ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಾಲೇಜು ವಿದ್ಯಾರ್ಥಿಗಳಿಗೆ ಉದಯೋನ್ಮುಖ ವೃತ್ತಿ ಅವಕಾಶಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ, ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು (IMJISC), ಮೂಡ್ಲಕಟ್ಟೆ ಇಲ್ಲಿ ‘ದೀಕ್ಷಾರಂಭ 2026-27’ ಕಾರ್ಯಕ್ರಮದ ಅಂಗವಾಗಿ “ವಿಂಗ್ಸ್ ಆಫ್ ಆಪರ್ಚುನಿಟಿ – ವಿಮಾನಯಾನ ವೃತ್ತಿ ಮಾರ್ಗದರ್ಶನ” ಎಂಬ ವಿಶೇಷ ಅಧಿವೇಶನ ಕಾರ್ಯಕ್ರಮವನ್ನು ಸೋಮವಾರ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಥ್ರಸ್ಟ್ ಅಕಾಡೆಮಿಯ ಸಂಸ್ಥಾಪಕರಾದ ಕಾರ್ತಿಕ್ ಆಳ್ವ ಅವರು ವಿಮಾನಯಾನ ಕ್ಷೇತ್ರದಲ್ಲಿ ಲಭ್ಯವಿರುವ ವಿವಿಧ ಉದ್ಯೋಗಾವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ವಿವರವಾದ ಮಾಹಿತಿ ನೀಡಿದರು. ವಿಮಾನಯಾನ ಕ್ಷೇತ್ರದಲ್ಲಿ ವೃತ್ತಿ ಆಯ್ಕೆ ಮಾಡಿಕೊಳ್ಳಲು ಬೇಕಾದ ಅರ್ಹತೆಗಳು, ಅಗತ್ಯ ಕೌಶಲ್ಯಗಳು, ವ್ಯಕ್ತಿತ್ವ ವಿಕಸನ, ಸಂವಹನ ಕೌಶಲ್ಯ ಮತ್ತು ಸೇವಾ ಕ್ಷೇತ್ರದಲ್ಲಿ ವೃತ್ತಿಪರತೆಯ ಮಹತ್ವದ ಬಗ್ಗೆ ಅವರು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಜೊತೆಗೆ ಈ ಕ್ಷೇತ್ರದಲ್ಲಿ ಬೆಳೆಯಲು ಇರುವ ಅವಕಾಶಗಳು ಮತ್ತು ಸವಾಲುಗಳ ಬಗ್ಗೆಯೂ ಚರ್ಚಿಸಿದರು. ಬಿ.ಕಾಂ, ಬಿಬಿಎ ಮತ್ತು ಬಿಸಿಎ ವಿಭಾಗಗಳ ಎಲ್ಲಾ ವರ್ಷದ ಆಸಕ್ತ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಹಾಗೂ ಮಹಿಳಾ ಸಬಲೀಕರಣ ಘಟಕ ಜಂಟಿ ಆಶ್ರಯದಲ್ಲಿ “ವಿದ್ಯಾರ್ಥಿನಿಯರಿಗಾಗಿ ಜಾಗೃತಿ ಕಾರ್ಯಕ್ರಮ”ವನ್ನು ಆಯೋಜಿಸಲಾಯಿತು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಅವರು, ವಿದ್ಯಾರ್ಥಿನಿಯರ ಸರ್ವಾಂಗೀಣ ವಿಕಾಸಕ್ಕೆ ದೈಹಿಕ, ಮಾನಸಿಕ ಆರೋಗ್ಯ ಮತ್ತು ನೈರ್ಮಲ್ಯವೇ ಬುನಾದಿ. ಶುದ್ಧ ಆಹಾರ ಹಾಗೂ ವ್ಯಾಯಾಮವನ್ನು ಮೈಗೂಡಿಸಿಕೊಂಡು, ಮೊಬೈಲ್ ದಾಸ್ಯ ಮತ್ತು ನಿದ್ರಾಹೀನತೆಯಿಂದ ದೂರವಿದ್ದು ಸ್ವಾವಲಂಬಿಗಳಾಗಬೇಕು. ಕೀಳರಿಮೆ, ಖಿನ್ನತೆಯಂತಹ ಭಾವನೆಗಳನ್ನು ತೊರೆದು ಅಧ್ಯಯನ ಹಾಗೂ ಕೌಶಲ್ಯಾಭಿವೃದ್ಧಿಯತ್ತ ಗಮನಹರಿಸಿ, ಮನಸ್ಸು ಮತ್ತು ದೇಹ ಪರಸ್ಪರ ಪೂರಕವಾಗಿದ್ದು, ಧನಾತ್ಮಕ ಚಿಂತನೆಗಳೊAದಿಗೆ ಮುನ್ನಡೆಯಿರಿ,” ಎಂದು ಪ್ರೇರೇಪಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರಕ್ಷಿತ್ ರಾವ್ ಸ್ವಾಗತಿಸಿದರು. ಮಹಿಳಾ ಸಬಲೀಕರಣ ಘಟಕದ ಸಂಯೋಜಕಿ ವೀಣಾ ವಿ. ಭಟ್ ವಂದಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀಮತಿ ರೇಷ್ಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. …
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕೋಟ ಗಿಳಿಯಾರು ಹಿರಿಯ ನಾಗರಿಕರ ಸಭೆ ಮೂಡುಗಿಳಿಯಾರಿನ ಅಲ್ಸೆಕೆರೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಇತ್ತೀಚಿಗೆ ಜರಗಿತು. ಸಭೆಯ ಅಧ್ಯಕ್ಷತೆಯನ್ನು ವೇದಿಕೆ ಅಧ್ಯಕ್ಷ ಹಂದಕುಂದ ಸೋಮಶೇಖರ ಶೆಟ್ಟಿ ಗಿಳಿಯಾರು ವಹಿಸಿದ್ದರು. ಮುಖ್ಯ ಸಂಪನ್ಮೂಲ ವ್ಯಕ್ತಿಗಳಾದ ರೋಟರಿ ಕೋಟ-ಸಾಲಿಗ್ರಾಮ ಮಾಜಿ ಅಧ್ಯಕ್ಷ ಜಿ. ತಿಮ್ಮ ಪೂಜಾರಿ ಸಮಾಜ ಸೇವಾ ಸಂಘಟನೆಗಳಿಂದ ಸಾರ್ವಜನಿಕರಿಗೆ, ಹಿರಿಯ ನಾಗರಿಕರಿಗೆ ಸಿಗುವ ಸೇವೆ, ಸೌಲಭ್ಯ ಹಾಗೂ ಪ್ರಯೋಜನ ಮತ್ತು ವ್ಯಕ್ತಿತ್ವ ವಿಕಸನ ಆಗುವ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಸಂಪನ್ಮೂಲ ವ್ಯಕ್ತಿ ಜಿ. ತಿಮ್ಮ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಚರ್ಚಾಕೂಟದಲ್ಲಿ ವನಮಹೋತ್ಸವ, ಸ್ವಚ್ಛತಾ ಕಾರ್ಯ, ಸ್ವಾತಂತ್ರ್ಯೋತ್ಸವ, ಧ್ವಜಕಟ್ಟೆ ನಿರ್ಮಾಣ, ಶಿಕ್ಷಕರ ದಿನಾಚರಣೆ, ರಾಜ್ಯೋತ್ಸವ, ಸಂಪನ್ಮೂಲ ಕ್ರೋಢಿಕರಣ, ಆಟೋಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ 60-65 ವರ್ಷ ಮೇಲ್ಪಟ್ಟು ಹಿರಿಯ ನಾಗರಿಕರಿಗೆ ಸಾರ್ವಜನಿಕ ಹಾಗೂ ಸರಕಾರದಿಂದ ಸಿಗುವ ಸೌಲಭ್ಯ ಪ್ರಯೋಜನಗಳ ಬಗ್ಗೆ, ಹಿರಿಯ ನಾಗರಿಕರ ಗುರುತು ಚೀಟಿ ಮಾಡುವ ಬಗ್ಗೆ, ವಾರ್ಷಿಕ ಪ್ರವಾಸಗಳ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಬಟ್ಟೆ ಜೋಡಿಸುವ ವಿಚಾರವಾಗಿ ಸಹೋದರಿಯೊಂದಿಗೆ ಗಲಾಟೆ ಮಾಡಿಕೊಂಡು, ತಾಯಿ ಬೈದರೆಂಬ ಕಾರಣಕ್ಕೆ ಸಿಟ್ಟಾದ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳ್ಳಾಲ ಗ್ರಾಮದಲ್ಲಿ ನಡೆದಿದೆ. ಬೆಳ್ಳಾಲ ಗ್ರಾಮದ ಗಂಗಮಾತಾ ನಿವಾಸಿ ಚಂದ್ರಾವತಿ ಹಾಗೂ ಪ್ರಭಾಕರ ನಾಯಕ್ ದಂಪತಿಯ 18 ವರ್ಷದ ಪುತ್ರಿ ಪ್ರಮಿತಾ (18) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈಕೆ ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಗುರುವಾರದಂದು ಬೆಳಗ್ಗಿನ ಜಾವ ರೂಮಿನಲ್ಲಿ ಬಟ್ಟೆಗಳನ್ನು ಇಡುವ ವಿಚಾರವಾಗಿ ಪ್ರಮಿತಾ ಮತ್ತು ಆಕೆಯ ತಂಗಿಯ ನಡುವೆ ಮಾತುಕತೆ ನಡೆದು ಗಲಾಟೆಯಾಗಿತ್ತು. ಇದನ್ನು ಗಮನಿಸಿದ ತಾಯಿ ಚಂದ್ರಾವತಿ ಇಬ್ಬರಿಗೂ ಬೈದು ಗಲಾಟೆಯನ್ನು ಬಿಡಿಸಿದ್ದರು. ಇದರಿಂದ ಕೋಪಗೊಂಡ ಸಿಡುಕು ಸ್ವಭಾವದ ಪ್ರಮಿತಾ, ಕೊಠಡಿಗೆ ತೆರಳಿ ಒಳಗಿನಿಂದ ಬಾಗಿಲ ಚಿಲಕ ಹಾಕಿಕೊಂಡಿದ್ದಳು. ತಾಯಿ ಕೆಲಸಕ್ಕೆ ತೆರಳಿದ ಬಳಿಕ, ಬೆಳಿಗ್ಗೆ 08:30ರ ಸುಮಾರಿಗೆ ಪ್ರಮಿತಾಳ ಸಹೋದರ ತಾಯಿಗೆ ಕರೆ ಮಾಡಿ, ಅಕ್ಕ ಬಾಗಿಲು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಾಲಾ ಶಿಕ್ಷಣಾಧಿಕಾರಿಗಳ ಕಛೇರಿ ಬೈಂದೂರು ವಲಯ ಮತ್ತು ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ ಖಂಬದಕೋಣೆ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಬೈಂದೂರು ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಜನತಾ ನ್ಯೂ ಇಂಗ್ಲೀಷ್ ಮಿಡಿಯಂ ಸ್ಕೂಲ್ ನ ನಾಲ್ಕು ವಿದ್ಯಾರ್ಥಿಗಳು ಬೈಂದೂರು ವಲಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕದೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 17ರ ವಯೋಮಾನದ ಹುಡುಗರ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಹರಿಜಿತ್ (9ನೇ ತರಗತಿ), ಸನ್ವಿತ್ ಶೆಟ್ಟಿ (9ನೇ ತರಗತಿ), ತನೀಶ್ (9ನೇ ತರಗತಿ) ಮತ್ತು ಆರಾಧ್ಯ ಪೂಜಾರಿ (9ನೇ ತರಗತಿ) ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಜನತಾ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಕಲಿಕಾ ಚಟುವಟಿಕೆಗಳ ಜೊತೆಯಲ್ಲಿ ನುರಿತ ದೈಹಿಕ ಶಿಕ್ಷಣ ಶಿಕ್ಷಕರಿಂದ ವಿವಿಧ ಬಗೆಯ ಆಟೋಟ ಸ್ಪರ್ಧೆಗಳಿಗೆ ತರಬೇತಿಯನ್ನು ನೀಡುವುದರ ಮೂಲಕ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ವಿಕಾಸಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ವಿಜೇತ ವಿದ್ಯಾರ್ಥಿಗಳಿಗೆ ಜನತಾ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಚೇತನಾ ಪ್ರೌಢಶಾಲೆ ಹಂಗಾರಕಟ್ಟೆ ಇಲ್ಲಿ ರೋಟರಿ ಕ್ಲಬ್ ಹಂಗಾರಕಟ್ಟೆ- ಸಾಸ್ತಾನ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಉಡುಪಿ ಇವರ ಸಹಯೋಗದಲ್ಲಿ ಕಾನೂನು ಅರಿವು ಕಾರ್ಯಕ್ರಮ ಜರುಗಿತು. ಬ್ರಹ್ಮಾವರ ಪೋಲಿಸ್ ಠಾಣಾ ಉಪ ನಿರೀಕ್ಷಕಿ ಮುಕ್ತ ಬಾಯಿ ಹಾಗೂ ಪ್ರೊಫೆಷನರಿ ಪೊಲೀಸ್ ಉಪನಿರೀಕ್ಷಕಿ ಆಶ್ರೀತಾ ಎ. ಶೆಟ್ಟಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಪೋಕ್ಸೋ, ಸೈಬರ್ ಕ್ರೈಂಸ್, ಮಕ್ಕಳ ಕಳ್ಳ ಸಾಗಣಿಕೆ, ಮಾದಕ ದ್ರವ್ಯ ವ್ಯಸನ, ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಹಾಗೂ ಕಾನೂನಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ನೀಡಿದರು. ರೋಟರಿ ಕ್ಲಬ್ ಅಧ್ಯಕ್ಷೆ ಕುಸುಮ ಮನೋಜ್ ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪೋಷಕ ಪ್ರತಿನಿದಿಗಳಾದ ರೇಖಾ ಉಡುಪ, ರಕ್ಷಿತ್ ಕುಮಾರ್ ಶೆಟ್ಟಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರೋಟರಿ ಕ್ಲಬ್ನ ಸದಸ್ಯರಾದ ಮನೋಜ್ ಕುಮಾರ್, ಅರವಿಂದ್ ಶರ್ಮಾ, ಲಕ್ಷ್ಮೀನಾರಾಯಣ, ಲೀಲಾವತಿ, ಸುಲತಾ ಹೆಗ್ಡೆ, ಜ್ಯೋತಿ ಉದಯ್ ಕುಮಾರ್, ಅಮಿತಾ, ಮಮತಾ ಶೆಟ್ಟಿ, ಶಾಲಾ ವಿದ್ಯಾರ್ಥಿ ನಾಯಕಿ ಕು. ವರ್ಷ, ಶಿಕ್ಷಕ ವೃಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಗೆಳೆಯರ ಬಳಗ ಕಾರ್ಕಡ ಇದರ 38ನೇ ವಾರ್ಷಿಕ ಮಹಾಸಭೆಯು ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚಿಗೆ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷ ಕೆ . ತಾರಾನಾಥ ಹೊಳ್ಳ ವಹಿಸಿದ್ದರು. ವಾರ್ಷಿಕ ವರದಿಯನ್ನು ಬಳಗದ ಕಾರ್ಯದರ್ಶಿ ಕೆ. ನಾಗರಾಜ ಉಪಾಧ್ಯ ಹಾಗೂ ಅಡಿಟ್ ಮಾಡಿದ 2025-26ರ ಆಯವ್ಯಯ ಕೋಶಾಧಿಕಾರಿ ಕೆ. ಶೀನ ಸಭೆಯಲ್ಲಿ ಮಂಡಿಸಿದರು. ಸಭೆ ಸರ್ವಾನುಮತದಿಂದ ಅಂಗೀಕರಿಸಿತು. ನಂತರ ಕಾರ್ಯಕಾರಿಣಿ ಸಭೆಯಲ್ಲಿ ಈ ಕೆಳಗಿನವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ಕೆ. ತಾರಾನಾಥ ಹೊಳ್ಳ, ಉಪಾಧ್ಯಕ್ಷ ಕೆ. ಶಶಿಧರ ಮಯ್ಯ, ಕಾರ್ಯದರ್ಶಿ- ಕೆ. ನಾಗರಾಜ ಉಪಾಧ್ಯ, ಜೊತೆ ಕಾರ್ಯದರ್ಶಿ ಕೆ. ಜಗದೀಶ ಆಚಾರ್ಯ, ಖಜಾಂಚಿ ಕೆ. ಶೀನ, ಕಾರ್ಯಕಾರಿ ಸಮಿತಿಯಲ್ಲಿ ಕೆ. ಚಂದ್ರಕಾಂತ ನಾಯರಿ, ಕೆ. ಶ್ರೀಕಾಂತ ಐತಾಳ, ಕೆ. ಶ್ರೀಪತಿ ಆಚಾರ್ಯ, ಕೆ. ತಮ್ಮಯ್ಯ, ಕೆ. ಉದಯ ಐತಾಳ, ಕೆ. ರಾಘವೇಂದ್ರ ದೇವಾಡಿಗ, ಕೆ. ಶೇಖರ, ಕೆ. ರಘ ಭಂಡಾರಿ ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಶಿವಮೊಗ್ಗ ಜಿಲ್ಲಾ ಪ್ರಭಾವಿ ಕಾಂಗ್ರೆಸ್ ಮುಖಂಡರಾದ ಎಸ್. ಪಿ. ದಿನೇಶ್ ಇತ್ತೀಚಿಗೆ ಶ್ರೀ ಕ್ಷೇತ್ರ ಹಲವು ಮಕ್ಕಳ ತಾಯಿ ಅಮೃತೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ್ ಸಿ. ಕುಂದರ್ ಶಾಲು ಹೋದಿಸಿ ಗೌರವಿಸಿ ಪ್ರಸಾದ ವಿತರಿಸಿದರು. ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಚಂದ್ರಶೇಖರ್ ಆಚಾರ್ ಕೋಟ, ಸುಭಾಸ್ ಶೆಟ್ಟಿ ಗಿಳಿಯಾರು, ಗಣೇಶ್ ಕೆ. ನೆಲ್ಲಿಬೆಟ್ಟು, ದೇವಸ್ಥಾನದ ವ್ಯವಸ್ಥಾಪಕರಾದ ಗಣೇಶ್ ಹೊಳ್ಳ, ಅರ್ಚಕರಾದ ಸಂದೇಶ ಜೋಗಿ, ಅರವಿಂದ ಜೋಗಿ ಹಾಗೂ ಸ್ಥಳೀಯರಾದ ಭುಜಂಗ ಗುರಿಕಾರ, ಸೋಮಶೇಖರ್ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ಸಂಘ ರತ್ನ ಹಾಗೂ ಭಾರತ ಸಂಘ ಸಿರಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಫ್ರೆಂಡ್ಸ್ ಸರ್ಕಲ್ ರಿ. ಮೀನು ಮಾರ್ಕೆಟ್ ರಸ್ತೆ ಕುಂದಾಪುರ ಇದರ 36ನೇ ವರ್ಷದ ಪುರಸಭಾ ವ್ಯಾಪ್ತಿಯ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮವು ಕುಂದಾಪುರದ ಬಿಆರ್ ರಾಯರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿನಡೆಯಿತು. ಸಂಸ್ಥೆಯ ಅಧ್ಯಕ್ಷರಾದ ಗಣೇಶ್ ನಾಯ್ಕ್ ಸಭಾಧ್ಯಕ್ಷತೆ ವಹಿಸಿ ಫ್ರೆಂಡ್ಸ್ ಸರ್ಕಲ್ ಸಂಸ್ಥೆಯು ಕಳೆದ 35 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸುತ್ತಿದ್ದು ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಪದವಿಪೂರ್ವ ವಿದ್ಯಾರ್ಥಿಗಳಿಗೂ ವಿಸ್ತರಿಸಲಿದೆ ಎಂದು ನುಡಿದರು . ಮುಖ್ಯ ಅತಿಥಿಯಾದ ಚೇತನಾ ಕಿರಣ್ ಮಕ್ಕಳಿಗೆ ಜೀವನ ಮೌಲ್ಯ , ಉತ್ತಮ ಸಂಸ್ಕಾರ ಹಾಗೂ ಆದರ್ಶ ಜೀವನ ಶೈಲಿ ಬಗ್ಗೆ ನುಡಿದರು . ಇನ್ನೋರ್ವ ಮುಖ್ಯ ಅತಿಥಿಯಾದ ಡಾ. ಅಶೋಕ್ ವಿದ್ಯಾರ್ಥಿಗಳಿಗೆ ಉತ್ತಮ ಆರೋಗ್ಯ, ಆಹಾರ ಸೇವನೆ ದೈಹಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಮತ್ತೋರ್ವ ಮುಖ್ಯ ಅತಿಥಿಯಾಗಿ ಬಿ.ಆರ್ ರಾಯರ ಹಿಂದೂ ಶಾಲೆಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಘಟಕಗಳು ಮತ್ತು ಮಾದಕ ವಿರೋಧಿ ಜಾಗೃತಿ ಕೋಶ ಇವುಗಳ ಆಶ್ರಯದಲ್ಲಿ ಕುಂದಾಪುರ ಅಬಕಾರಿ ಉಪ ವಿಭಾಗದ ಕಚೇರಿಯ ಸಹಯೋಗದೊಂದಿಗೆ ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ “ಮಾದಕ ದ್ರವ್ಯಗಳು ಮತ್ತು ಮನೋವಿಕಾರಕ ಪದಾರ್ಥಗಳು ಮತ್ತು ಸಂಬAಧಿತ ಕಾಯ್ದೆ” ವಿಷಯದ ಕುರಿತು ಉಪನ್ಯಾಸ ನಡೆಯಿತು. ಸಂಪನ್ಮೂಲ ವ್ಯಕ್ತಿ ಕುಂದಾಪುರದ ಉಪ ಅಬಕಾರಿ ಅಧೀಕ್ಷಕ ಶ್ರೀ ಪ್ರಭುಗೌಡ ಎಂ. ಪಾಟೀಲ್ ಅವರು ಮಾತನಾಡಿ, ವಿವಿಧ ರೀತಿಯ ಮಾದಕ ದ್ರವ್ಯಗಳು, ಅವುಗಳ ಸೇವನೆಯ ಲಕ್ಷಣಗಳು, ದೇಹದಲ್ಲಿ ಅವುಗಳ ಉಳಿಯುವ ಅವಧಿ, ದುಷ್ಪರಿಣಾಮಗಳು ಹಾಗೂ ಈ ರೀತಿಯ ವ್ಯಸನಗಳಿಂದ ದೂರವಿರುವ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲಾರದ ಡಾ. ಕೆ. ಉಮೇಶ್ ಶೆಟ್ಟಿ ವಹಿಸಿದ್ದರು. ಉಪಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ, ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳಾದ ರಾಜೇಶ್ ಶೆಟ್ಟಿ ವಕ್ವಾಡಿ, ಪೂಜಾ ಕುಂದರ್ ಮತ್ತು ಮಾದಕ ವಿರೋಧಿ ಜಾಗೃತಿ…
