ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಸಿದ್ದಾಪುರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಕಲಿಕೆಗೆ ಸಹಾಯಕವಾಗುವಂತೆ ಮುತ್ತೂಟ್ ಫೈನಾನ್ಸ್ ಲಿಮಿಟೆಡ್ ನವರು ನೀಡಿದ ಮೂರು ಕಂಪ್ಯೂಟರ್ ಹಾಗೂ ಒಂದು ಪ್ರಿಂಟರ್ ಹಸ್ತಾಂತರಿಸಲಾಯಿತು. ಮಂಗಳೂರು ವಲಯದ ಸಿ.ಎಸ್.ಆರ್ ಯೋಜನೆಯ ಮುಖ್ಯಸ್ಥರಾದ ಪ್ರಸಾದ್ ಕುಮಾರ್ ಅವರು ಮುಖ್ಯ ಶಿಕ್ಷಕರಾದ ಸೋಮ ನಾಯಕ್ ಮತ್ತು ಎಸ್‌ಡಿಎಂಸಿ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು.

ಶಾಲಾ ವಾರ್ಷಿಕೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಸಂಪಿಗೇಡಿ ಸಂಜೀವ ಶೆಟ್ಟಿ ಮಾತನಾಡಿ, ಶಾಲೆಯ ಉತ್ತರೋತ್ತರ ಪ್ರಗತಿಯನ್ನು ಕೊಂಡಾಡಿದರು. ಈ ಎಲ್ಲಾ ಪ್ರಗತಿಗೆ ಕಾರಣೀಕರ್ತರಾದ ವಾರ್ಷಿಕೋತ್ಸವ ಸಮಿತಿ ಮತ್ತು ಎಸ್‌ಡಿಎಂಸಿಯನ್ನು ಅಭಿನಂದಿಸಿದರು.
ಕಾರ್ಯಕ್ರಮವನ್ನು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್ ಅವರು ಸಿಎಸ್ಆರ್ ಸಹಾಯಧನವನ್ನು ಶಾಲೆಗೆ ತಂದ ಬಗೆಯನ್ನು ವಿವರಿಸಿದರು.
ನೆಲ್ಸನ್ ಡಿಸೋಜ ಮುತ್ತೂಟ್ ಫೈನಾನ್ಸ್ ಲಿಮಿಟೆಡ್ ಉಡುಪಿ ಕ್ಲಸ್ಟರ್ನ ಮುಖ್ಯಸ್ಥರನ್ನು ಸಂಪಿಗೆಡಿ ಸಂಜೀವ್ ಶೆಟ್ಟಿ ಅವರು ಗೌರವಿಸಿದರು. ಕಾರ್ಯಕ್ರಮದಲ್ಲಿ ಮುತ್ತೂಟ್ ಫೈನಾನ್ಸ್‌ನ ಪ್ರವೀಣ್ ಪ್ರಾಂಕ್, ಮುತ್ತೂಟ್ ಫೈನಾನ್ಸ್ ಸಿದ್ದಾಪುರ ಶಾಖೆಯ ಮುಖ್ಯಸ್ಥರಾದ ಸಂದೀಪ್ ಖಾರ್ವಿ, ವಾರ್ಷಿಕೋತ್ಸವ ಸಮಿತಿಯ ಖಜಾಂಚಿಯಾದ ಗಣೇಶ್ ಶೇಟ್, ಕಾರ್ಯದರ್ಶಿಯಾದ ಸತ್ಯನಾಥ ಆಚಾರ್ಯ, ಸರ್ಕಾರಿ ಪ್ರೌಢ ಶಾಲೆಯ ಉದಯ್ ಬಳಗಾರ್, ಗೋಪಾಲ್ ಕಾಂಚನ್, ಭಾಸ್ಕರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸೋಮ ನಾಯ್ಕ ಅವರು ಅತಿಥಿಗಳನ್ನು ಸ್ವಾಗತಿಸಿ, ಶ್ರೀಧರ್ ಎಸ್. ಸಿದ್ದಾಪುರ ನಿರೂಪಿಸಿ, ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸುಂದರ್ ನಾಯ್ಕ ವಂದಿಸಿದರು.
















