ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕಾರ್ಕಡ ಗೆಳೆಯರ ಬಳಗ ಇದರ 35ನೇ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ, ದತ್ತಿನಿಧಿ ವಿತರಣೆ ಸನ್ಮಾನ, ವಿಕಲಚೇತನ ಸಹಾಯ ನಿಧಿ ವಿತರಣೆ, ಮತ್ತು ಅಶಕ್ತರ ಸಹಾಯನಿಧಿ ವಿತರಣೆ ಕಾರ್ಯಕ್ರಮವು ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲಾ ಪಾರ್ವತಿ ಹೊಳ್ಳ ರಂಗ ಮಂಟಪದಲ್ಲಿ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ ವಹಿಸಿದ್ದರು. ಯಕ್ಷಗಾನ ಕಲಾವಿದ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೋಟ ಸುರೇಶ ಬಂಗೇರ, ವಿವೇಕ ಬಲಕಿಯರ ಪ್ರೌಢ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಕೆ. ಜಗದೀಶ ಹೊಳ್ಳ ಕಾರ್ಕಡ, ನ್ಯೂಕಾರ್ಕಡ ಶಾಲಾ ಮುಖ್ಯೋಪಾಧ್ಯ ಎನ್. ಪ್ರ್ರಭಾಕರ ಕಾಮತ್ ಹಾಗೂ ನಿವೃತ್ತ ಅಧ್ಯಾಪಕ ಕೆ. ನಾರಾಯಣ ಆಚಾರ್ಯ , ಹವ್ಯಾಸಿ ಯಕ್ಷಗಾನ ಕಲಾವಿದ ಕೆ. ಐತ ಮತ್ತು ಮಹಾ ಪೋಷಕ ವಿಘ್ನರಾಜ ಭಟ್ಟ ಅವರುಗಳನ್ನು ಸನ್ಮಾನಿಸಲಾಯಿತು. ಸಾಲಿಗ್ರಾಮದ ಹೊಸ ಬದುಕು ಆಶ್ರಮಕ್ಕೆ ಧನ ಸಹಾಯ ಪರಿಕರವನ್ನು, ಉದ್ಯಮಿ ಕಿದಿಯೂರು ಉದಯಕುಮಾರ್ ಶೆಟ್ಟಿ ಆಶ್ರಮದ ಮುಖ್ಯಸ್ಥ ವಿನಯ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವನ್ನು ನೀಡಬೇಕು. ದೈಹಿಕ ಮತ್ತು ಮಾನಸಿಕ ಆರೋಗ್ಯವು ಓದಿನಲ್ಲಿ ಹೆಚ್ಚಿನ ಏಕಾಗ್ರತೆಯನ್ನು ಸಾಧಿಸಲು ನೆರವಾಗುತ್ತದೆ ಎಂದು ಡಾ. ಬಿ.ಆರ್. ಅಂಬೇಡ್ಕರ್ ಯುವಕ ಮಂಡಲದ ಅಧ್ಯಕ್ಷ ಭಾಸ್ಕರ್ ಹೆಚ್.ಜಿ. ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದಲ್ಲಿ ಇಲ್ಲಿನ ಎಸ್.ವಿ ಕಾಮರ್ಸ್ ಕ್ಲಬ್ ಮತ್ತು ಶ್ರೀ ನಾರಾಯಣ ಗುರು ಜನ ಸೇವಾ ಬಳಗದ ಆಶ್ರಯದಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗಾಗಿನ ವಿಶೇಷ ಪರೀಕ್ಷಾ ಮಾರ್ಗದರ್ಶನ ಶಿಬಿರದ ಕಾರ್ಯಕ್ರಮ ‘ಪಯಣ’ವನ್ನು ಉದ್ಘಾಟಿಸಿ ಮಾತನಾಡಿದರು. ಮಾರ್ಗದರ್ಶನವನ್ನು ನೀಡಿದ ನರೇಂದ್ರ ಎಸ್. ಗಂಗೊಳ್ಳಿ ಮಾತನಾಡಿ, ಪರೀಕ್ಷೆ ಎಂದರೆ ಭಯಪಡುವುದಾಗಲಿ ಅಥವಾ ಸಂಭ್ರಮ ಪಡುವುದಾಗಲಿ ಸಲ್ಲದು. ಇದೊಂದು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಜೀವನದ ಒಂದು ಭಾಗ. ನಮ್ಮ ಸ್ಪರ್ಧೆ ಎನ್ನುವುದು ಅಂಕಗಳೊಂದಿಗೆ ಇರಲಿ ಎಂದು ಹೇಳಿದರು. ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸರಸ್ವತಿ ವಿದ್ಯಾಲಯ ಪದವಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ದೇಶದಲ್ಲಿ ಸುಸ್ಥಿರ ಹಾಗೂ ಜವಾಬ್ದಾರಿಯುತ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಕೇಂದ್ರ ಪ್ರವಾಸೋದ್ಯಮ ಇಲಾಖೆಯು ಜಾಗತಿಕ ಮಟ್ಟದಲ್ಲಿ 50 ಕ್ಕೂ ಹೆಚ್ಚು ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ಜಾಗತಿಕ ಪ್ರವಾಸೋದ್ಯಮ ತಾಣ ಯೋಜನೆಯ ಅನುಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸುಸ್ಥಿರತೆಯನ್ನು ಮುನ್ನೆಲೆಗೆ ತರುವುದು ಮತ್ತು ನೈಸರ್ಗಿಕ, ಸಾಂಸ್ಕೃತಿಕ ಸಂಪನ್ಮೂಲಗಳನ್ನು ರಕ್ಷಿಸುವುದರೊಂದಿಗೆ ಪರಿಸರ ಸ್ನೇಹಿಯಾಗಿ ಪ್ರವಾಸೋದ್ಯಮ ತಾಣಗಳನ್ನು ಅಭಿವೃದ್ಧಿ ಪಡಿಸುವುದರ ಮೂಲಕ ಪ್ರವಾಸಿಗರನ್ನು ಆಕರ್ಷಿಸುವುದು ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಗಮನ ಹರಿಸುವ ಗುರಿಯೊಂದಿಗೆ ಡೆಸ್ಟಿನೇಷನ್ ಡೆವಲಪ್ಮೆಂಟ್ ಸ್ಕೀಮ್ ಅನ್ನು ಜಾರಿಗೆ ತಂದಿದೆ ಎಂದರು. ಜಿಲ್ಲೆಯಲ್ಲಿ ಈ ಯೋಜನೆಗೆ ಕೋಡಿ- ಕನ್ಯಾನ, ಕೋಡಿ ಕುಂದಾಪುರ, ಬಾರ್ಕೂರು ಪೋರ್ಟ್ ಪ್ರದೇಶ ಹಾಗೂ ತ್ರಾಸಿ-ಮರವಂತೆ ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಂಘಟನೆಯ ಮೂಲಕ ಸಮಾಜದ ಏಳ್ಗೆ ಸಾಧ್ಯವಿದೆ. ಸ್ವಾಭಿಮಾನವನ್ನು ಯಾರಿಗೂ ಒತ್ತೆ ಇಡುವುದು ಬೇಡ. ಹೋಬಳಿಗಳೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಂಡು ಸಮಾಜದ ಸಾಮಾಜಿಕ, ಶೈಕ್ಷಣಿಕ ಪ್ರಗತಿಯಲ್ಲಿ ಸಹಭಾಗಿಗಳೋಣ. ಯುವ ಸಂಘಟನಾ ಶಕ್ತಿಯ ಮೂಲಕ ಮತ್ತೊಮ್ಮೆ ಹೆಮ್ಮಾಡಿ ಘಟಕ ಬಲಿಷ್ಠ ಘಟಕವಾಗಿ ಮೂಡಿಬರಲಿ ಎಂದು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ. ಜಿ. ಶಂಕರ್ ಹೇಳಿದರು.ಅವರು ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಮೀನುಗಾರರ ಸಹಕಾರ ಸಂಘದ ಮತ್ಸ್ಯಜ್ಯೋತಿ ಸಭಾಂಗಣದಲ್ಲಿ ನಡೆದ ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ, ಹೆಮ್ಮಾಡಿ ಘಟಕದ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಾರ್ಚ್ 1ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ನಿರ್ಮಾಣದ ಸಲುವಾಗಿ ಸಾಮೂಹಿಕ ಗುರು ಪಾದ ಕಾಣಿಕೆ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ. ಅದರಲ್ಲಿ ತಾವೆಲ್ಲರೂ ಪಾಲ್ಗೊಳ್ಳುವ ಮೂಲಕ ಸಮಾಜದ ಒಗ್ಗಟ್ಟನ್ನು ಬಿಂಬಿಸಬೇಕು. ಅದೇ ರೀತಿ ಬಗ್ವಾಡಿಯಲ್ಲೂ ಕೂಡಾ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ವಿದ್ಯಾರ್ಥಿಗಳಲ್ಲಿ ಕಲಿಕೆಯ ಬಗ್ಗೆ ಆಸಕ್ತಿ ಬರುವಂತೆ ಮಾಡುವುದರೊಂದಿಗೆ ಅವರು ಗುಣಮಟ್ಟದ ಶಿಕ್ಷಣವನ್ನು ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಮಾಡುವುದು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಹೇಳಿದರು. ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಉಡುಪಿ ಜಿಲ್ಲೆ ಮತ್ತು ಮುಖ್ಯ ಶಿಕ್ಷಕರ ಸಂಘ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ವೃದ್ಧಿಗಾಗಿ ನಡೆದ ಜಿಲ್ಲಾ ಮಟ್ಟದ ಮುಖ್ಯ ಶಿಕ್ಷಕರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ಬರುತ್ತಿರುವ ಉಡುಪಿ ಜಿಲ್ಲೆಯು ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡ ನೂರರಷ್ಟು ಫಲಿತಾಂಶ ಪಡೆದು ತಮ್ಮ ಸಾಧನೆಯನ್ನು ಮುಂದುವರೆಸಿಕೊಂಡು ಹೋಗುವುದರೊಂದಿಗೆ ಜಿಲ್ಲೆಗೆ ಕೀರ್ತಿ ತರುವಂತಾಗಬೇಕು ಎಂದರು. ಎಸ್.ಎಸ್.ಎಲ್.ಸಿ ಯಲ್ಲಿ ಗುನಾತ್ಮಕ ಫಲಿತಾಂಶ ತರುವ ಉದ್ದೇಶದಿಂದ ಕಾರ್ಯಾಗಾರ ಆಯೋಜಿಸಲಾಗಿದ್ದು, ಫಲಿತಾಂಶ ವೃದ್ಧಿಗೊಳಿಸುವ ಶಿಕ್ಷಣ ಇಲಾಖೆಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಪಂಚವರ್ಣ ಯುವಕ ಮಂಡಲ ಕೋಟ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇವರ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಸಮುದ್ಯತಾ ಗ್ರೂಪ್ಸ್ ಕೋಟ, ಜೆಸಿಐ ಕೋಟ ಸಿನಿಯರ್ ಲಿಜನ್,ಹಂದಟ್ಟು ಮಹಿಳಾ ಬಳಗದ ಸಹಯೋಗದೊಂದಿಗೆ ತೆಕ್ಕಟ್ಟೆ ಗ್ರಾಮಪಂಚಾಯತ್, ಎಸ್ಎಲ್ಆರ್ಎಂ ಘಟಕ ಇವರ ಸಂಯೋಜನೆಯೊಂದಿಗೆ ಬೀಚ್ ಕ್ಲಿನಿಂಗ್ ಭಾಗವಹಿಸಿ ಬಹುಮಾನ ಗೆಲ್ಲಿ ಎಂಬ ವಿನೂತನವಾಗಿ ಬೀಚ್ ಕ್ಲಿನಿಂಗ್ ಅಭಿಯಾನ ಭಾನವಾರ ತೆಕ್ಕಟ್ಟೆ ಗ್ರಾ.ಪಂ ಕೊಮೆ ಹಮ್ಮಿಕೊಂಡಿತು. ಒಂದು ಹೊಸ ಜಾಗೃತಿ ಮೂಡಿಸುವ ಸಲುವಾಗಿ ಬೀಚ್ ಕ್ಲಿನಿಂಗ್ ನಲ್ಲಿ ಭಾಗಿಯಾಗಿ ಬಹುಮಾನ ಗೆಲ್ಲಿ ಎಂಬ ಹೊಸ ಯೋಜನೆ ಕೈಗೆಟ್ಟುಕುವಂತೆ ಮಾಡಿತು. ಯುವ ಸಮುದಾಯದಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಬೇಕೆಂಬ ತುಡಿತದೊಂದಿಗೆ ಈ ಯೋಜನೆಯನ್ನು ಪಂಚವರ್ಣ ಸಂಘಟನೆ ಜಾರಿಗೊಳಿಸಿತು. ತೆಕ್ಕಟ್ಟೆ ಹಾಗೂ ಸಮೀಪದ ಕೋಟ ಭಾಗದ ಮಕ್ಕಳು ಸ್ವ ಇಚ್ಛೆಯಿಂದ ಭಾಗಿಯಾಗಿದ್ದು ಪಂಚವರ್ಣ ಸಂಘಟನೆ ನಿರಂತರವಾಗಿ 290 ವಾರಗಳ ಕಾಲ ರಸ್ತೆ ಒಳರಸ್ತೆ, ಬೀಚ್,ದೇಗುಲ ಹೀಗೆ ಹಲವು ಭಾಗಗಳನ್ನು ಸ್ವಚ್ಛಗೊಳಿಸುತ್ತಾ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯು ಸಬ್ಸಿಡಿ ದರದಲ್ಲಿ ಮೇಲ್ಛಾವಣಿಗೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ ಉಚಿತ ವಿದ್ಯುತ್ ಒದಗಿಸುವುದರ ಜೊತೆಗೆ ವಿದ್ಯುತ್ ಶಕ್ತಿಯ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಯೋಜನೆಯಡಿ ಸೌರ ಶಕ್ತಿಗೆ ಪರಿವರ್ತನೆಯ ಇಂಧನ ಉಳಿಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದ ಅವರು, ಮನೆಗಳ ತಮ್ಮ ವಿದ್ಯುತ್ ಬಿಲ್ಗಳಲ್ಲಿ ಗಮನಾರ್ಹ ಉಳಿತಾಯದಿಂದ ಪ್ರಯೋಜನ ಪಡೆಯುತ್ತವೆ. ಹೆಚ್ಚುವರಿಯಾಗಿ ಅವರು ತಮ್ಮ ಮೇಲ್ಛಾವಣಿ ಸೌರ ಶಕ್ತಿ ವ್ಯವಸ್ಥೆಗಳಿಂದ ಉತ್ಪಾದಿಸುವ ಹೆಚ್ಚುವರಿ ಶಕ್ತಿಯನ್ನು ಮೆಸ್ಕಾಂಗಳಿಗೆ ಮಾರಾಟ ಮಾಡುವ ಮೂಲಕ ಆದಾಯ ಗಳಿಸುವ ಅವಕಾಶ ಹೊಂದಿರುತ್ತದೆ. ತಿಂಗಳಿಗೆ 3 ಕಿಲೋ ವ್ಯಾಟ್ ಸರಾಸರಿ 300 ಯೂನಿಟ್ ಗಳಿಗಿಂತ ಹೆಚ್ಚು ವಿದ್ಯುತ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಇಲ್ಲಿನ ಮದರ್ ತೆರೇಸಾ ವಿದ್ಯಾ ಸಂಸ್ಥೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳು ಕೊಪ್ಪಳ ಜಿಲ್ಲೆಯಲ್ಲಿ ನಡೆದ 2025-26ನೇ ಸಾಲಿನ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಹೈಸ್ಕೂಲ್ ವಿಭಾಗದ ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮದರ್ ತೆರೇಸಾ ಶಾಲೆಯ 10ನೇ ತರಗತಿಯ ಉದಯೋನ್ಮುಖ ಪ್ರತಿಭೆಗಳಾದ ಪ್ರೀತಮ್ ಜಿ. ಪೂಜಾರಿ ಹಾಗೂ ರಿಷಿ ಶೆಟ್ಟಿ ಈ ವಿಶೇಷ ಸಾಧನೆ ಮಾಡಿ ರಾಜ್ಯಮಟ್ಟದಲ್ಲಿ ಸಂಸ್ಥೆಗೆ ಹೆಸರು ತಂದಿರುತ್ತಾರೆ. ಈ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕರಾದ ಶಮಿತಾ ರಾವ್ ಹಾಗೂ ರೆನಿಟಾ ಲೋಬೋ, ಕಾಲೇಜಿನ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಶಾಲಾ ಮುಖ್ಯೋಪಾಧ್ಯಾಯಿನಿ, ಬೋಧಕ ಬೋಧಕೇತರ ಸಿಬ್ಬಂದಿಯವರು ಹರ್ಷ ವ್ಯಕ್ತಪಡಿಸಿ ಅವರ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ತಾಲೂಕು ಸರ್ಕಾರಿ ನೌಕರರ ಸಂಘದ ಸಾಮಾನ್ಯ ಸಭೆಯಲ್ಲಿ ಸಂಘದ ನೂತನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸುಬ್ರಹ್ಮಣ್ಯ ಜಿ ಉಪ್ಪುಂದ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸುಬ್ರಹ್ಮಣ್ಯ ಜಿ ಉಪ್ಪುಂದ ಅವರು ಬೈಂದೂರು ತಾಲೂಕು NPS ನೌಕರ ಸಂಘ, ರೋಟರಿ ಕ್ಲಬ್ ಬೈಂದೂರು ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವವನ್ನು ಹೊಂದಿರುತ್ತಾರೆ ಇದೇ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘಕ್ಕೆ ನಾಗರಾಜ್ ಶೆಟ್ಟಿ ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು, ಕರುಣಾಕರ ಶೆಟ್ಟಿ ಪ್ರೌಢಶಾಲಾ ಶಿಕ್ಷಕರು ನಾವುಂದ, ರಾಘವೇಂದ್ರ ಡಿ ಮುಖ್ಯ ಶಿಕ್ಷಕರು ಹೊಸಬಾಳು, ಶಶಿಧರ್ ಗಾಂವ್ಕರ್ ಮುಖ್ಯ ಶಿಕ್ಷಕರು ಭೇಟಿಯಾಣೆ, ಗಣೇಶ ಮೇಸ್ತ ಗ್ರಾಮ ಆಡಳಿತಾಧಿಕಾರಿ ಕಿರಿಮಂಜೇಶ್ವರ, ಆನಂದ ಬಿಲ್ಲವ ಕಾರ್ಯದರ್ಶಿ ಗ್ರಾಮ ಪಂಚಾಯತ್ ಕಾಲ್ತೋಡು, ಸುಚಿತ್ರ ನರ್ಸಿಂಗ್ ಆಫೀಸರ್ ಕೊಲ್ಲೂರು,ಹೀಗೆ ವಿವಿಧ ಇಲಾಖೆಗಳ ಏಳು ಮಂದಿ ನೌಕರರನ್ನು ನಾಮನಿರ್ದೇಶನ ಸದಸ್ಯರಾಗಿ ಆಯ್ಕೆ ಮಾಡಿ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಹಾಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಹಲವು ಸಮಯಗಳಿಂದ ಗ್ರಾಮಸ್ಥರಿಗೆ ಕಗ್ಗಂಟ್ಟಾಗಿರುವ ಇ. ಸ್ವತ್ತು ಸಮಸ್ಯೆಯನ್ನು ಬಗೆಹರಿಸಿ ಅಲ್ಲದೆ ಪಂಚಾಯತ್ ವ್ಯಾಪ್ತಿಯಲ್ಲಿ ಸರಕಾರದ ವಿವಿಧ ವಸತಿ ಯೋಜನೆಗಳ ಹಣ ಬಿಡುಗಡೆಗೊಳಿಸಿ ಎಂಬ ಕೂಗು ಕೋಟತಟ್ಟು ಗ್ರಾಮಪಂಚಾಯತ್ನಲ್ಲಿ ಕೇಳಿಬಂತು. ಶನಿವಾರ ಕೋಟತಟ್ಟು ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ಸಭಾಭವನದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಇದರ ಜಮಾಬಂದಿ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಭಾಗವಹಿಸಿ ಜಮಾಬಂದಿ ಅಧಿಕಾರಿ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಬಳಿ ತಮ್ಮ ಅಹವಾಲನ್ನು ತೊಡಿಕೊಂಡರು. ಈ ಬಗ್ಗೆ ಮಾಹಿತಿ ನೀಡಿದ ಬಾಯಲ್ ರವರು ಈ ಹಿಂದೆ ಇದ್ದ ಕೆಲವು ಸಮಸ್ಯೆಗಳನ್ನು ಸರಿಪಡಿಸಲು ಹೊಸ ತಂತ್ರಾಂಶಗಳ ಮೂಲಕ ಈ ಸ್ವತ್ತನ್ನು ಜಾರಿಗೊಳಿಸಲಾಗಿದೆ. ಕೆಲವೆ ತಿಂಗಳುಗಳಲ್ಲಿ ಈ ಸಮಸ್ಯೆ ಬಗೆಹರಿಯಲಿದೆ ಎಂದರಲ್ಲದೆ, ಬಸವ ವಸತಿ ಸೇರಿದಂತೆ ಯಾವಾವ ವಸತಿ ಯೋಜನೆಗಳ ಹಣ ಬಾಕಿ ಇರಿಸಲಾಗಿದೆ ಅದರ ಬಗ್ಗೆ ಸಮಗ್ರ ವರದಿ ನೀಡಿ ಈ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು…
