Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ವಿದ್ಯಾರ್ಥಿ ಜೀವನವು ವ್ಯಕ್ತಿತ್ವ ನಿರ್ಮಾಣದ ಅತ್ಯಂತ ಪ್ರಮುಖ ಹಂತವಾಗಿದ್ದು, ಈ ಅವಧಿಯಲ್ಲಿ ಬೆಳೆಸಿಕೊಳ್ಳುವ ಶಿಸ್ತು, ನೈತಿಕ ಮೌಲ್ಯಗಳು, ಮಾನವೀಯ ಗುಣಗಳು ಹಾಗೂ ಸ್ಪಷ್ಟ ಗುರಿಗಳು ಭವಿಷ್ಯದ ಬದುಕಿಗೆ ಭದ್ರ ಬುನಾದಿಯಾಗುತ್ತವೆ ಎಂದು ಖ್ಯಾತ ಯಕ್ಷಗಾನ ಅರ್ಥದಾರಿಗಳು ಹಾಗೂ ವಿದ್ವಾಂಸರಾದ ಪವನ ಕಿರಣಕೆರೆ ನುಡಿದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಶಿವರಾಮ ಕಾರಂತ ವೇದಿಕೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್), ರೆಡ್‌ಕ್ರಾಸ್ ಹಾಗೂ ರೇಂಜರ್ಸ್ ಮತ್ತು ರೋವರ್ಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ “ವಿದ್ಯಾರ್ಥಿ ಜೀವನ ಹಾಗೂ ನೈತಿಕತೆ” ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿ ಜೀವನವು ಭವಿಷ್ಯದ ಬದುಕನ್ನು ರೂಪಿಸಿಕೊಳ್ಳುವ ಸುಂದರ ಅವಕಾಶವಾಗಿದೆ. ಜ್ಞಾನಾರ್ಜನೆಯ ಜೊತೆಗೆ ನೈತಿಕತೆ, ಮಾನವೀಯತೆ, ಶಿಸ್ತು ಹಾಗೂ ಜವಾಬ್ದಾರಿಯಂತಹ ಗುಣಗಳನ್ನು ಬೆಳೆಸಿಕೊಳ್ಳುವುದು ಅಗತ್ಯ. ಕಲಿಕೆಯ ಪ್ರಕ್ರಿಯೆ ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗಿರದೆ, ಜೀವನಾನುಭವಗಳ ಮೂಲಕವೂ ನಡೆಯುತ್ತದೆ. ಜೀವನದಲ್ಲಿ ಎದುರಾಗುವ ಅನುಭವಗಳು ವ್ಯಕ್ತಿಯ ಚಿಂತನೆ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹಾಗೂ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿಗೆ ರೋಟರಿ ಕ್ಲಬ್ ಕುಂದಾಪುರ ಮತ್ತು ಪಾರ್ವತಿ ಶೆಟ್ಟಿ ಮತ್ತು ಆನಗಳ್ಳಿ ಮಹಾಲಿಂಗ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ನೀಡಲಾಯಿತು. ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ, ಪಾರ್ವತಿ ಮತ್ತು ಆನಗಳ್ಳಿ ಮಹಾಲಿಂಗ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿ ವಿಶ್ವನಾಥ್ ಶೆಟ್ಟಿ, ಕುಂದಾಪುರದ ಖ್ಯಾತ ವಕೀಲ ಟಿ.ಬಿ. ಶೆಟ್ಟಿ, ರೋಟರಿ ಕ್ಲಬ್ ಕುಂದಾಪುರದ ಉಪಾಧ್ಯಕ್ಷ ಮನೋಜ್‌ ನಾಯರ್, ಕಾರ್ಯದರ್ಶಿ ಅಶೋಕ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ವೆಂಕಟೇಶ್‌ ನಾವುಂದ, ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ಮುತ್ತಯ್ಯ ಶೆಟ್ಟಿ, ಉಪ-ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಕ್ಷಿತ್‌ ರಾವ್‌ ಗುಜ್ಜಾಡಿ‌, ಮತ್ತಿತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಕುಂಭಾಶಿ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರಕ್ಕೆ ಕರ್ನಾಟಕ ರಾಜ್ಯ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಹಿರಿಯ ಆಗಮ ಪಂಡಿತರಾದ ಜಿ.ಎ. ವಿಜಯಕುಮಾರ್ ಅವರು ಭೇಟಿ ನೀಡಿದರು. ಹಿರಿಯ ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಅವರು ಆಗಮಪಂಡಿತರಾದ ಜಿ.ಎ. ವಿಜಯಕುಮಾರ್ ಅವರನ್ನು ಗೌರವಿಸಿದರು. ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಮಾಜಿ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತ್, ರಥಶಿಲ್ಪಿ ರಾಜಗೋಪಾಲ ಆಚಾರ್ಯ ಕೋಟೇಶ್ವರ, ಉದ್ಯಮಿ ಜಗದೀಶ್ ಮೊಗವೀರ ಮಾರ್ಕೋಡು, ರಥಶಿಲ್ಪಿ ಗಣಪತಿ ಆಚಾರ್ಯ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಸೌದಿ ಅರೇಬಿಯಾದ ದಮ್ಮಾಮ್‌ನಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯಕೂಟ ಇತ್ತೀಚಿಗೆ ನಡೆದಿದ್ದು, “ಕುಂದಾಪುರ ಫೈಟರ್ಸ್” ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರು. ಕುಂದಾಪುರದ ಮನ್ಸೂರ್ ಅವರ ಮಾಲಿಕತ್ವದ “ಕುಂದಾಪುರ ಫೈಟರ್ಸ್” ತಂಡವು ಇದರ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರು. 3 ದಿನಗಳ ಈ ಪಂದ್ಯಕೂಟದಲ್ಲಿ ಒಟ್ಟಾರೆ 20 ತಂಡಗಳು ಭಾಗವಹಿಸಿದ್ದರು. ಪಂದ್ಯಾಕೂಟದಲ್ಲಿ ಭಾರತದಿಂದ ಸಹ ಹೆಸರಾಂತ ಆಟಗಾರನ್ನು ಕರೆಸಲಾಯಿತು. ಅದರಂತೆ ಕುಂದಾಪುರ ಫೈಟರ್ಸ್ ತಂಡದಲ್ಲಿ ಕ್ರೀಡಾಳುವಾಗಿ ಕರಾವಳಿಯ 4 ಸ್ಟಾರ್ ಆಟಗಾರರಾದ ರಾಜ ಸಾಲಿಗ್ರಾಮ, ಇಮ್ರಾನ್ ಕೋಟೇಶ್ವರ, ಸಾಗರ್ ಭಂಡಾರಿ ಹಾಗೂ ಸಂಪತ್ ಶೆಟ್ಟಿ ಸುರತ್ಕಲ್ ಅವರು ಸಹ ತೆರಳಿದ್ದರು. ಬಿಹಾರದ ಬಾಹುಬಲಿ ಖ್ಯಾತಿಯ ಸರ್ಫರಾಜ್ ಹಾಗೂ ಬಿಹಾರದ ಇನ್ನೊಬ್ಬ ಫೇಮಸ್ ಆಟಗಾರ ಕಾಶಿಮ್ ಬಾಬು ಸಹ ಕುಂದಾಪುರ ತಂಡವನ್ನು ಪ್ರತಿನಿಧಿಸಿದ್ದರು. ಮೊದಲ ಪಂದ್ಯ ಸೋತ ಕುಂದಾಪುರ ತಂಡವು ಅಭಿಮಾನಿಗಳಿಗೆ ಬಹಳಷ್ಟು ನಿರಾಸೆ ಮೂಡಿಸಿತ್ತು, ಅದಾದ ನಂತರದ ಎಲ್ಲಾ ಪಂದ್ಯವನ್ನು ಗೆದ್ದು ಚಾಂಪಿಯನ್ ಪಟ್ಟ ಸ್ವೀಕರಿಸಿತು. ಸೆಮಿ ಫೈನಲ್ ಪಂದ್ಯದಲ್ಲಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಕಾರೊಂದು ಬೈಕಿಗೆ ಢಿಕ್ಕಿ ಹೊಡೆದ ಸಹಸವಾರೊಬ್ಬರು ಮೃತಪಟ್ಟ ಘಟನೆ ಹಾದರ್ಳ್ಳಿ ಮಂಡಳ್ಳಿ ಗ್ರಾಮದ ಜನ್ನಾಡಿ ಮೂರುಕೈ ಬಳಿ ಕೋಟೇಶ್ವರ ಹಾಲಾಡಿ ಮುಖ್ಯ ರಾಜ್ಯ ರಸ್ತೆಯಲ್ಲಿ ನಡೆದಿದೆ. ಮೃತರನ್ನು ಬೈಕ್‌ ಹಿಂಬದಿ ಸವಾರ ರಂಗ ಎಂದು ಗುರುತಿಸಲಾಗಿದೆ. ಸವಾರ ರಾಮ ಮಡಿವಾಳ ತೀವ್ರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಟೇಶ್ವರ ಕಡೆಯಿಂದ ಹಾಲಾಡಿ ಕಡೆಗೆ ಹೋಗುತ್ತಿದ್ದ ಅತೀವೇಗ ಹಾಗೂ ಅಜಾಗರೂಕೆತಯಿಂದ ಚಲಾಯಿಸಿ ಕೊಂಡು ಬಂದು ಹಾಲಾಡಿ ಕಡೆಯಿಂದ ಕೋಟೇಶ್ವರ ಕಡೆಗೆ ಬರುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆದಿದೆ. ಇದರಿಂದ ಸವಾರ ರಾಮ ಮಡಿವಾಳ ಹಾಗೂ ಹಿಂಬದಿ ಸವಾರ ರಂಗ ಬೈಕ್ ಸಮೇತ ರಸ್ತೆಗೆ ಬಿದ್ದರು. ಇದರ ಪರಿಣಾಮ ಗಂಭೀರವಾಗಿ ಗಾಯಗೊಂಡ ರಂಗ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟರು. ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಬೈಂದೂರು ತಾಲೂಕು ಕಾನೂನು ಸೇವೆಗಳ ಸಮಿತಿಯಲ್ಲಿ ಅರೆಕಾಲಿಕ ಕಾನೂನು ಸ್ವಯಂ ಸೇವಕರ ಹುದ್ದೆಯ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸೇವಾ ಮನೋಭಾವನೆಯಿಂದ ಹಾಗೂ ಕಾನೂನು ಸಲಹಾ ಕೇಂದ್ರ ಮತ್ತು ಸಾಮಾನ್ಯ ಜನರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಲು ಇಚ್ಛಿಸುವ ಆಸಕ್ತರು ಸೆಪ್ಟಂಬರ್ 30 ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ನ್ಯಾಯಾಲಯ, ಉಡುಪಿ ಇದರ ವೆಬ್‌ಸೈಟ್ ಅಥವಾ ಸಮೀಪದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ತಾಲೂಕು ಕಾನೂನು ಸೇವಾ ಸಮಿತಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಬೈಂದೂರು ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ನಿರ್ದೇಶನದ ಮೇರೆಗೆ ಸೆಪ್ಟಂಬರ್ 19 ರಂದು ಜಿಲ್ಲೆಯ ಉಡುಪಿ, ಕುಂದಾಪುರ, ಕಾರ್ಕಳ ಹಾಗೂ ಬೈಂದೂರಿನ ವಿವಿಧ ನ್ಯಾಯಾಲಯಗಳಲ್ಲಿ ನಡೆದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಒಂದೇ ದಿನ ರಾಜೀಯಾಗಬಲ್ಲ ಚೆಕ್ಕು ಅಮಾನ್ಯ – 261 ಪ್ರಕರಣ, ಬ್ಯಾಂಕ್/ಹಣ ವಸೂಲಾತಿ – 79 ಪ್ರಕರಣ,  ವೈವಾಹಿಕ 2 ಪ್ರಕರಣಗಳು, ಇತರೇ ಸಿವಿಲ್ 3190 ಪ್ರಕರಣಗಳು, ಎಂ.ಎ.ಸಿ.ಟಿ 47 ಪ್ರಕರಣ, ಕಾರ್ಮಿಕ ವಿವಾದ 1 ಪ್ರಕರಣ, ಹಣಕಾಸು ಸಂಬAಧಿತ 3 ಪ್ರಕರಣ, ಇತರೇ ಕ್ರಿಮಿನಲ್ 12 ಪ್ರಕರಣ ಹಾಗೂ ವ್ಯಾಜ್ಯ ಪೂರ್ವ 57,772 ಪ್ರಕರಣಗಳು ಸೇರಿದಂತೆ ಒಟ್ಟು 61,367 ಪ್ರಕರಣಗಳನ್ನು ರಾಜೀ ಮುಖಾಂತರ ಇತ್ಯರ್ಥಪಡಿಸಿ ರೂ.14,45,52,485 ಪರಿಹಾರದ ಮೊತ್ತವನ್ನು ಘೋಷಿಸಲಾಯಿತು. ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಉಡುಪಿ, ಕುಂದಾಪುರ, ಕಾರ್ಕಳ, ಬೈಂದೂರು ಹಾಗೂ ಬ್ರಹ್ಮಾವರ, ಅಭಿಯೋಜನ ಇಲಾಖೆ,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇಂದಿನ ಸ್ಪರ್ಧಾತ್ಮಕ ಶಿಕ್ಷಣ ರಂಗದಲ್ಲಿ ಶಿಕ್ಷಕರ ಎದುರು ಹಲವಾರು ಸವಾಲುಗಳಿವೆ. ಆ ಸವಾಲುಗಳನ್ನು ಎದುರಿಸಲು ನಮ್ಮ ನಮ್ಮ ಶಿಕ್ಷಕರು ಸಮರ್ಥರಾಗಿದ್ದರೂ ಕೂಡ, ಸವಾಲಿನ ಒಳಮಿಡಿತಗಳನ್ನು ಅರ್ಥಮಾಡಿಕೊಂಡು ಆ ದಿಸೆಯಲ್ಲಿ ಸಾಗಿ ಮತ್ತು ಅವುಗಳನ್ನು ಯಶಸ್ವಿಯಾಗಿ ಎದುರಿಸಿ ಶೈಕ್ಷಣಿಕ ರಂಗವನ್ನು ಬಲಪಡಿಸಬೇಕು. ಜೊತೆಗೆ ಹೊಸ ಹೊಸ ಶೈಕ್ಷಣಿಕ ಸಾಧ್ಯತೆಗಳ ಬಗ್ಗೆ ತೆರೆದುಕೊಳ್ಳುತ್ತಾ ಸಾಗಬೇಕಾದ ಅನಿವಾರ್ಯತೆ ಇದೆ ಎಂದು ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಾದ ಲೋಕೇಶ್ ಸಿ. ತಿಳಿಸಿದರು. ಅವರು ಶನಿವಾರ ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಉಡುಪಿ ಹಾಜಿ ಅಬ್ದುಲ್ಲಾ ಸಾಹೇಬ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್, ಸಂದೀಪ್ ಶೆಟ್ಟಿ ಸಾರಥ್ಯದ ಏಸ್‌ಕ್ರೀಟ್ ಅಡೇಷನ್ಸ್ ಇಂಡಿಯಾ ಪ್ರೈ.ಲಿ, ಉಸಿರು ಕೋಟ ಅವರ ಆಶ್ರಯದಲ್ಲಿ ನಡೆದ ೫ನೆಯ ವರ್ಷದ ಡಾ| ಶಿವರಾಮ ಕಾರಂತ ಶಿಕ್ಷಕ ಪುರಸ್ಕಾರ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಶಿಕ್ಷಣ ರಂಗದ ಸೂಕ್ಷ್ಮ ಒಳತೋಟಿಗಳನ್ನು ಅರಿತು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ನವೆಂಬರ್ 1ರ ರಾಜ್ಯೋತ್ಸವ ಯಕ್ಷಗಾನ ತಾಳಮದ್ದಳೆ ಹಾಗೂ ‘ಡಾ.ಎಚ್. ಶಾಂತರಾಮ್ ಯಕ್ಷಗಾನ ಪುರಸ್ಕಾರ’ ಕಾರ್ಯಕ್ರಮದ ಕುರಿತ ಆಯ್ಕೆ ಸಮಿತಿಯ ಪೂರ್ವಭಾವಿ ಸಭೆಯು ಡಾ.ಎಚ್. ಶಾಂತರಾಮ್ ಅವರ ಸ್ವಗೃಹದಲ್ಲಿ  ನಡೆಯಿತು. ಯಕ್ಷಗಾನ ಪುರಸ್ಕಾರಕ್ಕೆ ಬಡಗು ತಿಟ್ಟಿನ ಖ್ಯಾತ ಹಾಸ್ಯಗಾರರಾದ ಮಹಾಬಲೇಶ್ವರ ಭಟ್, ಕ್ಯಾದಗಿ ಅವರನ್ನು ಆಯ್ಕೆ ಮಾಡಲಾಯಿತು. ಶ್ರೀರಂಗ ತುಲಾಭಾರ ಪ್ರಸಂಗದ ತಾಳಮದ್ದಲೆ ಮಾಡಲು ನಿರ್ಧರಿಸಲಾಯಿತು. ಹಿಮ್ಮೇಳದ ಭಾಗವತರಾಗಿ ಚಂದ್ರಕಾಂತ, ಮೂಡುಬೆಳ್ಳೆ, ಮದ್ದಲೆಯಲ್ಲಿ  ಎನ್.ಜಿ ಹೆಗಡೆ,ಯಲ್ಲಾಪುರ, ಚಂಡೆಯಲ್ಲಿ ರಾಮಕೃಷ್ಣ,ಮಂದಾರ್ತಿ. ಅರ್ಥಧಾರಿಗಳಾಗಿ  ರಾಧಾಕೃಷ್ಣ,ಕಲ್ಚಾರ್, ಪವನ್,ಕಿರಣಕೆರೆ, ಹರೀಶ್, ಬಲಂತಿಮೊಗರು, ಸುಜಯೇಂದ್ರ ಹಂದೆ ಕೋಟ, ಸ್ಫೂರ್ತಿ ಶಾನುಭಾಗ್, ಮಂದಾರ್ತಿ ಇವರುಗಳನ್ನು ಆಯ್ಕೆ ಮಾಡಲಾಯಿತು. ಪೂರ್ವಭಾವಿ ಸಭೆಯಲ್ಲಿ  ಡಾ.ಎಚ್. ಶಾಂತರಾಮ್, ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷ ಕೆ. ಶಾಂತರಾಮ್ ಪ್ರಭು,  ರಾಜ್ಯೋತ್ಸವ ಯಕ್ಷಗಾನ ತಾಳಮದ್ದಳೆ ಪುರಸ್ಕಾರ ಸಮಿತಿಯ ಸದಸ್ಯರಾದ ಕಿಶನ್ ಹೆಗ್ಡೆ, ಪಳ್ಳಿ,  ಮುರಳಿ, ಕಡೆಕಾರ್, ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಮತ್ತು ಕಾಲೇಜಿನ ಲಲಿತ ಕಲಾ ಸಂಘದ ಸಂಚಾಲಕರಾದ ಶಶಾಂಕ್ ಪಟೇಲ್, ಕೆಳಮನೆ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಹುಟ್ಟಿನಿಂದಲೇ ಸೆರೆಬ್ರಲ್ ಪಾಲ್ಸಿ ಸಮಸ್ಯೆಯಿಂದ ಬಳಲುತ್ತಿರುವ ತೆಕ್ಕಟ್ಟೆ ಕೊಮೆ ನಿವಾಸಿ ಹದಿನಾಲ್ಕು ವರ್ಷ ಪ್ರಾಯದ ಬಾಲಕನೋರ್ವನಿಗೆ ರೋಟರಿ ಕ್ಲಬ್ ಕೋಟ ಬ್ರಿಗೇಡ್ ವತಿಯಿಂದ ವ್ಹೀಲ್‌ಚೇರ್‌ ಮತ್ತು ಆರ್ಥಿಕ ನೆರವನ್ನು ಭಾನುವಾರ ನೀಡಲಾಯಿತು. ಅಲ್ಲದೇ ಬಾಲಕನ ಸಹೋದರಿಯ ಪಿ.ಯು.ಸಿ.ವರೆಗಿನ ವಿದ್ಯಾಭ್ಯಾಸದ ಸಂಪೂರ್ಣ ಖರ್ಚು ವೆಚ್ಚವನ್ನು ಕ್ಲಬ್ ವತಿಯಿಂದ ಬರಿಸುವ ಬಗ್ಗೆ ಆಶ್ವಾಸನೆ ನೀಡಲಾಯಿತು. ಈ ಸಂದರ್ಭ ಮಾಜಿ ಸಹಾಯಕ ಗವರ್ನರ್ ಹಾಗೂ ಕ್ಲಬ್ ಸಲಹೆಗಾರ ಚಂದ್ರಶೇಖರ್ ಮೆಂಡನ್, ಅಧ್ಯಕ್ಷ ಪ್ರಕಾಶ್ ಪೂಜಾರಿ ಬನ್ನಾಡಿ, ಜೋನಲ್ ಲೆಫ್ಟಿನೆಂಟ್ ದಯಾನಂದ್ ಆಚಾರ್, ಚಾರ್ಟರ್ ಅಧ್ಯಕ್ಷ ಪ್ರಥ್ವಿನ್ ಸಿ. ಮೆಂಡನ್, ಮಾಜಿ ಅಧ್ಯಕ್ಷರಾದ ಡಾ. ಗಣೇಶ್ ಯು, ಸುರೇಶ್ ಆಚಾರ್,  ಪ್ರಕಾಶ್ ಹಂದಟ್ಟು, ಸದಸ್ಯರಾದ ಭಾಸ್ಕರ್ ಪೂಜಾರಿ, ರಾಘವೇಂದ್ರ ಪೂಜಾರಿ, ವಸಂತ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

Read More