ವಿಶ್ವ ರಕ್ತದಾನಿಗಳ ದಿನಾಚರಣೆ: ರಕ್ತದಾನಿಗಳಿಗೆ ಸನ್ಮಾನ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ವತಿಯಿಂದ ಭಂಡಾರ್ಕರ್ಸ್ ಕಾಲೇಜು ಕುಂದಾಪುರ ಇಲ್ಲಿ ಹಮ್ಮಿಕೊಂಡ ರಕ್ತದಾನ ಕ್ಷೇತ್ರದ ಸಾಧಕರಿಗೆ ಸನ್ಮಾನ, ಈ ವೇದಿಕೆಯಲ್ಲಿ ಉಡುಪಿ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ) ಸದಸ್ಯರು ಹಾಗೂ ರಕ್ತದಾನಿಗಳಾದ ಅರವಿಂದ ಉಪ್ಪಿನಕುದ್ರು, ಮಹೇಂದ್ರ ಉಪ್ಪಿನಕುದ್ರು, ದಿನೇಶ್ ಕಾಂಚನ್ ಬಾರಿಕೇರೆ, ರೇಷ್ಮಾ ಮಾರ್ಟಿಸ್ ಶಂಕರಪುರ, ಆದರ್ಶ್ ಉಪ್ಪಿನಕುದ್ರು, ಗೌರೀಶ್ ಹಳ್ಳಿಹೊಳೆ ಅವರನ್ನು ಸನ್ಮಾನಿಸಲಾಯಿತು.

Call us

Click Here

ಅಭಯಹಸ್ತ ಟ್ರಸ್ಟ್ ಕಳೆದ ಮೂರು ವರ್ಷಗಳಲ್ಲಿ ರಕ್ತದಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು ಇದುವರೆಗೆ ವಿವಿಧ ಸಂಘಟನೆಗಳ ಸಹಕಾರದಲ್ಲಿ ಉಡುಪಿ ,ದ.ಕ, ಉ.ಕ,ಬೆಂಗಳೂರು ಹಾಗೂ ವಿದೇಶದಲ್ಲಿ( ದುಬೈ) ದಾಖಲೆಯ 147 ರಕ್ತದಾನ ಶಿಬಿರ ಹಾಗೂ ನಿತ್ಯ ತುರ್ತು ಕರೆಗೆ ರಕ್ತದಾನಿಗಳ ಪೂರೈಕೆ ಒಟ್ಟಾರೆಯಾಗಿ ಇದುವರೆಗೆ ದಾಖಲೆಯ 17000 ಯೂನಿಟ್ ರಕ್ತ ಸಂಗ್ರಹಿಸಿದ (2020 – 21 ಸಾಲಿನಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ ಸಂಘಟನೆ) ರಾಜ್ಯದ ಪ್ರತಿಷ್ಠಿತ ಸಂಘಟನೆಯಾಗಿದೆ.

Leave a Reply