Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಕುಂದಾಪುರ ವಿಧಾನಸಭಾ ಕ್ಷೇತ್ರದ ತೆಕ್ಕಟ್ಟೆ ಸಮೀಪದ ರಾಷ್ಟ್ರೀಯ ಹೆದ್ದಾರಿ-66ರ ಪಕ್ಕದಲ್ಲಿರುವ ಗುರು ಬ್ರಹ್ಮ ಜನರಲ್ ಸ್ಟೋರ್‌ನಲ್ಲಿ ಸೋಮವಾರ ತಡ ರಾತ್ರಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದ ಅಂಗಡಿಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. ಅವರು ಬೆಂಗಳೂರಿನಲ್ಲಿ ಇದ್ದ ಕಾರಣ,ತಕ್ಷಣವೇ ಅಂಗಡಿ ಮಾಲೀಕ ಸಂತೋಷ್ ಮಡಿವಾಳ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ವಿವರ ಪಡೆದುಕೊಂಡಿದ್ದರು. ಧೈರ್ಯ ತುಂಬುವುದರ ಜೊತೆಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಲದೆ  ಬುಧವಾರ ಕುಂದಾಪುರಕ್ಕೆ ಆಗಮಿಸಿದ ಶಾಸಕರು  ಅವಘಡದ ನಡೆದ ಅಂಗಡಿಯ ಮಾಲಿಕನೊಂದಿಗೆ ಮಾಹಿತಿ ಪಡೆದು ಧೈರ್ಯ ತುಂಬಿ ಸಹಕಾರ ನೀಡುವುದಾಗಿ ಹೇಳಿದರು. ಈ ವೇಳೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗಣಪತಿ ಟಿ. ಶ್ರೀಯಾನ್, ಪ್ರಮುಖರಾದ ಶ್ರೀನಾಥ್ ಶೆಟ್ಟಿ ತೆಕ್ಕಟ್ಟೆ, ವಿನೋದ್ ದೇವಾಡಿಗ, ಕಿರಣ್ ಪೂಜಾರಿ ತೆಕ್ಕಟ್ಟೆ, ಆನಂದ್ ಕಾಂಚನ್, ಗಣೇಶ್ ಮೊಗವೀರ, ಸುಧೀಂದ್ರ ಗಾಣಿಗ, ಧ್ರುವ ತೆಕ್ಕಟ್ಟೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೆಂಗಳೂರು: ವಿಶ್ವ ರಾಮಕ್ಷತ್ರಿಯ ಮಹಾಸಂಘ ರಿ. ವತಿಯಿಂದ ಡಿಸೆಂಬರ್ 20, 2026ರಂದು ಬ್ರಹ್ಮಾವರದಲ್ಲಿ ನಡೆಯಲಿರುವ ರಾಮಕ್ಷತ್ರಿಯರ ವೃತ್ತಿಪರರ ಸಮಾವೇಶದ ಪೂರ್ವಭಾವಿ ಸಭೆಯು ಆಗಸ್ಟ್ 2, 2026ರಂದು ಬೆಂಗಳೂರಿನ ವಿಜಯನಗರದ ಕದಂಬ ಸಾಮ್ರಾಟ್ ಹೋಟೆಲ್ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಿಶ್ವ ರಾಮಕ್ಷತ್ರಿಯ ಮಹಾಸಂಘದ ಅಧ್ಯಕ್ಷ ಎಚ್. ಆರ್. ಶಶಿಧರ್ ನಾಯಕ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಪೋಲೋ ಆಸ್ಪತ್ರೆಯ ಹೃದಯರೋಗ ತಜ್ಞ ಡಾ. ಕೆ.ಬಿ. ಪ್ರಸಾದ್, ಮಲ್ಲಿಕ್ ಇಂಡಸ್ಟ್ರೀಸ್‌ನ ಇಂಜಿನಿಯರ್ ಎಂ.ಜಿ. ಲಕ್ಷ್ಮೀನಾರಾಯಣ, ಹಿರಿಯ ವಕೀಲ ಡಿ. ಕೆ. ಮಂಜುನಾಥ್, ಬೆಂಗಳೂರಿನ ಸಂಯೋಜಕ ಸುರೇಶ್ ಬಿಜುರಾರು ಹಾಗೂ ಸಮಾವೇಶದ ಅಧ್ಯಕ್ಷ ಅಶೋಕ್ ಬೆಟ್ಟಿನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವು ರಾಮಚಂದ್ರ ಗಂಗೊಳ್ಳಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಬಳಿಕ ಕೆ. ನಾಗರಾಜ್ ಕಾಮಧೇನು ಅವರು ಕಾರ್ಯಕ್ರಮದ ಉದ್ದೇಶವನ್ನು ಪ್ರಾಸ್ತಾವಿಕವಾಗಿ ವಿವರಿಸಿ, ಡಿಸೆಂಬರ್‌ನಲ್ಲಿ ನಡೆಯಲಿರುವ ಸಮಾವೇಶದ ಮಹತ್ವವನ್ನು ಸಭೆಗೆ ತಿಳಿಸಿದರು. ಸಭೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವೃತ್ತಿಪರರು ಭಾಗವಹಿಸಿ, ಸಮಾವೇಶವನ್ನು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕ್ರೀಡೆ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ರೋಟರಿ ಸೇರಿದಂತೆ ವಿವಿಧ ಸಾಮಾಜಿಕ ಸಂಘ- ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಪ್ರಕಾಶ್ ಶೆಟ್ಟಿ ಶೇರ್ಡಿ ಗೈನಾಡಿಮನೆ ಅವರು ಪ್ರತಿಷ್ಠಿತ ಕುಂದಾಪುರ ತಾಲೂಕು ಯುವ ಬಂಟರ ಸಂಘಕ್ಕೆ 2026- 28ನೇ ಸಾಲಿನ ನೂತನ ಗೌರವಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ . ಮೂಲತಃ ಕುಂದಾಪುರದವರಾದ ಪ್ರಕಾಶ್ ಶೆಟ್ಟಿ ಅವರು ದಾಂಡೇಲಿಯಲ್ಲಿ ಶ್ರೀ ದುರ್ಗಾ ಕನ್ಸ್ಟ್ರಕ್ಷನ್ ಇದರ ಆಡಳಿತ ನಿರ್ದೇಶಕರಾಗಿ ಹಾಗೂ ಶ್ರೀ ದುರ್ಗಾ ಹಾರ್ಡ್ ವೇರ್ ಮತ್ತು ಪೇಂಟ್ಸ್ ಇದರ ಆಡಳಿತ ಪಾಲುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಮಾಜಿಕವಾಗಿ ಬಹುಮುಖಿ ನೆಲೆಯಲ್ಲಿ ತೊಡಗಿಕೊಂಡ ದಾಂಡೇಲಿಯ ಕಲಾಶ್ರೀ ಸಂಸ್ಥೆ ಮತ್ತು ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷರಾಗಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಶಂಕನಾರಾಯಣ ಇಲ್ಲಿನ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಮಂಗಳೂರಿನ ಪಟ್ಲ ಪೌಂಡೇಶನ್ ಟ್ರಸ್ಟಿಯಾಗಿ, ದಾಂಡೇಲಿಯ ರೋಟರಿ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷರಾಗಿ, ದಾಂಡೇಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾಗಿ, ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ …

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಮಲ್ಲಿಕಾ ಶೆಟ್ಟಿಯವರಿಗೆ ಶ್ರೀನಿವಾಸ ವಿಶ್ವವಿದ್ಯಾಲಯವು ‘ಎಂಟನೇ ತರಗತಿಯ ವಿದ್ಯಾರ್ಥಿಗಳಲ್ಲಿ ವಿಜ್ಞಾನ ವಿಷಯದ ಸಾಮರ್ಥ್ಯಗಳು, ಆಯ್ದ ಕನ್ನಡ ಭಾಷಾ ಸಾಮರ್ಥ್ಯಗಳು, ವೈಜ್ಞಾನಿಕ ತಾರ್ಕಿಕ ಚಿಂತನಾ ಸಾಮರ್ಥ್ಯ ಹಾಗೂ ವಿಜ್ಞಾನ ವಿಷಯದ ಶೈಕ್ಷಣಿಕ ಸಾಧನೆಯನ್ನು ಅಭಿವೃದ್ಧಿಪಡಿಸುವಲ್ಲಿ ಅಂತರಶಿಸ್ತೀಯ ಬಹುಮಾಧ್ಯಮ ಬೋಧನಾ ವಿಧಾನವು ಬೀರುವ ಪರಿಣಾಮಕಾರಿತ್ವದ ಅಧ್ಯಯನ’ ಎಂಬ ಪ್ರಬಂಧಕ್ಕಾಗಿ ಪಿಎಚ್‌ಡಿ ಪದವಿಯನ್ನು ನೀಡಿದೆ. ಅಲೋಶಿಯಸ್ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಪಕಿ ಡಾ. ವಿಜಯಲಕ್ಷ್ಮಿ ನಾಯಕ್‌ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಅವರು ತಮ್ಮ ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿ ಹಾಗೂ ಬಿಎಡ್ ಶಿಕ್ಷಣವನ್ನು ಆಳ್ವಾಸ್‌ನಲ್ಲಿ ಮುಗಿಸಿದ್ದರು. ಮೂಡುಬಿದಿರೆಯ ಪುಚ್ಚೆಮೊಗರಿನ ದಿವಂಗತ ಬೋಜ ಶೆಟ್ಟಿ ಹಾಗೂ ಸುಲೋಚನ ಶೆಟ್ಟಿ ದಂಪತಿಗಳ ಪುತ್ರಿಯಾಗಿದ್ದು, ಅನಿವಾಸಿ ಉದ್ಯೋಗಿ ರಾಜೇಶ್ ಶೆಟ್ಟಿ ಅವರ ಪತ್ನಿಯಾಗಿದ್ದಾರೆ. 

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಬೈಂದೂರು ವಲಯ ಇವರ ವತಿಯಿಂದ ಬೈಂದೂರಿನಲ್ಲಿ ನಡೆದ ಶಿಕ್ಷಣ ಇಲಾಖೆಯ ತಾಲ್ಲೂಕು ಮಟ್ಟದ 14ರ ವಯೋಮಾನದ ಒಳಗಿನ ಕ್ರೀಡಾಕೂಟದ 42 ಕೆಜಿ ವಿಭಾಗದ  ಕರಾಟೆ ಸ್ಪರ್ಧೆಯಲ್ಲಿ ಗುಜ್ಜಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಆದ್ವಿತಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಈಕೆಯನ್ನು ಶಾಲೆಯ ಮುಖ್ಯಶಿಕ್ಷಕ, ಶಿಕ್ಷಕರು, ಎಸ್‌ಡಿಎಂಸಿ ಮತ್ತು ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಕಲಾ ತಂಡಗಳು ಅನೇಕ ಸದುದ್ಧೇಶದಿಂದ ಜೀವ ತಳೆಯುತ್ತದೆ. ಆರ್ಥಿಕ ಭದ್ರತೆ ಸಿಗದ ಕಾರಣಕ್ಕಾಗಿಯೋ, ಕಲಾ ಪೋಷಕರ ಸಹಕಾರ ದೊರೆಯದ ಕಾರಣಕ್ಕಾಗಿಯೋ, ತಂಡದ ಸದಸ್ಯರ ವೈಮನಸ್ಸಿನ ಕಾರಣದಿಂದಲೋ, ಮುಖ್ಯಸ್ಥನ ದೌರ್ಬಲ್ಯದಿಂದಲೋ ಸುಭದ್ರವಾಗಿ ಸಮಾಜದಲ್ಲಿ ನಿಲ್ಲದೇ ಅಳಿಯುತ್ತದೆ. ಆದರೆ ಕಲಾಜೀವಿ ಕುಟುಂಬದ ಉತ್ಸಾಹಗಳು ನಿರಂತರವಾಗಿ 50 ಕಲಾವಿದರ ಸಂದರ್ಶನದಿಂದ ಅವಿರತವಾಗಿ ಶ್ರಮಿಸಿ ಇದೀಗ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ನಾಡೋಜ ಜಿ. ಶಂಕರ್‌ ಹೇಳಿದರು. ಅವರು ತೆಕ್ಕಟ್ಟೆ ಹಯಗ್ರೀವದಲ್ಲಿ’ಕಲಾಜೀವಿ ನಾದನೈದಿಲೆʼಕೋಟೇಶ್ವರ ದಿ. ರವಿರಾಜ ಕೋಟೇಶ್ವರ ಅವರ ಸವಿ ನೆನಪಿನಲ್ಲಿ 50ರ ಐಸಿರಿ ಒಡ್ಡೋಲಗ ಸರಣಿ ಕಾರ್ಯಕ್ರಮಗಳ 50ರ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನ್ನಾಡಿದರು. ಸಾವಿರ ಸಾವಿರ ಕನಸನ್ನು ಬಹಳ ಹಿಂದೆಯೇ ಹೊತ್ತು, ಸಾಧಿಸಿ ಇದೀಗ ಸಮಾಜಮುಖಿಯಾಗಿ ಸಂಭ್ರಮಿಸುತ್ತಿರುವುದನ್ನು ಕಂಡಾಗ ಕಲಾಜೀವಿ ಜೀವಂತವಾಗಿಯೇ ಮುಂದುವರಿಯುತ್ತದೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಜೊತೆಗೆ ಕಲಾ ಜೀವಿಯ ಕನಸನ್ನು ಕಲಾಭಿಮಾನಿಗಳಾದ ನಾವು ನನಸು ಮಾಡುತ್ತಿರೋಣ ಎಂದರು. ಯಕ್ಷಗಾನದ ಬಡಗು ತಿಟ್ಟಿನ ಕಲಾವಿದರು ಬಡಗಿನ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಇಂಗ್ಲೀಷ್ ವಿಭಾಗದ ವತಿಯಿಂದ ವಿಸ್ತರಣಾ ಚಟುವಟಿಕೆಯ ಭಾಗವಾಗಿ ಚಿಕನ್‌ಸಾಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಲಾಯಿತು. ಶಾಲೆಯ ವಿದ್ಯಾರ್ಥಿಗಳಿಗೆ ನಾನಾ ಚಟುವಟಿಕೆಗಳ ಮೂಲಕ ಶೈಕ್ಷಣಿಕ ಮತ್ತು ಸ್ವಚ್ಛತೆಯ ಅರಿವು ನೀಡುವುದರೊಂದಿಗೆ ಬಹುಮಾನವಾಗಿ ಬರಹದ ವಸ್ತುಗಳನ್ನು ನೀಡಲಾಯಿತು. ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ದೀಪಿಕಾ ಜಿ., ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಸ್ವಾತಿ ಜಿ. ರಾವ್, ಸುರೇಖಾ ಆಚಾರ್, ರೋಹಿತ್ ಕುಮಾರ್ ಶೆಟ್ಟಿ, ಶಾಲೆಯ ಮುಖ್ಯೋಪಾಧ್ಯಾಯರು ಪ್ರೇಮಾ ಕುಮಾರಿ ಹಾಗೂ ಇತರ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ತಂಡದ ಏಕತೆಯಲ್ಲಿ ಯಶಸ್ಸು ಅಡಗಿದೆ. ಸಾರ್ಥಪರನಾಗದೆ ಎಲ್ಲರ ಅಭಿಪ್ರಾಯಗಳನ್ನು ಗೌರವಿಸುವ ಮತ್ತು ಗುರಿಯೆಡೆಗೆ ಬದ್ಧನಾಗಿ ಕೆಲಸ ಮಾಡುವ ವ್ಯಕ್ತಿ ಯಶಸ್ವಿ ನಾಯಕನಾಗಬಲ್ಲ ಎಂದು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್. ಗಂಗೊಳ್ಳಿ ಹೇಳಿದರು. ಅವರು ಇತ್ತೀಚೆಗೆ ಗಂಗೊಳ್ಳಿಯ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ನಡೆದ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಗಳ ವಿವಿಧ ಕ್ಲಬ್‌ಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ  ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಘವೇಂದ್ರ ಶೇರುಗಾರ್ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳಾನ್ನಾಡಿದರು.  ವಿದ್ಯಾರ್ಥಿ ನಾಯಕ ಆರ್ಯನ್ ವಿ.ಕೆ. ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿವಿಧ ಕ್ಲಬ್ ಗಳ ವಿದ್ಯಾರ್ಥಿ ನಾಯಕರು ವಾರ್ಷಿಕ ವರದಿಯನ್ನು ವಾಚಿಸಿದರು. ಶಿಕ್ಷಕಿಯರಾದ ಸುಜಾತ ದೇವಾಡಿಗ ಮತ್ತು ಜಯಶ್ರೀ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರು. ಸರಸ್ವತಿ ವಿದ್ಯಾಲಯ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ಶಾಂತಿ ಡಿಕೋಸ್ಟ ಧನ್ಯವಾದ ಸಮರ್ಪಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ನೈಜ ಪ್ರಪಂಚದ ನಾಯಕತ್ವವನ್ನು ಅನುಭವಿಸುವ ಜೊತೆಗೆ ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವ ಗುಣ ಸಮಾಜ ಸೇವೆ ವ್ಯಕ್ತಿತ್ವ ವಿಕಸನ ಬೆಳೆಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಭಾವಿ ಯುವಜನತೆಯಲ್ಲಿ ಪರಸ್ಪರ ಸಹಕಾರ ಜಾಗತಿಕ ಮೌಲ್ಯ ಸ್ವಯಂ ಪ್ರೇರಿತವಾಗಿರುತ್ತದೆ. ಯುವಶಕ್ತಿ ದೇಶದ ಅಮೂಲ್ಯ ಸಂಪತ್ತು ಎಂದು ರೋಟರಿ ಜಿಲ್ಲಾ ಕ್ಯಾನ್ಸರ್ ಜಾಗೃತಿ ವಿಭಾಗದ ಚೇರ್ಮನ್ ನಾಗಭೂಷಣ ಉಡುಪ ತಿಳಿಸಿದರು. ಅವರು ಕೋಟದ ಮಣೂರು ಪಡುಕರೆ ಸಂಯುಕ್ತ ಪ್ರೌಢಶಾಲೆಯಲ್ಲಿ ನಡೆದ ಇಂಟರ‍್ಯಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ರೋಟರಿ ಜಿಲ್ಲಾ ಇಂಟರ‍್ಯಾಕ್ಟ್ ಚೇರ್ಮನ್ ಗಣೇಶಟ್ಟಿ ಮೊಳಹಳ್ಳಿ ಮಾತನಾಡಿ ಶಾಲಾ ಮಕ್ಕಳಿಗೆ ಪಠ್ಯ ಶಿಕ್ಷಣದೊಂದಿಗೆ ಶೈಕ್ಷಣಿಕ ಕ್ಲಬ್ ಗಳ ಕಾರ್ಯಕ್ರಮ ವಿಶೇಷ ಜ್ಞಾನ ನೀಡುವುದು ಎಂದು ತಿಳಿಸಿದರು . ಕ್ಲಬ್ ಅಧ್ಯಕ್ಷ ರಾಧಾಕೃಷ್ಣ ಬ್ರಹ್ಮಾವರ ಇವರು ನೂತನ ಇಂಟರ‍್ಯಾಕ್ಟ್ ಅಧ್ಯಕ್ಷರಾದ ಗಾನವಿ ಹಾಗೂ ನೂತನ ಕಾರ್ಯದರ್ಶಿಯಾದ ಶ್ರಾವಣಿಗೆ ಅಧಿಕಾರ ಹಸ್ತಾಂತರಿಸಿದರು ಸಮಾರಂಭದಲ್ಲಿ ಇಂಟರ‍್ಯಾಕ್ಟ್ ಕ್ಲಬ್ ಚೇರ್ಮನ್ ರೇವತಿ ಶ್ಯಾಮಸುಂದರ ನಾಯರಿ ಉಪಸ್ಥಿತರಿದ್ದರು. ನಿರ್ಗಮಿತ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ನವದೆಹಲಿ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಮಲೆನಾಡಿನ ರೈಲು ಸಂಪರ್ಕವನ್ನು ಬಲಪಡಿಸುವ ನಿಟ್ಟಿನಲ್ಲಿ ಅತ್ಯಂತ ಮಹತ್ವಕಾಂಕ್ಷೆಯ ಯೋಜನೆಯಾದ ಕೋಟೆಗಂಗೂರು ಕೋಚಿಂಗ್ ಡಿಪೋ ಕಾಮಗಾರಿಯು ವೇಗವಾಗಿ ಪೂರ್ಣಗೊಳ್ಳುವತ್ತ ಸಾಗುತ್ತಿದೆ. ಪ್ರಸಕ್ತ ಅಧಿವೇಶೆನದಲ್ಲಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಯೋಜನೆಯ ಪ್ರಸ್ತುತ ಪ್ರಗತಿಯ ವಿವರಗಳನ್ನು ಒದಗಿಸಿದ್ದಾರೆ.   ಕೇಂದ್ರ ಸರ್ಕಾರ ಒಟ್ಟು 76.01 ಕೋಟಿ ಅಂದಾಜು ವೆಚ್ಚದಲ್ಲಿ ಮಂಜೂರು ಮಾಡಿರುವ ಈ ಯೋಜನೆಗೆ, ಸಂಸದ ರಾಘವೇಂದ್ರ ಅವರ ನಿರಂತರ ಪರಿಶ್ರಮದ ಫಲವಾಗಿ ಮಾರ್ಚ್ 31, 2026ರವರೆಗೆ 58.82 ಕೋಟಿ ರೂ.ಗಳಷ್ಟು ಕಾಮಗಾರಿಗಳನ್ನು ಮುಗಿಸಿ, ಶೇ. 77% ಕ್ಕಿಂತ ಹೆಚ್ಚು ಹಣಕಾಸು ಪ್ರಗತಿ ಸಾಧಿಸಲಾಗಿದೆ. ಅಷ್ಟೇ ಅಲ್ಲದೆ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಾಕಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕೇಂದ್ರ ರೈಲ್ವೆ ಸಚಿವಾಲಯ, ಪ್ರಸಕ್ತ ಸಾಲಿನಲ್ಲಿ 9.5 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಿದೆ. ಯೋಜನೆಯ ಪ್ರಮುಖ ಪ್ರಗತಿ ಮತ್ತು…

Read More