ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಆಳ್ವಾಸ್ ಕಾಲೇಜು ಮೂಡುಬಿದಿರೆ ತಂಡವು ಚಾಂಪಿಯನ್ ಆಗಿ ಹೊರ ಹೊಮ್ಮುವುದರ ಮೂಲಕ ವೆರಿ ರೇ. ಫಾದರ್ ಪ್ರತ್ರವೋ ರೋಲಿಂಗ್ ಟ್ರೋಫಿ ಮತ್ತು ಶಾಶ್ವತ ಫಲಕವನ್ನು 18ನೇ ಬಾರಿಗೆ ತನ್ನದಾಗಿಸಿಕೊಂಡಿತು.
ಆಳ್ವಾಸ್ ತಂಡವು ಸೆಮಿಫೈನಲ್‌ನಲ್ಲಿ ಮಂಗಳೂರು ವಿ.ವಿ ಕ್ಯಾಂಪಸ್, ಕೊಣಾಜೆ ತಂಡವನ್ನು ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆ ತಂಡವು ವಿವೇಕಾನಂದ ಕಾಲೇಜು, ಪುತ್ತೂರು ತಂಡವನ್ನು ಸೋಲಿಸಿ ಫೈನಲ್‌ಗೆ ತೇರ್ಗಡೆ ಹೊಂದಿದ್ದವು. ಫೈನಲ್‌ನ್ನು ಆಳ್ವಾಸ್ ಕಾಲೇಜು ತಂಡವು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆ ತಂಡವನ್ನು ಪರಾಭವಗೊಳಿಸಿ ಶಾಶ್ವತ ಫಲಕ ಮತ್ತು ಪಾರಿತೋಷಕವನ್ನು ಪಡೆದುಕೊಂಡಿತು.
ಆಳ್ವಾಸ್ ತಂಡದ ಅನ್ನಪೂರ್ಣ ಉತ್ತಮ ಹಿಡಿತಗಾರ್ತಿ ಮತ್ತು ಭಾರತಿ ದೇವಾಡಿಗ ಉತ್ತಮ ದಾಳಿಗಾರ್ತಿ ಪ್ರಶಸ್ತಿಯನ್ನು ಪಡೆದುಕೊಂಡರು. ವಿಜೇತ ತಂಡವನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರವರು ಅಭಿನಂದಿಸಿದ್ದಾರೆ.











