ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜೆಸಿಐ ಉಪ್ಪುಂದ ಸುಪ್ರೀಮ್ ನೂತನ ಪದಗ್ರಹಣ ಕಾರ್ಯಕ್ರಮ ನಾಗೂರಿನ ಸಾಗರ ಸಭಾಭವನದಲ್ಲಿ ಇತ್ತಿಚಿಗೆ ಜರುಗಿತು.
ನೂತನ ಅಧ್ಯಕ್ಷರಾಗಿ ಸುಮಾ ಆಚಾರ್ಯ, ಕಾರ್ಯದರ್ಶಿ ರವಿರಾಜ್ ಪೂಜಾರಿ, ಜೆಸಿರೇಟ್ ಜ್ಯೋತಿ ಶೆಟ್ಟಿ, ಜೆಜೆಸಿ ಚಿರಾಗ್ ಗಾಣಿಗ ಅವರ ತಂಡಗಳು ಪದಗ್ರಹಣ ಸ್ವೀಕರಿಸಿದರು.
ಮುಖ್ಯ ಅತಿಥಿಯಾಗಿದ್ದ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅವರು ಶುಭಹಾರೈಸಿದರು.
ಅಂತರಾಷ್ಟ್ರೀಯ ಮೂಗ ಮತ್ತು ಕಿವುಡ ತಂಡದ ನಾಯಕರಾದ ಪೃಥ್ವಿರಾಜ್ ಶೆಟ್ಟಿ ಹುಂಚಣಿ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕೃತ ರೈತರ ಬಾಬು ಆಚಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಝಡ್.ವಿ.ಪಿ ದೀಪಕ್ ರಾಜ್ ಅವರು ಮಾತನಾಡಿ ಜೆಸಿಐ ಸಂಸ್ಥೆ ಕ್ರಿಯಾಶೀಲ ಚಟುವಟಿಕೆ ಮೂಲಕ ಸಮಾಜದ ಅಭಿವೃದ್ದಿಯಲ್ಲಿ ತೊಡಗಿಸಿಕೊಂಡಿದೆ.. ಜೇಸಿಐ ಉಪ್ಪುಂದ ಸುಪ್ರೀಮ್ ಘಟಕ ಅತ್ಯುನ್ನತ ಕಾರ್ಯಕ್ರಮಗಳ ಮೂಲಕ ಜೇಸಿ ವಲಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡು ಈ ಭಾಗದಲ್ಲಿ ಸಾರ್ವಜನಿಕರ ವಲಯದಲ್ಲಿ ಉತ್ತಮ ಪ್ರಶಂಸೆಗೆ ಪಾತ್ರವಾಗಿರುವುದು ಹೆಮ್ಮೆಯಾಗಿದೆ ಎಂದರು.
ನೂತನ ಅಧ್ಯಕ್ಷ ಸುಮಾ ಆಚಾರ್ಯ ಅವರು ಮಾತನಾಡಿದರು. ಸಂದರ್ಭದಲ್ಲಿ ವಿ.ವಿ.ವಿ.. ಸಮಿತಿ ಹೆಮ್ಮಾಡಿಯ ನಿರ್ದೇಶಕ ರಘುರಾಮ ಕೆ. ಪೂಜಾರಿ, ಲಯನ್ಸ್ ಕ್ಲಬ್ ನಾವುಂದ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ, ಜೇಸಿ ವಲಯ ಉಪಾಧ್ಯಕ್ಷರಾದ ಮಂಜುನಾಥ ದೇವಾಡಿಗ, ಪೂರ್ವಾಧ್ಯಕ್ಷರಾದ ಪ್ರದೀಪ್ ಶೆಟ್ಟಿ, ಕಾರ್ಯದರ್ಶಿ ಯವರಾದ ರವಿರಾಜ್, ಸುಧಾಕರ ಕುಲಾಲ್ ಉಪಸ್ಥಿತರಿದ್ದರು
ಪೂರ್ವಧ್ಯಕ್ಷ ಜೇಸಿ ಕೀರ್ತಿರಾಜ್ ಶೆಟ್ಟಿ ಸ್ವಾಗತಿಸಿ ವರ್ಷದ ಚಟುವಟಿಕೆ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.