Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿಯ ಶ್ರೀ ನಾರಾಯಣ ಗುರು ಜನ ಸೇವಾ ಬಳಗದ ವತಿಯಿಂದ ಇಲ್ಲಿನ ಮ್ಯಾಂಗನೀಸ್ ರಸ್ತೆಯ ಅಂಗನವಾಡಿ ಕೇಂದ್ರಕ್ಕೆ ಸೀಲಿಂಗ್ ಫ್ಯಾನ್ ಮತ್ತು ಮಕ್ಕಳಿಗೆ ಕಲಿಕೆಯ ಪರಿಕರಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ನಾರಾಯಣ ಗುರು ಜನಸೇವಾ ಬಳಗದ ಅಧ್ಯಕ್ಷ ಗೋಪಾಲ ಪೂಜಾರಿ, ಉಪಾಧ್ಯಕ್ಷೆ ಮಮತಾ ಪೂಜಾರಿ, ಪ್ರಧಾನ ಕಾರ್ಯದರ್ಶಿ ಹರ್ಷೇಂದ್ರ ಆಚಾರ್ಯ, ನಾಗಭೂಷಣ ಶೇಟ್, ನರೇಂದ್ರ ಎಸ್ ಗಂಗೊಳ್ಳಿ ಮತ್ತು ಅಂಗನವಾಡಿ ಕೇಂದ್ರದ ಸಹಾಯಕಿ ಸೀಮಾ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು. ಅಂಗನವಾಡಿ ಶಿಕ್ಷಕಿ ಸಂಗೀತ ಶುಭ ಹಾರೈಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನಲ್ಲಿ ಸೋಮವಾರ ಕುಂದಾಪುರದ ಸರ್ಕಾರಿ ತಾಲ್ಲೂಕು ಆಯುಷ್ ಆಸ್ಪತ್ರೆಯ ಸಹಯೋಗದೊಂದಿಗೆ ಕಾಲೇಜು ಸಭಾಂಗಣದಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಿತು. ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಯೋಗದ ಮಹತ್ವವನ್ನು ಉತ್ತೇಜಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವು ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸುವುದರೊಂದಿಗೆ ಪ್ರಾರಂಭವಾಯಿತು. ಕುಂದಾಪುರದ ಸರ್ಕಾರಿ ತಾಲ್ಲೂಕು ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಿಲ್ಪಾ ಕೆ. ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು ಮತ್ತು ಪ್ರಾಂಶುಪಾಲರಾದ ಜೆನ್ನಿಫರ್ ಫ್ರೀಡಾ ಮೆನೆಜಸ್, ಉಪ ಪ್ರಾಂಶುಪಾಲರಾದ ರೂಪಶ್ರೀ ಕೆ. ಎಸ್, ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಡಾ. ಶಿಲ್ಪಾ ಕೆ. ಸಭೆಯನ್ನುದ್ದೇಶಿಸಿ ಮಾತನಾಡಿದರು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಮುನ್ನಡೆಸುವಲ್ಲಿ ಯೋಗದ ಮಹತ್ವವನ್ನು ಎತ್ತಿ ತೋರಿಸಿದರು. ದೈಹಿಕ ಸದೃಢತೆ, ಮಾನಸಿಕ ಶಾಂತಿ ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಸುಧಾರಿಸಲು ನಿಯಮಿತವಾಗಿ ಯೋಗಾಭ್ಯಾಸ ಮಾಡುವಂತೆ ಅವರು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಪ್ರೋತ್ಸಾಹಿಸಿದರು. ಯೋಗ ಪ್ರದರ್ಶನ ಅಧಿವೇಶನವನ್ನು ನಡೆಸಲಾಯಿತು, ಈ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ಇದರ ಮಹತ್ವಾಕಾಂಕ್ಷಿ ಯೋಜನೆಯಾದ ನೂತನ ತೆಂಗಿನ ಎಣ್ಣೆ ಘಟಕದ ಉದ್ಘಾಟನೆ ಹಾಗೂ ‘ಸಹಕಾರಿ ಬ್ರ್ಯಾಂಡ್’ ತೆಂಗಿನ ಎಣ್ಣೆ ಉತ್ಪನ್ನಗಳ ಮಾರುಕಟ್ಟೆಗೆ ಬಿಡುಗಡೆ ಸಮಾರಂಭವು ಸೋಮವಾರ ಬೆಳ್ವೆ ಸಂಘದ ಪ್ರಧಾನ ಕಚೇರಿ ಆವರಣದಲ್ಲಿ ನೆರವೇರಿತು. ಕಾರ್ಯಕ್ರಮದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಅವರು ದೀಪ ಬೆಳಗಿಸಿ, ಯಂತ್ರೋಪಕರಣಗಳಿಗೆ ಚಾಲನೆ ನೀಡಿ, ಮಾತನಾಡಿ, “ತೆಂಗು ಬೆಳೆಗಾರರು ಬೆಲೆ ಏರಿಳಿತ, ರೋಗಬಾಧೆ ಹಾಗೂ ಮಾರುಕಟ್ಟೆ ಸಮಸ್ಯೆಯಿಂದ ಸಂಕಷ್ಟದಲ್ಲಿದ್ದಾರೆ. ಈ ಘಟಕದ ಮೂಲಕ ಸಂಘದ ಸದಸ್ಯರ ತೋಟದಿಂದಲೇ ನೇರವಾಗಿ ಕಾಯಿ ಖರೀದಿಸಿ, ಮಾರುಕಟ್ಟೆ ದರದಲ್ಲೇ ಹಣ ಪಾವತಿಸುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿ ರೈತರಿಗೆ ಪೂರ್ಣ ಲಾಭ ಸಿಗಲಿದೆ” ಎಂದರು. ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಬೆಳ್ವೆ ಸಂಘವು ಕೇವಲ ಬ್ಯಾಂಕಿಂಗ್‌ಗೆ ಸೀಮಿತವಾಗದೆ ಉತ್ಪಾದನಾ ಕ್ಷೇತ್ರಕ್ಕೆ ಇಳಿದಿರುವುದು ಶ್ಲಾಘನೀಯ ಎಂದು ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ : ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ಅಧಿನಿಯಮ, 1993ರ 5ನೇ ಪ್ರಕರಣದ ಉಪ ಪ್ರಕರಣ (5) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ,  ಜಿಲ್ಲೆಯ ಕುಂದಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಧೀನಕ್ಕೆ ಒಳಪಡುವ ಪ್ರದೇಶಗಳನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಾಗಿ ವಿಭಜಿಸಿ, ಆ ಕ್ಷೇತ್ರಕ್ಕೆ ಹಂಚಿಕೆ ಮಾಡಲ್ಪಟ್ಟ ಸದಸ್ಯ ಸ್ಥಾನಗಳ ಸಂಖ್ಯೆಗಳ ವಿವರವನ್ನು ಪ್ರಕಟಿಸಲಾಗಿರುತ್ತದೆ. ಹೊಸಾಡು – 1:ಕಂಚಗೋಡು, ಜನತಾ ಕಾಲೋನಿ-1, ಜನತಾ ಕಾಲೋನಿ-11, ಖಾರ್ವಿಕೇರಿ ಹೊಸಾಡು ಗ್ರಾಮದ ವಾರ್ಡ್ 1 ರಲ್ಲಿ ಮನೆ ನಂಬ್ರ 1 ರಿಂದ 201 ರ ತನಕ (ಪೂ : ಕೆ ಸಿ ಡಿ ಸಿ ಗೇರು ತೋಟ, ಪ : ಅರಬ್ಬಿ ಸಮುದ್ರ, ಉ : ತ್ರಾಸಿ ಕಂಚುಗೋಡು ರಸ್ತೆ ಹಾಗೂ ದ : ಗುಜ್ಜಾಡಿ ಕಂಚುಗೋಡು ರಸ್ತೆ). ಹಂಚಿಕೆಯಾಗಿರುವ ಸ್ಥಾನಗಳ ಸಂಖ್ಯೆ-3. ಹೊಸಾಡು – 2:ಗಾಣದಮಕ್ಕಿ, ಕೇರಿಕೊಡ್ಲು, ಕಮ್ಮಾರಕೊಡ್ಲು, ಕಾಳುಮನೆ, ಕೋಟೆಮಕ್ಕಿ, ಮುಳ್ಳಿಕಟ್ಟಿ, ಕಡೇರಮನೆ,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ದೇಹ ಮತ್ತು ಮನಸ್ಸನ್ನು ಕೂಡಿಸಿ ವ್ಯಕ್ತಿತ್ವವನ್ನು ಅರಳಿಸುವ ಯೋಗವು ಭಾರತದ ಪತಂಜಲಿ ಮಹರ್ಷಿಗಳ ಮಹಾನ್ ಕೊಡುಗೆ, ವಿಶ್ವದಾದ್ಯಂತ ಯೋಗವನ್ನು ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್. ಶೋಭಾ ಶೆಟ್ಟಿ  ಹೇಳಿದರು. ಅವರು ಇಲ್ಲಿನ ಕೆದೂರು ಸರಕಾರಿ ಪ್ರೌಢಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ಉದಯ ಕುಮಾರ್ ಶೆಟ್ಟಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ವಿದ್ಯಾರ್ಥಿಗಳು ನಿತ್ಯವೂ ಯೋಗವನ್ನು ಅಭ್ಯಾಸ ಮಾಡಿದರೆ ಸಕಾರಾತ್ಮಕ ಯೋಚನೆ ಬೆಳೆದು ಭವಿಷ್ಯ ಉಜ್ವಲವಾಗುತ್ತದೆ ಎಂದು ನುಡಿದರು. ದೈಹಿಕ ಶಿಕ್ಷಣ ಶಿಕ್ಷಕಿ ರತ್ನಾ ಯೋಗದ ಮಹತ್ವವನ್ನು ಹೇಳುತ್ತಾ ವಿದ್ಯಾರ್ಥಿಗಳಿಂದ ಧ್ಯಾನ, ಪ್ರಾಣಾಯಾಮ, ಸೂರ್ಯ ನಮಸ್ಕಾರ ಹಾಗೂ ವಿವಿಧ ಯೋಗಾಸನಗಳನ್ನು ಮಾಡಿಸಿದರು. ಸಮೂಹ ಸಂಪನ್ಮೂಲ ವ್ಯಕ್ತಿ ಸುಚಿತ್ರಾ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕ ರಮೇಶ ಕುಲಾಲ್ ಎನ್. ಕಾರ್ಯಕ್ರಮ ನಿರೂಪಿಸಿ‌, ಶಿಕ್ಷಕಿ ರತ್ನಾ ಕೃತಜ್ಞತೆ ಸಲ್ಲಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಪ್ರೌಢ ಶಾಲೆ ಗಳಲ್ಲಿ ವಿದ್ಯಾರ್ಥಿಗಳಿಗೆ ಯಕ್ಷಗಾನ ಶಿಕ್ಷಣ ನೀಡುವ ಬಗ್ಗೆ ಎಲ್ಲಾ ಸರಕಾರಿ ಹಾಗೂ ಅನುದಾನಿತ ಶಾಲೆ ಮುಖ್ಯ ಶಿಕ್ಷಕರ ಜೊತೆ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಸಮಾಲೋಚನೆ ನಡೆಸಿದರು. ಬಳಿಕ ಮಾತನಾಡಿದ ಶಾಸಕರು ಯಕ್ಷಗಾನ ಕಲಾ ರಂಗ ಸಂಸ್ಥೆಯು ಕಳೆದ ಎರಡು ವರ್ಷಗಳಿಂದ ಕ್ಷೇತ್ರದ ಆಸಕ್ತ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ಶಿಕ್ಷಣ ನೀಡುವ ಮೂಲಕ ನಾಡಿನ ಸಂಸ್ಕೃತಿಯ ಪರಿಚಯದೊಂದಿಗೆ ಮಕ್ಕಳಲ್ಲಿ ಭಾಷಾ ಪ್ರೌಢಿಮೆ ವರ್ಧನೆ ಜೊತೆಗೆ ಕಲಿಕಾ ಸಾಮರ್ಥ್ಯವನ್ನು ಹೆಚ್ಚಳಗೊಳ್ಳಲು ತನ್ನ ಅನುಪಮ ಸೇವೆ ನೀಡಿದೆ. ಶಾಲಾ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರ ಕಾಳಜಿ, ವಿದ್ಯಾರ್ಥಿಗಳ ಆಸಕ್ತಿ ಮತ್ತು ಪೋಷಕರು ಹಾಗೂ ಊರಿನವರು ಬೆಂಬಲದಿಂದಾಗಿ ಸಂಸ್ಥೆಯು ಬಹಳ ವ್ಯವಸ್ಥಿತವಾಗಿ ಕಾರ್ಯಕ್ರಮ ಜೋಡಣೆ ಮಾಡುವುದರ ಮೂಲಕ ಇಡೀ ಶಿಕ್ಷಣ ವ್ಯವಸ್ಥೆಗೆ ಹಾಗೂ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪ್ರೇರಕ ಶಕ್ತಿಯಾಗಿದೆ ಎಂದರು.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು ವಿನೂತನ ಕಾರ್ಯಕ್ರಮ ಸರಣಿಯಡಿ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ ಉಳಿಸಿ ಬೆಳೆಸುವಲ್ಲಿ ವಿಶೇಷ ಪ್ರಯತ್ನ ಸತತ 120ನೇ ತಿಂಗಳ ಕಾರ್ಯಕ್ರಮ ಇತ್ತೀಚೆಗೆ ಜರುಗಿತು. ನಿವೃತ್ತ ಅಧ್ಯಾಪಕ ಸದಾಶಿವ ಐತಾಳ್, ನಿವೃತ್ತ ಪ್ರಾಧ್ಯಾಪಕ ಎಮ್. ರತ್ನಾಕರ ಪೈ, ಶಂಕರ ನಾಗಪ್ಪ ಬಿಲ್ಲವ, ಭಾಗವತ ಸುಬ್ರಹ್ಮಣ್ಯ ನಾವುಡ, ಶಿಕ್ಷಕಿ ಸೌಜನ್ಯ ಹಾಗೂ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯ ಅರ್ಥಧಾರಿ ಹೆಚ್. ಶಂಕರ ನಾಗಪ್ಪ ಬಿಲ್ಲವ, ಹೆಮ್ಮಾಡಿ ಹಾಗೂ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉಪ್ಪಿನಕುದ್ರು ಸರಕಾರಿ ಪ್ರೌಢ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದ ಚಂದನ್ ಅವರನ್ನು ಅಕಾಡೆಮಿಯ ವತಿಯಿಂದ ಸಮ್ಮಾನಿಸಲಾಯಿತು. ಕೊನೆಗೆ ಶಂಕರ ನಾಗಪ್ಪ ಬಿಲ್ಲವರಿಂದ ಯಕ್ಷಗಾನ, ಜಾನಪದ ಏಕಪಾತ್ರಾಭಿನಯ ನಡೆಯಿತು.ಪಾರ್ವತಿಯವರಿಂದ ನಡೆದ ಸಂಗೀತ ಮನಸ್ಸಿಗೆ ಮುದ ನೀಡಿತು. ದೇವಕಿ ಸುರೇಶ್ ಪ್ರಭು ಪ್ರಾರ್ಥಿಸಿದರು. ನಿವೃತ್ತ ಶಿಕ್ಷಕ ಉದಯ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ದೋಹಾ: ಕತಾರ್‌ನ ಯುಡಿಎಸ್‌ಟಿ ಕ್ರಿಕೆಟ್ ಮೈದಾನದಲ್ಲಿ (UDST Cricket Ground) ಹನ್ನೆರಡನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು (IDY 2026) ಅತ್ಯಂತ ಉತ್ಸಾಹ ಮತ್ತು ಭವ್ಯತೆಯಿಂದ ಆಚರಿಸಲಾಯಿತು. ಕತಾರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತನ್ನ ಪ್ರಮುಖ ಸಂಘಟನೆಗಳಾದ ಇಂಡಿಯನ್ ಸ್ಪೋರ್ಟ್ಸ್ ಸೆಂಟರ್ (ISC), ಇಂಡಿಯನ್ ಕಲ್ಚರಲ್ ಸೆಂಟರ್ (ICC), ಇಂಡಿಯನ್ ಕಮ್ಯುನಿಟಿ ಬೆನೆವೊಲೆಂಟ್ ಫೋರಮ್ (ICBF), ಮತ್ತು ಇಂಡಿಯನ್ ಬ್ಯುಸಿನೆಸ್ ಆಂಡ್ ಪ್ರೊಫೆಷನಲ್ಸ್ ಕೌನ್ಸಿಲ್ (IBPC) ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಈ ಬೃಹತ್ ಕಾರ್ಯಕ್ರಮದಲ್ಲಿ ವಿವಿಧ ಪ್ರವಾಸಿ ಸಮುದಾಯಗಳ ಸಾವಿರಾರು ಯೋಗಾಸಕ್ತರು ಭಾಗವಹಿಸಿದ್ದರು. “ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ” ಎಂಬ ಜಾಗತಿಕ ಧ್ಯೇಯವಾಕ್ಯದೊಂದಿಗೆ ನಡೆದ ಈ ಐತಿಹಾಸಿಕ ಕಾರ್ಯಕ್ರಮವು ದೀರ್ಘಾಯುಷ್ಯ, ಚೈತನ್ಯ ಮತ್ತು ಒಟ್ಟಾರೆ ಆರೋಗ್ಯವನ್ನು ವೃದ್ಧಿಸುವಲ್ಲಿ ಯೋಗದ ಪಾತ್ರವನ್ನು ಯಶಸ್ವಿಯಾಗಿ ಎತ್ತಿ ತೋರಿಸಿತು. ಜಾಗತಿಕ ರಾಜತಾಂತ್ರಿಕರು ಮತ್ತು ಕತಾರಿ ಗಣ್ಯರ ಉಪಸ್ಥಿತಿ:ಭಾರತದ ರಾಯಭಾರಿಯಾದ ಗೌರವಾನ್ವಿತ ವಿಪುಲ್ ಅವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಶೋಭೆ ತಂದರು. ಈ ಆಚರಣೆಯಲ್ಲಿ ವಿವಿಧ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಜಿಲ್ಲೆಯ ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಗಳ ವಿಶ್ವಾಸವನ್ನು ಹೆಚ್ಚಿಸುವ ಕೆಲಸ ಇಲಾಖೆಗಳು ಮಾಡಬೇಕು. ಇವುಗಳ ಜೊತೆಗೆ ಬ್ಯಾಂಕುಗಳು ಆರ್ಥಿಕ ನೆರವನ್ನು ನೀಡುವುದರೊಂದಿಗೆ ಉದ್ಯಮವು ಹೆಚ್ಚು ಅಭಿವೃದ್ಧಿ ಹೊಂದಿ, ಹೆಚ್ಚಿನ ಉದ್ಯೋಗಗಳು ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.  ಅವರು ಸೋಮವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ 15,000 ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಹೆಚ್ಚಿನದಾಗಿ ಗೋಡಂಬಿ ಸಂಸ್ಕರಣಾ ಘಟಕಗಳು, ಮೆರಿನ್ ಪ್ರೋಡಕ್ಟ್, ಸಿದ್ಧ ಆಹಾರ ಘಟಕಗಳು, ಸೇರಿದಂತೆ ಮತ್ತಿತರ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳ ಇನ್‌ಫ್ರಾಸ್ಟçಕ್ಟರ್ ಸೇರಿದಂತೆ ಕಾರ್ಯನಿರತ ಬಂಡವಾಳಗಳ ಅವಶ್ಯಕತೆ ಇದ್ದಲ್ಲಿ ಅವರುಗಳಿಗೆ ಬ್ಯಾಂಕುಗಳು ಆರ್ಥಿಕ ನೆರವನ್ನು ನೀಡಬೇಕು. ಮಾಲೀಕರು ಆರ್ಥಿಕ ನೆರವನ್ನು ಪಡೆಯಲು ಎಂ.ಎಸ್.ಎಂ.ಇ ನಲ್ಲಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಕಾರ್ಕಳ ಕರಾವಳಿ ರಂಗಾಯಣವು ತಾನು ಸಿದ್ದಪಡಿಸುವ ನಾಟಕಗಳು ಹಾಗೂ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು 3 ಜನ ತಂತ್ರಜ್ಞರು (ಸಂಗೀತ/ಧ್ವನಿ ಸಂಯೋಜಕರು-1, ಬೆಳಕಿನ ವಿನ್ಯಾಸ-1, ರಂಗಸಜ್ಜಿಕೆ-ಪರಿಕರ-1) ಹಾಗೂ 12 ಮಂದಿ ಕಲಾವಿದರ ಆಯ್ಕೆಗಾಗಿ, ರಂಗಭೂಮಿಯಲ್ಲಿ ಅನುಭವವಿರುವ ಆಸಕ್ತ ಕಲಾವಿದರು ಮತ್ತು ತಂತ್ರಜ್ಞರಿಂದ ಅರ್ಜಿ ಆಹ್ವಾನಿಸಲಾಗಿದೆ. ರಾಪ್ಟ್ರೀಯ ನಾಟಕ ಶಾಲೆಯ ಪದವಿ, ರಾಜ್ಯದ ಯಾವುದೇ ರಂಗಶಿಕ್ಷಣ ಕೇಂದ್ರದ ರಂಗಶಿಕ್ಷಣ ಪದವಿ, ಡಿಪ್ಲೋಮಾ, ರಾಜ್ಯ ಸರ್ಕಾರ ಅಂಗೀಕೃತ ವಿಶ್ವವಿದ್ಯಾಲಯದಿಂದ ನಾಟಕ ವಿಭಾಗದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದವರಿಗೆ ಹಾಗೂ ಆಯಾ ತಾಂತ್ರಿಕ ವಿಷಯಗಳಲ್ಲಿ (ಸಂಗೀತ, ಧ್ವನಿ-ಬೆಳಕು, ರಂಗಸಜ್ಜಿಕೆ-ಪರಿಕರ) ಪರಿಣತಿ ಪಡೆದವರಿಗೆ ಆದ್ಯತೆ ನೀಡಲಾಗುವುದು. ರಂಗಭೂಮಿ ಅನುಭವ ಅಪೇಕ್ಷಣೀಯ. ಆಸಕ್ತ ಕಲಾವಿದರು ಹಾಗೂ ತಂತ್ರಜ್ಞರನ್ನು ನಿಯಮಾನುಸಾರ ತಾತ್ಕಾಲಿಕವಾಗಿ ಆಯ್ಕೆ ಮಾಡಿಕೊಳ್ಳಲಾಗುವುದು ಕಲಾವಿದರಿಗೆ ವಯಸ್ಸಿನ ಮಿತಿ 18 ರಿಂದ 32 ವರ್ಷ. ತಂತ್ರಜ್ಞರಿಗೆ ವಯಸ್ಸಿನ ಮಿತಿ ಇರುವುದಿಲ್ಲ. ಆಯ್ಕೆಯಾದ ಕಲಾವಿದರು ರಂಗಾಯಣದ ನಿಯಮ ಮತ್ತು ಷರತ್ತುಗಳಿಗೆ ಬದ್ಧರಾಗಿರಬೇಕು. ತಂತ್ರಜ್ಞರಿಗೆ ರೂ.25,000, ಮೊದಲ…

Read More