Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಡಾ. ಕೋಟ ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ (ರಿ.), ಸಾಲಿಗ್ರಾಮ ಹಾಗೂ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಯಂಗಡಿ ಇವರ ಸಹಭಾಗಿತ್ವದಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಸಂಭ್ರಮ – 2023 ಜನವರಿಯಲ್ಲಿ ಜರುಗಲಿದ್ದು ವಿದ್ಯಾರ್ಥಿಗಳಿಂದ ಸ್ವರಚಿತ ಕಥೆ ಕವನ ಹಾಗೂ ಸಾಹಿತ್ತಿಕ ಸಾಧನೆಯ ವಿವರಗಳನ್ನು ಆಹ್ವಾನಿಸಲಾಗಿದೆ. ಮಕ್ಕಳಲ್ಲಿ ಸುಪ್ತವಾಗಿರುವ ಸಾಹಿತ್ಯಕ ಪ್ರತಿಭೆಯನ್ನು ಗುರುತಿಸಿ ವೇದಿಕೆಯನ್ನು ಕಲ್ಪಿಸಲು ಪ್ರೊ. ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಅವರ ಮುಂದಾಳತ್ವದಲ್ಲಿ ಕಳೆದ 15 ವರ್ಷಗಳ ಹಿಂದೆ ಡಾ. ಕೋಟ ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ (ರಿ.), ಸಾಲಿಗ್ರಾಮ. ವಾರ್ಷಿಕ ಸಮ್ಮೇಳನದ ಪ್ರಯುಕ್ತ 6 ಬಾರಿ ಜಿಲ್ಲಾ ಮಟ್ಟದ “ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜಿಸಿದೆ. ಕನ್ನಡ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲೇ ಜರುಗಲಿರುವ ಈ ಸಮ್ಮೇಳನದಲ್ಲಿ, ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದಾಗಿದೆ. ಈ ವರ್ಷ ಜಿಲ್ಲಾ ಮಟ್ಟದ ಈ ಸಮ್ಮೇಳನವನ್ನು ರಜತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಶ್ರೀ ಸಿದ್ಧಿವಿನಾಯಕ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ತೊಂಡ್ಲೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಗೋವಿಂದರಾಯ ಎಸ್ (57 ವರ್ಷ) ಅವರು ಬೈಕಿನಿಂದ ಬಿದ್ದು ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ. ಶಿರೂರಿನಿಂದ ಮಯ್ಯಾಡಿಗೆ ತೆರಳುತ್ತಿದ್ದ ವೇಳೆ ಬೈಂದೂರು ಹೊಸ ಬಸ್ ನಿಲ್ದಾಣದ ಬಳಿ ಬೈಕಿನಿಂದ ನಿಯಂತ್ರಣ ತಪ್ಪಿ ಬಿದ್ದಿದ್ದು, ಈ ವೇಳೆ ಅವರಿಗೆ ಹೃದಯಾಘಾತವಾಗಿದೆ ಎನ್ನಲಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟರಲ್ಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ. ಮಯ್ಯಾಡಿ ಸೇಡಿಮನೆಯವರಾದ ಗೋವಿರಾಯ ಅವರು ಮೃದು ಸ್ವಭಾವ ಹಾಗೂ ಸೇವಾನಿಷ್ಠೆಯಿಂದ ಹೆಸರಾಗಿದ್ದರು. ತೊಂಡ್ಲೆ ಶಾಲೆಯಲ್ಲಿ ವಿದ್ಯಾರ್ಥಿಗಳು ಗರಿಷ್ಠ ದಾಖಲಾತಿ ಹೊಂದುವಲ್ಲಿ ಶ್ರಮಿಸಿದ್ದರು. ಮೃತರು ಮಡದಿ, ಮಗ, ಮಗಳು ಹಾಗೂ ಬಂಧುಗಳನ್ನು ಅಗಲಿದ್ದಾರೆ. ಮೃತ ನಿಧನಕ್ಕೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೈಂದೂರು ವಲಯ ಅಧ್ಯಕ್ಷ ಶೇಖರ ಪೂಜಾರಿ, ಕಾರ್ಯದರ್ಶಿ ಗಣಪತಿ ಹೋಬಳಿದಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಕೋಟೇಶ್ವರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಕಾರು ಢಿಕ್ಕಿಯಾಗಿ ಕಾರಿನಲ್ಲಿದ್ದ ಒಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡ ಘಟನೆ ಗುರುವಾರ ಬೆಳಗ್ಗಿನ ಜಾವ 4 ಗಂಟೆಯ ಸುಮಾರಿಗೆ ಸಂಭವಿಸಿದೆ. ಅಪಘಾತದಲ್ಲಿ ಉದ್ಯಾವರದ ಸಂಪಿಗೆನಗರ ನಿವಾಸಿ ರೋಬರ್ಟ್ ಕ್ಯಾಸ್ಟಲಿನೋ ಅವರ ಪುತ್ರ ಉದ್ಯಾವರ ವೈಸಿಎಂ ಅಧ್ಯಕ್ಷ ಜೋಯಿಸ್ಟನ್ ಕ್ಯಾಸ್ಟಲಿನೋ (22) ಸಾವನ್ನಪ್ಪಿದವರು. ಕಾರಿನಲ್ಲಿದ್ದ ಲ್ಯಾಸ್ಟನ್ ಪಿಂಟೋ (22), ಜಸ್ಟಿನ್ ಕರ್ಡೊಜ (22), ವಿಲ್ಸನ್ ಮಾರ್ಟಿನ್ (23), ಗ್ಲಾಡ್ಸನ್ ಡಿಸಿಲ್ವಾ (23) ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲ ಉದ್ಯಾವರದ ವೈಸಿಎಂ ಘಟಕದ ಸದಸ್ಯರೆಂದು ತಿಳಿದು ಬಂದಿದೆ. ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಕುಂದಾಪುರ ಸಂಚಾರಿ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ನಮ್ಮ ದೇಶದಲ್ಲಿ ಮಹಿಳೆಗೆ ಶ್ರೇಷ್ಠ ಸ್ಥಾನ ಸ್ಥಾನ ನೀಡಲಾಗಿದೆ. ಆದರೆ ವಾಸ್ತವದಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚಿದೆ. ಮಕ್ಕಳಿಗೆ ಎಳವೆಯಲ್ಲಿಯೇ ಅರಿವು ಮೂಡಿಸುವುದರಿಂದ ಇಂತಹ ಘಟನೆಗಳನ್ನು ತಗ್ಗಿಸಬಹುದು ಎಂದು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವ ಸಮಿತಿ ಸಂಚಾಲಕ ಮಹಮ್ಮದ್ ಷರೀಫ್ ಹೇಳಿದರು. ಗುರುವಾರ ಇಲ್ಲಿನ ಯು.ಬಿ. ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವ ಆಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಉಡುಪಿ ಜಿಲ್ಲಾ ತಂಡದಿಂದ ಆಯೋಜಿಸಲಾದ ಅರಿವಿನ ಪಯಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ತ್ರೀ ಪುರುಷ ಅರಿತು ಬದುಕಿದರೆ ಸುಖೀ ಬದುಕು ಸಾಧ್ಯವಿದೆ. ಪ್ರತಿಯೋರ್ವರಿಗೂ ತಮ್ಮದೇ ಆದ ಸಾಮರ್ಥ್ಯವಿದೆ. ಅದನ್ನು ಅರಿತು ಬದುಕುವುದು ಮುಖ್ಯ. ಮಹಿಳೆಯರ ಮೇಲೆ ಯಾವುದೇ ಬಗೆಯಲ್ಲಿ ದೌರ್ಜನ್ಯ ನಡೆದರೂ ಅದನ್ನು ಪ್ರತಿಭಟಿಸುವಂತಾಗಬೇಕು. ಹಾಗೆಯೇ ಮಹಿಳಾ ಪರ ಕಾನೂನುಗಳು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ಕ್ಷೇತ್ರದಲ್ಲಿ ಹಿಂದುಳಿದ ಹಾಗೂ ಸಣ್ಣ ಸಮಾಜಗಳನ್ನು ಶಿಕ್ಷಣ, ಸಾಮಾಜಿಕ ಸ್ಥಾನಮಾನದ ಮೂಲಕ ಮುಖ್ಯವಾಹಿನಿಗೆ ತರುವ ಕೆಲಸಗಳು ನಿರಂತರವಾಗಿ ನಡೆಯುತ್ತಿದೆ. ಬೈಂದೂರು ಕಂಬಳ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಗ್ರಾಮೀಣ ಭಾಗದ ಮರಾಠಿ ಹಾಗೂ ಗೊಂಡ ಸಮುದಾಯದ ಪ್ರಾತಿನಿಧ್ಯದೊಂದಿಗೆ ನಡೆಯುತ್ತಿರುವ ಬೈಂದೂರು ಕಂಬಳದ ಕಲ್ಪನೆಯೇ ವಿಶಿಷ್ಟವಾಗಿದೆ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು. ದೀಪಕ್ ಕುಮಾರ್ ಶೆಟ್ಟಿ ಅವರ ಬಗ್ಗೆ ಸಣ್ಣ ಸಮಾಜಗಳಲ್ಲಿ ವಿಶ್ವಾಸ ಹೆಚ್ಚಿದೆ. ಅಂತಹ ಮರಾಠಿ ಹಾಗೂ ಗೊಂಡ ಸಮಾಜವನ್ನು ಮುನ್ನೆಲೆಯಲ್ಲಿ ಇಟ್ಟುಕೊಂಡು ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನಾರ್ಹ. ಈ ವಿಶಿಷ್ಟ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು. ಬೈಂದೂರು ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಅವರು ಮಾತನಾಡಿ, ರಾಜ್ಯ ಮಟ್ಟದ ಕಂಬಳೋತ್ಸವಕ್ಕೆ ಸಕಲ ತಯಾರಿಗಳು ನಡೆಯುತ್ತಿದ್ದು ಕರಾವಳಿ ಜಿಲ್ಲೆಗಳಿಗೆ ಕೋಣಗಳು ಬರಲಿದೆ. ಕಂಬಳೋತ್ಸವದ ಅಂಗವಾಗಿ ಗಂಗಾನಾಡು ಕ್ಯಾರ್ತೂರು ಗ್ರಾಮ ವಿದ್ಯುದೀಪಗಳಿಂದ ಅಲಂಕಾರಗೊಳ್ಳಲಿದೆ. ವೈಭವದ ಮೆರವಣಿಗೆ, ಜನಪದ ಸಂಸ್ಕೃತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕಾರ್ಕಳ: ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಹೊರತರಲಾಗುತ್ತಿರುವ ತ್ರೈಮಾಸಿಕ ಪತ್ರಿಕೆ “ನಿನಾದ” ಸಂಚಿಕೆ-5 ನ್ನು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವರ್ಗದವರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು. ಶ್ರೀ ಲಿಂಗಪ್ಪ ಮತ್ತು ಶ್ರೀಮತಿ ರತ್ನಾ ಲಿಂಗಪ್ಪ ದಂಪತಿಗಳು ತ್ರೈಮಾಸಿಕ ಪತ್ರಿಕೆಯನ್ನು ಅನಾವರಣಗೊಳಿಸಿದರು. ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಅಶ್ವತ್ ಎಸ್. ಎಲ್ ಮಾತನಾಡಿ ನಿನಾದ ಪತ್ರಿಕೆ ವಿದ್ಯಾರ್ಥಿಗಳಿಗೆ, ಯುವ ಬರಹಗಾರರಿಗೆ ಉತ್ತಮವಾದ ವೇದಿಕೆ ಒದಗಿಸುತ್ತಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಒಳ್ಳೆಯ, ಚಿಂತನಾತ್ಮಕ ಅಂಶಗಳನ್ನು ಬೆಳೆಸಲು ಹಾಗೂ ಕ್ರಿಯಾಶೀಲ ಮನಸ್ಸುಗಳ ಕಟ್ಟಲು ಕ್ರಿಯೇಟಿವ್ ಎಂದಿಗೂ ಸಿದ್ಧವಾಗಿದೆ. ಈಗಾಗಲೇ ನಾಲ್ಕು ಸಂಚಿಕೆಗಳನ್ನು ಪೂರೈಸಿ ಐದನೇ ಸಂಚಿಕೆ ಸಿದ್ಧವಾಗಿ ಲೋಕಮುಖಕ್ಕೆ ಪ್ರಕಟಗೊಳ್ಳುತ್ತಿದೆ. ಹೊಸತನದ ಬರಹಗಳು ಓದುಗರನ್ನು ಖಂಡಿತವಾಗಿಯೂ ತಲುಪುತ್ತವೆ. ಓದುಗರೂ ಸಾಕಷ್ಟು ಇದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಎಳವೆಯಲ್ಲಿಯೇ ಸಾಹಿತ್ಯದ ಕುರಿತು ಆಸಕ್ತಿ ಬೆಳಸಿಕೊಳ್ಳಬೇಕು ಎಂದು ಕರೆ ನೀಡಿದರು. “ನಿನಾದ” ಸಂಚಿಕೆಯಲ್ಲಿ ಪ್ರಕಟಗೊಂಡ ಲೇಖನಗಳನ್ನು ಬರೆದ ವಿದ್ಯಾರ್ಥಿಗಳನ್ನು “ಪುಸ್ತಕ” ಬಹುಮಾನದೊಂದಿಗೆ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥಾಪಕರಾದ ಡಾ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಜೆಸಿಐ ಉಪ್ಪುಂದ ಸುಪ್ರೀಮ್ ನೂತನ ಪದಗ್ರಹಣ ಕಾರ್ಯಕ್ರಮ ನಾಗೂರಿನ ಸಾಗರ ಸಭಾಭವನದಲ್ಲಿ ಇತ್ತಿಚಿಗೆ ಜರುಗಿತು. ನೂತನ ಅಧ್ಯಕ್ಷರಾಗಿ ಸುಮಾ ಆಚಾರ್ಯ, ಕಾರ್ಯದರ್ಶಿ ರವಿರಾಜ್ ಪೂಜಾರಿ, ಜೆಸಿರೇಟ್ ಜ್ಯೋತಿ ಶೆಟ್ಟಿ, ಜೆಜೆಸಿ ಚಿರಾಗ್ ಗಾಣಿಗ ಅವರ ತಂಡಗಳು ಪದಗ್ರಹಣ ಸ್ವೀಕರಿಸಿದರು. ಮುಖ್ಯ ಅತಿಥಿಯಾಗಿದ್ದ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅವರು ಶುಭಹಾರೈಸಿದರು. ಅಂತರಾಷ್ಟ್ರೀಯ ಮೂಗ ಮತ್ತು ಕಿವುಡ ತಂಡದ ನಾಯಕರಾದ ಪೃಥ್ವಿರಾಜ್ ಶೆಟ್ಟಿ ಹುಂಚಣಿ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕೃತ ರೈತರ ಬಾಬು ಆಚಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಝಡ್.ವಿ.ಪಿ ದೀಪಕ್ ರಾಜ್ ಅವರು ಮಾತನಾಡಿ ಜೆಸಿಐ ಸಂಸ್ಥೆ ಕ್ರಿಯಾಶೀಲ ಚಟುವಟಿಕೆ ಮೂಲಕ ಸಮಾಜದ ಅಭಿವೃದ್ದಿಯಲ್ಲಿ ತೊಡಗಿಸಿಕೊಂಡಿದೆ.. ಜೇಸಿಐ ಉಪ್ಪುಂದ ಸುಪ್ರೀಮ್ ಘಟಕ ಅತ್ಯುನ್ನತ ಕಾರ್ಯಕ್ರಮಗಳ ಮೂಲಕ ಜೇಸಿ ವಲಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡು ಈ ಭಾಗದಲ್ಲಿ ಸಾರ್ವಜನಿಕರ ವಲಯದಲ್ಲಿ ಉತ್ತಮ ಪ್ರಶಂಸೆಗೆ ಪಾತ್ರವಾಗಿರುವುದು ಹೆಮ್ಮೆಯಾಗಿದೆ ಎಂದರು. ನೂತನ ಅಧ್ಯಕ್ಷ ಸುಮಾ ಆಚಾರ್ಯ ಅವರು ಮಾತನಾಡಿದರು. ಸಂದರ್ಭದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮರವಂತೆಯ ಮಕ್ಕಳಿಗೆ ಊರಿನಲ್ಲೇ ಪ್ರೌಢಶಾಲಾ ಶಿಕ್ಷಣ ಸಿಗಬೇಕು ಎಂದು ಆಶಿಸಿದ ಅಲ್ಲಿನ ಶಿಕ್ಷಣಾಭಿಮಾನಿಗಳ ಪ್ರಯತ್ನ 1996ರಲ್ಲಿ ಫಲ ನೀಡಿತು. ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆ ಎಂಬ ವಿಶೇಷ ಹೆಸರು ಹೊತ್ತು ಅಂದು ಆರಂಭವಾದ ಈ ಶಾಲೆ 27 ವರ್ಷಗಳ ಸಾರ್ಥಕ ಸೇವೆಯ ಬಳಿಕ ಇದೇ ೨೩ರಂದು ತನ್ನ ರಜತ ಸಂಭ್ರಮ ಆಚರಿಸುತ್ತಿದೆ. ಶಾಲೆಯ ಸ್ಥಾಪನೆಗೆ ಶ್ರಮಿಸಲು 1994ರಲ್ಲಿ ಎಸ್. ಜನಾರ್ದನ ಮರವಂತೆ ಅವರ ಅಧ್ಯಕ್ಷತೆಯಲ್ಲಿ ರಚಿಸಲ್ಪಟ್ಟ ಪ್ರೌಢಶಾಲಾ ಸಂಸ್ಥಾಪನಾ ಸಮಿತಿಯು ಅಂದಿನ ಜಿಲ್ಲಾ ಪಂಚಾಯಿತಿ ಸದಸ್ಯ ಕೆ. ಎಂ. ರವೀಂದ್ರ ಖಾರ್ವಿ ಮರವಂತೆ ಅವರ ಬೆಂಬಲದೊಂದಿಗೆ ಕಾರ್ಯೋನ್ಮುಖವಾಯಿತು. 1996ರಲ್ಲಿ ರಾಜ್ಯ ಸರಕಾರವು ರಾಜ್ಯದ ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ ಒಂದರಂತೆ ಪ್ರೌಢಶಾಲೆ ಮಂಜೂರು ಮಾಡಿದಾಗ ಅಂದಿನ ಶಾಸಕ ಐ. ಎಂ. ಜಯರಾಮ ಶೆಟ್ಟಿ ಅವರು ಈ ಸಮಿತಿಯ ಒತ್ತಡಕ್ಕೆ ಮಣಿದು, ತಮ್ಮ ವಿವೇಚನೆಗೆ ಒದಗಿದ ಶಾಲೆಯನ್ನು ಮರವಂತೆಗೆ ದಯಪಾಲಿಸಿದರು. ಅಲ್ಲಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ…
