ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸುಣ್ಣಾರಿಯ ಎಕ್ಸಲೆಂಟ್ ಕಾಲೇಜ್ನಲ್ಲಿ ನೀಟ್, ಜೆಇಇ, ಸಿಇಟಿ ಹಾಗೂ ದ್ವಿತೀಯ ಪಿಯುಸಿ ಇಲಾಖಾ ಪರೀಕ್ಷೆಯಲಿ ರ್ಯಾಂಕ್ ವಿಜೇತ 37 ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿಯಾದ ಎಂ. ಎಂ. ಹೆಗ್ಡೆ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ ಇದರ ಉಪಪ್ರಾಂಶುಪಾಲರಾದ ಚಂದ್ರಶೇಖರ್ ಶೆಟ್ಟಿ ಅವರು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಇವತ್ತು ಕೇವಲ ಇಂಜಿನಿಯರ್ ಡಾಕ್ಟರ್ ಮಾತ್ರವಲ್ಲದೆ ಬೇರೆ ಬೇರೆ ಸಾವಿರಾರು ಉದ್ಯೋಗ ಅವಕಾಶಗಳು ಇವತ್ತು ತೆರೆದುಕೊಂಡಿದೆ ಅದನ್ನು ಸುಧುಪಯೋಗಪಡಿಸಿಕೊಳ್ಳಬೇಕು. ಇವತ್ತಿನ ಯುವ ಜನತೆಯಲ್ಲಿ ಮಾನಸಿಕ ನೆಮ್ಮದಿ ಹದಗೆಡುತ್ತಿದೆ. ಹಾಗೆ ನಾವು ಕಲಿತ ಶಾಲೆ ನಮ್ಮ ತಂದೆ ತಾಯಿ ಮತ್ತು ನಮ್ಮ ಊರನ್ನು ಮರೆಯಬಾರದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಅವರು ಮಾತನಾಡಿ ಎಕ್ಸಲೆಂಟ್ ಸಂಸ್ಥೆ ಆರಂಭದಿಂದ ಇಲ್ಲಿವರೆಗೆ ಅನೇಕ ರ್ಯಾಂಕ್ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುತ್ತಾ ಬಂದಿದೆ. ಇವತ್ತಿನ ಕಾಲಮಟ್ಟಕ್ಕೆ ಸರಿಸಮನಾದ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಆಯುಷ್ ಔಷಧಿಗಳಿಂದ ಅಡ್ಡ ಪರಿಣಾಮಗಳಿಲ್ಲದೆ ಕಾಯಿಲೆ ಗುಣಪಡಿಸಬಹುದು, ಜೊತೆಯಲ್ಲಿ ಜೀವನ ಶೈಲಿ ಆಹಾರದ ಬದಲಾವಣೆ ಇಂದ ಆರೋಗ್ಯವಂತರಾಗಿ ಬದುಕಬಹುದು. ಅಲ್ಲದೆ ಹಿರಿಯ ನಾಗರಿಕರಿಗೆ ಈ ಶಿಬಿರ ಏರ್ಪಡಿಸಿ ರುವುದರಿಂದ ಇಲ್ಲಿಯ ಮಾಹಿತಿ ಔಷಧಿಗಳಿಂದ ಇನ್ನಷ್ಟು ವರ್ಷ ಹೆಚ್ಚಿಗೆ ಬದುಕಬಹುದು ಎಂದು ಕಾಲ್ತೋಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಣ್ಣಪ್ಪ ಶೆಟ್ಟಿ ಭಟ್ನಾಡಿ ಹೇಳಿದರು. ಉಡುಪಿ ಜಿಲ್ಲಾ ಪಂಚಾಯತ್, ಉಡುಪಿ ಆಯುಷ್ ಇಲಾಖೆ, ಕಾಲ್ತೋಡು ಗ್ರಾಮ ಪಂಚಾಯತ್ ಹಾಗೂ ಕಾಲ್ತೋಡು ಆಯುಷ್ಮಾನ್ ಆರೋಗ್ಯ ಮಂದಿರ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ಹಿರಿಯ ನಾಗರಿಕರ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾದ 80 ವರ್ಷ ಮೇಲ್ಪಟ್ಟ ಸಮಾಜಸೇವಕರು ಹಿರಿಯರ ಆದ ಸಂಜೀವ್ ಶೆಟ್ಟಿ ಅವರು ಆಯುರ್ವೇದ ಮನೆಮದ್ದಿನ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಗ್ರಾಮ ಪಂಚಾಯತ್ ಕಾಲ್ತೋಡು ಕಾರ್ಯದರ್ಶಿಗಳಾದ ಆನಂದ ಬಿಲ್ಲವ, ಡಾ. ನಾಗರಾಜ್ ಕೌಲಗಿ ಹಾಗೂ ಸಿ. ಎಚ್. ಒ. ಅರುಣ್ ಪ್ರಾ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ಉಪವಿಭಾಗದ ನೂತನ ಸಹಾಯಕ ಆಯಕ್ತರಾಗಿ ಮಹೇಶ್ಚಂದ್ರ ಅಧಿಕಾರ ಸ್ವೀಕರಿಸಿದ್ದಾರೆ. ಅವರು ಈ ಮೊದಲು ಉಡುಪಿ ನಗರಾಭಿವೃಧ್ಧಿ ಪ್ರಾಧಿಕಾರದ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕುಂದಾಪುರದಲ್ಲಿ ಉಪವಿಭಾಗಾಧಿಕಾರಿದ್ದ ರಶ್ಮಿ ಆರ್. ಎಸ್. ಅವರನ್ನು ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗಾವಣೆ ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಶಾಲಾ ಸಂಸತ್ತಿನ ಪದಗ್ರಹಣ ಸಮಾರಂಭವು “ಕೇವಲ ಬಿರುದು ಮತ್ತು ಜವಾಬ್ದಾರಿಗಳನ್ನು ನೀಡುವುದಲ್ಲ, ಇದು ಸಾಮರ್ಥ್ಯದ ಗುರುತಿಸುವಿಕೆ ಬೆಳವಣಿಗೆ ಮತ್ತು ಶ್ರೇಷ್ಠತೆಯ ಪ್ರಯಾಣಕ್ಕೆ ಬದ್ಧತೆಯಾಗಿದೆ. ಅಲ್ಲದೆ “ನಾಯಕತ್ವ ಮತ್ತು ಜವಾಬ್ದಾರಿಯ ಸಾರವನ್ನು ಪ್ರದರ್ಶಿಸುವ ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.” 2024-25ರ ಶೈಕ್ಷಣಿಕ ಅವಧಿಯ ಶಾಲಾ ಸಂಸತ್ತಿನ ಪದಗ್ರಹಣ ಸಮಾರಂಭವು ಬೈಂದೂರಿನ ಯು. ಬಿ. ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬಹಳ ವಿಜೃಂಭಣೆಯಿಂದ ಮತ್ತು ಘನತೆಯಿಂದ ನಡೆಯಿತು. ಈ ಸಮಾರಂಭದಲ್ಲಿ ಬೈಂದೂರಿನ ಪೊಲೀಸ್ ಸಬ್ ಇನ್ ಸ್ಪೇಕ್ಟರ್ ಆದ ನವೀನ್ ಗೊರ್ಕರ್ ಅವರು ಅತಿಥಿಗಳಾಗಿ ಆಗಮಿಸಿದ್ದರು ಹಾಗೂ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ಅಮೀತಾ ಶೆಟ್ಟಿ ಹಾಗೂ 10ನೇ ತರಗತಿ ಶಿಕ್ಷಕರಾದ ಜಗದೀಶ್ ನಾಯ್ಕರವರು ಹಾಜರಿದ್ದರು. ಸಮಾರಂಭವನ್ನು ಸಾಂಪ್ರದಾಯಿಕವಾಗಿ ದೀಪ ಬೆಳಗಿಸುವುದರೊಂದಿಗೆ ಆರಂಭವಾಯಿತು. ಚುನಾಯಿತ ಹೆಡ್ ಗರ್ಲ್ ಮೆಹೆಕ್ ಮತ್ತು ಹೆಡ್ ಬಾಯ್ ನಫೀಸ್ ತಮ್ಮನ್ನು ಪರಿಚಯಿಸಿಕೊಂಡರು. ಅವರಿಗೆ ಗೌರವಾನ್ವಿತ ಅತಿಥಿಗಳು ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಅವರು ಬ್ಯಾಡ್ನಗಳನ್ನು ನೀಡಿದರು. ವಿದ್ಯಾರ್ಥಿ ಪರಿಷತ್ತು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಕಿರಿಮಂಜೇಶ್ವರದ ಜನತಾ ನ್ಯೂ ಇಂಗ್ಲೀಷ್ ಮಿಡೀಯಂ ಸ್ಕೂಲ್ನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಭಾರತೀಯ ಗಡಿಭದ್ರತಾ ಪಡೆಯಲಿ ಸೈನಿಕರಾಗಿ ಸೇವೆಸಲ್ಲಿಸಿದ ನಿವ್ರತ್ತ ಸೈನಿಕರಾದ ಗಣಪತಿ ಖಾರ್ವಿ ಅವರು ಹುತಾತ್ಮ ಯೋಧರಿಗೆ ಪುಷ್ಪ ನಮನವನ್ನು ಸಲ್ಲಿಸಿ, ಕಾರ್ಗಿಲ್ಯುದ್ಧದ ನೇರ ಅನುಭವವನ್ನು ಹಂಚಿಕೊಂಡು ಒಂದು ವ್ಯವಸ್ಥೆಯ ಮುಖಂಡ ಸಮರ್ಥನಾಗಿದ್ದಾರೆ ಜಯ ಖಂಡಿತ ಸಿಗುವುದು. ಸೈನಿಕರು ದೇಶದ ರಕ್ಷಣೆಗಾಗಿ ತಮ್ಮ ಪ್ರಾಣ ತ್ಯಾಗ ಮಾಡಲು ಸದಾ ಸಿದ್ಧರಾಗಿರುತ್ತಾರೆ ಎನ್ನುತ್ತಾ, ವಿದ್ಯಾರ್ಥಿಗಳಿಗೆ ಮಾತ್ರಭೂಮಿಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸೇನೆಗೆ ಸೇರಿ ಎಂದು ಎಳೆಯ ಮನಸ್ಸುಗಳನ್ನು ಹುರಿದುಂಬಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಜನತಾ ಸಮೂಹ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಗಣೇಶ ಮೊಗವೀರ ಅವರು ಮಾತನಾಡಿ ದೇಶದ ಪ್ರಗತಿಯಲ್ಲಿ ಶಿಕ್ಷಣ, ರೈತರು ಹಾಗೂ ಯೋಧರು ಬಹಳ ಮುಖ್ಯ ಪಾತ್ರವಹಿಸುತ್ತಾರೆ ಈ ದಿಶೆಯಲ್ಲಿ ಮಕ್ಕಳಿಗೆ ಈ ಮೂರು ಪ್ರಮುಖ ವಿಚಾರಗಳ ಕುರಿತು ಗಮನವಹಿಸುವಂತೆ ಎಂದರು. ಸಮಾರಂಭದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಬ್ರಹ್ಮಾವರದ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಆಗಸ್ಟ್ 14 ರಿಂದ 2025 ರ ಫೆಬ್ರವರಿ 14 ರ ವರೆಗೆ 7 ತಿಂಗಳುಗಳ ಕಾಲ ತೋಟಗಾರಿಕಾ ಬೆಳೆಗಳಲ್ಲಿ ಸಸ್ಯೋತ್ಪಾದನೆ ಮತ್ತು ನರ್ಸರಿ ನಿರ್ವಹಣೆ ಕುರಿತು ಕೌಶಲ್ಯಾಧಾರಿತ ತರಬೇತಿ ನೀಡಲಾಗುತ್ತಿದ್ದು, ಅರ್ಹ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ತರಬೇತಿಯಲ್ಲಿ ಬೀಜದಿಂದ ಕಸಿ ವಿಧಾನ, ಕಾಂಡದ ತುಂಡುಗಳಿಂದ, ಗೂಟಿ ವಿಧಾನದಿಂದ ಸಸ್ಯೋತ್ಪಾದನೆ ಮಾಡುವುದು, ಸಸ್ಯಗಾರಗಳ ನಿರ್ವಹಣೆ ಹಾಗೂ ಯಶಸ್ವಿ ಉದ್ಯಮಶೀಲತೆಗೆ ಸಾಲ ಸೌಲಭ್ಯಕ್ಕಾಗಿ ಬ್ಯಾಂಕುಗಳೊಂದಿಗೆ ಜೋಡಣೆ ಮಾಡಿಸಿ ಕೊಡುವುದರೊಂದಿಗೆ ತರಬೇತಿ ಪೂರೈಸಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ.ನಂ:9480458083, 7760331096 ಅಥವಾ 9741009131 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರ ಕಚೇರಿ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್, ಕುಂದ ಅಧ್ಯಯನ ಕೇಂದ್ರ ಹಾಗೂ ಕುಂದಾಪ್ರ ಡಾಟ್ ಕಾಂ ನೇತೃತ್ವದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಅಗಸ್ಟ್ 4ರ ಭಾನುವಾರ ಸಂಜೆ 4:30ಕ್ಕೆ ಉಪ್ಪುಂದದ ಶಂಕರ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಕುಂದಾಪ್ರ ಕನ್ನಡ ಬಳಗ ಗಲ್ಫ್ ಇದರ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಹೇಳಿದರು. ಅವರು ಶನಿವಾರ ಬೈಂದೂರು ಪ್ರೆಸ್ ಕ್ಲಬ್ನಲ್ಲಿ ಜರುಗಿದ ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಪ್ರತಿವರ್ಷ ವಿವಿಧೆಡೆ ಆಚರಿಸಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಉಪ್ಪುಂದದಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ನಮ್ಮ ಬದುಕಿನ ಭಾಗವಾಗಿರುವ ಕುಂದಾಪ್ರ ಕನ್ನಡ ಭಾಷೆಯ ಮೇಲಿನ ಅಭಿಮಾನ ನಮ್ಮೆಲ್ಲರನ್ನು ಒಗ್ಗೂಡಿಸಿದೆ. ಭಾಷೆ, ಬದುಕು, ಸಂಸ್ಕೃತಿಯನ್ನು ಸಂಭ್ರಮಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ವಿಶ್ವ ಕುಂದಾಪ್ರ ಕನ್ನಡ ದಿನದ ಅಂಗವಾಗಿ ಕುಂದಾಪ್ರ ಕನ್ನಡಿಗರಿಗಾಗಿ 2 ಸ್ಪರ್ಧೆಗಳನ್ನು ವಿಶೇಷವಾಗಿ ಆಯೋಜಿಸಲಾಗಿದೆ. ಪುರುಷ ಹಾಗೂ ಮಹಿಳೆಯರಿಗೆ ಸಾಂಪ್ರದಾಯಿಕ ಹಾಡುಗಳ ಗಾಯನ ಸ್ಪರ್ಧೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕೃಷಿ ಇಲಾಖೆಯ ವತಿಯಿಂದ ಕೃಷಿ ವಲಯದಲ್ಲಿ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ಕೃಷಿ ಪ್ರಶಸ್ತಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಮಳೆಯಾಶ್ರಿತ ಭತ್ತದ ಬೆಳೆಯಲ್ಲಿ ರೈತರು ಹಾಗೂ ರೈತ ಮಹಿಳೆಯರಿಂದ ಬೆಳೆ ಸ್ಪರ್ಧೆಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಕೃಷಿ ಇಲಾಖೆಯ ಕೆ-ಕಿಸಾನ್ ಪೋರ್ಟಲ್ನಲ್ಲಿ ನೂತನವಾಗಿ ಕೃಷಿ ಪ್ರಶಸ್ತಿಗೆ ಅರ್ಜಿ ನಮೂನೆಯನ್ನು ಅಳವಡಿಸಲಾಗಿದ್ದು, ಸಿಟಿಝನ್ ಲಾಗಿನ್ ಅಥವಾ ಆರ್.ಎಸ್.ಕೆ ಲಾಗಿನ್ ಮೂಲಕ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸೇವಾ ಕೇಂದ್ರದಲ್ಲಿ ಸ್ವತಃ ಆಸಕ್ತ ರೈತ ಹಾಗೂ ರೈತ ಮಹಿಳೆಯರು ಪ್ರತ್ಯೇಕವಾಗಿ ಸದರಿ ಕೆ.ಕಿಸಾನ್ ಪೋರ್ಟಲ್ ರಡಿ ಅಗತ್ಯ ದಾಖಲಾತಿಗಳೋಂದಿಗೆ ಎಫ್.ಐ.ಡಿ ಅನ್ನು ಬಳಸಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ. ಅಗತ್ಯ ಮಾಹಿತಿಗಳೊಂದಿಗೆ ಅರ್ಜಿ ಸಲ್ಲಿಸಲು ಆಗಸ್ಟ್ 31ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ ಎಂದು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಗುರುಕುಲ ಶಾಲೆಯಲ್ಲಿ ಗುರುಪೂರ್ಣಿಮಾ ಮತ್ತು ಕಾರ್ಗಿಲ್ ದಿವಸವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಗುರು ಎಂದರೆ ಒಬ್ಬ ವ್ಯಕ್ತಿಯಲ್ಲ ಅದೊಂದು ಶಕ್ತಿ ಎಂಬುದನ್ನ ಮತ್ತು ಯೋಧರು ದೇಶಕ್ಕಾಗಿ ಮಾಡುವ ಕಾರ್ಯವನ್ನು ಅರ್ಥಪೂರ್ಣ ಪ್ರಹಸನದ ಮೂಲಕ ಪ್ರೌಢ ವಿಭಾಗದ ವಿದ್ಯಾರ್ಥಿಗಳು ತಿಳಿಸಿದರು. ಜೊತೆಗೆ ಯೋಧರ ತ್ಯಾಗ ಬಲಿದಾನಗಳನ್ನು ನೆನಪಿಸುವ ನಮ್ಮನ್ನು ಮತ್ತು ನಮ್ಮ ದೇಶವನ್ನು ಕಾಪಾಡುವ ಅವರ ಶೌರ್ಯ ಸಾಹಸಗಳನ್ನು ವಿದ್ಯಾರ್ಥಿನಿಯರು ಭಾವಪೂರ್ಣ ಗೀತೆಯೆಂದರೆ ಮೂಲಕ ಎಲ್ಲರಿಗೂ ಅರ್ಥೈಸಿದರು. ನಂತರ ವಿದ್ಯಾರ್ಥಿಗಳು ಗುರುವಂದನಾ ಕಾರ್ಯಕ್ರಮವನ್ನು ಮಾಡುವ ಮೂಲಕ ನಮಗೆ ವಿದ್ಯೆ ನೀಡುವ ಗುರುವಿನಲ್ಲಿ ದೇವರನ್ನು ಕಾಣುವ ನಮ್ಮ ಸನಾತನ ಸಂಸ್ಕಾರದ ರೀತಿಯಲ್ಲಿ ಪಾದ ಮುಟ್ಟಿ ನಮಸ್ಕಾರ ಮಾಡಿ ಇಂದು ಗುರುವಿನ ಮುಂದೆ ಬಾಗಿಸಿದ ತಲೆ ಮುಂದೆ ಸಮಾಜದಲ್ಲಿ ತಲೆ ಎತ್ತಿ ಬಾಳುವೆ ಎಂಬ ಅವರ ದೃಢ ಸಂಕಲ್ಪ ಹಾಗೂ ತಮ್ಮ ಗುರು ಭಕ್ತಿಯನ್ನ ತೋರಿಸಿದ ರೀತಿ ನಿಜಕ್ಕೂ ಮಕ್ಕಳ ಸಂಸ್ಕಾರದ ಜೊತೆಗಿನ ಶಿಕ್ಷಣವನ್ನು ಅರ್ಥೈಸುವಂತಿತ್ತು. ಈ ಸಂದರ್ಭದಲ್ಲಿ ಶಾಲಾ ಆಡಳಿತ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಪರಿಸರ ಉಳಿದರೆ ನಮ್ಮೆಲ್ಲರ ಉಳಿವು ಸಾಧ್ಯವಿದೆ. ಸಮೃದ್ಧ ಪರಿಸರವೆಂಬುದು ಉತ್ತಮ ಆರೋಗ್ಯಕ್ಕೆ ಪೂರಕ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ ಶೆಟ್ಟಿ ಹೇಳಿದರು. ಅವರು ರೋಟರಿ ಕ್ಲಬ್ ಬೈಂದೂರು ವತಿಯಿಂದ ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಿರ್ಮಿಸಲಾಗಿರುವ ಸ್ವಾತಂತ್ರ್ಯದ ಅಮೃತ ಮಹೋತ್ಸವ ರೋಟರಿ ವನದಲ್ಲಿ ಶುಕ್ರವಾರ ವನಮಹೋತ್ಸವ – 2024 ಕಾರ್ಯಕ್ರಮದಲ್ಲಿ ಗೀಡ ನೆಟ್ಟು ಮಾತನಾಡಿದರು. ರೋಟರಿ ಕ್ಲಬ್ ಬೈಂದೂರು ಅಧ್ಯಕ್ಷ ಮೋಹನ್ ರೇವಣ್ಕರ್ ಅವರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಹಾಯಕ ಗವರ್ನರ್ ಸೋಮನಾಥ ಆರ್, ಐ. ನಾರಾಯಣ್, ಮಂಜುನಾಥ್ ಮಹಾಲೆ, ಗೋವಿಂದ ಎಂ, ಮಣಿಕಂಠ ದೇವಾಡಿಗ ಉಪಸ್ಥಿತರಿದ್ದು ಸಹಕರಿಸಿದರು. ಕಾರ್ಯದರ್ಶಿ ಸುನಿಲ್ ಹೆಚ್. ಜಿ. ಕಾರ್ಯಕ್ರಮ ನಿರೂಪಿಸಿದರು. ರೋಟರಿ ವನದಲ್ಲಿ 50 ಗಿಡಗಳನ್ನು ನೆಟ್ಟು ಗಿಡಗಳ ಪೋಷಣೆಗೆ ಪ್ರತಿಜ್ಞೆ ಕೈಗೊಳ್ಳಲಾಯಿತು.
