ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ ಬೆಂಗಳೂರು ಬೈಂದೂರು ತಾಲೂಕು ಘಟಕ ಇದರ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯನ್ನು ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ಎಂಜಿ ರತ್ತೂಬಾಯಿ ಜನತಾ ಪ್ರೌಢಶಾಲೆಯಲ್ಲಿ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ಸಾಂಘಿಕ ಚಟುವಟಿಕೆಯಿಂದ ಸಮಸ್ಯೆಗಳ ಪರಿಹಾರ ಸುಲಭ ಸಾಧ್ಯ ಸಂಘಟನೆಯು ಉತ್ತಮ ಪತದಲ್ಲಿ ಸಾಗಲಿ ಎಂದು ಶುಭ ಹಾರೈಸಿದರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಮತ್ತು ಜಿಲ್ಲಾ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಉಡುಪಿ ಜಿಲ್ಲೆಯ ಅಧ್ಯಕ್ಷರಾದ ದಿನಕರ ಶೆಟ್ಟಿ, ಸಾಧಕ ಶಿಕ್ಷಕರನ್ನು ಸನ್ಮಾನಿಸಿ ಶಿಕ್ಷಕರನ್ನು ಗೌರವಿಸುವುದರ ಮೂಲಕ ಅವರ ಕಾರ್ಯಕ್ಕೆ ಉತ್ತೇಜಿಸಿದಂತಾಗುತ್ತದೆ ಸಂಘವು ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಿರಲಿ ಎಂದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಂದೂರು ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾದ ಶೇಖರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ನೌಕರರ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಸುಬ್ರಹ್ಮಣ್ಯ ಶೇರುಗಾರ್,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೈಂದೂರು ತಾಲೂಕು ಇದರ ಸರ್ವ ಸದಸ್ಯರ ಮಹಾಸಭೆ ರತ್ತೂಭಾಯಿ ಜನತಾ ಪ್ರೌಢಶಾಲೆಯಲ್ಲಿ ಜರುಗಿತು. ಈ ವೇಳೆ ಪ್ರಸಕ್ತ ವರ್ಷದಲ್ಲಿ ನಿವೃತ್ತರಾದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಶಿಕ್ಷಕರಾದ ಭಾಗಿರತಿ ಮೊಗೆರಾ, ಎಲಿಜಬೆತ್ ಸಿ ಕೆ, ರಾಮ ಶೆಟ್ಟಿ, ಗಣಪತಿ, ಕೆ. ಮಾಧವ, ಎಸ್ ವಿ ಭಟ್, ನಾರಾಯಣ ದೇವಾಡಿಗ, ವೆಂಕಟರಮಣ ಹೋಬಳಿದಾರ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕ ಸಂಘದ ಅಧ್ಯಕ್ಷರಾದ ಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಜುನಾಥ ಎಂಜಿ, ಉಡುಪಿ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ದಿನಕರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸಂಜೀವ ದೇವಾಡಿಗ ನಿಕಟ ಪೂರ್ವ ಅಧ್ಯಕ್ಷರಾದ ಸುಬ್ರಹ್ಮಣ್ಯ ಶೇರುಗಾರ್, ಬ್ರಹ್ಮಾವರ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ನಾಗೇಶ ನಾಯಕ್, ರತ್ತೂಬಾಯಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಆನಂದ ಮುದ್ದೋಡಿ, ಸಂಘದ ಪ್ರಧಾನ ಕಾರ್ಯದರ್ಶಿ ಗಣಪತಿ ಹೋಬಳಿದಾರ್ ಖಜಾಂಚಿ ಅಚ್ಚುತ ಬಿಲ್ಲವ ಉಪಸ್ಥಿತರಿದ್ದರು
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಮ್ಮ ಕುಂದಾಪ್ರ ಕನ್ನಡ ಬಳಗದ ವತಿಯಿಂದ ಕಾಲಿನ ಕ್ಯಾನ್ಸರ್ ನಿಂದ ಬಳಲುತಿದ್ದ ಪ್ರತಿಭಾವಂತ ವಿದ್ಯಾರ್ಥಿ ಸುಮಿತ್ ವೆಂಕಟರಮಣ ಮೊಗೇರ ತೆಂಗಿನಗುಂಡಿ ಅವರಿಗೆ 60 ಸಾವಿರ ರುಪಾಯಿ ಚೆಕ್ ಹಸ್ತಾಂತರಿಸಲಾಯಿತು. ಈ ಸಂಧರ್ಭದಲ್ಲಿ ನಮ್ಮ ಕುಂದಾಪ್ರ ಕನ್ನಡ ಬಳಗದ ಅಧ್ಯಕ್ಷ ಸಾದನ್ ದಾಸ್, ಸದಸ್ಯರಾದ ವಾಸುದೇವ ದೇವಾಡಿಗ, ರತನ್ ನಾವುಂದ, ಅರುಣ್ ಕುಮಾರ್ ಶಿರೂರು ಹಾಗೂ ವಿದ್ಯಾರ್ಥಿಯ ಪೋಷಕರು ಹಾಜರಿದ್ದರು
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಜೆಸಿಐ ಉಪ್ಪುಂದದ 19 ನೇ ವರ್ಷದ ಪದಗ್ರಹಣ ಸಮಾರಂಭ ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಪ್ರದೀಪ್ ಶೆಟ್ಟಿ ಕಾರಿಕಟ್ಟೆ, ಕಾರ್ಯದರ್ಶಿಯಾಗಿ ಪುರಂದರ್ ಉಪ್ಪುಂದ, ಲೇಡಿ ಅಧ್ಯಕ್ಷರಾಗಿ ರೇಖಾ, ಜ್ಯೂನಿಯರ್ ಜೇಸಿ ಅಧ್ಯಕ್ಷರಾಗಿ ನಿಷಾ ಶೆಟ್ಟಿ ಮತ್ತು ಅವರ ತಂಡಗಳು ಪದಗ್ರಹಣ ಸ್ವೀಕರಿಸಿದರು. ಮುಖ್ಯ ಅತಿಥಿಗಳಾಗಿ ಜೆಸಿಐ ಭಾರತದ ಪೂರ್ವ ರಾಷ್ಟ್ರೀಯ ಕಾನೂನು ಸಲಹೆಗಾರರಾದ ಶ್ರೀಧರ್ ಪಿ ಎಸ್., ಜನ ಸೇವಾ ಟ್ರಸ್ಟ್ ಪ್ರವರ್ತಕರಾದ ವಸಂತ ಗಿಳಿಯಾರ್, ರೆಡ್ ಕ್ರಾಸ್ ಸೊಸೈಟಿಯ ಅಧ್ಯಕ್ಷರಾದ ಜಯಕರ ಶೆಟ್ಟಿ ಉಪಸ್ಥಿತರಿದ್ದರು. ಈ ವೇಳೆ ಇಬ್ಬರು ಫಲಾನುಭವಿಗಳಿಗೆ ಶ್ರವಣ ಸಾಧನ ಹಾಗೂ ವ್ಹೀಲ್ ಚೇರ್ ಹಸ್ತಾಂತರಿಸಲಾಯಿತು. ಸಭೆಯ ಪೂರ್ವಾರ್ಧದ ಅಧ್ಯಕ್ಷತೆ ವಹಿಸಿದ್ದ ನಾಗರಾಜ್ ಪೂಜಾರಿ ವರದಿ ವಾಚಿಸಿ, ದಿನದರ್ಶಿಕೆ ಬಿಡುಗಡೆಗೊಳಿಸಿ ಎಲ್ಲಾ ಸದಸ್ಯರಿಗೆ ನೆನಪಿನ ಕಾಣಿಕೆ ನೀಡಿದರು. ನೂತನ ಅಧ್ಯಕ್ಷರು ರೆಡ್ ಕ್ರಾಸ್ ಸೊಸೈಟಿಯ ಸಹಯೋಗದೊಂದಿಗೆ ಅತ್ಯಾಧುನಿಕ ಶ್ರವಣ ಸಾಧನ ಮತ್ತು ವೀಲ್ ಚೇರನ್ನು ವಿಶೇಷ ಚೇತನರಿಗೆ ವಿತರಿಸಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಕನ್ನಡ ಭಾಷೆಯ ಬಗ್ಗೆ ಹೊರಗಿನವರಿಗೆ ಕುತೂಹಲ ಇತ್ತು. ಆದರೆ ಮಹತ್ವ ನೀಡುತ್ತಿರಲಿಲ್ಲ. ಅರ್ಥ ಮಾಡಿಕೊಳ್ಳುವ ಪ್ರಯತ್ನವೂ ಮಾಡಿಕೊಳ್ಳುತ್ತಿರಲಿಲ್ಲ. ಆದರೆ ರವಿ ಬಸ್ರೂರು ಎಂಬ ಯುವಕ ತನ್ನ ಕುಂದಾಪ್ರ ಕನ್ನಡಕ್ಕೆ ಮಹತ್ವ ಕೊಟ್ಟು ಹಾಡು, ಚಲನಚಿತ್ರ ನಿರ್ಮಾಣ ಮಾಡುವುದರೊಂದಿಗೆ ಕುಂದಾಪ್ರ ಕನ್ನಡ ಭಾಷೆಗೆ ಈ ಮಣ್ಣಿನ ಸಂಸ್ಕೃತಿಗೆ ಶೋಭೆ ತಂದುಕೊಟ್ಟಿರುವುದು ಖುಷಿಯ ಸಂಗತಿ ಎಂದು ಕರ್ನಾಟಕ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ಕುಂದಪ್ರಭ ಸಂಸ್ಥೆ ವತಿಯಿಂದ ನಡೆದ ಕೋ.ಮ. ಕಾರಂತ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ಕೋ.ಮ.ಕಾರಂತ ಪ್ರಶಸ್ತಿ ಸ್ವೀಕರಿಸಿದ ಅತಿ ಕಿರಿಯವರಾದ ರವಿ ಬಸ್ರೂರು ತಮ್ಮ ಜೀವನದಲ್ಲಿ ಇನ್ನಷ್ಟು ಸಾಧನೆಗಳ ಮೆಟ್ಟಲು ಏರುವಲ್ಲಿ ಈ ಪ್ರಶಸ್ತಿ ಪ್ರೇರಣೆ ನೀಡಲಿ. ಕೋ.ಮ. ಕಾರಂತರೆಂಬ ಶ್ರೇಷ್ಠ ಮಹನೀಯರ ಸ್ಮರಣೆ ಈ ಮೂಲಕ ಮಾಡಲು ಸಾಧ್ಯವಾಗಿರುವುದು ಸಂತೋಷದ ವಿಚಾರ…
ಸಂದರ್ಶನಕ್ಕೆ ಹೋಗೋದು ಅಂದರೆ ಸುಲಭವಲ್ಲ. ಅದಕ್ಕೆ ಪೂರ್ಣ ಪ್ರಮಾಣದ ತಯಾರಿ ನಡೆದಿರಬೇಕು. ಆದರೆ ಆ ಬಗ್ಗೆ ಅತಿಯಾದ ಆತ್ಮವಿಶ್ವಾಸ ಇದ್ದರೆ ಮಾತ್ರ ಒಳ್ಳೇದಲ್ಲ. ನನಗೆಲ್ಲಾ ಗೊತ್ತಿದೆ, ಏನೇ ಪ್ರಶ್ನೆಗೆ ಉತ್ತರ ನೀಡಬಹುದು ಎಂದು ವಿಶ್ವಾಸ ಇದ್ದರೆ ನೀವು ಎಡವಬಹುದು. ಇದರಿಂದ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ. ಸಂದರ್ಶನಕ್ಕೆ ಹೊರಡುವ ಸಮಯದಲ್ಲಿ ಹೇಗೆ ಸಂದರ್ಶನ ಎದುರಿಸುವುದು, ಹೇಗೆ ಪ್ರಶ್ನೆಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ಸರಿಯಾಗಿ ಉತ್ತರ ನೀಡುವುದು ಹೀಗೆ ಹಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇಷ್ಟು ಮಾತ್ರವಲ್ಲ ಅದಕ್ಕೂ ಮಿಗಿಲಾಗಿ ಇನ್ನಷ್ಟು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಸಂದರ್ಶನಕ್ಕೆ ತಡವಾಗಿ ಹೊರಡೋದು:ಸಂದರ್ಶನಕ್ಕೆ ಯಾವತ್ತೂ ತಡವಾಗಿ ಹೋಗಲೇಬೇಡಿ. ಅರ್ಧ ಗಂಟೆ ಮೊದಲೇ ಅಲ್ಲಿ ಇದ್ದರೆ ಉತ್ತಮ. ಸಮಯದ ಮಹತ್ವ ಕೂಡ ಇಂಟರ್ವ್ಯೂ ಸಮಯದಲ್ಲಿ ಮುಖ್ಯ ನಡವಳಿಕೆ:ಹೌದು ನೀವು ಮಾತನಾಡಲು ಬಳಕೆ ಮಾಡುವ ಪದಗಳು ಗೌರವಯುತವಾಗಿರಲಿ. ಕಠೋರವಾಗಿ ಅಥವಾ ಅತ್ಯಂತ ಸಲುಗೆಯಿಂದ ಮಾತನಾಡಬೇಡಿ. ಮೊಬೈಲ್ ಬಳಸಬೇಡಿ:ಇಂಟರ್ವ್ಯೂ ಭವಿಷ್ಯವನ್ನು ರೂಪಿಸುತ್ತದೆ. ಆದುದರಿಂದ ಇಂಟರ್ವ್ಯೂಗೆ ಹೋಗುವ ಮುನ್ನ ಮೊಬೈಲ್ ಸ್ವಿಚ್ಆಫ್ ಅಥವಾ ಸೈಲೆಂಟ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬೈಂದೂರು ತಾಲೂಕಿನಲ್ಲಿ ಖಾಯಂ ಆಗಿ ಆರಂಭಗೊಂಡ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ಉದ್ಘಾಟನಾ ಸಮಾರಂಭವು ಉಡುಪಿ ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ಮತ್ತು ಬೈಂದೂರು ವಕೀಲ ಸಂಘದ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜರುಗಿತು. ಬೈಂದೂರು ನೂತನ ನ್ಯಾಯಾಲಯವನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎಸ್. ಅಬ್ದುಲ್ ನಜೀರ್ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎಸ್. ಅಬ್ದುಲ್ ನಜೀರ್, ಪ್ರಸನ್ನ ಬಿ. ವರಾಲೆ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಗೌರವಾನ್ವಿತ ನ್ಯಾಯಮೂರ್ತಿ ಎಸ್. ಜ. ಪಂಡಿತ್, ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಪ್ರದೀಪ್ ಸಿಂಗ್ ಯೆರೂರ್, ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ವಿಶ್ವಜಿತ್ ಶೆಟ್ಟಿ, ನ್ಯಾಯಮೂರ್ತಿ ಸಿ.ಎಂ. ಜೋಶಿ, ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ವಿಲೇಖನಾಧಿಕಾರಿ ಮುರಳಿಧರ್ ಪೈ.ಬಿ. ಲೋಕೋಪಯೋಗಿ ಇಲಾಖೆ ಕೇಂದ್ರ ವಲಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಾಥ ಪಂಥದ ಸಂಪ್ರದಾಯದಂತೆ ಹಳಗೇರಿಯ ಜೋಗಿ ಸಮುದಾಯದಿಂದ ಪೂಜಿಸಲ್ಪಡುತ್ತಿರುವ ಅಪರೂಪದ ದೇಗುಲಗಳಲ್ಲಿ ತೆಂಕಬೆಟ್ಟು ಶ್ರೀ ಕಾಲಭೈರವ ದೇವಸ್ಥಾನವೂ ಒಂದಾಗಿದೆ. ದೇವಸ್ಥಾನ ನವೀಕರಣಗೊಳ್ಳುವುದರೊಂದಿಗೆ ದೈನಂದಿನ ಧಾರ್ಮಿಕ ವಿಧಿ ವಿಧಾನಗಳನ್ನು ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳುವುದು ಭಕ್ತವರ್ಗದ ಕರ್ತವ್ಯವಾಗಿದೆ ಎಂದು ಯಡಮೊಗೆಯ ಶ್ರೀ ಕ್ಷೇತ್ರ ಸಿದ್ಧಪೀಠ ಕೊಡಚಾದ್ರಿ ಹಲವರಿ ಮಠದ ಪೀಠಾಧ್ಯಕ್ಷರಾದ ಶ್ರೀ ಫೀರ್ ಯೋಗಿ ಜಗದೀಶನಾಥ್ಜೀ ಹೇಳಿದರು. ಯಡಮೋಗೆಯ ಶ್ರೀ ಕ್ಷೇತ್ರ ಸಿದ್ಧಪೀಠ ಕೊಡಚಾದ್ರಿ ಹಲವರಿ ಮಠದ ಆವರಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ತೆಂಕಬೆಟ್ಟುವಿನ ಶ್ರೀ ಕಾಲಭೈರವ ದೇವಸ್ಥಾನದಲ್ಲಿ ಜನವರಿ 26ರಿಂದ 30ರ ತನಕ ಜರುಗಲಿರುವ ‘ನವೀಕೃತ ಶಿಲಾದೇಗುಲ ಲೋಕಾರ್ಪಣೆ – ಪುನರ್ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವ’ ಮೊದಲಾದ ಧಾರ್ಮಿಕ – ಸಾಂಸ್ಕೃತಿಕ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಆಶೀರ್ವದಿಸಿದ ಸ್ವಾಮೀಜಿಯವರು, ಬಳಿಕ ಮಾತನಾಡಿ, ತೆಂಕಬೆಟ್ಟುವಿನ ದೇವಾಲಯ ನಿರ್ಮಾಣಕ್ಕೆ ಸಾಕಷ್ಟು ಶ್ರಮವಹಿಸಿರುವ ಬಗ್ಗೆ ತಿಳಿದಿದ್ದು, ದೇವಸ್ಥಾನ ಉತ್ತಮವಾಗಿ ನಿರ್ಮಾಣಗೊಂಡಿದೆ. ಶ್ರೀ ಕಾಲಭೈರವ ದೇವರ ಹಾಗೂ ಗುರೂಜಿಯ ಆಶೀರ್ವಾದ…
ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ ಮಿತ ಕುಂದಾಪುರ – ವಜ್ರಮಹೋತ್ಸವ ಮತ್ತು ಸಂಘದ ಸ್ಥಾಪಕರಾದ ಯಡ್ತರೆ ಮಂಜಯ್ಯ ಶೆಟ್ಟಿ ವಿಚಾರಗೋಷ್ಠಿ
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಡಿ.28: ಮೀನುಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮೀನುಗಾರರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣ ಪ್ರೋತ್ಸಾಹಿಸಲು ಹೊಸ ಶಿಷ್ಯ ವೇತನ ಯೋಜನೆಯನ್ನು ಮಾನ್ಯ ಮುಖ್ಯ ಮಂತ್ರಿಗಳು ಘೋಷಿಸಿದ್ದು, ಈ ಯೋಜನೆಯ ಸೌಲಭ್ಯ ಪಡೆಯಲು ಮೀನುಗಾರರ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ. 8, 9, 10, ಪಿ.ಯು.ಸಿ., ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಜಿಲ್ಲೆಯ ಮೀನುಗಾರರ ಸಹಕಾರಿ ಸಂಘದ ಸದಸ್ಯರು ಹಾಗೂ ಮೀನು ಕೃಷಿಕರ ಮಕ್ಕಳು ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರು ಅಥವಾ ಸಂಬಂಧಪಟ್ಟ ಮೀನುಗಾರರ ಸಹಕಾರಿ ಸಂಘಗಳಿಂದ ಮಾಹಿತಿ ಪಡೆದು, ಶೀಘ್ರವಾಗಿ ಪ್ರೂಟ್ಸ್ ಐಡಿಯನ್ನು ಸೃಜನೆ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
