ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿಯ ಶ್ರೀ ವೆಂಕಟೇಶ ಕೃಪಾ ಟ್ರೇಡರ್ಸ್ ಅವರು ಹಮ್ಮಿಕೊಂಡಿದ್ದ ದೀಪಾವಳಿ ಧಮಾಕ 2025ರ ಸಮಾರೋಪ ಸಮಾರಂಭವು ಸುರಭಿ ಸ್ಟುಡಿಯೋ ಗಂಗೊಳ್ಳಿ ಇವರ ಸಹಭಾಗಿತ್ವದಲ್ಲಿ ಇಲ್ಲಿನ ಶಾರದ ಮಂಟಪದಲ್ಲಿ ನಡೆಯಿತು. ಗಂಗೊಳ್ಳಿಯ ಮಾಜಿ ಮಂಡಲ ಪಂಚಾಯತ್ ಪ್ರಧಾನರಾದ ಸದಾನಂದ ಶೆಣೈ, ಕುಂದಾಪುರದ ಬೆನಕ ಸ್ಟುಡಿಯೋ ಮಾಲಕರಾದ ಗಣೇಶ್ ದೇವಾಡಿಗ ಮತ್ತು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್. ಗಂಗೊಳ್ಳಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಶುಭ ಕೋರಿದರು. ಗಂಗೊಳ್ಳಿಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಭಾಸ್ಕರ ಶೆಣೈ ಮತ್ತು ಜಯಶ್ರೀ ಶೆಣೈ ದಂಪತಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗಂಗೊಳ್ಳಿ ವಲಯದ ದೈಹಿಕ ಶಿಕ್ಷಕರಾದ ಸೂರಜ್ ಖಾರ್ವಿ, ದೀಕ್ಷಿತ್ ಮೇಸ್ತ, ಪ್ರಣಯ ಕುಮಾರ್ ಶೆಟ್ಟಿ ಮತ್ತು ನಿರಂಜನ ಖಾರ್ವಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ರೀಡೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಸುರಭಿ ಸ್ಟುಡಿಯೋ ಮಾಲೀಕರಾದ ಕೃಷ್ಣ ಖಾರ್ವಿ ಅವರು ಗಣೇಶ್ ದೇವಾಡಿಗ ಅವರನ್ನು ಸನ್ಮಾನಿಸಿ ಗೌರವಿಸಿದರು. ವಿಜಯ ಶೆಣೈ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಪರಂಪರೆ 350 ವರ್ಷಗಳ ಸುದೀರ್ಘ ಇತಿಹಾಸ, ಇಂದು 6ನೇ ತಲಾಂತರದಲ್ಲಿ ನಡೆಯುತ್ತಿರುವುದು ಸ್ತುತ್ಯಾರ್ಹ. ಈ ಕಲೆಯ ಭವಿಷ್ಯತ್ತಿನ ಭದ್ರ ಬುನಾದಿಗಾಗಿ ಹುಟ್ಟು ಹಾಕಿರುವ ಸಂಸ್ಥೆ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಗೆ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಪರಮಾದರಣೀಯ ಶ್ರೀ ಕಾಶೀಮಠಾಧೀಶ ಪರಮಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದಂಗಳವರು ಚಿತ್ತೈಸಿ, ತಮ್ಮ ಅಮೃತ ಹಸ್ತದಿಂದ ಗೊಂಬೆ ಮ್ಯೂಜಿಯಂ (ವಸ್ತು ಸಂಗ್ರಹಾಲಯ) ಉದ್ಘಾಟನೆ ಮಾಡಿದರು. ಅಕಾಡೆಮಿಯ ವತಿಯಿಂದ ಸ್ವಾಮೀಜಿ ಅವರಿಗೆ ಪಾದ ಪೂಜೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಬೆಂಗಳೂರು ಸೆಂಚುರಿ ಬಿಲ್ಡರ್ಸ್ ನಿರ್ದೇಶಕರಾಗಿರುವ ಡಾ. ಪಿ. ದಯಾನಂದ ಪೈ ಹಾಗೂ ಪತ್ನಿ ಮೋಹಿನಿ ಡಿ. ಪೈ. ದಂಪತಿಗಳು ಪಾಲ್ಗೊಂಡು ಗೊಂಬೆಯಾಟದ ಉಳಿವಿಗಾಗಿ ತಮ್ಮಿಂದಾದ ಪ್ರೋತ್ಸಾಹ ನೀಡುತ್ತೇವೆ ಎಂದು ಆಶ್ವಾಸನೆ ನೀಡಿದರು. ಜಿ.ಎಸ್.ಬಿ. ಸಮಾಜದ ಹಲವಾರು ಗಣ್ಯರೂ ನೆರೆದಿದ್ದರು. ತದನಂತರ ಭಾಸ್ಕರ್ ಕೊಗ್ಗ ಕಾಮತ್ ನೇತೃತ್ವದಲ್ಲಿ ನಡೆದ ಗೊಂಬೆಯಾಟ ಪ್ರಾತ್ಯಕ್ಷಿಕೆಯನ್ನೂ ಶಾಂತ ಚಿತ್ತದಿಂದ ನೋಡಿ ಹರಸಿ, ಹಾರೈಸಿದರು. ನಾಗೇಶ್ ಶ್ಯಾನುಭಾಗ್ ಹಾಗೂ ಉದಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಾಳಾವರ ವರದರಾಜ ಎಂ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಕೋಟೇಶ್ವರ ಇಲ್ಲಿ ಕಾರ್ಪೊರೇಟ್ ವ್ಯವಸ್ಥೆ ಹಾಗೂ ಅದರಲ್ಲಿ ಉದ್ಯೋಗ ಪಡೆಯಬೇಕಾದಲ್ಲಿ ಬೇಕಾಗುವ ಅಗತ್ಯ ಕೌಶಲ್ಯಗಳು ಎಂಬ ವಿಷಯದಲ್ಲಿ ಒಂದು ದಿನದ ಕಾರ್ಯಾಗಾರ ನಡೆಯಿತು. ಈ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಕಾರ್ಪೊರೇಟ್ ಟ್ರೈನರ್ ಹಾಗೂ ಡಾಟಾ ಎನಾಲಿಸ್ಟ್‌ರಾದ ಗೌತಮ್ ಎಚ್. ಶೆಟ್ಟಿಗಾರ್ ಮಾತನಾಡಿ, ಯಾವುದೇ ಕೌಶಲವನ್ನು ವೃದ್ಧಿಸಿಕೊಳ್ಳಬೇಕಾದರೆ ಸೂಕ್ತ ಪ್ರಯತ್ನದ ಅವಶ್ಯಕತೆ ಇದೆ. ಪ್ರಸ್ತುತ ಯಾವ ಕೌಶಲಗಳಿಗೆ ಕಾರ್ಪೊರೇಟ್ ಕ್ಷೇತ್ರದಲ್ಲಿ ಬೇಡಿಕೆ ಇದೆ ಎಂಬುದನ್ನು ಗಮನಿಸಿ ಆ ಕೌಶಲಗಳನ್ನು ಸೂಕ್ತ ರೀತಿಯಲ್ಲಿ ಅಭಿವೃದ್ಧಿ ಪಡಿಸಿಕೊಂಡು ಬಳಸಿಕೊಂಡಾಗ ಯೋಗ್ಯ ಉದ್ಯೋಗ ನಮ್ಮದಾಗಲು ಸಾಧ್ಯ ಎಂದರು. ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ವಿದ್ಯಾರ್ಥಿಗಳಿಗೆ ಎಲ್ಲ ಮಾಹಿತಿಗಳು ಡಿಜಿಟಲ್ ಮಾಧ್ಯಮದ ಮೂಲಕ ಶೀಘ್ರವಾಗಿ ಹಾಗೂ ಸುಲಭವಾಗಿ ಸಿಗುತ್ತಿದೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾರ್ಪೊರೇಟ್ ಕ್ಷೇತ್ರದಲ್ಲಿ ಅಗತ್ಯವಿರುವ ಕೌಶಲಗಳನ್ನು ಪರಿಚಯಿಸುವ ಸಲುವಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವರ್ಷಿಣಿ ಯೋಗ ಶಿಕ್ಷಣ, ಸಾಂಸ್ಕೃತಿಕ ಮತ್ತು ಕ್ರೀಡಾ ಟ್ರಸ್ಟ್ ಶಿವಮೊಗ್ಗ ಮತ್ತು ಕಲಾ ಯೋಗಾಸನ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಕಾಡೆಮಿ ತುಮಕೂರು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ತುಮಕೂರು ಇವರ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ತುಮಕೂರಿನ ಮಹಾತ್ಮ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 8ನೇ ವರ್ಷದ ರಾಷ್ಟ್ರಮಟ್ಟದ ಯೋಗಾಸನಾ ಸ್ಪರ್ಧೆ 2025-26 ರಲ್ಲಿ ತ್ರಾಸಿ ಗ್ರಾಮ ಪಂಚಾಯತಿನ ಸಿಬ್ಬಂದಿ ಸಂದೀಪ್ ಪೂಜಾರಿ ಅವರು ವಿವಿಧ ಹಂತದ ಸ್ಪರ್ದೆಯಲ್ಲಿ ಪ್ರಥಮ ಹಾಗೂ ತೃತೀಯ ಸ್ಥಾನ ಪಡೆದು ರಾಷ್ಟ್ರ ಮಟ್ಟದಿಂದ ಡಿಸೆಂಬರ್ ತಿಂಗಳ ಮಾಲ್ಡೀವ್ಸ್ ನಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಅವರು ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಯೋಜಿಸಿದ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ನಡೆದ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಗಳಿಸಿದೆ. ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ಕಿಶನ್ ಪೂಜಾರಿ, ನಾಗಶ್ರೀ ಭಟ್, ಪ್ರಜ್ಞಾ ಹಾಗೂ ದೀಪಾ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಉಮೇಶ್ ಶೆಟ್ಟಿ, ಉಪ-ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಮಾರ್ಗದರ್ಶನ ನೀಡಿದರು. ಸಭಾ ಕಾರ್ಯಕ್ರಮದಲ್ಲಿ ಕಲಾ ಕ್ಷೇತ್ರ ಕುಂದಾಪುರ ಟ್ರಸ್ಟ್ನ ಅಧ್ಯಕ್ಷ ಕಿಶೋರ್ ಕುಮಾರ್, ಪ್ರಥಮ ದರ್ಜೆ ಎಲೆಕ್ಟಿಕಲ್ ಗುತ್ತಿಗೆದಾರ ಕೆ. ಆರ್. ನಾಯ್ಕ್ಕ್, ಕ್ವಿಜ್ ಮಾಸ್ಟರ್ ಶಿಕ್ಷಕ ಅಶೋಕ್ ತೆಕ್ಕಟ್ಟೆ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಟಿ. ಎನ್. ಪ್ರಭು ಚಾರ್ಟರ್ಡ್ ಅಕೌಂಟೆಂಟ್ಸ್ ಕುಂದಾಪುರದ ಸಂಸ್ಥೆಯಲ್ಲಿ ತರಬೇತಿ ಪಡೆದ, ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ, ನವದೆಹಲಿ ಅವರು ಸೆಪ್ಟೆಂಬರ್ 2025ರಲ್ಲಿ ನಡೆಸಿದ ಇಲ್ಲಿನ ಶಿಕ್ಷ ಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ (ಸ್ಪೇಸ್) ನ ವಿದ್ಯಾರ್ಥಿಗಳು ಸಿಎ-ಫೈನಲ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ಕೆದೂರು ಶಾನಾಡಿ ಹರ್ಷ ಹೆಗ್ಡೆ ಹಾಗೂ ಆಶಾ ಎಚ್. ಹೆಗ್ಡೆ ಅವರ ಪುತ್ರಿ ಸಿಎ ವೈಷ್ಣವಿ ಹೆಗ್ಡೆ, ಕುಂಭಾಸಿ ರವೀಂದ್ರ ಕಾಮತ್-ಭಾರತಿ ಕಾಮತ್ ದಂಪತಿ ಪುತ್ರಿ ಸಿಎ ರಶ್ಮಿ ಆರ್. ಕಾಮತ್ ಮತ್ತು ಸೌಕೂರಿನ ರವಿ ಎಂ. ಶೆಟ್ಟಿ ಹಾಗೂ ಉಷಾ ಆರ್. ಶೆಟ್ಟಿ ದಂಪತಿ ಪುತ್ರ ಸಿಎ ರೋಹನ್ ಶೆಟ್ಟಿ ತೇರ್ಗಡೆ ಹೊಂದಿ ಗೌರವ ಪಡೆದಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಉಡುಪಿ ನಗರಸಭೆಯ 2024-25 ನೇ ಸಾಲಿನ ವಿವಿಧ ಕಾರ್ಯಕ್ರಮದಡಿ ಮೀಸಲಿರಿಸಿದ ಅನುದಾನದ ಉಳಿಕೆ ಮೊತ್ತವಾದ ಎಸ್.ಎಫ್.ಸಿ ಅನುದಾನದ ಶೇ. 5ರ ವಿಕಲಚೇತನ ಕಾರ್ಯಕ್ರಮದಡಿ ಸಣ್ಣ ಉದ್ದಿಮೆ, ಮನೆ ದುರಸ್ಥಿ, ಕೃತಕ ಅಂಗ ಜೋಡಣೆ / ಶಸ್ತ್ರಚಿಕಿತ್ಸೆಗೆ ಧನಸಹಾಯ, ರಾಜ್ಯ, ರಾಷ್ಟೀಯ ಮಟ್ಟದ ಕ್ರೀಡೆ / ಸಾಂಸ್ಕೃತಿಕ ಹಾಗೂ ಇತರೆ ವ್ಯಾಸಾಂಗೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಪ್ರೋತ್ಸಾಹಧನ ಹಾಗೂ ಎಸ್.ಎಸ್.ಎಲ್.ಸಿ ಯಿಂದ ಮಾಸ್ಟರ್ ಡಿಗ್ರಿವರೆಗಿನ ವಿದ್ಯಾರ್ಥಿಗಳಿಗೆ ಸಹಾಯಧನಕ್ಕೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅದೇ ರೀತಿ ಎಸ್.ಎಫ್.ಸಿ / ಮುಕ್ತನಿಧಿ ಮತ್ತು ಪುರಸಭಾ ನಿಧಿಯ ಶೇ. 7.25 ರ ಇತರೆ ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮ, ಪ.ಜಾತಿ/ಪಂಗಡದ ಕಲ್ಯಾಣ ಕಾರ್ಯಕ್ರಮ ಹಾಗೂ ಟಿ.ಎಸ್.ಪಿ (ಪ.ಪಂಗಡದ ಅನುದಾನ) ಕಾರ್ಯಕ್ರಮದಡಿ ಪಿ.ಯು.ಸಿ ಯಿಂದ ಉತ್ತೀರ್ಣರಾದ ಪದವಿ, ಬಿ.ಎ, ಬಿಎಸ್‌ಸಿ, ಬಿಕಾಂ, ಬಿಬಿಎ, ಬಿಬಿಎಂ, ಬಿಸಿಎ ಇತರೆ ಪದವಿ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಮತ್ತು ಎಸ್.ಎಸ್.ಎಲ್.ಸಿ ಯಿಂದ ಉತ್ತೀರ್ಣರಾದ ಪಿ.ಯು.ಸಿ, ಐ.ಟಿ.ಐ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ತೆಕ್ಕಟ್ಟೆ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಯ್ಯಪ್ಪ ವ್ರತಧಾರಿಗಳು ಕಾಲ್ನಡಿಗೆಯಲ್ಲಿ ಸಾಗುತ್ತಿದ್ದ ವೇಳೆ ಹಿಂದಿನಿಂದ ಬಂದ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ಅಯ್ಯಪ್ಪ ಮಾಲಾಧಾರಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಕೋಟೇಶ್ವರ ಸಮೀಪದ ಕುಂಬ್ರಿ ನಿವಾಸಿ ಹಾಡಿಮನೆ ಸುರೇಂದ್ರ ಮೊಗವೀರ (35) ಎಂದು ಗುರುತಿಸಲಾಗಿದೆ. ಕೋಟೇಶ್ವರದಿಂದ ಹೆದ್ದಾರಿ ಮೂಲಕ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇಗುಲದೆಡೆಗೆ ಸುಮಾರು 15 ಮಂದಿ ಅಯ್ಯಪ್ಪ ಮಾಲಾಧಾರಿಗಳು ಕಾಲ್ನಡಿಗೆ ಮೂಲಕ ಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಅವರ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಸ್ಥಳೀಯರು ತತ್ ಕ್ಷಣವೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದಾರೆ. ಮತ್ತೋರ್ವ ಅಯ್ಯಪ್ಪ ವ್ರತಧಾರಿಗೂ ತೀವ್ರ ಸ್ವರೂಪದ ಗಾಯಗಳಾಗಿವೆ. ಅವರು ತಂದೆ, ತಾಯಿ ಹಾಗೂ ಸಹೋದರ, ಸಹೋದರಿಯರನ್ನು ಅಗಲಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕನ್ನಡ ಭಾಷೆಯನ್ನು ಉಳಿಸುವಲ್ಲಿ ಯಕ್ಷಗಾನದ ಕೊಡುಗೆ ಬಹುದೊಡ್ಡದು ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಅಭಿಪ್ರಾಯಪಟ್ಟರು. ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರಾಜ್ಯೋತ್ಸವ ಯಕ್ಷಗಾನ ತಾಳಮದ್ದಳೆಯ 50ನೇ ವರ್ಷಾಚರಣೆಯ ಅಂಗವಾಗಿ “ಸುವರ್ಣಾಕ್ಷ” ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠ ಕಲೆ ಯಕ್ಷಗಾನ. ಏಕೆಂದರೆ ಈ ಕಲೆಯಲ್ಲಿ ಹಾಡು, ಕುಣಿತ, ತಾಳ , ಮೇಳ, ಭಾವ, ಕಥೆ, ಜ್ಞಾನ, ಸಂಸ್ಕಾರ ಹೀಗೆ ಕಲಾತ್ಮಕವಾದ ಎಲ್ಲಾ ಸಂಗತಿಗಳು ಒಟ್ಟುಗೂಡಿ ಪ್ರದರ್ಶನಗೊಳ್ಳುತ್ತದೆ ಯು. ಅಲ್ಲದೆ ಶುದ್ಧವಾದ ಕನ್ನಡವನ್ನು ಮಾತ್ರ ಬಳಸುವ ಏಕೈಕ ಕಲೆ. ಇಂತಹ ಸಮೃದ್ಧ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸುವ ಆ ಮೂಲಕ ಶಾಶ್ವತವಾಗಿಸುವ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು. ಕಾರ್ಯಕ್ರಮದ ಇನ್ನೋರ್ವ ಅತಿಥಿಯಾದ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ಉಡುಪಿ ಜಿಲ್ಲೆ ಯಕ್ಷಗಾನ ಕಲೆಯನ್ನು ಉಳಿಸಿವ ಉತ್ಸಾಹದಲ್ಲಿದ್ದೇವೆ. ಶಾಲೆಗಳಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಸರ್ದಾರ್ ವಲ್ಲಬಾಯಿ ಪಟೇಲ್ ರ 150 ನೇ ಜನ್ಮ ದಿನದ ಅಂಗವಾಗಿ ನವೆಂಬರ್ 11 ರಂದು ಏಕತಾ ನಡಿಗೆ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಕಾರ್ಯಕ್ರಮದ ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ ಶಿಸ್ತುಬದ್ಧವಾಗಿ ಕಾರ್ಯಕ್ರಮ ಆಯೋಜಿಸುವಂತೆ ಅಧಿಕಾರಿಗಳಿಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕರೆ ನೀಡಿದರು. ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಏಕತಾ ನಡಿಗೆ ಕಾರ್ಯಕ್ರಮ ಆಯೋಜನೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಏಕತಾ ನಡಿಗೆ ಕಾರ್ಯಕ್ರಮವು ನವೆಂಬರ್ 11 ರಂದು ನಗರದ ಬೋರ್ಡ್ ಹೈಸ್ಕೂಲ್ ನಿಂದ ಅಜ್ಜರಕಾಡು ಭುಜಂಗ ಪಾರ್ಕಿನ ಹುತಾತ್ಮರ ಯುದ್ಧ ಸ್ಮಾರಕದವರೆಗ ನಡೆಯಲಿದ್ದು, ಅಂದು ಬೆಳಗ್ಗೆ 7.30 ಕ್ಕೆ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಏಕತಾ ನಡಿಗೆ ಜಾಥಾಗೆ ಚಾಲನೆ ನೀಡಲಾಗುವುದು. ಜಾಥಾ ಸಮಾರೋಪಗೊಳ್ಳುವ ಭುಜಂಗ ಪಾರ್ಕಿನ ಗಾಂಧಿಕಟ್ಟೆಯಲ್ಲಿ ಸರ್ದಾರ್ ವಲ್ಲಬಾಯಿ ಪಟೇಲ್ ಅವರ ಜೀವನ ಸಾಧನೆ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.…
