Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಬ್ರಹ್ಮಾವರ: ನಾಟಕಗಳಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲೇ ಹೆಸರು ಮಾಡಿದ ಭೂಮಿಕಾ ರಿ. ಹಾರಾಡಿ ತನ್ನ 25ನೇ ವರ್ಷದ ಸಂಭ್ರಮದಲ್ಲಿದ್ದು, ಈ ಪ್ರಯುಕ್ತ ಭೂಮಿಕಾ ತಂಡವು ತನ್ನ ವಾರ್ಷಿಕ ಸಂಭ್ರಮ ‘ಬಣ್ಣ’ ವಿಶಿಷ್ಠವಾಗಿ ಆಚರಿಸುತ್ತಿದೆ. ಬ್ರಹ್ಮಾವರದ ಎಸ್ಎಂಎಸ್ ಪದವಿ ಪೂರ್ವ ಕಾಲೇಜಿನ ಮಕ್ಕಳ ಮಂಟಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಎ.6ರಿಂದ ಎ.13ರ ರ ತನಕ ನಡೆಯಲಿರುವ ನಾಟಕೋತ್ಸವದಲ್ಲಿ ಎ.6ರಂದು ಶಿಕ್ಷಕರ ಬಳಗ ಉಡುಪಿ ಇವರ ಬರ್ಬರೀಕ, ಎ.7ರಂದು ರಂಗಾಯಣ ಶಿವಮೊಗ್ಗ ಇವರ ಹಕ್ಕಿಕಥೆ, ಎ.8ರಂದು ನವೋದಯ ಮೈಸೂರು ಪ್ರಸ್ತುತಿಯ ಅಯೋಧ್ಯಾ ಕಾಂಡ, ಎ.9ರಂದು ರಂಗಸೌರಭ ಬೆಂಗಳೂರು ಅಭಿನಯದ ನಾಟಕ ಮಾವಿಗುಡಿ ಕಾಲೋನಿ, ಎ.10ರಂದು ಅಮೋಘ ಹಿರಿಯಡ್ಕ ಅಭಿನಯದ ನಾಟಕ ರೈಲುಭೂತ ಎ.11ರಂದು ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಪ್ರಸ್ತುತಿಯ ನಾಟಕ ದ್ಯಾಟ್ಸ್ ಆಲ್ ಯುವರ್ ಆನರ್ ನಾಟಕಗಳು ಪ್ರದರ್ಶನಗೊಳ್ಳಲಿದೆ. ಎ.13ರಂದು ತಲ್ಲೂರು ಫ್ಯಾಮಿಲಿ ಟ್ರಸ್ಟ್ ಮತ್ತು ಕರ್ನಾಟಕ ಜನಪದ ಪರಿಷತ್ತಿನ ಸಹಯೋಗದಲ್ಲಿ ಜನಪದ ವೈವಿದ್ಯ ಜರಗಲಿದೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರದಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದ, ಗೋಪಾಡಿ ಗ್ರಾಮದ ನಿವಾಸಿ ಜಯಪ್ರಕಾಶ್ ಸಾಲಿನ್ಸ್ (53ವ) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಎ.3ರಂದು ಕೊನೆಯುಸಿರೆಳೆದರು. ವಕೀಲ ಜಯಪ್ರಕಾಶ್ ಅವರು ಹಿರಿಯ ವಕೀಲ ರವಿಕಿರಣ ಮುರ್ಡೇಶ್ವರ ಅವರೊಂದಿಗೆ, ಕುಂದಾಪುರದ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದರು. ವೆಯ್ಟ್ ಲಿಫ್ಟರ್ ಆಗಿ ಕ್ರೀಡೆಯಲ್ಲಿ ಆಸ್ತಕ್ತಿ ಹೊಂದುವುದರ ಜೊತೆಗೆ ಉತ್ತಮ ನಾಯಕತ್ವ, ಪರೋಪಕಾರದ ಗುಣವನ್ನು ಹೊಂದಿದ್ದರು. ಅವರು ಕುಂದಾಪುರ ಚರ್ಚಿನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಎ.04ರಂದು ಶಾಸ್ತ್ರಿ ವೃತ್ತದ ಸಿಎಸ್ಐ ಕೃಪಾ ಚರ್ಚ್ ಸ್ಮಶಾನದಲ್ಲಿ ಜಯಪ್ರಕಾಶ್ ಸಾಲಿನ್ಸ್ ಅವರ ಅಂತ್ಯಕ್ರಿಯೆ ನಡೆಸಲಾಯಿತು. ಮೃತ ಜಯಪ್ರಕಾಶ್ ಅವರು ಮಡದಿ ಹಾಗೂ ಮತ್ತು ಇಬ್ಬರು ಮಕ್ಕಳು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ. ಜಯಪ್ರಕಾಶ್ ಸಾಲಿನ್ಸ್ ನಿಧನಕ್ಕೆ ಕುಂದಾಪುರ ಬಾರ್ ಅಸೋಸಿಯೇಷನ್ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ, ಹಿರಿಯ ವಕೀಲ ರವಿಕಿರಣ ಮುರ್ಡೇಶ್ವರ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರದ ಜನರು ಜಾತಿ ಮತ ಧರ್ಮ ಮರೆತು ಸಂಪೂರ್ಣ ಬೆಂಬಲ ಕೊಟ್ಟಿದ್ದಾರೆ. ಪಕ್ಷೇತರವಾಗಿ ನಿಂತಾಗಲೂ ಭಾವನೆಗೆ ಸ್ಪಂದಿಸಿ ಅಭೂತಪೂರ್ವ ಜಯ ಸಿಕ್ಕಿತು. ನಾಲ್ಕು ಬಾರಿ ಬಿಜೆಪಿ, ಒಮ್ಮೆ ಪಕ್ಷೇತರ ನಿಂತಾಗ ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುವುದಾಗಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದ್ದಾರೆ. ಅವರು ತಮ್ಮ ನಿವಾಸದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನಾನು ದುಡುಕಿನ ನಿರ್ಧಾರ ತೆಗೆದಕೊಂಡಿಲ್ಲ ಮನಸ್ಸು ಚಂಚಲವಾಗಿಲ್ಲ. ಜಾಗೃತ ಮನಸ್ಸಿನಿಂದಲೇ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಲು ಹೇಳಿದ್ರು ಮಾತನಾಡಿದೆ. ಕಿರಣ್ ಕೊಡ್ಗಿ ನನ್ನ ತಮ್ಮನ ಆಪ್ತ, ತಂದೆಯ ಕಾಲದಿಂದ ಕುಟುಂಬದ ಆಪ್ತರು. ಅವರಿಗೆ ಅವಕಾಶ ಕೊಟ್ಟರೆ ನಾನು ಖುಷಿ ಪಡುತ್ತೇನೆ. ಆದರೆ ಅಭ್ಯರ್ಥಿ ಯಾರೆಂದು ರಾಷ್ಟ್ರೀಯ ಮಟ್ಟದಲ್ಲಿ ನಿರ್ಣಯ ಆಗಬೇಕು. ಯಾರೇ ಬಿಜೆಪಿಯ ಅಭ್ಯರ್ಥಿಯನ್ನು ನಾನು ಬೆಂಬಲಿಸುತ್ತೇನೆ, ಪ್ರಕಟಣೆಯಲ್ಲೂ ದಾಖಲಿಸಿದ್ದೇನೆ ಎಂದರು. ಕುಂದಾಪುರ ವನ್ನು ಸಿಂಗಾಪುರ ಮಾಡಿ ಎಂದು ಹೇಳೂದಿಲ್ಲ. ಮುಂದಿನ ಶಾಸಕ…

Read More

ಕುಂದಾಪ್ರ ಡಾಟ್ ಕಾಂ ವರದಿ.ಉಡುಪಿ: ಪ್ರಕೃತಿ ಸಕಲ ಜೀವಿಗಳಿಗೂ ಬದುಕು ಹಕ್ಕನ್ನು ನೀಡಿದೆ. ನಾವು ನಮ್ಮ ಜೀವನದಲ್ಲಿ ಮಹಾವೀರರ ಐದು ಪಂಚ ತತ್ವಗಳಾದ ಸತ್ಯ, ಅಹಿಂಸೆ, ಅಪರಿಗ್ರಹ, ಆಚೌರ್ಯ ಮತ್ತು ಬ್ರಹ್ಮಚರ್ಯ ಪಾಲಿಸಿದಾಗ ಪ್ರಕೃತಿಗೆ ಪೂರಕವಾದ ಮಾನವ ಧರ್ಮ ಸಮಾಜದಲ್ಲಿ ನೆಲೆಗೊಳ್ಳುತ್ತದೆ ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ರವರು ಹೇಳಿದರು. ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶ್ರೀ ಭಗವಾನ್ ಮಹಾವೀರರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದರು. ಭಗವಾನ್ ಮಹಾವೀರರು ಶಾಂತಿ ಸೌಹಾರ್ದತೆಯನ್ನು ಬೋಧಿಸುವ ಮೂಲಕ ಮಾನವನ ಜೀವನ ಮೌಲ್ಯಗಳು ಸುಧಾರಿಸಲು ಮಾರ್ಗದರ್ಶನವನ್ನು ನೀಡಿದ್ದಾರೆ ,ಅವುಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೆಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜೈನ ಮಿಲನ್ ನ ವಿನೋದ ಪ್ರಸನ್ನ ಕುಮಾರ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷರಾದ ಸುರೇಂದ್ರ ಅಡಿಗ ಮಹಾವೀರರ ಕುರಿತು ಮಾತನಾಡಿದರು. ಜೈನ ಮಿಲನ್ ಅಧ್ಯಕ್ಷರಾದ ದೀಪ ರಾಜೇಶ್, ಸುಧೀರ್ ಜೈನ್, ಕನ್ನಡ ಸಾಹಿತ್ಯ ಪರಿಷತ್ ನ ರವಿರಾಜ್, ನರಸಿಂಹ ಮೂರ್ತಿ, ಜಿಲ್ಲಾ…

Read More

ಕುಂದಾಪುರ ವಿಧಾನಸಭಾ ಕ್ಷೇತ್ರದ ಚುನಾವಣೆ ಮಾದರಿ ನೀತಿ ಸಂಹಿತೆ, ಸಿದ್ಧತೆ ಬಗ್ಗೆ ಮಾಹಿತಿ ನೀಡಿದ ಚುನಾವಣಾಧಿಕಾರಿ

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಎಲ್ಲಕ್ಕಿರುವಂತೆ ಸಾಹಿತ್ಯದ ಕಾಲಘಟ್ಟಗಳಿಗೂ ಏಳುಬೀಳುಗಳಿವೆ. ವ್ಯಾವಹಾರಿಕತೆ, ಬಾಹುಬಲ ಪ್ರಬಲವಾಗಿರುವ ಈಗಿನದು ಅದರ ಹಿನ್ನಡೆಯ ಕಾಲ. ಆದರೂ ಆಗಾಗ, ಅಲ್ಲಲ್ಲಿ ಬೆಳಕು ಗೋಚರಿಸುತ್ತಿರುವುದರಿಂದ ನಿರಾಸೆ ತಾಳಬೇಕಿಲ್ಲ ಎಂದು ಆಕಾಶವಾಣಿಯ ವಿಶ್ರಾಂತ ನಿಲಯ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಹೇಳಿದರು. ಉಳ್ಳೂರು ಮೂಕಜ್ಜಿ ಪ್ರತಿಷ್ಠಾನದ ಆಶ್ರಯದಲ್ಲಿ ನಾಗೂರು ಒಡೆಯರಮಠ ಶ್ರೀ ಗೋಪಾಲಕೃಷ್ಣ ಕಲಾಮಂದಿರದಲ್ಲಿ ನಡೆದ ಬವಳಾಡಿ ಹೆಬ್ಬಾರ ಕುಟುಂಬದ ಸಹೋದರ, ಸಹೋದರಿಯರು ರಚಿಸಿದ್ದ ಸಂಪ್ರದಾಯದ ಹಾಡುಗಳ ಸಂಗ್ರಹ ’ಪದ್ಯಪಂಚಾಮೃತ’ ಹೊತ್ತಗೆ ಬಿಡುಗಡೆ ಮಾಡಿ ಅವರು ಮಾತನಾಡಿದರು. ಪದ್ಯಪಂಚಾಮೃತದಲ್ಲಿ ಸಂಗ್ರಹಿಸಿರುವ ಮೊಗೇರಿ ಪಾರ್ವತಿ ಅಡಿಗ, ಉಳ್ಳೂರು ಸರಸ್ವತಿ ಉಡುಪ, ಬವಳಾಡಿ ವೆಂಕಟರಮಣ ಹೆಬ್ಬಾರ, ಹಿರಿಯಣ್ಣ ಹೆಬ್ಬಾರ, ಸೀತಾರಾಮ ಹೆಬ್ಬಾರ ಅವರ ಕೃತಿಗಳ ಭಾಷಾ ಸಮೃದ್ಧಿ, ಭಾವ ಪರಿಪುಷ್ಟತೆ ಮತ್ತು ರಚನಾ ಕೌಶಲ ಬೆರಗುಗೊಳಿಸುತ್ತವೆ. ಎಲ್ಲ ಹಾಡುಗಳೂ ಸರ್ವಾಂಗ ಸುಂದರವಾಗಿವೆ. ಒಂದೊಮ್ಮೆ ನಾಡಿನ ಗ್ರಾಮೀಣರ ಬಾಯಿಯಲ್ಲಿ ವಿಜೃಂಭಿಸಿದ್ದ ಕನ್ನಡದ ಸಂಪ್ರದಾಯದ ಹಾಡುಗಳು ಮರೆವಿಗೆ ಸರಿಯುತ್ತಿರುವ ಈ ಕಾಲದಲ್ಲಿ ಅವುಗಳನ್ನು ಸಂಗ್ರಹಿಸಿ ಪ್ರಕಟಿಸಲು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಬೈಂದೂರು ಮತ್ತು ಜೆಸಿಐ ಬೈಂದೂರು ಸಿಟಿ ಇವರ ಆಶ್ರಯದಲ್ಲಿ ಸೆಂಟರ್ ಫಾರ್ ಅಪ್ಲೈಡ್ ಥಿಯೇಟರ್ ಸೈನ್ಸ್ ಮೈಸೂರು ಮತ್ತು ಚಿತ್ರದುರ್ಗ ಇವರ ತರಬೇತಿ ಸಂಪನ್ಮೂಲ ಸಹಕಾರದಲ್ಲಿ ಕಲೆಯೊಂದಿಗೆ ಕಲಿಕೆ ಐದು ದಿನಗಳ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದ ಇತ್ತೀಚಿಗೆ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ಜಿಎಂ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ವಿಕಸನವೇ ಶಿಕ್ಷಣದ ಗುರಿಯಾಗಿದ್ದು ಶಿಕ್ಷಕರು ಸಹಪಠ್ಯ ಚಟುವಟಿಕೆಗಳೊಂದಿಗೆ ಪಠ್ಯ ವಿಷಯಗಳನ್ನು ಆಸಕ್ತಿಯಿಂದ ಕಲಿಯುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು ಎಂದು ಶಿಬಿರಕ್ಕೆ ಶುಭ ಹಾರೈಸಿದರು. ಜೆಸಿಐ ಬೈಂದೂರು ಸಿಟಿ ಅಧ್ಯಕ್ಷರಾದ ನರೇಂದ್ರ ಶೇಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶಿಬಿರದ ಸಂಪೂರ್ಣ ಪ್ರಯೋಜನವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆಯಬೇಕು ಆ ಮೂಲಕ ಶಿಬಿರದ ಯಶಸ್ವಿಗೆ ಸಹಕರಿಸಿ ಎಂದು ಹೇಳಿದರು. ಶಿಬಿರದಸಂಪನ್ಮೂಲ ವ್ಯಕ್ತಿಯಾಗಿ ರಂಗಕರ್ಮಿ ನಾ ಶ್ರೀನಿವಾಸ್ ಮೈಸೂರು ಮತ್ತು ರಾಧಾ ಕೊಡಗು ಶಿಬಿರದ ಕುರಿತು ಮಾಹಿತಿ ನೀಡಿದರು. ಮುಖ್ಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಹಟ್ಟಿಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ್ಯಾನದ ತೊಟದಮನೆ ಸುಧಾಕರ ಶೆಟ್ಟಿ ಅವರ ಮನೆಯ ಆವರಣದಲ್ಲಿ ಶಾಸನವೊಂದು ಪತ್ತೆಯಾಗಿದ್ದು, ಇದು ಹಳೆಗನ್ನಡ ಲಿಪಿಯ ಸಂಸ್ಕೃತ ಭಾಷೆಯನ್ನು ಒಳಗೊಂಡಿದೆ. ಕಾಲಮಾನ ಉಲ್ಲೇಖ:ಬಾದಾಮಿ ಚಾಲುಕ್ಯರ ವಿನಯಾದಿತ್ಯರ ಉಲ್ಲೇಖ ಈ ಶಾಸನದಲ್ಲಿ ಕಂಡು ಬಂದಿದ್ದು, ವಿನಯಾದಿತ್ಯರ ಕಾಲಮಾನ ಕ್ರಿ.ಶ 680 ರಿಂದ ಕ್ರಿ.ಶ 696 ಆಗಿರುತ್ತದೆ.ಹಾಗೇ ಆಳುಪರ ಪಾಂಡ್ಯ ಆಳುಪೇಂದ್ರ ಚಿತ್ರವಾಹನ ಕಾಲಮಾನವಾಗಿ ಕ್ರಿ.ಶ. 680 ರಿಂದ 730 ಆಗಿರುತ್ತದೆ. ವಿನಯಾದಿತ್ಯ ಹಾಗೂ ಚಿತ್ರವಾಹನರ ಕಾಲಮಾನ ಸರಿ ಹೊಂದುವಂತೆ ಸಿಕ್ಕಿರುವ ಈ ಶಾಸನಕ್ಕೆ 1327 ರಿಂದ 1343 ವಷ೯ದ ಪ್ರಾಚೀನ ಶಾಸನವಾಗಿದೆ (ಬಾದಾಮಿ ಚಲುಕ್ಯರ ವಿನಯಾದಿತ್ಯರ ಉಲ್ಲೇಖಿತ ತುಳುನಾಡಿನ ಪ್ರಾಚೀನ ಶಾಸನ) ಆಳುವರಸನ ಮಗ ಚಿತ್ರವಾಹನ ಬಾದಾಮಿ ಚಲುಕ್ಯರ ವಿನಯಾದಿತ್ಯರ ಮಗಳು ರಾಣಿ ಕುಂಕುಮಾ ಮಹಾದೇವಿಗೂ ಆಳುಪರ ಚಿತ್ರವಾಹನರ ಜೊತೆ ಕೌಟುಂಬಿಕ ಸಂಬಂಧಗಳನ್ನು ಬೆಳೆಸಿಕೊಳ್ಳುತ್ತಾರೆ. ಅದರಂತೆ ಕರಾವಳಿಯಲ್ಲಿ ಸುಧೀಘ೯ ವಷ೯ಗಳ ಕಾಲ ಆಳ್ವಿಕೆ ನಡೆಸಿದ ಆಳುಪರ ಸಂಬಂಧಗಳು ಬಾದಾಮಿ ಚಲುಕ್ಯರೊಂದಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ಕ್ಕೆ ಸಂಬಂದಿಸಿದಂತೆ, ಜಿಲ್ಲಾಧಿಕಾರಿಗಳ ಕಚೇರಿಯ ಒಂದನೇ ಮಹಡಿಯ ಕೊಠಡಿ ಸಂಖ್ಯೆ ಎ 204 ರಲ್ಲಿ ಚುನಾವಣಾ ಸಂಬಂಧ ದೂರುಗಳ ನಿರ್ವಹಣಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಸಾರ್ವಜನಿಕರು ಚುನಾವಣೆಗೆ ಸಂಬಂದಪಟ್ಟ ದೂರುಗಳಿದ್ದಲ್ಲಿ cVIGIL App ಮೂಲಕ, ಮತದಾರರ ಸಹಾಯವಾಣಿ ಕೇಂದ್ರ 1950 ಹಾಗೂ ಸ್ಥಿರ ದೂರವಾಣಿ ಸಂಖ್ಯೆ 0820-2574991 ಗೆ ಕರೆ ಮಾಡುವ ಮೂಲಕ ಹಾಗೂ National Grievances Redressal System ಆನ್‌ಲೈನ್ ಮೂಲಕ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ದೂರುಗಳ ಪರಿಹಾರ ಮತ್ತು ಮತದಾರರ ಸಹಾಯವಾಣಿಯ ನೋಡೆಲ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಉದ್ದಿಮೆದಾರರಿಗೆ 2023-24 ನೇ ಸಾಲಿನಲ್ಲಿ ವ್ಯಾಪಾರ ಆನ್‌ಲೈನ್ ತಂತ್ರಾಂಶದ ಮೂಲಕ ಸೃಜಿಸಿದ ಡಿಜಿಟಲ್ ಸಹಿಯುಳ್ಳ ಉದ್ದಿಮೆ ಪರವಾನಿಗೆ ನೀಡಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಆನ್‌ಲೈನ್ ತಂತ್ರಾಂಶದ ಮೂಲಕ ಸೃಜಿಸಿದ ಡಿಜಿಟಲ್ ಸಹಿಯುಳ್ಳ ಉದ್ದಿಮೆ ಪರವಾನಿಗೆ ಪಡೆಯಲು ಬಾಕಿ ಹಾಗೂ ನವೀಕರಿಸದೇ ಇರುವವರು ಈ ಕೂಡಲೇ ದಂಡ ಪಾವತಿಯೊಂದಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಏಪ್ರಿಲ್ 1ರ ನಂತರ 2023-24ನೇ ಸಾಲಿನ ಪರವಾನಿಗೆ ನವೀಕರಣಕ್ಕೆ ಅವಕಾಶ ಕಲ್ಪಿಸಲಾಗುವುದು. ಪರವಾನಿಗೆ ಪಡೆದು ಉದ್ದಿಮೆ ನಡೆಸದೇ ಇರುವವರು ಲಿಖಿತ ಮಾಹಿತಿ ನೀಡಿ, ಉದ್ದಿಮೆ ಪರವಾನಿಗೆ ರದ್ದುಪಡಿಸದಿದ್ದಲ್ಲಿ ಉದ್ದಿಮೆ ಶುಲ್ಕ ಹಾಗೂ ದಂಡ ವಿಧಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಪಟ್ಟಣ ಪಂಚಾಯತ್ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Read More