ಬೈಂದೂರು ಯು. ಬಿ. ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆ: ಶಾಲಾ ಸಂಸತ್ತಿನ ಪದಗ್ರಹಣ ಸಮಾರಂಭ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಶಾಲಾ ಸಂಸತ್ತಿನ ಪದಗ್ರಹಣ ಸಮಾರಂಭವು “ಕೇವಲ ಬಿರುದು ಮತ್ತು ಜವಾಬ್ದಾರಿಗಳನ್ನು ನೀಡುವುದಲ್ಲ, ಇದು ಸಾಮರ್ಥ್ಯದ ಗುರುತಿಸುವಿಕೆ ಬೆಳವಣಿಗೆ ಮತ್ತು ಶ್ರೇಷ್ಠತೆಯ ಪ್ರಯಾಣಕ್ಕೆ ಬದ್ಧತೆಯಾಗಿದೆ. ಅಲ್ಲದೆ “ನಾಯಕತ್ವ ಮತ್ತು ಜವಾಬ್ದಾರಿಯ ಸಾರವನ್ನು ಪ್ರದರ್ಶಿಸುವ ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.”

Call us

Click Here

2024-25ರ ಶೈಕ್ಷಣಿಕ ಅವಧಿಯ ಶಾಲಾ ಸಂಸತ್ತಿನ ಪದಗ್ರಹಣ ಸಮಾರಂಭವು ಬೈಂದೂರಿನ ಯು. ಬಿ. ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬಹಳ ವಿಜೃಂಭಣೆಯಿಂದ ಮತ್ತು ಘನತೆಯಿಂದ ನಡೆಯಿತು.

ಈ ಸಮಾರಂಭದಲ್ಲಿ ಬೈಂದೂರಿನ ಪೊಲೀಸ್ ಸಬ್ ಇನ್ ಸ್ಪೇಕ್ಟರ್ ಆದ ನವೀನ್ ಗೊರ್ಕರ್  ಅವರು ಅತಿಥಿಗಳಾಗಿ ಆಗಮಿಸಿದ್ದರು ಹಾಗೂ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ಅಮೀತಾ ಶೆಟ್ಟಿ ಹಾಗೂ 10ನೇ ತರಗತಿ ಶಿಕ್ಷಕರಾದ ಜಗದೀಶ್ ನಾಯ್ಕರವರು ಹಾಜರಿದ್ದರು.

ಸಮಾರಂಭವನ್ನು ಸಾಂಪ್ರದಾಯಿಕವಾಗಿ ದೀಪ ಬೆಳಗಿಸುವುದರೊಂದಿಗೆ ಆರಂಭವಾಯಿತು. ಚುನಾಯಿತ ಹೆಡ್ ಗರ್ಲ್ ಮೆಹೆಕ್ ಮತ್ತು ಹೆಡ್ ಬಾಯ್ ನಫೀಸ್ ತಮ್ಮನ್ನು ಪರಿಚಯಿಸಿಕೊಂಡರು. ಅವರಿಗೆ ಗೌರವಾನ್ವಿತ ಅತಿಥಿಗಳು ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಅವರು ಬ್ಯಾಡ್ನಗಳನ್ನು ನೀಡಿದರು.

ವಿದ್ಯಾರ್ಥಿ ಪರಿಷತ್ತು ಶಾಲಾ ಧೈಯವಾಕ್ಯವನ್ನು ಗೌರವಿಸುವ ಪ್ರತಿಜ್ಞೆಯನ್ನು ತೆಗೆದುಕೊಂಡಿತು.

Click here

Click here

Click here

Click Here

Call us

Call us

ಅತಿಥಿಗಳಾಗಿ ಆಗಮಿಸಿದ ಬೈಂದೂರಿನ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ನವೀನ ಗೊರ್ಕರ್  ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿದರು ಮತ್ತು ನಾಯಕತ್ವ, ಏಕತೆ, ಶಿಸ್ತು ಮತ್ತು ನೈತಿಕತೆಯಲ್ಲಿ ನಿಷ್ಪಕ್ಷಪಾತ ಮತ್ತು ಪ್ರಾಮಾಣಿಕರಾಗಿರಲು ಅವರಿಗೆ ತಿಳಿಸಿದರು.

ಸಹ ಶಿಕ್ಷಕಿ ಅನಿತಾ ಹಾಗೂ ರೇಷ್ಮಾ ಅಡಪ್ಪಾ ಕಾರ್ಯಕ್ರಮವನ್ನು ನಿರೂಪಿಸಿದರು. ಅನುಷಾ ಸ್ವಾಗತಿಸಿದರು. ವಿನುತಾ ವಂದನೆ ಸಲ್ಲಿಸಿದರು.

ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Leave a Reply