Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ 14ರ ವಯೋಮಾನದ ಹುಡುಗಿಯರ ರಿದಮಿಕ್ ಯೋಗ ವಿಭಾಗದಲ್ಲಿ ಕಿರಿಮಂಜೇಶ್ವರ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ  ವಿದ್ಯಾರ್ಥಿನಿ ಸಾನಿಧ್ಯ ಎಸ್. ಮೊಗವೀರ ಪ್ರಥಮ ಸ್ಥಾನಗಳಿಸಿ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ವಿದ್ಯಾರ್ಥಿಯ ಈ ಸಾಧನೆಗೆ ಆಡಳಿತ ಮಂಡಳಿ, ಬೋಧಕ ಮತ್ತು ಬೋಧಿಕೇತರವರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೊಂಕಣಿ ಖಾರ್ವಿ ಸಮಾಜದ ವತಿಯಿಂದ ಕೋಡಿ ಸಮುದ್ರ ಕಿನಾರೆಯಲ್ಲಿ ಸೋಮವಾರದಂದು ಸಮುದ್ರ ಪೂಜೆ ಜರುಗಿತು. ಉತ್ತಮ ಮಳೆ, ಬೆಳೆ, ಮತ್ಸ್ಯ ಸಮೃದ್ಧಿ ಹಾಗೂ ಲೋಕ ಕಲ್ಯಾಣಾರ್ಥ ಪ್ರಾರ್ಥನೆ ಸಲ್ಲಿಸಲಾಯಿತು. ಖಾರ್ವಿಕೇರಿ ಶ್ರೀಮಹಾಕಾಳಿ ಅಮ್ಮನವರ ದೇವಸ್ಥಾನದ ಅಧ್ಯಕ್ಷರಾದ ಅಜಂತ ಖಾರ್ವಿ ಪೂಜೆಯ ನೇತೃತ್ವ ವಹಿಸಿದ್ದರು. ದೇವಳದ ಪ್ರಧಾನ ಅರ್ಚಕರಾದ ಸುಮಂತ್ ಭಟ್ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ದೇವಳದ ಉಪಾಧ್ಯಕ್ಷರಾದ ಪ್ರಕಾಶ್ ಆರ್. ಖಾರ್ವಿ, ಮುಕ್ತೇಸರರದ ಆನಂದ ನಾಯ್ಕ, ಸಲಹೆಗಾರರಾದ ಜಯಾನಂದ ಖಾರ್ವಿ, ಕಾರ್ಯದರ್ಶಿ ನಾಮದೇವ ಖಾರ್ವಿ, ಖಜಾಂಚಿ ರಾಜು ನಾಯ್ಕ್, ಗಣೇಶೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಖಾರ್ವಿ, ಶ್ರೀ ಮಹಾಕಾಳಿ ದೇವಸ್ಥಾನದ ಆಡಳಿತ ಮಂಡಳಿ ನಿರ್ದೇಶಕರು, ಮಹಾಕಾಳಿ ಮಹಿಳಾ ಮಂಡಳಿ ಸದಸ್ಯರು, ನವರಾತ್ರಿ ಉತ್ಸವದ ಸದಸ್ಯರು ಹಾಗೂ ವಿದ್ಯಾರಂಗ ಮಿತ್ರ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಉಸ್ತುವಾರಿಯನ್ನು ತಲ್ಲೂರು ಸುನಿಲ್ ಖಾರ್ವಿ ನಿರ್ವಹಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮನುವಿಕಾಸ ಸಂಸ್ಥೆ ಶಿರಸಿ ಮತ್ತು ನಬಾರ್ಡ್ ಬೆಂಗಳೂರು ಇವರ ಸಹಯೋಗದಲ್ಲಿ ಸೋಮವಾರದಂದು ಮರವಂತೆ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಮತ್ಸ್ಯಸಿರಿ ಮಹಿಳಾ ಮೀನು ಉತ್ಪಾದಕರ ಮತ್ತು ಜನ ಸಂಘದ ಆಡಳಿತ ಮಂಡಳಿ ಸದಸ್ಯರಿಗೆ ತರಬೇತಿ ಕಾರ್ಯಕ್ರಮ ಜರುಗಿತು. ಸಭೆಯಲ್ಲಿ ಮನುವಿಕಾಸ ಸಂಸ್ಥೆ ನಿರ್ದೇಶಕರಾದ ಗಣಪತಿ ಭಟ್, ಮರವಂತೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಗೀತಾ, ಮರವಂತೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲೋಕೇಶ್ ಖಾರ್ವಿ, ಮತ್ಸ್ಯ ಸಂಜೀವಿನಿ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷರಾದ ಆನಂದ್ ಖಾರ್ವ, ಜೀವನ ಶಿಕ್ಷಣ ತರಬೇತುದಾರರಾದ ರಾಘವೇಂದ್ರ ಆಚಾರ್ಯ ಹಾಗೂ ಮನುವಿಕಾಸ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೆನ್-ಈ-ಮಾಬುನಿ ಶಿಟೋ-ರಿಯೋ ಕರಾಟೆ ಸ್ಕೂಲ್ ಆಫ್ ಇಂಡಿಯಾ ಉಡುಪಿ ಜಿಲ್ಲೆ ಇವರ ವತಿಯಿಂದ ಥಂಡರ್ಸ್ ಗ್ರ್ಯಾಂಡ್ ಬೇ, ಸುಭಾಸ್‌ನಗರ, ಕುರ್ಕಾಲು ಇಲ್ಲಿ ನಡೆದ ದ್ವಿತೀಯ ರಾಷ್ಟ್ರಮಟ್ಟದ ಆಹ್ವಾನಿತ ತಂಡಗಳ ಕರಾಟೆ ಚಾಂಪಿಯನ್‌ಶಿಪ್ ನಲ್ಲಿ ಕಟಾ ಮತ್ತು ಕುಮಿಟಿ ಈ ಎರಡೂ ವಿಭಾಗದಲ್ಲಿ ಶ್ರೀಶ ಗುಡ್ರಿ ಅವರು ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿದ್ದಾರೆ. ಅವರು ಈ ಮೊದಲು ದೆಹಲಿಯಲ್ಲಿ ನಡೆದಂತಹ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಚಿನ್ನದ ಪದಕ ಗೆದ್ದಿರುತ್ತಾರೆ. ಶ್ರೀಶ ಗುಡ್ರಿ ಅವರು ವೆಲಾಸಿಟಿ ಅಕಾಡೆಮಿ ಆಫ್ ಮಾರ್ಷಿಯಲ್ ಆರ್ಟ್ಸ್ ಅಂಡ್ ಫಿಟ್ನೆಸ್ ಇದರ ಮುಖ್ಯಸ್ಥ ಅಕ್ಷಯ್ ಹೆಮ್ಮಾಡಿ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಕುಂದಾಪುರದ ಸಂತೋಷ್ ಮೊಗವೀರ ಮೇಲ್ ಹರ್ಜಿ ಮತ್ತು ಹೇಮಾವತಿ ಗುಡ್ರಿ ದಂಪತಿಯ ಪುತ್ರ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರಜತ ಮಹೋತ್ಸವದ ಸಂಭ್ರಮದಲ್ಲಿರುವ ಸುರಭಿ ರಿ. ಬೈಂದೂರು ಸಂಸ್ಥೆಯ ರಜತ ವರ್ಷದ ಅಧ್ಯಕ್ಷರಾಗಿ ಆನಂದ ಮದ್ದೋಡಿ, ಕಾರ್ಯದರ್ಶಿಯಾಗಿ ರಾಮಕೃಷ್ಣ ದೇವಾಡಿಗ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಸ್ಥೆಯ ಉಪಾಧ್ಯಕ್ಷರುಗಳಾಗಿ ಅಬ್ದುಲ್ ರವೂಫ್, ಲಕ್ಷ್ಮಣ ಕೊರಗ ಬೈಂದೂರು, ಭಾಸ್ಕರ ಭಾಡ, ಸುರೇಶ್ ಹುದಾರ್, ಖಜಾಂಚಿಯಾಗಿ ರಾಘವೇಂದ್ರ ಕೆ. ಪಡುವರಿ, ಜೊತೆ ಕಾರ್ಯದರ್ಶಿಯಾಗಿ ಸುನಿಲ್ ಹೆಚ್. ಜಿ. ಬೈಂದೂರು, ನಿಶ್ಚಿತಾ ಪಡುವರಿ, ಸುಬ್ರಹ್ಮಣ್ಯ ಗಾಣಿಗ, ಸಂಘಟನಾ ಕಾರ್ಯದರ್ಶಿಯಾಗಿ ವೆಂಕಟರಮಣ ಡಿ. ಮಯ್ಯಾಡಿ, ಶ್ರೀಧರ್ ಆಚಾರ್ಯ ಪಡುವರಿ, ಕಾವೇರಿ ಗಾಣಿಗ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸತ್ಯನಾ ಕೊಡೇರಿ, ಉದಯ ಗಾಣಿಗ ಬೈಂದೂರು, ವಿನೋದಾ ಗಜೇಂದ್ರ ನಾಯ್ಕ್ ಆಯ್ಕೆಯಾಗಿದ್ದಾರೆ. ಸಂಸ್ಥೆಯ ಗೌರವಾಧ್ಯಕ್ಷರಾಗಿ ಚಂದ್ರಶೇಖರ ಹೊಳ್ಳ ಉಪ್ಪುಂದ, ನಿರ್ದೇಶಕರುಗಳಾಗಿ ಸುಧಾಕರ ಪಿ. ಬೈಂದೂರು, ಗಣಪತಿ ಹೋಬಳಿದಾರ್, ವ್ಯವಸ್ಥಾಪಕರಾಗಿ ಕೃಷ್ಣಮೂರ್ತಿ ಉಡುಪ ಕಬ್ಸೆ ಮುಂದುವರಿಯಲಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ನಾಗರಾಜ ಪಿ. ಯಡ್ತರೆ, ಗಣೇಶ್ ಪೂಜಾರಿ ಬೈಂದೂರು, ರಾಘವೇಂದ್ರ ಅರ್ಚಕ ಕಾಲ್ತೋಡು, ಗಣೇಶ್ ಟೈಲರ್, ನಾಗರಾಜ ಬಾಡ, ಚಂದ್ರಶೇಖರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು 2023-24ನೇ ಸಾಲಿನಲ್ಲಿ ರೂ.200 ಕೋಟಿ ವ್ಯವಹಾರ ನಡೆಸಿ ರೂ.೫೧.೯೬ ಲಕ್ಷ ನಿವ್ವಳ ಲಾಭಗಳಿಸಿದ್ದು, ಸಂಘದ ಸದಸ್ಯರಿಗೆ ಶೇ.13 ಲಾಭಾಂಶ ನೀಡಲಾಗುತ್ತಿದೆ ಎಂದು ಸೊಸೈಟಿಯ ಅಧ್ಯಕ್ಷ, ಎಸ್. ರಾಜು ಪೂಜಾರಿ ಹೇಳಿದರು.  ಬೈಂದೂರು ಪ್ರಧಾನ ಕಛೇರಿಯಲ್ಲಿ ಭಾನುವಾರ ನಡೆದ ಸೊಸೈಟಿಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ನಾಲ್ಕು ಶಾಖೆಗಳನ್ನು ಹೊಂದಿದ ನಮ್ಮ ಸಂಘವು 15 ವರ್ಷ ಪೂರೈಸಿದೆ. ಸಹಕಾರಿ ಸಂಸ್ಥೆಗಳನ್ನು ಮುನ್ನೆಡೆಸುವಾಗ ಸವಾಲುಗಳು ಸಹಜ. ಸಹಕಾರಿ ಕ್ಷೇತ್ರದಲ್ಲಿ ಸಾಮಾಜಿಕ ಚಿಂತನೆ ಮೂಲಕ ಅಭಿವೃದ್ದಿ ಸಾಧ್ಯ. ಈ ನಿಟ್ಟಿನಲ್ಲಿ ಸಮಾನ ಮನಸ್ಕರು ಸೇರಿ ಸ್ಥಾಪಿಸಿದ ಈ ಸಂಸ್ಥೆ ಜಿಲ್ಲೆಯಲ್ಲಿಯೇ ಜನಸಾಮಾನ್ಯರ ಸಂಸ್ಥೆಯಾಗಿ ಹೆಸರುಗಳಿಸಿದೆ. ಸಮಾಜದ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿ ಹಾಗೂ ಮಹಿಳಾ ಸಬಲೀಕರಣಕ್ಕೂ ಸಂಘ ಸಹಕಾರಿಯಾಗಿದೆ. ಗ್ರಾಹಕರ ಸಲಹೆ, ಸೂಚನೆ ಹಾಗೂ ಸಹಕಾರದಿಂದ ಗ್ರಾಮೀಣ ಪ್ರದೇಶದಲ್ಲಿ ಸಮಾಜಮುಖಿ ಚಿಂತನೆಯೊಂದಿಗೆ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಸಿಬ್ಬಂದಿಗಳ ಪ್ರಾಮಾಣಿಕ ಕಾರ್ಯದಕ್ಷತೆ ಮತ್ತು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ದೇವರ ಸನ್ನಿಧಿಯಲ್ಲಿ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಮಾರ್ಗದರ್ಶನ, ಆಶೀರ್ವಾದದೊಂದಿಗೆ ಆ.1೦ ರಂದು ಪ್ರಾರಂಭಗೊಂಡ ’ಅಖಂಡ ಭಜನಾ ಸಪ್ತಾಹ’ ಮಹೋತ್ಸವ’ ದೀಪ ವಿಸರ್ಜನೆಯೊಂದಿಗೆ ಸಮಾಪನಗೊಂಡಿತು. ಅಂದು ಬೆಳಿಗ್ಗೆ ದೀಪ ವಿಸರ್ಜನೆಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನದ ಪ್ರಧಾನ ಅರ್ಚಕ ಎಸ್.ವೆಂಕಟರಮಣ ಆಚಾರ್ಯ ಮತ್ತು ಪುರೋಹಿತರಾದ ಜಿ. ವಿಠಲದಾಸ ಭಟ್ ನೇತೃತ್ವದಲ್ಲಿ ನಡೆಯಿತು. ದೇವರಿಗೆ ಮಧ್ಯಾಹ್ನ ಮಹಾಪೂಜೆ, ಮಹಾಸಮಾರಾಧನೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಸಹಸ್ರಾರು ಭಜಕರ ಸೇವೆಯೊಂದಿಗೆ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಅಖಂಡ ಭಜನಾ ಸಪ್ತಾಹ ಮಹೋತ್ಸವದಲ್ಲಿ ಊರ ಪರ ಊರಿನ ವಿವಿಧ ಭಜನಾ ತಂಡಗಳು ಪಾಲ್ಗೊಂಡು ಭಜನಾ ಸೇವೆ ಸಮರ್ಪಿಸಿದರು. ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಊರಿನ ಹತ್ತು ಸಮಸ್ತರು, ಸಮಾಜಬಾಂಧವರು, ಭಜಕರು ಮತ್ತಿತರರು ಮಹೋತ್ಸವದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಹೆರಂಜಾಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 13 ವರ್ಷ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಗೀತಾ ಇವರಿಗೆ ಶಾಲಾ ಅಧ್ಯಾಪಕ ವೃಂದ. ಎಸ್ ಡಿ ಎಂ ಸಿ ಸರ್ವ ಸದಸ್ಯರು ಮಕ್ಕಳ ಪಾಲಕ ಪೋಷಕರು ಹಳೆ ವಿದ್ಯಾರ್ಥಿಗಳು ವಿದ್ಯಾಭಿಮಾನಿಗಳು ಸೇರಿಕೊಂಡು ಚಿನ್ನದ ಉಂಗುರವನ್ನು ತೊಡಿಸಿ ಅಭಿನಂದನಾ ಪತ್ರವನ್ನು ನೀಡಿ ಸನ್ಮಾನಿಸಿ ಬೀಳ್ಕೊಡಲಾಯಿತು. ಈ ಸಮಾರಂಭದ ಅಧ್ಯಕ್ಷ ಸ್ಥಾನವನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ನಾಗರತ್ನ ಆರ್. ಸಾಲಿಮನಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಂಬದಕೋಣೆ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಗಣೇಶ್ ದೇವಾಡಿಗ ಕಂಬದಕೋಣೆ ಗ್ರಾಮ ಪಂಚಾಯಿತಿ ಸದಸ್ಯ ಜಲಜಾಕ್ಷಿ ಗಾಣಿಗ, ಸಂಸ್ಕೃತ ಪಾಠಶಾಲಾ ಬಹುಳಾಪುರ ಇಲ್ಲಿಯ ಮುಖ್ಯ ಶಿಕ್ಷಕರಾದ ವಿದ್ವಾನ್ ತಿರುಮಲೇಶ್ವರ ಭಟ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರಾಮಕೃಷ್ಣ ದೇವಾಡಿಗ, ಕೊಡುಗೈ ದಾನಿಗಳು ಉದ್ಯಮಿಗಳು ಧನುಷ್, ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಕೃಷ್ಣ ಪೂಜಾರಿ ಹಿತ್ಲ್ ಮನೆ, ಸ್ಪೂರ್ತಿ ಜನರಲ್ ಸ್ಟೋರ್ಸ್ ನ ಮಾಲಕರಾದ ಎಚ್. ವಿಜಯಕುಮಾರ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಸರ್ಕಾರ ವಿವಿಧ ಯೋಜನೆಯಡಿ ನಗರ ಸ್ಥಳೀಯ ಸಂಸ್ಥೆಗಳಿಗೆ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ನೀಡಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಪ್ರತಿಶತ ನೂರರಷ್ಟು ಅನುಷ್ಠಾನಗೊಳಿಸಬೇಕು ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್‌ನ ಡಾ. ವಿ. ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರಾವಳಿ ಭಾಗದಲ್ಲಿರುವ ಸ್ಥಳೀಯ ಸಂಸ್ಥೆಗಳು ಇತರೆ ಜಿಲ್ಲೆಗಳಿಗೆ ಹೋಲಿಸಿದ್ದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಸರಕಾರ ಜಾರಿಗೆ ತಂದಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಯಥಾವತ್ತಾಗಿ ಸರಕಾರದ ಮಾರ್ಗಸೂಚಿಯನ್ವಯ ವಿಳಂಬವಿಲ್ಲದೇ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆಮಾಡಿಕೊಳ್ಳುವುದರೊಂದಿಗೆ ಇನ್ನಷ್ಟು ಉತ್ತಮ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡಿ ರಾಜ್ಯಕ್ಕೆ ಮಾದರಿಯಾಗಬೇಕು ಎಂದರು. ಆಸ್ತಿ ತೆರಿಗೆ ವಸೂಲಾತಿಯಲ್ಲಿ ಬೈಂದೂರು ಹಾಗೂ ಕುಂದಾಪುರ ಸ್ಥಳೀಯ ಸಂಸ್ಥೆಗಳು ಜಿಲ್ಲೆಯ ಇತರೆ ಸ್ಥಳೀಯ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಸಮುದಾಯದ ಅಭ್ಯುದಯಕ್ಕಾಗಿ ರೋಟರಿ ನೂರಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಸ್ನೇಹ, ಸೇವೆ, ವಿಭಿನ್ನತೆಯಲ್ಲಿ ಏಕತೆಯನ್ನು ಸಾಧಿಸುವುದರೊಂದಿಗೆ ಸಮಾಜದ ಅಭ್ಯುದಯಕ್ಕಾಗಿ ಮುಂದಾಳತ್ವ ವಹಿಸಿಕೊಳ್ಳುವ ಕಾರ್ಯಗಳು ರೋಟರಿ ಮೂಲಕ ನಿರಂತರವಾಗಿ ನಡೆಯುತ್ತಲೇ ಇವೆ ಎಂದು ರೋಟರಿ ಜಿಲ್ಲೆ 3180ರ ಮಾಜಿ ಜಿಲ್ಲಾ ಗವರ್ನ್‌ರ್ ಡಾ. ಭರತೇಶ್ ಅದಿರಾಜ್ ಅವರು ಹೇಳಿದರು. ಅವರು ಭಾನುವಾರ ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ರೋಟರಿ ಕ್ಲಬ್ ಬೈಂದೂರು ನೇತೃತ್ವದಲ್ಲಿ ಆಯೋಜಿಸಲಾದ ಆರ್.ಐ ಡಿಸ್ಟಿಕ್ 3182 ಝೋನ್-1ರ ಝೋನಲ್ ಮೆಂಬರ್‌ಶಿಪ್ ಡೆವೆಲಪ್‌ಮೆಂಟ್ ಮತ್ತು ಪಬ್ಲಿಕ್ ಇಮೇಜ್ ಸೆಮಿನಾರ್‌ನಲ್ಲಿ ಪಬ್ಲಿಕ್ ಇಮೇಜ್ ಬಗ್ಗೆ ಉಪನ್ಯಾಸ ನೀಡಿ ರೋಟರಿಯಿಂದ ಕೈಗೊಳ್ಳುವ ಸಮಾಜಮುಖಿ ಕಾರ್ಯಗಳನ್ನು ಸಮುದಾಯಕ್ಕೆ ತಿಳಿಯುವಂತೆ ಮಾಡುವುದು ಕೂಡ ಆಯಾ ಕ್ಲಬ್‌ಗಳ ಜವಾಬ್ದಾರಿಯಾಗಿದೆ. ರೋಟರಿಯ ಸಾಮಾಜಿಕ ಮೌಲ್ಯ ಹೆಚ್ಚಿಸುವಂತಹ ಕಾರ್ಯಗಳು ನಿರಂತರವಾಗಿ ಆಗಬೇಕಿದೆ ಎಂದರು. ರೋಟರಿ ಝೋನಲ್ ಲರ್ನಿಂಗ್ ಫೆಸಿಲಿಟೇಟರ್ ಡಾ. ಉಮೇಶ್ ಪುತ್ರನ್ ಅವರು ಮೆಂಬರ್‌ಶಿಪ್ ಡೆವಲಪ್‌ಮೆಂಟ್ ಬಗ್ಗೆ ಉಪನ್ಯಾಸ ನೀಡಿ ಅಂತರಾಷ್ಟ್ರೀಯ ಸಂಸ್ಥೆಯಾದ ರೋಟರಿಯಲ್ಲಿ ವಿವಿಧ…

Read More