Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ವಿಶ್ವ ವಿನಾಯಕ ಸಿ.ಬಿ.ಎಸ್.ಇ. ಸ್ಕೂಲ್: ಸ್ಪೇಸ್ ಆನ್ ವೀಲ್ಸ್ ವಿಜ್ಞಾನ ವಸ್ತು ಪ್ರದರ್ಶನ
    ಊರ್ಮನೆ ಸಮಾಚಾರ

    ವಿಶ್ವ ವಿನಾಯಕ ಸಿ.ಬಿ.ಎಸ್.ಇ. ಸ್ಕೂಲ್: ಸ್ಪೇಸ್ ಆನ್ ವೀಲ್ಸ್ ವಿಜ್ಞಾನ ವಸ್ತು ಪ್ರದರ್ಶನ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ಮಾನವ ನಿರ್ಮಿತ ಉಪಕರಣವನ್ನು ಕೃತಕ ಉಪಗ್ರಹಗಳ ಮೂಲಕ ಅಂತರೀಕ್ಷದಲ್ಲಿ ಬಿಟ್ಟು ಭೂಮಿ ಮೇಲಿನ ಮನುಷ್ಯರಿಗೆ ಬೇಕಾಗುವ ಎಲ್ಲ ಸೇವೆಗಳನ್ನು ಇಸ್ರೋ ಸಂಸ್ಥೆ ನೀಡುತ್ತಿದೆ. ಇಂಟರ್‍ನೆಟ್ ಸೌಲಭ್ಯ, ಜಿ.ಪಿಎಸ್, ಲೋಕೇಶನ್ ಸರ್ಚ್, ಹವಾಮಾನ ವರದಿಯಂಥ ಮಾಹಿತಿಗಳನ್ನು ಆ ಉಪಗ್ರಹದಲ್ಲಿ ಅಳವಡಿಸಿದ ವಾಹಕಗಳಿಂದ ಪಡೆಯಲಾಗುತ್ತಿದೆ. ಕಮ್ಯೂನಿಕೇಶನ್ಸ್ ಕೇಂದ್ರಿತ ಜಿಯೋಸಿಂಕ್ರನೈಝ್ ಉಪಗ್ರಹವು ಭೂಮಿ ಮೇಲಿನ ಯಾವುದೋ ಒಂದು ಭಾಗದಲ್ಲಿ ಅಡೆತಡೆಗಳಿಲ್ಲದೇ 36,000 ಕಿ.ಮೀ. ದೂರದಿಂದ ದೂರದರ್ಶನ, ಜಾಲತಾಣಗಳ ಬಗ್ಗೆ ಸಂಪರ್ಕವನ್ನು ನೀಡುತ್ತಿರುತ್ತದೆ. ಈ ಉಪಪಗ್ರಹವು ಆಕಾಶದಲ್ಲಿರುವ ಕಣ್ಣು ಎನ್ನುವಂತೆ ಆಕಾಶದಿಂದಲೇ ಎಲ್ಲವನ್ನೂ ಗಮನಿಸುತ್ತಿರುತ್ತದೆ ಎಂದು ಇಸ್ರೋ ಸಂಸ್ಥೆಯ ವಿಜುವಲ್ ಡಾಕ್ಯುಮೆಂಟೇಶನ್ ಮತ್ತು ಔಟ್ ರೀಚ್ ಘಟಕದ ಮುಖ್ಯಸ್ಥ ಪಿ.ವಿ.ಎನ್. ಮೂರ್ತಿ ಹೇಳಿದರು.

    Click Here

    Call us

    Click Here

    ಅವರು ವಿಶ್ವ ವಿನಾಯಕ ನ್ಯಾಶನಲ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಇದರ ಆಶ್ರಯದಲ್ಲಿ ತೆಕ್ಕಟ್ಟೆ ವಿಶ್ವ ವಿನಾಯಕ ಸಿಬಿಎಸ್‍ಸಿ ಸ್ಕೂಲ್ ವಠಾರದಲ್ಲಿ ಆಯೋಜಿಸಿದ ಇಸ್ರೋ ಬೆಂಗಳೂರು ಪ್ರಾಯೋಜಿತ ಎರಡು ದಿನಗಳ ‘ಸ್ಪೇಸ್ ಆನ್ ವೀಲ್ಸ್’ ವಿಜ್ಞಾನ ವಸ್ತು ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

    ದೇಶದೊಳಗೆ ಒಂದು ಕಡೆಯಿಂದ ದೂರದ ಇನ್ನೊಂದು ಕಡೆಗೆ ಚಲಿಸಲು ಬಳಸುವ ಜಿಪಿಎಸ್‍ನ್ನು ನಿಯಂತ್ರಿಸುವ ನಿಯೋ ಸ್ಯಾಟಲೈಟ್ಸ್ ಸದಾ ತಿರುಗುತ್ತಾ ಚಲಿಸುತ್ತಾ ಇರುವ ಉಪಗ್ರಹ. ರಕ್ಷಣಾ ಖಾತೆಗೆ ಸಂಬಂಧಿಸಿದ ಮಾಹಿತಿ, ಚಂಡಮಾರುತದಂತ ಪ್ರಾಕೃತಿಕ ಏರಿಳಿತಗಳ ಬಗ್ಗೆ ಮಾಹಿತಿ ಕಳುಹಿಸುತ್ತಿರುತ್ತದೆ. ಹಗಲೂ ರಾತ್ರಿ ಈ ಕೃತಕ ಉಪಗ್ರಹ ಎಪ್ಲಿಕೇಶನ್‍ನ್ನು ಬಳಸಲಾಗುತ್ತಿದೆ ಎಂದು ಹೇಳಿದ ಅವರು, ದೇಶಕ್ಕೆ ಹಾಗೂ ಜನರಿಗೆ ಉಪಯುಕ್ತವಾಗಬಲ್ಲ ಎಎಸ್‍ಎಲ್‍ವಿ. ಎಸ್‍ಎಸ್‍ಎಲ್‍ವಿ, ಪಿಎಸ್‍ಎಲ್‍ವಿ ಮೊದಲಾದ ಉಪಗ್ರಹಗಳನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಮಂಗಳಯಾನ, ಚಂದ್ರಯಾನದ ಬಳಿಕ ಚಂದ್ರಯಾನ-4 ಸಿದ್ಧತೆಗಳು ನಡೆಯುತ್ತಿದೆ ಎಂದು ಹೇಳಿದರು.

    ಮಾನವ ಬಾಹ್ಯಾಕಾಶ ಕಾರ್ಯಕ್ರಮದಡಿಯಲ್ಲಿ ಆಸ್ಟ್ರೋನಾಟ್‍ನ್ನು ಆಕಾಶಕ್ಕೆ ಮುಂದಿನ ವರ್ಷ ಕಳುಹಿಸಲಾಗುತ್ತಿದೆ. ರೋಬೋಟ್‍ನ್ನು ಚಂದ್ರನಲ್ಲಿ ಕಳುಹಿಸಿ, ರೋಬೋಟ್ ಲ್ಯಾಂಡ್ ಆದ ಬಳಿಕ ಚಂದ್ರನ ಮೇಲ್ಮೈಯಲ್ಲಿ ಪ್ರಯೋಗ ನಡೆಸಿ ಚಂದ್ರನ ಮೇಲಿನಿಂದ ವಸ್ತುವನ್ನು ಸಂಗ್ರಹಿಸಿ ಭೂಮಿಗೆ ತರುವ ಯೋಜನೆ ಸಿದ್ಧಪಡಿಸಲಾಗುತ್ತಿದೆ. ವಿಜ್ಞಾನಿಗಳು ಅದನ್ನು ಪರೀಕ್ಷಿಸಿ ಪ್ರಯೋಗ ಮಾಡಿ ಮುಂದಿನ ಕಾರ್ಯಯೋಜನೆ ಸಿದ್ಧವಾಗುತ್ತದೆ. ಇಸ್ರೋ ಸಂಸ್ಥೆಯ ಮತ್ತೊಂದು ಮಹತ್ವದ ಯೋಜನೆ ಭಾರತೀಯ ಅಂತರಿಕ್ಷ ಸ್ಟೇಶನ್. ಸ್ವಾತಂತ್ರ್ಯದ ಶತಮಾನೋತ್ಸವದ ಅಂದರೆ 2047 ರೊಳಗೆ ಈ ಯೋಜನೆ ಕಾರ್ಯಗತಗೊಳಿಸುವಲ್ಲಿ ಎಲ್ಲಾ ಇಸ್ರೋ ಸೆಂಟರ್ ಹಾಗೂ ಇಸ್ರೋ ವಿಜ್ಞಾನಿಗಳು ಕಾರ್ಯತತ್ಪರರಾಗಿದ್ದಾರೆ ಎಂದು ಹೇಳಿದರು.

    ವಿಶ್ವ ವಿನಾಯಕ ನ್ಯಾಶನಲ್ ಇಂಗ್ಲೀಷ್ ಮೀಡಿಯಂ ಸ್ಕೂಲ್‍ನ ಮ್ಯಾನೇಜಿಂಗ್ ಡೈರೆಕ್ಟರ್ ಎಂ. ಪ್ರಭಾಕರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

    Click here

    Click here

    Click here

    Call us

    Call us

    ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.

    ಬೆಂಗಳೂರಿನ ದುರ್ಗಾಪರಮೇಶ್ವರಿ ಎಜುಕೇಶನಲ್ ಟ್ರಸ್ಟ್‍ನ ಚೇರ್‍ಮೆನ್ ಡಾ.ಜಯರಾಮ ಶೆಟ್ಟಿ ಎಸ್. ಶುಭಾಶಂಸನೆಗೈದರು. ಶಾಲೆಯ ಅಕಾಡೆಮಿಕ್ ಡೈರೆಕ್ಟರ್ ದಿವಾಕರ ಶೆಟ್ಟಿ ಎಚ್. ಉಪಸ್ಥಿತರಿದ್ದರು.

    ಆಕಾಶಕಾಯಗಳ ಮಾಹಿತಿಯನ್ನೊಳಗೊಂಡ ಮಾದರಿಗಳ ಬಸ್‍ನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿ ಇಡಲಾಗಿತ್ತು. ಆಕಾಶಕಾಯಗಳ ಮಾಹಿತಿಯೊಂದಿಗೆ ಇಸ್ರೋ ಸಂಸ್ಥೆಯ ಕಾರ್ಯವೈಖರಿ, ಬಾಹ್ಯಾಕಾಶ ವಿಜ್ಞಾನ ಹಾಗೂ ಇಸ್ರೋ ಸಂಸ್ಥೆಯಲ್ಲಿರುವ ಉದ್ಯೋಗಾವಕಾಶಗಳ ಬಗ್ಗೆ ಇಸ್ರೋ ಸಂಸ್ಥೆಯ ವಿಜುವಲ್ ಡಾಕ್ಯುಮೆಂಟೇಶನ್ ಮತ್ತು ಔಟ್ ರೀಚ್ ಘಟಕದ ಮುಖ್ಯಸ್ಥ ಪಿ.ವಿ.ಎನ್. ಮೂರ್ತಿ ನೇತೃತ್ವದಲ್ಲಿ ವಿಜ್ಞಾನಿಗಳು ಹಾಗೂ ತಂತ್ರಜ್ಞರು ಮಾಹಿತಿ ನೀಡಿದರು. ಕುಂದಾಪುರ ಮತ್ತು ಬ್ರಹ್ಮಾವರ ವಲಯದ ವಿವಿಧ ಶಾಲೆಗಳ 6ರಿಂದ 9ನೇ ತರಗತಿವರೆಗಿನ ಸುಮಾರು 3500 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ಶಾಲೆಯ ಪ್ರಾಂಶುಪಾಲ ನಿತಿನ್ ಡಿಅಲ್ಮೇಡಾ ಸ್ವಾಗತಿಸಿದರು. ಸಹಶಿಕ್ಷಕಿ ರೋಹಿಣಿ ಅತಿಥಿಗಳನ್ನು ಪರಿಚಯಿಸಿದರು. ಸಹಶಿಕ್ಷಕಿ ಸುಷ್ಮಾ ಆರ್. ಕಾರ್ಯಕ್ರಮ ನಿರ್ವಹಿಸಿದರು. ಸಹಶಿಕ್ಷಕಿ ನಂದಿನಿ ಆಚಾರ್ಯ ವಂದಿಸಿದರು.

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಕೊರಗ ಕಾಲೋನಿಯ 8 ಹೊಸ ಮನೆ ನಿರ್ಮಾಣಕ್ಕೆ ಒಂದು ಲಕ್ಷ ರೂಪಾಯಿ ಚೆಕ್ ವಿತರಣೆ

    20/12/2025

    ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಅಂಬಲಪಾಡಿ ನಾರಾಯಣಾಚಾರ್ಯ ಅವರಿಗೆ ಶ್ರದ್ಧಾಂಜಲಿ ಸಭೆ

    20/12/2025

    ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಿಂದ ದೇಶದ ಭದ್ರತೆಗೆ ಅಪಾಯ: ಕೆ. ವಿಕಾಸ್‌ ಹೆಗ್ಡೆ

    20/12/2025
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಕೊರಗ ಕಾಲೋನಿಯ 8 ಹೊಸ ಮನೆ ನಿರ್ಮಾಣಕ್ಕೆ ಒಂದು ಲಕ್ಷ ರೂಪಾಯಿ ಚೆಕ್ ವಿತರಣೆ
    • ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಅಂಬಲಪಾಡಿ ನಾರಾಯಣಾಚಾರ್ಯ ಅವರಿಗೆ ಶ್ರದ್ಧಾಂಜಲಿ ಸಭೆ
    • ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಿಂದ ದೇಶದ ಭದ್ರತೆಗೆ ಅಪಾಯ: ಕೆ. ವಿಕಾಸ್‌ ಹೆಗ್ಡೆ
    • ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆಯ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ
    • ಕುಂದಾಪುರದ ಆರ್. ಎನ್. ಶೆಟ್ಟಿ ಪ.ಪೂ ಕಾಲೇಜಿನ ಬಹುಮಾನ ವಿತರಣೆ ಕಾರ್ಯಕ್ರಮ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.