Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಗಣಕಯಂತ್ರ ವಿಭಾಗ ಹಾಗೂ ಇನ್ಸ್ಟಿಟ್ಯೂಷನ್ ಇನ್ನೋವೆಷನ್ ಕೌನ್ಸಿಲ್ ಇವರ ಸಹಯೋಗದೊಂದಿಗೆ  ಪ್ರಥಮ ಪದವಿಯ ಬಿಸಿಎ ವಿದ್ಯಾರ್ಥಿಗಳಿಗಾಗಿ “ಬಿ.ಸಿ.ಎ ಕೋರ್ಸ್ ಪರಿಚಯ ಎನ್ನುವ ಮಾಹಿತಿ ಮತ್ತು ಅವಕಾಶಗಳು” ಕಾರ್ಯಾಕ್ರಮ  ನೆರವೇರಿತು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.  ಶುಭಕರಾಚಾರಿ  ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಬಿಸಿಎ ಪದವಿಯ ಉಪಯುಕ್ತತೆ ಬಗ್ಗೆ ತಿಳಿಸಿದರು. ಮುಖ್ಯ ಅತಿಥಿಯಾಗಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಸತ್ಯನಾರಾಯಣ ಅವರು ಉಪಸ್ಥಿತರಿದ್ದರು. ಗಣಕಯಂತ್ರ ವಿಭಾಗದ ಮುಖ್ಯಸ್ಥರಾದ  ಪ್ರೊಫೆಸರ್ ಗಣೇಶ್ ಕೆ. ಅವರು ವಿದ್ಯಾರ್ಥಿಗಳಿಗೆ ಡೇಟಾ ಅನಾಲಿಟಿಕ್ಸ್, ಅದರ ಪಠ್ಯಕ್ರಮ ಮತ್ತು ವೃತ್ತಿ ಅವಕಾಶಗಳ ಬಗ್ಗೆ ವಿವರಿಸಿದರು. ಕಂಪ್ಯೂಟರ್ ಸೈನ್ಸ್ ಉಪನ್ಯಾಸಕಿಯಾದ ವಿಜಯಲಕ್ಷ್ಮಿ ಎನ್. ಶೆಟ್ಟಿ ವಿದ್ಯಾರ್ಥಿಗಳಿಗೆ  ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮತ್ತು ಮಶಿನ್ ಲರ್ನಿಂಗ್   ಕೋರ್ಸ ಅವಶ್ಯಕತೆ ಹಾಗೂ ವಿವಿಧ ವೃತ್ತಿ ಅವಕಾಶಗಳ ಬಗ್ಗೆ, ಅಂತೆಯೇ ಇನ್ನೊರ್ವ ಉಪನ್ಯಾಸಕರಾದ ಕೃಷ್ಣ ಅವರು  ಸಾಮಾನ್ಯ ಬಿಸಿಎ  ಕೋರ್ಸ್‌ನ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಕೋಟೇಶ್ವರ ಇವರ ಸಹಯೋಗದಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ನಡೆಸಿದ ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಕೆರಾಡಿ ವರಸಿದ್ಧಿ ವಿನಾಯಕ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ. ಯು. ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸಂಜನಾ ವಿ. ಹೆಚ್ 4ನೇ ಸ್ಥಾನ ಪಡೆಯುವುದರ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅವರನ್ನು ಆಡಳಿತ ಮಂಡಳಿ ಅವರು , ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅವರು ಅಭಿನಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಹೇರಂಜಾಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತೋತ್ಸವ ಅಂಗವಾಗಿ ಅಸ್ಮ ಕಮ್ ಸಂಸ್ಕೃತಂ ಸರಣಿ ಕಾರ್ಯಕ್ರಮ ಶ್ರೀ ಮಹಾಲಿಂಗೇಶ್ವರ ಸಂಸ್ಕೃತ ಪಾಠಶಾಲೆ ಬಹುಳಾಪುರ ಇವರ ಜಂಟಿ ಆಶ್ರಯದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಉದಯ್ ಆಚಾರ್ಯ ಅವರು ವಹಿಸಿಕೊಂಡಿರುತ್ತಾರೆ. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪ್ರಶಾಂತ್ ಅರೆ ಶಿರೂರು ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕಂಬದ ಕೋಣೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಗಣೇಶ್ ದೇವಾಡಿಗ, ಗ್ರಾಮ ಪಂಚಾಯಿತಿ ಸದಸ್ಯೆ ಜಲಜಾಕ್ಷಿ ಗಾಣಿಗ ಎಸ್. ವಿ. ಎಸ್. ಗಂಗೊಳ್ಳಿ ಇಲ್ಲಿಯ ಅಧ್ಯಾಪಕರಾದ ಶ್ರೀಧರ ಗಾಣಿಗ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಜಾಂಚಿಯಾದ ಅಚ್ಚುತ ಬಿಲ್ಲವ. ದುರ್ಗಾ ಮಿತ್ರ ಮಂಡಳಿ ಕಂಚಿಕಾನ್ ಇದರ ಅಧ್ಯಕ್ಷರಾದ ಸಂದೀಪ್ ದೇವಾಡಿಗ, ಮಹಾಲಿಂಗೇಶ್ವರ ಸಂಸ್ಕೃತ ಪಾಠಶಾಲೆ ಬಹುಳಾಪುರ ಇಲ್ಲಿಯ ಮುಖ್ಯ ಶಿಕ್ಷಕರಾದ ತಿರುಮಲೇಶ್ವರ ಭಟ್ ಇನ್ನಿತರರು ಉಪಸ್ಥಿತರಿದ್ದರು. ಮುಖ್ಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಏಷ್ಯಾನ್ ಫೆಸಿಪಿಕ್ ಯೋಗಾಸನ ಚಾಂಪಿಯನ್‍ಶಿಪ್‍ನಲ್ಲಿ ಎರಡು ಬೆಳ್ಳಿ ಪದಕ ಹಾಗೂ ” ಏಷ್ಯಾನ್ ಫೆಸಿಪಿಕ್ ಐಕಾನಿಕ್ ಕೋಚ್ ಅವಾರ್ಡ್” ದಿವ್ಯಾ ಶೆಟ್ಟಿ  ಪಡೆದಿದ್ದಾರೆ. ಅವರು ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರೆಹೊಳೆ, ಫ್ರೌಢ ಶಿಕ್ಷಣ ಸರಕಾರಿ ಪ್ರೌಢ ಶಾಲೆ ಕಿರಿಮಂಜೇಶ್ವರ ಹಾಗೂ ಪದವಿ ಪೂರ್ವ ಶಿಕ್ಷಣ ಸರಕಾರಿ ಪದವಿ ಪೂರ್ವ ಕಾಲೇಜು ನಾವುಂದದಲ್ಲಿ ಪಡೆದಿದ್ದರೆ. ಯೋಗಾಸನ ಕ್ಷೇತ್ರದಲ್ಲಿ ರಾಜ್ಯ- ರಾಷ್ಟ್ರ ಮಟ್ಟದಲ್ಲಿ ಪ್ರತಿಷ್ಠಿತ ಹಲವಾರು ಪದಕ- ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅವರು ಮೂಲತಃ ಬೈಂದೂರು ತಾಲೂಕಿನ ನಾವುಂದ ಗ್ರಾಮದ ಕುದ್ರು ಗೋಡಿನ ಮಂಜು ಶೆಟ್ಟಿ ಹಾಗೂ ಕುಸುಮ ದಂಪತಿಗಳ ಮಗಳು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಇಲ್ಲಿನ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲಿನ 9ನೇ ತರಗತಿ ವಿದ್ಯಾರ್ಥಿನಿ ನಂದಶ್ರೀ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಿಚಾರಗೋಷ್ಠಿ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ  ಆಯ್ಕೆಯಾಗಿರುತ್ತಾಳೆ. ಅವರಿಗೆ ವಿಜ್ಞಾನ ಶಿಕ್ಷಕಿ ಚೈತ್ರಾ ಮಾರ್ಗದರ್ಶನ ನೀಡಿದ್ದು ಆಡಳಿತಮಂಡಳಿ, ಮುಖ್ಯಶಿಕ್ಷಕರು ಬೋಧಕ ಮತ್ತು ಬೋಧಕೇತರ ವೃಂದದವರು ಶುಭ ಕೋರಿರುತ್ತಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಪದವಿ, ಸ್ನಾತಕೋತ್ತರ ಶಿಕ್ಷಣ ಪಡೆದ ತಕ್ಷಣ ಉದ್ಯೋಗ ದೊರಕಬೇಕೆಂದು ಹಲವರ ಬೇಡಿಕೆ ಇದ್ದರೂ ಕೂಡ ಅದು ಕಷ್ಟಸಾಧ್ಯ. ಈಗಾಗಲೇ ಪದವಿ ಪಡೆದವರು ಕೂಡ ಇನ್ನೂ ಉದ್ಯೋಗ ದೊರಕದೇ ಹಿಂದಿದ್ದಾರೆ. ಇನ್ನು ಕೆಲವರಿಗೆ ಉದ್ಯೋಗ ಅವಕಾಶಗಳಿದ್ದರೂ ಕೂಡ ಕೌಶಲ್ಯತೆ ಕೊರತೆ, ಭಾಷೆ, ಸ್ಥಳ ಹಾಗೂ ಕೆಲವು ತಪ್ಪು ಮಾಹಿತಿಗಳಿಂದ ಹಿಂದೇಟು ಹಾಕುತ್ತಿದ್ದಾರೆ. ವಿಶ್ವದ ಬೇರೆ ಬೇರೆ ರಾಷ್ಟ್ರಗಳಲ್ಲಿ ಉದ್ಯೋಗ ಅವಕಾಶಗಳು ತುಂಬಾ ಇದೆ. ಸಮೃದ್ಧ ಬೈಂದೂರು ಅಲ್ಲಿ ಹೋಗುವವರಿಗೆ ಸೇತುವೆಯಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಎನ್‌ಎಸ್‌ಡಿಸಿ ಹಾಗೂ ಅಜಿನೊರ‍್ಹಾ ಸಂಸ್ಥೆಯ ಸಹಭಾಗಿತ್ವದಲ್ಲಿ ಅಗಸ್ಟ್ 31ರಂದು ಬೃಹತ್ ಅಂತರಾಷ್ಟ್ರೀಯ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು. ಜಿಲ್ಲೆ, ರಾಜ್ಯಗಳಲ್ಲಿ ಹಲವಾರು ಉದ್ಯೋಗ ಮೇಳಗಳನ್ನು ವಿವಿಧ ಕಂಪೆನಿಗಳ ಮೂಲಕ ಆಯೋಜಿಸಲಾಗುತ್ತದೆ. ಆದರೆ ಮೇಳದಲ್ಲಿ ಪ್ರಕ್ರೀಯೆಗಳ ಮುಗಿದ ನಂತರ ಸಂPಪರ್ಕದ ಕೊರತೆ ಸೇರಿದಂತೆ ಅನೇಕ ಕಾರಣಗಳಿಂದ ಇದು ಮುಂದುವರಿಯದೇ ಬಾಕಿಯಾಗುತ್ತದೆ. ಬಂದೂರು ಕ್ಷೇತ್ರದ ವಿದ್ಯಾವಂತರಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ನೇರಪ್ರಸಾರ ಸೇವೆ ನೀಡುತ್ತಿರುವ ಲೈವ್ ಸ್ಟೀಮಿಂಗ್ ಗುಣಮಟ್ಟ, ಏಕರೂಪದ ದರ ನಿಗದಿ ಮೊದಲಾದ ವಿಚಾರಗಳ ಬಗ್ಗೆ ಅಸೋಸಿಯೇಷನ್ ರಚಿಸುವ ಸಂಬಂಧ ಗುರುವಾರ ಮೂಡಬಿದಿರೆ ಕೋಟೆಬಾಗಿಲು ವೀರ ಮಾರುತಿ ದೇವಸ್ಥಾನದ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಮುಂದಿನ ದಿನಗಳಲ್ಲಿ ಕಾರ್ಯಕ್ರಮದ ನೇರಪ್ರಸಾರದ ಗುಣಮಟ್ಟ, ಏಕರೂಪದ ದರ ನಿಗದಿ ಹಾಗೂ ಸೌಹಾರ್ದ ವ್ಯವಹಾರ ಮಾಡುವುದು ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಚರ್ಚೆ ನಡೆದು ನೇರ ಪ್ಸಾರ ಮಾಡುತ್ತಿರುವ ಎಲ್ಲರನ್ನೂ ಒಂದೇ ವೇದಿಕೆಯಡಿಯಲ್ಲಿ ತಂದು ಸಂಘಟನೆಯನ್ನು ಮಾಡುವ ಉದ್ದೇಶದಿಂದ ಅಸೋಸಿಯೇಷನ್ ರಚಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ಈ ಬಗ್ಗೆ ಮುಂದಿನ ಹಂತದ ಸಭೆಯನ್ನು ಸೆಪ್ಟಂಬರ್ 17 ರಂದು ಕಾರ್ಕಳದಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು ಈ ಸಭೆಗೆ ದ.ಕ. ಉಡುಪಿ ಹಾಗೂ ಇತರ ಕಡೆಗಳ ನೇರಪ್ರಸಾರ ಮಾಡುತ್ತಿರುವ ಸಂಸ್ಥೆಗಳನ್ನು ಸೇರಿಸಿಕೊಂಡು ಮುಂದುವರಿಯುವ ಬಗ್ಗೆಯೂ ಮಾತುಕತೆ ನಡೆಸಲಾಯಿತು. ಸಭೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ವಿವಿಧ ಸಂಸ್ಥೆಗಳಿಂದ ಸುಮಾರು 25ಕ್ಕಿಂತಲೂ ಅಧಿಕ ಮಂದಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ಪುರಸಭೆಯ ಎರಡನೇ ಅವಧಿಯ ಅಧ್ಯಕ್ಷರಾಗಿ ಬಿಜೆಪಿಯ ಮೋಹನದಾಸ್ ಶೆಣೈ, ಉಪಾಧ್ಯಕ್ಷರಾಗಿ ಬಿಜೆಪಿಯ ಸಾಮಾನ್ಯ ಮಹಿಳಾ ಸದಸ್ಯೆ ವನಿತಾ ಎಸ್ ಬಿಲ್ಲವ ಆಯ್ಕೆಯಾಗಿದ್ದಾರೆ. ಮೋಹನ್‌ದಾಸ್ ಶೆಣೈ ಅವರು ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖ‌ರ್ ಖಾರ್ವಿ ಅವರನ್ನು 16-8 ಮತಗಳ ಅಂತರದಲ್ಲಿ ಸೋಲಿಸಿದರು. ವನಿತಾ ಬಿಲ್ಲವ ಅವರುಕಾಂಗ್ರೆಸ್ ಪಕ್ಷದ ಕಮಲಾ ಪೂಜಾರಿಯವರನ್ನು ಅದೇ ಅಂತರದಲ್ಲಿ ಸೋಲಿಸಿದ್ದರು. ಚುನಾವಣೆಯ ಸಂದರ್ಭ ಪುರಸಭೆಯ ಸದಸ್ಯೆ ಲಕ್ಷ್ಮೀಬಾಯಿ ಗೈರು ಹಾಜರಾಗಿದ್ದರು. ಕುಂದಾಪ್ರ ಡಾಟ್ ಕಾಂ ಕಳೆದ ಒಂದೂವರೆ ವರ್ಷದಿಂದ ಆಡಳಿತ ಮಂಡಳಿ ಆಯ್ಕೆಯಾಗಿರಲಿಲ್ಲ. ಕುಂದಾಪುರ ಪುರಸಭೆಯಲ್ಲಿ ಒಟ್ಟು 23 ಸ್ಥಾನಗಳಿವೆ. ಅದರಲ್ಲಿ 14 ಜನ ಬಿಜೆಪಿ ಸದಸ್ಯರಿದ್ದಾರೆ. 8 ಕಾಂಗ್ರೆಸ್ ಸದಸ್ಯರು ಹಾಗೂ 1 ಪಕ್ಷೇತರ ಸದಸ್ಯ ಕುಂದಾಪುರ ಶಾಸಕರು ಹಾಗೂ ಸಂಸದರು ಸೇರಿದಂತೆ ಇಬ್ಬರಿಗೆ ಮತದಾನದ ಅವಕಾಶವಿತ್ತು. ಒಟ್ಟು 25 ಮತದಾರರಿದ್ದು, ನಿರೀಕ್ಷೆಯಂತೆ ಬಿಜೆಪಿಯ ಮೋಹನದಾಸ್‌ ಶೆಣೈ ಅವರಿಗೆ ಬಿಜೆಪಿಯ 14 ಮತ್ತು ಶಾಸಕ, ಸಂಸದರ 2 ಮತಗಳು ಸೇರಿ 16…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಎಲ್ಲಾ ಶಾಲೆಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸುವುದು ಸರಕಾರದಿಂದ ಅಸಾಧ್ಯವಾಗಿದ್ದು, ದಾನಿಗಳು ಹಾಗೂ ವಿದ್ಯಾಭಿಮಾನಿಗಳು ಒಂದೊಂದು ಸರಕಾರಿ ಶಾಲೆಯನ್ನು ದತ್ತು ಪಡೆದು ಆ ಶಾಲೆಯನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡಬೇಕಿದೆ. ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಬೈಂದೂರು ವಲಯದಲ್ಲಿ ಅತ್ಯುತ್ತಮ ಶಾಲೆಗಳಲ್ಲಿ ಒಂದಾಗಿದ್ದು, ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದುವ ಮೂಲಕ ಮಾದರಿ ಶಾಲೆ ಎನಿಸಿಕೊಂಡಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು. ಬೈಂದೂರು ವಲಯದ ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಸುಮಾರು 13.9 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವಿವೇಕ ಕೊಠಡಿಗಳನ್ನು ಉದ್ಘಾಟಿಸಿ ಬುಧವಾರ ಅವರು ಮಾತನಾಡಿದರು. ಗುಜ್ಜಾಡಿ ಶಾಲೆಗೆ ಅಗತ್ಯವಾಗಿ ಬೇಕಿರುವ ಮೂರು ವಿವೇಕ ಕೊಠಡಿಗಳು ಮಂಜೂರಾಗಿರುವುದು ವಿಶೇಷವಾಗಿದ್ದು, ದಾನಿಗಳ ಸಹಕಾರದಿಂದ ಶಾಲೆ ಪ್ರಗತಿ ಪಥದತ್ತ ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ನಾರಾಯಣ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 2023-24 ನೇ ಸಾಲಿನ ಶೈಕ್ಷಣಿಕ ಸಾಲಿನಲ್ಲಿ ನಡೆದ ಪಿ.ಯು.ಸಿ, ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ, ಮೆಡಿಕಲ್ ಇಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸುಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಬಹುಮಾನ ಹಣವನ್ನು ಮಂಜೂರು ಮಾಡಲು ಅರ್ಹ ವಿದ್ಯಾರ್ಥಿಗಳಿಂದ ಇಲಾಖೆಯ ವೆಬ್‌ಸೈಟ್ https://forms.gle/pbVz49g81dz61cUU7ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ ಒಂದು ವಾರದ ಒಳಗಾಗಿ ಅರ್ಜಿ ಹಾಗೂ ಸಂಬAಧಿಸಿದ ಎಲ್ಲಾ ದಾಖಲೆಗಳನ್ನು ಕಾಲೇಜಿನ ಪ್ರಾಂಶುಪಾಲರಿಂದ ದೃಢೀಕರಿಸಿ, ಉಪ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ರಜತಾದ್ರಿ, ಮಣಿಪಾಲ ಇಲ್ಲಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ದೂ.ಸಂಖ್ಯೆ: 0820-2574892 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

Read More