ಕುಂದಾಪ್ರ ಡಾಟ್ ಕಾಂ.ಬೈಂದೂರು: ತಾಲೂಕಿನ ಶ್ರೀ ದುರ್ಗಾ ಫ್ರೆಂಡ್ಸ್ ರಥಬೀದಿ ಉಪ್ಪುಂದ ಇದರ 2023-24 ಸಾಲಿನ ನೂತನ ಅಧ್ಯಕ್ಷರಾಗಿ ರಾಘವೇಂದ್ರ ದೇವಾಡಿಗ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮಂಜುನಾಥ ರಾಯರಡಿ,ಅಕ್ಷಯ ಪೂಜಾರಿ, ಪ್ರಧಾನ ಕಾರ್ಯದರ್ಶಿಯಾಗಿ ಸುಧೀರ್ ಬಾಕಿಮನೆ ಆಯ್ಕೆಯಾಗಿದ್ದಾರೆ. ಜೊತೆ ಕಾರ್ಯದರ್ಶಿಯಾಗಿ ನಂದೀಶ್ ಪೂಜಾರಿ, ಕೋಶಾಧಿಕಾರಿಯಾಗಿ- ವೀರಭದ್ರ, ಜೊತೆ ಕೋಶಾಧಿಕಾರಿಯಾಗಿ ಶಿವರಾಜ ದೇವಾಡಿಗ, ಸಾಂಸ್ಕೃತಿಕ ಕಾರ್ಯದರ್ಶಿ -ಓಂಕಾರ ಡಿ., ಮಹಾದೇವ ರಾಯರಡಿ, ಕ್ರೀಡಾ ಕಾರ್ಯದರ್ಶಿ -ಕೇಶವ ಬಾಕಿಮನೆ, ಭರತ,ವಸಂತ, ರಮೇಶ್ ಮಣ್ಣಿಮನೆ, ಸಂಘಟನಾ ಕಾರ್ಯದರ್ಶಿ -ರೋಹಿತ್ ಖಾರ್ವಿ, ಜಗದೀಶ್ ದೇವಾಡಿಗ, ಸುಧಾಕರ ದೇವಾಡಿಗ, ಪ್ರಭಾಕರ ದೇವಾಡಿಗ ರಾಯರಡಿ, ವೆಂಕಟೇಶ್ ದೇವಾಡಿಗ, ಮಂಜುನಾಥ ದೇವಾಡಿಗ, ರಾಜೇಶ್ ದೇವಾಡಿಗ, ಸುನಿಲ್ ಬಾಕಿ ಮನೆ, ರಾಜೇಶ್ ಕೋಟೆಬೆಟ್ಟು, ಪ್ರಚಾರ ಸಮಿತಿ ಕಾರ್ಯದರ್ಶಿ – ಆದರ್ಶ ಕೃಷ್ಣಾಪುರ, ಕೀರ್ತನ ಪೂಜಾರಿ, ರಂಜಿತ್ ದೇವಾಡಿಗ ಆಯ್ಕೆಗಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರಾಮಕ್ಷತ್ರಿಯ ಸಮುದಾಯ ಜನಸಂಖ್ಯೆಯಲ್ಲಿ ಕಡಿಮೆಯಿದ್ದರೂ ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ರಂಗದಲ್ಲಿ ಹಲವರು ಮುಂಚೂಣಿಯಲ್ಲಿದ್ದಾರೆ. ಸಾಮಾಜಿಕ ಹಾಗೂ ರಾಜಕೀಯವಾಗಿ ಅಭಿಪ್ರಾಯಭೇದಗಳು ಹಲವಿದ್ದರೂ ಧರ್ಮ ಹಾಗೂ ಸಮುದಾಯದ ಅಭ್ಯುದಯದಲ್ಲಿ ಎಲ್ಲರೂ ಒಗ್ಗಟ್ಟಾಗಿ ಮುನ್ನಡೆಯಬೇಕಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಸತೀಶ್ ಬಟವಾಡಿ ಕೆಎಎಸ್ ಹೇಳಿದರು. ಅವರು ಶ್ರೀ ರಾಮಕ್ಷತ್ರಿಯ ಯುವಕ ಮಂಡಲ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ವತಿಯಿಂದ ಆಯೋಜಿಸಲಾಗುತ್ತಿರುವ 37ನೇ ವರ್ಷದ ಶಾರದೋತ್ಸವದಲ್ಲಿ ಶನಿವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ ಎಲ್ಲಾ ರಂಗದಲ್ಲಿ ಪ್ರಗತಿ ಸಾಧಿಸುವುದಷ್ಟೇ ಅಲ್ಲದೇ ಸಾಧನೆಗೈಯುವರ ಇತರರಿಗೂ ದಾರಿ ತೋರುವ ಕೆಲಸವನ್ನು ಸಮುದಾಯದ ನಾಯಕರು ಮಾಡಬೇಕಿದೆ. ಒಗ್ಗಟ್ಟಿನ ಹೋರಾಟ ಹಾಗೂ ಕೆಲಸಕ್ಕೆ ಯಾವಾಗಲು ಜಯ ಸಂದಿದೆ ಎಂದರು. ಬೈಂದೂರು ರಾಮಕ್ಷತ್ರಿಯ ಸಮಾಜದ ಅಧ್ಯಕ್ಷರಾದ ರಾಮಕೃಷ್ಣ ಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಪೊಲೀಸ್ ನಿರೀಕ್ಷಕರಾದ ಸವಿತ್ರತೇಜ್, ಉಡುಪಿ ಕರಾವಳಿ ಕಾವಲುಪಡೆ ಪೊಲೀಸ್ ನಿರೀಕ್ಷಕರಾದ ಪ್ರಮೋದ್ ಕುಮಾರ್, ಬೆಂಗಳೂರು ಸಿಸಿಬಿ ಪೊಲೀಸ್…
ಕುಂದಾಪ್ರ ಡಾಟ್ ಕಾಂ ಸುದ್ದಿಕುಂದಾಪುರ,ಅ.21:, ಮನೆಯ ಸಮೀಪ ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ವಿದ್ಯಾರ್ಥಿಯೋರ್ವ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ತಾಲೂಕಿನ ತಲ್ಲೂರಿನಲ್ಲಿ ನಡೆದಿದೆ. ತಲ್ಲೂರಿನಲ್ಲಿ ವಾಸವಿರುವ ಅರುಣ್ ಕುಮಾರ್ ಶೆಟ್ಟಿ ಎಂಬುವರ ಪುತ್ರ, ಏಳನೇ ತರಗತಿ ವಿದ್ಯಾರ್ಥಿ ಪೃಥ್ವಿರಾಜ್ ಶೆಟ್ಟಿ ಸಾವನ್ನಪ್ಪಿದ ಬಾಲಕ. ಹಟ್ಟಿಯಂಗಡಿ ಶ್ರೀ ಸಿದ್ದಿವಿನಾಯಕ ಶಾಲೆಯಲ್ಲಿ ಏಳನೇ ತರಗತಿ ವಿದ್ಯಾರ್ಥಿಯಾಗಿರುವ ಪೃಥ್ವಿರಾಜ್ ಶೆಟ್ಟಿ ನಿನ್ನೆಯಷ್ಟೇ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ. ಇಂದು ಶಾಲೆಗೆ ತೆರಳಬೇಕಿದ್ದರಿಂದ, ಬೆಳಿಗ್ಗೆ ಶಾಲಾ ವಾಹನಕ್ಕಾಗಿ ತಾಯಿಯೊಂದಿಗೆ ಕಾಯುತ್ತಿದ್ದ ಸಂದರ್ಭ ಎದೆ ನೋವು ಕಾಣಿಸಿಕೊಂಡಿದೆ. ಬಾಲಕನನ್ನು ತಕ್ಷಣವೇ ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ ಅಷ್ಟರಲ್ಲೇ ವಿದ್ಯಾರ್ಥಿ ಸಾವನ್ನಪ್ಪಿರುವುದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷಾ ವರದಿ ಇನ್ನಷ್ಟೇ ಕೈಸೇರಬೇಕಿದೆ. ಕಳೆದ ವರ್ಷ ಅ.27ರಂದು ಎಂಟನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಪ್ರಥ್ವಿರಾಜ ಶೆಟ್ಟಿಯ ಸಹೋದರಿ ಅನುಶ್ರೀ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಳು. ಕುಂದಾಪುರದ ಅಕ್ಷರ ದಾಸೋಹ ಯೋಜನೆಯ ಉಪನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ ಮತ್ತು ಶಿಕ್ಷಕಿ ಭಾರತಿ ದಂಪತಿಗಳು ತಮಗಿದ್ದ ಇಬ್ಬರು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಅ21: ಸಮಾಜದ ಪ್ರತಿಯೊಬ್ಬ ನಾಗರಿಕರು ಕಾನೂನುಗಳನ್ನು ಪಾಲಿಸಿದ್ದಲ್ಲಿ ಅಪರಾಧಿಕ ಪ್ರಕರಣಗಳಿಂದ ದೂರ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ರವರು ತಿಳಿಸಿದರು. ಅವರು ಇಂದು ನಗರದ ಚಂದು ಮೈದಾನದ ಜಿಲ್ಲಾ ಸಶಸ್ತç ಮೀಸಲು ಪೊಲೀಸ್ ಪಡೆ ಕೇಂದ್ರ ಸ್ಥಾನದಲ್ಲಿ, ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸಿ, ಮಾತನಾಡಿದರು. ಪೊಲೀಸರು ತಮ್ಮ ಕರ್ತವ್ಯದ ಸಂದರ್ಭದಲ್ಲಿ ಅನುಭವಿಸಿದ ತೊಂದರೆಯನ್ನು ಸಮಾಜದಲ್ಲಿ ಯಾರೂ ಗಮನ ಹರಿಸುವುದಿಲ್ಲ. ಪತ್ರಿಕೆಯಲ್ಲಿ ಬಂದಾಗ ಒಂದು ದಿನ ಸಹಾನುಭೂತಿ ತೋರಿಸಿ, ಮುಂದೆ ಅದನ್ನು ಮರೆಯುತ್ತಾರೆ ಹೀಗಾಗಬಾರದು, ಜನರು ದಿನನಿತ್ಯ ತಪ್ಪದೇ ಕಾನೂನು ಪಾಲನೆ ಮಾಡಬೇಕು ಎಂದರು. ಪೊಲೀಸರು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಜನರು ಸಹಕರಿಸಬೇಕು. ಪ್ರಸ್ತುತ ಪೊಲೀಸ್ ಇಲಾಖೆಯು ಸುಧಾರಿಸಿದೆ. ಆಧುನಿಕ ಶಸ್ತಾçಸ್ತçಗಳನ್ನು ಸಹ ನೀಡಲಾಗಿದೆ. ನುರಿತ ತರಬೇತಿ ಹೊಂದಿದವರನ್ನು ಪೊಲೀಸ್ ಇಲಾಖೆಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಹೆಮ್ಮಾಡಿಯ ಜತನಾ ಸ್ವತಂತ್ರ ಪಿಯು ಕಾಲೇಜಿಗೆ ಲಗ್ಗೆ ಇಟ್ಟ ನವರಾತ್ರಿ ಹುಲಿಗಳ ತಂಡ ತಾಸೆಯ ಸದ್ದಿಗೆ ತಕ್ಕಂತೆ ಹೆಜ್ಜೆ ಹಾಕುತ್ತಾ, ಸಾಹಸ ಪ್ರದರ್ಶಿಸುತ್ತಾ ಮೆಚ್ಚುಗೆಗೆ ಪಾತ್ರವಾಯಿತು. ಶನಿವಾರ ಕಾಲೇಜಿನ ಆವರಣದಲ್ಲಿ ಜೆಸಿಐ ಕುಂದಾಪುರ, ಕಿಯೋನಿಕ್ಸ್ ಯುವ.ಕಾಂ ಹಾಗೂ ಚಾಲುಕ್ಯ ಕ್ರಿಕೆಟರ್ಸ್ ಸಹಯೋಗದೊಂದಿಗೆ ಟಿ.ಟಿ. ಟೈಗರ್ಸ್ ಕುಂದಾಪುರ ತಂಡದ ಹುಲಿಗಳ ಕುಣಿತ ನವರಾತ್ರಿಯ ಸಂಭ್ರಮದಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕವರ್ಗವನ್ನು ಪುಳಕಿತಗೊಳಿಸಿತು. ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ಮೊಗವೀರ ಅವರು ಮಾತನಾಡಿ, ಕಾಲೇಜು ಆವರಣದಲ್ಲಿ ಹುಲಿವೇಷ ನೃತ್ಯ ಆಯೋಜನೆ ಮಾಡುವ ಮೂಲಕ ವಿದ್ಯಾರ್ಥಿಗಳು ಹತ್ತಿರದಲ್ಲಿಯೇ ಹುಲಿವೇಷದ ಸೊಗಬಗನ್ನು ನೋಡುವಂತೆ ಮಾಡಿದ ಎಲ್ಲಾ ಸಂಘ ಸಂಸ್ಥೆಗಳಿಗೂ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು. ನವರಾತ್ರಿ ಹುಲಿ ಕುಣಿತದ ಕೊನೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ತಾಸೆಯ ಸದ್ದಿನೊಂದಿಗೆ ಹೆಜ್ಜೆ ಹಾಕಿದರು. ಈ ಸಂದರ್ಭ ಜೆಸಿಐ ಕುಂದಾಪುರ ಸಿಟಿ ಸ್ಥಾಪಕಾಧ್ಯಕ್ಷ ಹುಸೆನ್ ಹೈಕಾಡಿ, ಅಧ್ಯಕ್ಷೆ ಡಾ. ಸೋನಿ ಡಿಕೊಸ್ಟಾ, ಮಾಜಿ ಅಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ದೇವರ ಆರಾಧನೆಯಿಂದ ಮಾನಸಿಕ ನೆಮ್ಮದಿಯ ಜೊತೆಗೆ ಸುಖಃ ಸಮೃದ್ದಿ ದೊರೆಯುತ್ತದೆ. ಇದು ಈ ಪುಣ್ಯ ಭೂಮಿಯ ಮಹಿಮೆಯಾಗಿದೆ. ಧಾರ್ಮಿಕ ಶ್ರದ್ಧೆ ಭಕ್ತಿ ಮತ್ತು ಭಗವಂತನ ಆರಾಧನೆಯಿಂದ ಬದುಕು ಸಾರ್ಥಕಗೊಳ್ಳುತ್ತದೆ. ಸುವರ್ಣ ಮಹೋತ್ಸವದ ಸಂಭ್ರಮದಲ್ಲಿ ಬಂದೂರಿನಲ್ಲಿ ಆರಂಭಿಸಿದ ಬೈಂದೂರು ದಸರಾ ಮುಂದಿನ ದಿನಗಳಲ್ಲಿ ರಾಜ್ಯ ಗುರುತಿಸುವಂತ ದಸರಾ ಸಂಭ್ರಮವಾಗಿ ಮೂಡಿಬರಲಿ ಎಂದು ಹಿರಿಯ ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ ಹೇಳಿದರು. ಅವರು ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನದ ಸುವರ್ಣ ಮಹೋತ್ಸವದ ಕಾರ್ಯಕ್ರಮ ಬೈಂದೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಈ ಮಾತುಗಳನ್ನಾಡಿ ನಮ್ಮ ಪೂರ್ವಜರು ಅನೇಕ ಕೊಡುಗೆಗಳನ್ನು, ಆಚರಣೆಗಳನ್ನು ನಮಗೆ ಬಿಟ್ಟುಹೋಗಿದ್ದಾರೆ. ಅವರ ಋಣಗಳನ್ನು ಪೂರೈಸುವ ಜವಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು. ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಎಸ್. ರಾಜು ಪೂಜಾರಿ, ಉಪಾಧ್ಯಕ್ಷ ಅಣ್ಣಪ್ಪ ಪೂಜಾರಿ ಯಡ್ತರೆ, ಸುಪ್ರೀತಾ ದೀಪಕ್ ಕುಮಾರ್ ಶೆಟ್ಟಿ, ನಾಗರಾಜ ಗಾಣಿಗ, ಪ್ರಭಾಕರ ಶೆಟ್ಟಿ ನೆಲ್ಯಾಡಿ, ನಾಗರಾಜ ಶೆಟ್ಟಿ ನಾಕಟ್ಟೆ, ಗಣೇಶ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಡಾಡಿ ಗೋವುಗಳ ಕಳ್ಳತನ ಮಾಡಿದವರ ಮತ್ತು ಅಕ್ರಮ ಕಸಾಯಿಖಾನೆ ನಿರ್ಮಿಸಿಕೊಂಡು ಸಾಮೂಹಿಕವಾಗಿ ಗೋವುಗಳನ್ನು ಹತ್ಯೆ ಮಾಡಿದವರನ್ನು ಬಂಧಿಸಿ ಗಡಿಪಾರು ಮಾಡುವಂತೆ ಹಿಂದು ಜಾಗರಣ ವೇದಿಕೆ ಗಂಗೊಳ್ಳಿ ಘಟಕ ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕರಿಗೆ ಮನವಿ ಸಲ್ಲಿಸಿ ಆಗ್ರಹಿಸಿದೆ. ಹಿಂಜಾವೇ ಪ್ರಾಂತ ಕಾರ್ಯಕಾರಿಣಿ ಸದಸ್ಯ ವಾಸುದೇವ ದೇವಾಡಿಗ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ರತ್ನಾಕರ ಗಾಣಿಗ, ತಾಲೂಕು ಕಾರ್ಯಕಾರಿಣಿ ಸದಸ್ಯ ಯಶವಂತ ಗಂಗೊಳ್ಳಿ ಹಾಗೂ ಜಿಲ್ಲಾ ಸಹ ಸಂಚಾಲಕ ನವೀನ್ ಗಂಗೊಳ್ಳಿ ನೇತೃತ್ವದ ಗಂಗೊಳ್ಳಿ ಹಿಂದು ಜಾಗರಣ ವೇದಿಕೆ ನಿಯೋಗ ಗಂಗೊಳ್ಳಿ ಪೊಲೀಸ್ ಠಾಣೆ ಉಪನಿರೀಕ್ಷಕ ಹರೀಶ್ ಆರ್. ಅವರನ್ನು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಗುರುವಾರ ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಿತು. ಗಂಗೊಳ್ಳಿಯಲ್ಲಿ ಪದೇ ಪದೇ ಗೋ ಕಳ್ಳತನ ಹಾಗೂ ಗೋ ಹತ್ಯೆಗಳು ನಿರಂತರವಾಗಿ ಎಗ್ಗಿಲ್ಲದೆ ಸಾಗುತ್ತಿದ್ದು, ಇದನ್ನು ತಡೆಗಟ್ಟುವಂತೆ ಹಿಂದು ಜಾಗರಣ ವೇದಿಕೆ ನಿರಂತರವಾಗಿ ಆಗ್ರಹಿಸುತ್ತಿದೆ. ಆದರೆ ಇಲಾಖೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಹೆಚ್ಚಿನ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಸಭೆಗಳ ಕನಿಷ್ಠವಾಗಿ ನಡೆದರಿರುವುದು ಖೇದದ ವಿಷಯ. ಎಲ್ಲಾ ಗ್ರಾಮ ಪಂಚಾಯಿತಿಗಲ್ಲಿ ಕನಿಷ್ಠ ಎಂದರೂ ಎರಡು ಗ್ರಾಮ ಪಂಚಾಯಿತಿ ಸಭೆ ನಡೆಸಬೇಕು. ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಗ್ರಾಮ ಸಭೆಗಳ ನಿಯಮಿತವಾಗಿ ನಡೆಸುವಂತೆ ಸೂಚಿಸಲು ತಾಲೂಕು ಪಂಚಾಯಿತಿ ಕಾರ್ಯನಿರ್ಹಣಾಧಿಕಾರಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್. ಸೂಚಿಸಿದರು. ಕುಂದಾಪುರ ತಾಲೂಕು ಪಂಚಾಯಿತಿ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಮಾಬಂಧಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಂದಾಪುರ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಸೇರಿ ಒಟ್ಟು 62 ಗ್ರಾಮ ಸಭೆ ನಡೆದಿದೆ ಎಂದು ಲೆಕ್ಕಪತ್ರ ವಿಭಾಗದ ಸಿಬ್ಬಂದಿ ಮಾಹಿತಿ ನೀಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಸಿಇಒ ಪ್ರಸನ್ನ ಗ್ರಾಮ ಪಂಚಾಯಿತಿ ಸಮಾನ್ಯ ಸಭೆ ನಡೆಸದಿರುವು ಸರಿಯಲ್ಲ. ಪ್ರತಿ ಗ್ರಾಮ ಪಂಚಾಯಿತಿಗಳು ಗ್ರಾಮ ಸಭೆ ನಡೆಸುವುದು ಅವರ ಜವಾಬ್ದಾರಿಯಾಗಿದ್ದು, ತಾಲೂಕು ಪಂಚಾಯಿತಿ ಎಲ್ಲಾ ಗ್ರಾಮಗಳಿಗೂ ಗ್ರಾಮ ಸಭೆ ನಡೆಸುವಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಪವಿಭಾಗ ಮಟ್ಟದ ಪರಿಶಿ? ಜಾತಿ ಮತ್ತು ಪಂಗಡದ ದೌರ್ಜನ್ಯ ನಿಯಂತ್ರಣ ಕಾಯ್ದೆ ಜಾಗೃತಿ ಉಸ್ತುವಾರಿ ಸಮಿತಿ ಹಾಗೂ ಮ್ಯಾನ್ಯುಯಲ್ ಸ್ಕ್ಯಾವೇಂಜಿಂಗ್ ಜಾಗೃತಿ ಉಸ್ತುವಾರಿ ಸಮಿತಿ ಸಭೆ ಸಹಾಯಕ ಆಯುಕ್ತೆ ರಶ್ಮೀ ಎಸ್.ಆರ್., ಅಧ್ಯಕ್ಷತೆಯಲ್ಲಿ ಗುರುವಾರ ಕೋರ್ಟ್ ಹಾಲ್ನಲ್ಲಿ ಜರುಗಿತು. ಪರಿಶಿ? ಜಾತಿ,ಪಂಗಡ ದೌರ್ಜನ್ಯ ನಿಯಂತ್ರಣ ಕಾಯ್ದೆ ಹಾಗೂ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ನಿ?ಧ ಕಾಯ್ದೆಯಡಿ ಪ್ರಕರಣಗಳ ಕುರಿತು ಚರ್ಚಿಸಿ, ಅನು?ನ ವ್ಯವಸ್ಥಿತವಾಗಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ಕುಂದಾಪುರ ಎಇಎಸ್ಪಿ ಬೆಳ್ಳಿಯಪ್ಪ ಯು.,ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮೀ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕೆ.ಜೆ., ಪುರಸಭೆ ಮುಖ್ಯಾಧಿಕಾರಿ ಮಂಜುನಾಥ ಆರ್., ವಿವಿಧ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ನಾಮನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಮೆನೇಜರ್ ರಮೇಶ್ ಕುಲಾಲ್ ಸ್ವಾಗತಿಸಿ, ಮಾಹಿತಿ ನೀಡಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ದೇಶಕ್ಕಾಗಿ ತ್ಯಾಗ ಮಾಡಿದ ಯೋಧ, ಹಾಗೂ ಅನ್ನ ಕೊಟ್ಟು ಜೀವನ ಪರ್ಯಂತೆ ಪೊರೆಯುತ್ತಿದ್ದು ಮಣ್ಣಿಗೆ ಋಣಿಯಾಗಿರಬೇಕು. ದೇಶಕ್ಕೆ ಸ್ವಾತಂತ್ರ್ಯಸಿಕ್ಕಿ ಅಮೃತಮಹೋತ್ಸವ ಕಾಲದಲ್ಲಿ ಅಮೃತ ಕಲಶ ಅಭಿಯಾನದ ಮೂಲಕ ತ್ಯಾಗಿಗಳ ನೆನಪು ಮಾಡಿಕೊಳ್ಳುವ ಜೊತೆ ದೇಶಕ್ಕಾಗಿ ತ್ಯಾಗ ಮಾಡಿದವರ ಸದಾ ನೆನಪಿಟ್ಟುಕೊಳ್ಳುವ ಕೆಲಸ ಮುಂದಿನ ಜನಾಂಗಕ್ಕೆ ನೆನಪಿಸುವ ಕೆಲಸ ಆಗುತ್ತದೆ ಎಂದು ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಅಭಿಪ್ರಾಯಪಟ್ಟರು. ರಾಷ್ಟ್ರ ಹಾಗೂ ರಾಜ್ಯ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನೆಹರೂ ಯುವ ಕೇಂದ್ರ, ತಾಲೂಕು ಪಂಚಾಯಿತಿ ಹಾಗೂ ಪುರಸಭೆ ಆಶ್ರಯದಲ್ಲಿ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜ್ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ನಡದೆ ನನ್ನ ದೇಶ ನನ್ನ ಮಣ್ಣಿ ಅಮೃತಕಲಶ ಜಾಥಾ ಸಭಾ ಕಾರ್ಯಕ್ರಮ ಶುಕ್ರವಾರ ಉದ್ಘಾಟಿಸಿ ಮಾತನಾಡಿ, ಅಮೃತಕಲಶೋತ್ಸವ ಜಾತಾ ಶತಶತಮಾನಗಳ ಕಾಲ ಭಾರತೀಯರಲ್ಲಿ ನೆನಪಾಗಿ ಉಳಿಯಲಿದ ಎಂದರು. ಭಂಡಾರ್ಕಾರ್ಸ್ ಕಾಲೇಜ್ ಪ್ರಾಂಶುಪಾಲ ಡಾ. ಶುಭಕರಾಚಾರಿ ಮಾತನಾಡಿದರು. ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್.ಆರ್., ತಹಸೀಲ್ದಾರ್ ಶೋಭಾಲಕ್ಷ್ಮೀ ಹೆಚ್.ಎಸ್., ಕಾಲೇಜ್…
