ಮತ್ತು ಸ್ವಾವಲಂಬನೆಯ ಸಮನ್ವಯ ರಷ್ಯಾದಲ್ಲಿ ಕಾಣಬಹುದು: ವಿವೇಕ್ ಆಳ್ವ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಮೂಡುಬಿದಿರೆ: ಆಧುನಿಕ ನಗರಾಭಿವೃದ್ಧಿಯೊಂದಿಗೆ ಪ್ರಕೃತಿ ಸಂರಕ್ಷಣೆ, ಐತಿಹಾಸಿಕ ಪರಂಪರೆ, ಸಾರ್ವಜನಿಕ ಸಾರಿಗೆ, ಸ್ವಚ್ಛತೆ ಹಾಗೂ ದೇಶೀಯ ಉತ್ಪಾದನೆಗೆ ಸಮಾನ ಆದ್ಯತೆ ನೀಡಿರುವ ರಷ್ಯಾದ ಅಭಿವೃದ್ಧಿ ದೃಷ್ಟಿಕೋನವು ವಿಶಿಷ್ಟ ಅನುಭವ ನೀಡಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.

    Click Here

    Call us

    Click Here

    ಅವರು ಆಳ್ವಾಸ್‌ನ ರೋಸ್ಟ್ರಮ್ ಸ್ಪೀಕರ್ಸ್ಕ್ಲಬ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇತ್ತೀಚಿನ ರಷ್ಯಾ ಪ್ರವಾಸದ ಅನುಭವಗಳನ್ನು ಹಂಚಿಕೊಂಡ ಅವರು, ಒಂದು ದೇಶದ ಅಭಿವೃದ್ಧಿಯನ್ನು ಕೇವಲ ಎತ್ತರದ ಕಟ್ಟಡಗಳು ಮತ್ತು ಹೊಸ ಮೂಲಸೌಕರ್ಯಗಳಿಂದ ಅಳೆಯಲಾಗದು. ಪ್ರಕೃತಿಯೊಂದಿಗೆ ಬದುಕುವ ವಿಧಾನ, ಪರಂಪರೆಯನ್ನು ಉಳಿಸಿಕೊಳ್ಳುವ ಮನೋಭಾವ, ಸ್ಥಳೀಯ ಉತ್ಪಾದನೆಯ ಮೇಲಿನ ನಂಬಿಕೆ ಮತ್ತು ಸಾರ್ವಜನಿಕ ಬದುಕಿನ ಶಿಸ್ತು ಕೂಡ ಅಭಿವೃದ್ಧಿಯ ಮಾನದಂಡಗಳಾಗಬೇಕು ಎಂದರು.

    ನಗರಾಭಿವೃದ್ಧಿಯೊಂದಿಗೆ ಪ್ರಕೃತಿಯ ಸಹಬಾಳ್ವೆ:
    ರಷ್ಯಾದ ನಗರ ಯೋಜನೆಯಲ್ಲಿ ಪ್ರಕೃತಿಗೆ ನೀಡಿರುವ ಸ್ಥಾನ ತಮ್ಮ ಗಮನಸೆಳೆಯಿತು ಎಂದರು.  ವೇಗವಾಗಿ ಬೆಳೆಯುತ್ತಿರುವ ನಗರಗಳ ನಡುವೆಯೂ ವಿಶಾಲ ಹಸಿರು ಪ್ರದೇಶಗಳು, ಉದ್ಯಾನಗಳು, ವಾಕಿಂಗ್ ಪಥಗಳು ಹಾಗೂ ಸಾರ್ವಜನಿಕ ಸ್ಥಳಗಳನ್ನು ವ್ಯವಸ್ಥಿತವಾಗಿ ರೂಪಿಸಿರುವುದು ನಗರಾಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯನ್ನು ಸಮನ್ವಯಗೊಳಿಸುವ ಮಾದರಿಯಾಗಿದೆ. ಗಣಿಗಾರಿಕೆ ಸ್ಥಗಿತಗೊಂಡ ಮಾರ್ಬಲ್ ಗಣಿಗಾರಿಕೆ ಪ್ರದೇಶವೊಂದನ್ನು ಪರಿಸರ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಿ, ವರ್ಷಕ್ಕೆ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವಂತೆ ರೂಪಿಸಿರುವುದು ಗಮನಾರ್ಹ ಸಂಗತಿ ಎಂದರು.

    ಸಾರ್ವಜನಿಕ ಸಾರಿಗೆಯ ವ್ಯಾಪಕ ಬಳಕೆ, ವಿದ್ಯುತ್ ಬಸ್‌ಗಳ ಅಳವಡಿಕೆ ಹಾಗೂ ಪಾದಚಾರಿಗಳಿಗೆ ಅನುಕೂಲವಾಗುವ ಪ್ರದೇಶಗಳ ನಿರ್ಮಾಣವೂ ರಷ್ಯಾದ ನಗರಗಳ ಪ್ರಮುಖ ವೈಶಿಷ್ಟ್ಯಗಳಾಗಿವೆ. ಮಾಸ್ಕೋ ಮೆಟ್ರೊದ ಹಲವು ನಿಲ್ದಾಣಗಳು ಕೇವಲ ಸಾರಿಗೆ ಕೇಂದ್ರಗಳಾಗಿರದೆ, ಸೋವಿಯತ್ ಕಾಲದ ಇತಿಹಾಸ ಮತ್ತು ವಾಸ್ತುಶಿಲ್ಪವನ್ನು ಪರಿಚಯಿಸುವ ಸಾಂಸ್ಕೃತಿಕ ತಾಣಗಳಂತಿವೆ. ಆಧುನಿಕ ಮೂಲಸೌಕರ್ಯದೊಂದಿಗೆ ಇತಿಹಾಸವನ್ನು ಜೋಡಿಸಿರುವ ಈ ಪರಿಕಲ್ಪನೆಯನ್ನು ಭಾರತೀಯ ನಗರಗಳಲ್ಲಿಯೂ ಅಳವಡಿಸಿಕೊಳ್ಳಬಹುದು ಎಂದರು.

    ಆಧುನಿಕತೆಯ ನಡುವೆಯೂ ಪರಂಪರೆಗೆ ಸ್ಥಾನ:
    ನಗರೀಕರಣದ ವೇಗ ಹೆಚ್ಚಿದಂತೆ ಐತಿಹಾಸಿಕ ಅಸ್ಮಿತೆ ಕಳೆದುಹೋಗಬೇಕೆಂದಿಲ್ಲ. ಆಧುನಿಕ ಕಟ್ಟಡಗಳು ಮತ್ತು ಮೂಲಸೌಕರ್ಯಗಳ ಜತೆಗೆ ಉದ್ಯಾನಗಳು, ಶಿಲ್ಪಕಲೆ, ಐತಿಹಾಸಿಕ ಕಟ್ಟಡಗಳು ಹಾಗೂ ಸಾಂಸ್ಕೃತಿಕ ಗುರುತುಗಳನ್ನು ಉಳಿಸಿಕೊಳ್ಳುವ ಪ್ರಯತ್ನ ರಷ್ಯಾದಲ್ಲಿ ಕಂಡುಬರುತ್ತದೆ.  ಆಧುನಿಕತೆ ಎಂದರೆ ಪರಂಪರೆಯನ್ನು ಅಳಿಸುವುದಲ್ಲ. ಅಭಿವೃದ್ಧಿಯ ಜತೆಗೆ ಸ್ಥಳೀಯ ಇತಿಹಾಸ, ಸಂಸ್ಕೃತಿ ಮತ್ತು ವಾಸ್ತುಪರಂಪರೆಯನ್ನೂ ಉಳಿಸಿಕೊಳ್ಳುವ ದೃಷ್ಟಿಕೋನ ಅಗತ್ಯ, ಎಂದರು.

    Click here

    Click here

    Click here

    Call us

    Call us

    ಆಹಾರ ಭದ್ರತೆಗೆ ದೇಶೀಯ ಉತ್ಪಾದನೆ:
    ಆಹಾರ ಭದ್ರತೆಯ ವಿಚಾರದಲ್ಲೂ ರಷ್ಯಾದ ದೇಶೀಯ ಉತ್ಪಾದನೆಗೆ ನೀಡಿರುವ ಆದ್ಯತೆ ಗಮನಾರ್ಹವಾಗಿದೆ.  ವಿಶಾಲ ಭೂಪ್ರದೇಶ ಮತ್ತು ಕೃಷಿ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಂಡು, ಜನರ ಆಹಾರ ಅಗತ್ಯಗಳನ್ನು ಸಾಧ್ಯವಾದಷ್ಟು ದೇಶೀಯ ಉತ್ಪಾದನೆಯ ಮೂಲಕ ಪೂರೈಸುವ ವ್ಯವಸ್ಥೆಗೆ ಒತ್ತು ನೀಡಲಾಗಿದೆ ಎಂದರು. ಗೋಧಿ ಹಾಗೂ ವಿವಿಧ ಧಾನ್ಯಗಳಿಂದ ಹಿಡಿದು ಹಣ್ಣುಗಳು, ಬೆರಿಗಳು ಮತ್ತು ಇತರ ಕೃಷಿ ಉತ್ಪನ್ನಗಳವರೆಗೆ ಸ್ಥಳೀಯ ಉತ್ಪಾದನೆ ಮತ್ತು ಬಳಕೆಗೆ ಆದ್ಯತೆ ನೀಡಿರುವುದು ಗಮನ ಸೆಳೆಯುತ್ತದೆ. ಆಹಾರಕ್ಕಾಗಿ ಹೊರಗಿನ ಅವಲಂಬನೆಯನ್ನು ಕಡಿಮೆ ಮಾಡಿಕೊಂಡು, ದೇಶೀಯ ಉತ್ಪಾದನಾ ವ್ಯವಸ್ಥೆಯನ್ನು ಬಲಪಡಿಸುವ ರಷ್ಯಾದ ವಿಧಾನವು ಆಹಾರ ಸ್ವಾವಲಂಬನೆಯ ಮಹತ್ವವನ್ನು ಸಾರುತ್ತದೆ ಎಂದರು.  

    ಸ್ವಚ್ಛತೆ, ಅಭಿಯಾನಕ್ಕಿಂತ ನಾಗರಿಕ ಜವಾಬ್ದಾರಿ:
    ರಷ್ಯಾದ ನಗರಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಂಡ ಸ್ವಚ್ಛತೆಯನ್ನು ಉಲ್ಲೇಖಿಸಿದ ಅವರು, ಸ್ವಚ್ಛತೆ ಒಂದು ದಿನದ ಅಭಿಯಾನವಾಗದೆ ನಾಗರಿಕ ಜೀವನದ ದೈನಂದಿನ ಸಂಸ್ಕೃತಿಯಾಗಬೇಕು ಎಂದರು. ಸ್ವಚ್ಛತೆ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ. ಕಾನೂನು, ಅಭಿಯಾನ ಅಥವಾ ದಂಡದ ಮೂಲಕ ಮಾತ್ರ ಅದನ್ನು ದೀರ್ಘಕಾಲ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಸಾರ್ವಜನಿಕ ಸ್ಥಳಗಳು ನಮ್ಮದೇ ಎಂಬ ನಾಗರಿಕ ಪ್ರಜ್ಞೆ ಬೆಳೆದಾಗ ಮಾತ್ರ ಸ್ವಚ್ಛತೆ ಶಾಶ್ವತವಾಗುತ್ತದೆ ಎಂದರು.

    ಭಾಷೆ ಮತ್ತು ಸಂಸ್ಕೃತಿ ಸಂಬಂಧದ ಸೇತುವೆ:
    ರಷ್ಯಾ ಪ್ರವಾಸವು ಅಲ್ಲಿನ ಜನಜೀವನ, ಕುಟುಂಬ ವ್ಯವಸ್ಥೆ, ಸಂಸ್ಕೃತಿ ಹಾಗೂ ಭಾಷೆಯ ಕುರಿತಾದ ಹಲವು ಒಳನೋಟಗಳನ್ನು ನೀಡಿದೆ. ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಅಲ್ಲಿನ ಜನರು ಹೊಂದಿರುವ ಗೌರವವು ಗಮನಾರ್ಹವಾಗಿದ್ದು, ಯಾವುದೇ ಸಮಾಜವನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಅದರ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸುವುದು ಅಗತ್ಯ. ಭೌಗೋಳಿಕವಾಗಿ ಭಾರತ ಮತ್ತು ರಷ್ಯಾ ದೂರದಲ್ಲಿದ್ದರೂ ಕುಟುಂಬ ಮೌಲ್ಯಗಳು, ಸಂಪ್ರದಾಯಗಳ ಮೇಲಿನ ಒಲವು ಸೇರಿದಂತೆ ಕೆಲವು ಸಾಮಾಜಿಕ–ಸಾಂಸ್ಕೃತಿಕ ಸಾಮ್ಯತೆಗಳಿವೆ. ಕರ್ನಾಟಕದ ಗಂಡಭೇರುಂಡದಂತಹ ಸಾಂಸ್ಕೃತಿಕ ಸಂಕೇತಕ್ಕೂ ರಷ್ಯಾದ ರಾಷ್ಟ್ರೀಯ ಲಾಂಛನದಲ್ಲಿರುವ ಸಂಕೇತಕ್ಕೂ ಇರುವ ದೃಶ್ಯ ಸಾಮ್ಯತೆ ಕುತೂಹಲ ಮೂಡಿಸುತ್ತದೆ ಎಂದರು.

    ಅಂತರರಾಷ್ಟ್ರೀಯ ಪ್ರವಾಸಗಳು ಕೇವಲ ಹೊಸ ಸ್ಥಳಗಳನ್ನು ವೀಕ್ಷಿಸುವ ಅನುಭವಕ್ಕೆ ಸೀಮಿತವಾಗಬಾರದು. ಅಲ್ಲಿನ ಉತ್ತಮ ಪದ್ಧತಿಗಳನ್ನು ಅಧ್ಯಯನ ಮಾಡಿ, ಅವುಗಳಲ್ಲಿ ನಮ್ಮ ಸಾಮಾಜಿಕ, ಸಾಂಸ್ಕೃತಿಕ ಮತ್ತು ಪರಿಸರದ ಹಿನ್ನೆಲೆಗೆ ಸೂಕ್ತವಾದ ಅಂಶಗಳನ್ನು ಗುರುತಿಸಿ ಅಳವಡಿಸಿಕೊಳ್ಳಬೇಕು ಎಂದರು.

    ರಷ್ಯಾದಲ್ಲಿ ಕಂಡ ಪ್ರತಿಯೊಂದು ಮಾದರಿಯನ್ನೂ ನೇರವಾಗಿ ನಮ್ಮಲ್ಲಿ ಅಳವಡಿಸಿಕೊಳ್ಳಬೇಕೆಂದಿಲ್ಲ. ಆದರೆ ಅಲ್ಲಿನ ಅನುಭವಗಳ ಹಿಂದಿರುವ ಚಿಂತನೆ, ಯೋಜನೆ ಮತ್ತು ವ್ಯವಸ್ಥೆಯನ್ನು ಅರ್ಥಮಾಡಿಕೊಂಡು, ನಮ್ಮ ಪರಿಸ್ಥಿತಿಗೆ ತಕ್ಕ ಪರಿಹಾರಗಳನ್ನು ರೂಪಿಸುವುದು ಮುಖ್ಯ ಎಂದರು.

    ಕಾರ್ಯಕ್ರಮದಲ್ಲಿ ರೋಸ್ಟ್ರಮ್ ವೇದಿಕೆಯ ಸಂಚಾಲಕಿ ಡಾ. ದೀಪಾ ಕೊಠಾರಿ, ಹಳೆಯಂಗಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಾಯೀಶ್ ಚೌಟ ಉಪಸ್ಥಿತರಿದ್ದರು. ಹಿತಾ ಕಾರ್ಯಕ್ರಮ ನಿರೂಪಿಸಿದರು.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಬೈಂದೂರು ಸ.ಪ್ರ.ದ ಕಾಲೇಜಿನಲ್ಲಿ ರ‍್ಯಾಗಿಂಗ್‌ ಹಾಗೂ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮ

    30/09/2026

    ಉಡುಪಿ ಜಿಲ್ಲಾ ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿಗೆ ಐವರು ಆಯ್ಕೆ

    30/09/2026

    ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಸುಪ್ರಿಯಾ ಕಾಮತ್‌ ಬ್ಯಾನರ್ಜಿ ಸ್ಕಾಲರ್‌ಶಿಪ್‌ ಹಸ್ತಾಂತರ

    30/09/2026
    Leave A Reply Cancel Reply

    eight − four =

    Call us

    Click Here

    Call us

    Call us

    Call us
    Highest Viewed Recently
    • ಸಿದ್ದಾಪುರ ಸ.ಮಾ.ಹಿ.ಪ್ರಾ. ಶಾಲೆಗೆ ಕಂಪ್ಯೂಟರ್‌ ಹಾಗೂ ಪ್ರಿಂಟರ್‌ ಹಸ್ತಾಂತರ
    • ಪ್ರಕೃತಿ, ಪರಂಪರೆ ಮತ್ತು ಸ್ವಾವಲಂಬನೆಯ ಸಮನ್ವಯ ರಷ್ಯಾದಲ್ಲಿ ಕಾಣಬಹುದು: ವಿವೇಕ್ ಆಳ್ವ
    • ಸೇವಾ ನಿವೃತ್ತಿಗೊಂಡ ಕುಂದಾಪುರ ಜೂನಿಯರ್ ಕಾಲೇಜಿನ ಪ್ರಾಂಶುಪಾಲರಾದ ರಾಮಕೃಷ್ಣ ಬಿ.ಜಿ. ಅವರಿಗೆ ಸನ್ಮಾನ
    • ಬೆಂಗಳೂರು ಬಂಟರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
    • ಡಾ. ರಾಜೇಶ್ ಬಾಯರಿ ಅವರಿಗೆ ಪ್ರತಿಷ್ಠಿತ ಆಯುರ್ ಭೂಷಣ ಪ್ರಶಸ್ತಿ ಪ್ರದಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.